ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ, ಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ಹಸೀನಾ, ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮತ್ತು ತ್ರಿಪುರಾ
ಮುಖ್ಯಮಂತ್ರಿ ಶ್ರೀ ಬಿಪ್ಲಾಬ್ ಕುಮಾರ್ ದೆಬ್ ಅವರು ವಿಡಿಯೊ ಸಂವಾದ ಮೂಲಕ ಜಂಟಿಯಾಗಿಬಾಂಗ್ಲಾದೇಶದ ಮೂರು ಯೋಜನೆಗಳನ್ನು ಉದ್ಘಾಟಿಸಿದರು. ಭಾರತದ ವಿದೇಶಾಂಗ ವ್ಯವಹಾರಗಳಸಚಿವೆ ಶ್ರೀಮತಿ ಸುಷ್ಮಾ ಸ್ವರಾಜ್ ಮತ್ತು ಬಾಂಗ್ಲಾದೇಶದ ವಿದೇಶ ಸಚಿವರುಗಳೂ ಸಹದೆಹಲಿ ಮತ್ತು ಡಾಕಾಗಳಿಂದ ಪ್ರತ್ಯೇಕ ವಿಡಿಯೊ ಸಂವಾದ ಮೂಲಕ ಜೊತೆ ಸೇರಿದರು.
ಈ ಯೋಜನೆಗಳು ಹೀಗಿವೆ (1) ಪ್ರಸ್ತುತ ಇರುವ ಬೆಹರಾಂಪುರ್ (ಭಾರತ) – ಬೆಹರಾಂಪುರ್(ಬಾಂಗ್ಲಾದೇಶ) ಅಂತರ್ ಸಂಪರ್ಕ ಮೂಲಕ ಭಾರತದಿಂದ ಬಾಂಗ್ಲಾದೇಶಕ್ಕೆ ಹೆಚ್ಚುವರಿ 500ಎಮ್.ಡಬ್ಲೂ. ವಿದ್ಯುತ್ ಪೂರೈಕೆ. (2) ಅಖೌರ – ಅಗರ್ತಲ ರೈಲು ಸಂಪರ್ಕ. (3)ಬಾಂಗ್ಲಾದೇಶದ ರೈಲುಗಳ ಕುಲೌರಾ – ಶಹ್ಬಾಜ್ಪುರ್ ವಿಭಾಗದ ಪುನರ್ವಸತಿ ವ್ಯವಸ್ಥೆಗಳು
ಈ ಸಂದರ್ಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು “ಬಾಂಗ್ಲಾದೇಶದ ಪ್ರಧಾನಮಂತ್ರಿಶ್ರೀಮತಿ ಶೇಖ್ ಹಸೀನಾ ಅವರನ್ನು ಕಾಠ್ಮಂಡು ಬಿ.ಐ.ಎಮ್.ಎಸ್.ಟಿ.ಇ.ಸಿ. ಸಭೆ, ಶಾಂತಿನಿಕೇತನ್ ಮತ್ತು ಲಂಡನ್ ನ ಕಾಮನ್ ವೆಲ್ತ್ ಸಮಾವೇಶಗಳಲ್ಲಿ ಸೇರಿದಂತೆ ಇತ್ತೀಚೆಗೆಹಲವು ಭಾರಿ ಭೇಟಿಯಾಗಿದ್ದೇನೆ” ಎಂದು ತಮ್ಮ ಭಾಷಣ ಪ್ರಾರಂಭಿಸಿದರು.
ನರೆದೇಶಗಳ ನಾಯಕರು ನೆರೆಕರೆಯವರಂತೆ ಸಂಬಂಧಗಳನ್ನು ಹೊಂದಿರಬೇಕು, ಸರಕಾರಿ ಶಿಷ್ಟಾಚಾರ(ಪ್ರೊಟಾಕೊಲ್)ಗಳಿಲ್ಲದೆ ಮಾತುಕತೆ ಮತ್ತು ನಿರಂತರ ಭೇಟಿಯಾಗುತ್ತಿರಬೇಕು ಎಂಬಅಭಿಪ್ರಾಯ ಪ್ರಧಾನಮಂತ್ರಿ ಅವರು ವ್ಯಕ್ತಪಡಿಸಿದರು. “:ನಾನು ಮತ್ತುಬಾಂಗ್ಲಾದೇಶದ ಪ್ರಧಾನಮಂತ್ರಿ ನಡುವಿನ ಆಗಾಗ ನಡೆಯುವ ಭೇಟಿ-ಮಾತುಕತೆಗಳಿಂದಸಾಮಿಪ್ಯದಿಂದ ಇದು ಸ್ಪಷ್ಟವಾಗುತ್ತದೆ” ಎಂದು ಪ್ರಧಾನಮಂತ್ರಿ ಹೇಳಿದರು.
1965ರಲ್ಲಿ ಪ್ರಾರಂಭಗೊಂಡ ಸಂಪರ್ಕಗಳ ವ್ಯವಸ್ಥೆಗಳನ್ನು ಪುನಃ ಸ್ಥಾಪಿಸುವಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ ಹಸೀನಾ ಅವರ ಸಂಕಲ್ಪ ಯೋಜನೆಯನ್ನು
ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನೆನಪಿಸಿಕೊಂಡರು. “ಕಳೆದ ಕೆಲವುವರ್ಷಗಳಿಂದ ಈ ಗುರಿಯತ್ತ ಸ್ಥಿರವೃದ್ಧಿ ಸಾಧ್ಯವಾಗಿದೆ ಎಂಬುದು ನನಗೆ ಸಂತಸ ತಂದಿದೆ “
ಎಂದು ಪ್ರಧಾನಮಂತ್ರಿ ಹೇಳಿದರು.
