ತಮಿಳುನಾಡಿನ ರಾಜ್ಯಪಾಲರೇ,
ತಮಿಳುನಾಡು ಮುಖ್ಯಮಂತ್ರಿಯವರೇ,
ನನ್ನ ಸಚಿವ ಸಂಪುಟದ ಸಹೋದ್ಯೋಗಿಗಳೇ,
ತಮಿಳುನಾಡಿನ ಉಪ ಮುಖ್ಯಮಂತ್ರಿಯವರೇ,
ವೇದಿಕೆಯ ಮೇಲಿರುವ ಇತರ ಗೌರವಾನ್ವಿತರೇ,
ಮಹಿಳೆಯರೇ ಮತ್ತು ಮಹನೀಯರೇ
ಏಪ್ರಿಲ್ 14ರಂದು ಮುಂಬರುವ ತಮಿಳು ಹೊಸ ವರ್ಷ ವಿಳಂಬಿ ಸಂದರ್ಭದಲ್ಲಿ, ವಿಶ್ವಾದ್ಯಂತ ಇರುವ ಎಲ್ಲ ತಮಿಳು ಜನರಿಗೆ ನಾನು ನನ್ನ ಆತ್ಮೀಯ ಶುಭಾಶಯಗಳನ್ನು ಸಲ್ಲಿಸುತ್ತೇನೆ. ನಾನು ಅಡಿಯಾರ್ ಕ್ಯಾನ್ಸರ್ ಸಂಸ್ಥೆಯಲ್ಲಿರಲು ಸಂತೋಷಿಸುತ್ತೇನೆ. ಇದು ಭಾರತದ ಅತ್ಯಂತ ಹಳೆಯ ಮತ್ತು ಅತ್ಯಂತ ಮಹತ್ವದ ಸಮಗ್ರ ಕ್ಯಾನ್ಸರ್ ಚಿಕಿತ್ಸಾ ಕೇಂದ್ರವಾಗಿದೆ.
ಬದಲಾಗುತ್ತಿರುವ ಜೀವನ ಶೈಲಿ ಸಾಂಕ್ರಾಮಿಕವಲ್ಲದ ರೋಗಗಳ ಹೊರೆಗೆ ಪುಷ್ಟಿ ನೀಡುತ್ತಿವೆ. ಕೆಲವು ಅಂದಾಜುಗಳ ಪ್ರಕಾರ, ಸಾಂಕ್ರಾಮಿಕವಲ್ಲದ ರೋಗಗಳು ದೇಶದಲ್ಲಿನ ಒಟ್ಟು ಮರಣದ ಶೇಕಡ 60ರಷ್ಟಕ್ಕೆ ಕಾರಣವಾಗಿವೆ.
ಕೇಂದ್ರ ಸರ್ಕಾರ ದೇಶದ ವಿವಿಧ ಭಾಗಗಳಲ್ಲಿ 20 ರಾಜ್ಯ ಕ್ಯಾನ್ಸರ್ ಸಂಸ್ಥೆ ಮತ್ತು 50 ತೃತೀಯ ಚಿಕಿತ್ಸಾ ಕ್ಯಾನ್ಸರ್ ಕೇಂದ್ರಗಳನ್ನು ಸ್ಥಾಪಿಸಲು ಯೋಜಿಸಿದೆ. ತೃತೀಯ ಹಂತದ ಚಿಕಿತ್ಸಾ ಕ್ಯಾನ್ಸರ್ ಕೇಂದ್ರ ತೆರೆಯಲು ಅರ್ಹ ಸಂಸ್ಥೆಗಳಿಗೆ 45 ಕೋಟಿ ರೂಪಾಯಿಗಳವರೆಗೆ ಮತ್ತು ರಾಜ್ಯ ಕ್ಯಾನ್ಸರ್ ಸಂಸ್ಥೆ ಸ್ಥಾಪಿಸಲು 120 ಕೋಟಿ ರೂಪಾಯಿ ಪ್ರಸ್ತಾಪಗಳನ್ನು ಅನುಮೋದಿಸಲಾಗುತ್ತದೆ. ಈವರೆಗೆ 15 ರಾಜ್ಯ ಕ್ಯಾನ್ಸರ್ ಸಂಸ್ಥೆ ಮತ್ತು 20 ತೃತೀಯ ಹಂತದ ಚಿಕಿತ್ಸಾ ಕ್ಯಾನ್ಸರ್ ಕೇಂದ್ರ ತೆರೆಯುವ ಪ್ರಸ್ತಾಪಕ್ಕೆ ಅನುಮೋದನೆ ನೀಡಲಾಗಿದೆ ಎಂದು ತಿಳಿಸಲು ನಾನು ಸಂತೋಷ ಪಡುತ್ತೇನೆ. ಗ್ರಂಥಿ ವಿಜ್ಞಾನದ ಮತ್ತು ಅದರ ಇತರ ಅಂಶಗಳ ಮೇಲೆ ಗಮನ ಹರಿಸಿ 14 ಹೊಸ ಅಖಿಲ ಭಾರತ ವೈದ್ಯಕೀಯ ವಿಜ್ಞಾನಗಳ ಸಂಸ್ಥೆಗಳನ್ನು ಸ್ಥಾಪಿಸಲಾಗಿದೆ.
