ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ನ್ಯೂಯಾರ್ಕ್‌ನಲ್ಲಿ ವಿಶೇಷ ದುಂಡುಮೇಜಿನ ಚರ್ಚೆಯ ಅಧ್ಯಕ್ಷತೆ ವಹಿಸಿದ್ದರು ಇದರಲ್ಲಿ 20 ವಲಯಗಳ 42 ಜಾಗತಿಕ ಉದ್ಯಮದ ನಾಯಕರು ಭಾಗವಹಿಸಿದ್ದರು. ದುಂಡುಮೇಜಿನ ಚರ್ಚೆಯಲ್ಲಿ ಭಾಗವಹಿಸಿದ ಕಂಪನಿಗಳ ಒಟ್ಟು ಮೌಲ್ಯ 16.4 ಟ್ರಿಲಿಯನ್ ಡಾಲರ್ ನಿವ್ವಳವಾಗಿದ್ದು, ಅದರಲ್ಲಿ ಭಾರತದಲ್ಲಿ ಅವುಗಳ ನಿವ್ವಳ ಮೌಲ್ಯ 50 ಬಿಲಿಯನ್ ಡಾಲರ್ ಆಗಿದೆ.
ಸಭೆಯಲ್ಲಿ ಐಬಿಎಂನ ಅಧ್ಯಕ್ಷೆ ಮತ್ತು ಸಿಇಒ ಶ್ರೀಮತಿ ಗಿನ್ನಿ ರೊಮೆಟ್ಟಿ ; ವಾಲ್ ಮಾರ್ಟ್‌ನ ಅಧ್ಯಕ್ಷ ಮತ್ತು ಸಿಇಒ ಶ್ರೀ ಡೌಗ್ಲಾಸ್ ಮೆಕ್‌ಮಿಲನ್; ಶ್ರೀ ಜೇಮ್ಸ್ ಕ್ವಿನ್ಸಿ, ಕೋಕಾ-ಕೋಲಾದ ಅಧ್ಯಕ್ಷ ಮತ್ತು ಸಿಇಒ; ಲಾಕ್ಹೀಡ್ ಮಾರ್ಟಿನ್ ಕಂಪನಿಯ ಸಿಇಒ ಮಿಸ್ ಮರಿಲಿನ್ ಹ್ಯೂವ್ಸನ್; ಜೆಪಿ ಮೋರ್ಗಾನ್‌ನ ಅಧ್ಯಕ್ಷ ಮತ್ತು ಸಿಇಒ ಶ್ರೀ ಜೇಮೀ ಡಿಮನ್; ಶ್ರೀ ಜೇಮ್ಸ್ ಡಿ. ಟೈಕ್ಲೆಟ್, ಅಮೇರಿಕನ್ ಟವರ್ ಕಾರ್ಪೊರೇಶನ್‌ನ ಸಿಇಒ ಮತ್ತು ಭಾರತ-ಯುಎಸ್ ಸಿಇಒ ವೇದಿಕೆಯ ಸಹ-ಅಧ್ಯಕ್ಷರು ಮತ್ತು ಇನ್ನೂ ಕೆಲವು ಕಂಪನಿಗಳ ಅಂದರೆ ಆ್ಯಪಲ್, ಗೂಗಲ್, ಮ್ಯಾರಿಯಟ್, ವೀಸಾ, ಮಾಸ್ಟರ್‌ಕಾರ್ಡ್, 3 ಎಂ, ವಾರ್‌ಬರ್ಗ್ ಪಿಂಕಸ್, ಎಇಸಿಒಎಂ, ರೇಥಿಯಾನ್, ಬ್ಯಾಂಕ್ ಆಫ್ ಅಮೆರಿಕಾ, ಪೆಪ್ಸಿಯ ಹಿರಿಯ ಕಾರ್ಯನಿರ್ವಾಹಕರು ಭಾಗವಹಿಸಿದ್ದರು.
