Farmers are the ones, who take the country forward: PM Modi
PM Modi reiterates Government’s commitment to double the income of farmers by 2022
PM Modi emphasizes the need to evolve new technologies and ways that will help eliminate the need for farmers to burn crop stubble
ಕೃಷಿ ಕುಂಭ ದಲ್ಲಿ ನೆರೆದಿರುವ ಕೃಷಿಕರು ತಮ್ಮ ಕೃಷಿಕ್ಷೇತ್ರಗಳಲ್ಲಿ ನೂತನ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳುತ್ತಾರೆ ಮತ್ತು ಉತ್ತಮ ಅವಕಾಶ ಸೃಷ್ಠಿಸಿಕೊಳ್ಳುತ್ತಾರೆ ಎಂಬ ವಿಶ್ವಾಸವನ್ನು ಪ್ರಧಾನಮಂತ್ರಿ ವ್ಯಕ್ತಪಡಿಸಿದರು.
ಧಾನ್ಯಗಳ ಸಂಗ್ರಹಣೆಯಲ್ಲಿ ಗಣನೀಯ ವದ್ಧಿಯ ನಿಟ್ಟಿನಲ್ಲಿ ಉತ್ತರ ಪ್ರದೇಶ ಸರಕಾರದ ಪ್ರಯತ್ನಗಳನ್ನು ಪ್ರಧಾನಮಂತ್ರಿ ಅವರು ಪ್ರಶಂಶಿಸಿದರು. ಕೃಷಿಕರು, ನಮ್ಮ ದೇಶವನ್ನು ಮುನ್ನಡೆಸುವವರಾಗಿದ್ದಾರೆ, ಕೃಷಿಕರ ಸಂಪಾದನೆಯನ್ನು 2022ನೇ ಇಸವಿಯಾಗುಷ್ಟರಲ್ಲಿ ದ್ವಿಗುಣಗೊಳಿಸುವ ನಿಟ್ಟಿನಲ್ಲಿ ಕೇಂದ್ರ ಸರಕಾರ ಬದ್ಧವಾಗಿದೆ. ಕೃಷಿಯ ವೆಚ್ಚಗಳಲ್ಲಿ ಕಡಿತ ಮತ್ತು ಕೃಷಿಯ ಲಾಭ ವರ್ಧನೆಗೆ ಸರಕಾರವು ಹಲವಾರು ಸರಣಿ ಹೆಜ್ಜೆಗಳನ್ನಿಟ್ಟಿದೆ ಎಂದು ಪ್ರಧಾನಮಂತ್ರಿ ಅವರು ಈ ಸಂದರ್ಭದಲ್ಲಿ ಹೇಳಿದರು. ಶೀಘ್ರದಲ್ಲೇ ಬೃಹತ್ ಸಂಖ್ಯೆಯಲ್ಲಿ ದೇಶದಾದ್ಯಂತ ಕೃಷಿಗಾಗಿ ಸೌರಶಕ್ತಿ ಪಂಪ್ ಗಳನ್ನು ಅನುಷ್ಠಾನಗೊಳಿಸಲಾಗುವುದು ಎಂದು ಪ್ರಧಾನಮಂತ್ರಿ ಹೇಳಿದರು. ವಿಜ್ಞಾನದ ಪ್ರಯೋಜನಗಳನ್ನು ಕೃಷಿಗೆ ತಲುಪಿಸುವ ನಿಟ್ಟಿನಲ್ಲಿ ಸರಕಾರ ಕಾರ್ಯನಿರತವಾಗಿದೆ. ವಾರಣಾಸಿಯಲ್ಲಿ ಭತ್ತ ಸಂಶೋಧನಾ ಕೇಂದ್ರ ಸ್ಥಾಪಿಸಲಾಗಿದೆ, ಮತ್ತು ಅದು ಈಗ ಸರಿಯಾದ ದಿಶೆಯತ್ತ ಸಾಗುತ್ತಿದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕೃಷಿಯಲ್ಲಿ ಮೌಲ್ಯವರ್ಧನೆಯ ಪ್ರಾಮುಖ್ಯತೆಗಳ ಬಗ್ಗೆ ಪ್ರಧಾನಮಂತ್ರಿ ಅವರು ಮಾತನಾಡಿದರು. ಆಹಾರ ಸಂಸ್ಕರಣಾ ಕ್ಷೇತ್ರದಲ್ಲಿ ಹೆಜ್ಜೆಯಿಡಲಾಗಿದೆ. ಅಲ್ಲದೆ, ಕೃಷಿಕ್ರಾಂತಿಯ ಬಳಿಕ ಈಗ ಹಾಲಿನ ಉತ್ಪಾದನೆ, ಜೇನು ಉತ್ಪಾದನೆ ಮತ್ತು ಕೋಳಿಸಾಕಣಿಕೆ ಹಾಗೂ ಮತ್ಸ್ಯೋದ್ಯಮಗಳ ಅಭಿವೃದ್ಧಿಗೆ ಆದ್ಯತೆ ನೀಡಲಾಗುತ್ತದೆ ಎಂದು ಪ್ರಧಾನಮಂತ್ರಿ ಹೇಳಿದರು.
ಕೃಷಿ ಕುಂಭದಲ್ಲಿ ಜಲ ಸಂಪನ್ಮೂಲಗಳ ಸರಿಯಾದ ಬಳಕೆ, ಜಲ ಸಂಗ್ರಹದಲ್ಲಿ ಉತ್ತಮ ತಂತ್ರಜ್ಞಾನಗಳ ಬಳಕೆ ಮತ್ತು ಕೃಷಿಯಲ್ಲಿ ಅತ್ಯಾಧುನಿಕ ತಂತ್ರಜ್ಞಾನಗಳ ಬಳಸುವ ವಿಷಯಗಳಲ್ಲಿ ಚರ್ಚೆಗಳಾಗಬೇಕು ಎಂದು ಪ್ರಧಾನಮಂತ್ರಿ ಹೇಳಿದರು. ಕೊಯ್ದ ಪೈರಿನ ಕಳೆಗಳನ್ನು ರೈತರು ಬೆಂಕಿಯಿಟ್ಟು ಸುಡುವ ಪದ್ದತಿಯ ನಿಲುಗಡೆಗೆ ಸಹಾಯಕವಾಗುವ ನೂತನ ತಂತ್ರಜ್ಞಾನಗಳ ಅಭಿವೃದ್ಧಿಯ ಆವಶ್ಯಕತೆಯಿದೆ ಎಂದು ಪ್ರಧಾನಮಂತ್ರಿ ಹೇಳಿದರು.
Login or Register to add your comment
Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.
The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.