ಆಂಧ್ರಪ್ರದೇಶದ ರಾಜ್ಯಪಾಲರಾದ ಶ್ರೀ. ಇ.ಎಸ್.ಎಲ್. ನರಸಿಂಹನ್ ಅವರೇ,
ಆಂಧ್ರಪ್ರದೇಶದ ಮುಖ್ಯಮಂತ್ರಿಗಳಾದ ಶ್ರೀ. ಚಂದ್ರಬಾಬು ನಾಯ್ಡು ಅವರೇ,
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ ಸಚಿವರಾದ ಡಾ. ಹರ್ಷವರ್ಧನ್ ಅವರೇ,
ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಹಾಗೂ ಭೂ ವಿಜ್ಞಾನ ಖಾತೆ ಸಹಾಯಕ ಸಚಿವರಾದ ಶ್ರೀ. ವೈ.ಎಸ್. ಚೌಧರಿ ಅವರೇ,
ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆಯ ಮಹಾ ಅಧ್ಯಕ್ಷರಾದ ಪ್ರೊ. ಡಿ. ನಾರಾಯಣ ರಾವ್ ಅವರೇ,
ವೆಂಕಟೇಶ್ವರ ವಿಶ್ವವಿದ್ಯಾಲಯದ ಕುಲಪತಿಗಳಾದ ಪ್ರೊ. ಎ. ದಾಮೋದರಮ್ ಅವರೇ,
ಗೌರವಾನ್ವಿತ ಪ್ರತಿನಿಧಿಗಳೇ,
ಮಹನೀಯರೇ ಮತ್ತು ಮಹಿಳೆಯರೇ,
ನಾನು ಹೊಸವರ್ಷವನ್ನು ಪವಿತ್ರ ನಗರ ತಿರುಪತಿಯಲ್ಲಿ ನಮ್ಮ ದೇಶದ ಮತ್ತು ವಿದೇಶದ ಗೌರವಾನ್ವಿತ ವಿಜ್ಞಾನಿಗಳೊಂದಿಗೆ ಆರಂಭಿಸುತ್ತಿರುವುದಕ್ಕೆ ಸಂತೋಷಭರಿತನಾಗಿದ್ದೇನೆ.
ಶ್ರೀ ವೆಂಕಟೇಶ್ವರ ವಿಶ್ವವಿದ್ಯಾಲಯದ ಅದ್ಭುತ ಕ್ಯಾಂಪಸ್ ನಲ್ಲಿ ನಾನು ಭಾರತೀಯ ವಿಜ್ಞಾನ ಕಾಂಗ್ರೆಸ್ ನ 104ನೇ ಅಧಿವೇಶನವನ್ನು ಉದ್ಘಾಟಿಸಲು ಸಂತೋಷ ಪಡುತ್ತೇನೆ.
ಈ ವರ್ಷದ ಅಧಿವೇಶನಕ್ಕೆ “ರಾಷ್ಟ್ರದ ಅಭಿವೃದ್ಧಿಗೆ ವಿಜ್ಞಾನ ಮತ್ತು ತಂತ್ರಜ್ಞಾನ” ಎಂಬ ಸೂಕ್ತ ವಿಚಾರವನ್ನು ಆಯ್ಕೆ ಮಾಡಿಕೊಂಡಿರುವುದಕ್ಕೆ ನಾನು ಭಾರತೀಯ ವಿಜ್ಞಾನ ಕಾಂಗ್ರೆಸ್ ಸಂಸ್ಥೆಯನ್ನು ಶ್ಲಾಘಿಸುತ್ತೇನೆ.
ಗೌರವಾನ್ವಿತ ಪ್ರತಿನಿಧಿಗಳೇ,
ತಮ್ಮ ದೃಷ್ಟಿಕೋನ, ಮುನ್ನೋಟ, ಶ್ರಮ, ನಾಯಕತ್ವದಿಂದ ನಮ್ಮ ಸಮಾಜವನ್ನು ಸಬಲಗೊಳಿಸಲು ಅವಿಶ್ರಾಂತವಾಗಿ ದುಡಿಯುತ್ತಿರುವ ವಿಜ್ಞಾನಿಗಳಿಗೆ ನಮ್ಮ ದೇಶ ಸದಾ ಕೃತಜ್ಞವಾಗಿದೆ.
2016ರ ನವೆಂಬರ್ ನಲ್ಲಿ ದೇಶ ಅಂಥ ಒಬ್ಬ ಶ್ರೇಷ್ಠ ವಿಜ್ಞಾನಿ ಹಾಗೂ ಸಾಂಸ್ಥಿಕ ನಿರ್ಮಾತೃ ಡಾ. ಎಂ.ಜಿ.ಕೆ. ಮೆನನ್ ಅವರನ್ನು ಕಳೆದುಕೊಂಡಿತು. ನಾನು ಅವರಿಗೆ ಶ್ರದ್ಧಾಂಜಲಿ ಅರ್ಪಿಸಲು ನಿಮ್ಮೊಂದಿಗೆ ಸೇರುತ್ತೇನೆ.
ಗೌರವಾನ್ವಿತ ಪ್ರತಿನಿಧಿಗಳೇ,
ನಾವು ಇಂದು ಎದುರಿಸುತ್ತಿರುವ ಬದಲಾವಣೆಯ ವೇಗ ಮತ್ತು ಮಾನದಂಡ ಅಭೂತಪೂರ್ವವಾದ್ದು.
ನಾವು ಈ ಸವಾಲುಗಳಿಗೆ ಹೇಗೆ ಸ್ಪಂದಿಸುತ್ತವೆ, ಅವು ಹೇಗೆ ಉದ್ಭವಿಸುತ್ತವೆ ಎಂಬುದೂ ನಮಗೆ ಗೊತ್ತಿಲ್ಲ. ಅದು ಹೊಸ ವಾಸ್ತವತೆಯನ್ನು ತ್ವರಿತವಾಗಿ ಅಳವಡಿಸಿಕೊಳ್ಳಲು ಅವಕಾಶ ನೀಡುವ ಆಳವಾಗಿ ಬೇರುಬಿಟ್ಟ ಕುತೂಹಲ – ಚಾಲಿತ ವೈಜ್ಞಾನಿಕ ಸಂಪ್ರದಾಯ.
ನಾವು ನಮ್ಮ ಜನರು ಹಾಗೂ ಮೂಲ ಸೌಕರ್ಯಗಳ ಮೇಲೆ ಇಂದು ಮಾಡುವ ಹೂಡಿಕೆಯಿಂದ, ನಾಳೆಯ ತಜ್ಞರು ಬರುತ್ತಾರೆ. ನನ್ನ ಸರ್ಕಾರ ವೈಜ್ಞಾನಿಕ ಅರಿವಿನ ವಿಭಿನ್ನ ವಾಹಿನಿಗಳಿಗೆ ಬೆಂಬಲ ನೀಡಲು ಬದ್ಧವಾಗಿದೆ; ಅದು ನಾವಿನ್ಯತೆಗೆ ಒತ್ತು ನೀಡಿದ ಮೂಲಭೂತ ವಿಜ್ಞಾನದಿಂದ ಹಿಡಿದು ಪೂರಕ ವಿಜ್ಞಾನದವರೆಗೆ ಇರುತ್ತದೆ.
