ಇಂದು ಐಐಟಿ ಚೆನ್ನೈನಲ್ಲಿ ಮುಕ್ತಾಯಗೊಂಡ 36 ಗಂಟೆಗಳ ಸಿಂಗಾಪುರ್ ಇಂಡಿಯಾ ಹ್ಯಾಕಥಾನ್ ವಿಜೇತರಿಗೆ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿಯವರು ಬಹುಮಾನಗಳನ್ನು ವಿತರಿಸಿದರು.
ಸಿಂಗಾಪುರ ಸರ್ಕಾರ, ಭಾರತ ಸರ್ಕಾರ, ಐಐಟಿ ಚೆನ್ನೈ ಮತ್ತು ಸಿಂಗಾಪುರದ ನ್ಯಾನ್ಯಾಂಗ್ ತಾಂತ್ರಿಕ ವಿಶ್ವವಿದ್ಯಾಲಯ (ಎನ್‌ಟಿಯು) ದ ಸಹಯೋಗದೊಂದಿಗೆ ಇಂತಹ ಎರಡನೆಯ ಹ್ಯಾಕಥಾನ್ ಅನ್ನು ಆಯೋಜಿಸಲಾಗಿದೆ.
2018 ರಲ್ಲಿ ಸಿಂಗಾಪುರದ ಎನ್‌ಟಿಯುನಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ರೂಪಿಸಿದ ಪರಿಕಲ್ಪನೆಯ ಆಧಾರದ ಮೇಲೆ ಮೊದಲ ಹ್ಯಾಕಥಾನ್ ಆಯೋಜಿಸಲಾಗಿತ್ತು.
ವಿದ್ಯಾರ್ಥಿಗಳನ್ನು ಮತ್ತು ಶೈಕ್ಷಣಿಕ ವಿಭಾಗದವರನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಯವರು, ಹ್ಯಾಕಥಾನ್ ವಿಜೇತರನ್ನು ಅಭಿನಂದಿಸಿದರು.
“ಸ್ನೇಹಿತರೇ, ಹ್ಯಾಕಥಾನ್ ವಿಜೇತರನ್ನು ನಾನು ಅಭಿನಂದಿಸುತ್ತೇನೆ. ಮತ್ತು, ಇಲ್ಲಿ ಒಟ್ಟುಗೂಡಿದ ಪ್ರತಿಯೊಬ್ಬ ಯುವ ಸ್ನೇಹಿತನನ್ನು, ವಿಶೇಷವಾಗಿ ನನ್ನ ವಿದ್ಯಾರ್ಥಿ ಸ್ನೇಹಿತರನ್ನು ನಾನು ಅಭಿನಂದಿಸುತ್ತೇನೆ. ಸವಾಲುಗಳನ್ನು ಎದುರಿಸಲು ಮತ್ತು ಕಾರ್ಯಸಾಧ್ಯವಾದ ಪರಿಹಾರಗಳನ್ನು ಕಂಡುಕೊಳ್ಳುವ ನಿಮ್ಮ ಇಚ್ಛಾಶಕ್ತಿ, ನಿಮ್ಮ ಶಕ್ತಿ, ನಿಮ್ಮ ಉತ್ಸಾಹವು ಕೇವಲ ಸ್ಪರ್ಧೆಯನ್ನು ಗೆಲ್ಲುವುದಕ್ಕಲ್ಲದೆ ಅದಕ್ಕಿಂತಲೂ ಹೆಚ್ಚಿನ ಮೌಲ್ಯವನ್ನು ಹೊಂದಿದೆ “.
ನವೋದ್ಯಮ ಸ್ನೇಹಿ ಪರಿಸರ ವ್ಯವಸ್ಥೆಗಳಲ್ಲಿ ಭಾರತವು ವಿಶ್ವದಲ್ಲಿ ಅಗ್ರ ಮೂರು ಸ್ಥಾನದಲ್ಲಿದೆ ಎಂದು ಪ್ರಧಾನ ಮಂತ್ರಿಯವರು ತಿಳಿಸಿದರು. ಕಳೆದ ಐದು ವರ್ಷಗಳಲ್ಲಿ ಭಾರತ ಹೊಸತನ ಮತ್ತು ಆಲೋಚನೆಗಳ ಮೊಳೆಯುವಿಕೆಗೆ ಹೆಚ್ಚಿನ ಒತ್ತು ನೀಡಿದೆ ಎಂದು ಅವರು ಹೇಳಿದರು.
