In May 2014, people of India ushered in a New Normal. People spoke in one voice to entrust my Govt with a mandate for change: PM
Every day at work, my ‘to do list’ is guided by the constant drive to reform & transform India: PM
The multi-polarity of the world, and an increasingly multi-polar Asia, is a dominant fact today: PM
The prosperity of Indians, both at home and abroad, and security of our citizens are of paramount importance: PM
For me, Sabka Saath, Sabka Vikas is not just a vision for India. It is a belief for the whole world: PM
In the last two and half years, we have partnered with almost all our neighbours to bring the region together: PM
Pakistan must walk away from terror if it wants to walk towards dialogue with India: PM

 

ಮಾನ್ಯರೇ ,
ವಿಶೇಷ ಅತಿಥಿಗಳೇ ,
ಮಹಿಳೆಯರೇ ಮತ್ತು ಮಹನೀಯರೇ,


ಇಂದು ಭಾಷಣಗಳ ದಿನವೇನೋ ಎಂಬಂತೆ ಭಾಸವಾಗುತ್ತಿದೆ. ಕೆಲ ಸಮಯದ ಹಿಂದೆ ನಾವು ಅಧ್ಯಕ್ಷ ಕ್ಸಿ, ಬಳಿಕ ಪ್ರಧಾನಿ ಥೆರೇಸಾ ಮೇ ಅವರ ಮಾತು ಕೇಳಿದೆವು. ಈಗ ನನ್ನ ಸರದಿ. ಕೆಲವರಿಗೆ ಪ್ರಾಯಶಃ ಮಾತು ಕೇಳಿದ್ದು ಹೆಚ್ಚಾಯಿತು ಎನ್ನಿಸಿತೋ ಇಲ್ಲವೇ 24/7 ಸುದ್ದಿ ವಾಹಿನಿಗಳಿಗೆ ಸಮೃದ್ಧಿಯ ಸ ಮಸ್ಯೆ.

ರೈಸಿನಾ ಸಂವಾದದ 2ನೇ ಆವೃತ್ತಿಯ ಉದ್ಘಾಟನೆಯಲ್ಲಿ ಮಾತನ್ನಾಡುವ ಅವಕಾಶ ಸಿಕ್ಕಿದ್ದು ನನ್ನ ಸುಯೋಗ. ಮಾನ್ಯರಾದ ಕಜರ್ಾಯಿ, ಪ್ರಧಾನಿ ಹಾರ್ಪರ್,ಪ್ರಧಾನಿ ಕೆವಿನ್ ರಡ್ಡ್ ಅವರನ್ನು ದಿಲ್ಲಿಯಲ್ಲಿ ನೋಡುತ್ತಿರುವುದು ಸಂತಸದ ವಿಷಯ. ಜತೆಗೆ, ಎಲ್ಲ ಅತಿಥಿಗಳಿಗೂ ಆತ್ಮೀಯ ಸ್ವಾಗತ. ಮುಂದಿನ ಕೆಲವು ದಿನ ನಮ್ಮ ಸುತ್ತಲಿನ ಪ್ರಪಂಚದ ಬಗ್ಗೆ ಹಲವು ಸಂವಾದಗಳನ್ನು ನೀವು ನಡೆಸಿ ಕೊಡಲಿದ್ದೀರಿ. ಸಮಸ್ಯೆಯ ಖಚಿತತೆ ಮತ್ತು ಪ್ರಸ್ತುತದ ಹರಿವು; ಅದರ ಸಂಕಷ್ಟ ಮತ್ತು ಅಪಾಯಗಳು; ಅದರ ವಿಜಯ ಮತ್ತು ಅವಕಾಶಗಳು; ಅದರ ಹಿಂದಿನ ವರ್ತನೆ ಮತ್ತು ಮುನ್ಸೂಚನೆ; ಮತ್ತು ಇತರ ಸಂಭವನೀಯ ಸಮಸ್ಯೆ ಹಾಗೂ ನೂತನ ಸಾಮಾನ್ಯತೆ ಬಗೆಗೆ ನೀವು ಚಚರ್ೆ ನಡೆಸಲಿದ್ದೀರಿ.   



ಸ್ನೇಹಿತರೇ,

ಮೇ 2014 ರಲ್ಲಿ ಭಾರತದ ಜನತೆ ನೂತನ ಸಾಮಾನ್ಯತೆಗೆ ನಾಂದಿ ಹಾಡಿದರು. ಸಹವಾಸಿ ಭಾರತೀಯರು ಒಂದೇ ಧ್ವನಿಯಲ್ಲಿ ಸಕರ್ಾರದ ಬದಲಾವಣೆಗಾಗಿ ಜನಾದೇಶವನ್ನು ಕೊಟ್ಟರು. ಬದಲಾವಣೆ ಎಂಬುದು ಬರೀ ಮನೋವೃತ್ತಿಯಲ್ಲ, ಬದಲಿಗೆ ಪ್ರಜ್ಞಾಸಾಮಥ್ರ್ಯ. ಜಡತ್ವದಿಂದ ಉದ್ದೇಶಪೂರ್ವ ಕ್ರಿಯೆಯೆಡೆಗಿನ ಬದಲಾವಣೆ ಅದು. ದೃಢ ನಿಧರ್ಾರ ತೆಗೆದು ಕೊಳ್ಳುವೆಡೆಗಿನ ನಿಧರ್ಾರ. ಆಥರ್ಿಕತೆ ಮತ್ತು ಸಮಾಜದ ಬದಲಾವಣೆ ಸಾಧ್ಯವಿಲ್ಲದಿದ್ದರೆ ಅಂಥ ಸುಧಾರಣೆಯಿಂದ ಯಾವುದೇ ಪ್ರಯೋಜನವಿಲ್ಲ ಎಂಬ ಜನಾದೇಶ. ದೇಶದ ಯುವಜನರ ಭರವಸೆ ಮತ್ತು ಹಂಬಲದೊಂದಿಗೆ ಒಡಗೂಡಿದ ಸ್ಥಿತ್ಯಂತರ ಹಾಗೂ ಕೋಟ್ಯಂತರ ಜನಸಾಮಾನ್ಯರ ಅಸಾಮಾನ್ಯ ಶಕ್ತಿಯಿಂದ ಆದ ಬದಲಾವಣೆ ಅದು. ಪ್ರತಿದಿನ ನಾನು ನನ್ನ ಕೆಲಸದ ವೇಳೆ ಈ ಪವಿತ್ರ ಶಕ್ತಿಯಿಂದ ಪಡೆದುಕೊಳ್ಳುತ್ತೇನೆ. ಪ್ರತಿ ದಿನ ನನ್ನ ಕೆಲಸ, “ಇಂದು ಮಾಡಬೇಕಾದ ಕೆಲಸ’ವನ್ನು ನಿದರ್ೇಶಿಸುವುದು ಭಾರತವನ್ನು ಪರಿವತರ್ಿಸುವ ಹಾಗೂ ಸುಧಾರಿಸುವ ನಿರಂತರ ಹಂಬಲ, ಎಲ್ಲ ಭಾರತೀಯರ ಸುರಕ್ಷೆ ಮತ್ತು ಸಮೃದ್ಧಿಗಾಗಿ ಕೆಲಸ ಮಾಡಬೇಕೆಂಬ ನಿರಂತರ ಹಂಬಲವು ನನ್ನನ್ನು ಮುಂದೊಯ್ಯುತ್ತದೆ.

ಸ್ನೇಹಿತರೇ,

ಭಾರತದ ಸ್ಥಿತ್ಯಂತರವು ಅದರ ಹೊರಗಿನ ಪರಿಸ್ಥಿತಿಯನ್ನೂ ಒಳಗೊಂಡಿದೆ ಎಂಬುದು ನನಗೆ ಗೊತ್ತಿದೆ. ನಮ್ಮ ಆಥರ್ಿಕ ಪ್ರಗತಿ: ನಮ್ಮ ರೈತರಒಳಿತು: ನಮ್ಮ ಯುವಜನರಿಗೆ ಉದ್ಯೋಗದ ಅವಕಾಶ: ಬಂಡವಾಳ, ತಂತ್ರಜ್ಞಾನ, ಮಾರುಕಟ್ಟೆಗಳು, ಸಂಪನ್ಮೂಲಕ್ಕೆ ಪ್ರವೇಶ ಮತ್ತು ದೇಶದ ಸುರಕ್ಷತೆ ಇವೆಲ್ಲವೂ ಜಗತ್ತಿನಲ್ಲಿನ ಬೆಳವಣಿಗೆಗಳಿಂದ ಪ್ರಭಾವಿತವಾಗುತ್ತದೆ. ಆದರೆ, ಇದರ ತದ್ವಿರುದ್ಧವೂ ನಿಜ.