ಗೌರವಾನ್ವಿತ ಪ್ರತಿನಿಧಿಗಳೇ,
ವಿಜ್ಞಾನ ಕಾಂಗ್ರೆಸ್ ನ ಕಳೆದ ಎರಡು ಅಧಿವೇಶನಗಳಲ್ಲಿ ನಾನು ನಿಮ್ಮ ಮುಂದೆ ಹಲವು ಪ್ರಮುಖ ಸವಾಲುಗಳನ್ನು ಮತ್ತು ದೇಶಕ್ಕೆ ಅವಕಾಶಗಳನ್ನು ಮಂಡಿಸಿದ್ದೆ.
ಅಂತ ಕೆಲವು ಪ್ರಮುಖ ಸವಾಲುಗಳು ಪ್ರಮುಖ ಕ್ಷೇತ್ರಗಳಾದ ಶುದ್ಧ ನೀರು ಮತ್ತು ಇಂಧನ, ಆಹಾರ, ಪರಿಸರ, ಹವಾಮಾನ, ಭದ್ರತೆ ಮತ್ತು ಆರೋಗ್ಯ ಸೇವೆಗೆ ಸಂಬಂಧಿಸಿದ್ದಾಗಿವೆ.
ನಾವು ಅಡ್ಡಿಪಡಿಸುವಂಥ ತಂತ್ರಜ್ಞಾನಗಳ ಹೆಚ್ಚಳದ ಮೇಲೂ ಅಷ್ಟೇ ಸಮಾನವಾಗಿ ಕಣ್ಣಿಡುವ ಅಗತ್ಯವಿದೆ ಮತ್ತು ಅವುಗಳನ್ನು ಬೆಳವಣಿಗೆಗೆ ಸಾಮರ್ಥ್ಯವಾಗಿ ಬಳಸಿಕೊಳ್ಳಬೇಕಾಗಿದೆ. ನಮ್ಮ ತಂತ್ರಜ್ಞಾನದ ಸಿದ್ಧವಾಗಿರುವಿಕೆ ಮತ್ತು ಸಾಮರ್ಥ್ಯದ ಸವಾಲು ಮತ್ತು ಅವಕಾಶಗಳನ್ನು ನಾವು ಸ್ಪಷ್ಟವಾಗಿ ಅಳೆಯಬೇಕಾಗುತ್ತದೆ.
ಕಳೆದ ವರ್ಷದ ವಿಜ್ಞಾನ ಕಾಂಗ್ರೆಸ್ ನಲ್ಲಿ ಬಿಡುಗಡೆ ಮಾಡಲಾದ ತಂತ್ರಜ್ಞಾನ ಮುನ್ನೋಟ 2035ದ ದಸ್ತಾವೇಜಿನಂತೆ ಈಗ 12 ಪ್ರಮುಖ ತಂತ್ರಜ್ಞಾನ ವಲಯಗಳಿಗೆ ವಿವರವಾ ಮಾರ್ಗಸೂಚಿ ರೂಪಿಸಲಾಗುತ್ತಿದೆ ಎಂದು ನನಗೆ ತಿಳಿಸಲಾಗಿದೆ. ತರುವಾಯ ನೀತಿ ಆಯೋಗ ದೇಶಕ್ಕೆ ಸಮಗ್ರವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಮುನ್ನೋಟವನ್ನು ರೂಪಿಸಲಿದೆ.
ಕ್ಷಿಪ್ರವಾಗಿ ಜಾಗತಿಕ ಬೆಳವಣಿಗೆಯಾಗುತ್ತಿರುವ ಸೈಬರ್ ಭೌದ್ಧಿಕ ವ್ಯವಸ್ಥೆಯನ್ನು ಈಗ ಮುಖ್ಯವಾಗಿ ನಾವು ಸರಿಪಡಿಸಬೇಕಾಗಿದೆ. ಇದು ಹಿಂದೆಂದೂ ಕಂಡರಿಯದ ಸವಾಲುಗಳಿಗೆ ಮತ್ತು ಜನಸಂಖ್ಯೆಯ ಲಾಭಾಂಶಕ್ಕೆ ಎದುರಾಗುವ ಅಪಾಯ ಎದುರಿಸುವ ಸಾಮರ್ಥ್ಯ ಹೊಂದಿದೆ. ನಾವು ಇದನ್ನು ಸಂಶೋಧನೆ, ತರಬೇತಿ ಮತ್ತು ಕೌಶಲ ರೊಬೊಟಿಕ್ಸ್, ಕೃತಕ ಬುದ್ಧಿ ಮತ್ತೆ, ಡಿಜಿಟಲ್ ಉತ್ಪಾದನೆ, ದೊಡ್ಡ ಮಾಹಿತಿ ವಿಶ್ಲೇಷಣೆ, ಆಳವಾದ ಕಲಿಕೆ, ಕ್ವಾಂಟಮ್ ಸಂವಹನಗಳಿಗೆ ಮತ್ತು ವಸ್ತುಗಳ –ಅಂತರ್ಜಾಲದ ಮೂಲಕ ಒಂದು ದೊಡ್ಡ ಅವಕಾಶವಾಗಿ ಪರಿವರ್ತಿಸಬಹುದಾಗಿದೆ.
ಉತ್ಪಾದನೆ ಮತ್ತು ಸೇವಾ ವಲಯದಲ್ಲಿ ಈ ತಂತ್ರಜ್ಞಾನವನ್ನು ಬಳಸಿಕೊಂಡು ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದೆ. ಕೃಷಿ, ಜಲ, ಇಂದನ, ಮತ್ತು ಸಂಚಾರ ವ್ಯವಸ್ಥೆ ನಿರ್ವಹಣೆ, ಆರೋಗ್ಯ, ಪರಿಸರ, ಮೂಲಸೌಕರ್ಯ ಮತ್ತು ಭೂ ಮಾಹಿತಿ ವ್ಯವಸ್ಥೆ, ಸುರಕ್ಷತೆ, ಹಣಕಾಸು ವ್ಯವಸ್ಥೆ ಮತ್ತು ಅಪರಾಧ ತಡೆಯಲೂ ಇದನ್ನು ಬಳಸಿಕೊಳ್ಳಬೇಕಾಗಿದೆ.
ನಾವು ನಮ್ಮ ಕೌಶಲ ಮತ್ತು ಮಾನವಶಕ್ತಿ, ಮೂಲಸೌಕರ್ಯ, ಸಂಶೋಧನೆ ಮತ್ತು ಅಭಿವೃದ್ಧಿ ಆಧಾರಿತ ಸೃಷ್ಟಿಗಳ ಭವಿಷ್ಯವನ್ನು ಸುರಕ್ಷಿತವಾಗಿಡಲು ಸೈಬರ್ ಭೌದ್ಧಿಕ ವ್ಯವಸ್ಥೆಯಯಲ್ಲಿ ಒಂದು ಅಂತರ ಸಚಿವಾಲಯ ರಾಷ್ಟ್ರೀಯ ಅಭಿಯಾನ ಅಭಿವೃದ್ಧಿಪಡಿಸುವ ಅಗತ್ಯವಿದೆ.
