ಘನತೆವೆತ್ತ ಅಧ್ಯಕ್ಷ ಗೊತಬಾಯ್ ರಾಜಪಕ್ಸ ಅವರೇ,
ಶ್ರೀಲಂಕಾ ಮತ್ತು ಭಾರತದ ಹಿರಿಯ ಅಧಿಕಾರಿಗಳೇ,
ಸ್ನೇಹಿತರೆ,
ಅಯುಬೋವನ್!
ವಣಕ್ಕಂ!
ನಮಸ್ಕಾರ!
ನಾನು ಅಧ್ಯಕ್ಷ ಗೊತಬಾಯ್ ರಾಜಪಕ್ಸ ಅವರನ್ನು ಮತ್ತು ಅವರ ನಿಯೋಗವನ್ನು ಭಾರತಕ್ಕೆ ಸ್ವಾಗತಿಸಲು ಹರ್ಷಿಸುತ್ತೇನೆ. ಚುನಾವಣೆಯಲ್ಲಿ ನಿರ್ಣಾಯಕ ಜಯ ಸಾಧಿಸಿದ ಅಧ್ಯಕ್ಷರನ್ನು ಹೃತ್ಫೂರ್ವಕವಾಗಿ ಅಭಿನಂದಿಸುತ್ತೇನೆ. ಸುಗಮ ಚುನಾವಣಾ ಪ್ರಕ್ರಿಯೆಗಾಗಿ ಶ್ರೀಲಂಕಾದ ಜನರನ್ನು ನಾನು ಅಭಿನಂದಿಸುತ್ತೇನೆ. ಶ್ರೀಲಂಕಾದಲ್ಲಿನ ಪ್ರಜಾಪ್ರಭುತ್ವದ ಬಲ ಮತ್ತು ಪ್ರೌಢತೆ ಸಂತಸ ಮತ್ತು ಹೆಮ್ಮೆಯ ವಿಷಯವಾಗಿದೆ. ಅಧ್ಯಕ್ಷ ರಾಜ ಪಕ್ಸ ಅವರು ತಮ್ಮ ಪ್ರಥಮ ವಿದೇಶೀ ಪ್ರವಾಸಕ್ಕಾಗಿ ಭಾರತವನ್ನು ಆಯ್ಕೆ ಮಾಡಿಕೊಂಡಿರುವುದು ನಮಗೆ ಗೌರವದ ವಿಚಾರವಾಗಿದೆ ಮತ್ತು ಅವರು ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಎರಡನೇ ವಾರಗಳಲ್ಲಿ ಭಾರತಕ್ಕೆ ಅವರನ್ನು ಸ್ವಾಗತಿಸುವ ಅವಕಾಶವನ್ನು ನಮಗೆ ನೀಡಿದ್ದಾರೆ. ಇದು ಭಾರತ ಮತ್ತು ಶ್ರೀಲಂಕಾದ ಸ್ನೇಹಪರ ಬಾಂಧವ್ಯದ ಶಕ್ತಿ ಮತ್ತು ಚಲನಶೀಲತೆಯ ಸಂಕೇತವಾಗಿದೆ. ಆ ಬಾಂಧವ್ಯಗಳಿಗೆ ಎರಡೂ ದೇಶಗಳು ಸ್ಪಂದಿಸಿದೆ ಎಂಬುದರ ಸಂಕೇತವೂ ಇದಾಗಿದೆ. ನಾವು, ಎರಡೂ ರಾಷ್ಟ್ರಗಳ ಸಂಪೂರ್ಣ ಸಾಮಾನ್ಯ ವಲಯದಲ್ಲಿ ಶಾಂತಿ, ಸಮೃದ್ಧಿ ಮತ್ತು ಭದ್ರತೆಗಾಗಿ ಅಧ್ಯಕ್ಷ ರಾಜಪಕ್ಸ ಅವರೊಂದಿಗೆ ಆಪ್ತವಾಗಿ ಕಾರ್ಯನಿರ್ವಹಿಸಲು ಎದಿರುನೋಡುತ್ತಿದ್ದೇವೆ.