ಭಾರತ ಸುಸ್ಥಿರವಾಗಿ ಅಭಿವೃದ್ಧಿ ಹೊಂದುವುದು ಜಗತ್ತಿಗೆ ಅಗತ್ಯವಿದ್ದು, ಇದೇ ರೀತಿ ಜಗತ್ತು ಕೂಡ ನಮಗೆ ಬೇಕು. ದೇಶದಲ್ಲಿ ಬದಲಾವಣೆ ತರಬೇಕೆಂಬ ನಮ್ಮ ಅಪೇಕ್ಷೆಯು ಹೊರ ಜಗತ್ತಿನೊಂದಿಗೆ ಅವಿಚ್ಛಿನ್ನ ಸಂಬಂಧ ಹೊಂದಿದೆ. ಆದ್ದರಿಂದ ನಮ್ಮ ಆಯ್ಕೆಗಳು ಹಾಗೂ ಅಂತರರಾಷ್ಟ್ರೀಯ ಆದ್ಯತೆಗಳು ಸ್ವಾಭಾ ವಿಕವಾಗಿಯೇ ನಿರಂತರತೆಯ ಒಂದು ಭಾಗವಾಗಿವೆ. ಭಾರತದ ಸ್ಥಿತ್ಯಂತರದ ಗುರಿಯಲ್ಲಿ ಭದ್ರವಾಗಿ ಲಂಗರು ಹಾಕಿಕೊಂಡಿವೆ.

ಗೆಳೆಯರೇ,

ದೇಶವು ಅಸ್ಥಿರತೆಯ ಸಮಯದಲ್ಲಿ ಸ್ಥಿತ್ಯಂತರಕ್ಕೆ ಪ್ರಯತ್ನಿಸುತ್ತಿದ್ದು, ಇಂಥ ಸ್ಥಿತಿಗೆ ಮನುಷ್ಯರ ಪ್ರಗತಿ ಮತ್ತು ಹಿಂಸಾತ್ಮಕ ತುಮುಲವೂ ಕಾರಣ. ಹಲವು ಕಾರಣ ಮತ್ತು ಹಲವು ಹಂತಗಳಲ್ಲಿ ಜಗತ್ತು ಭಾರಿ ಎನ್ನಬಹುದಾದ ಬದಲಾವಣೆ ಮೂಲಕ ಹಾದು ಹೋಗುತ್ತಿದೆ. ಜಾಗತಿಕವಾಗಿ ಸಂಪರ್ಕ ಹೊಂದಿರುವ ಸಮಾಜಗಳು, ಡಿಜಿಟಲ್ ಅವಕಾಶಗಳು, ತಂತ್ರಜ್ಞಾನದ ರೂಪಾಂತರ, ಜ್ಞಾನದ ಉಬ್ಬರ ಮತ್ತು ಆವಿಷ್ಕಾರಗಳು ಮನು ಕುಲವನ್ನು ಮುಂದಕ್ಕೆ ಕರೆದೊಯ್ಯುತ್ತಿವೆ. ಆದರೆ, ಬೆಳವಣಿಗೆ ದರ ಕುಸಿತ ಹಾಗೂ ಆಥರ್ಿಕ ಅಸ್ಥಿರತೆ ಕೂಡ ಸತ್ಯವೇ. ಬಿಟ್ ಮತ್ತು ಬೈಟ್ಗಳ ಈ ಕಾಲದಲ್ಲಿ ಭೌತಿಕ ಗಡಿಗಳು ಹೆಚ್ಚು ಮಹತ್ವ ಹೊಂದಿಲ್ಲ. ಆದರೆ, ದೇಶದೊಳಗಿನ ಗೋಡೆಗಳು, ವ್ಯಾಪಾರ ಮತ್ತು ವಲಸೆ ವಿರುದ್ಧದ ಜಗತ್ತಿನೆಲ್ಲೆಡೆಯ ಭಾವನೆ ಮತ್ತು ರಕ್ಷಣಾತ್ಮಕ ಮತ್ತು ಸಂಕುಚಿತ ಮನಸ್ಥಿತಿಗಳು ಕೂಡ ಕಣ್ಣಿಗೆ ಹೊಡೆಯುವಂತೆ ಕಾಣಿಸುತ್ತಿವೆ.

ಇದರ ಫಲಿತವೇನೆಂದರೆ, ಜಾಗತೀಕರಣದ ಲಾಭವು ಅಪಾಯಕ್ಕೆ ಸಿಲುಕಿದೆ, ಆಥರ್ಿಕ ಲಾಭಗಳು ಸುಲಭವಾಗಿ ಕೈಗೆಟಕುತ್ತಿಲ್ಲ. ಅಸ್ಥಿರತೆ, ಹಿಂಸೆ, ಉಗ್ರವಾದ, ಹೊರತಾಗಿಸುವಿಕೆ ಹಾಗೂ ಖಂಡಾಂತರ ಅಪಾಯಗಳು ನಿರಂತರವಾಗಿ ಮುಂದುವರಿದಿವೆ. ರಾಜ್ಯರಹಿತ ವ್ಯಕ್ತಿಗಳು ಇಂಥದ್ದನ್ನು ಹರಡಲು ಗಮನಾರ್ಹ ಕೊಡುಗೆ ನೀಡುತ್ತಿದ್ದಾರೆ. ಬೇರೆಯದೇ ಜಗತ್ತಿನ ನಿಮರ್ಾಣ ಕ್ಕೆಂದು ರೂಪುಗೊಂಡ ಸಂಸ್ಥೆಗಳು ಮತ್ತು ನಿಮರ್ಿತಿಗಳು ತಮ್ಮ  ಪ್ರಾಮುಖ್ಯತೆ ಕಳೆದುಕೊಂಡಿವೆ. ಇದು ಪರಿಣಾಮಕಾರಿ ಬಹುಮುಖಿತ್ವಕ್ಕೆ ಅಡೆತಡೆ ಒಡ್ಡಿದೆ. ಜಗತ್ತು ಶೀತಲ ಸಮರದ 25 ವರ್ಷಗಳ ಬಳಿಕ ಮರುಸುವ್ಯವಸ್ಥೆಗೊಳ್ಳುತ್ತಿರುವಾಗಲೇ, ಅದನ್ನು ಸ್ಥಳಾಂತರಿಸಿದ್ದು ಏನು ಎಂಬುದರ ಮೇಲೆ ಇನ್ನೂ ಧೂಳು ಸ್ಥಿರಗೊಂಡಿಲ್ಲ. 

ಆದರೆ, ಕೆಲವು ವಿಷಯಗಳು ಸ್ಪಷ್ಟವಾಗಿವೆ. ರಾಜಕೀಯ ಮತ್ತು ಮಿಲಿಟರಿ ಬಲ ಪಸರಿಸಿದೆ ಮತ್ತು ಹಂಚಿಹೋಗಿದೆ. ಜಗತ್ತು ಹಾಗೂ ಏಷ್ಯಾದಲ್ಲಿ ಬಹುಧ್ರುವೀಯತೆಯ ಹೆಚ್ಚಳವು ಇಂದಿನ ವಾಸ್ತವ. ನಾವು ಇದನ್ನು ಸ್ವಾಗತಿಸುತ್ತೇವೆ.

ಏಕೆಂದರೆ, ಬಹುಧ್ರುವೀಯತೆಯು ಹಲವು ದೇಶಗಳು ತಲೆ ಎತ್ತಿರುವ ವಾಸ್ತವದ ಚಿತ್ರಣವನ್ನು ನೀಡುವಂಥದ್ದು. ಜಾಗತಿಕ ಕಾರ್ಯನೀತಿ ರೂಪಿಸುವಲ್ಲಿ ಕೆಲವೇ ಕೆಲವರ ಪ್ರಾಬಲ್ಯವನ್ನು ಮುರಿದು ಹಾಕಲಾಗಿದ್ದು, ಹಲವರ ಧ್ವನಿಗಳನ್ನು ಒಪ್ಪಿಕೊಳ್ಳಲಾಗಿದೆ. ಆದ್ದರಿಂದ ನಾವು ವಿಶೇಷವಾಗಿ ಏಷ್ಯಾದಲ್ಲಿ, ಹೊರತಾಗಿಸುವಿಕೆಯನ್ನು ಉತ್ತೇಜಿಸುವ ಪ್ರವೃತ್ತಿ ಇಲ್ಲವೇ ಮನಸ್ಥಿತಿಯ ವಿರುದ್ಧ ಎಚ್ಚರ ವಹಿಸಬೇಕಿದೆ. ಇಂಧ ಸಂದರ್ಭದಲ್ಲಿ ಬಹುಧ್ರುವೀಯತೆ ಮತ್ತು ಬಹುಮುಖತ್ವ ಕುರಿತ ಸಮಾವೇಶವನ್ನು ಹಮ್ಮಿಕೊಂಡಿರುವುದು  ಸಮಯೋಚಿತ ಎನ್ನಬಹುದು.
ಸ್ನೇಹಿತರೇ,

