ಕೋವಿಡ್-19 ಸೋಂಕು ನಿಯಂತ್ರಣಕ್ಕಾಗಿ ಲಸಿಕೆ ನೀಡಿದ ಮತ್ತು ಲಸಿಕೆ ಪಡೆದ ಫಲಾನುಭವಿಗಳೊಂದಿಗೆ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ವಿಡಿಯೋ ಕಾನ್ಪರೆನ್ಸ್ ಮೂಲಕ ಇಂದು ಸಂವಾದ ನಡೆಸಿದರು.
ಕೊರೋನಾ ಲಸಿಕೆ ಅಭಿಯಾನದಲ್ಲಿ ಭಾಗಿಯಾದ ಎಲ್ಲಾ ವೈದ್ಯಕೀಯ ಸಿಬ್ಬಂದಿ, ಅರೆ ವೈದ್ಯಕೀಯ ಸಿಬ್ಬಂದಿ, ಆಸ್ಪತ್ರೆಗಳ ನೈರ್ಮಲ್ಯ ಕಾರ್ಯಕರ್ತರು ಮತ್ತು ಬನಾರಸ್ ನ ಜತೆಯನ್ನು ಪ್ರಧಾನಮಂತ್ರಿಯವರು ಅಭಿನಂದಿಸಿದರು.
ಕೋವಿಡ್ ಕಾರಣದಿಂದಾಗಿ ಈ ಸಂದರ್ಭದಲ್ಲಿ ತಾವು ನಿಮ್ಮೊಂದಿಗೆ ನೇರವಾಗಿ ಪಾಲ್ಗೊಳ್ಳಲು ಸಾಧ್ಯವಾಗದ ಬಗ್ಗೆ ವಿಷಾದ ವ್ಯಕ್ತಪಡಿಸಿದರು. ಜಗತ್ತಿನ ಅತಿದೊಡ್ಡ ಲಸಿಕಾ ಕಾರ್ಯಕ್ರಮ ದೇಶದಲ್ಲಿ ನಡೆಯುತ್ತಿದೆ. ಮೊದಲ ಎರಡು ಹಂತಗಳಲ್ಲಿ ದೇಶದ 30 ಕೋಟಿ ಜನತೆಗೆ ಲಸಿಕೆ ಹಾಕಲಾಗುವುದು. ದೇಶೀಯವಾಗಿ ಇಂದು ತನ್ನದೇ ಆದ ಲಸಿಕೆ ತಯಾರಿಸುವ ಇಚ್ಛಾಶಕ್ತಿಯನ್ನು ದೇಶ ಇಂದು ಪ್ರದರ್ಶಿಸಿದೆ. ತ್ವರಿತವಾಗಿ ರಾಷ್ಟ್ರದ ಪ್ರತಿಯೊಂದು ಮೂಲೆ ಮೂಲೆಗಳಿಗೂ ಲಸಿಕೆ ತಲುಪಿಸಲಾಗುತ್ತಿದೆ. ಜಗತ್ತಿಗೆ ಬೇಕಾದ ಅತಿದೊಡ್ಡ ಅಗತ್ಯತೆಯಾದ ಲಸಿಕೆಯನ್ನು ಭಾರತ ಸ್ವಾವಲಂಬಿಯಾಗಿ ತಯಾರಿಸುತ್ತಿದೆ ಮತ್ತು ಹಲವು ರಾಷ್ಟ್ರಗಳಿಗೆ ಭಾರತ ನೆರವು ನೀಡುತ್ತಿದೆ ಎಂದು ಹೆಮ್ಮೆಯಿಂದ ಹೇಳಿದರು.
ಕಳೆದ ಆರು ವರ್ಷಗಳಲ್ಲಿ ಬನಾರಸ್ ಮತ್ತು ಆಸುಪಾಸಿನ ಪ್ರದೇಶಗಳಲ್ಲಿ ವೈದ್ಯಕೀಯ ಮೂಲ ಸೌಕರ್ಯದಲ್ಲಿ ದಾಖಲಾರ್ಹವಾದ ರೀತಿಯಲ್ಲಿ ಬದಲಾವಣೆಯಾಗಿದೆ. ಈ ಬೆಳವಣಿಗೆಯಿಂದ ಕೊರೋನಾ ಸಂಕಷ್ಟ ಪರಿಸ್ಥಿತಿಯಲ್ಲಿ ಸಂಪೂರ್ಣ ಪೂರ್ವಾಂಚಲ ಭಾಗಕ್ಕೆ ಅನುಕೂಲಕರವಾಗಿದೆ ಎಂದು ತಿಳಿಸಿದರು.
