We must demonstrate strong collective will to defeat terror networks that cause bloodshed and spread fear: PM
Silence and inaction against terrorism in Afghanistan and our region will only embolden terrorists and their masters: PM Modi
We should all work to build stronger positive connectivity between Afghanistan and other countries of the region: PM Modi
On India’s part, our commitment to our brave Afghan brothers and sisters is absolute and unwavering: PM Modi
The welfare of Afghanistan and its people is close to our hearts and minds: PM Modi
We also plan to connect Afghanistan with India through an air transport corridor: Prime Minister Modi

ಆಫ್ಘನ್ ಇಸ್ಲಾಮಿಕ್ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಡಾ. ಮೊಹಮದ್ ಅಷರಫ್ ಘನಿ ಅವರೇ, ಆಫ್ಘನ್ ಇಸ್ಲಾಮಿಕ್ ಗಣರಾಜ್ಯದ ವಿದೇಶಾಂಗ ಸಚಿವರಾದ ಘನತೆವೆತ್ತ ಸಲಾಹುದ್ದೀನ್ ರಬ್ಬಾನಿ ಅವರೇ, ನನ್ನ ಸಹೋದ್ಯೋಗಿ ಅರುಣ್ ಜೇಟ್ಲಿ ಜೀ ಅವರೇ, ವಿದೇಶಾಂಗ ಸಚಿವರುಗಳೇ, ನಿಯೋಗದ ಮುಖ್ಯಸ್ಥರೇ, ಮಹನೀಯರೇ ಮತ್ತು ಮಹಿಳೆಯರೇ,

ನಮಸ್ಕಾರ, ಸತ್ ಶ್ರೀ ಕಾಲ್

ಆಘ್ಘಾನಿಸ್ತಾನದ  ಇಸ್ತಾನ್ಬುಲ್ ಪ್ರಕ್ರಿಯೆಯ ಹಾರ್ಟ್ ಆಫ್ ಏಷ್ಯಾ ಸಚಿವರ ಮಟ್ಟದ 6ನೇ ಸಮಾವೇಶದಲ್ಲಿ ಉದ್ಘಾಟನಾ ಭಾಷಣ ಮಾಡುತ್ತಿರುವುದು ಒಂದು ಗೌರವವಾಗಿದೆ.
ನಮ್ಮ ಸ್ನೇಹಿತ ಮತ್ತು ಪಾಲುದಾರರಾದ ಆಫ್ಘಾನಿಸ್ತಾನದ ಅಧ್ಯಕ್ಷ ಅಷರಫ್ ಘನಿ ಅವರೊಂದಿಗೆ ಈ ಸಮಾವೇಶವನ್ನು ಜಂಟಿಯಾಗಿ ಉದ್ಘಾಟಿಸುತ್ತಿರುವುದು ಇನ್ನೂ ಸಂತಸ ತಂದಿದೆ.
ನಮ್ಮ ಆಹ್ವಾನವನ್ನು ಮನ್ನಿಸಿ ಈ ಸಮಾವೇಶದ ಗೌರವ ಹೆಚ್ಚಿಸಿರುವ ಘನತೆವೆತ್ತ ಘನಿ ಅವರಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ಜೊತೆಗೆ ನಿಮ್ಮೆಲ್ಲರನ್ನೂ ಸರಳ, ಸುಂದರ ಮತ್ತು ಧಾರ್ಮಿಕ ತಾಣ ಅದರಲ್ಲೂ ಸಿಖ್ಖರ ಪವಿತ್ರ ಸ್ವರ್ಣ ಮಂದಿರದ ಅಮೃತಸರದಲ್ಲಿ ಸ್ವಾಗತಿಸುವುದು ನನಗೆ ಗೌರವದ ವಿಷಯವಾಗಿದೆ. ಸಿಖ್ ಗುರುಗಳು ಧ್ಯಾನ ಮಾಡಿದ ಈ ತಾಣ ಪವಿತ್ರವಾದುದಾಗಿದೆ. ಶಾಂತಿ ಮತ್ತು ಮಾನವತೆ ಒಳಗೊಂಡ ಮತ್ತು ಎಲ್ಲ ಧರ್ಮದ ಜನರಿಗೂ ಮುಕ್ತವಾಗಿದೆ. ಇಲ್ಲಿನ ರಸ್ತೆಗಳು ಮತ್ತು ಉದ್ಯಾನಗಳು ಅಪರಿಮಿತ ತ್ಯಾಗ ಮತ್ತು ಶೌರ್ಯದ ಕಥೆ ಹೇಳುತ್ತವೆ. 

