ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಜಾರ್ಖಂಡ್ ನ ಹಜರಿಬಾಗ್ ಗೆ 2019ರ ಫೆಬ್ರವರಿ 17ರಂದು ಭೇಟಿ ನೀಡಿದ್ದರು. ಜಾರ್ಖಂಡ್ ನ ಹಲವು ಅಭಿವೃದ್ಧಿ ಯೋಜನೆಗಳನ್ನು ಅವರು ಅನಾವರಣಗೊಳಿಸಿದರು. ಈ ಸಂದರ್ಭದಲ್ಲಿ ಜಾರ್ಖಂಡ್ ನ ರಾಜ್ಯಪಾಲರಾದ ಶ್ರೀಮತಿ ದ್ರೌಪದಿ ಮುರ್ಮು, ಕೇಂದ್ರ ಸಚಿವರ ಶ್ರೀ ಜಯಂತ್ ಸಿನ್ಹ ಮತ್ತು ಜಾರ್ಖಂಡ್ ಮುಖ್ಯಮಂತ್ರಿ ಶ್ರೀ ರಘುವರ್ ದಾಸ್ ಮತ್ತಿತರ ಗಣ್ಯರು ಹಾಜರಿದ್ದರು. ಸಭೆಯಲ್ಲಿ ಭಾಗವಹಿಸಿದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ “ರಾಷ್ಟ್ರಕ್ಕಾಗಿ ಪ್ರಾಣತೆತ್ತ ಜಾರ್ಖಂಡ್ ನ ಧೈರ್ಯಶಾಲಿ ಯೋಧ ಶ್ರೀ ವಿಜಯ್ ಸೋರಂಗ್ ಗೆ ನಮನ ಸಲ್ಲಿಸುತ್ತೇನೆ. ಪ್ರತಿಯೊಂದು ಹಂತದಲ್ಲೂ ಹುತಾತ್ಮ ಯೋಧರ ಕುಟುಂಬಗಳ ರಕ್ಷಣೆ ಮಾಡಲಾಗುವುದು’’ ಎಂದರು.
ಪ್ರಧಾನಮಂತ್ರಿ ಅವರು ಹಜರಿಬಾಗ್, ದುಮ್ಕಾ ಮತ್ತು ಪಲಮು ವೈದ್ಯಕೀಯ ಕಾಲೇಜುಗಳನ್ನು ಉದ್ಘಾಟಿಸಿದರು. ಈ ಮೂರು ವೈದ್ಯ ಕಾಲೇಜುಗಳ ಕಟ್ಟಡ ನಿರ್ಮಾಣಕ್ಕೆ ಪ್ರಧಾನಿ 2017ರಲ್ಲಿ ಶಂಕುಸ್ಥಾಪನೆ ನೆರವೇರಿಸಿದ್ದರು. ಹೊಸ ವೈದ್ಯಕೀಯ ಕಾಲೇಜುಗಳನ್ನು ಸುಮಾರು 885 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗಿದೆ. ಪ್ರತಿಯೊಂದು ಕಾಲೇಜಿನ ಕ್ಯಾಂಪಸ್ಅನ್ನು ವಿಶೇಷಚೇತನರ ಸ್ನೇಹಿಯನ್ನಾಗಿ ರೂಪಿಸಲಾಗಿದೆ. ಜಾರ್ಖಂಡ್ ನ 11 ಜಿಲ್ಲೆಗಳ ಸುಮಾರು 1.5 ಕೋಟಿ ಜನರು ಈ ಆಧುನಿಕ ವೈದ್ಯಕೀಯ ಸೌಲಭ್ಯಗಳ ಸೇವೆ ಪಡೆಯಲಿದ್ದಾರೆ. ಪ್ರಧಾನಮಂತ್ರಿ ಅವರು “ಆಯುಷ್ಮಾನ್ ಭಾರತ ಯೋಜನೆ ಆರಂಭಕ್ಕೆ ಜಾರ್ಖಂಡ್ ನ ಈ ನೆಲ ಸಾಕ್ಷಿಯಾಗಿತ್ತು. ಇದೀಗ ಜಾರ್ಖಂಡ್ ಸೇರಿದಂತೆ ಭಾರತದಾದ್ಯಂತ ಲಕ್ಷಾಂತರ ಮಂದಿ ಆ ಯೋಜನೆಯ ಪ್ರಯೋಜನ ಪಡೆಯುತ್ತಿದ್ದಾರೆ. ರಾಜ್ಯದಲ್ಲಿ ಆರೋಗ್ಯ ಮೂಲಸೌಕರ್ಯ ಸುಧಾರಣೆಗೆ ನಿರಂತರ ಪ್ರಯತ್ನಗಳನ್ನು ನಡೆಸಲಾಗುತ್ತಿದೆ” ಎಂದರು. ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಹಜರಿಬಾಗ್, ದುಮ್ಕಾ, ಪಲಮು ಮತ್ತು ಜೆಮ್ ಶೆಡ್ ಪುರಗಳಲ್ಲಿ ತಲಾ 500 ಹಾಸಿಗೆಗಳ ನಾಲ್ಕು ಆಸ್ಪತ್ರೆಗಳ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿದರು.
ಪ್ರಧಾನಮಂತ್ರಿ ಅವರು ಮಾತನಾಡುತ್ತಾ “ಆರೋಗ್ಯ ಮತ್ತು ಶುದ್ಧ ಕುಡಿಯುವ ನೀರನ್ನು ಪ್ರತ್ಯೇಕಿಸಲಾಗದು, ಜಾರ್ಖಂಡ್ ನಲ್ಲಿ ಉದ್ಘಾಟಿಸಲಾದ ಕುಡಿಯುವ ನೀರಿನ ಯೋಜನೆಗಳಿಂದ ಜನರಿಗೆ ಉತ್ತಮ ಆರೋಗ್ಯ ಲಭಿಸಲಿದೆ. ಪ್ರಧಾನಮಂತ್ರಿ ಅವರು ಹಜರಿಬಾಗ್ ಮತ್ತು ರಾಮ್ ಗಡ್ ಜಿಲ್ಲೆಗಳ ನಾಲ್ಕು ಗ್ರಾಮೀಣ ಕುಡಿಯುವ ನೀರಿನ ಯೋಜನೆಗಳನ್ನೂ ಸಹ ಉದ್ಘಾಟಿಸಿದರು. ಇದೇ ಸಂದರ್ಭದಲ್ಲಿ ಎರಡು ಜಿಲ್ಲೆಗಳಲ್ಲಿ ಆರು ಗ್ರಾಮೀಣ ಕುಡಿಯುವ ನೀರಿನ ಪೂರೈಕೆ ಯೋಜನೆಗಳಿಗೆ ಶಂಕುಸ್ಥಾಪನೆ ನೆರವೇರಿಸಿದರು ಮತ್ತು ದುರ್ಬಲ ಬುಡಕಟ್ಟು ಗುಂಪು ವಾಸಿಸುವ ಪ್ರದೇಶಗಳಿಗೆ ನೀರು ಪೂರೈಸುವ ಯೋಜನೆಗೂ ಶಂಕುಸ್ಥಾಪನೆ ಮಾಡಿದರು. ಹಜರಿಬಾಗ್ ನ ನಗರ ನೀರು ಪೂರೈಕೆ ಯೋಜನೆಗೂ ಪ್ರಧಾನಮಂತ್ರಿ ಅವರು ಶಿಲಾನ್ಯಾಸ ಮಾಡಿದರು. ಹಜರಿಬಾಗ್ ನ 56 ಸಾವಿರ ಕುಟುಂಬಗಳಿಗೆ ಶುದ್ಧ ಕುಡಿಯುವ ನೀರು ಪೂರೈಸುವ ಯೋಜನೆಯನ್ನು ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ಕೈಗೊಳ್ಳಲಾಗುತ್ತಿದೆ.
ಪ್ರಧಾನಮಂತ್ರಿ ಅವರು ಸಾಹಿಬ್ ಗಂಜ್ ಕೊಳಚೆ ನೀರು ಶುದ್ಧೀಕರಣ ಘಟಕ ಮತ್ತು ನಮಾಮಿ ಗಂಗಾ ಯೋಜನೆಯಡಿ ಅಭಿವೃದ್ಧಿಗೊಳಿಸಿರುವ ಮಧುಸೂದನ್ ಘಾಟ್ ಗಳನ್ನು ಉದ್ಘಾಟಿಸಿದರು.
