ಪ್ರಯಾಗ್ ರಾಜ್ ನ ಕುಂಭ ಮೇಳದಲ್ಲಿ ಭಾಗಿಯಾಗಿದ್ದ 188 ರಾಷ್ಟ್ರಗಳ ಪ್ರತಿನಿಧಿಗಳನ್ನು ಪುರಸ್ಕರಿಸಲು ಸಾಂಸ್ಕೃತಿಕ ಸಂಬಂಧ ಕುರಿತ ಭಾರತೀಯ ಮಂಡಳಿ ದೆಹಲಿಯ ಪ್ರವಾಸಿ ಭಾರತೀಯ ಕೇಂದ್ರದಲ್ಲಿಂದು ವಿಶೇಷ ಕಾರ್ಯಕ್ರಮ ಆಯೋಜಿಸಿತ್ತು.
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಅವರು ಐತಿಹಾಸಿಕ ಗ್ರೂಪ್ ಫೋಟೋನಲ್ಲಿ 188 ಪ್ರತಿನಿಧಿಗಳೊಂದಿಗೆ ಭಾಗಿಯಾದರು.
ಈ ಸಂದರ್ಭದಲ್ಲಿ ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿಯವರು, ಪ್ರಯಾಗರಾಜ್ ನ ಕುಂಭ ಮೇಳದಲ್ಲಿ ಭಾಗಿಯಾಗಿ ಈಗಷ್ಟೇ ಮರಳಿರುವ ಪ್ರತಿನಿಧಿಗಳನ್ನು ಭೇಟಿ ಮಾಡಲು ತಾವು ಹರ್ಷಿಸುವುದಾಗಿ ತಿಳಿಸಿದರು.
ಯಾರು ಖುದ್ದು ಕುಂಭ ಮೇಳಕ್ಕೆ ಭೇಟಿ ನೀಡುವುದಿಲ್ಲವೇ, ಅವರು ಸಂಪೂರ್ಣವಾಗಿ ಅದನ್ನು ಪ್ರಶಂಸಿಸಲು ಸಾಧ್ಯವಿಲ್ಲ, ಇದೊಂದು ಶ್ರೇಷ್ಠ ಪರಂಪರೆ ಎಂದರು. ಸಾವಿರಾರು ವರ್ಷಗಳಿಂದ ಇದು ಅಬಾಧಿತವಾಗಿ ನಡೆದುಕೊಂಡು ಬಂದಿದೆ ಎಂದರು.
ಕುಂಭ ಮೇಳದಲ್ಲಿ ಈಗ ಆಧುನಿಕತೆ ಮತ್ತು ತಂತ್ರಜ್ಞಾನವನ್ನು ನಂಬಿಕೆ, ಆಧ್ಯಾತ್ಮಿಕತೆಯೊಂದಿಗೆ ಮತ್ತು ಸಾಂಸ್ಕೃತಿಕ ಒಮ್ಮತದೊಂದಿಗೆ ಒಗ್ಗೂಡಿಸುವ ಪ್ರಯತ್ನ ಸಾಗಿದೆ ಎಂದರು. ವಿಶ್ವ ಭಾರತವನ್ನು ಅದರ ಆಧುನಿಕತೆ ಮತ್ತು ಅದರ ಶ್ರೀಮಂತ ಪರಂಪರೆಯೆರಡರಿಂದಲೂ ಗುರುತಿಸುತ್ತದೆ ಎಂದರು. ವಿಶ್ವಾದ್ಯಂತದಿಂದ ಆಗಮಿಸಿರುವ ಪ್ರತಿನಿಧಿಗಳಿಗೆ ಧನ್ಯವಾದ ಅರ್ಪಿಸಿದ ಪ್ರಧಾನಮಂತ್ರಿಯವರು, ಕುಂಭ ಮೇಳದ ಯಶಸ್ಸಿನಲ್ಲಿ ಅವರ ಭಾಗವಹಿಸುವಿಕೆಯೂ ಮಹತ್ವದ್ದು ಎಂದರು.
ಭಾರತದ ಸಂಸದೀಯ ಚುನಾವಣೆಗಳನ್ನು ಅವರು “ಪ್ರಜಾಪ್ರಭುತ್ವದ ಕುಂಭ” ಎಂದು ಬಣ್ಣಿಸಿದರು. ಕುಂಭ ಮೇಳದಂತೆಯೇ ಭಾರತದ ಲೋಕಸಭಾ ಚುನಾವಣೆಗಳು ಅದರ ಬೃಹತ್ ಪ್ರಮಾಣ ಮತ್ತು ಸಂಪೂರ್ಣ ನಿಷ್ಪಕ್ಷಪಾತತೆಯಿಂದ ಈಡೀ ವಿಶ್ವಕ್ಕೆ ಸ್ಫೂರ್ತಿಯ ಸೆಲೆಯಾಗಿದೆ ಎಂದರು. ಭಾರತ ತನ್ನ ಲೋಕಸಭಾ.
ಚುನಾವಣೆಯನ್ನು ನಡೆಸುವುದನ್ನು ಕಾಣಲು ವಿಶ್ವಾದ್ಯಂತದಿಂದ ಜನ ಬರಬೇಕು ಎಂದೂ ಅವರು ತಿಳಿಸಿದರು.