“ಅಟಲ್ ಇನ್ನೋವೇಶನ್ ಮಿಷನ್, ಪಿಎಂ ರಿಸರ್ಚ್ ಫೆಲೋಶಿಪ್, ಸ್ಟಾರ್ಟ್-ಅಪ್ ಇಂಡಿಯಾ ಅಭಿಯಾನಗಳು 21 ನೇ ಶತಮಾನದ ಭಾರತದ ಅಡಿಪಾಯವಾಗಿದ್ದು, ಇದು ಹೊಸಶೋಧಗಳ ಸಂಸ್ಕೃತಿಯನ್ನು ಉತ್ತೇಜಿಸುತ್ತದೆ. ನಾವು ಈಗ 6 ನೇ ತರಗತಿಯಲ್ಲಿಯೇ ಯಂತ್ರ ಕಲಿಕೆ, ಕೃತಕ ಬುದ್ಧಿಮತ್ತೆ, ಬ್ಲಾಕ್‌ಚೈನ್‌ನಂತಹ ಆಧುನಿಕ ತಂತ್ರಜ್ಞಾನಕ್ಕೆ ನಮ್ಮ ವಿದ್ಯಾರ್ಥಿಗಳು ಒಡ್ಡಿಕೊಳ್ಳಲು ಪ್ರಯತ್ನಿಸುತ್ತಿದ್ದೇವೆ. ಶಾಲೆಯಿಂದ ಉನ್ನತ ಶಿಕ್ಷಣದಲ್ಲಿ ಸಂಶೋಧನೆಯವರೆಗೆ, ಪರಿಸರ ವ್ಯವಸ್ಥೆಯನ್ನು ರಚಿಸಲಾಗುತ್ತಿದೆ ಅದು ಹೊಸಶೋಧಕ್ಕೆ ಮಾಧ್ಯಮವಾಗುತ್ತದೆ. ”
ಭಾರತ ಎದುರಿಸುತ್ತಿರುವ ಸಮಸ್ಯೆಗಳಿಗೆ ಸುಲಭ ಪರಿಹಾರಗಳನ್ನು ಕಂಡುಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಕರೆ ನೀಡಿದ ಪ್ರಧಾನ ಮಂತ್ರಿಯವರು, ಭಾರತವು ತನ್ನ ಪರಿಹಾರಗಳನ್ನು ಇಡೀ ಜಗತ್ತಿಗೆ ಮತ್ತು ವಿಶೇಷವಾಗಿ ಬಡ ರಾಷ್ಟ್ರಗಳಿಗೆ ನೀಡಲು ಬಯಸಿದೆ ಎಂದು ಹೇಳಿದರು.