ಬನಾರಸ್ ಕೂಡ ಲಸಿಕೆ ಅಭಿಯಾನದಲ್ಲಿ ಅದೇ ವೇಗ ಪ್ರದರ್ಶಿಸುತ್ತಿದೆ. ಬನಾರಸ್ ನಲ್ಲಿ 20 ಸಾವಿರಕ್ಕೂ ಹೆಚ್ಚು ಆರೋಗ್ಯ ವೃತ್ತಿಪರರಿಗೆ ಲಸಿಕೆ ಹಾಕಲಾಗುತ್ತಿದೆ. ಇದಕ್ಕಾಗಿ 15 ಲಸಿಕಾ ಕೇಂದ್ರಗಳನ್ನು ಸ್ಥಾಪಿಸಲಾಗಿದೆ. ಲಸಿಕಾ ಅಭಿಯಾನಕ್ಕಾಗಿ ಸೂಕ್ತ ರೀತಿಯಲ್ಲಿ ಸಿದ್ಧತೆ ಮಾಡಿದ ಉತ್ತರ ಪ್ರದೇಶದ ಮುಖ್ಯಮಂತ್ರಿ ಮತ್ತು ಅವರ ಸಂಪುಟ ಸಹೋದ್ಯೋಗಿಗಳನ್ನು ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.
ಲಸಿಕೆ ಅಭಿಯಾನದ ಕುರಿತ ಅಗತ್ಯ ವ್ಯವಸ್ಥೆ, ಸಮಸ್ಯೆಗಳ ಕುರಿತು ವಿಚಾರಿಸುವುದು ಇಂದಿನ ಸಂವಾದದ ಉದ್ದೇಶವಾಗಿದೆ ಎಂದು ಹೇಳಿದರಲ್ಲದೇ ಲಸಿಕೆ ಅಭಿಯಾನದಲ್ಲಿ ಪಾಲ್ಗೊಂಡವರೊಂದಿಗೆ ಮಾತನಾಡಿದರು. ವಾರಣಸಿಯಲ್ಲಿನ ಪ್ರತಿಕ್ರಿಯೆ ಬೇರೆಡೆಯಲ್ಲಿನ ಪರಿಸ್ಥಿತಿಯನ್ನು ಅರ್ಥಮಾಡಿಕೊಳ್ಳಲು ಸಹಕಾರಿಯಾಗಲಿದೆ ಎಂದೂ ಸಹ ಹೇಳಿದರು.
ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ದಾದಿಯರು, ಎ.ಎನ್.ಎಂ ಕಾರ್ಯಕರ್ತರು, ವೈದ್ಯರು ಮತ್ತು ಪ್ರಯೋಗಾಲಯ ತಂತ್ರಜ್ಞರೊಂದಿಗೆ ಸಮಾಲೋಚನೆ ಮಾಡಿದರು. ಪ್ರಧಾನಮಂತ್ರಿಯವರು ಇದೇ ಸಂದರ್ಭದಲ್ಲಿ ದೇಶದ ಜನತೆಯ ಪರವಾಗಿ ಕೃತಜ್ಞತೆಯನ್ನು ಸಲ್ಲಿಸಿದರು. ಸನ್ಯಾಸಿಗಳಂತೆ ಸಮರ್ಪಣಾ ಭಾವದಿಂದ ಕಾರ್ಯನಿರ್ವಹಿಸುತ್ತಿರುವ ವಿಜ್ಞಾನಿಗಳ ಕಾರ್ಯನಿರ್ವಹಣೆಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸ್ವಚ್ಛತಾ ಅಭಿಯಾನದ ಮೂಲಕ ಸ್ವಚ್ಛತೆಯ ಕುರಿತು ಸೃಷ್ಟಿಸಿದ ಸಂಸ್ಕೃತಿಯಿಂದಾಗಿ ಸಾಂಕ್ರಾಮಿಕ ಪರಿಸ್ಥಿತಿ ಎದುರಿಸಲು ದೇಶ ಉತ್ತಮ ರೀತಿಯಲ್ಲಿ ಸಿದ್ಧವಾಗಿದೆ ಎಂದು ಪ್ರಧಾನಮಂತ್ರಿಯವರು ಹೇಳಿದರು.
ಕೊರೋನಾ ಸಾಂಕ್ರಾಮಿಕ ಮತ್ತು ಲಸಿಕೆ ಅಭಿಯಾನ ಕುರಿತು ಅಧಿಕೃತವಾಗಿ ಮಾಹಿತಿ ಮತ್ತು ಅರಿವು ಮೂಡಿಸಿದ ಕೋರಾನಾ ಸೇನಾನಿಗಳನ್ನು ಪ್ರಧಾನಮಂತ್ರಿ ಅವರು ಇದೇ ಸಂದರ್ಭದಲ್ಲಿ ಅಭಿನಂದಿಸಿದರು.