We live in an era in which connectivity is all important: PM Modi
Governance cannot happen when the dominant thought process begins at 'Mera Kya' and ends at 'Mujhe Kya’: PM Modi
Atal Bihari Vajpayee Ji is the 'Bharat Marg Vidhata.' He has shown us the way towards development: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ನೋಯಿಡಾ ಮತ್ತು ದೆಹಲಿ ನಡುವಿನ ಹೊಸ ಮೆಟ್ರೋ ಸಂಪರ್ಕವನ್ನು ಉದ್ಘಾಟಿಸಿದರು. ನೋಯಿಡಾದ ಸಸ್ಯೋದ್ಯಾನ ಮತ್ತು ದಕ್ಷಿಣ ದೆಹಲಿಯ ಕಾಳಿಕಾ ಮಂದಿರ ಸಂಪರ್ಕಿಸುವ ದೆಹಲಿ ಮೆಟ್ರೋದ ನೇರಳೆ ವರ್ಣದ ಮಾರ್ಗದ ಉದ್ಘಾಟನೆ ಅಂಗವಾಗಿ ಬಟಾನಿಕಲ್ ಗಾರ್ಡನ್ ಮೆಟ್ರೋ ನಿಲ್ದಾಣದಲ್ಲಿ ಅವರು ಫಲಕ ಅನಾವರಣ ಮಾಡಿದರು. ಸಾರ್ವಜನಿಕ ಸಭೆಯ ಸ್ಥಳಕ್ಕೆ ಗಮಿಸುವ ಮುನ್ನ ಮೆಟ್ರೋ ರೈಲಿನಲ್ಲಿ ಅವರು ಸ್ವಲ್ಪದೂರ ಪ್ರಯಾಣ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಿ, ಕ್ರಿಸ್ಮಸ್ ಸಂದರ್ಭದಲ್ಲಿ ಜನತೆಗೆ ಶುಭಾಶಯ ಸಲ್ಲಿಸಿದರು. ಈ ದಿನ ಭಾರತರತ್ನ ಪುರಸ್ಕೃತರಾದ ಪಂಡಿತ್ ಮದನ್ ಮೋಹನ ಮಾಳವೀಯ ಮತ್ತು ಮಾಜಿ ಪ್ರಧಾನಿ ವಾಜಪೇಯಿ ಅವರ ಜನ್ಮದಿನವೂ ಆಗಿದೆ ಎಂದು ಉಲ್ಲೇಖಿಸಿದರು.

ಉತ್ತರ ಪ್ರದೇಶದ ಜನತೆ ಸ್ಥಿರ ಮತ್ತು ದೃಢ ಸರ್ಕಾರ ಹೊಂದಿದ್ದಾರೆ ಎಂದು ಅವರು ಹೇಳಿದರು. ಉತ್ತರ ಪ್ರದೇಶದ ಜನತೆಯ ಮಮಕಾರಕ್ಕೆ ತಾವು ಸದಾ ಋಣಿಯಾಗಿರುವುದಾಗಿ ಹೇಳಿದರು.

ಸಂಪರ್ಕ ಸಂಪೂರ್ಣ ಮಹತ್ವದ್ದಾಗಿರುವ ಯುಗದಲ್ಲಿ ನಾವು ಜೀವಿಸುತ್ತಿದ್ದೇವೆ ಎಂದ ಅವರು, ಇಂದು ಉದ್ಘಾಟಿಸಲಾದ ಮೆಟ್ರೋ ಮಾರ್ಗ ಹಾಲಿ ಅಷ್ಟೇ ಅಲ್ಲ ಮುಂದಿನ ಪೀಳಿಗೆಗೂ ಸೇವೆ ಒದಗಿಸಲಿದೆ ಎಂದರು. ಭಾರತ 75ನೇ ಸ್ವಾತಂತ್ರ್ಯೋತ್ಸವ ಆಚರಿಸುವ 2022ರ ಹೊತ್ತಿಗೆ ನಾವು ಪೆಟ್ರೋಲ್ ಆಮದು ಕಡಿಮೆ ಇರುವ ಭಾರತದಲ್ಲಿ ಜೀವಿಸುವ ಕನಸನ್ನು ತಾವು ಕಾಣುತ್ತಿರುವುದಾಗಿ ಹೇಳಿದರು. ಇದರ ಸಾಧನೆಗಾಗಿ ಅತ್ಯಾಧುನಿಕ ಸಮೂಹ ಸಾರಿಗೆ ವ್ಯವಸ್ಥೆ ಈ ಹೊತ್ತಿನ ಅಗತ್ಯವಾಗಿದೆ ಎಂದು ಹೇಳಿದರು. 2002ರ ಡಿಸೆಂಬರ್ ನಲ್ಲಿ ಅಂದಿನ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದರು, ಅಲ್ಲಿಂದ ರಾಷ್ಟ್ರರಾಜಧಾನಿಯಲ್ಲಿ ಮೆಟ್ರೋ ರೈಲು ಜಾಲ ಗಣನೀಯವಾಗಿ ವಿಸ್ತರಣೆಯಾಗಿದೆ ಎಂದರು.  

