QuotePM Modi campaigns in Rudrapur, Uttarakhand & urges people to vote for BJP
QuoteShri Modi speaks about Mudra Yojana, says BJP Govt wants today's youth to be entrepreneurs of tomorrow
QuoteDev Bhoomi Uttarakhand must get rid of corruption. harda tax must end: PM Modi
QuoteUttarakhand has the potential to attract tourists from the entire world: PM

ಪ್ರಧಾನಿ ನರೇಂದ್ರ ಮೋದಿ ಇಂದು ಉತ್ತರಾಖಂಡ್ ನ ರುದ್ರಾಪುರ್ ನಲ್ಲಿ ಒಂದು ದೊಡ್ಡ ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡಿದರು . ಪ್ರಧಾನಿ ಮೋದಿ ದೊಡ್ಡ ಸಂಖ್ಯೆಯಲ್ಲಿ ರಾಲಿಯಲ್ಲಿ ಹಾಜರಾದ ಉತ್ತರಾಖಂಡದ ಜನರಿಗೆ ಕೃತಜ್ಞತೆ ವ್ಯಕ್ತಪಡಿಸಿದರು. 

ಇಂದು ಘೋಷಿಸಿಲಾದ ಫಲಿತಾಂಶದಲ್ಲಿ ಉತ್ತರ ಪ್ರದೇಶದಲ್ಲಿ ಬಿಜೆಪಿ 3 ಎಂಎಲ್ ಸಿ ಸ್ಥಾನಗಳನ್ನು ಗೆದ್ದಿದೆ . " ಉತ್ತರ ಪ್ರದೇಶದಲ್ಲಿ ಎಂಎಲ್ ಸಿ ಚುನಾವಣೆಯಲ್ಲಿ 3 ಸ್ಥಾನಗಳನ್ನು ಪಡೆಯದ ಸಿಹಿ ಸುದ್ದಿಯಿಂದ ಬಂದಿದ್ದೇನೆ", ಎಂದು ಅವರು ಹೇಳಿದರು

|

ಕ್ಷಿಪಣಿಗಳ ಯಶಸ್ವಿ ಪರೀಕ್ಷೆಗೆ ಪ್ರಧಾನಿ ವಿಜ್ಞಾನಿಗಳನ್ನು ಅಭಿನಂದಿಸಿದರು . " ಗಾಳಿಯಲ್ಲಿ ಸ್ವತಃ ಇತರ ಕ್ಷಿಪಣಿಗಳನ್ನು ನಾಶ ಮಾಡಬಲ್ಲ ಕ್ಷಿಪಣಿಯ ಯಶಸ್ವಿ ಪರೀಕ್ಷೆಗೆ ನಾನು ನಮ್ಮ ವಿಜ್ಞಾನಿಗಳನ್ನು ಅಭಿನಂದಿಸುತ್ತೇನೆ . ವಿರೋಧ ಪಕ್ಷವನ್ನು ಟೀಕಿಸುತ್ತಾ , ನಮ್ಮ ವಿರೋಧಿಗಳು ಹಿಂದೆ ಸರ್ಜಿಕಲ್ ಸ್ಟ್ರೈಕ್ ಬಗ್ಗೆ ಪ್ರಶ್ನಿಸಿದ್ದರು . ಅವರು ಸಾಕ್ಷಿಯನ್ನು ಕೇಳಿದ್ದರು . ಅವರು ಈ ಕ್ಷಿಪಣಿಯ ಕಾರ್ಯನಿರ್ವಹಣೆಯ ಬಗ್ಗೆ ಸಾಕ್ಷಿ ಕೇಳುದಿಲ್ಲವೆಂದು ಭಾವಿಸುತ್ತೇವೆ " ಎಂದು ಅವರು ಹೇಳಿದರು ”

ಉತ್ತರಾಖಂಡ್ ರಚನೆಗೆ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಕೊಡುಗೆಯನ್ನು ಶ್ರೀ ಮೋದಿ ನೆನಪಿಸಿಕೊಂಡರು . "ಅಟಲ್ ಬಿಹಾರಿ ವಾಜಪೇಯಿ ಜಿ ಅವರು ಉತ್ತರಾಖಂಡ್ ಅನ್ನು ರಚಿಸಿದರು . ಅವರ ಪ್ರಯತ್ನ ಮತ್ತು ನೀತಿಗಳು ರಾಜ್ಯವನ್ನು ರಾಜ್ಯವನ್ನು ಹೊಸ ಎತ್ತರಕ್ಕೆ ಕೊಂಡೊಯ್ಯಲು ಸಹಾಯ ಮಾಡಿದೆ " ಎಂದು ಅವರು ಹೇಳಿದರು ”

|

ಉತ್ತರಾಖಂಡದ ಅಭಿವೃದ್ಧಿಗಾಗಿ ಎನ್ ಡಿಎ ಸರ್ಕಾರ ಹಲವಾರು ಕ್ರಮಗಳನ್ನು ಕೈಗೊಳ್ಳುತ್ತಿದೆ ಎಂದೂ ಶ್ರೀ ಮೋದಿ ಹೇಳಿದರು . ಉತ್ತರಾಖಂಡದ ಯುವಕರಿಗೆ ಹೊಸ ಉದ್ಯೋಗಾವಕಾಶಗಳನ್ನು ಒದಗಿಸಲು ಎಲ್ಲಾ ಸಾಧ್ಯತೆಗಳನ್ನು ಮಾಡಲು ಬಿಜೆಪಿ ಬದ್ಧವಾಗಿದೆ . " ಮುದ್ರಾ ಯೋಜನೆಯಡಿಯಲ್ಲಿ ನಾವು ಸಾಲ ಒದಗಿಸಿದ್ದೇವೆ ಮತ್ತು ಯುವ ಜನರ ಸಬಲೀಕರಣ ಮಾಡಿದ್ದೇವೆ . ಅವರು ನಾಳೆಯ ಉದ್ಯಮಿ ಆಗಬೇಕೆಂದು ನಾವು ಬಯಸುತ್ತೇವೆ " ಎಂದು ಮೋದಿ ಹೇಳಿದರು"