ಡಿಪಿಐಐಟಿ ಮತ್ತು ಇನ್ವೆಸ್ಟ್ ಇಂಡಿಯಾ ದ ಸಂಘಟಿತ ಸಂವಾದದಲ್ಲಿ ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಎಸ್. ಪಿಯೂಷ್ ಗೋಯಲ್, ಮತ್ತು ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಮತ್ತು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು.
ವ್ಯಾಪಾರ ಮಾಡುವ ಅನುಕೂಲತೆ ಮತ್ತು ಅನೇಕ ಸುಧಾರಣೆಗಳತ್ತ ಭಾರತವು ಕೈಗೊಂಡ ಮಹತ್ತರ ಪ್ರಗತಿಯನ್ನು ಭಾಗವಹಿಸಿದವರು ಶ್ಲಾಘಿಸಿದರು ಮತ್ತು ಇದು ಹೂಡಿಕೆದಾರರಿಗೆ ಅನುಕೂಲಕರ ವಾತಾವರಣಕ್ಕೆ ಕಾರಣವಾಗಿದೆ. “ಈಸ್ ಆಫ್ ಡೂಯಿಂಗ್ ಬ್ಯುಸಿನೆಸ್” (ವ್ಯಾಪಾರ ಮಾಡುವ ಅನುಕೂಲತೆ) ಅನ್ನು ಕೇಂದ್ರೀಕರಿಸಿ ಭಾರತವನ್ನು ಹೆಚ್ಚು ಹೂಡಿಕೆದಾರ ಸ್ನೇಹಿಯನ್ನಾಗಿ ಮಾಡುವ ಬಗ್ಗೆ ಬಲವಾದ ನಿರ್ಧಾರಗಳನ್ನು ತೆಗೆದುಕೊಂಡ ಪ್ರಧಾನ ಮಂತ್ರಿಯವರನ್ನು ವ್ಯಾಪಾರ ಮುಖಂಡರು ಅಭಿನಂದಿಸಿದರು. ಭಾಗವಹಿಸಿದ್ದ ಪ್ರಮುಖರು ತಮ್ಮ ಕಂಪನಿಗಳು ಭಾರತದ ಬೆಳವಣಿಗೆಯ ಇತಿಹಾಸದೊಂದಿಗೆ ಬದ್ಧವಾಗಿರುತ್ತವೆ ಮತ್ತು ಇದರ ಹಿನ್ನಲೆಯಲ್ಲಿ ಭಾರತದಲ್ಲಿ ತಮ್ಮ ಹೆಜ್ಜೆಗುರುತನ್ನು ಬೆಳೆಸಿಕೊಳ್ಳುತ್ತಲೇ ಇರುವುದಾಗಿ ಹೇಳಿದರು.
ಸಿಇಒಗಳು ಭಾರತದಲ್ಲಿ ತಮ್ಮ ನಿರ್ದಿಷ್ಟ ಯೋಜನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಿದರು ಮತ್ತು ಕೌಶಲ್ಯ ಅಭಿವೃದ್ಧಿ, ಡಿಜಿಟಲ್ ಇಂಡಿಯಾ, ಮೇಕ್ ಇನ್ ಇಂಡಿಯಾ, ಅಂತರ್ಗತ ಬೆಳವಣಿಗೆ, ಹಸಿರು ಶಕ್ತಿ ಮತ್ತು ಆರ್ಥಿಕ ಸೇರ್ಪಡೆ ಕಡೆಗೆ ಭಾರತದ ಪ್ರಯತ್ನಗಳಿಗೆ ಸಹಾಯ ಮಾಡಲು ಶಿಫಾರಸುಗಳನ್ನು ಸಹ ಮಂಡಿಸಿದರು.