ಇದೇ ಹೆಮ್ಮೆಯ ದೇಶಭಕ್ತಿಯಿಂದ ನಡವಳಿಕೆ ರೂಪಿತವಾದ ಮತ್ತು ಔದಾರ್ಯದ ಲೋಕೋಪಕಾರದ ನಿವಾಸಿಗಳಿರುವ ನಗರವಾಗಿದೆ. ಕ್ರಿಯಾಶೀಲತೆ ಮತ್ತು ಶ್ರಮ ಅವರ ಉದ್ಯಮಶೀಲತೆಯ ಸ್ಫೂರ್ತಿಯಾಗಿದೆ. ಅಲ್ಲದೆ ಅಮೃತಸರವು ಆಫ್ಘಾನಿಸ್ತಾನದ ಪುರಾತ ಮತ್ತು ಅಚಲ ಸಂಪರ್ಕದ ಆಪ್ತತೆಯನ್ನು ಅನುಭವಿಸುತ್ತಿದೆ.
ಪ್ರಥಮ ಸಿಖ್ ಗುರು ಬಾಬಾ ಗುರುನಾನಕ್ ದೇವ್ ಜೀ ಅವರ ಆರಂಭಿಕ ಶಿಷ್ಯರು ಆಫ್ಘಾನಿಸ್ತಾನೀಯರಾಗಿದ್ದರು, ಅವರು 15ನೇ ಶತಮಾನದಲ್ಲಿ ಕಾಬೂಲ್ ನಲ್ಲಿ ಬೋಧನೆ ಮಾಡಿದ್ದರು.

ಇಂದೂ ಕೂಡ, ಆಫ್ಘನ್ ಮೂಲದ ಸೂಫಿ ಸಂತ ಬಾಬಾ ಹಜರತ್ ಶೇಖ್ ಅವರ ಪವಿತ್ರ ತಾಣ ಪಂಜಾಬ್ ನಲ್ಲಿದೆ, ಇದಕ್ಕೆ ಆಫ್ಘಾನಿಸ್ತಾನದಿಂದಲೂ ನಂಬಿಕೆಯಿಟ್ಟು ಜನ ಬರುತ್ತಾರೆ. ನಮ್ಮ ವಲಯದ ವಾಣಿಜ್ಯ, ಜನ ಮತ್ತು ಕಲ್ಪನೆಗಳ ಹರಿವು ಏಷ್ಯಾದ ಅತಿ ಹಳೆಯ ಮತ್ತು ಉದ್ದದ ಭೂಭಾಗವಾದ ಅಮೃತಸರದ ಗ್ರಾಂಡ್ ಟ್ರಂಕ್ ರಸ್ತೆಯೊಂದಿಗೆ ಕೂಡಿಕೊಳ್ಳುತ್ತದೆ.  
ಆಫ್ಘಾನಿಸ್ತಾನನದ ಆರ್ಥಿಕ ಪ್ರಗತಿ ಮತ್ತು ಸ್ಥಿರತೆ, ಸಮಗ್ರ ಅಭಿವೃದ್ಧಿಗೆ ಮಹತ್ವವಾದ ಸಂಪರ್ಕವನ್ನು ಪುನರ್ ಸ್ಥಾಪಿಸುವ ಮೌಲ್ಯವನ್ನು ಅಮೃತಸರ ಮಾಡುತ್ತಿದೆ.

