ಇತ್ತೀಚೆಗೆ ನಿಧನ ಹೊಂದಿದ ಮಾಜಿ ಪ್ರಧಾನಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಸ್ಮರಣಾರ್ಥ ದೆಹಲಿಯಲ್ಲಿಂದು ಏರ್ಪಡಿಸಿದ್ದ ಪ್ರಾರ್ಥನಾ ಸಭೆ ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಭಾಷಣ ಮಾಡಿದರು.

ನಮ್ಮ ಬದುಕು ಎಷ್ಟು ದಿನ, ಅದು ನಮ್ಮ ಕೈಯಲ್ಲಿಲ್ಲ, ಆದರೆ, ನಾವು ನಮ್ಮ ಬದುಕು ‘ಹೇಗೆ’ ಇರಬೇಕು ಎಂಬುದನ್ನು ನಾವು ನಿಶ್ಚಯಿಸಬಹುದು ಎಂದು ಅವರು ಹೇಳಿದರು. ಬದುಕು ಹೇಗಿರಬೇಕು ಮತ್ತು ಅದರ ಉದ್ದೇಶ ಏನಿರಬೇಕು ಎಂಬುದನ್ನು ಅಟಲ್ ಜಿ ಅವರು ತಮ್ಮ ಬದುಕಿನ ಮೂಲಕ ನಮಗೆಲ್ಲಾ ತೋರಿಸಿದ್ದರು ಎಂದರು. ಅಟಲ್ ಜೀ ಅವರು ತಮ್ಮ ಬದುಕಿನ ಪ್ರತಿಯೊಂದು ಕ್ಷಣವನ್ನೂ ಶ್ರೀಸಾಮಾನ್ಯನಿಗಾಗಿ ಬದುಕಿದರು. ತಮ್ಮ ಯೌವನದಿಂದ ಹಿಡಿದು ಅವರ ಭೌದ್ಧಿಕ ಶರೀರ ಬೆಂಬಲ ನೀಡುವ ಕಾಲದವರೆಗೆ ಅವರು ದೇಶಕ್ಕಾಗಿಬದುಕಿದರು ಎಂದು ಪ್ರಧಾನಮಂತ್ರಿ ಹೇಳಿದರು. ಅಟಲ್ ಜಿ ಅವರು ದೇಶದ ಜನತೆಗಾಗಿ, ತಮ್ಮ ಸಿದ್ಧಾಂತಗಳಿಗಾಗಿ ಮತ್ತು ಶ್ರೀಸಾಮಾನ್ಯನ ಆಶೋತ್ತರಗಳಿಗಾಗಿ ಜೀವಿಸಿದರು ಎಂದರು, ಪ್ರಧಾನ ರಾಜಕೀಯ ಸಿದ್ಧಾಂತಕ್ಕೆ ವಾಸ್ತವಿಕವಾಗಿ ಯಾವುದೇ ಪರ್ಯಾಯವಿಲ್ಲದಿದ್ದ ಸಂದರ್ಭದಲ್ಲಿ ವಾಜಪೇಯಿ ಜೀ ತಮ್ಮ ರಾಜಕೀಯ ಜೀವನದ ಬಹುಭಾಗವನ್ನು ಕಳೆದರು ಎಂಬುದನ್ನು ಪ್ರಧಾನ ಮಂತ್ರಿ ಉಲ್ಲೇಖಿಸಿದರು. 

