ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು, ಕಾಗದ ರಹಿತ ಸುಪ್ರೀಂಕೋರ್ಟ್ ನಿರ್ಮಾಣ ನಿಟ್ಟಿನಲ್ಲಿ ಒಂದು ಹೆಜ್ಜೆಯಾಗಿ ಡಿಜಿಟಲ್ ಫೈಲಿಂಗ್ ಪರಿಚಯಿಸುವ ಅಂಗವಾಗಿ ಸಮಗ್ರ ಪ್ರಕರಣ ನಿರ್ವಹಣೆ ಮಾಹಿತಿ ವ್ಯವಸ್ಥೆ (Integrated Case Management Information System) ಅನ್ನು ಸುಪ್ರೀಂಕೋರ್ಟ್ ಅಂತರ್ಜಾಲ ತಾಣದಲ್ಲಿ ಅಪ್ ಲೋಡ್ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಭಾರತದ ಮುಖ್ಯ ನ್ಯಾಯಾಧೀಶ ಶ್ರೀ. ನ್ಯಾಯಮೂರ್ತಿ ಜೆ.ಎಸ್. ಖೇಹರ್ ಅವರು, ಈ ವರ್ಷ ಏಪ್ರಿಲ್ 2ರಂದು ಅಲಹಬಾದ್ ಹೈಕೋರ್ಟ್ ನ 150ನೇ ವಾರ್ಷಿಕೋತ್ಸವ ಆಚರಿಸಿದ್ದನ್ನು ಸ್ಮರಿಸಿದರು. ಆ ದಿನ ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು, ನ್ಯಾಯಾಲಯದ ಕಾರ್ಯಾಚರಣೆ ಸುಗಮಗೊಳಿಸಲು ತಂತ್ರಜ್ಞಾನ ಅಳವಡಿಕೆಯನ್ನು ಬಲವಾಗಿ ಪ್ರತಿಪಾದಿಸಿದ್ದರು ಎಂದರು. ಅರ್ಜಿಗಳ ಡಿಜಿಟಲ್ ಫೈಲಿಂಗ್ ನ ಲಾಭಗಳನ್ನು ವಿವರಿಸಿದ ಭಾರತದ ಮುಖ್ಯ ನ್ಯಾಯಮೂರ್ತಿಯವರು ಈ ಉಪಕ್ರಮವು ನ್ಯಾಯಾಂಗದಲ್ಲಿ ತಂತ್ರಜ್ಞಾನವನ್ನು ಅಳವಡಿಸುವ ನಿಟ್ಟಿನಲ್ಲಿ ದೊಡ್ಡ ಹೆಜ್ಜೆಯಾಗಿದೆ ಎಂದರು.
ಈ ಅನ್ವಾಯಿಕದ ಬಗ್ಗೆ ಪ್ರಾತ್ಯಕ್ಷಿಕೆಯನ್ನು ನೀಡಿದ ಶ್ರೀ. ನ್ಯಾಯಮೂರ್ತಿ ಖನ್ವಿಲ್ಕರ್ ಹೊಸ ಉಪಕ್ರಮವು “ಸರ್ವರೊಂದಿಗೆ ಸರ್ವರ ವಿಕಾಸ’’ಕ್ಕೆ ದುಷ್ಟಾಂತವಾಗಿದೆ ಎಂದರು. ಕೇಂದ್ರ ಕಾನೂನು ಮತ್ತು ನ್ಯಾಯ ಖಾತೆ ಸಚಿವ ಶ್ರೀ. ರವಿಶಂಕರ ಪ್ರಸಾದ್ ಈ ಡಿಜಿಟನ್ ನಾವಿನ್ಯತೆಗಾಗಿ ಸುಪ್ರೀಂಕೋರ್ಟ್ ಅನ್ನು ಪ್ರಶಂಸಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿಯವರು, ಬುದ್ಧ ಪೌರ್ಣಿಮೆಯ ಸಂದರ್ಭದಲ್ಲಿ ಸಭಿಕರಿಗೆ ಶುಭಕೋರಿದರು. ಮೇ 10 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ವಾರ್ಷಿಕೋತ್ಸವದ ದಿನವೂ ಆಗಿದೆ ಎಂಬುದನ್ನು ಸ್ಮರಿಸಿದರು .
