ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಹರಿದ್ವಾರದಲ್ಲಿ ಉಮಿಯಾ ಧಾಮ್ ಆಶ್ರಮದ ಉದ್ಘಾಟನೆ ಅಂಗವಾಗಿ ನಡೆದ ಕಾರ್ಯಕ್ರಮ ಉದ್ದೇಶಿಸಿ ವಿಡಿಯೋ ಸಂವಾದದ ಮೂಲಕ ಭಾಷಣ ಮಾಡಿದರು.

ಭಾರತದಲ್ಲಿರುವ ಆಧ್ಯಾತ್ಮಿಕ ಸಂಸ್ಥೆಗಳು ಸಾಮಾಜಿಕ ಸುಧಾರಣೆಯನ್ನು ಪಸರಿಸುವ ಕೇಂದ್ರಗಳಾಗಿವೆ ಎಂದು ಪ್ರಧಾನಿ ಹೇಳಿದರು.

ಪ್ರವಾಸೋದ್ಯಮವನ್ನು ಭಾರತದ ಪುರಾತನ ಕಲ್ಪನೆ ಮತ್ತು ಆಧ್ಯಾತ್ಮಿಕ ಪರಂಪರೆ ಎಂದು ಪ್ರಧಾನಿ ಬಣ್ಣಿಸಿದರು. ಇಂದು ಉದ್ಘಾಟನೆಗೊಳ್ಳುತ್ತಿರುವ ದೇವಾಲಯವು ಹರಿದ್ವಾರಕ್ಕೆ ಬರುವ ಯಾತ್ರಿಕರಿಗೆ ಪ್ರಯೋಜನಕಾರಿಯಾಗಿದೆ ಎಂದರು. ಯಾತ್ರೆ ನಮ್ಮ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿ ಉಳಿದುಕೊಂಡಿದೆ ಎಂದೂ ಅವರು ಹೇಳಿದರು. ಈ ಯಾತ್ರೆಗಳ ಮೂಲಕ ನಾವು ಎಂದೂ ನೋಡಿದರದ ದೇಶದ ವಿವಿಧ ಭಾಗಗಳ ಪರಿಚಯ ಮಾಡಿಕೊಳ್ಳಬಹುದು ಎಂದರು. 

|

ಮಾತಾ ಉಮಿಯಾ ಭಕ್ತರು ಮಾಡಿರುವ ಕಾರ್ಯ ಹಲವಾರು ಜನರ ಜೀವನವನ್ನು ತಟ್ಟಿದೆ ಎಂದು ಪ್ರಧಾನ ಮಂತ್ರಿ ಹೇಳಿದರು. ಅವರು ಲಿಂಗ ಸಮಾನತೆಯ ಜಾಗೃತಿಯನ್ನು ಪಸರಿಸಿದ್ದಾರೆ ಎಂದು ಹೇಳಿದರು. ‘ಹೆಣ್ಣುಮಗುವನ್ನು ಉಳಿಸಿ, ಹೆಣ್ಣು ಮಗುವನ್ನು ಓದಿಸಿ’ ಸಂದೇಶವನ್ನು ಮತ್ತಷ್ಟು ಸಾರಿದ ಮೆಹಸಾನಾ ಜಿಲ್ಲೆಯ ಮಹಿಳೆಯರಿಗೆ ವಿಶೇಷವಾಗಿ ಧನ್ಯವಾದ ಅರ್ಪಿಸಿದರು.

ಸ್ವಚ್ಛಾಗ್ರಹಿಗಳಾಗುವಂತೆ ಮತ್ತು ಸ್ವಚ್ಛ ಭಾರತ ಅಭಿಯಾನಕ್ಕೆ ಬಲ ನೀಡುವಂತೆ ಮಾತಾ ಉಮಿಯಾ ಭಕ್ತರಿಗೆ ಮನವಿ ಪ್ರಧಾನಿ ಮಾಡಿದರು. 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
From Ghana to Brazil: Decoding PM Modi’s Global South diplomacy

Media Coverage

From Ghana to Brazil: Decoding PM Modi’s Global South diplomacy
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಜುಲೈ 2025
July 12, 2025

Citizens Appreciate PM Modi's Vision Transforming India's Heritage, Infrastructure, and Sustainability