QuoteWe are not merely reforming India but are transforming India: PM Modi
QuoteAn India free from poverty, terrorism, corruption, communalism, casteism is being created: PM
QuoteGood infrastructure is no longer about roads and rail only. It includes several other aspects that bring a qualitative change in society: PM
QuoteWe have not shied away from taking decisions that are tough. For us, the nation is bigger than politics: PM
QuoteIn addition to infrastructure, we are focussing on infraculture, which will help our hardworking farmers: PM Modi

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮ್ಯಾನ್ಮಾರ್ ನ ಯಾಂಗನ್ ನಲ್ಲಿ ಭಾರತೀಯ ಸಮುದಾಯ ಉದ್ದೇಶಿಸಿ ಭಾಷಣ ಮಾಡಿದರು.


“ನೀವು ಐತಿಹಾಸಿಕವಾಗಿ ಹಾಗೂ ಭೌಗೋಳಿಕವಾಗಿ ಸಾವಿರಾರು ವರ್ಷಗಳ ಹಂಚಿಕೆಯ ಸಂಸ್ಕೃತಿ ಮತ್ತು ನಾಗರೀಕತೆಯನ್ನು ಹಾಗೂ ಭಾರತ ಮತ್ತು ಮ್ಯಾನ್ಮಾರ್ ನ ಮಹಾನ್ ಪುತ್ರರ ಮತ್ತು ಪುತ್ರಿಯರನ್ನು ಪ್ರತಿನಿಧಿಸುತ್ತೀರಿ” ಎಂದು ಪ್ರಧಾನಿ ಸಭಿಕರನ್ನುದ್ದೇಶಿಸಿ ಹೇಳಿದರು. ಮ್ಯಾನ್ಮಾರ್ ನ ಶ್ರೀಮಂತ ಆಧ್ಯಾತ್ಮಿಕ ಸಂಪ್ರದಾಯದ ಬಗ್ಗೆ ಸವಿಸ್ತಾರವಾಗಿ ಪ್ರಧಾನಿ ವಿವರಿಸಿದರು.

|

ಭಾರತೀಯ ಸಮುದಾಯ ಭಾರತಕ್ಕೆ ‘ರಾಷ್ಟ್ರ -ಮಿತ್ರ’ನಿದ್ದಂತೆ ಎಂದು ಪ್ರಧಾನಿ ಹೇಳಿದರು. ಯೋಗಕ್ಕೆ ಜಾಗತಿಕ ಮನ್ನಣೆ ದೊರೆತಿರುವುದು ಈ ಸಮುದಾಯದ ಸಾಧನೆಯಾಗಿದೆ. ಇವರು ಯೋಗವನ್ನು ವಿಶ್ವದ ಎಲ್ಲ ಮೂಲೆ ಮೂಲೆಗೂ ತಲುಪಿಸಿದರು ಎಂದರು.

|

“ನಾನು ನಿಮ್ಮನ್ನು ಭೇಟಿ ಮಾಡಿದಾಗ, ವಿದೇಶಗಳಲ್ಲಿ ನೆಲೆಸಿರುವ ನಮ್ಮ ಜನರ ಭಾರತದಲ್ಲಿರುವ ಸರ್ಕಾರಿ ಪ್ರಾಧಿಕಾರಗಳೊಂದಿಗಿನ ಸಂವಹನ ಏಕಮುಖವಾದುದಲ್ಲ ಎಂಬುದು ಅರಿವಾಯಿತು” ಎಂದು ಪ್ರಧಾನಿ ತಿಳಿಸಿದರು.