ಘನತೆವೆತ್ತರೆ, ಮಹಿಳೆಯರೇ ಮತ್ತು ಮಹನೀಯರೇ
ಈ ಶತಮಾನ ಮುಗಿಯುವ ಹೊತ್ತಿಗೆ ಅಂತಾರಾಷ್ಟ್ರೀಯ ವ್ಯಾಪಕವಾಗಿ ಆಪ್ಘಾನಿಸ್ತಾನದೊಂದಿಗೆ ಕಾರ್ಯಚಟುವಟಿಕೆಯಲ್ಲಿ ತೊಡಗಿರುತ್ತದೆ.
ವಿಶ್ವದಾದ್ಯಂತದ ಪ್ರಮುಖ ಶಕ್ತಿಗಳು, ಪ್ರಾದೇಶಿಕ ರಾಷ್ಟ್ರಗಳು ಮತ್ತು ಸಂಬಂಧಿತ ರಾಷ್ಟ್ರಗಳು ರಾಜಕೀಯ, ಸಾಮಾಜಿಕ, ಸೇನೆ, ಆರ್ಥಿಕ ಮತ್ತು ಅಭಿವೃದ್ಧಿಗೆ ಬಹುಹಂತದ ಕಾರ್ಯಕ್ರಮಗಳ ಮೂಲಕ ಬೆಂಬಲ ನೀಡಿವೆ.
ಇಂದು ನಮ್ಮ ಈ ಸಮಾವೇಶವು, ಆಫ್ಘಾನಿಸ್ತಾನದಲ್ಲಿ ದೀರ್ಘಾವಧಿಯ ಶಾಂತಿ ಮತ್ತು ಸುದೀರ್ಘ ರಾಜಕೀಯ ಸ್ಥಿರತೆಯ ಕುರಿತಂತೆ ಅಂತಾರಾಷ್ಟ್ರೀಯ ಸಮುದಾಯದ ಬದ್ಧತೆಯನ್ನು ಪುನರುಚ್ಚರಿಸುತ್ತದೆ.
ಮತ್ತು ಅದು ಆಫ್ಘಾನಿಸ್ಥಾನಕ್ಕೆ ನೆರವಾಗುತ್ತದೆ: 

  • ಅದರ ಸಾಮಾಜಿಕ, ರಾಜಕೀಯ ಮತ್ತು ಸಾಂಸ್ಥಿಕ ಸ್ವರೂಪದ ನಿರ್ಮಾಣ ಮತ್ತು ಬಲಪಡಿಸುವಿಕೆ.
  • ಬಾಹ್ಯ ಭೀತಿಗಳಿಂದ ಅದರ ಎಲ್ಲೆ ಮತ್ತು ನಾಗರಿಕರ ಸುರಕ್ಷತೆ,
  • ಅದರ ಆರ್ಥಿಕ ಮತ್ತು ಅಭಿವೃದ್ಧಿ ಚಟುವಟಿಕೆಗಳಿಗೆ ಪ್ರೋತ್ಸಾಹ
  • ಅಲ್ಲಿನ ಜನತೆಗೆ ಪ್ರಗತಿದಾಯಕ ಮತ್ತು ಸ್ಥಿರವಾದ ಭವಿಷ್ಯ ರೂಪಿಸುವುದು.

ಇದುವೇ ಈ ಸಮಾವೇಶದ ಉದ್ದೇಶವೂ ಆಗಿದೆ, ಇದರ ಥೀಮ್ ಸಹ ‘ಸವಾಲುಗಳನ್ನು ಎದುರಿಸಿ, ಪ್ರಗತಿ ಸಾಧಿಸುವುದು’ ಎಂಬುದಾಗಿದೆ.

ನಮಗೆ ಸವಾಲುಗಳ ಪ್ರಮಾಣದ ಬಗ್ಗೆ ಅನುಮಾನವಿಲ್ಲ. ಆದರೆ ನಮಗೆ ಅದನ್ನು ಯಶಸ್ವಿಯಾಗಿ ಎದುರಿಸುವ ದೃಢಸಂಕಲ್ಪವೂ ಇದೆ.

ನಮ್ಮ ಸಂಘಟಿತ ಪ್ರಯತ್ನಗಳ ಫಲಿತಾಂಶ ಈವರೆಗೆ ಶ್ರಮದ ಫಲವಾಗಿದೆ, ಆದರೆ ಮಿಶ್ರಫಲವಾಗಿದೆ.

ಹಲವು ಪ್ರಮುಖ ಯಶಸ್ಸುಗಳು ಲಭಿಸಿವೆ. ಇನ್ನೂ ಹೆಚ್ಚಿನ ಕಾರ್ಯ ಮಾಡಬೇಕಾಗಿದೆ.

