ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರ (ಪಿಎಂಆರ್.ಬಿ.ಪಿ.) ಪ್ರಶಸ್ತಿ ವಿಜೇತರೊಂದಿಗೆ ಇಂದು ವಿಡಿಯೋ ಕಾನ್ಫರೆನ್ಸಿಂಗ್ ಮೂಲಕ ಸಂವಾದ ನಡೆಸಿದರು. ಕೇಂದ್ರ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಖಾತೆ ಸಚಿವೆ ಶ್ರೀಮತಿ ಜುಬಿನ್ ಇರಾನಿ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

|

ಈ ವರ್ಷದ ಪ್ರಶಸ್ತಿ ವಿಶೇಷವಾಗಿದೆ ಕಾರಣ ಕೊರೊನಾ ಸಂಕಷ್ಟದ ಕಾಲದಲ್ಲಿ ಇದಕ್ಕೆ ಅವರು ಭಾಜನರಾಗಿದ್ದಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಸಂವಾದದ ವೇಳೆ ಪ್ರಧಾನಮಂತ್ರಿಯವರು ಸ್ವಭಾವವನ್ನೇ ಬದಲಾಯಿಸುವಂತಾ ಸ್ವಚ್ಛತಾ ಅಭಿಯಾನದಲ್ಲಿ ಮಕ್ಕಳ ಪಾತ್ರವನ್ನು ಉಲ್ಲೇಖಿಸಿದರು. ಕೊರೊನಾ ಸಮಯದಲ್ಲಿ ಮಕ್ಕಳು ಕೈತೊಳೆಯುವಂಥ ಅಭಿಯಾನದಲ್ಲಿ ತೊಡಗಿಕೊಂಡಾಗ, ಇದು ಜನರ ಚಿತ್ತ ಆಕರ್ಷಿಸಿತು ಮತ್ತು ಯಶಸ್ವಿಯಾಯಿತು ಎಂದರು. ಈ ವರ್ಷ ವೈವಿಧ್ಯಮಯ ಕ್ಷೇತ್ರದಲ್ಲಿ ಪ್ರಶಸ್ತಿ ನೀಡುತ್ತಿರುವುದನ್ನು ಅವರು ಉಲ್ಲೇಖಿಸಿದರು.

|

ಒಂದು ಸಣ್ಣ ಕಲ್ಪನೆಗೆ ಸರಿಯಾದ ಕ್ರಮದ ಬೆಂಬಲ ದೊರೆತರೆ, ಫಲಿತಾಂಶ ತೃಪ್ತಿದಾಯಕವಾಗಿರುತ್ತದೆ ಎಂದು ಪ್ರಧಾನಮಂತ್ರಿ ಅಭಿಪ್ರಾಯಪಟ್ಟರು. ಮಕ್ಕಳಿಗೆ ಕ್ರಿಯೆಯಲ್ಲಿ ನಂಬಿಕೆ ಇಡುವಂತೆ ಹೇಳಿದ ಅವರು, ಕಲ್ಪನೆಗಳು ಮತ್ತು ಕ್ರಿಯೆಗಳು ಹೆಚ್ಚಿನ ಕಾರ್ಯಗಳಿಗಾಗಿ ಜನರನ್ನು ಪ್ರೇರೇಪಿಸುವ ಅನೇಕ ಕ್ರಿಯೆಗಳನ್ನು ಪ್ರಚೋದಿಸುತ್ತದೆ ಎಂದು ಹೇಳಿದರು. ಮಕ್ಕಳು ತಮ್ಮ ಪ್ರಶಸ್ತಿಗಳಿಂದ ಸಂತೃಪ್ತರಾಗದೆ, ತಮ್ಮ ಜೀವನದಲ್ಲಿ ಉತ್ತಮ ಫಲಿತಾಂಶಕ್ಕಾಗಿ ನಿರಂತರವಾಗಿ ಶ್ರಮಿಸಬೇಕು ಎಂದು ಪ್ರಧಾನಮಂತ್ರಿ ಸಲಹೆ ಮಾಡಿದರು.