“ನಾವು ಕೇವಲ ನಮ್ಮ ರಾಷ್ಟ್ರದ ಸುಧಾರಣೆ ಮಾಡುತ್ತಿಲ್ಲ, ನಾವು ಅದನ್ನು ಪರಿವರ್ತನೆ ಮಾಡುತ್ತಿದ್ದೇವೆ” ಎಂದು ಪ್ರತಿಪಾದಿಸಿದ ಪ್ರಧಾನಿ, ಬಡತನ, ಭಯೋತ್ಪಾದನೆ, ಭ್ರಷ್ಟಾಚಾರ, ಕೋಮುವಾದ ಮತ್ತು ಜಾತಿಪದ್ಧತಿ ಮುಕ್ತವಾದ ಭಾರತದ ನಿರ್ಮಾಣ ಮಾಡುತ್ತಿದ್ದೇವೆ ಎಂದೂ ತಿಳಿಸಿದರು.

|

ಭಾರತ ಸರ್ಕಾರ, ಮೂಲಸೌಕರ್ಯದ ಮೇಲೆ ಗಮನ ಹರಿಸಿದೆ ಎಂದು ಪ್ರಧಾನಿ ತಿಳಿಸಿದರು. ಉತ್ತಮ ಮೂಲಸೌಕರ್ಯ ಎಂಬುದು ರಸ್ತೆಗಳು, ರೈಲು ಮಾರ್ಗಗಳಿಗಷ್ಟೇ ಸೀಮಿತವಲ್ಲ, ಅದು ಸಮಾಜದಲ್ಲಿ ಗುಣಾತ್ಮಕವಾದ ಬದಲಾವಣೆ ತರುವ ಇತರ ಹಲವು ಅಂಶಗಳನ್ನೂ ಒಳಗೊಂಡಿರುತ್ತದೆ ಎಂದರು. ಸರ್ಕಾರ ಕಠಿಣ ನಿರ್ಧಾರ ಕೈಗೊಳ್ಳುವ ವಿಚಾರದಲ್ಲಿ ಹಿಂಜರಿಯುವುದಿಲ್ಲ ಎಂದೂ ಪ್ರಧಾನಿ ಸ್ಪಷ್ಟಪಡಿಸಿದರು.

ಜಿಎಸ್ಟಿ ಈಗ ದೇಶದಾದ್ಯಂತ ಹೊಸ ಸಂಸ್ಕೃತಿಯನ್ನು ಹುಟ್ಟುಹಾಕುತ್ತಿದೆ ಎಂದು ಪ್ರಧಾನಿ ತಿಳಿಸಿದರು. ಭಾರತ ಪರಿವರ್ತನೆ ಆಗುತ್ತದೆ ಮತ್ತು ನಮ್ಮ ವ್ಯವಸ್ಥೆಯಲ್ಲಿ ನುಸುಳಿರುವ ಕೆಲವು ಕೆಟ್ಟತನವನ್ನು ಹೋಗಲಾಡಿಸಿ ಮುಕ್ತಗೊಳಿಸುತ್ತೇವೆ ಎಂಬ ವಿಶ್ವಾಸ ಭಾರತದ ಜನರಲ್ಲಿ ಮೂಡಿದೆ ಎಂದರು.

|

ಭಾರತ ಮತ್ತು ಮ್ಯಾನ್ಮಾರ್ ಬಾಂಧವ್ಯದಲ್ಲಿ ಜನರೊಂದಿಗಿನ ಸಂಪರ್ಕ ನಮ್ಮ ಬಲವಾಗಿದೆ ಎಂದರು.

ಯಾಂಗನ್ ವಲಯದ ಮುಖ್ಯಮಂತ್ರಿ ಶ್ರೀ ಪ್ಯೋ ಮಿನ್ ತೇಯಿನ್ ಅವರು ಈ ಸಂದರ್ಭದಲ್ಲಿ ಹಾಜರಿದ್ದರು.

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Apple’s biggest manufacturing partner Foxconn expands India operations: 25 million iPhones, 30,000 dormitories and …

Media Coverage

Apple’s biggest manufacturing partner Foxconn expands India operations: 25 million iPhones, 30,000 dormitories and …
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 23 ಮೇ 2025
May 23, 2025

Citizens Appreciate India’s Economic Boom: PM Modi’s Leadership Fuels Exports, Jobs, and Regional Prosperity