PM Modi inaugurates first National Tribal Carnival in New Delhi
Despite several challenges, the tribal communities show us the way how to live cheerfully: PM
It is necessary to make the tribal communities real stakeholders in the development process: PM
Government is committed to using modern technology for development which would minimize disturbance to tribal settlements: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ನವದೆಹಲಿಯಲ್ಲಿ ರಾಷ್ಟ್ರೀಯ ಬುಡಕಟ್ಟು ಉತ್ಸವ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಪರೇಡ್ ವೀಕ್ಷಿಸಿದ ಬಳಿಕ ಮಾತನಾಡಿದ ಅವರು, ದೀಪಾವಳಿ ಹಬ್ಬದ ಸಂದರ್ಭದಲ್ಲಿ ಒಂದೇ ಕಾಲದಲ್ಲಿ ದೇಶದಾದ್ಯಂತದಿಂದ ಆಗಮಿಸಿರುವ ಬುಡಕಟ್ಟು ಗುಂಪುಗಳು ದೆಹಲಿಯಲ್ಲಿ ಸೇರಿವೆ ಎಂದರು. ಬುಡಕಟ್ಟು ಉತ್ಸವವು ಬುಡಕಟ್ಟು ಸಮುದಾಯದ ಸಾಮರ್ಥ್ಯವನ್ನು ರಾಷ್ಟ್ರದ ರಾಜಧಾನಿಯಲ್ಲಿ ಪ್ರದರ್ಶಿಸಲಿದೆ ಎಂದರು.

ಭಾರತವು ವೈವಿಧ್ಯತೆಯ ಶ್ರೇಷ್ಠ ನಾಡು ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ಸಮಾರಂಭದಲ್ಲಿ ನಡೆದ ಉತ್ಸವದ ಪೆರೇಡ್ ಈ ವೈವಿಧ್ಯತೆಯ ಸಣ್ಣ ತುಣುಕನ್ನಷ್ಟೇ ತೋರಿತು ಎಂದು ಹೇಳಿದರು.

ಬುಡಕಟ್ಟು ಸಮುದಾಯದವರ ಬದುಕು ಹೋರಾಟದಿಂದ ಕೂಡಿದೆ ಎಂದು ಪ್ರಧಾನಿ ಹೇಳಿದರು. ಬುಡಕಟ್ಟು ಸಮುದಾಯದವರು ಸಾಮುದಾಯಿಕ ಜೀವನದ ಆದರ್ಶಗಳನ್ನು ಅಳವಡಿಸಿಕೊಂಡಿದ್ದಾರೆ ಮತ್ತು ತೊಂದರೆಗಳ ನಡುವೆಯೂ ಆನಂದದ ಜೀವನ ನಡೆಸುತ್ತಾರೆ ಎಂದು ಹೇಳಿದರು.

ತಾವು ಯುವಕರಾಗಿದ್ದಾಗ ಬುಡಕಟ್ಟು ಜನರೊಂದಿಗೆ ಸಮಾಜಕಾರ್ಯ ಮಾಡುವ ಅದೃಷ್ಟ ತಮಗೆ ದೊರೆತಿತ್ತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಅವರ ತುಟಿಗಳನ್ನು ದಾಟಿ ದೂರುಗಳು ಹೊರಬಂದಿದ್ದನ್ನು ಕೇಳುವುದೇ ಕಷ್ಟ ಎಂದು ನೆನಪಿಸಿಕೊಂಡ ಅವರು, ಈ ನಿಟ್ಟಿನಲ್ಲಿ ನಗರ ಪ್ರದೇಶದಲ್ಲಿ ವಾಸಿಸುತ್ತಿರುವವರು ಅವರಿಂದ ಪ್ರೇರಣೆ ಪಡೆಯಬೇಕು ಎಂದರು.

ಆದಿವಾಸಿಗಳಿಗೆ ಸ್ಥಳೀಯ ವಸ್ತುಗಳನ್ನು ಬಳಸಿಕೊಂಡು ನಾವಿನ್ಯಪೂರ್ಣ ಉತ್ಪನ್ನ ಮಾಡುವ ಕೌಶಲ ಇದೆ. ಈ ಉತ್ಪನ್ನಕ್ಕೆ ಭಾರೀ ಬೇಡಿಕೆಯೂ ಇದೆ ಮತ್ತು ಇದಕ್ಕೆ ಉತ್ತಮ ಮಾರುಕಟ್ಟೆ ದೊರಕಿಸಿದರೆ, ದೊಡ್ಡ ಆರ್ಥಿಕ ಅವಕಾಶವನ್ನೂ ಕಲ್ಪಿಸಬಹುದಾಗಿದೆ ಎಂದರು. ಬುಡಕಟ್ಟು ಸಮುದಾಯದವರ ಬದುಕಿನಲ್ಲಿ ಧನಾತ್ಮಕ ಬದಲಾವಣೆ ತಂದ ಹಲವು ಉದಾಹರಣೆಗಳನ್ನು ಪ್ರಧಾನಮಂತ್ರಿ ನೀಡಿದರು. ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು, ಭಾರತ ಸರ್ಕಾರದಲ್ಲಿ ಪ್ರಥಮ ಬಾರಿಗೆ ಬುಡಕಟ್ಟು ವ್ಯವಹಾರಗಳ ಸಚಿವಾಲಯ ರಚಿಸಿದರು ಎಂಬುದನ್ನು ಅವರು ಸ್ಮರಿಸಿದರು.

ಮೇಲೆ ಕೆಳಗೆ ಎನ್ನುವ ನಿಲುವಿನ ಮೂಲಕ ಬುಡಕಟ್ಟು ಸಮುದಾಯ ಬದಲಾವಣೆ ಕಾಣಲು ಸಾಧ್ಯವಿಲ್ಲ ಎಂದು ಪ್ರಧಾನಿ ಹೇಳಿದರು. ಅಭಿವೃದ್ಧಿಯ ಪ್ರಕ್ರಿಯೆಯಲ್ಲಿ ಬುಡಕಟ್ಟು ಜನರನ್ನು ನೈಜ ಬಾಧ್ಯಸ್ಥರನ್ನಾಗಿ ಮಾಡುವ ಅಗತ್ಯವಿದೆ ಎಂದು ಹೇಳಿದರು. ಈ ನಿಟ್ಟಿನಲ್ಲಿ ಒನ್ ಬಂಧು ಕಲ್ಯಾಣ ಯೋಜನೆಯನ್ನು ಅವರು ಪ್ರಸ್ತಾಪಿಸಿದರು.

ಅರಣ್ಯ ಸಂರಕ್ಷಣೆಯಲ್ಲಿ ಬುಡಕಟ್ಟು ಸಮುದಾಯದ ಪಾತ್ರಕ್ಕೆ ಪ್ರಧಾನಮಂತ್ರಿಯವರು ಅಭಿನಂದನೆ ಸಲ್ಲಿಸಿದರು. ನಮ್ಮ ಬಹುತೇಕ ನೈಸರ್ಗಿಕ ಸಂಪನ್ಮೂಲ ಮತ್ತು ಅರಣ್ಯ ಹಾಗೂ ಗುಡ್ಡಗಾಡು ಸಮುದಾಯ ಒಂದೇ ಕಡೆ ಕಾಣಲು ಸಿಗುತ್ತದೆ ಎಂದು ಹೇಳಿದರು. ಇಲ್ಲಿ ಸಂಪನ್ಮೂಲವನ್ನಷ್ಟೇ ಪಡೆದುಕೊಳ್ಳಬೇಕೇ ಹೊರತು ಬುಡಕಟ್ಟು ಜನರ ಶೋಷಣೆಗೆ ಅವಕಾಶ ನೀಡುವುದಿಲ್ಲ ಎಂದರು. ಕಳೆದ ಕೇಂದ್ರ ಬಜೆಟ್ ನಲ್ಲಿ ಪ್ರಸ್ತಾಪಿಸಿದ ಜಿಲ್ಲಾ ಖನಿಜ ಪ್ರತಿಷ್ಠಾನ, ಬುಡಕಟ್ಟು ಸಮುದಾಯದ ಅಭಿವೃದ್ಧಿಗೆ ಹಣಕಾಸಿನ ನೆರವನ್ನು ಚಾನಲೈಜ್ ಮಾಡಲು ಸಹಕಾರಿಯಾಗಿದೆ ಎಂದರು. ಈ ನಿರ್ಧಾರವು ಖನಿಜ ಶ್ರೀಮಂತವಾದ ಜಿಲ್ಲೆಗಳ ಅಭಿವೃದ್ಧಿಗೆ ದೊಡ್ಡ ಪ್ರಮಾಣದ ಹಣವನ್ನು ಹೊರತೆಗೆಯಲಿದೆ ಎಂದರು.

ಭೂಮಿಯೊಳಗಿನ ಗಣಿಗಾರಿಕೆ ಮತ್ತು ಕಲ್ಲಿದ್ದಲು ಅನಿಲೀಕರಣದಂಥಆಧುನಿಕ ತಂತ್ರಜ್ಞಾನ ಬಳಸಿಕೊಳ್ಳಲು ಸರ್ಕಾರ ಬದ್ಧವಾಗಿದ್ದು, ಇದು ಬುಡಕಟ್ಟು ನೆಲೆಗಳ ಮೇಲಿನ ತೊಂದರೆಗಳನ್ನು ಕಡಿಮೆ ಮಾಡಲಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಗ್ರಾಮೀಣ ಅಭಿವೃದ್ಧಿ ಕೇಂದ್ರಗಳ ಮೇಲೆ ಗಮನ ಹರಿಸಿರುವ ರುರ್ ಬನ್ ಮಿಷನ್ ಬಗ್ಗೆಯೂ ಪ್ರಧಾನಿ ಮಾತನಾಡಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Microsoft announces $3 bn investment in India after Nadella's meet with PM Modi

Media Coverage

Microsoft announces $3 bn investment in India after Nadella's meet with PM Modi
NM on the go

Nm on the go

Always be the first to hear from the PM. Get the App Now!
...
Prime Minister condoles demise of army veteran, Hav Baldev Singh (Retd)
January 08, 2025

The Prime Minister, Shri Narendra Modi has condoled the demise of army veteran, Hav Baldev Singh (Retd) and said that his monumental service to India will be remembered for years to come. A true epitome of courage and grit, his unwavering dedication to the nation will inspire future generations, Shri Modi further added.

The Prime Minister posted on X;

“Saddened by the passing of Hav Baldev Singh (Retd). His monumental service to India will be remembered for years to come. A true epitome of courage and grit, his unwavering dedication to the nation will inspire future generations. I fondly recall meeting him in Nowshera a few years ago. My condolences to his family and admirers.”