ನಮ್ಮ ಪ್ರಯತ್ನದ ದಾರಿಯಲ್ಲಿ ಸಾಗುವುದು ಮತ್ತು ದೃಢವಾಗಿ ನಿಲ್ಲುವುದು ಈ ಹೊತ್ತಿನ ಅಗತ್ಯವಾಗಿದೆ.  ನಾವು ಕಳೆದ 15 ವರ್ಷಗಳ ಗಳಿಕೆಯ ಮೇಲೆ ನಿರ್ಮಾಣ ಮುಂದುವರಿಸಬೇಕು ಮತ್ತು ಅದನ್ನು ಸಂರಕ್ಷಿಸಬೇಕು ಮತ್ತು ಮುಂದಡಿ ಇಡಬೇಕು.
ಕಾರಣ, ಇದು ಕೇವಲ ಆಫ್ಘಾನಿಸ್ತಾನದ ಭವಿಷ್ಯದ ಮಾತ್ರವೇ ಅಲ್ಲ ಇದು ಅಭಿವೃದ್ಧಿ ನೋಟ, ಪ್ರಜಾಪ್ರಭುತ್ವ ಮತ್ತು ಬಹುತ್ವದ ಮೇಲಿನ ಹೂಡಿಕೆಯಾಗಿದೆ, ಇದು ಇಡೀ ವಲಯದ ಮತ್ತು ಅದರಾಚೆಗಿನ ಸ್ಥಿರತೆ ಮತ್ತು ಶಾಂತಿಯ ವಿಷಯವಾಗಿದೆ.
ಇನ್ನೂ ಹೆಚ್ಚಿನದನ್ನು ಏನು ಮಾಡಬೇಕು ಎಂಬ ತುರ್ತಿನ ಬಗ್ಗೆ ನಾವು ಸ್ಪಂದಿಸಬೇಕು ಮತ್ತು ನಾವು ಆಫ್ಘಾನಿಸ್ತಾನದಲ್ಲಿ ಏನನ್ನು ತಡೆಯಬೇಕು ಆಗ ಅಲ್ಲಿನ ಜನತೆ ಸ್ವಯಂ ಶಾಂತಿ ಮತ್ತು ಆರ್ಥಿಕ ಪ್ರಗತಿಗೆ ಕಾರಣರಾಗುತ್ತಾರೆ. ಅಲ್ಲಿಯೇ ಉತ್ತರವೂ ಇದೆ. ಈಗಿರುವ ಪ್ರಶ್ನೆ ಪರಿಹಾರ ಮತ್ತು ಕ್ರಮದ್ದಾಗಿದೆ. ಮತ್ತು ಆಪ್ಘಾನಿಸ್ತಾನವನ್ನು ಮತ್ತು ಅದರ ಜನತೆಯನ್ನು ಮುಂದೆ ನಿಲ್ಲಿಸುವುದಾಗಿದೆ.

