Quote2022 ರ ಹೊತ್ತಿಗೆ ಪ್ರತಿ ಭಾರತೀಯರಿಗೆ ಪಕ್ಕ ಮನೆ ಹೊಂದಿರಬೇಕೆಂದು ನನ್ನ ಕನಸು: ಪ್ರಧಾನಿ ಮೋದಿ
Quote2019-2020 ನಿರ್ಮಾಣ ತಂತ್ರಜ್ಞಾನದ ವರ್ಷ ಎಂದು ಘೋಷಿಸಿದ್ದಾರೆ ಪ್ರಧಾನಿ ಮೋದಿ
Quoteಮನೆ ಕೇವಲ ಗೋಡೆಗಳು ಮಾತ್ರವಲ್ಲ, ಕನಸಿನ ಶಕ್ತಿ ಮತ್ತು ಆಕಾಂಕ್ಷೆಗಳನ್ನು ಪೂರೈಸುವ ಸ್ಥಳವಾಗಿದೆ ಎಂದು ಮೋದಿ ಹೇಳಿದ್ದಾರೆ
Quoteಮನೆಗಳ ಗುಣಮಟ್ಟ ಮತ್ತು ಪ್ರತಿ ಮನೆಗೆ ಸ್ಥಳಾವಕಾಶ ಕಳೆದ ನಾಲ್ಕು ವರ್ಷಗಳಲ್ಲಿ ಸುಧಾರಣೆಯಾಗಿದೆ: ಪ್ರಧಾನಿ ಮೋದಿ #PradhanMantriAwasYojana
Quoteನಮ್ಮ ಸರಕಾರವು 1.3 ಕೋಟಿ ಮನೆಗಳನ್ನು ನಿರ್ಮಿಸಿದೆ ಮತ್ತು ಹಿಂದಿನ ಸರಕಾರವು 25 ಲಕ್ಷ ಮನೆಗಳನ್ನು ಮಾತ್ರ ನಿರ್ಮಿಸಿದೆ: ಪ್ರಧಾನಿ ಮೋದಿ #PradhanMantriAwasYojana

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೊದಿ ಅವರು ಇಂದು ವಿಜ್ಞಾನ ಭವನದಲ್ಲಿ ಆಯೋಜನೆ ಆಗಿರುವ ಕನ್ಸ್ಟ್ರ್ ಕ್ಷನ್ ಟೆಕ್ನಾಲಜಿ ಇಂಡಿಯಾ (ನಿರ್ಮಾಣ ತಂತ್ರಜ್ಞಾನ ಭಾರತ) ಕಾರ್ಯಕ್ರಮ 2019 ರಲ್ಲಿ ಭಾಗವಹಿಸಿ ಮಾತನಾಡಿದರು.

|

ಕೇಂದ್ರ ಸರಕಾರದ ಬದ್ದತೆಯಿಂದಾಗಿ ಪ್ರತೀ ಕುಟುಂಬವೂ ಮನೆ ಹೊಂದುವ ಕನಸು ನನಸಾಗುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

 

ಭಾರತದಲ್ಲಿ ತ್ವರಿತಗತಿಯಿಂದ ನಡೆಯುತ್ತಿರುವ ನಗರೀಕರಣದಿಂದಾಗಿ ಜಾಗತಿಕ ವಸತಿ ತಂತ್ರಜ್ಞಾನ ಸವಾಲು ಅವಶ್ಯವಾಯಿತು ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಪ್ರಧಾನ ಮಂತ್ರಿ ಆವಾಸ್ ಯೋಜನಾ, ಹೃದಯ್, ಮತ್ತು ಅಮೃತ್ ಸಹಿತ ಹಲವು ಯೋಜನೆಗಳ ಅಂಶಗಳು ವಸತಿ ಕ್ಷೇತ್ರವನ್ನು ಪರಿವರ್ತಿಸುವ ಧೋರಣೆಯನ್ನು ಹೊಂದಿವೆ ಎಂದ ಅವರು ವಿವಿಧ ಭೌಗೋಳಿಕ ಪರಿಸ್ಥಿತಿಗಳಿಗೆ ತಂತ್ರಜ್ಞಾನವನ್ನು ಅಳವಡಿಸಿಕೊಳ್ಳುವುದು ಕೂಡಾ ಒಂದು ಸವಾಲಾಗಿದೆ ಎಂದರು.

|

ಕೈಗೆಟಕುವ ದರದಲ್ಲಿ ಮನೆ ನಿರ್ಮಾಣ, ರಿಯಲ್ ಎಸ್ಟೇಟ್ ವಲಯ , ಕೌಶಲ್ಯ ಅಭಿವೃದ್ದಿ ಮತ್ತು ವಸತಿ ತಂತ್ರಜ್ಞಾನಕ್ಕೆ ಸಂಬಂಧಿಸಿ ಬಹಳ ಒತ್ತು ನೀಡಲಾಗಿದೆ ಎಂದೂ ಪ್ರಧಾನಮಂತ್ರಿ ಅವರು ಹೇಳಿದರು.