ನಮ್ಮ ಆಶಯವನ್ನು ರೂಪಿಸಿರುವುದು,

*ಯಥಾರ್ಥವಾದ

*ಸಹ ಅಸ್ತಿತ್ವ

*ಸಹಯೋಗ ಮತ್ತು

*ಸಹಭಾಗಿತ್ವ

ಈ ಆಶಯಗಳು ನಮ್ಮ ರಾಷ್ಟ್ರೀಯ ಹಿತದಲ್ಲಿ ಸ್ಪಷ್ಟವಾಗಿ ಮತ್ತು ಜವಾಬ್ದಾರಿಯುತವಾಗಿ ಅಭಿವ್ಯಕ್ತಿಗೊಂಡಿವೆ. ವಿದೇಶ ಮತ್ತು ಹೊರ ದೇಶದಲ್ಲಿ ಭಾರತೀ ಯರ ಐಶ್ವರ್ಯ ಮತ್ತು ನಮ್ಮ ನಾಗರಿಕರ ರಕ್ಷಣೆ ಅತಿ ಪ್ರಮುಖವಾದುದು. ಆದರೆ, ನಮ್ಮ ಸಂಸ್ಕೃತಿ ಇಲ್ಲವೇ ವರ್ತನೆಯಲ್ಲಿ ಸ್ವಹಿತ ಮಾತ್ರ ಪರಿಗಣನೆ ಆಗು ವುದಿಲ್ಲ. ನಮ್ಮ ಕ್ರಿಯೆ ಮತ್ತು ಆಶಯಗಳು, ಸಾಮಥ್ರ್ಯ ಮತ್ತು ಮಾನವ ಸಂಪನ್ಮೂಲ, ಪ್ರಜಾಪ್ರಭುತ್ವ ಮತ್ತು ಜನಸಂಖ್ಯೆ ಹಾಗೂ ಸಾಮಥ್ರ್ಯ ಮತ್ತು ವಿಜಯ- ಇವೆಲ್ಲವೂ ಪ್ರಾಂತ್ಯ ಮತ್ತು ಜಗತ್ತಿನ ಪರಿಪೂರ್ಣ ಪ್ರಗತಿಗೆ ಲಂಗರು ಆಗಲಿದೆ. ನಮ್ಮ ಆಥರ್ಿಕ ಮತ್ತು ರಾಜಕೀಯ ಪ್ರಗತಿಯು ಪ್ರಾಂತ್ಯ ಹಾಗೂ ಜಾಗತಿಕ ಅವಕಾಶಗಳ ಹೆಚ್ಚಳವನ್ನು ಪ್ರತಿನಿಧಿಸಲಿದ್ದು, ಬಹಳ ಮುಖ್ಯ ಆಗಲಿದೆ. ಅದು ಶಾಂತಿಗೆ ಬಲ, ಸ್ಥಿರತೆಗೆ ಅಂಶ ಮತ್ತು ಪ್ರಾಂತ್ಯ-ಜಾಗತಿಕ ಪ್ರಗತಿಗೆ ಎಂಜಿನ್ ಆಗಲಿದೆ.

ನಮ್ಮ ಸಕರ್ಾರಕ್ಕೆ ಇದೆಲ್ಲವೂ ಅಂತರರಾಷ್ಟ್ರೀಯ ಕಾರ್ಯಕ್ಕೆ ರಾಜಮಾರ್ಗವಾಗಿದ್ದು, ನಮ್ಮ ದೃಷ್ಟಿ ಇರುವುದು:         

* ಸಂಪರ್ಕ ಮರುನಿಮರ್ಾಣ, ಸಂಪರ್ಕ ಮರುಸ್ಥಾಪನೆ ಮತ್ತು ಭಾರತವನ್ನು ಹತ್ತಿರದ ಹಾಗೂ ವಿಸ್ತರಿಸಿದ ಭೂಭಾಗದೊಂದಿಗೆ ಸಂಪರ್ಕ ಕಲ್ಪಿಸುವುದು.

* ದೇಶದ ಆಥರ್ಿಕ ಆದ್ಯತೆಗಳನ್ನು ಆಧರಿಸಿ, ಸಂಪರ್ಕ ಸಾಧಿಸಿ, ಕಾರ್ಯಜಾಲ ನಿಮರ್ಿಸುವುದು

* ಯುವಜನರನ್ನು ಜಾಗತಿಕ ಅಗತ್ಯ ಮತ್ತು ಅವಕಾಶಗಳಿಗೆ ಸಂಪಕರ್ಿಸುವ ಮೂಲಕ ಭಾರತವನ್ನು ಮಾನವ ಸಂಪನ್ಮೂಲದ ಶಕ್ತಿಯನ್ನಾಗಿ ಮಾಡುವುದು,

* ಹಿಂದೂ ಮಹಾ ಸಾಗರದ ದ್ವೀಪಗಳಿಂದ ಹಿಡಿದು, ಪೆಸಿಫಿಕ್ ಹಾಗೂ ಕೆರಿಬಿಯನ್ ದ್ವೀಪಗಳು, ಆಫ್ರಿಕಾದಿಂದ ಹಿಡಿದು ಅಮೆರಿಕದವರೆಗೆ ಅಭಿವೃದ್ಧಿ ಸಹಯೋಗವನ್ನು ನಿಮರ್ಿಸುವುದು

* ಜಾಗತಿಕ ಸವಾಲುಗಳಿಗೆ ಭಾರತೀಯ ಆಖ್ಯಾನಗಳನ್ನು ಸೃಷ್ಟಿಸುವುದು

* ಜಾಗತಿಕ ಸಂಸ್ಥೆಗಳು ಹಾಗೂ ಸಂಘಟನೆಗಳ ಪುನರ್ ನಿಮರ್ಾಣ ಹಾಗೂ ಶಕ್ತಿ ತುಂಬುವುದು ಮತ್ತು ಪುನಾರಚಿಸುವುದು

* ಯೋಗ, ಆಯುವರ್ೇದ ಸೇರಿದಂತೆ ಭಾರತದ ವೈಶಿಷ್ಟ್ಯಗಳನ್ನು ಜಗತ್ತಿನ ಒಳಿತಿಗಾಗಿ ಬಳಸುವುದು. ಪರಿವರ್ತನೆ ಎನ್ನುವುದು ದೇಶಕ್ಕೆ ಮಾತ್ರವೇ ಸೀಮಿತವಾಗಬಾರದು. ಅದು ಜಾಗತಿಕ ಒಳಿತನ್ನು ಹಾಗೂ ವ್ಯಾಪ್ತಿಯನ್ನು ಹೊಂದಿರಬೇಕು.

ನನ್ನ ಪ್ರಕಾರ,”ಎಲ್ಲರ ಜೊತೆ, ಎಲ್ಲರ ಅಭಿವೃದ್ಧಿ’ ಎಂಬುದು ಭಾರತಕ್ಕೆ ಮಾತ್ರ ಸೀಮಿತವಾದ ದರ್ಶನವಲ್ಲ. ಅದು ಹಲವು ಪದರಗಳುಳ್ಳ, ಹಲವು ವಿಷಯಗಳ ಮತ್ತು ವಿವಿಧ ಭೂ ಪ್ರದೇಶಗಳನ್ನು ಒಳಗೊಂಡದ್ದು.

