ಎಮ್. ಎಸ್. ಎಮ್. ಇ. ಕ್ಷೇತ್ರದ ಐತಿಹಾಸಿಕ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು ಉದ್ಘಾಟಿಸಿದ ಪ್ರಧಾನಮಂತ್ರಿ
ದೇಶದಾದ್ಯಂತ ಎಮ್. ಎಸ್. ಎಮ್. ಇ.ಗಳ ಬೆಳವಣಿಗೆ, ವಿಸ್ತರಣೆ ಮತ್ತು ಅನುಕೂಲತೆಗಾಗಿ ಸಹಕರಿಸುವ ನಿಟ್ಟಿನಲ್ಲಿ 12 ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿ ಅವರು ಅನಾವರಣ ಮಾಡಿದರು
"ಈ 12 ನಿರ್ಧಾರಗಳು ಸರಕಾರದಿಂದ ಭಾರತದ ಎಮ್. ಎಸ್. ಎಮ್. ಇ.ಗಳಿಗೆ 'ದೀಪಾವಳಿ ಉಡುಗೊರೆಗಳು': ಪ್ರಧಾನಿ ಮೋದಿ "
12 ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿ ಉದ್ಘಾಟಿಸಿದರು
ಎಮ್. ಎಸ್. ಎಮ್. ಇ.ಗಳಿಗೆ ಸುಲಭ ಸಾಲ ಲಭ್ಯತೆಗಾಗಿ 59 ನಿಮಿಷಗಳ ಸಾಲಸೌಲಭ್ಯ ಜಾಲತಾಣದ ರಚನೆ
ಎಮ್.ಎಸ್.ಎಮ್.ಇ.ಗಳಿಂದ ಸಿ.ಪಿ.ಎಸ್.ಎಮ್.ಗಳು 25%ರಷ್ಠು ಖರೀದಿ ಮಾಡುವುದು ಕಡ್ಡಾಯ
ಕಂಪೆನಿ ಕಾಯ್ದೆಯಡಿ ಸಣ್ಣ ಅಪರಾಧಗಳ ವಿರುದ್ಧದ ಕಾನೂನುಕ್ರಮ ಪ್ರಕ್ರಿಯೆಯ ಸರಳತೆಗಾಗಿ ಆಧ್ಯಾದೇಶ

ಎಮ್. ಎಸ್. ಎಮ್. ಇ. ಕ್ಷೇತ್ರದ ಐತಿಹಾಸಿಕ ಬೆಂಬಲ ಮತ್ತು ಜನಸಂಪರ್ಕ ಉಪಕ್ರಮಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಿದರು. 
 
ದೇಶದಾದ್ಯಂತ ಎಮ್. ಎಸ್. ಎಮ್. ಇ.ಗಳ ಬೆಳವಣಿಗೆ, ವಿಸ್ತರಣೆ ಮತ್ತು ಅನುಕೂಲತೆಗಾಗಿ ಸಹಕರಿಸುವ  ನಿಟ್ಟಿನಲ್ಲಿ  12 ಪ್ರಮುಖ ಉಪಕ್ರಮಗಳನ್ನು ಪ್ರಧಾನಮಂತ್ರಿ ಅವರು ಅನಾವರಣ ಮಾಡಿದರು.
ಇಂದು ಘೋಷಣೆಯಾದ 12 ನಿರ್ಣಯಗಳು ಎಮ್. ಎಸ್. ಎಮ್. ಇ. ಕ್ಷೇತ್ರದ ನೂತನ ಅಧ್ಯಾಯಗಳೆಂದು ಗುರುತಿಸಲಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭಾರತದ ಪ್ರಮುಖ ಉದ್ಯೋಗ ಸೃಷ್ಠಿಯಲ್ಲಿ ಎಮ್. ಎಸ್. ಎಮ್. ಇ. ಕ್ಷೇತ್ರ ಒಂದಾಗಿದೆ ,ಮಾತ್ರವಲ್ಲದೆ, ವಾರಣಾಸಿಯ ಸೀರೆಗಳು ಮತ್ತು ಲುಧಿಯಾನಾದ ಉಡುಪುಗಳು ಸೇರಿದಂತೆ ಸಣ್ಣ ಕೈಗಾರಿಕೆಗಳ ವೈಭವಯುತ ಭಾರತೀಯ ಸಂಪ್ರದಾಯಗಳನ್ನು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ನೆನಪಿಸಿಕೊಂಡರು.  ಕೇಂದ್ರ ಸರಕಾರವು ಪ್ರಾರಂಭಗೊಳಿಸಿದ ಆರ್ಥಿಕ ಸುಧಾರಣೆಯ ಯಶಸ್ಸನ್ನು ಕಳೆದ ನಾಲ್ಕು ವರ್ಷಗಳ ಅವಧಿಯಲ್ಲಿ “ಸರಳ ವ್ಯಾಪಾರ ಶ್ರೇಯಾಂಕ”ದಲ್ಲಿ (ಈಸೀ ಆಫ್ ಡುಯಿಂಗ್ ಬಿಸಿನೆಸ್) ಭಾರತವು 142ರಿಂದ 77ಕ್ಕೆ ಏರಿರುವುದನ್ನು ಕಂಡು ನಿರ್ಧರಿಸಬಹುದಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
 