ಸಿಇಒಗಳ ಅಭಿಪ್ರಾಯಗಳಿಗೆ ಪ್ರತಿಕ್ರಿಯೆಯಾಗಿ, ಪ್ರಧಾನ ಮಂತ್ರಿಯವರು ರಾಜಕೀಯ ಸ್ಥಿರತೆ, ನೀತಿಯ ಮುನ್ಸೂಚನೆ ಮತ್ತು ಅಭಿವೃದ್ಧಿ ಪರ ಮತ್ತು ಬೆಳವಣಿಗೆಯ ಪರ ನೀತಿಗಳ ಬಗ್ಗೆ ಒತ್ತಿಹೇಳಿದರು. ಪ್ರವಾಸೋದ್ಯಮ, ಪ್ಲಾಸ್ಟಿಕ್ ಮರುಬಳಕೆ ಮತ್ತು ತ್ಯಾಜ್ಯ ನಿರ್ವಹಣಾ ಉಪಕ್ರಮಗಳ ಅಭಿವೃದ್ಧಿ ಮತ್ತು ಎಂಎಸ್‌ಎಂಇ (ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ) ಗಳ ವ್ಯವಹಾರವನ್ನು ಹೆಚ್ಚಿಸಲು ಅವರು ವಿಶೇಷವಾಗಿ ಒತ್ತು ನೀಡಿದರು, ವಿಶೇಷವಾಗಿ ರೈತರು ಮತ್ತು ಕೃಷಿಗೆ ಹೆಚ್ಚಿನ ಅವಕಾಶಗಳನ್ನು ಸೃಷ್ಟಿಸುವುದರ ಬಗ್ಗೆ ಹೇಳಿದರು. ಸ್ಟಾರ್ಟ್ಅಪ್ ಇಂಡಿಯಾ ಹೊಸ ಶೋಧಗಳ ವೇದಿಕೆಗಳನ್ನು ಇತರ ದೇಶಗಳ ಸಹಭಾಗಿತ್ವದಲ್ಲಿ ಬಳಸಿಕೊಳ್ಳಬೇಕೆಂದು ಮತ್ತು ಭಾರತಕ್ಕೆ ಮಾತ್ರವಲ್ಲ, ಜಗತ್ತಿಗೆ, ಪೌಷ್ಠಿಕಾಂಶ ಮತ್ತು ತ್ಯಾಜ್ಯ ನಿರ್ವಹಣೆಯಂತಹ ಸವಾಲಿನ ವಿಷಯಗಳು ಸೇರಿದಂತೆ ಪರಿಹಾರಗಳನ್ನು ರೂಪಿಸಬೇಕು ಅವರು ಕಂಪನಿಗಳಿಗೆ ಆಗ್ರಹಿಸಿದರು.
Captains of industry interact with PM @narendramodi in New York. The extensive agenda includes harnessing investment opportunities in India and boosting commercial linkages between India and USA. pic.twitter.com/tQE9Fgutyi
— PMO India (@PMOIndia) September 25, 2019
How many of the 42 CEOs of the top global companies in the frame with PM @narendramodi can you identify?
— Raveesh Kumar (@MEAIndia) September 25, 2019
PM at the CEO Roundtable in New York highlighted the steps taken by India to build a $5 trillion economy. Global business community is upbeat about the India success story. pic.twitter.com/av8cQAe4HL
The meeting with PM @narendramodi was excellent. I congratulate India on their pro-growth policies, says Marillyn Hewson the CEO of @LockheedMartin. pic.twitter.com/JzOOJPHJvT
— PMO India (@PMOIndia) September 25, 2019
I went to the meeting (with PM @narendramodi) optimistic but I come out even more optimistic about India, says @IBM CEO @GinniRometty. pic.twitter.com/lHaYwYLnCo
— PMO India (@PMOIndia) September 25, 2019
Really excited to be in the Prime Minister’s investment summit, says James Quincey, Chairman and CEO of @CocaColaCo. pic.twitter.com/dbzMFFXhYD
— PMO India (@PMOIndia) September 25, 2019
The Prime Minister’s speech was strong and comprehensive: Ben van Beurden, CEO of @Shell. pic.twitter.com/ekMI4E0nPu
— PMO India (@PMOIndia) September 25, 2019
Here’s what the CEO of @BankofAmerica, Brian T. Moynihan has to say on the interaction with PM @narendramodi. pic.twitter.com/2OZHYm8DPD
— PMO India (@PMOIndia) September 25, 2019