ಗೌರವಾನ್ವಿತರೇ,
ಸಂಘಟಿತ ಮತ್ತು ಸಮೃದ್ಧ ಶ್ರೀಲಂಕ್ಕಾಗಿ ಶ್ರೀಲಂಕಾದ ಜನತೆಯ ಆಶೋತ್ತರವನ್ನು ನೀವು ಪಡೆದಿರುವ ಜನಾದೇಶ ವ್ಯಕ್ತಪಡಿಸುತ್ತದೆ. ಈ ನಿಟ್ಟಿನಲ್ಲಿ ಭಾರತದ ಶುಭಾಶಯಗಳು ಮತ್ತು ಸಹಕಾರ ಶ್ರೀಲಂಕಾದೊಂದಿಗೆ ಇರುತ್ತದೆ. ಸ್ಥಿರ, ಸುಭದ್ರ ಮತ್ತು ಸಮೃದ್ಧ ಶ್ರೀಲಂಕಾವು ಭಾರತದ ಹಿತಾಸಕ್ತಿಯಷ್ಟೇ ಅಲ್ಲ ಅದು ಇಡೀ ಹಿಂದೂ ಮಹಾಸಾಗರ ವಲಯದ ಹಿತವಾಗಿದೆ.
ಸ್ನೇಹಿತರೆ,
ಭಾರತವು ಶ್ರೀಲಂಕಾಗೆ ಸಾಗರ ಸಮೀಪದ ನೆರೆ ಮತ್ತು ವಿಶ್ವಾಸಾರ್ಹ ಮಿತ್ರ ರಾಷ್ಟ್ರ. ನಮ್ಮ ಐತಿಹಾಸಿಕ, ಸಾಂಪ್ರದಾಯಿಕ, ಭಾಷಿಕ, ಸಾಂಸ್ಕೃತಿಕ ಮತ್ತು ನಾಗರಿಕತೆಯ ಸಂಪರ್ಕಗಳು ನಮ್ಮ ಎರಡು ರಾಷ್ಟ್ರಗಳ ನಡುವಿನ ಬಾಂಧವ್ಯಕ್ಕೆ ಭದ್ರ ಬುನಾದಿಯಾಗಿವೆ.
ನನ್ನ ಸರ್ಕಾರದ ನೆರೆ ರಾಷ್ಟ್ರ ಮೊದಲು ನೀತಿ ಮತ್ತು ಸಾಗರ್ ಸಿದ್ಧಾಂತದ ನಿಟ್ಟಿನಲ್ಲಿ, ನಾವು ಶ್ರೀಲಂಕಾದೊಂದಿಗೆ ನಮ್ಮ ಬಾಂಧವ್ಯವನ್ನು ಆದ್ಯತೆಗೊಳಿಸಿದ್ದೇವೆ. ನಮ್ಮ ಎರಡೂ ದೇಶಗಳ ಭದ್ರತೆ ಮತ್ತು ಅಭಿವೃದ್ಧಿ ಪ್ರತ್ಯೇಕಿಸಲಾಗದಂಥದ್ದು. ಹೀಗಾಗಿ ನಾವು ಪರಸ್ಪರರ ಸುರಕ್ಷತೆ ಮತ್ತು ಸ್ಥಿರತೆಯ ಅರಿವು ಹೊಂದುವುದು ಸ್ವಾಭಾವಿಕವಾಗಿದೆ.
ಇಂದು ರಾಷ್ಟ್ರಾಧ್ಯಕ್ಷರು ಮತ್ತು ನಾನು ದ್ವಿಪಕ್ಷೀಯ ಮತ್ತು ಪರಸ್ಪರ ಹಿತಾಸಕ್ತಿಯ ಅಂತಾರಾಷ್ಟ್ರೀಯ ವಿಚಾರಗಳ ಕುರಿತಂತೆ ಫಲಪ್ರದ ಮತ್ತು ಉತ್ತಮ ಚರ್ಚೆ ನಡೆಸಿದ್ದೇವೆ. ಎರಡೂ ರಾಷ್ಟ್ರಗಳ ನಡುವಿನ ಬಹುಮುಖಿ ಸಹಕಾರವನ್ನು ನಾವು ಒಟ್ಟಾಗಿ ಬಲಪಡಿಸಬಹುದು ಎಂದು ನಿರ್ಧರಿಸಿದ್ದೇವೆ. ಶ್ರೀಲಂಕಾದೊಂದಿಗೆ ಅಭಿವೃದ್ಧಿ ಸಹಯೋಗ ಕುರಿತಂತೆ ಭಾರತದ ಬದ್ಧತೆಯ ಬಗ್ಗೆ ನಾನು ರಾಷ್ಟ್ರಾಧ್ಯಕ್ಷರಿಗೆ ಭರವಸೆ ನೀಡಿದ್ದೇನೆ. ಎಂದಿನಂತೆ ಈ ಸಹಕಾರ ಶ್ರೀಲಂಕಾದ ಜನರ ಆದ್ಯತೆಗೆ ಅನುಗುಣವಾಗಿದೆ. 400 ದಶಲಕ್ಷ ಡಾಲರ್ ಗಳ ಹೊಸ ಸಾಲವು ಶ್ರೀಲಂಕಾದ ಮೂಲಸೌಕರ್ಯ ಮತ್ತು ಅಭಿವೃದ್ಧಿಗೆ ಉತ್ತೇಜನ ನೀಡಲಿದೆ. ಈ ಸಾಲದ ಸಾಲವು ಉಭಯ ದೇಶಗಳ ನಡುವಿನ ಪರಸ್ಪರ ಲಾಭದ ಯೋಜನೆಯ ಸಹಕಾರವನ್ನು ವೇಗಗೊಳಿಸುತ್ತದೆ, ಶ್ರೀಲಂಕಾದ ಆರ್ಥಿಕತೆಯು ಇದರ ಪ್ರಯೋಜನ ಪಡೆಯುತ್ತದೆ ಎಂಬ ವಿಶ್ವಾಸ ನನಗಿದೆ. ಭಾರತದ ವಸತಿ ಯೋಜನೆಯಡಿ 46 ಸಾವಿರ ಮನೆಗಳನ್ನು ಶ್ರೀಲಂಕಾದ ಉತ್ತರ ಮತ್ತು ಪೂರ್ವ ಪ್ರಾಂತ್ಯಗಳಲ್ಲಿ ಆಂತರಿಕವಾಗಿ ಸ್ಥಳಾಂತರಗೊಂಡಿರುವವರಿಗಾಗಿ ನಿರ್ಮಿಸಲಾಗುತ್ತಿದೆ. ಭಾರತೀಯ ಮೂಲದ ತಮಿಳರಿಗಾಗಿ ದೇಶದ ಒಳ ಪ್ರದೇಶಗಳಲ್ಲಿ 14 ಸಾವಿರ ಮನೆಗಳ ನಿರ್ಮಾಣ ಪ್ರಗತಿಯಲ್ಲಿದೆ. ಶ್ರೀಲಂಕಾದಲ್ಲಿ ಸೌರ ಶಕ್ತಿ ಯೋಜನೆಗಳಿಗಾಗಿ ಈ ಹಿಂದೆ ಘೋಷಿಸಲಾದ 100 ದಶಲಕ್ಷ ಡಾಲರ್ ಸಾಲವನ್ನು ಬಳಸಲು ನಾವು ಒಪ್ಪಿದ್ದೇವೆ ಎಂಬುದು ನನಗೆ ಸಂತಸ ನೀಡಿದೆ. ಶ್ರೀಲಂಕಾದಲ್ಲಿ ಶಿಕ್ಷಣ ಮತ್ತು ಮೂಲಸೌಕರ್ಯಗಳಿಗೆ ಭಾರತ ನೀಡಿರುವ ಅನುದಾನದ ಆಧಾರದ ಮೇಲೆ 20 ಸಮುದಾಯ ಅಭಿವೃದ್ಧಿ ಯೋಜನೆಗಳು ಮತ್ತು ಇತರ ಜನ ಕೇಂದ್ರಿತ ಯೋಜನೆಗಳ ಬಗ್ಗೆ ಅಧ್ಯಕ್ಷರು ಮತ್ತು ನನ್ನ ನಡುವೆ ಉತ್ತಮ ಚರ್ಚೆ ನಡೆಯಿತು.