|

ಮಕ್ಕಳು ತಮ್ಮ ಮನದಲ್ಲಿ ಮೂರು ಪ್ರತಿಜ್ಞೆ ಮತ್ತು ಮೂರು ವಿಷಯ ಸದಾ ನೆನಪಿನಲ್ಲಿಡಬೇಕು ಎಂದು ಪ್ರಧಾನಮಂತ್ರಿ ತಿಳಿಸಿದರು. ಮೊದಲ ಪ್ರತಿಜ್ಞೆ ನಿರಂತರತೆ. ಕ್ರಿಯೆಯ ವೇಗವನ್ನು ನಿಧಾನಗೊಳಿಸಬಾರದು. ಎರಡನೆಯದು, ದೇಶಕ್ಕಾಗಿ ಪ್ರತಿಜ್ಞೆ ಮಾಡಿ. ನಾವು ದೇಶಕ್ಕಾಗಿ ಕೆಲಸ ಮಾಡುತ್ತಿದ್ದರೆ ಮತ್ತು ಪ್ರತಿಯೊಂದು ಕೆಲಸವನ್ನೂ ದೇಶದ ದೃಷ್ಟಿಯಿಂದ ಪರಿಗಣಿಸಿದರೆ ಆ ಕೆಲಸವು ಸ್ವಂತದ್ದಕ್ಕಿಂತ ದೊಡ್ಡದಾಗುತ್ತದೆ. ನಾವು ಸ್ವಾತಂತ್ರ್ಯದ 75 ನೇ ವರ್ಷಕ್ಕೆ ಕಾಲಿಡುತ್ತಿದ್ದಂತೆ ದೇಶಕ್ಕಾಗಿ ತಾವು ಏನು ಮಾಡಬಹುದು ಎಂದು ಯೋಚಿಸುವಂತೆ ಪ್ರಧಾನಮಂತ್ರಿಯವರು ಮಕ್ಕಳಿಗೆಕೇಳಿದರು. ಮೂರನೆಯದಾಗಿ, ವಿನಮ್ರತೆಯ ಪ್ರತಿಜ್ಞೆ. ಪ್ರತಿಯೊಂದು ಯಶಸ್ಸೂ ನಮ್ಮನ್ನು ಹೆಚ್ಚು ಸಭ್ಯರನ್ನಾಗಿಸಬೇಕು, ನಮ್ಮ ನಮ್ರತೆ ಇತರರಿಗೆ ನಮ್ಮ ಯಶಸ್ಸನ್ನು ಸಂಭ್ರವಿಸುವಂತೆ ಮಾಡುತ್ತದೆ ಎಂದು ಪ್ರಧಾನಮಂತ್ರಿ ತಿಳಿಸಿದರು.

|

ಭಾರತ ಸರ್ಕಾರ ಬಾಲ ಶಕ್ತಿ ಪುರಸ್ಕಾರವನ್ನು, ನಾವೀನ್ಯತೆ, ಪಾಂಡಿತ್ಯಪೂರ್ಣ ಸಾಧನೆಗಳು, ಕ್ರೀಡೆ, ಕಲೆ ಮತ್ತು ಸಂಸ್ಕೃತಿ, ಸಾಮಾಜಿಕ ಸೇವೆ ಮತ್ತು ಶೌರ್ಯ ಕ್ಷೇತ್ರಗಳಲ್ಲಿ ಅಸಾಧಾರಣ ಸಾಮರ್ಥ್ಯ ಮತ್ತು ಅತ್ಯುತ್ತಮ ಸಾಧನೆ ತೋರುವ ಮಕ್ಕಳಿಗೆ ಪ್ರಧಾನಮಂತ್ರಿ ರಾಷ್ಟ್ರೀಯ ಬಾಲ ಪುರಸ್ಕಾರದ ಅಡಿಯಲ್ಲಿ ನೀಡುತ್ತಿದೆ. ಈ ವರ್ಷ ದೇಶದಾದ್ಯಂತದಿಂದ ಬಾಲಶಕ್ತಿ ಪುರಸ್ಕಾರದ ವಿವಿಧ ಪ್ರವರ್ಗಗಳ ಅಡಿಯಲ್ಲಿ 32 ಅರ್ಜಿಗಳನ್ನು ಪಿಎಂಆರ್.ಬಿ.ಪಿ.-2021ಗೆ ಆಯ್ಕೆ ಮಾಡಲಾಗಿದೆ.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Maratha bastion in Tamil heartland: Gingee fort’s rise to Unesco glory

Media Coverage

Maratha bastion in Tamil heartland: Gingee fort’s rise to Unesco glory
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜುಲೈ 2025
July 21, 2025

Green, Connected and Proud PM Modi’s Multifaceted Revolution for a New India