"ಭಾರತದ ಜನರು ನೈಸರ್ಗಿಕ ವಿಪತ್ತುಗಳು ಮತ್ತು ಗೋರಖ್ಪುರದಲ್ಲಿ ನಡೆದ  ದುರಂತದ ಕಾರಣದಿಂದಾಗಿ ಪೀಡಿತರಿಗಾಗಿ ಹೆಗಲಿನಿಂದ ಹೆಗಲು ಕೊಟ್ಟು ನಿಲ್ಲಬೇಕು  " ಎಂದು ಶ್ರೀ ಮೋದಿ ತಮ್ಮ ಭಾಷಣದ ಆರಂಭದಲ್ಲಿ ಹೇಳಿದರು .
 
ಪ್ರಧಾನಿ ನರೇಂದ್ರ ಮೋದಿ ಹೊಸದಿಲ್ಲಿಯ ಕೆಂಪು ಕೋಟೆ ಐತಿಹಾಸಿಕ ತಾಣದಲ್ಲಿ  ರಾಷ್ಟ್ರವನ್ನು ಉದ್ದೇಶಿಸಿ ಮಾತನಾಡಿದರು. ಅವರು ದೇಶದ ಸ್ವಾತಂತ್ರ್ಯಕ್ಕಾಗಿ ಹೋರಾಡಿದ ಶ್ರೇಷ್ಠರ ತ್ಯಾಗವನ್ನು ನೆನಪಿಸಿಕೊಂಡರು. ಕ್ವಿಟ್ ಇಂಡಿಯಾ 75 ನೇ ವಾರ್ಷಿಕೋತ್ಸವವನ್ನು ಚಂಪಾರಣ್ ಸತ್ಯಾಗ್ರಹದ 100 ನೇ ವಾರ್ಷಿಕೋತ್ಸವ, ಗಣೇಶ್ ಉತ್ಸವದ 125 ನೇ ವಾರ್ಷಿಕೋತ್ಸವದ ಸಮಯದಲ್ಲಿ  ಪ್ರತೀ ವ್ಯಕ್ತಿಯು 'ನ್ಯೂ ಇಂಡಿಯಾ' ರಚಿಸುವ ನಿರ್ಣಯದಿಂದ ದೇಶವನ್ನು  ಮುಂದೆ ಕೊಂಡೊಯ್ಯಬೇಕು . 1942 ರಿಂದ 1947 ರವರೆಗೆ ಭಾರತ ತನ್ನ ಸಾಮೂಹಿಕ ಶಕ್ತಿಯನ್ನು ಸಾಬೀತುಪಡಿಸಿದೆ. ಇದೇ ರೀತಿ, ಮುಂದಿನ ಐದು ವರ್ಷಗಳು, 2017 ರಿಂದ 2022 ರವರೆಗೆ ದೇಶದ ಪ್ರಗತಿಗೆ ಮಹತ್ವದ್ದಾಗಿದೆ ಎಂದು ಪ್ರಧಾನಿ ಹೇಳಿದರು.
 
2018 ರ ಜನವರಿ 1 ಸಾಮಾನ್ಯ ದಿನವಲ್ಲ , "ಈ ಶತಮಾನದಲ್ಲಿ ಜನಿಸಿದವರ 18 ನೇ ವಯಸ್ಸು ಪೂರ್ಣಗೊಳ್ಳುತ್ತದೆ  . ಇದು ನಮ್ಮ ರಾಷ್ಟ್ರದ ಭಾಗ್ಯ ವಿದಧಸ್."ಎಂದು ಪ್ರಧಾನಿ ಮೋದಿ ಹೇಳಿದರು
 
ಚಾಲ್ತಾ ಹೈ' ವರ್ತನೆಯನ್ನು ಬಿಟ್ಟು  ಮತ್ತು ' ಬದಲ್ ಸಕ್ತ ಹೈ'  ಬಗ್ಗೆ ಯೋಚಿಸುವ ಸಮಯವಿದು . " ಬದಲಾ   ಹೈ , ಬದಲ್ ರಹಾ ಹೈ , ಬದಲ್ ಸಕ್ತಾ ಹೈ.... ಇದು ನಮ್ಮ ವರ್ತನೆಯಾಗಬೇಕು ", ಎಂದು ಶ್ರೀ ಮೋದಿ ಹೇಳಿದರು .
 