ಇದಕ್ಕಾಗಿ, ಮೊದಲಿಗೆ, ಆಫ್ಘನ್ ನೇತೃತ್ವದ, ಆಫ್ಘನ್ – ಸ್ವಾಮ್ಯದ ಮತ್ತು ಆಫ್ಘನ್ ನಿಯಂತ್ರಿತ ಪ್ರಕ್ರಿಯೆ ಪ್ರಮುಖವಾಗಿದೆ. ಇದೊಂದೇ ಬಹುದೀರ್ಘಕಾಲ ಬಾಳಿಗೆ ಬರುವ ಪರಿಹಾರವಾಗಿದೆ. ಎರಡನೆಯದು ರಕ್ತಹರಿಸುವ ಮತ್ತು ಭೀತಿ ಹುಟ್ಟಿಸುವ ಭಯೋತ್ಪಾದನೆ ಜಾಲವನ್ನು ಸೋಲಿಸಲು ನಾವು ಸಂಘಟಿತ ಮತ್ತು ಬಲವಾದ ಶಕ್ತಿ ಪ್ರದರ್ಶಿಸಬೇಕಾಗಿದೆ.
ಭಯೋತ್ಪಾದನೆ ಮತ್ತು ವಿಧ್ವಂಸಕತೆ ಮೊದಲಿಗೆ ಆಫ್ಘಾನಿಸ್ತಾನದ ಶಾಂತಿ, ಸ್ಥಿರತೆ ಮತ್ತು ಪ್ರಗತಿಗೆ ಅತಿದೊಡ್ಡ ಭೀತಿ ಒಡ್ಡಿದೆ. ಮತ್ತು ಬೆಳೆಯುತ್ತಿರುವ ಭಯೋತ್ಪಾದನೆ ಹಿಂಸಾಚಾರ ನಮ್ಮ ಇಡೀ ವಲಯಕ್ಕೆ ಅಪಾಯಒಡ್ಡಿದೆ. ಹೀಗಾಗಿ ಶಾಂತಿಗಾಗಿ ಆಫ್ಘಾನಿಸ್ತಾನದಲ್ಲಿನ ಕೂಗು ಮಾತ್ರವೇ ಸಾಕಾಗುವುದಿಲ್ಲ.
ಇದಕ್ಕೆ ದೃಢ ಸಂಕಲ್ಪದ ಕಾರ್ಯವೂ ಅಗತ್ಯವಿದೆ. ಇದು ಕೇವಲ ಭಯೋತ್ಪಾದನೆ ಶಕ್ತಿಗಳ ವಿರುದ್ಧವಷ್ಟೇ ಅಲ್ಲ, ಅದಕ್ಕೆ ಬೆಂಬಲ ನೀಡುವ, ಆಶ್ರಯ ನೀಡುವ ಮತ್ತು ಅವರಿಗೆ ಹಣ ನೀಡುವವರ ವಿರುದ್ಧವೂ ಆಗಬೇಕು.
ಆಪ್ಘಾನಿಸ್ತಾನದಲ್ಲಿ ಭಯೋತ್ಪಾದಕರ ವಿರುದ್ಧ ತಾಳುವ ಮೌನ ಮತ್ತು ಅವರ ವಿರುದ್ಧ ಕ್ರಮ ಕೈಗೊಳ್ಳದಿರುವುದು ನಮ್ಮ ವಲಯದಲ್ಲಿ ಭಯೋತ್ಪಾದಕರು ಮತ್ತು ಅದರ ನಾಯಕರನ್ನು ಹುರಿದುಂಬಿಸಲು ಕಾರಣವಾಗಿದೆ. ಮೂರನೆಯದು, ಆಫ್ಘಾನಿಸ್ತಾನದ ಅಭಿವೃದ್ಧಿ ಮತ್ತು ಮಾನವೀಯ ಅಗತ್ಯಗಳಿಗೆ ಸರಕುಗಳ ನೆರವು ನೀಡುವ ನಮ್ಮ ದ್ವಿಪಕ್ಷೀಯ ಮತ್ತು ಪ್ರಾದೇಶಿಕ ಬದ್ಧತೆಗಳು ಮುಂದುವರಿಯಬೇಕಾಗಿದೆ ಮತ್ತು ಹೆಚ್ಚಳವಾಗಬೇಕಾಗಿದೆ.
ಆಫ್ಘಾನಿಸ್ತಾನದಲ್ಲಿ ನಮ್ಮ ಸಹಕಾರದ ಪ್ರಯತ್ನಗಳು ಅದರ ಮೂಲಸೌಕರ್ಯ ಮತ್ತು ಸಾಂಸ್ಥಿಕ ಸಾಮರ್ಥ್ಯಕ್ಕೆ ಕೊಡುಗೆ ನೀಡಬೇಕು ಮತ್ತು ಪ್ರಗತಿಯ ಸ್ವಯಂ ಚಾಲಕಶಕ್ತಿ ಆಗಬೇಕು. 

ನಾಲ್ಕನೆಯದು, ನಾವೆಲ್ಲರೂ ವಲಯದ ಇತರ ರಾಷ್ಟ್ರಗಳು ಮತ್ತು ಆಫ್ಘಾನಿಸ್ತಾನದ ನಡುವೆ ಬಲವಾದ ಧನಾತ್ಮಕವಾದ ಸಂಪರ್ಕವನ್ನು ಕ್ಟಟುವ ಕಾರ್ಯ ಮಾಡಬೇಕು.
ನಮ್ಮ ಈ ಸಂಪರ್ಕದ ಜಾಲದಲ್ಲಿ ಆಪ್ಘಾನಿಸ್ತಾನ ಕೇಂದ್ರದಲ್ಲಿರಬೇಕೇ ಹೊರತು ಅದಕ್ಕೆ ಬಾಹ್ಯವಾಗಬಾರದು. ನಮ್ಮ ಪಾಲಿನಲ್ಲಿ, ನಾವು ಆಫ್ಘಾನಿಸ್ತಾನವನ್ನು ದಕ್ಷಿಣ ಏಷ್ಯಾ ಮತ್ತು ಮಧ್ಯ ಏಷ್ಯಾದ ನಡುವಿನ ಸಂಪರ್ಕಕ್ಕೆ ಬಲವಾದ ತಾಣ ಎಂದು ನೋಡಿದ್ದೇವೆ..
ಅಫ್ಘಾನಿಸ್ಥಾನ ವ್ಯಾಪಾರ, ಬಂಡವಾಳ ಮತ್ತು ಮಾರುಕಟ್ಟೆಗಳ ಪ್ರಾದೇಶಿಕ ಕೊಂಡಿಗಳ ಜೊತೆ ನಾವು ಹೆಚ್ಚು ಸಂಪರ್ಕವನ್ನು ನಾವು  ಅಲ್ಲಗಳೆಯಲು ಸಾಧ್ಯವಿಲ್ಲ, ಇದರಲ್ಲಿ ಹೆಚ್ಚು ಖಚಿತವಾದದ್ದು ಅದರ ಆರ್ಥಿಕ ಬೆಳವಣಿಗೆ ಮತ್ತು ಪ್ರಗತಿಯಾಗಿದೆ.