ಭೌಗೋಳಿಕವಾಗಿ ಹಾಗೂ ಹಂಚಿಕೊಂಡ ಆಸಕ್ತಿಗಳಿಂದಾಗಿ ನಮ್ಮ ಸನಿಹ ಇರುವವರ ಬಗ್ಗೆ ನೋಡೋಣ. ನಮ್ಮ “ನೆರೆ ಹೊರೆಯವರು ಮೊದಲು’ ಉಪಕ್ರ ಮದ ಮೂಲಕ ನಾವು ನಮ್ಮ ಪಕ್ಕದ ರಾಷ್ಟ್ರಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಲು ಮುಂದಾಗಿದ್ದೇವೆ. ದಕ್ಷಿಣ ಏಷ್ಯಾದ ಜನರು ರಕ್ತ, ಹಂಚಿಕೊಂಡ ಇತಿ ಹಾಸ, ಸಂಸ್ಕೃತಿ ಹಾಗೂ ಆಶಯಗಳ ಮೂಲಕ ಪರಸ್ಪರ ಸಂಬಂಧ ಹೊಂದಿದ್ದಾರೆ. ಇಲ್ಲಿನ ಯುವ ಜನರು ಬದಲಾವಣೆ, ಉದ್ಯೋಗಾವಕಾಶ, ಪ್ರಗತಿ ಮ ತ್ತು ಸಮೃದ್ಧಿಯನ್ನು ಬಯಸುತ್ತಾರೆ. ಉತ್ಸಾಹದಿಂದ ತುಂಬಿ ತುಳುಕುವ, ಪರಸ್ಪರ ಸಂಪರ್ಕ ಹೊಂದಿರುವ ಹಾಗೂ ಏಕೀಕೃತ ನೆರೆಹೊರೆ ನನ್ನ ಕನಸು. ಕಳೆದ ಎರಡೂವರೆ ವರ್ಷದಲ್ಲಿ ಎಲ್ಲ ನೆರೆಹೊರೆ ದೇಶಗಳ ಜೊತೆಗೆ ಸಂಪರ್ಕ ಸಾಧಿಸಿದ್ದು, ಈ ಪ್ರಾಂತ್ಯದ ಬಹುತೇಕ ರಾಷ್ಟ್ರಗಳನ್ನು ಒಟ್ಟುಗೂಡಿಸಲಾಗಿದೆ. ಅಗತ್ಯವಿದ್ದೆಡೆಯೆಲ್ಲ ಚರಿತ್ರೆಯ ಹೊರೆಯನ್ನು ಕಿತ್ತೊಗೆದು ಪ್ರಾಂತ್ಯದ ಭವಿಷ್ಯಕ್ಕಾಗಿ ಒಗ್ಗೂಡಲಾಗಿದೆ. ಇದರ ಪರಿಣಾಮ ಕಣ್ಣಿಗೆ ಕಾಣಿಸುತ್ತಿದೆ.

 

ಅಫಘಾನಿಸ್ತಾನವು ಬಹಳ ದೂರದಲ್ಲಿದ್ದು, ಸಂಚಾರ ಕ್ಲಿಷ್ಟವಾಗಿದ್ದರೂ, ಸಂಸ್ಥೆಗಳು ಮತ್ತು ಸಾಮಥ್ರ್ಯದ ಪುನರ್ ನಿಮರ್ಾಣದಲ್ಲಿ ಕೈ ಜೋಡಿಸಿದ್ದೇವೆ. ಈ ಹಿನ್ನೆಲೆಯಲ್ಲಿ ನಮ್ಮ ಸುರಕ್ಷತೆಯು ಉತ್ತಮಗೊಂಡಿದೆ. ಅಫಘಾನಿಸ್ತಾನದ ಸಂಸತ್ ಭವನ ಹಾಗೂ ಇಂಡೋ ಅಫಘಾನಿಸ್ಥಾನ ಫ್ರೆಂಡ್ಶಿಪ್ ಅಣೆಕಟ್ಟುಗಳು ನಮ್ಮ ಅಭಿವೃದ್ಧಿ ಸಂಬಂಧಿತ ಸಹಯೋಗದ ಥಳಥಳಿಸುವ ಉದಾಹರಣೆಗಳಾಗಿವೆ. 

ಬಾಂಗ್ಲಾ ದೇಶದ ಜೊತೆಗೆ ಹೆಚ್ಚು ಸಮನ್ವಯ ಸಾಧ್ಯವಾಗಿದ್ದು, ಸಂಪರ್ಕ ಸಾಧನೆ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ರಾಜಕೀಯ ಅಥರ್ೈಸುವಿಕೆಯನ್ನು ಸಾಧಿಸಿದ್ದೇವೆ. ಭೂಮಿ ಮತ್ತು ಸಾಗರ ಕುರಿತ ವಿವಾದಗಳನ್ನು ಬಗೆಹರಿಸಿ ಕೊಳ್ಳಲಾಗಿದೆ. 

ನೇಪಾಳ, ಶ್ರೀಲಂಕಾ, ಭೂತಾನ್ ಮತ್ತು ಮಾಲ್ಡೀವ್ಸ್ನಲ್ಲಿ ಮೂಲಸೌಕರ್ಯ, ಸಂಪರ್ಕ, ಇಂಧನ ಮತ್ತು ಅಭಿವೃದ್ಧಿ ಯೋಜನೆಗಳ ಮೂಲಕ ಪ್ರಗತಿಯನ್ನು ಸಾಧಿಸಲಾಗಿದ್ದು, ಪ್ರಾದೇಶಿಕ ಸ್ಥಿರತೆ ತರಲಾಗಿದೆ. 

ಇಡೀ ದಕ್ಷಿಣ ಏಷ್ಯಾದಲ್ಲಿ ಶಾಂತಿ ಮತ್ತು ಸೌಹಾರ್ದದ ವಾತಾವರಣ ಇರಬೇಕು ಎಂಬುದು ನನ್ನ ದರ್ಶನ. ಈ ಹಿನ್ನೆಲೆಯಲ್ಲಿ ಪಾಕಿಸ್ತಾನ ಸೇರಿದಂತೆ ಎಲ್ಲ ಸಾಕರ್್ ದೇಶಗಳ ನಾಯಕರನ್ನು ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಆಹ್ವಾನಿಸಲಾಗಿತ್ತು. ನಾನು ಲಾಹೋರ್ಗೂ ಭೇಟಿ ನೀಡಿದ್ದೆ. ಆದರೆ,ಭಾರತ ಮಾತ್ರ ಒಂಟಿಯಾಗಿ ಶಾಂತಿ ಪಥದಲ್ಲಿ ಸಾಗಲು ಸಾಧ್ಯವಿಲ್ಲ. ಪಾಕಿಸ್ತಾನ ಕೂಡ ಈ ದಿಕ್ಕಿನಲ್ಲಿ ಪ್ರಯಾಣ ಮಾಡಬೇಕು. ಭಾರತದೊಂದಿಗೆ ಸಂವಾದ ಬೇಕೆಂ ದರೆ ಪಾಕಿಸ್ತಾನವು ಉಗ್ರವಾದದಿಂದ ದೂರ ಸರಿಯಬೇಕಾಗುತ್ತದೆ.

ಮಹಿಳೆಯರೇ ಮತ್ತು ಮಹನೀಯರೇ, ತೀರ ಕಡಿಮೆ ಅವಧಿಯಲ್ಲಿ, ಹಲವು ಸಂಘರ್ಷ ಹಾಗೂ ಅಸಂದಿಗ್ಧತೆ ಇದ್ದರೂ, ಗಲ್ಫ್ ಮತ್ತು ಸೌದಿ ಅರೇಬಿಯಾ, ಯುಎಇ, ಕತಾರ್ ಮತ್ತು ಇರಾನ್ ಸೇರಿದಂತೆ ಪಶ್ಚಿಮ ಏಷ್ಯಾದ ದೇಶಗಳೊಂದಿಗೆ ಉತ್ತಮ ಸಂಪರ್ಕ ಸಾಧಿಸಿದ್ದೇವೆ. ಮುಂದಿನ ವಾರ, ಅಬು ಧಾಬಿಯ ಗೌರವಾನ್ವಿತ ಯುವ ರಾಜರು ದೇಶದ ಗಣರಾಜ್ಯೋತ್ಸವದ ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ. ನಾವು ಸಂಬಂಧ ಕುರಿತ ಪರಿಪ್ರೇಕ್ಷವನ್ನು ಬದಲಿಸುವ ಕಡೆಗೆ ಮಾತ್ರವೇ ಗಮನ ಹರಿಸಿಲ್ಲ. ಬದಲಿಗೆ, ಸಂಬಂಧಗಳ ವಾಸ್ತವವನ್ನೂ ಬದಲಿಸಿದ್ದೇವೆ.

ಇದರಿಂದ ನಮ್ಮ ಸುರಕ್ಷತೆ ಮತ್ತು ಸಂರಕ್ಷಣೆಯಲ್ಲದೆ, ಬಲಿಷ್ಟ ಆಥರ್ಿಕ ಮತ್ತು ಇಂಧನ ಸುಭದ್ರತೆಯನ್ನು ಕಾಯ್ದುಕೊಂಡು, 8 ದಶ ಲಕ್ಷ ಭಾರತೀಯರ ಭೌತಿಕ ಮತ್ತು ಸಾಮಾಜಿಕ ಸುರಕ್ಷೆಯನ್ನು ಕಾಯ್ದುಕೊಳ್ಳುವುದು ಸಾಧ್ಯವಾಗಿದೆ. ಕೇಂದ್ರ ಏಷ್ಯಾದಲ್ಲೂ ಕೂಡ ಹಂಚಿಕೊಂಡ ಇತಿಹಾಸ ಮತ್ತು ಸಂಸ್ಕೃತಿಯ ನೆಲೆಗಟ್ಟಿನಲ್ಲಿ ಹೊಸ ಸಂಬಂಧಗಳನ್ನು ಬೆಳೆಸಿ ಕೊಂಡಿದ್ದೇವೆ. ಶಾಂಘೈ ಸಹಕಾರ ಸಂಘಟನೆಯ ಸದಸ್ಯತ್ವವು ಕೇಂದ್ರ ಏಷ್ಯಾದ ದೇಶಗಳೊಂದಿಗೆ ಸಂಪರ್ಕ ಸಾಧಿಸಲು ಬಲವಾದ ಸಾಂಸ್ಥಿಕ ಕೊಂಡಿಯನ್ನು ಒದಗಿಸಿದೆ. ಕೇಂದ್ರ ಏಷ್ಯಾದ ಸಹೋದರರರು ಮತ್ತು ಸಹೋದರಿಯರ ಸಮಗ್ರ ಸಮೃದ್ಧಿಗೆ ನಾವು ಹೂಡಿಕೆ ಮಾಡಿದ್ದೇವೆ.