ಮೇರಾ ಕ್ಯಾನಿಂದ ಆರಂಭವಾಗಿ ಮುಜೆ ಕ್ಯಾನಲ್ಲಿ ಕೊನೆಗೊಳ್ಳುವ ಪ್ರಭಾವಿ ಚಿಂತನಾ ಪ್ರಕ್ರಿಯೆಯಿಂದ ಆಡಳಿತ ಸಾಗಲು ಸಾಧ್ಯವಿಲ್ಲ ಎಂದು ಪ್ರಧಾನಿ ಪ್ರತಿಪಾದಿಸಿದರು. ಈ ಮನೋಸ್ಥಿತಿ ಈಗ ಬದಲಾಗಿದೆ ಎಂದರು. ಕೇಂದ್ರ ಸರ್ಕಾರಕ್ಕೆ ಅದರ ನಿರ್ಧಾರಗಳು ದೇಶದ ಹಿತಕ್ಕಾಗಿಯೇ ಹೊರತು ರಾಜಕೀಯ ಲಾಭಕ್ಕಲ್ಲ ಎಂದರು.

ಈ ಹಿಂದಿನ ಸರ್ಕಾರಗಳು ಹೊಸ ಕಾನೂನು ಮಾಡುವುದರಲ್ಲಿ ಹೆಮ್ಮೆ ಪಡುತ್ತಿದ್ದವು. ಆದರೆ ಹಾಲಿ ಸರ್ಕಾರ, ಹಳೆಯ ಅನುಪಯುಕ್ತ ಕಾನೂನುಗಳನ್ನು ತೆಗೆದುಹಾಕುವ ಸರ್ಕಾರವಾಗಲು ಬಯಸುತ್ತದೆ ಎಂದರು. ನಿರ್ಧಾರ ಕೈಗೊಳ್ಳುವಾಗ ಅಡ್ಡಿಯಾಗುವ ಹಳೆಯ ಕಾಯಿದೆಗಳಿದ್ದರೆ ಆಗ ಉತ್ತಮ ಆಡಳಿತ ನಡೆಯುವುದಿಲ್ಲ ಎಂದರು.

ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಉತ್ತಮ ಆಡಳಿತದತ್ತ ಗಮನ, ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯುತ್ತಿದೆ ಎಂದು ಅವರನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ನೋಯಿಡಾಗೆ ಆಗಮಿಸುವುದರೊಂದಿಗೆ ಈ ನಗರದೊಂದಿಗೆ ಅಂಟಿಕೊಂಡಿದ್ದ ಮೂಢನಂಬಿಕೆಯನ್ನು ಕೊನೆಗಾಣಿಸಿದ ಅವರನ್ನು ಪ್ರಧಾನಿ ಶ್ಲಾಘಿಸಿದರು. ಯಾವುದೇ ಮುಖ್ಯಮಂತ್ರಿ ತನ್ನ ಪದವಿ ಹೋಗುತ್ತದೆ ಎಂದು ಯಾವುದೇ ಸ್ಥಳಕ್ಕೆ ಭೇಟಿ ನೀಡುವುದಿಲ್ಲ ಎನ್ನುವುದಾದರೆ, ಅವರು ಮುಕ್ಯಮಂತ್ರಿಯಾಗಲು ಅರ್ಹರಲ್ಲ ಎಂದು ಪ್ರಧಾನಿ ಹೇಳಿದರು.

ರೈಲು ಮೂಲಸೌಕರ್ಯ, ರಸ್ತೆ ಜಾಲ ವಿಸ್ತರಣೆಯಲ್ಲಿ ಆಗಿರುವ ಕಾರ್ಯಗಳು ಮತ್ತು ನವೀಕರಿಸಬಹುದಾದ ಇಂಧನ ವಲಯದಲ್ಲಿನ ಹೆಜ್ಜೆಗಳ ಬಗ್ಗೆ ಪ್ರಸ್ತಾಪಿಸಿದರು.  ಆಟಲ್ ಬಿಹಾರಿ ವಾಜಪೇಯಿ ಅವರನ್ನು ಭಾರತ್ ಮಾರ್ಗ್ ವಿಧಾತ ಎಂದು ಬಣ್ಣಿಸಿ, ಅವರು ನಮಗೆ ಅಭಿವೃದ್ಧಿಯ ದಾರಿ ತೋರಿದರು ಎಂದರು.

ಇದಕ್ಕೂ ಮುನ್ನ ಮಾತನಾಡಿದ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಪ್ರಧಾನಿಯವರನ್ನು ಪ್ರಸಂಸಿಸಿ, ಅವರು ದೇಶಕ್ಕೆ ಹಾಗೂ ರಾಜಕೀಯಕ್ಕೆ ಹೊಸ ಅರ್ಥ ನೀಡಿದ್ದಾರೆ ಎಂದರು. ಪ್ರಧಾನಿಯವರು ನಾವು ಅಭಿವೃದ್ಧಿಯ ಪಥದಲ್ಲಿ ಸಾಗಬೇಕು ಎಂದು ಸದಾ ಹೇಳುತ್ತಿರುತ್ತಾರೆ ಎಂದರು.

Click here to read the full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
'You Are A Champion Among Leaders': Guyana's President Praises PM Modi

Media Coverage

'You Are A Champion Among Leaders': Guyana's President Praises PM Modi
NM on the go

Nm on the go

Always be the first to hear from the PM. Get the App Now!
...
PM Modi congratulates hockey team for winning Women's Asian Champions Trophy
November 21, 2024

The Prime Minister Shri Narendra Modi today congratulated the Indian Hockey team on winning the Women's Asian Champions Trophy.

Shri Modi said that their win will motivate upcoming athletes.

The Prime Minister posted on X:

"A phenomenal accomplishment!

Congratulations to our hockey team on winning the Women's Asian Champions Trophy. They played exceptionally well through the tournament. Their success will motivate many upcoming athletes."