ಅಧ್ಯಕ್ಷ ಘನಿ ಮತ್ತು ನಾನು ವಲಯದ ಇತರ ಪಾಲುದಾರರೊಂದಿಗೆ ವಾಣಿಜ್ಯ, ಮತ್ತು ಸಾರಿಗೆ ಸಂಪರ್ಕ ಬಲಪಡಿಸಲು ಆದ್ಯತೆಗೆ ಸಮ್ಮತಿಸಿದ್ದೇವೆ.  
ಘನತೆವೆತ್ತರೆ  ಮಹನೀಯರೇ ಮತ್ತು ಮಹಿಳೆಯರೇ,
ಭಾರತದದ ಪರವಾಗಿ,  ಆಪ್ಘಾನಿಸ್ತಾನದ ನಮ್ಮ ಧೈರ್ಯಶಾಲಿ ಸೋದರರು ಮತ್ತು ಸೋದರಿಯರಿಗೆ  ನಮ್ಮ ಬದ್ಧತೆ ಅಚಲವಾಗಿದೆ. ಆಫ್ಘಾನಿಸ್ತಾನ ಮತ್ತು ಅದರ ಜನತೆಯ ಕಲ್ಯಾಣ ನಮ್ಮ ಹೃದಯಕ್ಕೆ ಮತ್ತು ಮನಸ್ಸಿಗೆ ಹತ್ತಿರವಾಗಿದೆ.
ನಾವು ಆಪ್ಘಾನಿಸ್ತಾನದಲ್ಲಿ ನಮ್ಮ ಪಾಲುದಾರಿಕೆಯಲ್ಲಿ ಕೈಗೊಂಡಿರುವ ಸಣ್ಣ ಅಥವಾ ದೊಡ್ಡ ಯಾವುದೇ ಯೋಜನೆಗಳೇ ಸ್ವಯಂ ಮಾತನಾಡುತ್ತವೆ. ನಮ್ಮ ಸಹಕಾರದ ಮೂಲ ಆಯಾಮ ಅದರ ಜನ ಕೇಂದ್ರಿತ ಸ್ವರೂಪದ್ದಾಗಿದೆ.

ನಮ್ಮ ಜಂಟಿ ಪ್ರಯತ್ನಗಳು:

  • ಆಪ್ಘಾನಿಸ್ತಾನದ ಯುವಕರನ್ನು ಶಿಕ್ಷಿತರನ್ನಾಗಿ ಮಾಡಿ ಅವರ ಕೌಶಲ ಬಳಸಿಕೊಳ್ಳುವುದು; 
  • ಆರೋಗ್ಯ ಸೇವೆ ಒದಗಿಸುವುದು ಮತ್ತು ಕೃಷಿ ಉತ್ತಮಪಡಿಸುವುದು; 
  • ಮೂಲಸೌಕರ್ಯ ಮತ್ತು ಸಂಸ್ಥೆಗಳ ನಿರ್ಮಾಣ; ಮತ್ತು
  • ಭಾರತದಲ್ಲಿ ಅಪಾರ ವಾಣಿಜ್ಯ ಮತ್ತು ಆರ್ಥಿಕ ಅವಕಾಶ ಕಲ್ಪಿಸಲು ವ್ಯಾಪಾರಿಗಳಿಗೆ ಮತ್ತು ಸಣ್ಣ ವ್ಯಾಪಾರಸ್ಥರಿಗೆ ಆಫ್ಘಾನಿಸ್ತಾನದೊಂದಿಗೆ ಸಂಪರ್ಕಿಸುವುದು.

