ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಪ್ರವಾಸಿ ಭಾರತೀಯ ಕೇಂದ್ರದಲ್ಲಿ ನೀತಿ ಆಯೋಗ ಆಯೋಜಿಸಿದ್ದ “ಬದಲಾವಣೆಯ ಚಾಂಪಿಯನ್ನರು – ಜಿ2ಬಿ ಪಾಲುದಾರಿಕೆ ಮೂಲಕ ಭಾರತದ ಪರಿವರ್ತನೆ’’ ಕಾರ್ಯಕ್ರಮದಲ್ಲಿ ಯುವ ಸಿಇಓಗಳೊಂದಿಗೆ ಸಂವಾದ ನಡೆಸಿದರು. ಈ ಸರಣಿಯಲ್ಲಿ ಇದು ಪ್ರಧಾನಮಂತ್ರಿಯವರ ಎರಡನೇ ಭಾಷಣವಾಗಿದೆ. ಕಳೆದ ವಾರ ಯುವ ಉದ್ದಿಮೆದಾರರೊಂದಿಗೆ ಅವರು ಸಂವಾದ ನಡೆಸಿದ್ದರು.


ಪ್ರಧಾನಮಂತ್ರಿಯವರ ಮುಂದೆ ಮೇಕ್ ಇನ್ ಇಂಡಿಯಾ; ರೈತರ ಆದಾಯ ದುಪ್ಪಟ್ಟು ಮಾಡುವುದು; ವಿಶ್ವದರ್ಜೆಯ ಮೂಲಸೌಕರ್ಯ; ನಾಳೆಯ ನಗರಗಳು; ಆರ್ಥಿಕ ಕ್ಷೇತ್ರದ ಸುಧಾರಣೆ; ಮತ್ತು 2002ರ ಹೊತ್ತಿಗೆ ನವ ಭಾರತ ಕುರಿತ ಧ್ಯೇಯಗಳ ಕುರಿತಂತೆ ಯುವ ಸಿಇಓಗಳ ಆರು ಗುಂಪುಗಳು ಪ್ರಾತ್ಯಕ್ಷಿಕೆಯನ್ನು ಪ್ರದರ್ಶಿಸಿದರು.


ಸಿಇಓಗಳ ಪ್ರಾತ್ಯಕ್ಷಿಕೆಯಲ್ಲಿ ಅಡಕವಾಗಿದ್ದ ನೂತನ ಕಲ್ಪನೆಗಳು ಮತ್ತು ನಾವಿನ್ಯತೆಗಳನ್ನು ಪ್ರಶಂಶಿಸಿದ ಪ್ರಧಾನಿ, ಮೌಲ್ಯಯುತ ಸಲಹೆಗಳಿಗೆ ಮತ್ತು ದೇಶದ ಪ್ರಯೋಜನಕ್ಕಾಗಿ ಕಲ್ಪನೆಗಳನ್ನು ಮಾಡಲು ಸಮಯ ನೀಡಿದ್ದಕ್ಕಾಗಿ ಧನ್ಯವಾದ ಅರ್ಪಿಸಿದರು.

ಪ್ರಸ್ತುತ ಪಡಿಸಲಾದ ವಿಷಯಗಳ ಮೇಲಿನ 360 ಡಿಗ್ರಿ ನೋಟವನ್ನು ಸರ್ಕಾರದ ಪ್ರಮುಖ ನಿರ್ಧಾರ ನಿರೂಪಕ ತಂಡವು ಎಚ್ಚರಿಕೆಯಿಂದ ಪ್ರಾತ್ಯಕ್ಷಿಕೆಯನ್ನು ವೀಕ್ಷಿಸಿದ್ದು,ಅದರ ನೀತಿ-ನಿರೂಪಣೆಯಲ್ಲಿ ಇದು ಖಂಡಿತ ಪ್ರಯೋಜನವಾಗಲಿದೆ ಎಂದು ಅವರು ಹೇಳಿದರು.

ಜನರ ಪಾಲ್ಗೊಳ್ಳುವಿಕೆ ಆಡಳಿತದ ಮಹತ್ವದ ಅಂಶವಾಗಿದೆ ಎಂದು ಪ್ರಧಾನಿ ಹೇಳಿದರು. ಅದೇ ರೀತಿ ಸರ್ಕಾರದೊಂದಿಗೆ ಸಿಇಓಗಳ ಪಾಲುದಾರಿಕೆಯ ಈ ಪ್ರಯತ್ನವು, ದೇಶದ ಮತ್ತು ಜನತೆಯ ಕಲ್ಯಾಣದ ಪಾಲುದಾರಿಕೆಯನ್ನು ಹೆಚ್ಚಿಸುವ ಗುರಿಯನ್ನು ಹೊಂದಿದೆ ಎಂದರು.
ಭಾರತದ ಸ್ವಾತಂತ್ರ್ಯ ಸಂಗ್ರಾಮವನ್ನು ಸ್ಮರಿಸಿದ ಪ್ರಧಾನಿ, ಮಹಾತ್ಮಾ ಗಾಂಧಿ ಅವರು ಎಲ್ಲ ಭಾರತೀಯರನ್ನೂ ತಮ್ಮದೇ ಸ್ವಂತ ಕೆಲಸ ಮಾಡುವ ರೀತಿಯಲ್ಲಿ ಸ್ವಾತಂತ್ರ್ಯ ಯೋಧರನ್ನಾಗಿ ಪರಿವರ್ತಿಸಿದ್ದರು. ಸ್ವಾತಂತ್ರ್ಯ ಚಳವಳಿಯನ್ನು ಒಂದು ಸಾಮೂಹಿಕ ಆಂದೋಲನವನ್ನಾಗಿ ಮಾಡಲು ನೆರವಾದರು ಎಂದರು.