|

ಪ್ರತ್ಯೇಕತೆಯನ್ನು ಎದುರಿಸುತ್ತಿದ್ದರೂ ಅವರು ತಮ್ಮ ಆದರ್ಶಗಳಿಗೆ ಬದ್ಧರಾಗಿದ್ದರು ಎಂದು ಅವರು ಹೇಳಿದರು. ಅವರು ಪ್ರತಿಪಕ್ಷದಲ್ಲಿ ದೀರ್ಘ ಸಮಯ ಕಳೆದರು, ಆದರೂ ಅವರ ಆದರ್ಶಗಳು ಆಭಾದಿತವಾಗಿತ್ತು ಎಂದು ಪ್ರಧಾನಮಂತ್ರಿ ಹೇಳಿದರು. ವಾಜಪೇಯಿ ಅವರು ಸಂಸದೀಯ ಸಂಪ್ರದಾಯಗಳನ್ನು ಗೌರವಿಸುತ್ತಿದ್ದರು; ಅವಕಾಶ ಸಿಕ್ಕಾಗಲೆಲ್ಲಾ ಅವರು ತಮ್ಮ ದೃಷ್ಟಿಕೋನವನ್ನು ಜನರ ಪ್ರಯೋಜನಕ್ಕಾಗಿ ಅನುಷ್ಠಾನಗೊಳಿಸುತ್ತಿದ್ದರು ಎಂದು ನರೇಂದ್ರ ಮೋದಿ ತಿಳಿಸಿದರು.

ಪ್ರತಿಯೊಂದು ಕ್ಷಣದಲ್ಲೂ ನೀವು “ಅಟಲ್’’ನ್ನು ಅವರಲ್ಲಿ ಕಾಣಬಹುದಾಗಿತ್ತು ಎಂದು ಪ್ರಧಾನಮಂತ್ರಿಗಳು ಹೇಳಿದರು. 1998ರ ಮೇ 11ರಂದು ಅವರು ಪರಮಾಣು ಪರೀಕ್ಷೆಯ ಮೂಲಕ ವಿಶ್ವಕ್ಕೇ ಅಚ್ಚರಿ ಮೂಡಿಸಿದರು ಎಂದು ಪ್ರಧಾನಮಂತ್ರಿ ಸ್ಮರಿಸಿದರು. ಅವರು ಈ ಯಶಸ್ಸನ್ನು ನಮ್ಮ ನುರಿತ ವಿಜ್ಞಾನಿಗಳಿಗೆ ಸಮರ್ಪಿಸಿದ್ದರೆಂದರು. ಜಾಗತಿಕವಾಗಿ ಪ್ರತೀಕೂಲ ಪ್ರತಿಕ್ರಿಯೆಯ ನಡುವೆಯೂ ಅಟಲ್ ಜೀ ಅವರು ಒತ್ತಡಕ್ಕೆ ಮಣಿಯಲಿಲ್ಲ ಮತ್ತು ಭಾರತ ಅಚಲ ಎಂಬುದನ್ನು ಜಗತ್ತಿಗೆ ತೋರಿದರು ಎಂದು ಪ್ರಧಾನಮಂತ್ರಿ ಬಣ್ಣಿಸಿದರು.

|

ವಾಜಪೇಯಿ ಅವರ ನಾಯಕತ್ವದಲ್ಲಿ ಯಾವುದೇ ಕಹಿ ಘಟನೆಗಳಿಗೆ ಆಸ್ಪದವಿಲ್ಲದಂತೆ ಮೂರು ಹೊಸ ರಾಜ್ಯಗಳ ರಚನೆ ಆಯಿತು ಎಂದು ಪ್ರಧಾನಿ ಹೇಳಿದರು. ನಿರ್ಧಾರ ಕೈಗೊಳ್ಳುವಾಗ ಎಲ್ಲರನ್ನೂ ಹೆಗೆ ಜೊತೆಯಲ್ಲಿ ತೆಗೆದುಕೊಂಡುಹೋಗಬೇಕು ಎಂಬುದನ್ನು ವಾಜಪೇಯಿ ಅವರು ತೋರಿಸಿಕೊಟ್ಟಿದ್ದರು ಎಂದರು.

|

 