ಗೌರವಾನ್ವಿತ ಪ್ರತಿನಿಧಿಗಳೇ,
ಭಾರತ ಪರ್ಯಾಯ ದ್ವೀಪವನ್ನು ಸುತ್ತುವರಿದಿರುವ ಸಾಗರಗಳು 13 ನೂರು ದ್ವೀಪಗಳನ್ನು ಒಳಗೊಂಡಿವೆ. ಅವು ನಮಗೆ ಏಳೂವರೆ ಸಾವಿರ ಕಿಲೋ ಮೀಟರ್ ಕರಾವಳಿ ಮತ್ತು 2.4 ದಶಲಕ್ಷ ಚದರ ಕಿಲೋ ಮೀಟರ್ ವಿಶೇಷ ಆರ್ಥಿಕ ವಲಯವನ್ನು ನೀಡಿದೆ.
ಅವು ಇಂಧನ, ಆಹಾರ, ಔಷಧ ಮತ್ತು ತರ ನೈಸರ್ಗಿಕ ಸಂಪನ್ಮೂಲಗಳ ಅಗಾಧ ಅವಕಾಶವನ್ನು ಒಳಗೊಂಡಿವೆ. ಸಾಗರ ಆರ್ಥಿಕತೆಯು ನಮ್ಮ ಸುಸ್ಥಿರ ಭವಿಷ್ಯದ ಗಣನೀಯ ಆಯಾಮವಾಗಿದೆ.
ಜವಾಬ್ದಾರಿಯುತ ಮಾರ್ಗದಲ್ಲಿ ಸಾಗರವನ್ನು ಅರಿಯಲು, ಅದರ ಸಂಪನ್ಮೂಲವನ್ನು ಬಳಸಿಕೊಳ್ಳಲು ಭೂ ವಿಜ್ಞಾನಗಳ ಸಚಿವಾಯವು ಆಳ ಸಮುದ್ರದ ಅಭಿಯಾನವನ್ನು ಆರಂಭಿಸಲು ಕಾರ್ಯೋನ್ಮುಖವಾಗಿದೆ ಎಂದು ನನಗೆ ತಿಳಿಸಲಾಗಿದೆ. ಇದು ದೇಶದ ಭದ್ರತೆ ಮತ್ತು ಪ್ರಗತಿಗೆ ಪರಿವರ್ತನಾತ್ಮಕ ಹೆಜ್ಜೆಯಾಗಿದೆ.
ಗೌರವಾನ್ವಿತ ಪ್ರತಿನಿಧಿಗಳೇ,
ನಮ್ಮ ಉತ್ತಮ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆಗಳು, ಜಾಗತಿಕ ಗುಣಮಟ್ಟದ ನಿಟ್ಟಿನಲ್ಲಿ ತಮ್ಮ ಮೂಲ ಸಂಶೋಧನೆಯನ್ನು ಇನ್ನೂ ಹೆಚ್ಚು ಬಲಪಡಿಸಬೇಕಾಗಿದೆ. ಈ ಮೂಲಭೂತ ಜ್ಞಾನವನ್ನು ನಾವಿನ್ಯ, ನವೋದ್ಯಮ ಮತ್ತು ಕೈಗಾರಿಕೆಯಾಗಿ ತರ್ಜುಮೆ ಮಾಡುವ ಅಗತ್ಯವದ್ದು, ಇದು ಸಮಗ್ರ ಮತ್ತು ಸುಸ್ಥಿರ ಅಭಿವೃದ್ಧಿ ಸಾಧಿಸಲು ಸಹಕಾರಿಯಾಗಲಿದೆ.
ಸ್ಕೋಪಸ್ ದತ್ತಾಂಶವು ಭಾರತವು ವೈಜ್ಞಾನಿಕ ಪ್ರಕಾಶನ ಕ್ಷೇತ್ರದಲ್ಲಿ ವಿಶ್ವದಲ್ಲಿ 6ನೇ ಶ್ರೇಯಾಂಕದಲ್ಲಿದ್ದು, ವಿಶ್ವದ ಸರಾಸರಿ ಪ್ರಗತಿ ದರವಾದ ಶೇಕಡ 4ಕ್ಕೆ ಪ್ರತಿಯಾಗಿ ಶೇಕಡ 14ರ ದರದಲ್ಲಿ ಪ್ರಗತಿಯನ್ನು ಸಾಧಿಸುತ್ತಿದೆ ಎಂಬುದನ್ನು ತೋರಿಸುತ್ತದೆ. ನಮ್ಮ ವಿಜ್ಞಾನಿಗಳು ಮೂಲ ಸಂಶೋಧನೆ, ಅದರ ತಾಂತ್ರಿಕ ತರ್ಜುಮೆ ಮತ್ತು ಸಾಮಾಜಿಕ ಸಂಪರ್ಕದ ಗುಣಮಟ್ಟ ಹೆಚ್ಚಳದ ಸವಾಲನ್ನು ಪೂರೈಸುತ್ತಾರೆ ಎಂಬ ವಿಶ್ವಾಸ ನನಗಿದೆ.
2030ರ ಹೊತ್ತಿಗೆ ಭಾರತವು ವಿಜ್ಞಾನ ಮತ್ತು ತಂತ್ರಜ್ಞಾನದಲ್ಲಿ ವಿಶ್ವದ ಮೂರು ರಾಷ್ಟ್ರಗಳ ಪೈಕಿ ಒಂದಾಗಲಿದೆ ಮತ್ತು ವಿಶ್ವದ ಅತ್ಯುತ್ತಮ ಪ್ರತಿಭಾವಂತರ ಆಕರ್ಷಕ ತಾಣಗಳಲ್ಲಿ ಒಂದಾಗಲಿದೆ. ನಾವು ಇಂದು ಅಳವಡಿಸಿರುವ ಕ್ರಮಗಳು ಈ ಗುರಿ ಸಾಧನೆ ಮಾಡಲಿವೆ.
ಗೌರವಾನ್ವಿತ ಪ್ರತಿನಿಧಿಗಳೇ,
ವಿಜ್ಞಾನವು ನಮ್ಮ ಜನರ ಹೆಚ್ಚುತ್ತಿರುವ ಆಶೋತ್ತರಗಳನ್ನು ಪೂರೈಸಬೇಕಾಗಿದೆ. ಸಾಮಾಜಿಕ ಅಗತ್ಯಗಳನ್ನು ಪೂರೈಸುವಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನದ ಪಾತ್ರವನ್ನು ಭಾರತವು ಪೂರ್ಣವಾಗಿ ಶ್ಲಾಘಿಸುತ್ತದೆ. ನಾವು ನಗರ-ಗ್ರಾಮೀಣ ಪ್ರದೇಶದ ನಡುವಿನ ವ್ಯತ್ಯಾಸದ ಸಮಸ್ಯೆಗಳನ್ನು ನಾವು ಎದಿರಸಬೇಕಾಗಿದೆ ಮತ್ತು ಸಮಗ್ರವಾದ ಅಭಿವೃದ್ಧಿ, ಆರ್ಥಿಕ ಅಭಿವೃದ್ಧಿ ಮತ್ತು ಉದ್ಯೋಗ ಸೃಷ್ಟಿಗಾಗಿ ಶ್ರಮಿಸಬೇಕಾಗಿದೆ. ಇದನ್ನು ಸಕ್ರಿಯಗೊಳಿಸಲು,ಎಲ್ಲಾ ಸುಸಂಬದ್ಧ ಬಾಧ್ಯಸ್ಥರನ್ನು ಸಂಘಟಿಸಲು ಹೊಸ ಸೃಷ್ಟಿ ಸ್ವರೂಪದ ಅಗತ್ಯವಿದೆ.