ಹಾಗೂ, ಆ ಪ್ರಾಂತ್ಯದ ಜೊತೆಗಿನ ದೀರ್ಘಕಾಲೀನ ಸಂಬಂಧವನ್ನು ಯಶಸ್ವಿಯಾಗಿ ಮೊದಲಿನಂತೆ ಕೂಡಿಸಿದ್ದೇವೆ. ಆಗ್ನೇಯ ಏಷ್ಯಾದೊಂದಿಗೆ ಸಂಪರ್ಕ ನಮ್ಮ “ಆಕ್ಟ್ ಈಸ್ಟ್ ಪಾಲಿಸಿ’ಯ ಪ್ರಮುಖ ಧ್ಯೇಯವಾಗಿದೆ. ಆ ಪ್ರಾಂತ್ಯದ ಸಂಸ್ಥೆಗಳೊಂದಿಗೆ ಉತ್ತಮ ಸಂಬಂಧ ಹೊಂದಿದ್ದು, ಆಗ್ನೇಯ ಶೃಂಗ ಇಂಥ ಪ್ರಕ್ರಿಯೆಗಳಲ್ಲಿ ಒಂದು. ಅಸಿಯಾನ್ ಮತ್ತು ಅದರ ಸದಸ್ಯ ದೇಶಗಳ ಜತೆ ಸಂಪರ್ಕ ಹೊಂದಿದ್ದು, ವಾಣಿಜ್ಯ, ತಂತ್ರಜ್ಞಾನ, ಹೂಡಿಕೆ ಮತ್ತು ಸುರಕ್ಷತೆಗೆ ಸಂಬಂಧಿಸಿದಂತೆ ಸಹಯೋಗವನ್ನು ಹೊಂದಿದ್ದೇವೆ. ಈ ಪ್ರಾಂತ್ಯದಲ್ಲಿ ನಮ್ಮ ಹಿತಾಸಕ್ತಿಯನ್ನು ಕಾಯ್ದುಕೊಳ್ಳುವುದು ಹಾಗೂ ಸ್ಥಿರತೆ ತರುವುದು ನಮ್ಮ ಉದ್ದೇಶ. ಚೀನಾ ಅಧ್ಯಕ್ಷ ಕ್ಸಿ ಮತ್ತು ತಾವು, ವಾಣಿಜ್ಯಿಕ ಮತ್ತು ವ್ಯವಹಾರಿಕ ಕ್ಷೇತ್ರದಲ್ಲಿನ ಅಪಾರ ಸಾಧ್ಯತೆಗಳನ್ನು ಬಳಸಿಕೊಳ್ಳಲು ಒಪ್ಪಿಕೊಂಡಿದ್ದೇವೆ. ಚೀನಾ ಮತ್ತು ಭಾರತದ ಸಂಬಂಧದಿಂದ ಎರಡೂ ದೇಶಗಳು ಒಟ್ಟಾಗಿ ಬೆಳೆಯುವುದಲ್ಲದೆ, ಇಡೀ ವಿಶ್ವದ ಪ್ರಗತಿಗೆ ಅಪಾರ ಅವಕಾಶವಿದೆ. ಇದೇ ಹೊತ್ತಿನಲ್ಲಿ ಅಕ್ಕಪಕ್ಕದ ಈ ಎರಡು ಪ್ರಭಾವಿ ದೊಡ್ಡ ದೇಶಗಳು ಕೆಲ ಅಭಿಪ್ರಾಯಭೇದ ಹೊಂದಿರುವುದು ಅಸ್ವಾಭಾವಿಕವೇನೂ ಅಲ್ಲ. ಎರಡೂ ದೇಶಗಳ ಸಂಬಂಧ ನಿರ್ವಹಣೆ, ಈ ಪ್ರಾಂತ್ಯದಲ್ಲಿ ಶಾಂತಿ ಮತ್ತು ಅಭಿವೃದ್ಧಿಗೆ ಎರಡೂ ದೇಶಗಳು ಸೂಕ್ಷ್ಮತೆ ಬೆಳೆಸಿಕೊಳ್ಳಬೇಕಿದೆ ಹಾಗೂ ಪರಸ್ಪರರ ಆಸಕ್ತಿ ಮತ್ತು ಕಾಳಜಿಗಳ ಬಗ್ಗೆ ಗಮನ ನೀಡಬೇಕಿದೆ.      

ಸ್ನೇಹಿತರೇ, ಈ ಶತಮಾನ ಏಷ್ಯಾ ಖಂಡಕ್ಕೆ ಸೇರಿದ್ದು ಎನ್ನಲಾಗುತ್ತಿದೆ. ತೀವ್ರವಾಗಿ ಬೆಳವಣಿಗೆ ಸಂಭವಿಸುತ್ತಿರುವುದು ಏಷ್ಯಾ ಖಂಡದಲ್ಲಿ. ಈ ಪ್ರಾಂತ್ಯದಲ್ಲಿ ಪ್ರಗತಿ ಮತ್ತು ಸಮೃದ್ಧಿಯ ವಿಶಾಲವಾದ ಮತ್ತು ತುಡಿಯುತ್ತಿರುವ ಭಾಗಗಳಿವೆ. ಆದರೆ, ಮಹತ್ವಾಕಾಂಕ್ಷೆ ಮತ್ತು  ಸ್ಪಧರ್ೆಯಿಂದ ದೃಗ್ಗೋಚರವಾದ ಒತ್ತಡದ ಬಿಂದುಗಳು ಕಾಣ ಬರುತ್ತಿವೆ. ಏಷ್ಯಾ ಪೆಸಿಫಿಕ್ನಲ್ಲಿ ಮಿಲಿಟರಿ ಬಲ, ಸಂಪನ್ಮೂಲ ಮತ್ತು ಐಶ್ವರ್ಯದ ನಿರಂತರ ಹೆಚ್ಚಳದಿಂದ ಅದರ ಸುರಕ್ಷತೆಯು ಆತಂಕಕ್ಕೆ ಸಿಲುಕಿದೆ. ಆದ್ದರಿಂದ, ಈ ಪ್ರಾಂತ್ಯದ ರಕ್ಷಣಾ ವ್ಯವಸ್ಥೆಯು ಮುಕ್ತ, ಪಾರದರ್ಶಕ, ಸಮತೋಲಿತ ಹಾಗೂ ಒಳಗೊಂಡಿದ್ದು ಆಗಿರಬೇಕು. ಜತೆಗೆ, ಸಂವಾದವನ್ನು ಉತ್ತೇಜಿಸಬೇಕು, ಸಾರ್ವಭೌಮತ್ವವನ್ನು ಗೌರವಿಸಬೇಕು.