"ಭಾರತದ ಭದ್ರತೆ ನಮ್ಮ ಆದ್ಯತೆಯಾಗಿದೆ" ಎಂದು ಪ್ರಧಾನ ಮಂತ್ರಿ  ಹೇಳಿದರು. ಅವರು ದೇಶದ ಜವಾನರ  ಪಾತ್ರವನ್ನು ಶ್ಲಾಘಿಸಿದರು. ಧೈರ್ಯ ಪ್ರಶಸ್ತಿ ವಿಜೇತರಿಗೆ ವಿಶೇಷ ಪೋರ್ಟಲ್ ಅನ್ನು ಅವರು ಘೋಷಿಸಿದರು.
 
ಇಂದು ಜನರು  ಪ್ರಾಮಾಣಿಕತೆಯಿಂದ  ಮುಂದುವರಿಯಲು ಬಯಸಿದ್ದಾರೆ ಎಂದು ಶ್ರೀ ಮೋದಿ ಹೇಳಿದರು . ಅವರು ಜಿಎಸ್ಟಿ ಯಶಸ್ವಿ ಅನುಷ್ಠಾನದಲ್ಲಿ ಜನರ ಪಾತ್ರವನ್ನು ಮೆಚ್ಚಿದರು. ಜಿಎಸ್ಟಿ ಸಹಕಾರ ಫೆಡರಲಿಸಂನ ಉತ್ಸಾಹವನ್ನು ತೋರಿಸಿದೆ.ಟಿಗೆ  ಬೆಂಬಲ ನೀಡಲು ದೇಶವು ಒಟ್ಟಿಗೆ ಸೇರಿದೆ ಮತ್ತು ತಂತ್ರಜ್ಞಾನದ ಪಾತ್ರವೂ ಸಹ ನೆರವಾಗಿದೆ 'ಎಂದು ಮೋದಿ ಹೇಳಿದರು.  "ವಿಶ್ವದಲ್ಲೇ ಭಾರತದ ನಿಲುವು ಹೆಚ್ಚುತ್ತಿದೆ, ಭಯೋತ್ಪಾದನೆಯ ಹಾನಿಯನ್ನು ಎದುರಿಸುವಲ್ಲಿ ವಿಶ್ವದ ನಮ್ಮೊಂದಿಗೆ ಇದೆ.ನಮಗೆ ಸಹಾಯ ಮಾಡುವ ಎಲ್ಲಾ ರಾಷ್ಟ್ರಗಳಿಗೆ ನಾನು ಧನ್ಯವಾದ ಹೇಳುತ್ತೇನೆ," ಎಂದು ಪ್ರಧಾನಿ ಮೋದಿ ಹೇಳಿದರು
 
"ನಾವು ಜಮ್ಮು ಮತ್ತು ಕಾಶ್ಮೀರದ ಪ್ರಗತಿಗಾಗಿ ಕೆಲಸ ಮಾಡಬೇಕು .  ನಾ ಗಲಿ ಸೆ, ನಾ ಗೋಲಿ ಸೇ, ಸಮಸ್ಯಾ  ಸುಲ್ಜೆಗಿ ಗಲೆ  ಲಗನೇ ಸೆ"  ಎಂದು  ಮೋದಿ ಹೇಳಿದರು.
 
ಭಯೋತ್ಪಾದನೆ ಬಗ್ಗೆ ಪ್ರಧಾನಿ ತೀವ್ರ ಕಳವಳವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಭಯೋತ್ಪಾದನೆ ಅಥವಾ ಭಯೋತ್ಪಾದಕರೊಂದಿಗೆ ಮೃದುವಾಗಿ ವರ್ತಿಸುವ  ಪ್ರಶ್ನೆಯೇ ಇಲ್ಲ  ಎಂದು ಹೇಳಿದರು. 
 