ಸ್ನೇಹಿತರೆ,
ಭಾರತ ಸದಾ ಎಲ್ಲ ಸ್ವರೂಪದ ಭಯೋತ್ಪಾದನೆಯನ್ನು ವಿರೋಧಿಸುತ್ತಾ ಬಂದಿದೆ ಮತ್ತು ಗಡಿಯಾಚೆಗಿನ ಭಯೋತ್ಪಾದನೆ ಸೇರಿದಂತೆ ಇತರ ಸ್ವರೂಪದ ಭಯೋತ್ಪಾದನೆಯ ವಿರುದ್ಧ ಅಂತಾರಾಷ್ಟ್ರೀಯ ಸಮುದಾಯದ ಕ್ರಮವನ್ನು ನಿರೀಕ್ಷಿಸುತ್ತದೆ. ಈ ವರ್ಷದ ಈಸ್ಟರ್ ಸಂದರ್ಭದಲ್ಲಿ ಶ್ರೀಲಂಕಾದಲ್ಲಿ ಮಾನವತೆಯ ವೈವಿಧ್ಯತೆ ಮತ್ತು ಸಹಜ ಜೀವನದ ಮೌಲ್ಯಗಳ ಮೇಲೆ ಭಯೋತ್ಪಾದಕರು ಕ್ರೂರ ದಾಳಿ ನಡೆಸಿದ್ದರು. ಭಯೋತ್ಪಾದನೆ ಮತ್ತು ವಿಧ್ವಂಸಕ ಶಕ್ತಿಗಳ ವಿರುದ್ಧದ ಹೋರಾಟಕ್ಕೆ ಶ್ರೀಲಂಕಾಗೆ ಬೆಂಬಲ ವ್ಯಕ್ತಪಡಿಸಲು ಭಾರತದಲ್ಲಿ ಚುನಾವಣೆ ಮುಗಿದ ಬಳಿಕ ತತ್ ಕ್ಷಣವೇ ನಾನು ಶ್ರೀಲಂಕಾಗೆ ತೆರಳಿದೆ. ನಾನು ಅಧ್ಯಕ್ಷ ರಾಜಪಕ್ಸ ಅವರೊಂದಿಗೆ ಪರಸ್ಪರ ಸುರಕ್ಷತೆ ಮತ್ತು ಭಯೋತ್ಪಾದನೆಯ ವಿರುದ್ಧದ ಹೋರಾಟಕ್ಕೆ ಪರಸ್ಪರ ಸಹಕಾರ ವರ್ಧನೆ ಕುರಿತಂತೆ ವಿವರವಾಗಿ ಚರ್ಚಿಸಿದೆ. ಶ್ರೀಲಂಕಾದ ಪೊಲೀಸ್ ಅಧಿಕಾರಿಗಳು ಈಗಾಗಲೇ ಭಾರತದ ಪ್ರಮುಖ ಸಂಸ್ಥೆಗಳಲ್ಲಿ ಭಯೋತ್ಪಾದನೆ ನಿಗ್ರಹ ತರಬೇತಿ ಪಡೆಯುತ್ತಿದ್ದಾರೆ. ಭಯೋತ್ಪಾದನೆ ನಿಗ್ರಹಕ್ಕಾಗಿ ಶ್ರೀಲಂಕಾಗೆ 50 ದಶಲಕ್ಷ ಡಾಲರ್ ವಿಶೇಷ ಸಾಲವನ್ನು ಪ್ರಕಟಿಸಲು ನಾನು ಹರ್ಷಿಸುತ್ತೇನೆ.
ಸ್ನೇಹಿತರೆ,
ಮೀನುಗಾರರ ಜೀವನೋಪಾಯಕ್ಕೆ ಬಾಧಕವಾಗಿರುವ ವಿಚಾರಗಳ ಬಗ್ಗೆಯೂ ಚರ್ಚಿಸಲಾಯಿತು. ನಾವು ಈ ವಿಚಾರದಲ್ಲಿ ರಚನಾತ್ಮಕ ಮತ್ತು ಮನವೀಯ ದೃಷ್ಟಿಕೋನವನ್ನು ಹೊಂದಲು ನಿರ್ಧರಿಸಿದ್ದೇವೆ.
ಸ್ನೇಹಿತರೆ,
ನಾವು ಶ್ರೀಲಂಕಾದ ಸಾಮರಸ್ಯದ ಬಗ್ಗೆ ಮುಕ್ತವಾಗಿ ಅಭಿಪ್ರಾಯ ಹಂಚಿಕೊಂಡಿದ್ದೇವೆ. ಅಧ್ಯಕ್ಷ ರಾಜಪಕ್ಸೆ ಅವರು ನನಗೆ ಸಾಂಪ್ರದಾಯಿಕ ಸೌಹಾರ್ದದ ಬಗ್ಗೆ ಅವರ ಸಮಗ್ರ ರಾಜಕೀಯ ಮುನ್ನೋಟವನ್ನು ನನಗೆ ತಿಳಿಸಿದ್ದಾರೆ. ಶ್ರೀಲಂಕಾದ ಸರ್ಕಾರ, ಸಮಾನತೆ, ನ್ಯಾಯ, ಶಆಂತಿ ಮತ್ತು ಗೌರವಕ್ಕೆ ಸಂಬಂಧಿಸಿದಂತೆ ತಮಿಳು ಜನರ ಆಶೋತ್ತರ ಈಡೇರಿಸಲು ಸಾಮರಸ್ಯದ ಪ್ರಕ್ರಿಯೆಯನ್ನು ಮುಂದುವರಿಸಿಕೊಂಡು ಹೋಗುತ್ತದೆ ಎಂಬ ವಿಶ್ವಾಸ ನನಗಿದೆ. ಇದರಲ್ಲಿ 13ನೇ ತಿದ್ದುಪಡಿಯ ಅನುಷ್ಠಾನವೂ ಸೇರಿದೆ. ಭಾರತವು ಶ್ರೀಲಂಕಾದ ಉತ್ತರ ಮತ್ತು ಪೂರ್ವದ ಅಭಿವೃದ್ಧಿ ಸೇರಿದಂತೆ ಇಡೀ ಶ್ರೀಲಂಕಾದ ಅಭಿವೃದ್ಧಿಯಲ್ಲಿ ವಿಶ್ವಾಸಾರ್ಹ ಪಾಲುದಾರನಾಗಲಿದೆ.