ಪ್ರಧಾನಮಂತ್ರಿ ಆರೋಗ್ಯ ಸುರಕ್ಷಾ ಯೋಜನೆಯಡಿ 8 ಹಾಲಿ ಸಂಸ್ಥೆಗಳನ್ನು ಗ್ರಂಥಿ ಸೇವೆಗಳ ಅವಕಾಶದೊಂದಿಗೆ ಮೇಲ್ದರ್ಜೆಗೇರಿಸಲಾಗಿದೆ. ರಾಷ್ಟ್ರೀಯ ಆರೋಗ್ಯ ನೀತಿ 2017, ರೋಗ ತಡೆ ಆರೋಗ್ಯ ಸೇವೆಯ ಮಹತ್ವವನ್ನು ಒತ್ತಿ ಹೇಳುತ್ತದೆ.
ಸಮಗ್ರ ಪ್ರಾಥಮಿಕ ಆರೋಗ್ಯ ಆರೈಕೆ ಅಂಶಗಳ ಆಯುಷ್ಮಾನ್ ಭಾರತದ ಅಡಿಯಲ್ಲಿ, ನಾವು ಪ್ರಾಥಮಿಕ ರಕ್ಷಣೆ ಮಟ್ಟದಲ್ಲಿ ಜನರಿಗೆ ಅವರ ಮನೆಗಳ ಸಮೀಪವೇ ರೋಗ ತಡೆ ಮತ್ತು ಚಿಕಿತ್ಸಕ ಸೇವೆಗಳನ್ನು ಒದಗಿಸಲಿದ್ದೇವೆ.
ನಾವು ಸಾಮಾನ್ಯ ಸಾಂಕ್ರಾಮಿಕವಲ್ಲದ ರೋಗಗಳ ಅಂದರೆ ಮಧುಮೇಹ, ಅತಿ ಒತ್ತಡ ಮತ್ತು ಸಾಮಾನ್ಯ ಕ್ಯಾನ್ಸರ್ ನಿರ್ವಹಣೆ, ನಿಯಂತ್ರಣ, ತಪಾಸಣೆಗೆ ಜನಸಂಖ್ಯೆ ಆಧಾರಿತ ಉಪಕ್ರಮ ಕೈಗೊಂಡಿದ್ದೇವೆ.
ಆಯುಷ್ಮಾನ್ ಭಾರತ ಪ್ರಧಾನಮಂತ್ರಿ ರಾಷ್ಟ್ರೀಯ ಆರೋಗ್ಯ ಸಂರಕ್ಷಣೆ ಅಭಿಯಾನವನ್ನೂ ಒಳಗೊಂಡಿದೆ.
ಇದು 10 ಕೋಟಿ ಕುಟುಂಬಗಳಿಗೆ ಅನ್ವಯಿಸುತ್ತದೆ. ಅಂದರೆ ಅಂದಾಜು 50 ಕೋಟಿ ಜನರು ಈ ಅಭಿಯಾನದ ಪ್ರಯೋಜನ ಪಡೆಯಲಿದ್ದಾರೆ. ಈ ಯೋಜನೆ ಅಡಿ ಪ್ರತಿಯೊಂದು ಕುಟುಂಬಕ್ಕೆ ಆಸ್ಪತ್ರೆ ಸೇರಿದಾಗ ಮಾಧ್ಯಮಿಕ ಮತ್ತು ತೃತೀಯ ಹಂತದ ಚಿಕಿತ್ಸೆಗೆ ಪ್ರತಿವರ್ಷ 5 ಲಕ್ಷ ರೂಪಾಯಿಗಳವರೆಗಿನ ಆರೋಗ್ಯ ವಿಮೆಲಭಿಸುತ್ತದೆ.