 

ಗೆಳೆಯರೇ,

ಕಳೆದ ಎರಡೂವರೆ ವರ್ಷದಲ್ಲಿ ಅಮೆರಿಕ, ರಷ್ಯಾ, ಜಪಾನ್ ಹಾಗೂ ಇನ್ನಿತರ ಜಾಗತಿಕವಾಗಿ ಪ್ರಬಲ ರಾಷ್ಟ್ರಗಳೊಂದಿಗೆ ಉತ್ತಮ ಸಂಬಂಧ ಕಲ್ಪಿಸುವ ಪ್ರಯ ತ್ನಕ್ಕೆ ಉತ್ತೇಜನ ನೀಡಿದ್ದೇವೆ. ನಾವು ಎದುರಿಸುತ್ತಿರುವ ಸವಾಲುಗಳು ಹಾಗೂ ಲಭ್ಯ ಅವಕಾಶಗಳ ಕುರಿತು ನಾವು ಒಮ್ಮುಖದ ಅಭಿಪ್ರಾಯ ಹೊಂದಿದ್ದೇವೆ. ಈ ಸಹಯೋಗಗಳು ದೇಶದ ಆಥರ್ಿಕ ಪ್ರಾಶಸ್ತ್ಯ, ರಕ್ಷಣೆ ಮತ್ತು ಸುರಕ್ಷತೆಗೆ ಅಗತ್ಯವಾಗಿವೆ. ಅಮೆರಿಕದೊಡನೆ ನಮ್ಮ ಸಂಬಂಧವು ವೇಗ, ಬಲ ಮತ್ತು ಸತ್ವ ಪಡೆದುಕೊಂಡಿದೆ. ಅಮೆರಿಕರ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಜೊತೆಗಿನ ಭೇಟಿಯಲ್ಲಿ ಈ ಅಂಶಗಳ ಆಧಾರದಲ್ಲಿ ಎರಡೂ ದೇಶಗಳ ನಡುವಿನ ಸಂಬಂಧವನ್ನು ವೃದ್ಧಿಪಡಿಸಲು ಒಪ್ಪಿಕೊಳ್ಳಲಾಯಿತು. ರಷ್ಯಾ ಬಹಳ ಹಿಂದಿನ ಸ್ನೇಹಿತ. ತಾವು ಹಾಗೂ ಪುಟಿನ್ ಜಗತ್ತಿನ ಆಗುಹೋಗು ಬಗ್ಗೆ ದೀರ್ಘ ಕಾಲ ಮಾತುಕತೆ ನಡೆಸಿದ್ದೇವೆ. ರಷ್ಯಾ ಜೊತೆಗಿನ ಸಂಪರ್ಕ, ವಿಶೇಷವಾಗಿ ರಕ್ಷಣೆ ವಿಷಯಕ್ಕೆ ಸಂಬಂಧಿಸಿದಂತೆ, ಇನ್ನಷ್ಟು ಗಾಢವಾಗಲಿದೆ. ನಮ್ಮ ಹೂಡಿಕೆಗಳು ಸಂಬಂಧದ ನೂತನ ಚಾಲಕ ಶಕ್ತಿಗಳಾಗಿದ್ದು, ಇಂಧನ, ವ್ಯಾಪಾರ ಮತ್ತು ವಿಜ್ಞಾನ-ತಂತ್ರಜ್ಞಾನ ಕ್ಷೇತ್ರದ ಮೇಲಿನ ಒತ್ತು ಉತ್ತಮ ಫಲಿತಾಂಶ ನೀಡಲಾರಂ ಭಿಸಿದೆ. ನಾವು ಜಪಾನ್ ಜತೆಯೂ ಉತ್ತಮ ಸಂಬಂಧ ಹೊಂದಿದ್ದು, ಆಥರ್ಿಕ ಚಟುವಟಿಕೆಯ ಎಲ್ಲ ಕ್ಷೇತ್ರದಲ್ಲೂ ಸಹಯೋಗ ವಿಸ್ತರಿಸಿದೆ. ಪ್ರಧಾನಿ ಅಬೆ ಮತ್ತು ತಾವು ಸಹಯೋಗವನ್ನು ಇನ್ನಷ್ಟು ತೀವ್ರಗೊಳಿಸುವ ಕುರಿತು ಮಾತನ್ನಾಡಿದ್ದೇವೆ. ಯುರೋಪ್ ಜತೆ ಜ್ಞಾನಾಧರಿತ ಉದ್ಯಮ ಮತ್ತು ಚತುರ ನಗರೀಕರಣ ಕ್ಷೇತ್ರದಲ್ಲಿ ಭಾರತದ ಬೆಳವಣಿಗೆಗೆ ಅಗತ್ಯವಾದ ಬಲಿಷ್ಠ ಸಹಯೋಗವನ್ನು ಹೊಂದಿದ್ದೇವೆ. 

ಸ್ನೇಹಿತರೇ, ಜತೆಯ ಅಭಿವೃದ್ಧಿಶೀಲ ದೇಶಗಳೊಂದಿಗೆ ಭಾರತ ಹಲವು ದಶಕಗಳಿಂದಲೂ ತನ್ನ ಸಾಮಥ್ರ್ಯ ಮತ್ತು ಬಲವನ್ನು ಹಂಚಿಕೊಳ್ಳುವುದರಲ್ಲಿ ಮುಂಚೂಣಿಯಲ್ಲಿದೆ. ಆಫ್ರಿಕಾದ ಸಹೋದರರು ಮತ್ತು ಸಹೋದರಿಯರ ಜೊತೆಗೆ ಕಳೆದ ಕೆಲವು ವರ್ಷದಿಂದ ನಮ್ಮ ಸಂಬಂಧ ಇನ್ನಷ್ಟು ಗಾಢವಾಗಿದೆ. ದಶಕಗಳ ಕಾಲದ ಚಾರಿತ್ರಿಕ ಸಂಬಂಧ ಮತ್ತು ಸಾಂಪ್ರದಾಯಿಕ ಸ್ನೇಹದಿಂದ ಅರ್ಥಪೂರ್ಣ ಅಭಿವೃದ್ಧಿ ಸಹಯೋಗವನ್ನು ನಿಮರ್ಿಸಿ ಕೊಂಡಿದ್ದೇವೆ. ಇಂದು ನಮ್ಮ ಅಭಿವೃದ್ಧಿ ಸಂಬಂಧಿತ ಸಹಯೋಗದ ಹೆಜ್ಜೆ ಗುರುತುಗಳನ್ನು ಜಗತ್ತಿನ್ನೆಲ್ಲೆಡೆ ಕಾಣಬಹುದು. 

ಮಹಿಳೆಯರೇ ಮತ್ತು ಮಹನೀಯರೇ, ಭಾರತ ಸಮುದ್ರ ವ್ಯಾಪಾರ ಮತ್ತು ಯಾನಕ್ಕೆ ಸಂಬಂಧಿಸಿದಂತೆ ದೀರ್ಘ ಇತಿಹಾಸ ಹೊಂದಿದೆ. ಕಡಲು ಕುರಿತ ನಮ್ಮ ಆಸಕ್ತಿಯು ಮಹತ್ವದ್ದು ಮತ್ತು ವ್ಯೂಹರಚನೆಗೆ ಸಂಬಂಧಿಸಿದ್ದು. ಭಾರತೀಯ ಸಮುದ್ರದ ಪ್ರಭಾವವು ಅದರ ವ್ಯಾಪ್ತಿಯನ್ನೂ ಮೀರಿಸಿದೆ. ನಮ್ಮ ಉಪಕ್ರಮ ಸಾಗರ್-ಸೆಕ್ಯುರಿಟಿ ಆ್ಯಂಡ್ ಗ್ರೋಥ್ ಫಾರ್ ಆಲ್ ಇನ್ ದ ರೀಜನ್, ದ್ವೀಪಗಳು ಮತ್ತು ಸಮುದ್ರ ತೀರದ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಬದಲಿಗೆ, ಸಮುದ್ರಕ್ಕೆ ಸಂಬಂಧಿಸಿದಂತೆ ಆಥರ್ಿಕ ಮತ್ತು ಸುರಕ್ಷೆ ಕ್ಷೇತ್ರದಲ್ಲಿ ಪರಸ್ಪರ ಸಹಕಾರಕ್ಕಾಗಿ ನಾವು ನಡೆಸುತ್ತಿರುವ ಪ್ರಯತ್ನಗಳನ್ನು ಅದು ವಿವರಿ ಸುತ್ತದೆ. ಸಹಯೋಗ, ಸಹಕಾರ ಮತ್ತು ಸಾಮೂಹಿಕ ಪ್ರಯತ್ನದಿಂದ ನಮ್ಮ ಕಡಲಿನ ಪ್ರದೇಶದಲ್ಲಿ ಆಥರ್ಿಕ ಚಟುವಟಿಕೆಯನ್ನು ಉತ್ತೇಜಿಸುವ ಜತೆಗೆ ಶಾಂತಿಯನ್ನೂ ಕಾಯ್ದುಕೊಳ್ಳಬಹುದು ಎಂದು ನಾವು ನಂಬಿದ್ದೇವೆ. ಭಾರತೀಯ ಸಮುದ್ರ ಪ್ರದೇಶದಲ್ಲಿ ಶಾಂತಿ, ಸಮೃದ್ಧಿ ಮತ್ತು ಸುರಕ್ಷೆಯನ್ನು ಕಾಪಾಡಿ ಕೊಳ್ಳುವ ಪ್ರಾಥಮಿಕ ಹೊಣೆ ಆ ಪ್ರಾಂತ್ಯದಲ್ಲಿ ವಾಸಿಸುವವರದ್ದು ಎಂದು ನಾವು ನಂಬಿದ್ದೇವೆ. ನಮ್ಮದು ಯಾರನ್ನೂ ಹೊರತಾಗಿಸುವ ಮಾರ್ಗವಲ್ಲ. ಹಾಗೂ, ಅಂತರರಾಷ್ಟ್ರೀಯ ಕಾನೂನುಗಳನ್ನು ಗೌರವಿಸುವ ದೇಶಗಳನ್ನು ನಾವು ಒಟ್ಟುಗೂಡಿಸುತ್ತೇವೆ. ಅಂತರರಾಷ್ಟ್ರೀಯ ಕಾನೂನಿಗೆ ಅನುಗುಣವಾಗಿ ದೇಶಗಳು ತಮ್ಮ ಮಿತಿಯಲ್ಲಿ ಕಡಲಿಗೆ ಸಂಬಂಧಿಸಿದ ಚಟುವಟಿಕೆಗಳನ್ನು ನಡೆಸುವ ಹಕ್ಕನ್ನು ಎಲ್ಲ ದೇಶಗಳೂ ಹೊಂದಿವೆ. ಇಂಡೋಪೆಸಿಫಿಕ್ನ ವಿಶಾಲ ವ್ಯಾಪ್ತಿಯ ಹಾಗೂ ಒಂದಕ್ಕೊಂದು ಕೂಡಿಕೊಂಡ ಸಮುದ್ರ ಕ್ಷೇತ್ರದಲ್ಲಿ ಇದರಿಂದ ಶಾಂತಿ ಮತ್ತು ಆಥರ್ಿಕ ಪ್ರಗತಿಯನ್ನು ಸಾಧಿಸಬಹುದು ಎಂದು ನಾವು ನಂಬಿದ್ದೇವೆ.