ಇ-ನ್ಯಾಮ್ ಅಡಿಯಲ್ಲಿ ಮೊಬೈಲ್ ಫೋನ್ ಗಳ ಖರೀದಿಗೆ ರೈತರಿಗೆ ನೇರ ನಗದು ವರ್ಗಾವಣೆ ಯೋಜನೆ ಉದ್ಘಾಟಿಸಲು ಆಯ್ದ ಫಲಾನುಭವಿಗಳಿಗೆ ಪ್ರಧಾನಮಂತ್ರಿ ಅವರು ಚೆಕ್ ಗಳನ್ನು ವಿತರಿಸಿದರು. ಪ್ರಧಾನಿ ಅವರು ಮಾತನಾಡಿ, “ಈ ಯೋಜನೆಯಿಂದ 27 ಲಕ್ಷ ರೈತರಿಗೆ ಅನುಕೂಲವಾಗಲಿದೆ. ಸ್ಮಾರ್ಟ್ ಫೋನ್ ಗಳ ಮೂಲಕ ರೈತರು ಹವಾಮಾನದ ಮಾಹಿತಿಯನ್ನು ಪಡೆಯಲು ಸಹಾಯಕವಾಗುವುದಲ್ಲದೆ, ಅವರು ಬೆಳೆಗಳ ಬೆಲೆ, ಸರ್ಕಾರದ ಯೋಜನೆಗಳು ಮತ್ತು ಕೃಷಿಯ ಹೊಸ ಪದ್ಧತಿಗಳ ಬಗ್ಗೆಯೂ ಮಾಹಿತಿ ಪಡೆಯಬಹುದಾಗಿದೆ’’ ಎಂದರು.
ಪ್ರಧಾನಮಂತ್ರಿ ಅವರು ರಾಮ್ ಗಢ್ ನಲ್ಲಿ ಏಕೈಕ ಮಹಿಳಾ ಇಂಜಿನಿಯರಿಂಗ್ ಕಾಲೇಜು ಕಟ್ಟಡವನ್ನೂ ಸಹ ಉದ್ಘಾಟಿಸಿದರು. ಪ್ರಧಾನಮಂತ್ರಿ ಅವರು ಈ ಕಾಲೇಜು ಪೂರ್ವ ಭಾರತದ ಮೊದಲ ಮಹಿಳಾ ಕಾಲೇಜು ಆಗಿದ್ದು, ದೇಶದ ಮೂರನೇ ಮಹಿಳಾ ಕಾಲೇಜಾಗಿದೆ, ಇಲ್ಲಿ ಮಹಿಳೆ ಮಾತ್ರ ಇಂಜಿನಿಯರಿಂಗ್ ಅಭ್ಯಾಸ ಮಾಡುತ್ತಾರೆ ಎಂದರು.
ಪ್ರಧಾನಮಂತ್ರಿ ಅವರು ಹಜರಿಬಾಗ್ ನ ಆಚಾರ್ಯ ವಿನೋಬಾ ಭಾವೆ ವಿಶ್ವವಿದ್ಯಾಲಯದಲ್ಲಿ ಬುಡಕಟ್ಟು ಅಧ್ಯಯನಗಳ ಕೇಂದ್ರಕ್ಕೂ ಇದೇ ಸಂದರ್ಭದಲ್ಲಿ ಶಂಕುಸ್ಥಾಪನೆ ನೆರವೇರಿಸಿದರು. ಅವರು ಈ ಕೇಂದ್ರ ಬುಡಕಟ್ಟು ಸಮುದಾಯಗಳ ಕಲೆ ಮತ್ತು ಸಂಸ್ಕೃತಿಯ ಜ್ಞಾನವನ್ನು ಪಸರಿಸಿ ಅದನ್ನು ಪೋಷಿಸಲು ನೆರವಾಗುತ್ತದೆ ಎಂದರು. ಸಬ್ ಕಾ ಸಾತ್ ಸಬ್ ಕಾ ವಿಕಾಸ್ ಮೂಲಕ ಬಡವರು, ಮಹಿಳೆಯರು, ಯುವಕರು ಮತ್ತು ಬುಡಕಟ್ಟು ಜನರು ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಸಬಲೀಕರಣ ಮಾಡಲಾಗುತ್ತಿದೆ ಎಂದು ಪ್ರಧಾನಿ ಹೇಳಿದರು. ಮಹಿಳೆಯರ ಕಾಲೇಜು ಮತ್ತು ಈ ಕೇಂದ್ರ ಆ ನಿಟ್ಟಿನಲ್ಲಿ ಕೈಗೊಂಡ ಪ್ರಯತ್ನಗಳಾಗಿವೆ.