ಸ್ನೇಹಿತರೆ,
ನಾನು ಮತ್ತೊಮ್ಮೆ ಅಧ್ಯಕ್ಷ ರಾಜಪಕ್ಸೆ ಅವರನ್ನು ಭಾರತಕ್ಕೆ ಸ್ವಾಗತಿಸುತ್ತೇನೆ. ಅವರ ಈ ಭೇಟಿ ನಮ್ಮ ಪರಸ್ಪರ ಬಾಂಧವ್ಯವನ್ನು ಬಲಪಡಿಸಲಿದೆ. ನಮ್ಮ ಪರಸ್ಪರ ಸಹಕಾರವು ವಲಯದಲ್ಲಿ ಎರಡೂ ರಾಷ್ಟ್ರಗಳ ಅಭಿವೃದ್ಧಿ, ಶಾಂತಿ, ಸ್ಥಿರತೆಯನ್ನು ಉತ್ತೇಜಿಸಲಿದೆ.
ಬಹೋಮಾ – ಸ್ತುತಿ.
ನಂಡ್ರಿ
ಧನ್ಯವಾದಗಳು
चुनाव में निर्णायक जीत के लिए मैं राष्ट्रपति गोठाभय राजपक्ष को हार्दिक बधाई देता हूं। चुनाव प्रक्रिया सुचारु रूप से संपन्न हुई, इसके लिए मैं श्रीलंका की जनता को बधाई देता हूँ। श्रीलंका में लोकतंत्र की मजबूती और परिपक्वता बहुत गर्व और खुशी का विषय है: PM @narendramodi pic.twitter.com/SpaTrgVOLU
— PMO India (@PMOIndia) November 29, 2019
यह हमारे लिए सम्मान की बात है कि राष्ट्रपति राजपक्ष ने अपनी पहली विदेश यात्रा के लिए भारत को चुना और पद संभालने के दो हफ्ते के भीतर भारत में हमें उनका सम्मान करने का मौका दिया: PM @narendramodi pic.twitter.com/6LsaUWxZ5f
— PMO India (@PMOIndia) November 29, 2019
आपको प्राप्त जनादेश एक संगठित, मजबूत और समृद्ध श्रीलंका के लिए श्रीलंका के लोगों की आकांक्षाओं को अभिव्यक्त करता है। इस संबंध में भारत की शुभेच्छा और सहयोग हमेशा श्रीलंका के साथ है: PM @narendramodi pic.twitter.com/FcxArH7NUJ
— PMO India (@PMOIndia) November 29, 2019
आपसी सुरक्षा के लिए और आतंकवाद के विरुद्ध आपसी सहयोग को और मजबूत करने पर मैंने राष्ट्रपति राजपक्ष के साथ विस्तार से चर्चा की है। प्रमुख भारतीय संस्थानों में श्रीलंका के पुलिस अधिकारी counter terrorist training प्राप्त कर रहे हैं: PM @narendramodi pic.twitter.com/PdoaC9LR8F
— PMO India (@PMOIndia) November 29, 2019
मछुवारों की आजीविका को प्रभावित करने वाले मुद्दों पर भी चर्चा की। हमारे बीच सहमति है कि हम इस मामले में रचनात्मक और मानवीय दृष्टिकोण जारी रखेंगे: PM @narendramodi pic.twitter.com/v1SlH3yjn7
— PMO India (@PMOIndia) November 29, 2019
मुझे विश्वास है कि श्रीलंका सरकार तमिलों की समानता, न्याय, शांति और सम्मान की आकांक्षाओं को पूरा करने के लिए, reconciliation की प्रक्रिया को आगे बढ़ाएगी: PM @narendramodi pic.twitter.com/186Whcav0H
— PMO India (@PMOIndia) November 29, 2019