“ಇಂದು ನಾವು ವಿದ್ಯುತ್ ಸಂಪರ್ಕಗಳನ್ನು ವೃದ್ಧಿಸಿಕೊಂಡಿದ್ದೇವೆ ಮತ್ತು ರೈಲು ಸಂಪರ್ಕಹೆಚ್ಚಿಸಲು ಎರಡು ಯೋಜನೆಗಳನ್ನು ಪ್ರಾರಂಭಿಸಿದ್ದೇವೆ” ಎಂದು ಪ್ರಧಾನಮಂತ್ರಿ
ಹೇಳಿದರು. “ಬಾಂಗ್ಲಾದೇಶಕ್ಕೆ 2015ರಲ್ಲಿ ತಾನು ಭೇಟಿ ನೀಡಿದ್ದ ಸಂದರ್ಭದಲ್ಲಿಬಾಂಗ್ಲಾದೇಶಕ್ಕೆ ಹೆಚ್ಚುವರಿ 500 ಎಮ್.ಡಬ್ಲೂ. ವಿದ್ಯುತ್ ಪೂರೈಕೆಯ ನಿರ್ಧಾರ
ಮಾಡಲಾಯಿತು” ಎಂದು ಪ್ರಧಾನಮಂತ್ರಿ ನೆನಪಿಸಿಕೊಂಡರು. ಪಶ್ಚಿಮ ಬಂಗಾಳ ಮತ್ತುಬಾಂಗ್ಲಾದೇಶ ನಡುವಣ ಪ್ರಸರಣಾ ಸಂಪರ್ಕ ಬಳಕೆಯಿಂದ ಯೋಜನೆ ಸಾಧ್ಯವಾಗಿದೆ ಮತ್ತುಸೌಕರ್ಯಗಳ ಅನುಕೂಲ ಮಾಡಿ ಯೋಜನೆ ಪೂರ್ತಿಗೊಳಿಸಿದ್ದಕ್ಕಾಗಿ ಪಶ್ಚಿಮ ಬಂಗಾಳದಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ತಿಳಿಸಿದರು.
“ಈ ಯೋಜನೆ ಪೂರ್ಣಗೊಂಡಾಗ ಭಾರತವು ಬಾಂಗ್ಲಾ ದೇಶಕ್ಕೆ 1.16 ಗಿಗಾ ವಾಟ್ಸ್ ವಿದ್ಯುತ್ಪೂರೈಸಲಿದೆ ಮತ್ತು ಮೆಗಾವಾಟ್ಸ್ ನಿಂದ ಗಿಗಾವಾಟ್ಸ್ ತನಕದ ಈ ಪಯಣವು ಭಾರತ ಮತ್ತು ಬಾಂಗ್ಲಾದೇಶ ನಡುವಣ ಸಂಬಂಧಗಳ ಸುವರ್ಣ ಕಾಲದ ಸಂಕೇತವಾಗಿದೆ” ಎಂದು ಪ್ರಧಾನಮಂತ್ರಿಹೇಳಿದರು.
ಅಖೌರಾ – ಅಗರ್ತಲ ರೈಲು ಸಂಪರ್ಕ ಈ ಎರಡು ದೇಶಗಳಿಗೂ ಗಡಿಯಾಚೆಗಿನ ಇನ್ನೊಂದುಸಂಪರ್ಕವನ್ನು ನೀಡಲಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಇದಕ್ಕಾಗಿ ಸೌಕರ್ಯಗಳಅನುಕೂಲ ಮಾಡಿ ಯೋಜನೆ ಪೂರ್ತಿಗೊಳಿಸಿದ್ದಕ್ಕಾಗಿ ತ್ರಿಪುರಾದ ಮುಖ್ಯಮಂತ್ರಿ ಶ್ರೀಬಿಪ್ಲಾಬ್ ಕುಮಾರ್ ದೆಬ್ ಅವರಿಗೆ ಪ್ರಧಾನಮಂತ್ರಿ ಧನ್ಯವಾದ ತಿಳಿಸಿದರು.
ಬಾಂಗ್ಲಾ ದೇಶವನ್ನು 2021ರ ಒಳಗಾಗಿ ಮಧ್ಯಮ ಆದಾಯದ ಮತ್ತು 2041ರ ಅವಧಿಗೆ ಅಭಿವೃದ್ಧಿದೇಶವನ್ನಾಗಿ ನಿರ್ಮಿಸುವ ನಿಟ್ಟಿನಲ್ಲಿ ಬಾಂಗ್ಲಾದೇಶದ ಪ್ರಧಾನಮಂತ್ರಿ ಶ್ರೀಮತಿ ಶೇಖ್ಹಸೀನಾ ಅವರ ಅಭಿವೃದ್ಧಿಯ ಗುರಿಗಳನ್ನು ಪ್ರಧಾನಮಂತ್ರಿ ಅವರು ಶ್ಲಾಘಿಸಿದರು. “ಈ ಎರಡುದೇಶಗಳ ನಡುವಣ ಸಮೀಪದ ಸಂಬಂಧಗಳು ಮತ್ತು ಜನ-ಜನರ ಸಂಪರ್ಕಗಳು ನಮ್ಮ ಅಭಿವೃದ್ಧಿ ಮತ್ತುಸಮೃದ್ಧಿಗಳನ್ನು ನೂತನ ಮಟ್ಟಕ್ಕೇರಿಸಲಿವೆ “ ಎಂದು ಪ್ರಧಾನಮಂತ್ರಿ ಹೇಳಿದರು.