ಇದು ಸರ್ಕಾರದ ಆರ್ಥಿಕ ನೆರವಿನ ಅತಿ ದೊಡ್ಡ ಆರೋಗ್ಯ ರಕ್ಷಣೆ ಕಾರ್ಯಕ್ರಮವಾಗಿದೆ. ಈ ಯೋಜನೆಯ ಪ್ರಯೋಜನಗಳು ದೇಶಾದ್ಯಂತಪಸರಿಸಿರುತ್ತದೆ. ಜನರು ಸಾರ್ವಜನಿಕ ಮತ್ತು ಪಟ್ಟಿ ಮಾಡಲಾದ ಖಾಸಗಿ ಆಸ್ಪತ್ರೆಗಳ ಸೇವಾ ಸೌಲಭ್ಯ ಪಡೆಯಬಹುದು. ಈ ಯೋಜನೆ ಆರೋಗ್ಯಕ್ಕಾಗಿ ಮಾಡುವ ವೆಚ್ಚದ ಹೊರೆ ತಗ್ಗಿಸುವ ಇಂಗಿತ ಹೊಂದಿದೆ.
ಕ್ಯಾನ್ಸರ್ ನಂಥ ರೋಗಗಳನ್ನು ತಡೆಯಲು, ನಿಯಂತ್ರಿಸಲು ಮತ್ತು ನಿರ್ವಹಿಸಲು ನಮಗೆ ಎನ್.ಜಿ.ಓ. ಮತ್ತು ಖಾಸಗಿ ವಲಯ ಸೇರಿದಂತೆ ಸಮಾಜದ ಎಲ್ಲ ವರ್ಗಗಳ ಕ್ರಮದ ಅಗತ್ಯವಿದೆ.
ಚೆನ್ನೈನ ಡಬ್ಲ್ಯು.ಐ.ಎ. ಕ್ಯಾನ್ಸರ್ ಸಂಸ್ಥೆ, ಡಾ. ಮುತ್ತುಲಕ್ಷ್ಮೀ ರೆಡ್ಡಿ ಅವರ ಪ್ರೇರಣಾತ್ಮಕ ನಾಯಕತ್ವದಲ್ಲಿ ಮಹಿಳಾ ಸಾಮಾಜಿಕ ಕಾರ್ಯಕರ್ತರ ಒಂದು ಗುಂಪು ಸ್ಥಾಪಿಸಿದ ಒಂದು ಸ್ವಯಂ ದತ್ತಿ ಸಂಸ್ಥೆಯಾಗಿದೆ.
ಈ ಸಂಸ್ಥೆ ಒಂದು ಸಣ್ಣ ಗುಡಿಸಿಲು ಆಸ್ಪತ್ರೆಯಲ್ಲಿ ಆರಂಭವಾಯಿತು. ಇದು ದಕ್ಷಿಣ ಭಾರತದ ಪ್ರಥಮ ಕ್ಯಾನ್ಸರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿದೆ. ಇಂದು ಸಂಸ್ಥೆಯಲ್ಲಿ 500 ಹಾಸಿಗೆಗಳ ಕ್ಯಾನ್ಸರ್ ಆಸ್ಪತ್ರೆಯಿದೆ. ಇವುಗಳಲ್ಲಿ ಶೇ.30ರಷ್ಟು ಉಚಿತ ಎಂದು ನನಗೆ ತಿಳಿಸಲಾಗಿದೆ ಅಂದರೆ ಇಲ್ಲಿ ರೋಗಿಗಳಿಗೆ ಹಣದ ಹೊರೆ ಬೀಳುವುದಿಲ್ಲ.
ಸಂಸ್ಥೆ ಆಣ್ವಿಕ ಗ್ರಂಥಿ ಇಲಾಖೆಯನ್ನು 2007 ರಲ್ಲಿ ಕೇಂದ್ರ ಸರ್ಕಾರದ “ಅತ್ಯುತ್ಕೃಷ್ಟತಾ ಕೇಂದ್ರ” ಎಂದು ಹೆಸರಿಸಿತು. ಇದು 1984ರಲ್ಲಿ ಸ್ಥಾಪನೆಯಾದ ಮೊದಲ ಸೂಪರ್ ಸ್ಪೆಷಾಲಿಟಿ ಕಾಲೇಜಾಗಿದೆ. ಈ ಅಭಿವೃದ್ಧಿಯ ಪ್ರವರ್ತಕತೆ, ಮುಂಚೂಣಿಯಲ್ಲಿದೆ ಮತ್ತು ಅಭಿನಂದನಾರ್ಹ ಸಾಧನೆಗಳಾಗಿವೆ.
ಡಾ. ಶಾಂತಾ ಅವರು ತಮ್ಮ ಆರಂಭಿಕ ಭಾಷಣದಲ್ಲಿ, ಸಂಸ್ಥೆ ಎದುರಿಸಿದ ಹಲವು ಕಷ್ಟಗಳ ಬಗ್ಗೆ ಹೇಳಿದರು. ನಾವು ಅವುಗಳ ಬಗ್ಗೆ ಗಮನ ಹರಿಸುತ್ತೇವೆ ಎಂಬ ಆಶ್ವಾಸನೆ ನೀಡುತ್ತೇನೆ ಮತ್ತು ಏನು ಮಾಡಲು ಸಾಧ್ಯ ಎಂಬ ಬಗ್ಗೆ ಗಮನ ಹರಿಸಲು ತಮಿಳುನಾಡು ಮುಖ್ಯಮಂತ್ರಿಗಳಿಗೆ ಕೇಳಿಕೊಳ್ಳುತ್ತೇನೆ. ಕೊನೆಯದಾಗಿ, ನಾನು ಕಳೆದ ಕೆಲವು ದಿನಗಳಿಂದ ಕೆಲವು ಸ್ವಹಿತಾಸಕ್ತಿಗಳು ಎತ್ತಿರುವ ವಿಷಯ ಪ್ರಸ್ತಾಪಿಸಲು ಇಚ್ಛಿಸುತ್ತೇನೆ.
ಕೆಲವು ರಾಜ್ಯಗಳ ಅಥವಾ ನಿರ್ದಿಷ್ಟ ವಲಯದ ವಿರುದ್ಧ ಪಕ್ಷಪಾತದಿಂದ ಕೂಡಿದೆ ಎಂದು 15ನೇ ಹಣಕಾಸು ಆಯೋಗದ ಉಲ್ಲೇಖಿತ ನಿಯಮಾವಳಿಗಳ ಬಗ್ಗೆ ಆಧಾರರಹಿತ ಆರೋಪ ಮಾಡಲಾಗುತ್ತಿದೆ. ನಾನು ನಿಮಗೆ ಕೆಲವೊಂದು ವಿಷಯ ಹೇಳಲು ಬಯಸುತ್ತೇನೆ, ನಮ್ಮ ಟೀಕಾಕಾರರು ಎಲ್ಲೋ ಕಾಣೆಯಾಗಿದ್ದಾರೆ. ಕೇಂದ್ರ ಸರ್ಕಾರ ಹಣಕಾಸು ಆಯೋಗಕ್ಕೆ, ಜನಸಂಖ್ಯಾ ನಿಯಂತ್ರಣಕ್ಕೆ ಶ್ರಮಿಸಿದ ರಾಜ್ಯಗಳಿಗೆ ಪ್ರೋತ್ಸಾಹಕ ನೀಡುವ ಕುರಿತು ಪರಿಗಣಿಸಿ ಎಂದು ಹೇಳಿದೆ. ಈ ಮಾನದಂಡ, ಜನಸಂಖ್ಯಾ ನಿಯಂತ್ರಣಕ್ಕೆ ಸಾಕಷ್ಟು ಸಂಪನ್ಮೂಲ, ಪ್ರಯತ್ನ ಮತ್ತು ಶಕ್ತಿ ಹಾಕಿದ ತಮಿಳುನಾಡಿನಂಥ ರಾಜ್ಯಕ್ಕೆ ಖಂಡಿತಾ ಪ್ರಯೋಜನವಾಗಲಿದೆ. ಇದು ಈ ಹಿಂದೆ ಇರಲಿಲ್ಲ.
ಸ್ನೇಹಿತರೆ,
ಕೇಂದ್ರ ಸರ್ಕಾರ ಸಹಕಾರ ಒಕ್ಕೂಟ ವ್ಯವಸ್ಥೆಗೆ ಬದ್ಧವಾಗಿದೆ. ನಮ್ಮ ಮಂತ್ರ ಎಲ್ಲರೊಂದಿಗೆ ಎಲ್ಲರ ವಿಕಾಸ ಎಂಬುದಾಗಿದೆ. ನಾವೆಲ್ಲರೂ ನವ ಭಾರತದ ನಿರ್ಮಾಣಕ್ಕೆ ಶ್ರಮಿಸೋಣ, ಅದು ನಮ್ಮ ಸ್ವಾತಂತ್ರ್ಯ ಯೋಧರು ಹೆಮ್ಮೆ ಪಡುವಂತೆ ಮಾಡುತ್ತದೆ.
ಧನ್ಯವಾದಗಳು,
ತುಂಬಾ ತುಂಬಾ ಧನ್ಯವಾದಗಳು.
A baseless allegation is being made about the Terms of Reference of the 15th Finance Commission, being biased against certain states or a particular region: PM
— PMO India (@PMOIndia) April 12, 2018
The Union Government has suggested to the Finance Commission to consider incentivizing States who have worked on population control. Thus, a state like Tamil Nadu, which has devoted a lot of effort, energy and resources towards population control would certainly benefit: PM
— PMO India (@PMOIndia) April 12, 2018