ಮತ್ತು ಇಂಥ ಪ್ರಯತ್ನಗಳ ಲಾಭ ಮತ್ತು ವ್ಯಾಪ್ತಿ ಆಪ್ಘಾನಿಸ್ತಾನದ ಎಲ್ಲ ಮೂಲೆಗಳನ್ನೂ ತಲುಪಬೇಕು. ಕೆಲವೇ ತಿಂಗಳುಗಳ ಹಿಂದೆ ಉದ್ಘಾಟನೆಗೊಂಡ ಸಲ್ಮಾ ಎಂದೂ ಕರೆಯಲಾಗುವ ಹಾರ್ಟ್ಸ್ ಭಾರತ- ಆಫ್ಘಾನಿಸ್ತಾನ ಗೆಳೆತನದ ಜಲಾಶಯ, ಅಲ್ಲಿನ ಜನರಿಗೆ ಆರ್ಥಿಕ ಚಟುವಟಿಕೆ ಪುನಶ್ಚೇತನಕ್ಕೆ ನೆರವಾಗಿದೆ.
ಕಾಬೂಲ್ ನಲ್ಲಿರುವ ಸಂಸತ್ ಕಟ್ಟಡವು ಆಫ್ಘಾನಿಸ್ತಾನದ ಪ್ರಜಾಪ್ರಭುತ್ವದ ಭವಿಷ್ಯಕ್ಕೆ ನಮ್ಮ ಬಲವಾದ ಬದ್ಧತೆಯನ್ನು ಸಂಕೇತಿಸುತ್ತದೆ. ಜೆರಾಂಜ್-ದೆಲೆರಾಮ್ ಹೆದ್ದಾರಿ ಮತ್ತು ಚಹಬರ್ ಕುರಿತ ಭಾರತ -ಆಫ್ಘಾನಿಸ್ತಾನ –ಇರಾನ್ ಸಹಕಾರವು ಆಫ್ಘಾನಿಸ್ತಾನಕ್ಕೆ ದಕ್ಷಿಣ ಏಷ್ಯಾ ಮತ್ತು ಅದರಾಚೆಗಿನ ಬಲವಾದ ಆರ್ಥಿಕ ರಾಷ್ಟ್ರಗಳೊಂದಿಗೆ ಬಲವಾಗಿ ಬೆಸೆದುಕೊಳ್ಳಲು ನೆರವಾಗುತ್ತದೆ.
ನಾವು ಒಂದು ವಾಯುಯಾನ ಕಾರಿಡಾರ್ ಮೂಲಕ ಭಾರತವನ್ನು ಆಪ್ಘಾನಿಸ್ತಾನದೊಂದಿಗೆ ಸಂಪರ್ಕಿಸಲು ಯೋಜಿಸಿದ್ದೇವೆ.
ಅಧ್ಯಕ್ಷ ಘನಿ ಮತ್ತು ನಾನು, ನಮ್ಮ ದ್ವಿಪಕ್ಷೀಯ ಬಾಂಧವ್ಯವನ್ನು ಆಳಗೊಳಿಸುವ ಹೆಚ್ಚುವರಿ ಕ್ರಮಗಳ ಬಗ್ಗೆ ಚರ್ಚಿಸಿದ್ದೇವೆ. ಆಪ್ಘಾನಿಸ್ತಾನದಲ್ಲಿ ಸಾಮರ್ಥ್ಯ ವರ್ಧನೆಗಾಗಿ ಭಾರತವು ತೆಗೆದಿಟ್ಟಿರುವ ಹೆಚ್ಚುವರಿ 1 ದಶಕೋಟಿ ಅಮೆರಿಕನ್ ಡಾಲರ್ ಉಪಯೋಗಕ್ಕಾಗಿ ಯೋಜನೆ ರೂಪಿಸುವ ನಿಟ್ಟಿನಲ್ಲಿ ಪ್ರಗತಿಯನ್ನು ಕಂಡಿದ್ದೇವೆ.
ಇದನ್ನು ಜಲ ನಿರ್ವಹಣೆ, ಆರೋಗ್ಯ, ಮೂಲಸೌಕರ್ಯ, ಇಂಧನ ಮತ್ತು ಕೌಶಲ ವರ್ಧನೆಯಂಥ ಕ್ಷೇತ್ರಗಳಿಗೂ ವಿಸ್ತರಿಸಲಾಗುತ್ತದೆ. ಭಾರತವು ತನ್ನ ಹೆಚ್ಚುವರಿ ಬದ್ಧತೆಗಳನ್ನು ಜಾರಿಗೊಳಿಸುತ್ತಿದ್ದಂತೆ, ನಾವು ಇತರ ಸಮಾನ ಮನಸ್ಕ ಪಾಲುದಾರರೊಂದಿಗೆ ಆಫ್ಘಾನಿಸ್ತಾನದ ಅಭಿವೃದ್ಧಿಗೆ ಕೈಜೋಡಿಸಲು ಮುಕ್ತರಾಗಿದ್ದೇವೆ.
ಅಕ್ಟೋಬರ್ ನಲ್ಲಿ ನಡೆದ ಬ್ರುಸೆಲ್ಸ್ ಸಮಾವೇಶದಲ್ಲಿ  ಮತ್ತು ಈ ವರ್ಷ ಜುಲೈನಲ್ಲಿ ನಡೆದ ನಾಟೋ ವಾರ್ಸಾ ಶೃಂಗದಲ್ಲಿ ಅಂತಾರಾಷ್ಟ್ರೀಯ ಬದ್ಧತೆ ವ್ಯಕ್ತವಾಗಿದೆ ಎಂದು ತಿಳಿಸಲು ಹರ್ಷಿಸುತ್ತೇವೆ. ಆಫ್ಘಾನಿಸ್ತಾನಕ್ಕೆ ನೆರವಾಗಲು ನಾವು ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಬದ್ಧರಾಗಿದ್ದೇವೆ.
ಈ ನಿಟ್ಟಿನಲ್ಲಿ, ನಾವು, ಕಲಿತ ಪಾಠದ ಆಧಾರದ ಮೇಲೆ ಮತ್ತು ಯೋಜನೆಗಳಲ್ಲಿ ಕಾರ್ಯ ನಿರ್ವಹಿಸುವಾಗ ದೊರೆತ ನಮ್ಮ ವಿನಿಮಯಿತ ಅನುಭವದಿಂದ  ಉತ್ತಮ ಪದ್ಥತಿಗಳನ್ನು ಅಳವಡಿಸಿಕೊಂಡಿದ್ದೇವೆ.

