ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ಬಾಂಗ್ಲಾದೇಶದ ಪ್ರಧಾನಮಂತ್ರಿ ಶೇಖ್ ಹಸೀನಾ ಮತ್ತು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿಅವರೊಂದಿಗೆ ಇಂದು ಎರಡೂ ಭಾರತ ಮತ್ತು ಬಾಂಗ್ಲಾ ದೇಶಗಳ ನಡುವಿನ ಹಲವು ಸಂಪರ್ಕ ಯೋಜನೆಗಳ ಉದ್ಘಾಟನೆ ನೆರವೇರಿಸಿದರು.
ಇವುಗಳಲ್ಲಿ ಎರಡನೇ ಭಾಯ್ ರಬ್ ಮತ್ತು ಟಿಟಾಸ್ ರೈಲ್ವೆ ಸೇತುವೆ ಮತ್ತು ಕೋಲ್ಕತ್ತಾದ ಚಿತ್ಪುರದ ಅಂತಾರಾಷ್ಟ್ರೀಯ ರೈಲು ಪ್ರಯಾಣಿಕರ ಟರ್ಮಿನಸ್ ಸಹಸೇರಿದೆ. ಕೋಲ್ಕತ್ತಾ ಮತ್ತು ಕುಲ್ನಾ ನಡುವಿನ ಬಂಧನ್ ಎಕ್ಸ್ ಪ್ರೆಸ್ ಸಂಚಾರಕ್ಕೂ ಗಣ್ಯರು ಹಸಿರು ನಿಶಾನೆ ತೋರಿದರು.
ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಅವರು ದೆಹಲಿಯಿಂದ ಕಾರ್ಯಕ್ರಮದಲ್ಲಿ ಪಾಲ್ಗೊಂಡರು
ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರು ಮಾಡಿದ ಭಾಷಣದ ಪಠ್ಯ ಇಂತಿದೆ:
“ಈ ಕಾರ್ಯಕ್ರಮದಲ್ಲಿ ಪಾಲೊಂಡಿರುವ ಎಲ್ಲರಿಗೂ, ವಿಶೇಷವಾಗಿ ಬಾಂಗ್ಲಾದೇಶದಲ್ಲಿ ನೆಲೆಸಿರುವ ಎಲ್ಲ ಸಹೋದರ ಸಹೋದರಿಯರಿಗೂ ನಮಸ್ಕಾರ”.
ಕೆಲವು ದಿನಗಳ ಹಿಂದೆ ಎರಡೂ ದೇಶಗಳಲ್ಲಿ ದೀಪಾವಳಿ, ದುರ್ಗಾಪೂಜೆ ಮತ್ತು ಕಾಳಿಪೂಜೆಯ ಉತ್ಸವಗಳನ್ನು ಆಚರಿಸಿದ್ದೀರಿ.
ನಾನು ಎರಡೂ ದೇಶದ ಪ್ರಜೆಗಳಿಗೆ ನಾನು ಶುಭಾಶಯಗಳನ್ನು ಕೋರುತ್ತೇನೆ.
ಈ ವಿಡಿಯೋ ಕಾನ್ಫೆರೆನ್ಸ್ ಮೂಲಕ ಮತ್ತೊಮ್ಮೆ ತಮ್ಮನ್ನು ಭೇಟಿಯಾಗುವ ಅವಕಾಶ ದೊರೆತದ್ದಕ್ಕೆ ನನಗೆ ಸಂತಸವಾಗುತ್ತಿದೆ.
ನಿಮ್ಮೆಲ್ಲರ ಆರೋಗ್ಯಕ್ಕಾಗಿ ನನ್ನ ಶುಭಕಾಮನೆಗಳು.
ನೆರೆಯ ದೇಶಗಳ ನಾಯಕರೊಡನೆ ನಮ್ಮ ಸಂಬಂಧ ನೆರೆಮನೆಯವರೊಡನೆ ಇರುವ ಸಂಬಂಧದಂತೆ ಇರಬೇಕೆಂಬುದನ್ನು ನಾನು ಮೊದಲಿನಿಂದಲೂಬಯಸಿದ್ದೇನೆ.
ನಮಗೆ ಇಷ್ಟಬಂದಾಗ ಮಾತುಕತೆಗಳಾಗಬೇಕು, ಪರಸ್ಪರ ಭೇಟಿಯಾಗಬೇಕು.
ಇದರಲ್ಲಿ ನಮಗೆ ಯಾವುದೇ ಪ್ರೋಟೋಕಾಲ್ ಕಟ್ಟುಪಾಡುಗಳು ಇರಬಾರದು.