ಎಮ್. ಎಸ್. ಎಮ್. ಇ. ಕ್ಷೇತ್ರಕ್ಕೆ ಅನುಕೂಲ ಮಾಡಿಕೊಡುವ 5 ಪ್ರಧಾನ ಅಂಶಗಳಿವೆ. ಸಾಲ ಲಭ್ಯತೆಯ ಅವಕಾಶ, ಮಾರುಕಟ್ಟೆಯ ಲಭ್ಯತೆ, ತಂತ್ರಜ್ಞಾನದ ಉನ್ನತೀಕರಣ, ಸರಳ ವ್ಯಾಪಾರ ಮಾಡುವ ಮತ್ತು ಉದ್ಯೋಗಿಗಳಿಗೆ ಸುರಕ್ಷತೆಯ ಭಾವನೆ ಇವುಗಳಲ್ಲಿ ಸೇರಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ದೀಪಾವಳಿಯ ಕೊಡುಗೆಯಾಗಿ ಈ ಕ್ಷೇತ್ರಕ್ಕೆ, ಅವರು 12 ಘೋಷಣೆಗಳನ್ನು ಮಾಡಲಿದ್ದು,  5 ವರ್ಗಗಳ ಬಗ್ಗೆ ಸವಿಸ್ತಾರವಾಗಿ ಮಾತನಾಡಲಿದ್ದಾರೆ ಎಂದು  ಅವರು ಹೇಳಿದರು.  
ಸಾಲ ಲಭ್ಯತೆಯ ಅವಕಾಶಗಳು
 
ಮೊದಲ ಘೋಷಣೆಯಾಗಿ, ಎಮ್. ಎಸ್. ಎಮ್. ಇ. ಕ್ಷೇತ್ರಕ್ಕೆ ಸುಲಭವಾಗಿ ಸಾಲ ಲಭ್ಯತೆ ಅವಕಾಶಕ್ಕಾಗಿ “59 ನಿಮಿಷಗಳಲ್ಲಿ ಸಾಲ” ಜಾಲತಾಣದ ಉದ್ಘಾಟನೆಯನ್ನು ಪ್ರಧಾನಮಂತ್ರಿ ಅವರು ಘೋಷಿಸಿದರು. ಈ ಜಾಲತಾಣದ ತತ್ವಶಃ ಅನುಮೋದನೆ ಮೂಲಕ ಕೇವಲ 59 ನಿಮಿಷದಲ್ಲಿ  ರೂ 1 ಕೋಟಿ ತನಕ ಸಾಲ ಮಂಜೂರು  ಮಾಡಲಾಗುವುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ಸಾಲದ ಜಾಲತಾಣಕ್ಕೆ ಜಿ.ಎಸ್.ಟಿಯ ಜಾಲತಾಣದಲ್ಲಿ ಸಂಪರ್ಕಕೊಂಡಿ ನೀಡಲಾಗುವುದೆ ಎಂದು ಪ್ರಧಾನಮಂತ್ರಿ ಹೇಳಿದರು. ನವಭಾರತದಲ್ಲಿ ಯಾವ ವ್ಯಕ್ತಿಯೂ ಪದೇ ಪದೇ  ಬ್ಯಾಂಕಿನ ಮೆಟ್ಟಲೇರಬೇಕಾದ ಅನಿವಾರ್ಯತೆ ಇರುವುದಿಲ್ಲ ಎಂದು ಪ್ರಧಾನಮಂತ್ರಿ ಅವರು ಹೇಳಿದರು.   
 
ಎರಡನೇ ಘೋಷಣೆಯಾಗಿ, ಜಿ.ಎಸ್.ಟಿ. ನೋದಾಯಿತ ಎಲ್ಲ ಎಮ್. ಎಸ್. ಎಮ್. ಇ. ಸಂಸ್ಥೆಗಳಿಗೂ  ಹೊಸ ಅಥವಾ ಹೆಚ್ಚುವರಿ ಸಾಲಗಳಿಗೆ, ಬಡ್ಡಿದರದಲ್ಲಿ 2%ರಷ್ಟು ಆರ್ಥಿಕಸಹಾಯ ಕೊಡುಗೆಯನ್ನು ಪ್ರಧಾನಮಂತ್ರಿ ಅವರು ಪ್ರಕಟಿಸಿದರು. ಸರಕು ಸಾಗಾಟಪೂರ್ವ ಮತ್ತು ಸಾಗಾಟ ನಂತರದ ಅವಧಿಗಳಲ್ಲಿ ರಫ್ತುದಾರರು ಪಡೆವ ಸಾಲಕ್ಕಾಗಿ,  ಬಡ್ಡಿದರದಲ್ಲಿ ರಿಯಾಯಿತಿಯನ್ನು ಶೇ 3ರಿಂದ  ಶೇ 5 ಕ್ಕೆ ಹೆಚ್ಚಿಸಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.  
 
ಮೂರನೇ ಘೋಷಣೆ ಮಾಡಿದ ಪ್ರಧಾನಮಂತ್ರಿ ಅವರು, ವಾರ್ಷಿಕವಾಗಿ ರೂ 500 ಕೋಟಿ ವ್ಯವಹಾರಗಳನ್ನು ಹೊಂದಿರುವ ಸಂಸ್ಥೆಗಳು ಇನ್ನುಮುಂದೆ ಕಡ್ಡಾಯವಾಗಿ ವ್ಯಾಪಾರ ಸ್ವೀಕಾರಾರ್ಹ ಇ-ರಿಯಾಯಿತಿ ವ್ಯವಸ್ಥೆ (ಟಿ.ಆರ್.ಇ.ಡಿ.ಎಸ್.)ಯಡಿ ಬರುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ವಾಣಿಜ್ಯೋದ್ಯಮಿಗಳು ಈ ಜಾಲತಾಣದಲ್ಲಿ ನೋಂದಾವಣಿ ಮಾಡಿಸಿಕೊಳ್ಳುವ ಮೂಲಕ ಬರಲಿರುವ ಬಾಕಿ ಹಣದ ಆಧಾರದಲ್ಲಿ ಬ್ಯಾಂಕುಗಳಿಂದ ಸಾಲ ಪಡೆಯಬಲ್ಲರು. ಇದು ಅವರ ನಗದಿನ ಸಮಸ್ಯೆಗಳನ್ನು ನಿವಾರಿಸುತ್ತದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
 