ಘನತೆವೆತ್ತರೆ, ಮಹಿಳೆಯರೆ ಮತ್ತು ಮಹನೀಯರೇ,
ಯಶಸ್ವಿಯಾಗಿ ರಾಜಕೀಯ, ಸುರಕ್ಷತೆ ಮತ್ತು ಆರ್ಥಿಕ ವಹಿವಾಟು ನಡೆಸಲು ನಾವು ಆಫ್ಘಾನಿಸ್ತಾನಕ್ಕೆ ನೀಡುವಲ್ಲಿ ಕಳೆದ ಒಂದೊಂದು ದಿನವನ್ನೂ ಸ್ಮರಿಸುತ್ತೇವೆ, ಜೊತೆಗೆ ನಾವು ವಿಶ್ವದಲ್ಲಿ ಮತ್ತು ವಲಯದಲ್ಲಿ ಆಫ್ಘಾನಿಸ್ತಾನವನ್ನು ಒಂದು ಶಾಂತಿಯುತ ತಾಣವಾಗಿ ಪರಿವರ್ತಿಸಲು ಸಹಾಯ ಮಾಡುತ್ತೇವೆ.
ನಿಮ್ಮ ಚರ್ಚೆಗಳು ಈ ಕೆಳಗಿನ ಕ್ರಮಗಳಿಗೆ ದಾರಿ ತೋರುವಂಥ ಮತ್ತು ರಚನಾತ್ಮಕ ಫಲ ನೀಡುತ್ತವೆ ಎಂದು ನಾನು ಭಾವಿಸುತ್ತೇನೆ.: 

  • ಸಂಘರ್ಷದ ಸ್ಥಳದಲ್ಲಿ ಸಹಕಾರ ಉತ್ತೇಜಿಸಲು,
  • ಅಗತ್ಯದ ಜಾಗದಲ್ಲಿ ಅಭಿವೃದ್ಧಿಯನ್ನು ಮತ್ತು ಭಯೋತ್ಪಾದನೆಯ ಜಾಗದಲ್ಲಿ ಭದ್ರತೆಯನ್ನು ರೂಪಿಸಲು.

    ನಾವು ಆಫ್ಘಾನಿಸ್ತಾನವನ್ನು ಶಾಂತಿಯ ಭೌಗೋಳಿಕ ತಾಣವಾಗಿ ಮಾಡಲು ನಾವು ಮತ್ತೆ ನಮ್ಮನ್ನು ದೃಢವಾಗಿ ತೊಡಗಿಸಿಕೊಳ್ಳೋಣ. ಶಾಂತಿ ಯಶಸ್ವಿಯಾಗುವ ತಾಣ ಮಾಡೋಣ, ಅಲ್ಲಿ ಪ್ರಗತಿ ಮತ್ತು ಸಮೃದ್ಧಿ ಇರುವಂತೆ ಮತ್ತು ಪ್ರಜಾಪ್ರಭುತ್ವ ಮತ್ತು ಬಹುತ್ವ ಗೆಲ್ಲುವಂತೆ ಮಾಡೋಣ.

ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."