ಏಪ್ರಿಲ್ 2ರಂದು ಅಲಹಾಬಾದ್ ಹೈಕೋರ್ಟ್ ನಲ್ಲಿ ಮುಖ್ಯ ನ್ಯಾಯಮೂರ್ತಿಯವರು, ರಜೆಯ ಸಮಯದ ಕೆಲವು ದಿನಗಳಲ್ಲಾದರೂ ಉನ್ನತ ನ್ಯಾಯಾಲಯಗಳು ಪ್ರಕರಣಗಳ ವಿಚಾರಣೆ ಕೈಗೆತ್ತಿಕೊಳ್ಳುವಂತೆ ಮಾಡಿದ್ದ ಮನವಿಯನ್ನು ಪ್ರಧಾನಮಂತ್ರಿಯವರು ಸ್ಮರಿಸಿದರು. ಈ ಮನವಿ ಪ್ರೇರಣದಾಯಕ ಮತ್ತು ಅವರು ಈ ಸಂಬಂಧ ಸುಪ್ರೀಂಕೋರ್ಟ್ ಮತ್ತು ಹೈಕೋರ್ಟ್ ಗಳಿಂದ ಬಹಳ ಉತ್ಸಾಹದಾಯಕ ಸುದ್ದಿಯನ್ನು ಕೇಳಿದ್ದಾರೆ ಎಂದರು. ಈ ಪ್ರೇರಣೆಯು ಧನಾತ್ಮಕ ಬದಲಾವಣೆಯನ್ನು ತಂದಿದೆ ಮತ್ತು ಹೊಣೆಗಾರಿಕೆಯ ಪ್ರಜ್ಞೆಯನ್ನು ಹುಟ್ಟುಹಾಕಿದೆ ಎಂದರು. ಅಲ್ಲದೆ ಇದು ಸಾಮಾನ್ಯ ಜನರಲ್ಲಿ ವಿಶ್ವಾಸವನ್ನು ಮೂಡಿಸಿದೆ, ಇದು ‘ನವ ಭಾರತ’ಕ್ಕೆ ಪ್ರಮುಖವೂ ಆಗಿದೆ ಎಂದರು.
ಈ ಹಿಂದೆ ತಂತ್ರಜ್ಞಾನವನ್ನು ಹಲವು ಬಾರಿ ಯಂತ್ರಾಂಶಕ್ಕೆ ಹೋಲಿಸಲಾಗುತ್ತಿತ್ತು ಎಂದ ಪ್ರಧಾನಮಂತ್ರಿಯವರು ಮನೋಸ್ಥಿತಿಯಲ್ಲಿ ಬದಲಾವಣೆಯ ಅಗತ್ಯವಿದೆ ಎಂದರು. ತಂತ್ರಜ್ಞಾನವು ಸಂಸ್ಥೆಯಲ್ಲಿ ಸಂಘಟಿತವಾಗಿ ಹೊರಹೊಮ್ಮುತ್ತದೆ ಎಂದರು. ಕಾಗದ ರಹಿತ ಉಪಕ್ರಮವು ಪರಿಸರವನ್ನು ಉಳಿಸುತ್ತದೆ ಮತ್ತು ಅದು ಭವಿಷ್ಯದ ಪೀಳಿಗೆಗೆ ದೊಡ್ಡ ಸೇವೆ ಆಗುತ್ತದೆ ಎಂದರು.
ತಂತ್ರಜ್ಞಾನದ ಲಾಭದ ಬಗ್ಗೆ ಮಾತನಾಡಿದ ಪ್ರಧಾನಮಂತ್ರಿಯವರು, ಇತ್ತೀಚೆಗಷ್ಟೇ ಆಯೋಜಿಸಲಾಗಿದ್ದ “ಹ್ಯಾಕಥಾನ್” ಅನ್ನು ಸ್ಮರಿಸಿದರು. ಅದರಲ್ಲಿ ಭಾರತ ಸರ್ಕಾರದ ಸಚಿವಾಲಯಗಳಾದ್ಯಂತ 400 ಸಮಸ್ಯೆಗಳನ್ನು ಗುರುತಿಸಲಾಗಿತ್ತು ಮತ್ತು ಭಾರತೀಯ ವಿಶ್ವವಿದ್ಯಾಲಯಗಳ 42,000 ವಿದ್ಯಾರ್ಥಿಗಳು ಅವುಗಳನ್ನು ಪರಿಹರಿಸಲು 36 ಗಂಟೆಗಳ ಕಾಲ ಪ್ರಯತ್ನಿಸಿದರು ಎಂದರು. ಈ ಪ್ರಕ್ರಿಯೆಯಲ್ಲಿ ಹೊರಬಂದ ಹಲವು ಫಲಶ್ರುತಿಗಳನ್ನು ಸಚಿವಾಲಯಗಳು ಅಳವಡಿಸಿಕೊಂಡಿವೆ ಎಂದು ತಿಳಿಸಿದರು.