ಮಾರುಕಟ್ಟೆ ಅವಕಾಶ
 
ವಾಣಿಜ್ಯೋದ್ಯಮಿಗಳಿಗೆ ಮಾರುಕಟ್ಟೆ ಲಭ್ಯತೆಗಾಗಿ ಕೇಂದ್ರ ಸರಕಾರ ಈಗಾಗಲೇ ಹಲವಾರು ಹೆಜ್ಜೆಗಳನ್ನಿಟ್ಟಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಈ ನಿಟ್ಟಿನಲ್ಲಿ ಪ್ರಧಾನಮಂತ್ರಿ ಅವರು ತಮ್ಮ 4ನೇ ಘೋಷಣೆಯನ್ನು ಮಾಡಿದರು.  ಸಾರ್ವಜನಿಕ ವಲಯದ ಸಂಸ್ಥೆಗಳು ತಮ್ಮ ಒಟ್ಟಾರೆ ಖರೀದಿಯಲ್ಲಿ, ಇನ್ನುಮುಂದೆ 20%ಕ್ಕೆ ಬದಲಾಗಿ 25%ರಷ್ಟು ಸಂಗ್ರಹಣೆಯನ್ನು ಎಮ್. ಎಸ್. ಎಮ್. ಇ. ಸಂಸ್ಥೆಗಳಿಂದ ಮಾಡಲೇಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
 
ಪ್ರಧಾನಮಂತ್ರಿ ಅವರ 5ನೇ ಘೋಷಣೆಯು ಮಹಿಳಾ ವಾಣಿಜ್ಯೋದ್ಯಮಿಗಳಿಗೆ ಸಂಬಂಧಿಸಿದೆ. ಎಮ್. ಎಸ್. ಎಮ್. ಇ. ಸಂಸ್ಥೆಗಳಿಂದ ಕಡ್ಡಾಯ 25% ಖರೀದಿಯಲ್ಲಿ 3%ರಷ್ಟನ್ನು ಈಗ ಮಹಿಳಾ ವಾಣಿಜ್ಯೋದ್ಯಮಿಗಳಿಂದ ಖರೀದಿಗಾಗಿ ಮೀಸಲಿಡಲಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.   
 
ಜಿ.ಇ.ಎಮ್.ನಲ್ಲಿಂದು ನೋದಾಯಿಸಿಕೊಂಡ 1.5 ಪೂರೈಕೆದಾರರಲ್ಲಿ 40,000ರಷ್ಟು ಎಮ್. ಎಸ್. ಎಮ್. ಇ. ಸಂಸ್ಥೆಗಳಿವೆ. ಅವುಗಳಲ್ಲಿ ಈತನಕ ರೂ. 14,000 ಕೋಟಿಯಷ್ಟು ಮೌಲ್ಯದ ವ್ಯವಹಾರಗಳು ಜಿ.ಇ.ಎಮ್. ಮೂಲಕ ನಡೆದಿವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನಮಂತ್ರಿ ಅವರು 6ನೇ ಘೋಷಣೆ ಮೂಲಕ, ಕೇಂದ್ರ ಸರಕಾರದ ಎಲ್ಲ ಸಾರ್ವಜನಿಕ ವಲಯಗಳ ಸಂಸ್ಥೆಗಳಿಂದು ಕಡ್ಡಾಯವಾಗಿ ಜಿ.ಇ.ಎಮ್.ನ ಅಂಗವಾಗಬೇಕು ಎಂದು ಹೇಳಿದರು. ಅವುಗಳಿಗೆ ಸೇರಿದ ಎಲ್ಲ ವ್ಯಾಪಾರಿಗಳೂ ಕೂಡಾ ಕಡ್ಡಾಯವಾಗಿ ಜಿ.ಇ.ಎಮ್.ನಲ್ಲಿ ನೋಂದಾಯಿಸಿಕೊಂಡಿರಬೇಕು ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
ತಂತ್ರಜ್ಞಾನದ ಉನ್ನತೀಕರಣ
 