ನಮ್ಮ ಸಾಮರ್ಥ್ಯವನ್ನು ಅಚ್ಚು ಮಾಡಲು ಮತ್ತು ದೊಡ್ಡ, ಪರಿವರ್ತನಾತ್ಮಕ ರಾಷ್ಟ್ರೀಯ ವೈಜ್ಞಾನಿಕ ಕಾರ್ಯಾಚರಣೆಗೆ ಅಣಿಗೊಳಿಸಲು, ದೊಡ್ಡ ಹೂಡಿಕೆದಾರ ನೆಲೆಯನ್ನು ಸಂಯೋಜಿಸಲು ಪರಿಣಾಮಕಾರಿ ಪಾಲುದಾರಿಕೆಯ ಅಗತ್ಯವಿದೆ. ವೇಗವಾಗಿ ಬಹುವಿಧದಲ್ಲಿ ಬೆಳೆಯುತ್ತಿರುವ ಸವಾಲುಗಳನ್ನು ಪರಿಣಾಮಕಾರಿಯಾಗಿ ಮತ್ತು ತ್ವರಿತವಾಗಿ ಎದುರಿಸುದು ಈ ಕಾರ್ಯಾಚರಣೆಗಳ ಪರಿಣಾಮಕಾರಿತ್ವವು ಆಳವಾಗಿ ಬೇರೂರಿರುವ ಮಣ್ಣಿನಿಂದ ಹೊರತರುವುದರ ಖಾತ್ರಿಯಿಂದ, ಮತ್ತು ಸಹಯೋಗದ ವಿಧಾನ ಅಳವಡಿಕೆಯಿಂದ ಸಾಧ್ಯವಾಗುತ್ತದೆ. ಇದಕ್ಕೆನಮ್ಮ ಸಚಿವಾಲಯಗಳು, ನಮ್ಮ ವಿಜ್ಞಾನಿಗಳು, ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆಗಳು, ಕೈಗಾರಿಕೆಗಳು, ನವೋದ್ಯಮಗಲು, ವಿಶ್ವವಿದ್ಯಾಲಯಗಳು ಮತ್ತು ಐಐಟಿಗಳು, ಎಲ್ಲವೂ ಒಟ್ಟಾಗಿ ಮನಸ್ಸಿಟ್ಟು ಶ್ರಮಿಸಬೇಕಾಗಿದೆ. ಅದರಲ್ಲೂ ನಮ್ಮ ಮೂಲಸೌಕರ್ಯ ಮತ್ತು ಸಾಮಾಜಿಕ-ಆರ್ಥಿಕ ಸಚಿವಾಲಯಗಳು ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸೂಕ್ತವಾಗಿ ಬಳಸಿಕೊಳ್ಳಬೇಕಾಗಿದೆ.
ನಮ್ಮ ಸಂಸ್ಥೆಗಳು ಅನಿವಾಸಿ ಭಾರತೀಯರೂ ಸೇರಿದಂತೆ, ಹೊರ ದೇಶಗಳಿಂದ ಮಹೋನ್ನತ ವಿಜ್ಞಾನಿಗಳನ್ನು ಆಹ್ವಾನಿಸಿ ದೀರ್ಘಾವಧಿ ಸಂಶೋಧನೆಯಲ್ಲಿ ತೊಡಗಿಸಿಕೊಳ್ಳಬೇಕಾಗಿದೆ. ನಾವು ವಿದೇಶಗಳ ಮತ್ತು ಅನಿವಾಸಿ ಭಾರತೀಯ ಪಿಎಚ್.ಡಿ. ವಿದ್ಯಾರ್ಥಿಗಳನ್ನು ಡಾಕ್ಟರೇಟೋತ್ತರದ ಸಂಶೋಧನೆಯ ನಮ್ಮ ಯೋಜನೆಗಳಲ್ಲಿ ತೊಡಗಿಸಿಕೊಳ್ಳಬೇಕು.
ವೈಜ್ಞಾನಿಕ ವಿತರಣೆಯ ಮತ್ತೊಂದು ಸಬಲೀಕೃತ ಅಂಶವೆಂದರೆ ವಿಜ್ಞಾನವನ್ನು ಸುಲಭಗೊಳಿಸುವುದಾಗಿದೆ. ವಿಜ್ಞಾನ ಈ ಕಾರ್ಯ ಮಾಡಬೇಕೆಂದು ನಾವು ಬಯಸಿದರೆ, ಅದನ್ನು ನಿರ್ಬಂಧಿಸಬಾರದು.
ಶಿಕ್ಷಣಕ್ಕೆ, ನವೋದ್ಯಮಗಳಿಗೆ, ಕೈಗಾರಿಕೆಗಳಿಗೆ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಪ್ರಯೋಗಾಲಯಗಳಿಗೆ ಲಭ್ಯವಾಗುವಂಥ ಬಲವಾದ ವಿಜ್ಞಾನ ಮತ್ತು ತಂತ್ರಜ್ಞಾನದ ಮೂಲಸೌಕರ್ಯ ನಿರ್ಮಿಸುವುದು ಸರ್ಕಾರದ ಆದ್ಯತೆಯಾಗಿದೆ. ನಾವು ನಮ್ಮ ವೈಜ್ಞಾನಿಕ ಸಂಸ್ಥೆಗಳಲ್ಲಿ ಸುಲಭ ಲಭ್ಯತೆ,ನಿರ್ವಹಣೆ, ಪುನರುಕ್ತಿ ಮತ್ತು ದುಬಾರಿ ಉಪಕರಣ ಸೃಷ್ಟಿ ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ವೃತ್ತಿಪರವಾಗಿ ನಿರ್ವಹಿಸುವ ಸ್ಥಾಪನೆಯ ಆಶಯದೊಂದಿಗೆ ದೊಡ್ಡ ಪ್ರಾದೇಶಿಕ ಕೇಂದ್ರಗಳು ಪಿಪಿಪಿ ಮಾದರಿಯ ವಸತಿಯಲ್ಲಿ ಉನ್ನತ ಮೌಲ್ಯದ ವೈಜ್ಞಾನಿಕ ಸಲಕರಣೆಗಳನ್ನು ಪರೀಕ್ಷಿಸಬೇಕಾಗಿದೆ.
ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿಯ ನಿಟ್ಟಿನಲ್ಲಿ, ವೈಜ್ಞಾನಿಕ ಸಾಮಾಜಿಕ ಜವಾಬ್ದಾರಿಯ ವಿಚಾರವು ನಮ್ಮ ಪ್ರಮುಖ ಸಂಸ್ಥೆಗಳನ್ನು ಎಲ್ಲ ಬಾಧ್ಯಸ್ಥರಿಗೆ ಅಂದರೆ, ಶಾಲೆ ಮತ್ತು ಕಾಲೇಜುಗಳಿಗೆ ಸಂಪರ್ಕಿಸುವ ಅಗತ್ಯವಿದೆ. ನಾವು ಕಲ್ಪನೆಗಳು ಮತ್ತು ಸಂಪನ್ಮೂಲವನ್ನು ಹಂಚಿಕೊಳ್ಳುವಂತಹ ಪರಿಸರವನ್ನು ಸೃಷ್ಟಿಸಬೇಕಾಗಿದೆ.
ಭಾರತದ ಎಲ್ಲ ಮೂಲೆಗಳಲ್ಲಿಯೂ ಪ್ರಜ್ವಲ ಮತ್ತು ಅತ್ಯುತ್ತಮವಾಗಿ ವಿಜ್ಞಾನದ ಅತಿಶಯಿಸುವಂಥ ಅವಕಾಶಗಳಿರಬೇಕು. ಇದು ನಮ್ಮ ಯುವಕರಿಗೆ ಉತ್ಯುನ್ನತ ವಿಜ್ಞಾನ ಮತ್ತು ತಂತ್ರಜ್ಞಾನದ ತರಬೇತಿ ಪಡೆಯುವ ಹಾಗೂ ಸ್ಪರ್ಧಾತ್ಮಕ ಯುಗದಲ್ಲಿ ಉದ್ಯೋಗವನ್ನು ಕೈಯಲ್ಲಿ ಹಿಡಿದಿಟ್ಟುಕೊಳ್ಳುವ ಖಾತ್ರಿ ಒದಗಿಸುತ್ತದೆ.
ಈ ನಿಟ್ಟಿನಲ್ಲಿ, ಸೂಕ್ತ ತರಬೇತಿ ಕಾರ್ಯಕ್ರಮ ರೂಪಿಸಲು ರಾಷ್ಟ್ರೀಯ ಪ್ರಯೋಗಾಲಯಗಳು ಶಾಲೆ ಮತ್ತು ಕಾಲೇಜುಗಳೊಂದಿಗೆ ಸಂಪರ್ಕ ಹೊಂದಬೇಕು ಎಂದು ಒತ್ತಾಯಿಸುತ್ತೇನೆ. ಇದು ನಮ್ಮ ವಿಶಾಲ ವೈಜ್ಞಾನಿಕ ಮತ್ತು ತಾಂತ್ರಿಕ ಮೂಲಸೌಕರ್ಯದ ನಿರ್ವಹಣೆ ಮತ್ತು ಸಮರ್ಥ ಬಳಕೆಗೆ ನೆರವಾಗುತ್ತದೆ.
ಪ್ರತಿ ಪ್ರಮುಖ ನಗರ ಪ್ರದೇಶದಲ್ಲಿ ಪ್ರಯೋಗಾಲಯಗಳು, ಸಂಶೋಧನಾ ಸಂಸ್ಥೆಗಳು ಮತ್ತು ವಿಶ್ವವಿದ್ಯಾಲಯಗಳು ಒಂದು ಹಬ್ ಮತ್ತು ಸ್ಪೋಕ್ ಮಾದರಿಯಲ್ಲಿ ಪರಸ್ಪರ ಸಂಪರ್ಕಿತವಾಗಿ ಕಾರ್ಯ ನಿರ್ವಹಿಸುವಂತೆ ಮಾಡಬೇಕು. ಈ ಹಬ್ ಗಳು ಪ್ರಮುಖ ಮೂಲಸೌಕರ್ಯ ಹಂಚಿಕೊಂಡು, ನಮ್ಮ ರಾಷ್ಟ್ರೀಯ ವೈಜ್ಞಾನಿಕ ಅಭಿಯಾನವನ್ನು ಚಲಿಸಬೇಕು ಮತ್ತು ಸಂಶೋಧನೆಯ ಆನ್ವಯಿಕಗಳಿಗೆ ಸಂಪರ್ಕಿತವಾದ ಚಾಲಕಶಕ್ತಿಯಾಗಬೇಕು.
ಸಂಶೋಧನೆಯ ಹಿನ್ನೆಲೆಯಿರುವ ಕಾಲೇಜು ಬೋಧಕರು ನೆರೆಯ ವಿಶ್ವವಿದ್ಯಾಲಯಗಳು ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳೊಂದಿಗೆ ಸಂಪರ್ಕಿತರಾಗಿರಬೇಕು.
ಶಾಲೆಗಳು, ಕಾಲೇಜುಗಳು ಮತ್ತು ಪಾಲಿಟೆಕ್ನಿಕ್ ಗಳಲ್ಲಿ ಹಿರಿಮೆಯ ಸಂಸ್ಥೆಗಳು ವ್ಯಾಪಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಾಗ, ನೆರೆಹೊರೆ ಶಿಕ್ಷಣ ಸಂಸ್ಥೆಗಳಲ್ಲಿರುವ ಸುಪ್ತ ವಿಜ್ಞಾನ ಮತ್ತು ತಂತ್ರಜ್ಞಾನ ಮಾನವಶಕ್ತಿಯನ್ನು ಸಕ್ರಿಯಗೊಳಿಸಲು ಸಾಧ್ಯವಾಗುತ್ತದೆ.
ಗೌರವಾನ್ವಿತ ಪ್ರತಿನಿಧಿಗಳೇ,
ಶಾಲಾ ಮಕ್ಕಳಲ್ಲಿ ಕಲ್ಪನೆಗಳು ಮತ್ತು ನಾವಿನ್ಯತೆಯ ಬೀಜವನ್ನು ಬಿತ್ತುವ ಮೂಲಕ ನಾವು ನಮ್ಮ ನಾವಿನ್ಯದ ಪಿರಮಿಡ್ ಅನ್ನು ವಿಸ್ತರಿಸಬಹುದು ಮತ್ತು ನಮ್ಮ ದೇಶದ ಭವಿಷ್ಯವನ್ನು ಸಂರಕ್ಷಿಸಬಹುದು. ಈ ನಿಟ್ಟಿನಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವಾಲಯ ಕ್ರಮ ಕೈಗೊಂಡಿದ್ದು, 6ರಿಂದ 10ನೇ ತರಗತಿಯವರೆಗಿನ ಶಾಲಾ ಮಕ್ಕಳಿಗೆ ಕಾರ್ಯಕ್ರಮ ರೂಪಿಸಿದೆ.
ಈ ಕಾರ್ಯಕ್ರಮವು, ಅನ್ವೇಷಕ, ಗುರು, ಪ್ರತಿಫಲದೊಂದಿಗೆ 5 ಲಕ್ಷ ಶಾಲೆಗಳಿಂದ ಸ್ಥಳೀಯ ಅಗತ್ಯಗಳ ಬಗ್ಗೆ ಸ್ವಯಂಸ್ಪೂರ್ತಿಯಿಂದ 10 ಹತ್ತು ಲಕ್ಷ ಉನ್ನತ ನಾವಿನ್ಯ ಪರಿಕಲ್ಪನೆಗಳನ್ನು ಪ್ರದರ್ಶಿಸಲಿದೆ.