ಇಂದು ಅಭಿವೃದ್ಧಿ ಸಹ ಸಮೂಹ ಆಂದೋಲನವಾಗಬೇಕು ಎಂದು ಪ್ರಧಾನಿ ಹೇಳಿದರು. ಇಂಥ ಸ್ಫೂರ್ತಿಯನ್ನು ಸೃಷ್ಟಿಸಬೇಕು, ನಾವು 2022ರಹೊತ್ತಿಗೆ ನವ ಭಾರತಕ್ಕೆ ಕೊಡುಗೆ ನೀಡುವ ಗುರಿಯನ್ನು ಹೊಂದಬೇಕು ಎಂದು ಹೇಳಿದರು. ನೀವು ನನ್ನ ತಂಡ, ಮತ್ತು ನಾವು ಭಾರತವನ್ನು ಮುಂದೆ ತೆಗೆದುಕೊಂಡು ಹೋಗಲು ಒಗ್ಗೂಡಿ ದುಡಿಯುವ ಅಗತ್ಯವಿದೆ ಎಂದು ಪ್ರಧಾನಿ ಸಿಇಓಗಳಿಗೆ ತಿಳಿಸಿದರು.
ಕೃಷಿಯಲ್ಲಿ ಮೌಲ್ಯವರ್ಧನೆಯ ಉದಾಹರಣೆ ನೀಡಿದ ಪ್ರಧಾನಮಂತ್ರಿಯವರು, ಕೃಷಿ ಆದಾಯವನ್ನು ದುಪ್ಪಟ್ಟು ಮಾಡವಲ್ಲಿ ಅಪೇಕ್ಷಿತ ಫಲಿತಾಂಶವನ್ನು ಪಡೆಯಲು ಬಹು ಹಂತದ ನಿಲುವಿನ ಅಗತ್ಯವಿದೆ ಎಂದರು. ಆಹಾರ ಸಂಸ್ಕರಮೆಯ ಮಹತ್ವವನ್ನು ಪ್ರತಿಪಾದಿಸಿದ ಪ್ರಧಾನಿ, ಮೂಲಸೌಕರ್ಯದ ಕೊರತೆ ಕೃಷಿ ವಲಯದಲ್ಲಿ ಭಾರೀ ನಷ್ಟಕ್ಕೆ ಕಾರಣವಾಗುತ್ತಿದೆ ಎಂದರು.
ಕೇಂದ್ರ ಸರ್ಕಾರ ಹಲವು ನಿರ್ಧಾರಗಳನ್ನು ಕೈಗೊಂಡಿದ್ದು, ಇವು ಮೂಲಭೂತ ಪರಿವರ್ತನೆ ತರುತ್ತಿವೆ ಎಂದು ಪ್ರಧಾನಿ ಹೇಳಿದರು. ಯೂರಿಯಾ ಲಭ್ಯತೆ ಮತ್ತು ಉತ್ಪಾದನೆ, ಅನಿಲ ದರ ಸಂಗ್ರಹಣೆ (ಪೂಲಿಂಗ್), ಹೆಚ್ಚಿನ ಉತ್ಪಾದನೆಗೆ ಪ್ರೋತ್ಸಾಹಕ ಇತ್ಯಾದಿಗೆ ಕೈಗೊಂಡ ನಿರ್ಧಾರದ ಉದಾಹರಣೆಗಳನ್ನು ನೀಡಿದರು. ಈ ಎಲ್ಲವೂ ಹೆಚ್ಚುವರಿಯಾಗಿ 20 ಲಕ್ಷ ಟನ್ ಯೂರಿಯಾ ಉತ್ಪಾದನೆಗೆ ಕಾರಣವಾಯಿತು ಎಂದರು. ಯೂರಿಯಾಕ್ಕೆ ಬೇವು ಲೇಪನ ಮಾಡುವುದರಿಂದ ಯೂರಿಯ ದೊಡ್ಡ ಪ್ರಮಾಣದಲ್ಲಿ ಬೇರೆಗೆ ಹೋಗುತ್ತಿದ್ದುದನ್ನು ತಡೆದಿದೆ ಎಂದರು.
ಭಾರತವನ್ನು ಕಡಿಮೆ ನೋಟು ಚಲಾವಣೆಯ ಸಮಾಜವಾಗಿ ಪರಿವರ್ತಿಸುವ ನಿಟ್ಟಿನಲ್ಲಿ ಸಾಗಬೇಕೆಂದು ಸರ್ಕಾರ ಬಯಸುತ್ತದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಸೂಕ್ತ ಚಾಲನೆ ರೂಪಿಸಲು ಸರ್ಕಾರದೊಂದಿಗೆ ಪಾಲುದಾರರಾಗುವಂತೆ ಸಿಇಓಗಳಿಗೆ ಕರೆ ನೀಡಿದರು.
ಅದೇ ರೀತಿ, ಹಬ್ಬಗಳ ಸಂದರ್ಭದಲ್ಲಿ, ಖಾದಿಯನ್ನು ಉಡುಗೊರೆ ನೀಡುವ ರೂಪದಲ್ಲಿ ಉತ್ತೇಜಿಸಬೇಕು, ಇದು ಬಡವರಿಗೆ ದೊಡ್ಡ ಸಹಾಯ ಮಾಡುತ್ತದೆ ಎಂದರು. ಬಡವರನ್ನು ಬದುಕಿನ ಎಲ್ಲ ರಂಗದಲ್ಲಿ ಜೊತೆಯಲ್ಲಿ ತೆಗೆದುಕೊಂಡು ಹೋಗುವಂಥ ವಾತಾವರಣ ಸೃಷ್ಟಿಸುವ ಅಗತ್ಯವಿದೆ ಎಂದೂ ಹೇಳಿದರು.
ಸರ್ಕಾರದ ಇ ಮಾರುಕಟ್ಟೆ ತಾಣ (ಜಿಇಎಂ) ಉದಾಹರಣೆ ನೀಡಿದ ಪ್ರಧಾನಿ, ಸರ್ಕಾರಕ್ಕೆ ಪೂರೈಕೆ ಮಾಡುವ ನಿಟ್ಟಿನಲ್ಲಿ ಸಣ್ಣ ವ್ಯಾಪಾರಸ್ಥರು ಹೇಗೆ ಯಶಸ್ವಿಯಾಗಿ ಸ್ಪರ್ಧೆಗಿಳಿದಿದ್ದಾರೆ ಎಂಬುದನ್ನು ವಿವರಿಸಿದರು. ಜಿಇಎಂ ಮೂಲಕ ಈವರೆಗೆ 1000 ಕೋಟಿ ರೂಪಾಯಿ ಹಣದ ವಹಿವಾಟು ನಡೆದಿದೆ ಮತ್ತು 28ಸಾವಿರ ಪೂರೈಕೆ ಈ ವೇದಿಕೆಯ ಕೊಡುಗೆಯಾಗಿದೆ ಎಂದರು.