ತಂತ್ರಜ್ಞಾನದ ಉನ್ನತೀಕರಣದ ಕುರಿತಾಗಿ ಮಾತನಾಡಿದ ಪ್ರಧಾನಮಂತ್ರಿ ಅವರು, ಉತ್ಪನ್ನಗಳ ವಿನ್ಯಾಸದಲ್ಲಿ ಉಪಕರಣಗಳ ಕೊಠಡಿಗಳು ದೇಶದಾದ್ಯಂತ ಪ್ರಮುಖ ಪಾತ್ರವಹಿಸುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.  7ನೇ ಘೋಷಣೆಯು ದೇಶದಾದ್ಯಂತ 20 ಕೇಂದ್ರಗಳನ್ನು ಮತ್ತು ಉಪಕರಣಗಳ ಕೊಠಡಿ ರೀತಿಯ 100 ಸ್ಪೊಕ್ಸ್ ಗಳನ್ನು ನಿರ್ಮಿಸುವುದಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.
 
ಸರಳ ವ್ಯಾಪಾರ
 
ಸರಳ ವ್ಯಾಪಾರ  ಪ್ರಕ್ರಿಯೆಯಲ್ಲಿ 8ನೇಯ ಘೋಷಣೆಯು ಔಷಧ ಸಂಸ್ಥೆಗಳಿಗೆ ಸೇರಿದ್ದು. ಔಷಧೀಯ ಎಮ್. ಎಸ್. ಎಮ್. ಇ. ಸಂಸ್ಥೆಗಳ ಒಂದು ಗುಂಪು ಸೃಷ್ಠಿಸಲಾಗುತ್ತದೆ. ಈ ಯೋಜನೆಯಲ್ಲಿ ಗುಂಪಿಗೆ ತಗಲುವ ಒಟ್ಟು ವೆಚ್ಚದ 70 ಪ್ರತಿಶತವನ್ನು ಕೇಂದ್ರ ಸರಕಾರ ಭರಿಸಲಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.   
 
9ನೇ ಘೋಷಣೆಯು ಸರಕಾರಿ  ಕಾರ್ಯವಿಧಾನಗಳನ್ನು ಸರಳಗೊಳಿಸುವುದಾಗಿದೆ ಎಂದು ಪ್ರಧಾನಮಂತ್ರಿ  ಹೇಳಿದರು. 8 ಕಾರ್ಮಿಕ ಕಾನೂನು ಮತ್ತು   ಕೇಂದ್ರದ ಹತ್ತು ನಿಯಮಾವಳಿಗಳನ್ನು(ಯುನಿಯನ್ ರೆಗುಲೇಷನ್ಸ್) ಇನ್ನುಮುಂದೆ ವಾರ್ಷಿಕವಾಗಿ ಒಮ್ಮೆ ಮಾತ್ರ ಸಲ್ಲಿಸಬಹುದಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
 
10ನೇ ಘೋಷಣೆಯ ಪ್ರಕಾರ ಇನ್ನು ಮುಂದೆ ಕಂಪ್ಯೂಟರ್ ಮಾಡುವ ಯಾದೃಚ್ಛಿಕ ಹಂಚಿಕೆಯಾಧಾರದಲ್ಲಿ ತನಿಖಾಧಿಕಾರಿಗಳು ಸಂಸ್ಥೆಗಳಿಗೆ ಭೇಟಿ ನೀಡುತ್ತಾರೆ ಎಂದು ಪ್ರಧಾನ ಮಂತ್ರಿ ಹೇಳಿದರು.
 