ನಾವು ಹೆಣ್ಣು ಮಕ್ಕಳಿಗೆ ಕೂಡ ಇದರಲ್ಲಿ ನೋಂದಾಯಿಸಿಕೊಳ್ಳಲು ಮತ್ತು ತಮ್ಮ ಸಾಮರ್ಥ್ಯ ತೋರಲು ಸಮಾನವಾದ ಅವಕಾಶ ನೀಡಬೇಕು ಮತ್ತು, ವಿಜ್ಞಾನ, ಎಂಜಿನಿಯರಿಂಗ್ ವಿಭಾಗದಲ್ಲಿ ಅವರಿಗೆ ಪ್ರತಿನಿಧಿತ್ವ ನೀಡಬೇಕು ಹಾಗೂ ದೇಶ ಕಟ್ಟುವ ಕಾರ್ಯದಲ್ಲಿ ತರಬೇತಾದ ಮಹಿಳಾ ವಿಜ್ಞಾನಿಗಳ ಪಾಲ್ಗೊಳ್ಳುವಿಕೆಯ ಖಾತ್ರಿ ಪಡಿಸಬೇಕು.
ಗೌರವಾನ್ವಿತ ಪ್ರತಿನಿಧಿಗಳೇ,
ದೊಡ್ಡ ಹಾಗೂ ವೈವಿಧ್ಯಮಯ ದೇಶವಾದ ಭಾರತದಲ್ಲಿ, ತಂತ್ರಜ್ಞಾನ ಅಗತ್ಯಗಳು ವಿಸ್ತೃತವಾಗಿವೆ, ಅದು ಮುಂದುವರಿದ ಬಾಹ್ಯಾಕಾಶ, ಪರಮಾಣು ಮತ್ತು ರಕ್ಷಣಾ ತಂತ್ರಜ್ಞಾನದಿಂದ ಹಿಡಿದು ಗ್ರಾಮೀಣ ಅಭಿವೃದ್ಧಿ ಅಗತ್ಯಗಳಾದ ಶುದ್ಧ ಕುಡಿಯುವ ನೀರು, ಒಳಚರಂಡಿ, ಪುನರ್ ನವೀಕರಿಸಬಹುದಾದ ಇಂಧನ, ಸಮುದಾಯ ಆರೋಗ್ಯ ಇತ್ಯಾದಿ ಒದಗಿಸುವವರೆಗಿ ಇರುತ್ತದೆ.
ನಾವು ಜಾಗತಿಕವಾಗಿ ಹೊರಹೊಮ್ಮಬೇಕಾದರೆ, ನಾವು ಅನನ್ಯವಾದ ಸ್ಥಳೀಯ ಪರಿಹಾರಗಳನ್ನು ಅಭಿವೃದ್ಧಿಪಡಿಸಬೇಕಾಗುತ್ತದೆ. ಸ್ಥಳೀಯ ಸಂಪನ್ಮೂಲ ಮತ್ತು ಕೌಶಲವನ್ನು ಬಳಸಿಕೊಂಡು ಸ್ಥಳೀಯ ಅಗತ್ಯಗಳನ್ನು ಪೂರೈಸುವ ಮತ್ತು ಸ್ಥಳೀಯವಾಗಿ ಉದ್ದಿಮೆ ಮತ್ತು ಉದ್ಯೋಗ ಸೃಷ್ಟಿಸಲು ಗ್ರಾಮೀಣ ಪ್ರದೇಶಕ್ಕೆ ಸೂಕ್ತ ಸೂಕ್ಷ್ಮ ಕೈಗಾರಿಕಾ ಮಾದರಿಗಳನ್ನು ಅಭಿವೃದ್ಧಿಪಡಿಸುವ ಅಗತ್ಯವೂ ಇದೆ,
ಉದಾಹರಣೆಗೆ, ಹಳ್ಳಿಗಳು ಮತ್ತು ಅರೆ ನಗರ ಪ್ರದೇಶಗಳು ಹಾಗೂ ಸಮೂಹಗಳ ಸಮರ್ಥ ಸಹ ಉತ್ಪಾದನೆಯ ಮೇಲೆ ಆಧಾರಿತವಾದ ತಂತ್ರಜ್ಞಾನವನ್ನು ಆತಿಥೇಯವಾಗಿ ಅಭಿವೃದ್ಧಿಪಡಿಸಬೇಕು. ಈ ತಂತ್ರಜ್ಞಾನವು ವಿದ್ಯುತ್, ಶುದ್ಧ ನೀರು, ಬೆಳೆ-ಸಂಸ್ಕರಣೆ ಮತ್ತು ಶೈತ್ಯಾಗಾರದಂಥ ಅನೇಕ ಬೇಡಿಕೆಗಳನ್ನು ಪೂರೈಸುವುದರ ಜೊತೆಗೆ ಕೃಷಿ ಮತ್ತು ಜೈವಿಕ ತ್ಯಾಜ್ಯ ಪರಿವರ್ತಿಸುವ ಗುರಿಯನ್ನು ಹೊಂದಿರಬೇಕು.
ಗೌರವಾನ್ವಿತ ಪ್ರತಿನಿಧಿಗಳೇ,
ಯೋಜನೆ, ನಿರ್ಣಯ ರೂಪಿಸುವುದು ಮತ್ತು ಆಡಳಿತದಲ್ಲಿ ವಿಜ್ಞಾನದ ಪಾತ್ರ ಎಂದೂ ಹೆಚ್ಚು ಮಹತ್ವ ಪಡೆದಿಲ್ಲ.
ನಾವು, ನಮ್ಮ ಜನರ, ಗ್ರಾಮ ಪಂಚಾಯಿತಿ, ಜಿಲ್ಲೆಗಳು ಮತ್ತು ರಾಜ್ಯಗಳ ಅಭಿವೃದ್ಧಿಯ ಗುರಿಗಳನ್ನು ತಲುಪಲು ಭೂ-ಮಾಹಿತಿ ವ್ಯವಸ್ಥೆಯನ್ನು ಅಳವಡಿಸುವ ಮತ್ತು ಅಭಿವೃದ್ಧಿಪಡಿಸುವ ಅಗತ್ಯವಿದೆ. ಭಾರತೀಯ ಭೂ ಸರ್ವೇಕ್ಷಣೆ, ಇಸ್ರೋ ಮತ್ತು ವಿದ್ಯುನ್ಮಾನ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯದ ಸಂಘಟಿತ ಪ್ರಯತ್ನವು ಪರಿವರ್ತನಾತ್ಮಕವಾಗಿರುತ್ತದೆ.
ಸುಸ್ಥಿರ ಅಭಿವೃದ್ಧಿಗಾಗಿ, ವಿದ್ಯುನ್ಮಾನ ತ್ಯಾಜ್ಯ, ಜೈವಿಕ ವೈದ್ಯಕೀಯ ಮತ್ತು ಪ್ಲಾಸ್ಟಿಕ್ ತ್ಯಾಜ್ಯ ಮತ್ತು ಘನ ತ್ಯಾಜ್ಯ ಮತ್ತು ತ್ಯಾಜ್ಯ ನೀರು ಪರಿಹಾರದಂಥ ಮಹತ್ವದ ಕ್ಷೇತ್ರಗಳಲ್ಲಿ ತ್ಯಾಜ್ಯದಿಂದ ಸಂಪತ್ತಿನ ನಿರ್ವಹಣೆಯ ಮೇಲೆ ಗಮನ ಹರಿಸಿ ನಾವು ಬಲವಾದ ಕ್ರಮಗಳನ್ನು ಕೈಗೊಳ್ಳಬೇಕಾಗುತ್ತದೆ.