"ಭಾರತವು ಶಾಂತಿ, ಏಕ್ತಾ ಮತ್ತು ಸದ್ಭಾವನೆ ಬಗ್ಗೆ , ಪ್ರಜಾಪ್ರಭುತ್ವ ಮತ್ತು ಕೋಮುವಾದವು ನಮಗೆ ಸಹಾಯ ಮಾಡುವುದಿಲ್ಲ ... ಆಸ್ತಾ ಎಂಬ ಹೆಸರಿನಲ್ಲಿ ಹಿಂಸಾಚಾರವು ಸಂತೋಷದ ವಿಷಯವಲ್ಲ, ಇದನ್ನು ಭಾರತದಲ್ಲಿ ಸ್ವೀಕರಿಸಲಾಗುವುದಿಲ್ಲ ."
"ನಾವು ರಾಷ್ಟ್ರದ ಅಭಿವೃದ್ಧಿಯ ಹೊಸ ಮಾರ್ಗವನ್ನು ತೆಗೆದುಕೊಳ್ಳುತ್ತೇವೆ ಮತ್ತು ವೇಗವಾಗಿ ಚಲಿಸುತ್ತೇವೆ. ನಾವು ಪೂರ್ವ ಭಾರತ- ಬಿಹಾರ, ಅಸ್ಸಾಂ, ಪಶ್ಚಿಮ ಬಂಗಾಳ, ಒಡಿಶಾ , ಈಶಾನ್ಯ ಭಾಗಗಳನ್ನು ಮತ್ತಷ್ಟು ಅಭಿವೃದ್ಧಿಗಾಗಿ ಗಮನ ನೀಡುತ್ತಿದ್ದೇವೆ ,"  ಎಂದು ಪೂರ್ವ ಭಾರತದ ಶಕ್ತಿಯಲ್ಲಿ  ನಂಬಿಕೆ ಇಟ್ಟುಕೊಂಡು ಪ್ರಧಾನಿ ಹೇಳಿದರು.
 
ಭ್ರಷ್ಟಾಚಾರ ಮತ್ತು ಭ್ರಷ್ಟರ  ವಿರುದ್ಧ ಸರ್ಕಾರ ಬಲವಾದ ಕ್ರಮ ಕೈಗೊಳ್ಳಲಿದೆ ಎಂದು ಪ್ರಧಾನಿ ಹೇಳಿದರು. "ನಾವು ದೇಶದಲ್ಲಿ ಯಾವುದೇ ಲೂಟಿಗಳನ್ನು ಅನುಮತಿಸುವುದಿಲ್ಲ. ಲೂಟಿ ಮಾಡಿದವರು ಉತ್ತರಿಸಬೇಕಾದ ಅಗತ್ಯವಿದೆ."
 
" ರೈತರು ತೊಂದರೆಯಲ್ಲಿಲ್ಲ, ಮಹಿಳೆಯರು ಏಳಿಗೆಗೆ ಅವಕಾಶಗಳನ್ನು ಪಡೆಯುತ್ತಿದ್ದಾರೆ , ಭಯೋತ್ಪಾದನೆಯ ದುಷ್ಟತೆ, ಕೋಮುವಾದಿ ಮತ್ತು ಜಾತಿ ತತ್ವದಿಂದ ಮುಕ್ತವಾದ ದೇಶ, ಭ್ರಷ್ಟಾಚಾರದಿಂದ ಮುಕ್ತವಾದ ದೇಶ, ಸ್ವಚ್ಛ ಮತ್ತು ಆರೋಗ್ಯಕರ ಭಾರತ , 'ನ್ಯೂ ಇಂಡಿಯಾ ' ನಿರ್ಮಿಸುವ ಪ್ರಯಾಣದಲ್ಲಿ  ಪ್ರತಿಯೊಬ್ಬರೂ ಒಂದು ಭಾಗವಾಗಿರಬೇಕು "  ಎಂದು ಮೋದಿ ಅಭಿಪ್ರಾಯಪಟ್ಟರು .

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi