ಗೌರವಾನ್ವಿತ ಅಧ್ಯಕ್ಷರಾದ ಎಮ್ಯಾನುಯೆಲ್ ಮ್ಯಾಕ್ರನ್ ಅವರೇ,
ಭಾರತ ಮತ್ತು ಫ್ರಾನ್ಸ್‌ನ ಗೌರವಾನ್ವಿತ ನಿಯೋಗಗಳೇ,
ಸ್ನೇಹಿತರೇ,
Bon Jour
ನಮಸ್ಕಾರ,
ಮೊದಲನೆಯದಾಗಿ, ನನ್ನ ಆಪ್ತ ಸ್ನೇಹಿತರಾದ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸುತ್ತೇನೆ. ಈ ಐತಿಹಾಸಿಕ ಪರಂಪರೆಯ ತಾಣಕ್ಕೆ ಅವರು ನನ್ನನ್ನು ಮತ್ತು ನನ್ನ ನಿಯೋಗವನ್ನು ಬಹಳ ಭವ್ಯ ಮತ್ತು ಪ್ರೀತಿಯಿಂದ ಸ್ವಾಗತಿಸಿದ್ದಾರೆ.. ಇದು ನನಗೆ ಮರೆಯಲಾಗದ ಕ್ಷಣ. ಜಿ 7 ಶೃಂಗಸಭೆಗೆ ಅಧ್ಯಕ್ಷ ಮ್ಯಾಕ್ರನ್ ಅವರ ಆಹ್ವಾನವು ಭಾರತ ಮತ್ತು ಫ್ರಾನ್ಸ್ ನಡುವಿನ ಕಾರ್ಯತಂತ್ರದ ಸಹಭಾಗಿತ್ವ ಮತ್ತು ನನ್ನ ಬಗೆಗಿನ ಅವರ ಸ್ನೇಹಪರತೆಗೆ ಉದಾಹರಣೆಯಾಗಿದೆ. ಇಂದು ನಾವು ಬಹಳ ವಿವರವಾದ ಚರ್ಚೆಗಳನ್ನು ನಡೆಸಿದ್ದೇವೆ. ಫ್ರಾನ್ಸ್ ನೇತೃತ್ವದ ಜಿ 7 ಶೃಂಗಸಭೆಯ ಕಾರ್ಯಸೂಚಿಯು ಸಂಪೂರ್ಣ ಯಶಸ್ಸನ್ನು ಪಡೆಯಬೇಕು ಮತ್ತು ಈ ನಿಟ್ಟಿನಲ್ಲಿ ಭಾರತದಿಂದ ನಿರೀಕ್ಷಿಸಲಾಗಿರುವ ಸಹಕಾರವನ್ನು ವಿಸ್ತರಿಸುವುದು ಭಾರತದ ಸಂಕಲ್ಪವಾಗಿದೆ. ಜೀವವೈವಿಧ್ಯತೆ, ಹವಾಮಾನ ಬದಲಾವಣೆ ಅಥವಾ ತಂಪಾಗಿಸುವಿಕೆ ಮತ್ತು ಅನಿಲದ ಸಮಸ್ಯೆಗಳಿರಲಿ, ಶತಮಾನಗಳಿಂದ ಭಾರತವು ಸಂಪ್ರದಾಯಗಳೊಂದಿಗೆ ಮತ್ತು ಪ್ರಕೃತಿಯೊಂದಿಗೆ ಸಾಮರಸ್ಯದಿಂದ ಸುಸಂಸ್ಕೃತ ರೀತಿಯಲ್ಲಿ ಬದುಕಬೇಕೆಂದು ಪ್ರತಿಪಾದಿಸುತ್ತಿದೆ. ಪ್ರಕೃತಿಯ ವಿನಾಶವು ಮಾನವ ಕಲ್ಯಾಣಕ್ಕೆ ಎಂದಿಗೂ ಪ್ರಯೋಜನಕಾರಿಯಾಗುವುದಿಲ್ಲ ಮತ್ತು ಇದು ಈ ಜಿ 7 ಶೃಂಗಸಭೆಯ ವಿಷಯವಾಗಿರುವುದರಿಂದ ಅದು ಭಾರತಕ್ಕೆ ಇನ್ನಷ್ಟು ಸಂತೋಷದ ಕ್ಷಣವಾಗಿದೆ.
