ಆಯುಷ್ಮಾನ್ ಭಾರತ್, ವಿಶ್ವದಲ್ಲೇ ಅತ್ಯಂತ ದೊಡ್ಡ ಆರೋಗ್ಯ ಕಾರ್ಯಕ್ರಮಗಳಲ್ಲಿ ಒಂದಾಗಿದೆ:ಪ್ರಧಾನಿ
ನೀರಿನ ಕೊರತೆಯಿಂದ ನಾವು ಎದುರಿಸುತ್ತಿರುವ ಕಷ್ಟಗಳನ್ನು ಕಂಡಾಗ, ಪ್ರತಿ ಕುಡಿಯುವ ನೀರನ್ನು ಸಂರಕ್ಷಿಸುವುದು ನಮ್ಮ ಜವಾಬ್ದಾರಿ ಆಗಿದೆ : ಪ್ರಧಾನಿ ಮೋದಿ
ಭಯೋತ್ಪಾದನೆಯ ಹಾನಿಯನ್ನು ನಿರ್ಮೂಲನಗೊಳಿಸಬೇಕೆಂದು ಸಂಪೂರ್ಣ ರಾಷ್ಟ್ರ ಸಮ್ಮತಿಸಿದೆ : ಪ್ರಧಾನಿ ಮೋದಿ

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಗುಜರಾತಿನ ಜಾಮ್ ನಗರದಲ್ಲಿ ಬಾಂದ್ರಾ-ಜಾಮ್ ನಗರ ಹಂಸಫರ್ ಎಕ್ಸ್ ಪ್ರೆಸ್ ರೈಲಿಗೆ ಹಸಿರು ನಿಶಾನೆ ತೋರಿದರು. ಅವರು 750  ಹಾಸಿಗೆಗಳ ಗುರು ಗೋವಿಂದ ಸಿಂಗ್ ಆಸ್ಪತ್ರೆಯ ವಿಸ್ತರಿತ ಕಟ್ಟಡವನ್ನು ರಾಷ್ಟ್ರಕ್ಕೆ ಸಮರ್ಪಿಸಿದರು ಮತ್ತು ವಿವಿಧ ಎಸ್.ಎ.ಯು.ಎನ್.ಐ. ಯೋಜನೆಗಳನ್ನು ಅನಾವರಣಗೊಳಿಸಿದರು. ಅವರು ಜಾಮ್ ನಗರದಲ್ಲಿ ಆಜಿ-3 ಯಿಂದ ಖಿಜಾಡಿಯಾ ನಡುವಣ 51 ಕಿಲೋ ಮೀಟರ್ ಉದ್ದದ ಪೈಪ್ ಲೈನ್ ಸಹಿತ ವಿವಿಧ ಅಭಿವೃದ್ದಿ ಯೋಜನೆಗಳನ್ನು ಆರಂಭಗೊಳಿಸಿದರು.

 

ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ನೀರಿನ ಕೊರತೆಯ ಸಮಸ್ಯೆಯನ್ನು ಗುಜರಾತ್ ಸರಕಾರ ಕಳೆದ ಕೆಲವು ದಶಕಗಳ ಕಠಿಣ ದುಡಿಮೆ ಮತ್ತು ದೃಢ ನಿರ್ಧಾರದಿಂದ ಪರಿಹರಿಸಿರುವುದನ್ನು ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಅವರು ಗುಜರಾತಿನಲ್ಲಿ ‘ಟ್ಯಾಂಕರ್ ರಾಜ್’ ಗೆ ಅವಕಾಶ ಕೊಡದಿರುವ ತಮ್ಮ ನಿರ್ಧಾರವನ್ನು ಉಲ್ಲೇಖಿಸಿದರಲ್ಲದೆ ಸರ್ದಾರ್ ಸರೋವರ ಅಣೆಕಟ್ಟು ಹೇಗೆ ಗುಜರಾತಿನ ಜನತೆಗೆ ಪರಿಹಾರ ಒದಗಿಸಿಕೊಟ್ಟಿದೆ ಎಂಬುದನ್ನೂ ವಿವರಿಸಿದರು. ವರ್ತಮಾನದ ಮತ್ತು ಭವಿಷ್ಯದ ತಲೆಮಾರಿಗಾಗಿ ಪ್ರತೀ ಹನಿ ನೀರನ್ನೂ ಸಂರಕ್ಷಿಸಿಡುವಂತೆ ಅವರು ನಾಗರಿಕರಿಗೆ ಮನವಿ ಮಾಡಿದರು.