ಉತ್ತರಾಖಂಡದ ಜನರು ದೋಷಪೂರಿತ ಮತ್ತು ಭ್ರಷ್ಟ ಸರ್ಕಾರವನ್ನು ತೊಡೆದುಹಾಕುವ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಒತ್ತಿ ಹೇಳಿದರು . "ದೇವ ಭೂಮಿ ಉತ್ತರಾಖಂಡ ಭ್ರಷ್ಟಾಚಾರವನ್ನು ತೊಲಗಿಸಬೇಕು . ಏಕೆ ಸಣ್ಣ ಮತ್ತು ಮಾಧ್ಯಮ ವ್ಯಾಪಾರಿಗಳು ಹರ್ದಾ ತೆರಿಗೆಯನ್ನು ನೀಡಬೇಕು ? ಇದು ಕೊನೆಗೊಳ್ಳಬೇಕು", ಎಂದು ಅವರು ಹೇಳಿದರು .

|

ಉತ್ತರಾಖಂಡ್ ಅಭಿವೃದ್ಧಿ ಬಿಜೆಪಿಗೆ ಅತ್ಯಂತ ಪ್ರಮುಖವಾದದು . " ಉತ್ತರಾಖಂಡ್ ಗೆ ವಿಕಾಸ್ - ವಿದ್ಯುತ್ (ವಿದ್ಯುತ್), ಕಾನೂನ್ ವ್ಯವಸ್ಥೆ (ಕಾನೂನು ಮತ್ತು ಸುವ್ಯವಸ್ಥೆ) ಮತ್ತು ಸಡಕ್ (ರಸ್ತೆಗಳ ಮೂಲಕ ಸೂಕ್ತ ಸಂಪರ್ಕ), ದ ಅಗತ್ಯವಿದೆ ಎಂದು ಪ್ರಧಾನಿ ಮೋದಿ ಹೇಳಿದರು .

ಚಾರ್ ಧಾಮ್ ಅನ್ನು ಉತ್ತಮ ರಸ್ತೆಗಳಿಂದ ಸಂಪರ್ಕಿಸಲು ಕೇಂದ್ರ ಸರ್ಕಾರ 12, 000 ಕೋಟಿಯನ್ನು ಮಂಜೂರು ಮಾಡಿದೆ . " ಸಂಪೂರ್ಣ ವಿಶ್ವದಿಂದ ಪ್ರವಾಸಿಗರನ್ನು ಆಕರ್ಷಿಸುವ ಸಾಮರ್ಥ್ಯವನ್ನು ಉತ್ತರಾಖಂಡ ಹೊಂದಿದೆ . ಚಾರ್ ಧಾಮ್ ಅನ್ನು ಉತ್ತಮ ರಸ್ತೆಗಳಿಂದ ಸಂಪರ್ಕಿಸಲು ನಾವು 12, 000 ಕೋಟಿಯನ್ನು ಮಂಜೂರು ಮಾಡಿದ್ದೇವೆ " ಎಂದು ಶ್ರೀ ಮೋದಿ ಹೇಳಿದರು ”

|

ಉತ್ತರಾಖಂಡ ಸಾಹಸಿಗಳ ಭೂಮಿ . " ನಾಲ್ಕು ದಶಕಗಳಿಂದ ನಮ್ಮ ಮಾಜಿ ಸೈನಿಕರು ಒನ್ ರಾಂಕ್ ಒನ್ ಪೆಂಷನ್ ಗಾಗಿ ಹೋರಾಡಿದರು . ಕಾಂಗ್ರೆಸ್ ಅವರಿಗಾಗಿ ಯಾವುದೇ ಗಮನ ನೀಡಿಲ್ಲ ", ಎಂದು ಶ್ರೀ ಮೋದಿ ಹೇಳಿದರು .

ಭ್ರಷ್ಟಾಚಾರ ಮುಕ್ತ ಸರ್ಕಾರವನ್ನು ಆಯ್ಕೆ ಮಾಡಲು ಬಿಜೆಪಿಗೆ ಮತ ನೀಡಲು ಪ್ರಧಾನಿ ಮೋದಿ ಜನರಲ್ಲಿ ವಿನಂತಿಸಿದರು . " ಅಟಲ್ ಜಿ ಅವರ ಶ್ರೀಮಂತ ಉತ್ತರಾಖಂಡದ ಕನಸನ್ನು ನನಸು ಮಾಡಲು ಸಮರ್ಪಿತವಾದ ಬಿಜೆಪಿಗೆ ಮತ ನೀಡಲು ಉತ್ತರಾಖಂಡದ ಜನರಲ್ಲಿ ಕೋರುತ್ತೇನೆ ," ಎಂದು ಹೇಳಿದರು .

|

ಹಲವಾರು ಬಿಜೆಪಿ ಕಾರ್ಯಕರ್ತರು ಮತ್ತು ನಾಯಕರು ಕಾರ್ಯಕ್ರಮದಲ್ಲಿ ಪಾಲ್ಗೊಂಡರು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
1 in 3 US smartphone imports now made in India, China’s lead shrinks

Media Coverage

1 in 3 US smartphone imports now made in India, China’s lead shrinks
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 26 ಜುಲೈ 2025
July 26, 2025

Citizens Appreciate PM Modi’s Vision of Transforming India & Strengthening Global Ties