ಸ್ನೇಹಿತರೇ,
ಭಾರತ ಮತ್ತು ಫ್ರಾನ್ಸ್ ಶತಮಾನಗಳಷ್ಟು ಹಳೆಯ ಸಂಬಂಧವನ್ನು ಹೊಂದಿವೆ. ನಮ್ಮ ಸ್ನೇಹವು ಯಾವುದೇ ಸ್ವಾರ್ಥಿ ಕಾರಣಗಳನ್ನು ಆಧರಿಸಿಲ್ಲ, ಆದರೆ ‘ಸ್ವಾತಂತ್ರ್ಯ, ಸಮಾನತೆ ಮತ್ತು ಭ್ರಾತೃತ್ವದ ’ಘನ ಆದರ್ಶಗಳನ್ನು ಆಧರಿಸಿದೆ. ಭಾರತ ಮತ್ತು ಫ್ರಾನ್ಸ್ ಸ್ವಾತಂತ್ರ್ಯ ಮತ್ತು ಪ್ರಜಾಪ್ರಭುತ್ವವನ್ನು ಸಂರಕ್ಷಿಸಿ ಫ್ಯಾಸಿಸಂ ಮತ್ತು ಉಗ್ರವಾದವನ್ನು ಎದುರಿಸಲು ಇದು ಕಾರಣವಾಗಿದೆ. ಮೊದಲನೆಯ ಮಹಾಯುದ್ಧದ ಸಮಯದಲ್ಲಿ ಸಾವಿರಾರು ಭಾರತೀಯ ಸೈನಿಕರ ತ್ಯಾಗವನ್ನು ಫ್ರಾನ್ಸ್‌ನಲ್ಲಿ ಇಂದಿಗೂ ನೆನಪಿಸಿಕೊಳ್ಳಲಾಗುತ್ತದೆ. ಇಂದು ಫ್ರಾನ್ಸ್ ಮತ್ತು ಭಾರತ ಭಯೋತ್ಪಾದನೆ, ಹವಾಮಾನ ಬದಲಾವಣೆ, ಪರಿಸರ ಮತ್ತು ತಂತ್ರಜ್ಞಾನದ ಸಮಗ್ರ ಅಭಿವೃದ್ಧಿಯ ಸವಾಲುಗಳನ್ನು ಎದುರಿಸಲು ದೃಢವಾಗಿ ಒಟ್ಟಾಗಿ ನಿಂತಿವೆ. ಉಭಯ ದೇಶಗಳು ಒಳ್ಳೆಯ ವಿಷಯಗಳ ಬಗ್ಗೆ ಮಾತನಾಡುವುದು ಮಾತ್ರವಲ್ಲ, ನಾವು ದೃಢವಾದ ಕ್ರಮಗಳನ್ನು ಸಹ ತೆಗೆದುಕೊಂಡಿದ್ದೇವೆ. ಅಂತರರಾಷ್ಟ್ರೀಯ ಸೌರ ಒಕ್ಕೂಟವು ಭಾರತ ಮತ್ತು ಫ್ರಾನ್ಸ್‌ನ ಅಂತಹ ಒಂದು ಯಶಸ್ವಿ ಉಪಕ್ರಮವಾಗಿದೆ.
ಸ್ನೇಹಿತರೇ,
ಎರಡು ದಶಕಗಳಿಂದ ನಾವು ಕಾರ್ಯತಂತ್ರದ ಸಹಭಾಗಿತ್ವದ ಹಾದಿಯಲ್ಲಿದ್ದೇವೆ. ಇಂದು ಫ್ರಾನ್ಸ್ ಮತ್ತು ಭಾರತ ಪರಸ್ಪರ ವಿಶ್ವಾಸಾರ್ಹ ಪಾಲುದಾರರು. ನಮ್ಮ ತೊಂದರೆಗಳ ಸಮಯದಲ್ಲಿ, ನಾವು ಪರಸ್ಪರರ ಅಭಿಪ್ರಾಯಗಳನ್ನು ಅರ್ಥಮಾಡಿಕೊಂಡಿದ್ದೇವೆ ಮತ್ತು ಬೆಂಬಲಿಸಿದ್ದೇವೆ.