ನಾವು ಶುದ್ಧ ಕಾರ್ಬನ್ ತಂತ್ರಜ್ಞಾನ, ಇಂಧನ ದಕ್ಷತೆಯ ಹೆಚ್ಚಳದ ತಂತ್ರಜ್ಞಾನ ಮತ್ತು ಪುನರ್ ನವೀಕರಿಸಬಹುದಾದ ಇಂಧನದ ಸಮರ್ಥ ಬಳಕೆಯ ಸಂಶೋಧನೆ ಮತ್ತು ಅಭಿವೃದ್ದಿಯನ್ನು ನಾವು ಹೆಚ್ಚಳ ಮಾಡಿದ್ದೇವೆ.
ಸುಸ್ಥಿರ ಅಭಿವೃದ್ಧಿಗಾಗಿ ಪರಿಸರ ಮತ್ತು ಹವಾಮಾನದ ಮೇಲಿನ ಗಮನ ನಮ್ಮ ಆದ್ಯತೆಯಾಗಿ ಉಳಿದಿದೆ. ನಮ್ಮ ಬಲವಾದ ವೈಜ್ಞಾನಿಕ ಸಮುದಾಯ ನಮ್ಮ ಅನನ್ಯ ಸವಾಲುಗಳನ್ನು ಸಮರ್ಥವಾಗಿ ಎದುರಿಸಬಲ್ಲುದಾಗಿದೆ. ಉದಾಹರಣೆಗೆ ಬೆಳೆ ಸುಡಲು ರೈತ ಕೇಂದ್ರಿತವಾದ ಪರಿಹಾರ ಹುಡುಕಲು ಸಾಧ್ಯವಿಲ್ಲವೇ? ಇಟ್ಟಿಗೆ ಸುಡುವಾಗ ಧೂಮತ್ಯಾಜ್ಯ ಕಡಿಮೆ ಮಾಡಲು ಮತ್ತು ಹೆಚ್ಚಿನ ಇಂಧನ ದಕ್ಷತೆ ತರಲು ಸಾಧ್ಯವಿಲ್ಲವೇ ?
ವಿಜ್ಞಾನ ಮತ್ತು ತಂತ್ರಜ್ಞಾನ 2016ರ ಜನವರಿಯಲ್ಲಿ ಆರಂಭಿಸಲಾದ ನವೋದ್ಯಮ ಭಾರತ ಕಾರ್ಯಕ್ರಮದಲ್ಲಿ ಪ್ರಮುಖ ಅಂಶವಾಗಿತ್ತು. ಉಳಿತ ಎರಡು ಪ್ರಬಲ ಉಪಕ್ರಮಗಳು ಅಟಲ್ ನಾವಿನ್ಯ ಅಭಿಯಾನ ಮತ್ತು ನಿಧಿ – ನಾವಿನ್ಯವನ್ನು ಪಡೆಯಲು ಮತ್ತು ಅಭಿವೃದ್ಧಿಪಡಿಸಲು ರಾಷ್ಟ್ರೀಯ ಉಪಕ್ರಮ. ಈ ಕಾರ್ಯಕ್ರಮಗಳು ನಾವಿನ್ಯ ಉದ್ದಿಮೆಯ ಪರಿಸರ ಚಾಲಿತ ಅಭಿವೃದ್ಧಿ ನಿರ್ಮಾಣದ ಮೇಲೆ ಗಮನ ಹರಿಸಿವೆ. ನಂತರ, ನಾವಿನ್ಯ ಪರಿಸರ ವ್ಯವಸ್ಥೆ ಬಲಪಡಿಸಲು ಸಿಐಐ, ಎಐಸಿಸಿಐ ಮತ್ತು ಉನ್ನತ ತಂತ್ರಜ್ಞಾನದ ಖಾಸಗಿ ಕಂಪನಿಗಳೊಂದಿಗೆ ಸಾರ್ವಜನಿಕ – ಖಾಸಗಿ ಪಾಲುದಾರಿಕೆಯನ್ನೂ ಮಾಡಲಾಗುತ್ತಿದೆ.
ಗೌರವಾನ್ವಿತ ಪ್ರತಿನಿಧಿಗಳೇ,
ನಮ್ಮ ವಿಜ್ಞಾನಿಗಳು ದೇಶದ ಕಾರ್ಯತಂತ್ರಾತ್ಮಕ ಮುನ್ನೋಟಕ್ಕೆ ಬಲವಾದ ಕೊಡುಗೆ ನೀಡಿದ್ದಾರೆ.
ಭಾರತೀಯ ಬಾಹ್ಯಾಕಾಶ ಕಾರ್ಯಕ್ರಮ ಭಾರತವನ್ನು ವಿಶ್ವದ ಬಾಹ್ಯಾಕಾಶ ಚೌಕಟ್ಟಿನ ರಾಷ್ಟ್ರಗಳ ಸಾಲಿನಲ್ಲಿ ಎತ್ತರದಲ್ಲಿ ನಿಲ್ಲಿಸಿದೆ. ಉಡಾವಣಾ ವಾಹಕ ಅಭಿವೃದ್ಧಿ, ಪೇಲೋಡ್ ಮತ್ತು ಉಪಗ್ರಹ ನಿರ್ಮಾಣ, ಅಭಿವೃದ್ಧಿಯ ಆನ್ವಯಿಕಗಳು ಮತ್ತು ಮಹತ್ವದ ಸಾಮರ್ಥ್ಯ ಮತ್ತು ಸಾಮರ್ಥ್ಯ ನಿರ್ಮಾಣ ಸೇರಿದಂತೆ ನಾವು ಬಾಹ್ಯಾಕಾಶ ತಂತ್ರಜ್ಞಾನದಲ್ಲಿ ಅತ್ಯುನ್ನತವಾದ ಸ್ವಾವಲಂಬನೆಯನ್ನು ಸಾಧಿಸಿದ್ದೇವೆ.
ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ ತಂತ್ರಜ್ಞಾನ ಮತ್ತು ವ್ಯವಸ್ಥೆಯಲ್ಲಿ ಸಶಸ್ತ್ರ ಪಡೆಗಳ ಶಕ್ತಿ ಗಣಕದಲ್ಲಿ ಮಹತ್ವದ ಪಾತ್ರವನ್ನು ವಹಿಸಿದೆ.