 

ಸ್ನೇಹಿತರೇ, ಶಾಂತಿ,ಪ್ರಗತಿ ಮತ್ತು ಸಮೃದ್ಧಿಗಾಗಿ ಪ್ರಾಂತೀಯ ಸಹಯೋಗ ಅತ್ಯಗತ್ಯ ಎಂಬುದು ನಮಗೆ ಗೊತ್ತಿದ್ದು, ಆ ನಿಟ್ಟಿನಲ್ಲಿ ನಡೆಯುವ ಎಲ್ಲ ಪ್ರಯತ್ನಗಳನ್ನು ಪ್ರಶಂಸಿಸುತ್ತೇವೆ. ಆಯ್ಕೆಗಳು ಮತ್ತು ಕ್ರಿಯೆಯ ಮೂಲಕ ಎಲ್ಲ ಅಡೆತಡೆಗಳನ್ನು ಮೀರಿ, ಪಶ್ಚಿಮ ಮತ್ತು ಕೇಂದ್ರ ಏಷ್ಯಾ ಹಾಗೂ ಪೂರ್ವದಲ್ಲಿ ಏಷ್ಯಾ -ಪೆಸಿಫಿಕ್ನ್ನು ತಲುಪಲು ಯತ್ನಿಸಿದ್ದೇವೆ. ಇದಕ್ಕೆ ಎರಡು ಸ್ಪಷ್ಟ ಮತ್ತು ಯಶಸ್ವಿ ಉದಾಹರಣೆಗಳೆಂದರೆ, ಇರಾನ್ ಮತ್ತು ಅಫಘಾನಿಸ್ತಾನದ ಜತೆಗಿನ ಚಬಹರ್ ಕುರಿತ ತ್ರಿಪಕ್ಷೀಯ ಒಪ್ಪಂದ; ಹಾಗೂ ಅಂತರರಾಷ್ಟ್ರೀಯ ಉತ್ತರ ದಕ್ಷಿಣ ಸಂಚಾರ ಕಾರಿಡಾರ್ಗೆ ನಮ್ಮ ಸಹಕಾರ. ಆದರೆ, ಸಂಪರ್ಕದಿಂದ ಬೇರೆ ದೇಶಗಳ ಸಾರ್ವಭೌಮತ್ವವನ್ನು ಹಣಿಯುವುದು ಇಲ್ಲವೇ ಒಳಸಂಚು ನಡೆಸಲು ಸಾಧ್ಯವಿಲ್ಲ ಎಂಬ ಅರಿವು ಅಗತ್ಯವಿದೆ. ಒಳಗೊಂಡ ದೇಶಗಳ ಸಾರ್ವಭೌಮತ್ವವನ್ನು ಗೌರವಿಸುವ ಮೂಲಕವಷ್ಟೇ ಪ್ರಾಂತೀಯ ಸಂಪರ್ಕ ಕಾರಿಡಾರ್ಗಳು ತಮ್ಮ ಆಶಯವನ್ನು ಪೂರೈಸಬಲ್ಲವು ಮತ್ತು ಬಿಕ್ಕಟ್ಟು ಹಾಗೂ ಅಭಿಪ್ರಾಯಭೇದವನ್ನು ನಿವಾರಿಸಬಲ್ಲವು. 

ಗೆಳೆಯರೇ, ನಮ್ಮ ಪರಂಪರೆಗೆ ಅನುಗುಣವಾಗಿ ನಾವು ಅಂತರರಾಷ್ಟ್ರೀಯ ವಚನಬದ್ಧತೆಯ ಹೊರೆಯನ್ನು ಹೊತ್ತುಕೊಂಡಿದ್ದೇವೆ. ಸ್ವಾಭಾವಿಕ ಅವಘಡಗಳ ಸಂದರ್ಭದಲ್ಲಿ ನೆರವು ನೀಡುವುದಲ್ಲದೆ, ಪರಿಹಾರ ಕಾರ್ಯಗಳ ನೇತೃತ್ವ ವಹಿಸಿದ್ದೇವೆ. ನೇಪಾಳದಲ್ಲಿನ ಭೂಕಂಪ, ಯೆಮೆನ್ನಲ್ಲಿ ಜನರ ಸ್ಥಳಾಂತರ ಪ್ರಯತ್ನ ಹಾಗೂ ಫಿಜಿ ಮತ್ತು ಮಾಲ್ಡೀವ್ಸ್ನಲ್ಲಿನ ಮಾನವ ಸಂಕಷ್ಟದ ವೇಳೆ ಎಲ್ಲರಿಗಿಂತ ಮೊದಲು ಪ್ರತಿಕ್ರಿಯಿಸಿದ್ದೇವೆ. ಅಂತರರಾಷ್ಟ್ರೀಯ ಶಾಂತಿ ಮತ್ತು ಸುರಕ್ಷೆಯನ್ನು ಕಾಯ್ದುಕೊಳ್ಳುವ ಜವಾಬ್ದಾರಿಯನ್ನು ಹಿಂಜರಿಕೆ ಇಲ್ಲದೆ ನಿರ್ವಹಿಸಿದ್ದೇವೆ. ಕರಾವಳಿಯಲ್ಲಿ ಸವರ್ೇಕ್ಷಣೆ ಹೆಚ್ಚಳ, ಹಡಗುಗಾರಿಕೆ ಮಾಹಿತಿ ಮತ್ತು ಸಾಂಪ್ರದಾಯಿಕವಲ್ಲದ ಅಪಾಯಗಳಾದ ದರೋಡೆ. ಕಳ್ಳಸಾಗಣೆ ಮತ್ತು ಸಂಘಟಿತ ಅಪರಾಧ ತಡೆಗೆ ಹೆಚ್ಚು ಸಹಕಾರ ನೀಡುತ್ತಿದ್ದೇವೆ.

ಪರಿಹಾರಗೊಳ್ಳದೆ ಉಳಿದುಕೊಂಡ ಜಾಗತಿಕ ಸವಾಲುಗಳಿಗೆ ನಾವು ಪರ್ಯಾಯ ಮಾರ್ಗಗಳನ್ನೂ ರೂಪಿಸಿದ್ದೇವೆ. ಧರ್ಮವನ್ನು ಉಗ್ರವಾದದಿಂದ ಪ್ರತ್ಯೇಕಿ ಸಬೇಕು ಎಂಬುದು ನಮ್ಮ ನಂಬಿಕೆಯಾಗಿದ್ದು, ಒಳ್ಳೆಯ ಹಾಗೂ ಕೆಟ್ಟ ಉಗ್ರವಾದ ಎಂಬ ಕೃತಕ ವಿಭಾಗೀಕರಣವನ್ನು ತಿರಸ್ಕರಿಸಿದ್ದೇವೆ. ಅವು ಈಗ ಜಾಗತಿಕ ಸಂವಾದದ ಭಾಗವಾಗಿವೆ. ಹಿಂಸೆಯನ್ನು ಬೆಂಬಲಿಸುವ, ದ್ವೇಷವನ್ನು ಉತ್ತೇಜಿಸುವ ಹಾಗೂ ಉಗ್ರವಾದವನ್ನು ರಫ್ತು ಮಾಡುವ ನೆರೆಯ ದೇಶ ಈಗ ಒಂಟಿಯಾಗಿದ್ದು, ನಿರ್ಲಕ್ಷಿಸಲ್ಪಟ್ಟಿದೆ.