ಕೆಲವು ದಿನಗಳ ಮೊದಲು ದಕ್ಷಿಣ ಏಷಿಯಾ ಉಪಗ್ರಹ ಉಡಾವಣಾ ಸಂದರ್ಭದಲ್ಲಿ ನಾವು ಇದೇ ರೀತಿಯ ವಿಡಿಯೋ ಸಂವಾದವನ್ನು ನಡೆಸಿದ್ದೆವು.
ಕಳೆದ ವರ್ಷ ನಾವು ಇದೇ ರೀತಿ ಪೆಟ್ರಾಪೋಲ್ ಸಮಗ್ರ ಚೆಕ್ ಪೋಸ್ಟ್ (ಪೆಟ್ರಾಪೋಲ್ ಇಂಟಿಗ್ರೇಟೆಡ್ ಚೆಕ್ ಪೋಸ್ಟ್) ಉದ್ಘಾಟನೆಯನ್ನು ಕೂಡಾ ಮಾಡಿದ್ದೆವು.
ನಮ್ಮ ಸಂಪರ್ಕ ಕೊಂಡಿಯನ್ನು ಮತ್ತಷ್ಟು ಬಲಪಡಿಸುವ ದೃಷ್ಟಿಯಿಂದ ನಾವು ಇಂದು ಹಲವು ಮಹತ್ವಪೂರ್ಣ ಯೋಜನೆಗಳನ್ನು ವಿಡಿಯೋ ಕಾನ್ಫೆರೆನ್ಸ್ ಮೂಲಕಉದ್ಘಾಟಿಸುತ್ತಿರುವುದು ನನಗೆ ಸಂತಸ ತಂದಿದೆ.
ಸಂಪರ್ಕದ ಅತ್ಯಂತ ಮಹತ್ವಪೂರ್ಣ ಹೆಜ್ಜೆ ಎಂದರೆ ಜನರಿಂದ – ಜನರೆಡೆಗಿನ ಸಂಪರ್ಕ.
ಇಂದಿನ ಅಂತಾರಾಷ್ಟ್ರೀಯ ಪ್ರಯಾಣಿಕರ ಟರ್ಮಿನಸ್ ಉದ್ಭಾಟನೆಯಿಂದ ಕೊಲ್ಕತ್ತಾ – ಢಾಕಾ ಮೈತ್ರಿ ಎಕ್ಸ್ ಪ್ರೆಸ್ ಮತ್ತು ಇಂದು ಪ್ರಾರಂಭವಾದ ಕೊಲ್ಕತ್ತಾ – ಬಂಧನ್ ಎಕ್ಸ್ ಪ್ರೆಸ್ ಪ್ರಯಾಣಿಕರಿಗೆ ಹೆಚ್ಚಿನ ಸೌಲಭ್ಯಗಳು ದೊರೆಯಲಿದೆ.
ಇದರಿಂದ ಅವರಿಗೆ ಸುಂಕ ಮತ್ತು ವಲಸೆ ಕಾರ್ಯ ಸುಲಭವಾಗುವುದರ ಜತೆಗೆ ಪ್ರಯಾಣದ ಅವಧಿಯಲ್ಲಿ ಮೂರು ಘಂಟೆಗಳು ಕಡಿತವಾಗಲಿದೆ.
ಮೈತ್ರಿ ಮತ್ತು ಬಂಧನ್ ಈ ಎರಡೂ ರೈಲ್ವೆ ಸೌಲಭ್ಯಗಳ ಹೆಸರುಗಳೂ ಕೂಡಾ ನಮ್ಮ ಸಮಾನ ದೃಷ್ಟಿಕೋನಕ್ಕೆ ಹೊಂದಿಕೊಂಡಂತಿವೆ.
ನಮ್ಮ ನಡುವಿನ ಸಂಪರ್ಕದ ಮಾತು ಬಂದಾಗ, ನನಗೆ 1965 ರ ಮೊದಲಿದ್ದ ಸಂಪರ್ಕವನ್ನು ಪುನರ್ಸ್ಥಾಪಿಸುವ ದೃಷ್ಟಿಕೋನದ ವಿಚಾರ ನೆನಪಾಗುತ್ತದೆ.
ಈ ದಿಶೆಯಲ್ಲಿ ನಾವು ನಿರಂತರವಾಗಿ ಮುನ್ನಡೆಯುತ್ತಿದ್ದೇವೆ ಎಂದು ನನಗೆ ಸಂತಸವಾಗುತ್ತಿದೆ
ನಾವು ಇಂದು ಎರಡು ರೈಲು ಸೇತುವೆಗಳ ಉದ್ಘಾಟನೆಯನ್ನೂ ಕೂಡಾ ಮಾಡಿದ್ದೇವೆ. ಸುಮಾರು 100 ಮಿಲಿಯನ್ ಡಾಲರ್ ವೆಚ್ಚದ ಈ ಸೇತುವೆಗಳನಿರ್ಮಾಣದಿಂದ ಬಾಂಗ್ಲಾ ದೇಶದ ರೈಲು ಸಂಪರ್ಕ ಮತ್ತಷ್ಟು ಬಲಗೊಳ್ಳಲು ಸಹಾಯಕವಾಗಲಿದೆ.