“ಮಾಹಿತಿ ತಂತ್ರಜ್ಞಾನ” ಮತ್ತು “ಭಾರತೀಯ ಪ್ರತಿಭೆ”ಯ ಸಮ್ಮಿಲನ “ನಾಳಿನ ಭಾರತ”ನಿರ್ಮಿಸಲಿದೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ತಂತ್ರಜ್ಞಾನದ ಧ್ಯೇಯವಾಕ್ಯದ ನೆಲೆಯ ಕುರಿತಂತೆ ಮಾತನಾಡಿದ ಪ್ರಧಾನಿ, "ಕೃತಕ ಬುದ್ಧಿಶಕ್ತಿ" ತರಬಹುದಾದ ಪರಿಣಾಮ ಮತ್ತು ಸಾಧ್ಯತೆಗಳನ್ನು ಪ್ರಸ್ತಾಪಿಸಿದರು .
ಇತ್ತೀಚಿಗೆ ಹಲವು ಸಂದರ್ಭಗಳಲ್ಲಿ ವಿವಿಧ ವರ್ಗದ ಜನರು ಬಡವರಿಗೆ ಸಹಾಯ ಮಾಡಲು ಮುಂದಾಗಿದ್ದಾರೆ ಎಂಬುದನ್ನು ಪ್ರಧಾನಿ ಪ್ರಸ್ತಾಪಿಸಿದರು. ಈ ನಿಟ್ಟಿನಲ್ಲಿ ಅವರು ಅಡುಗೆ ಅನಿಲ ಸಬ್ಸಿಡಿ ಹಿಂತಿರುಗಿಸುವ ‘ಗೀವ್ ಇಟ್ ಅಪ್’ ಯಶಸ್ಸನ್ನು ಸ್ಮರಿಸಿದರು. ಅದೇ ರೀತಿ ಪ್ರತಿ ತಿಂಗಳ 9ನೇ ತಾರೀಖು ದೇಶಾದ್ಯಂತ ವೈದ್ಯರು ಬಡ ಗರ್ಭಿಣಿಯರಿಗೆ ಉಚಿತವಾಗಿ ಚಿಕಿತ್ಸೆ ನೀಡುತ್ತಿರುವುದನ್ನೂ ಉಲ್ಲೇಖಿಸಿದರು. ಇದೇ ಪ್ರಕಾರವಾಗಿ, ವಕೀಲರು ಕೂಡ ಅಗತ್ಯ ಇರುವ ಬಡವರಿಗೆ ಕಾನೂನು ನೆರವು ನೀಡಲು ಮುಂದೆ ಬರಬೇಕು ಎಂದು ಮನವಿ ಮಾಡಿದರು.
ಶ್ರೀ. ನ್ಯಾಯಮೂರ್ತಿ ದೀಪಕ್ ಮಿಶ್ರಾ ಮತ್ತು ಶ್ರೀ. ನ್ಯಾಯಮೂರ್ತಿ ಜೆ. ಚಲಮೇಶ್ವರ್ ಅವರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Our understanding of technology should not be limited to hardware only: PM @narendramodi
— PMO India (@PMOIndia) May 10, 2017
When it comes to technology, it is true that mindset became a problem: PM @narendramodi
— PMO India (@PMOIndia) May 10, 2017
Embracing technology can't happen if only a few people are keen on it. The scale must be larger: PM @narendramodi
— PMO India (@PMOIndia) May 10, 2017
E-governance is easy, effective and economical. It is also environment friendly. Paperless offices will benefit the environment: PM
— PMO India (@PMOIndia) May 10, 2017
Technology has the power to transform our economic potential as well: PM @narendramodi
— PMO India (@PMOIndia) May 10, 2017
Impact and influence of artificial intelligence is going to increase. Space technology is also becoming important: PM @narendramodi
— PMO India (@PMOIndia) May 10, 2017
Need of the hour is to focus on application of science and technology: PM @narendramodi
— PMO India (@PMOIndia) May 10, 2017
Let us create a mass movement to provide legal aid to the poor: PM @narendramodi
— PMO India (@PMOIndia) May 10, 2017