ಭಾರತೀಯರು ಸ್ವದೇಶದಲ್ಲಿ ಹೆಮ್ಮೆ ಪಡೆಬೇಕು ಎಂದು ಪ್ರಧಾನಿ ಹೇಳಿದರು. ಭಾರತದೊಳಗೆ ಇರುವ ಪ್ರವಾಸಿ ತಾಣಗಳನ್ನು ತಮ್ಮ ಸಂಪರ್ಕದಲ್ಲಿರುವ ಎಲ್ಲರೊಂದಿಗೆ ಉತ್ತೇಜಿಸುವ ಕಾರ್ಯ ಮಾಡುವುದನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ತ್ಯಾಜ್ಯದಿಂದ ಸಂಪತ್ತಿನ ಉದ್ದಿಮೆದಾರರ ಉದಾಹರಣೆ ನೀಡಿದ ಪ್ರಧಾನಿ, ಇದು ಸ್ವಚ್ಛ ಭಾರತ ಮತ್ತು ನಿರ್ಮಲ ಪರಿಸರದ ಉದ್ದೇಶದ ಈಡೇರಿಕೆಗೆ ನೆರವಾಗಲಿದೆ ಎಂದರು. ದೇಶದಲ್ಲಿ ಜನರು ಎದುರಿಸುತ್ತಿರುವ ಸರಳ ಸಮಸ್ಯೆಗಳನ್ನು ಪರಿಹರಿಸುವಂಥ ಉತ್ಪನ್ನಗಳನ್ನು ಒದಗಿಸಲು ವಾಣಿಜ್ಯೋದ್ಯಮಿಗಳು ಮತ್ತು ವ್ಯವಹಾರಸ್ಥರು ಗುರಿ ಹೊಂದಬೇಕು ಎಂದು ಅವರು ಹೇಳಿದರು.


ಕೇಂದ್ರದ ಹಲವು ಸಚಿವರು, ಸರ್ಕಾರಿ ಅಧಿಕಾರಿಗಳು ಈ ಸಂದರ್ಭದಲ್ಲಿ ಹಾಜರಿದ್ದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Space Sector: A Transformational Year Ahead in 2025

Media Coverage

India’s Space Sector: A Transformational Year Ahead in 2025
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India