ಬಾಂಗ್ಲಾದೇಶದ ಅಭಿವೃದ್ಧಿ ಕಾರ್ಯಗಳಲ್ಲಿ ವಿಶ್ವಸನೀಯ ಪಾಲುದಾರ ಎಂದು ಗುರುತಿಸಿಕೊಳ್ಳುವುದು ಭಾರತಕ್ಕೆ ಹೆಮ್ಮೆಯ ವಿಷಯವಾಗಿದೆ.
ನಮ್ಮ 8 ಮಿಲಿಯನ್ ರಿಯಾಯತಿ ಹಣಕಾಸು ನೆರವಿನ ಬದ್ಧತೆಯಿಂದ ಈ ಎಲ್ಲ ಯೋಜನೆಗಳೂ ಒಳ್ಳೆಯ ಪ್ರಗತಿಯಲ್ಲಿದೆ ಎಂದು ನನಗೆ ಸಂತೋಷವಾಗಿದೆ.
ಅಭಿವೃದ್ಧಿ ಮತ್ತು ಸಂಪರ್ಕ ಎರಡೂ ಒಂದಕ್ಕೊಂದು ಬೆಸೆದುಕೊಂಡಿದೆ. ನಮ್ಮ ಎರಡೂ ದೇಶಗಳ ಅದರಲ್ಲೂ ವಿಶೇಷವಾಗಿ ಬಾಂಗ್ಲಾದೇಶ ಮತ್ತು ಪಶ್ಚಿಮಬಂಗಾಳದ ಜನರ ನಡುವಣ ನೂರಾರು ವರ್ಷಗಳ ಬಾಂಧವ್ಯವನ್ನು ಮತ್ತಷ್ಟು ಬಲಪಡಿಸುವ ದಿಶೆಯಲ್ಲಿ ನಾವಿಂದು ಮತ್ತಷ್ಟು ನಿರ್ಣಯಗಳನ್ನುತೆಗೆದುಕೊಂಡಿದ್ದೇವೆ.
ನಾವು ನಮ್ಮ ಸಂಬಂಧಗಳನ್ನು ಮತ್ತಷ್ಟು ಬೆಳೆಸಿದಂತೆಲ್ಲ ಹಾಗೂ ಜನಗಳ ನಡುವಣ ಬಾಂಧವ್ಯವನ್ನು ಗಟ್ಟಿಗೊಳಿಸಿದಂತೆಲ್ಲ ನಾವು ಅಭಿವೃದ್ಧಿ ಮತ್ತು ಸಮೃದ್ಧಿಯಹೊಸ ದಿಗಂತವನ್ನು ಸ್ಪರ್ಷಿಸಲಿದ್ದೇವೆ.
ಈ ಕಾರ್ಯದಲ್ಲಿ ಸಹಯೋಗ ನೀಡಿದ ಪ್ರಧಾನಿ ಶೇಖ್ ಹಸಿನಾ ಅವರಿಗೂ ಹಾಗೂ ಮಮತಾ ಬ್ಯಾನರ್ಜೀ ಅವರಿಗೂ ನಾನು ತುಂಬು ಹೃದಯದ ಧನ್ಯವಾದಗಳನ್ನುಅರ್ಪಿಸುತ್ತೇನೆ.
ಧನ್ಯವಾದಗಳು.
कुछ समय पहले हमने South Asia Satellite के launch के समय इसी प्रकार video conference की थी। पिछले वर्ष हमने मिल कर Petrapole ICP का उद्घाटन भी इसी प्रकार किया था।
— PMO India (@PMOIndia) November 9, 2017
आज हमारी connectivity को मज़बूत करने वाले महत्वपूर्ण projects का उद्घाटन हमने video conference के माध्यम से किया: PM
आज हमने दो rail पुलों का भी उद्घाटन किया है। लगभग $ 100 million की लागत से बने ये पुल बांग्लादेश के rail network को मजबूत करने में सहायक होंगे।
— PMO India (@PMOIndia) November 9, 2017
बांग्लादेश के विकास कार्यों में विश्वस्त साझेदार होना भारत के लिए गर्व का विषय है: PM @narendramodi
Development और Connectivity दोनों एक साथ जुड़े हुए हैं, और हम दोनों देशों के बीच जो सदियों पुराने एतिहासिक links हैं, विशेष रूप से पश्चिम बंगाल और बांग्लादेश के लोगों के बीच, उन्हें मजबूत करने की दिशा में आज हमने कुछ और क़दम उठाए हैं: PM @narendramodi
— PMO India (@PMOIndia) November 9, 2017