ಜಾಗತಿಕ ತಾಪಮಾನ ಹೆಚ್ಚಳ ತಡೆ ವಿಷಯಕ್ಕೆ ಸಂಬಂಧಿಸಿದಂತೆ, ನಾವು ಮುಂದಾಳತ್ವ ವಹಿಸಿದ್ದೇವೆ. ಪುನರ್ಬಳಕೆ ಮೂಲಗಳಿಂದ 175 ಗಿಗಾ ವ್ಯಾಟ್ ವಿದ್ಯುತ್ ಉತ್ಪಾದಿಸುವ ಗುರಿ ಹೊಂದಿದ್ದೇವೆ. ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುವ ಕುರಿತು ನಮ್ಮ ನಾಗರಿಕತೆಯ ಸಂಪ್ರದಾಯಗಳನ್ನು ಹಂಚಿಕೊಂ ಡಿದ್ದೇವೆ. ಮಾನವಾಭಿವೃದ್ಧಿಯನ್ನು ಉತ್ತೇಜಿಸಲು ಸೌರ ಶಕ್ತಿಯನ್ನು ಬಳಸಿಕೊಳ್ಳಲು ಅಂತರರಾಷ್ಟ್ರೀಯ ಸೌರ ಮೈತ್ರಿಯನ್ನು ಸೃಷ್ಟಿಸಿದ್ದು, ಇದಕ್ಕಾಗಿ ಅಂತರರಾಷ್ಟ್ರೀಯ ಸಮುದಾಯವನ್ನು ಒಟ್ಟಿಗೆ ತರಲಾಗಿದೆ. ಭಾರತದ ಸಾಂಸ್ಕೃತಿಕ ಮತ್ತು ಅಧ್ಯಾತ್ಮಿಕ ಪರಂಪರೆಯ ಬಗ್ಗೆ ಅಂತರರಾಷ್ಟ್ರೀಯ ಆಸಕ್ತಿಯನ್ನು ಮತ್ತೆ ಚಿಗುರಿಸಲು ಗಂಭೀರ ಪ್ರಯತ್ನ ನಡೆಸಿದ್ದೇವೆ. ಇದರಿಂದ ಬುದ್ಧಿಸಂ,ಯೋಗ ಮತ್ತು ಆಯುವರ್ೇದಗಳು ಮನುಷ್ಯತ್ವದ ಅಮೂಲ್ಯ ಸಂಪತ್ತು ಎಂದು ಪರಿಗಣಿಸಲ್ಪಟ್ಟಿವೆ. ಭಾರತವು ತನ್ನ ಪ್ರತಿ ಹೆಜ್ಜೆಯಲ್ಲೂ ಈ ಸಾಮಾನ್ಯ ಪರಂಪರೆಯನ್ನು ಸಂಭ್ರಮಿಸುತ್ತಿದೆ. ದೇಶಗಳು ಮತ್ತು ಪ್ರಾಂತ್ಯಗಳ ನಡುವೆ ಸೇತುವೆಗಳನ್ನು ನಿಮರ್ಿಸುತ್ತ ಎಲ್ಲರ ಸರ್ವತೋಮುಖ ಒಳಿತನ್ನು ಉತ್ತೇಜಿಸುತ್ತಿದೆ.

ಮಹಿಳೆಯರೇ ಮತ್ತು ಮಹನೀಯರೇ, ಜಗತ್ತನ್ನು ಒಳಗೊಳ್ಳುವ ವಿಷಯದಲ್ಲಿ ನಮ್ಮನ್ನು ಪವಿತ್ರ ಗ್ರಂಥಗಳು ಕೈ ಹಿಡಿದು ನಡೆಸಿವೆ.

ಋಗ್ವೇದ ಹೇಳುತ್ತದೆ: “ಅ ನ ಭದ್ರೋ ಕೃತವೋ ಯಂತು ವಿಶ್ವತಃ’ ಅಂದರೆ, “ಉದಾತ್ತ ಚಿಂತನೆಗಳು ನಮಗೆ ಎಲ್ಲ ದಿಕ್ಕಿನಿಂದಲೂ ಬರಲಿ’.

ಒಂದು ಸಮಾಜವಾಗಿ ನಾವು ವ್ಯಕ್ತಿಯ ಅಗತ್ಯಗಳ ಬದಲು ಎಲ್ಲರ ಅವಶ್ಯಕತೆಯನ್ನು ಪೂರೈಸಲು ಆದ್ಯತೆ ನೀಡಿದ್ದೇವೆ. ಮತ್ತು ಧ್ರುವೀಕರಣದ ಬದಲು ಸಹಭಾಗಿತ್ವವನ್ನು ಆಯ್ಕೆ ಮಾಡಿಕೊಂಡಿದ್ದೇವೆ. ನಮ್ಮ ಕೆಲಸ ನಿಗದಿಯಾಗಿ ಬಿಟ್ಟಿದೆ. ನಮ್ಮ ದರ್ಶನ ಸ್ಪಷ್ಟವಾಗಿದೆ. ನಮ್ಮ ಪರಿವರ್ತನೆಯ ಪ್ರಯಾಣ ಮನೆ ಯಿಂದಲೇ ಆರಂಭವಾಗಿದೆ. ಜಗತ್ತಿನೆಲ್ಲೆಡೆ ಕಟ್ಟುವ ಹಾಗೂ ಸಹಯೋಗದ ಸಹಭಾಗಿತ್ವದ ಮೂಲಕ ಅದನ್ನು ಬಲವಾಗಿ ಬೆಂಬಲಿಸಲಾಗುತ್ತಿದೆ. ದೇಶದಲ್ಲಿನ ದೃಢ ಹೆಜ್ಜೆಗಳ ಮೂಲಕ ಹಾಗೂ ನಂಬಿಕೆಗೆ ಅರ್ಹರಾದ ಸ್ನೇಹಿತರ ಕಾರ್ಯಜಾಲವನ್ನು ವಿಸ್ತರಿಸುವ ಮೂಲಕ ಶತ ಕೋಟಿ ಭಾರತೀಯರಿಗೆ ಭವಿಷ್ಯ ಕಟ್ಟಿ ಕೊಡಲು ನಾವು ಯತ್ನಿಸುತ್ತಿದ್ದೇವೆ. ಈ ಪ್ರಯತ್ನದಲ್ಲಿ ಶಾಂತಿ ಮತ್ತು ಪ್ರಗತಿ, ಸ್ಥಿರತೆ ಮತ್ತು ಯಶಸ್ಸು, ಪ್ರವೇಶ ಮತ್ತು ಹೊಂದಾಣಿಕೆಯ ಸಂಜ್ಞಾ ದೀಪದ ಬೆಳಕನ್ನು ನೀವು ಭಾರತದಲ್ಲಿ ಕಾಣಲಿದ್ದೀರಿ.

ಧನ್ಯವಾದಗಳು.

ಎಲ್ಲರಿಗೂ ನನ್ನ ಧನ್ಯವಾದಗಳು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Annual malaria cases at 2 mn in 2023, down 97% since 1947: Health ministry

Media Coverage

Annual malaria cases at 2 mn in 2023, down 97% since 1947: Health ministry
NM on the go

Nm on the go

Always be the first to hear from the PM. Get the App Now!
...
PM to distribute over 50 lakh property cards to property owners under SVAMITVA Scheme
December 26, 2024
Drone survey already completed in 92% of targeted villages
Around 2.2 crore property cards prepared

Prime Minister Shri Narendra Modi will distribute over 50 lakh property cards under SVAMITVA Scheme to property owners in over 46,000 villages in 200 districts across 10 States and 2 Union territories on 27th December at around 12:30 PM through video conferencing.

SVAMITVA scheme was launched by Prime Minister with a vision to enhance the economic progress of rural India by providing ‘Record of Rights’ to households possessing houses in inhabited areas in villages through the latest surveying drone technology.

The scheme also helps facilitate monetization of properties and enabling institutional credit through bank loans; reducing property-related disputes; facilitating better assessment of properties and property tax in rural areas and enabling comprehensive village-level planning.

Drone survey has been completed in over 3.1 lakh villages, which covers 92% of the targeted villages. So far, around 2.2 crore property cards have been prepared for nearly 1.5 lakh villages.

The scheme has reached full saturation in Tripura, Goa, Uttarakhand and Haryana. Drone survey has been completed in the states of Madhya Pradesh, Uttar Pradesh, and Chhattisgarh and also in several Union Territories.