|

2022 ರೊಳಗಾಗಿ ಪ್ರತೀ ಭಾರತೀಯರೂ ಸರಿಯಾದ ವಸತಿ ಹೊಂದಿರಬೇಕು ಎಂಬ ತಮ್ಮ ಕನಸನ್ನು ಪುನರುಚ್ಚರಿಸಿದ ಪ್ರಧಾನಮಂತ್ರಿ ಅವರು ತಮ್ಮ ಅವಧಿಯಲ್ಲಿ 1.3 ಕೋಟಿ ಮನೆಗಳನ್ನು ನಿರ್ಮಿಸಲಾಗಿದೆ ಎಂದರು. ಬಡವರಿಗೆ ಸಹಾಯ ಮಾಡಲು ಮತ್ತು ಸಾಮರ್ಥ್ಯ್ವನ್ನು ವರ್ಧಿಸಲು ಪ್ರತಿಯೊಬ್ಬರೂ ಒಗ್ಗೂಡಿ ಕೆಲಸ ಮಾಡಬೇಕು ಎಂದವರು ಕರೆ ನೀಡಿದರು.

|

ತೆರಿಗೆ ಮತ್ತು ಇತರ ಪ್ರೋತ್ಸಾಹಧನದ ಮೂಲಕ ಜನರು ಮನೆಗಳನ್ನು ಖರೀದಿಸುವುದನ್ನು ಸರಕಾರ ಸರಳಗೊಳಿಸುತ್ತಿದೆ ಎಂದು ಹೇಳಿದ ಪ್ರಧಾನಮಂತ್ರಿ ಅವರು ರಿಯಲ್ ಎಸ್ಟೇಟ್ (ನಿಯಂತ್ರಣ ಮತ್ತು ಅಭಿವೃದ್ದಿ ) ಕಾಯ್ದೆ (ರೇರಾ) ಯು ಡೆವಲಪರ್ ಗಳಲ್ಲಿ ಬಳಕೆದಾರರ ವಿಶ್ವಾಸವನ್ನು ವೃದ್ದಿಸಿದೆ ಮತ್ತು ರಿಯಲ್ ಎಸ್ಟೇಟ್ ವಲಯದಲ್ಲಿ ಪಾರದರ್ಶಕತೆಯನ್ನು ತಂದಿದೆ ಎಂದರು.

|

ವಿಶೇಷವಾಗಿ ಗ್ರಾಮೀಣ ಪ್ರದೇಶಗಳಲ್ಲಿ ಕೌಶಲ್ಯಯುಕ್ತ ಮಾನವ ಸಂಪನ್ಮೂಲದ ಬೃಹತ್ ಸಮೂಹವನ್ನು ಸೃಜಿಸಲಾಗಿದೆ. ನಿರ್ಮಾಣ ಕ್ಷೇತ್ರದಲ್ಲೀಗ ವಿಪತ್ತು ಸ್ಥಿತಿಸ್ಥಾಪಕತ್ವಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ , ಇಂಧನ ದಕ್ಷತೆ ಮತ್ತು ಸ್ಥಳೀಯ ಅನ್ವೇಷಣೆಗೂ ಪ್ರಾಧಾನ್ಯತೆ ಸಲ್ಲುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

|

 

|

 

|

ಜಾಗತಿಕ ಮನೆ ತಂತ್ರಜ್ಞಾನ ಸವಾಲು ; ಭಾರತದ ನಿರ್ಮಾಣ ಪರಿಸರ ವ್ಯವಸ್ಥೆಯನ್ನು ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ಸರಿದೂಗುವಂತೆ ಎತ್ತರಿಸಲು ವೇದಿಕೆಯಾಗಲಿದೆ ಎಂದು ನುಡಿದ ಪ್ರಧಾನಮಂತ್ರಿ ಅವರು 2019 ರ ಏಪ್ರಿಲ್ ನಿಂದ 2020 ರ ಮಾರ್ಚ್ ವರೆಗಿನ ಅವಧಿಯನ್ನು ನಿರ್ಮಾಣ ತಂತ್ರಜ್ಞಾನ ವರ್ಷವನ್ನಾಗಿ ಆಚರಿಸಲಾಗುವುದೆಂದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Over 28 lakh companies registered in India: Govt data

Media Coverage

Over 28 lakh companies registered in India: Govt data
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 19 ಫೆಬ್ರವರಿ 2025
February 19, 2025

Appreciation for PM Modi's Efforts in Strengthening Economic Ties with Qatar and Beyond