ವಾಣಿಜ್ಯೋದ್ಯಮ  ಘಟಕ ಸ್ಥಾಪನೆಯ ಅಂಗವಾಗಿ, ಅದನ್ನು ಪ್ರಾರಂಭಿಸುವ ಮೊದಲು, ವಾತಾವರಣ   ಸ್ಪಷ್ಠೀಕರಣ  ಮತ್ತು ಸ್ಥಾಪನಾ ಅನುಮತಿಯಂತಹ ಎರಡು  ಅನುಮತಿ ಪತ್ರಗಳನ್ನು ಪಡೆಯಬೇಕಾಗುತ್ತದೆ. ಹನ್ನೊಂದನಯ ಘೋಷಣೆಯು ವಾಯು ಮಾಲಿನ್ಯತೆ ಮತ್ತು ಜಲ ಮಾಲಿನ್ಯತೆಯ ಕಾನೂನುಗಳನ್ನು ವಿಲೀನಗೊಳಿಸಿ “ಒಂದು ಸ್ಪಷ್ಟೀಕರಣ ಅನುಮತಿ’ಯಾಗಿ ಮಾರ್ಪಡಿಸುವುದಾಗಿದೆ. ಸ್ವ-ಪ್ರಮಾಣಿಕೃತ ಮಾಹಿತಿ ಸಲ್ಲಿಕೆಯನ್ನು ಸ್ವೀಕರಿಸಲಾಗುವುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
20ನೇ ಘೋಷಣೆಯಾಗಿ ಕಂಪನಿ ಅಧಿನಿಯಮದಲ್ಲಿ ಉಲ್ಲೇಖಿತ ಸಣ್ಣ-ಪುಟ್ಟ ಉಲ್ಲಂಘನೆಗಳನ್ನು ಸರಿಪಡಿಸುವ ನಿಟ್ಟಿನಲ್ಲಿ ಆಧ್ಯಾದೇಶ ಹೊರಡಿಸುವುದು. ಈ ಆಧ್ಯಾದೇಶದ ಪ್ರಕಾರ, ವಾಣಿಜ್ಯೋದ್ಯಮಿ ಇನ್ನು ಮುಂದೆ ನ್ಯಾಯಾಲಯದ ಮೆಟ್ಟಲೇರಬೇಕೆಂದಿಲ್ಲ, ಬದಲಾಗಿ ಸರಳ ಕಾನೂನುಕ್ರಮಗಳ ಮೂಲಕ ಸರಿಪಡಿಸಬಹುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು.
 
ಎಮ್. ಎಸ್. ಎಮ್. ಇ. ಕ್ಷೇತ್ರದ ಉದ್ಯೋಗಿಗಳಿಗೆ ಸಾಮಾಜಿಕ ಸುರಕ್ಷತೆ
 
ಎಮ್. ಎಸ್. ಎಮ್. ಇ. ಕ್ಷೇತ್ರದ ಉದ್ಯೋಗಿಗಳಿಗೆ ಸಾಮಾಜಿಕ ಸುರಕ್ಷತೆ ಕಲ್ಪಿಸುವ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. ಅವರುಗಳಿಗೆ ಜನ್ ಧನ್ ಖಾತೆಗಳು, ಭವಿಷ್ಯ ನಿಧಿ ಮತ್ತು ವಿಮೆಗಳನ್ನು ಖಚಿತಪಡಿಸುವ ನಿಟ್ಟಿನಲ್ಲಿ ಯೋಜನೆ ಪ್ರಾರಂಬಿಸಲಾಗುವುದು ಎಂದು ಪ್ರಧಾನಮಂತ್ರಿ ಅವರು ಹೇಳಿದರು. 
 
ಭಾರತದ ಎಮ್. ಎಸ್. ಎಮ್. ಇ. ಕ್ಷೇತ್ರವನ್ನು ಬಲಿಷ್ಠಗೊಳಿಸುವ ನಿಟ್ಟಿನಲ್ಲಿ ಈ ನಿರ್ಧಾರಗಳು ದೀರ್ಘಕಾಲದವರೆಗೆ ಸಹಾಯಕಾರಿಯಾಗಲಿವೆ. ಈ ಜನಸಂಪರ್ಕ ಕಾರ್ಯಕ್ರಮದ ಅನುಷ್ಠಾನವನ್ನು ಮುಂದಿನ 100 ದಿನಗಳ ಕಾಲ  ಆಳವಾಗಿ ಪರಿವೀಕ್ಷಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು.

 

 

Click here to read full text of speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet extends One-Time Special Package for DAP fertilisers to farmers

Media Coverage

Cabinet extends One-Time Special Package for DAP fertilisers to farmers
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 2 ಜನವರಿ 2025
January 02, 2025

Citizens Appreciate India's Strategic Transformation under PM Modi: Economic, Technological, and Social Milestones