“ನಾವು ಎರಡು ದೊಡ್ಡ ಕಾರಣಗಳಿಗಾಗಿ ಇನ್ನೋವೇಶನ್ ಮತ್ತು ಇನ್ಕ್ಯುಬೇಷನ್ (ಹೊಸತನ ಮತ್ತು ಆಲೋಚನೆಗಳ ಮೊಳೆಯುವಿಕೆಗೆ ) ಅನ್ನು ಪ್ರೋತ್ಸಾಹಿಸುತ್ತಿದ್ದೇವೆ, ಒಂದು – ಭಾರತದ ಸಮಸ್ಯೆಗಳನ್ನು ಪರಿಹರಿಸಲು, ಜೀವನವನ್ನು ಸುಲಭಗೊಳಿಸಲು ನಾವು ಸುಲಭ ಪರಿಹಾರಗಳನ್ನು ಬಯಸುತ್ತೇವೆ. ಇನ್ನೊಂದು, ಭಾರತದಲ್ಲಿ ನಾವು ಇಡೀ ಜಗತ್ತಿಗೆ ಪರಿಹಾರಗಳನ್ನು ಹುಡುಕಲು ಬಯಸುತ್ತೇವೆ. ಜಾಗತಿಕ ಉಪಯೋಗಕ್ಕಾಗಿ ಭಾರತೀಯ ಪರಿಹಾರಗಳು – ಇದು ನಮ್ಮ ಗುರಿ ಮತ್ತು ನಮ್ಮ ಬದ್ಧತೆ. ಬಡ ದೇಶಗಳ ಅಗತ್ಯತೆಗಳನ್ನು ಪೂರೈಸಲು ನಮ್ಮ ಕಡಿಮೆ ವೆಚ್ಚದಾಯಕ ಪರಿಹಾರಗಳು ಲಭ್ಯವಾಗಬೇಕೆಂದು ನಾವು ಬಯಸುತ್ತೇವೆ – ಬಡವರು ಮತ್ತು ಅನುಕೂಲವಂಚಿತರನ್ನು ಎಲ್ಲಿಯೇ ವಾಸಿಸುತ್ತಿರಲಿ, ಅವರನ್ನು ಮೇಲೆತ್ತುವಲ್ಲಿ ಭಾರತೀಯ ಆವಿಷ್ಕಾರಗಳು ಸಹಾಯ ಮಾಡುವವು. ”
ಐಐಟಿ-ಎಂ ವಜ್ರ ಮಹೋತ್ಸವ ಆಚರಣೆ ಮತ್ತು ಸಮಾವೇಶ ಸಮಾರಂಭದಲ್ಲಿ ಪ್ರಧಾನ ಮಂತ್ರಿಯವರು ಭಾಗವಹಿಸಲಿದ್ದಾರೆ.
I congratulate each and every young friend assembled here.
— PMO India (@PMOIndia) September 30, 2019
Your willingness to confront challenges and find workable solutions, your energy, your enthusiasm is of much greater value than just winning a competition: PM
For me, each of you is a winner.
— PMO India (@PMOIndia) September 30, 2019
You are winners because you are not afraid of taking risks.
You are committed to your efforts without worrying about the results: PM
For me, each of you is a winner.
— PMO India (@PMOIndia) September 30, 2019
You are winners because you are not afraid of taking risks.
You are committed to your efforts without worrying about the results: PM
There are few things as satisfying as seeing an effort one is associated from the very beginning become vibrant and successful.
— PMO India (@PMOIndia) September 30, 2019
I had suggested this idea of a Joint Hackathon during a previous visit to Singapore: PM
I have also been told that last year, the focus of the hackathon was competition.
— PMO India (@PMOIndia) September 30, 2019
This year, the emphasis is on collaboration and complementing each other’s efforts: PM
So it can be safely said - we have moved from competition to collaboration.
— PMO India (@PMOIndia) September 30, 2019
This is the strength that we need, to bear jointly, on the challenges that both our countries face: PM
We in India have been doing the Smart India Hackathon for the last few years.
— PMO India (@PMOIndia) September 30, 2019
This initiative brings together Government Departments, people associated with Industry, all premier Institutes like ISRO: PM
Programmes like Atal Innovation Mission, PM Research Fellowships, Start-up India Abhiyan are the foundation of 21st century India, an India that promotes a culture of innovation: PM
— PMO India (@PMOIndia) September 30, 2019
We are encouraging Innovation and Incubation for two big reasons, One is - we want easy solutions to solve India's problems, to make life easier: PM
— PMO India (@PMOIndia) September 30, 2019
And another, we, in India want to find solutions for the whole world.
— PMO India (@PMOIndia) September 30, 2019
Indian Solutions for Global Application - this is our goal and our commitment: PM
I genuinely believe that technology and business unites people, even across continents: PM
— PMO India (@PMOIndia) September 30, 2019
Let me take this opportunity to propose a similar Hackathon involving those Asian countries that may be interested in participating, with support from NTU, Government of Singapore and Government of India: PM
— PMO India (@PMOIndia) September 30, 2019
Let best brains in Asian countries compete to offer innovative solutions for reducing ‘Global Warming and Climate Change’: PM
— PMO India (@PMOIndia) September 30, 2019
To conclude, I once again congratulate all the participants and organizers for making this initiative a grand success: PM
— PMO India (@PMOIndia) September 30, 2019