ಭಾರತೀಯ ವಿಜ್ಞಾನ ಜಾಗತಿಕವಾಗಿ ಸ್ಪರ್ಧಾತ್ಮಕಗೊಳಿಸಲು ನಾವು ಪರಸ್ಪರತೆ, ಸಮಾನತೆ ಮತ್ತು ಪರಸ್ಪರ ತತ್ವದ ಮೇಲೆ ಕಾರ್ಯತಂತ್ರಾತ್ಮಕ ಅಂತಾರಾಷ್ಟ್ರೀಯ ಪಾಲುದಾರಿಕೆ ಮತ್ತು ಸಹಯೋಗಗಳನ್ನು ಕೈಗೊಂಡಿದ್ದೇವೆ.ನಾವು ನಮ್ಮ ನೆರೆಯ ರಾಷ್ಟ್ರಗಳು ಹಾಗೂ ಬ್ರಿಕ್ಸ್ ನಂಥ ಬಹು ರಾಷ್ಟ್ರೀಯ ವೇದಿಕೆಗಳೊಂದಿಗೆ ಬಲವಾದ ಬಾಂಧವ್ಯ ಹೊಂದಲು ವಿಶೇಷ ಒತ್ತು ನೀಡಿದ್ದೇವೆ. ಉತ್ತಮವಾದ ಜಾಗತಿಕ ವಿಜ್ಞಾನವು ನಮಗೆ ಸೃಷ್ಟಿಯ ರಹಸ್ಯಗಳ ಗೋಜುಬಿಡಿಸಲು ಮತ್ತು ಉನ್ನತ ತಂತ್ರಜ್ಞಾನವನ್ನು ಅಭಿವೃದ್ಧಿ ಪಡಿಸಲು ಸಹಾಯ ಮಾಡಿದೆ. ಕಳೆದ ವರ್ಷ, ನಾವು ಭಾರತ ಬೆಲ್ಜಿಯಂ ಸಹಯೋಗದಲ್ಲಿ ರೂಪಿಸಿದ 3.6 ಮೀಟರ್ ಗಳ ಆಪ್ಟಿಕಲ್ ದೂರದರ್ಶಕವನ್ನು ಉತ್ತರಾಖಂಡದ ದೇವಸ್ಥಳದಲ್ಲಿ ಕಾರ್ಯೋನ್ಮುಖಗೊಳಿಸಿದ್ದೇವೆ. ಭಾರತದಲ್ಲಿ ಅತ್ಯಾಧುನಿಕ ಸಕಲ ಸೌಲಭ್ಯದ ಶೋಧನಾ ವ್ಯವಸ್ಥೆ ನಿರ್ಮಿಸಲು ಇತ್ತೀಚೆಗೆ, ಯು.ಎಸ್.ಎ.ಯೊಂದಿಗೆ ಲಿಗೋ ಯೋಜನೆಗೆ ಅನುಮೋದನೆ ನೀಡಿದ್ದೇವೆ.
ಗೌರವಾನ್ವಿತ ಪ್ರತಿನಿಧಿಗಳೇ,
ಕೊನೆಯದಾಗಿ, ನಮ್ಮ ವಿಜ್ಞಾನಿಗಳಿಗೆ ಮತ್ತು ವೈಜ್ಞಾನಿಕ ಸಂಸ್ಥೆಗಳಿಗೆ ಸರ್ಕಾರ ಉತ್ತಮ ಬೆಂಬಲ ನೀಡಲು ಬದ್ಧವಾಗಿದೆ ಎಂಬುದನ್ನು ನಾನು ಪುನರುಚ್ಚರಿಸುತ್ತೇನೆ.
ನಮ್ಮ ವಿಜ್ಞಾನಿಗಳು ಮೂಲ ವಿಜ್ಞಾನದ ಗುಣಮಟ್ಟದಿಂದ ಹಿಡಿದು ನಾವಿನ್ಯತೆಗಾಗಿ ತಂತ್ರಜ್ಞಾನದ ಅಭಿವೃದ್ಧಿ ಪಡಿಸುತ್ತಾರೆ ಎಂಬ ವಿಶ್ವಾಸ ನನಗಿದೆ.
ನಮ್ಮ ಸಮಾಜದ ದುರ್ಬಲ ಮತ್ತು ಬಡ ವಲಯಗಳ ಅಭಿವೃದ್ಧಿ ಮತ್ತು ಒಳಿತಿಗಾಗಿ ವಿಜ್ಞಾನ ಮತ್ತು ತಂತ್ರಜ್ಞಾನ ಒಂದು ಬಲವಾದ ಸಾಧನವಾಗಲಿ.
ನಾವು ಒಟ್ಟಾಗಿ, ಸಮಾನವಾದ ಮತ್ತು ಸಮೃದ್ಧ ದೇಶ ಮಾಡಲು ಪಣತೊಡೋಣ.
ಜೈ ಹಿಂದ್.
Nation will always be grateful to scientists who have worked tirelessly to empower our society by their vision, labour, and leadership: PM
— PMO India (@PMOIndia) January 3, 2017
Tomorrow’s experts will come from investments we make today in our people and infrastructure: PM @narendramodi https://t.co/Iy8hu3Nre5
— PMO India (@PMOIndia) January 3, 2017
Government is committed to supporting different streams of scientific knowledge: PM @narendramodi
— PMO India (@PMOIndia) January 3, 2017
Ranging from fundamental science to applied science with emphasis on innovations: PM @narendramodi
— PMO India (@PMOIndia) January 3, 2017
We need to keep an eye on the rise of disruptive technologies and be prepared to leverage them for growth: PM @narendramodi
— PMO India (@PMOIndia) January 3, 2017
One important area that needs to be addressed is the rapid global rise of Cyber-Physical Systems: PM @narendramodi https://t.co/Iy8hu3Nre5
— PMO India (@PMOIndia) January 3, 2017
There is a need to develop and exploit these technologies in services and manufacturing sectors: PM @narendramodi
— PMO India (@PMOIndia) January 3, 2017
Our best science and technology institutions should further strengthen their basic research in line with leading global standards: PM
— PMO India (@PMOIndia) January 3, 2017
Translating this basic knowledge into innovations, start-ups and industry will help us achieve inclusive and sustainable growth: PM
— PMO India (@PMOIndia) January 3, 2017
Science must meet the rising aspirations of our people: PM @narendramodi
— PMO India (@PMOIndia) January 3, 2017
Another empowering factor for scientific delivery is the Ease of Doing Science. If we want science to deliver, we must not constrain it: PM
— PMO India (@PMOIndia) January 3, 2017
On the lines of Corporate Social Responsibility, concept of Scientific Social Responsibility needs to be inculcated (1/2)
— PMO India (@PMOIndia) January 3, 2017
to connect our leading institutions to all stakeholders, including schools and colleges: PM @narendramodi (2/2)
— PMO India (@PMOIndia) January 3, 2017
The brightest and best in every corner of India should have the opportunity to excel in science: PM @narendramodi
— PMO India (@PMOIndia) January 3, 2017
Seeding the power of ideas & innovation in schoolchildren will broaden the base of our innovation pyramid & secure future of our nation: PM
— PMO India (@PMOIndia) January 3, 2017
The role of science in planning, decision making and governance has never been more important: PM @narendramodi
— PMO India (@PMOIndia) January 3, 2017
Our scientists have contributed strongly to the strategic vision of the nation: PM @narendramodi
— PMO India (@PMOIndia) January 3, 2017
The Government remains committed to provide the best support to our scientists and scientific institutions: PM @narendramodi
— PMO India (@PMOIndia) January 3, 2017