ಗುಜರಾತಿನ ಆರೋಗ್ಯ ಕ್ಷೇತ್ರದಲ್ಲಿ ನಡೆದ ಕ್ರಾಂತಿಯನ್ನು ಶ್ಲಾಘಿಸಿದ ಪ್ರಧಾನಮಂತ್ರಿ ಅವರು ಗುಜರಾತಿನಲ್ಲಿ ಕಳೆದ ಕೆಲವು ವರ್ಷಗಳಿಂದ ತಲೆ ಎತ್ತಿರುವ ಆಸ್ಪತ್ರೆಗಳು ಬಡವರಿಗೆ ಭಾರೀ ಪ್ರಯೋಜನಕಾರಿಯಾಗಿವೆ ಎಂದರು. ಕೇಂದ್ರ ಸರಕಾರ ಜಾರಿಗೆ ತಂದಿರುವ ಆಯುಷ್ಮಾನ್ ಭಾರತ್ ಯೋಜನೆ ಬಡವರಿಗೆ ಕೈಗೆಟಕುವ ದರದಲ್ಲಿ ಉತ್ತಮ ಗುಣಮಟ್ಟದ ಆರೋಗ್ಯ ರಕ್ಷಣೆಯನ್ನು , ಶುಶ್ರೂಷೆಯನ್ನು ಒದಗಿಸುತ್ತದೆ  ಎಂದೂ ನುಡಿದರು.

 

ದೇಶವಿಂದು ಎದುರಿಸುತ್ತಿರುವ ಸವಾಲುಗಳನ್ನು ನಿಭಾಯಿಸಲು ಅಲ್ಪಾವಧಿಯ, ದೃಢವಾದ  ಚಿಂತನೆ ರಹಿತ ಯೋಜನೆಗಳಿಗೆ ಬದಲಾಗಿ ರಾಚನಿಕ ಮತ್ತು ಧೀರ್ಘಾವಧಿಯ ಕ್ರಮಗಳು ಆವಶ್ಯ ಎಂದೂ ಪ್ರಧಾನಮಂತ್ರಿ ಅವರು ಪ್ರತಿಪಾದಿಸಿದರು. ಈ ಸಂಬಂಧ ಅವರು ಕೇಂದ್ರ ಸರಕಾರ ಅನುಷ್ಟಾನಕ್ಕೆ ತಂದ ಧೀರ್ಘಾವಧಿಯ ಮತ್ತು ದೂರದೃಷ್ಟಿಯ ಯೋಜನೆಗಳನ್ನು ಉಲ್ಲೇಖಿಸಿದರು.

ಎಂ.ಎಸ್.ಎಂ.ಇ. ವಲಯಕ್ಕೆ ಉತ್ತೇಜನ  ಕೊಡಲು ಕೇಂದ್ರ ಸರಕಾರ ಕೈಗೊಂಡ ಕ್ರಮಗಳನ್ನು ಪ್ರಸ್ತಾಪಿಸಿದ ಪ್ರಧಾನಮಂತ್ರಿ ಅವರು ಸುಲಭವಾಗಿ ಸಾಲದ ಲಭ್ಯತೆ ಮತ್ತು ಜನಸ್ನೇಹಿ ಜಿ.ಎಸ್.ಟಿ. ಯಿಂದ ಯುವ ಜನತೆಗೆ ಲಾಭವಾಗಲಿದೆ ಎಂದರು. ಸರಕಾರ ಕೈಗೊಂಡ ಕ್ರಮಗಳ ಫಲವಾಗಿ ವ್ಯಾಪಾರೋದ್ಯಮಕ್ಕೆ ಅನುಕೂಲಕರ ವಾತಾವರಣ ಶ್ರೇಯಾಂಕದಲ್ಲಿ ಸುಧಾರಣೆಯಾಗಿದೆ ಎಂದೂ ಅವರು ಹೇಳಿದರು.

ಸಶಸ್ತ್ರ ಪಡೆಗಳ ಪ್ರಯತ್ನಗಳನ್ನು ಮುಕ್ತ ಕಂಠದಿಂದ ಪ್ರಶಂಸಿಸಿದ ಪ್ರಧಾನಮಂತ್ರಿ ಅವರು ನಮ್ಮ ಸೈನಿಕರ ಬಗ್ಗೆ ಇಡೀ ದೇಶವೇ ಹೆಮ್ಮೆ ಪಡುತ್ತಿದೆ ಎಂದರು. ಭಯೋತ್ಪಾದನೆಯ ಹಾವಳಿಯನ್ನು ತೊಡೆದುಹಾಕಬೇಕಾಗಿದೆ ಎಂದೂ ಅವರು ಹೇಳಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Modi blends diplomacy with India’s cultural showcase

Media Coverage

Modi blends diplomacy with India’s cultural showcase
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ನವೆಂಬರ್ 2024
November 23, 2024

PM Modi’s Transformative Leadership Shaping India's Rising Global Stature