ಪ್ರಧಾನಮಂತ್ರಿ ಕನ್ಹಾ ಹಾಲು ಯೋಜನೆಗೆ ಚಾಲನೆ ನೀಡುವ ಅಂಗವಾಗಿ ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಪ್ಯಾಕ್ ಮಾಡಿದ ಹಾಲನ್ನು ವಿತರಿಸಿದರು. ಇದರಿಂದ ಪೌಷ್ಟಿಕಾಂಶ ಕೊರತೆ ಎದುರಿಸುತ್ತಿರುವ ಮಕ್ಕಳಿಗೆ ಪ್ರತಿ ದಿನ 200 ಎಂಎಲ್ ಹಾಲನ್ನು ನೀಡಲಾಗುವುದು. ಪ್ರಧಾನಮಂತ್ರಿ ಅವರು ಪ್ರತಿಯೊಂದು ಮಗುವೂ ತನ್ನ ಪೂರ್ಣ ಸಾಮರ್ಥ್ಯವನ್ನು ಅರ್ಥಮಾಡಿಕೊಳ್ಳಲಿದೆ ಮತ್ತು ರಾಷ್ಟ್ರಕ್ಕೆ ಹೆಮ್ಮೆ ತರಲಿದ್ದಾರೆ ಎಂದರು.
ತಮ್ಮ ಸರ್ಕಾರ ಸ್ವಾತಂತ್ರ್ಯ ಸಂಗ್ರಾಮದಲ್ಲಿ ಹೋರಾಡಿದ ಬುಡಕಟ್ಟು ನಾಯಕರ ಸ್ಮಾರಕಗಳನ್ನು, ಮ್ಯೂಸಿಯಂಗಳನ್ನು ಸಂರಕ್ಷಿಸುವ ಎಲ್ಲ ಪ್ರಯತ್ನವನ್ನು ಮಾಡುತ್ತಿದೆ ಎಂದು ಪ್ರಧಾನಮಂತ್ರಿ ಪುನರುಚ್ಚರಿಸಿದರು. ಜಾರ್ಖಂಡ್ ನ ಬಿರ್ಸಾಮುಂಡಾ ಮ್ಯೂಸಿಯಂ ಅದಕ್ಕೊಂದು ಉದಾಹರಣೆಯಾಗಿದೆ.
जो काम किया जा रहा है उसको और गति देने के लिए आया हूं।
— PMO India (@PMOIndia) February 17, 2019
मेडिकल कालेज बिल्डिंग, अस्पताल,
इंजीनिरयिंग कालेज,
पानी की समस्या से मुक्ति दिलाने वाली पाइप-लाइन,
नमामि गंगे के प्रोजेक्ट्स के शिलान्यास और लोकार्पण से यहां मूलभूत सुविधाओं के इंफ्रास्ट्रक्चर को ताकत मिलने वाली है: PM
देवघर में एम्स के बाद आज दुमका, हजारीबाग और पलामू में मेडिकल कालेज का उद्घाटन इन्हीं प्रयासों
— PMO India (@PMOIndia) February 17, 2019
का विस्तार है।
सिर्फ तीन साल पहले की स्थिति ये थी कि झारखंड में 3 मेडिकल कॉलेज थे।
अब आज देखिए, एक ही दिन में 3 मेडिकल कॉलेज खुल रहे हैं: PM
स्कूली शिक्षा हो या फिर उच्च शिक्षा आदिवासी समाज के युवा साथियों को हर प्रकार की सहायता दी जा रही है।
— PMO India (@PMOIndia) February 17, 2019
आचार्य विनोबा भावे विश्व-विद्यालय में सेंटर फॉर ट्राइबल स्टडीज बनने से यहां के समाज और संस्कृति को जानने और आने वाली पीढ़ियों तक समाज के संस्कारों को पहुंचाने में मदद मिलेगी:PM
झारखंड सहित देश के तमाम आदिवासी क्षेत्रों में एकलव्य मॉडल स्कूल खोले जा रहे हैं।
— PMO India (@PMOIndia) February 17, 2019
झारखंड में ऐसे करीब दो दर्जन स्कूल शुरु हो चुके हैं और 70 नए स्कूल खोलने पर काम चल रहा है: PM
झारखंड में बन रहा बिरसा मुंडा संग्रहालय महान स्वतंत्रता सेनानी बिरसा मुंडा की पहचान को समृद्ध करेगा।
— PMO India (@PMOIndia) February 17, 2019
ऐसे संग्राहालय देश के कई राज्यों में बनाए जा रहे हैं, जिसमें केंद्र सरकार मदद दे रही है।
ये म्यूजियम आदिवासी नायकों की याद तो दिलाएंगे ही, साथ में पर्यटन के केंद्र बनेंगे: PM