ಅಟಲ್ ಜೀ ಅವರು ಪ್ರಥಮ ಬಾರಿಗೆ ಕೇಂದ್ರದಲ್ಲಿ ಸರ್ಕಾರ ರಚಿಸಿದಾಗ, ಯಾರೊಬ್ಬರೂ ಅವರಿಗೆ ಬೆಂಬಲ ನೀಡಲು ಇಚ್ಛಿಸಿರಲಿಲ್ಲ, ಸರ್ಕಾರ 13 ದಿನಗಳಿಗೆ ಪತನವಾಯಿತು. ಆದರೆ, ಅಟಲ್ ಜೀ ಅವರು ವಿಶ್ವಾಸ ಕಳೆದುಕೊಳ್ಳಲಿಲ್ಲ, ಬದಲಿಗೆ ಜನರ ಸೇವೆಯನ್ನು ಮುಂದುವರಿಸಿದರು. ಸಮ್ಮಿಶ್ರ ರಾಜಕೀಯದ ಸ್ಥಿತಿ ನಿರ್ಮಾಣವಾದಾಗ ಅವರು ದಾರಿ ತೋರಿದರು ಎಂದು ಪ್ರಧಾನಮಂತ್ರಿ ಹೇಳಿದರು.

|

ಕಾಶ್ಮೀರದ ಬಗ್ಗೆ ಇದ್ದ ಜಾಗತಿಕ ಹೇಳಿಕೆಯನ್ನು ವಾಜಪೇಯಿ ಬದಲಾಯಿಸಿದರು ಎಂದು ಪ್ರಧಾನಮಂತ್ರಿ ಹೇಳಿದರು. ಭಯೋತ್ಪಾದನೆಯ ವಿಚಾರದ ಬಗ್ಗೆ ಒತ್ತಿ ಹೇಳಿ ಅದನ್ನು ಜಾಗತಿಕವಾಗಿ ಮಧ್ಯಭೂಮಿಕೆಗೆ ತಂದರು ಎಂದರು.

ಅಟಲ್ ಜೀ ಅವರು ಸದಾ ಸ್ಫೂರ್ತಿಯಾಗಿರುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಅವರು ದಶಕಗಳಿಗೂ ಹೆಚ್ಚು ಕಾಲದಿಂದ ರಾಜಕೀಯದಿಂದ ಮತ್ತು ಸಾರ್ವಜನಿಕ ಜೀವನದಿಂದ ದೂರವಾಗಿದ್ದರು; ಆದರೂ ಅವರು ನಿಧನರಾದಾಗ ಅವರ ಬಗ್ಗೆ ಭಾವನಾತ್ಮಕತೆಯ ಮಹಾಪೂರವೇ ಹರಿದಿತ್ತು ಎಂದರು. ಇದು ಅವರ ಶ್ರೇಷ್ಠತೆಯನ್ನು ತೋರುತ್ತದೆ ಎಂದು ಪ್ರಧಾನಿ ವ್ಯಾಖ್ಯಾನಿಸಿದರು. ಭಾರತದ ಯುವ ಕುಸ್ತಿಪಟು ಭಜರಂಗ್ ಪುನಿಯಾ ಪ್ರಸ್ತಾಪ ಮಾಡಿದ ಪ್ರಧಾನಮಂತ್ರಿಯವರು, ಪುನಿಯಾ ಎಂದೂ ಅಟಲ್ ಜೀ ಅವರನ್ನು ಭೇಟಿ ಮಾಡಿರಲಿಲ್ಲ, ಆದರೆ ನಿನ್ನೆ ಅವರು ತಾವು ಗೆದ್ದ ಸ್ವರ್ಣ ಪದಕವನ್ನು ಅವರಿಗೆ ಅರ್ಪಣೆ ಮಾಡಿದರು ಎಂದರು. ಎಷ್ಟು ಉತ್ತುಂಗ ಮತ್ತು ಎಷ್ಟು ಶ್ರೇಷ್ಠ ಯಶಸ್ಸನ್ನು ಮನುಷ್ಯ ಸಾಧಿಸಬಹುದಲ್ಲವೇ ಎಂದು ಪ್ರಧಾನಿ ತಿಳಿಸಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Govt saved 48 billion kiloWatt of energy per hour by distributing 37 cr LED bulbs

Media Coverage

Govt saved 48 billion kiloWatt of energy per hour by distributing 37 cr LED bulbs
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 12 ಮಾರ್ಚ್ 2025
March 12, 2025

Appreciation for PM Modi’s Reforms Powering India’s Global Rise