ಸ್ನೇಹಿತರೇ,
ಇಂದು, ಅಧ್ಯಕ್ಷ ಮ್ಯಾಕ್ರನ್ ಮತ್ತು ನಾನು ನಮ್ಮ ಸಂಬಂಧದ ಎಲ್ಲಾ ಅಂಶಗಳನ್ನು ವಿವರವಾಗಿ ಚರ್ಚಿಸಿದ್ದೇವೆ. 2022ಕ್ಕೆ ಭಾರತದ ಸ್ವಾತಂತ್ರ್ಯಕ್ಕೆ 75 ವರ್ಷಗಳು ತುಂಬಲಿವೆ. ಅಲ್ಲಿಯವರೆಗೆ ನಾವು ಹೊಸ ಭಾರತಕ್ಕಾಗಿ ಅನೇಕ ಗುರಿಗಳನ್ನು ಹೊಂದಿದ್ದೇವೆ. ಭಾರತವನ್ನು 5 ಟ್ರಿಲಿಯನ್ ಆರ್ಥಿಕತೆಯನ್ನಾಗಿ ಮಾಡುವುದು ನಮ್ಮ ಮುಖ್ಯ ಉದ್ದೇಶ. ಅಭಿವೃದ್ಧಿಗಾಗಿ ಭಾರತದ ಅವಶ್ಯಕತೆಗಳು ಫ್ರೆಂಚ್ ಉದ್ಯಮಗಳಿಗೆ ಒಂದು ಸುವರ್ಣಾವಕಾಶವನ್ನು ಕಲ್ಪಿಸಿವೆ. ನಮ್ಮ ಆರ್ಥಿಕ ಸಹಕಾರವನ್ನು ವೃದ್ಧಿಸಲು ಕೌಶಲ್ಯ ಅಭಿವೃದ್ಧಿ, ನಾಗರಿಕ ವಿಮಾನಯಾನ, ಐಟಿ, ಬಾಹ್ಯಾಕಾಶ ಮತ್ತು ಇತರ ಹಲವು ಕ್ಷೇತ್ರಗಳಲ್ಲಿ ಹೊಸ ಉಪಕ್ರಮಗಳನ್ನು ಎದುರು ನೋಡುತ್ತಿದ್ದೇವೆ. ರಕ್ಷಣಾ ಸಹಕಾರ ನಮ್ಮ ಸಂಬಂಧದ ಬಲವಾದ ಆಧಾರಸ್ತಂಭವಾಗಿದೆ. ನಾವು ವಿವಿಧ ಯೋಜನೆಗಳಲ್ಲಿ ಉತ್ತಮ ಪ್ರಗತಿ ಸಾಧಿಸುತ್ತಿದ್ದೇವೆ ಎಂದು ನನಗೆ ಸಂತೋಷವಾಗುತ್ತಿದೆ. 36 ರಾಫೆಲ್ ವಿಮಾನಗಳಲ್ಲಿ ಮೊದಲನೆಯದನ್ನು ಮುಂದಿನ ತಿಂಗಳು ಭಾರತಕ್ಕೆ ತಲುಪಿಸಲಾಗುವುದು. ನಾವು ತಂತ್ರಜ್ಞಾನ ಮತ್ತು ಸಹ-ಉತ್ಪಾದನೆಯಲ್ಲಿ ಸಹಕಾರವನ್ನು ಹೆಚ್ಚಿಸುತ್ತೇವೆ. ಹೊಸ ಪೀಳಿಗೆಯ ನಾಗರಿಕ ಪರಮಾಣು ಒಪ್ಪಂದಕ್ಕೆ ನಮ್ಮೊಂದಿಗೆ ಸಹಿ ಹಾಕಿದ ಮೊದಲ ದೇಶ ಫ್ರಾನ್ಸ್. ಜೈತಾಪುರ ಯೋಜನೆಯಲ್ಲಿ ನಮ್ಮ ಕಂಪನಿಗಳು ವೇಗವಾಗಿ ಮುಂದುವರಿಯಬೇಕು ಮತ್ತು ವಿದ್ಯುತ್ ಬೆಲೆಯನ್ನೂ ಗಮನದಲ್ಲಿರಿಸಿಕೊಳ್ಳಬೇಕು ಎಂದು ನಾವು ಕೋರಿದ್ದೇವೆ. ಪ್ರವಾಸೋದ್ಯಮವು ಎರಡೂ ಕಡೆಯಿಂದ ಹೆಚ್ಚುತ್ತಿದೆ ಎಂಬುದು ಸಹ ಬಹಳ ಸಂತೋಷದ ಸಂಗತಿಯಾಗಿದೆ. ಪ್ರತಿವರ್ಷ ಸುಮಾರು 2.5 ಲಕ್ಷ ಫ್ರೆಂಚ್ ಪ್ರವಾಸಿಗರು ಮತ್ತು 7 ಲಕ್ಷ ಭಾರತೀಯ ಪ್ರವಾಸಿಗರು ಪರಸ್ಪರರ ದೇಶಕ್ಕೆ ಭೇಟಿ ನೀಡುತ್ತಿದ್ದಾರೆ. ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ವಿದ್ಯಾರ್ಥಿಗಳ ವಿನಿಮಯವನ್ನು ವಿಶೇಷವಾಗಿ ಹೆಚ್ಚಿಸಬೇಕು. ಭಾರತೀಯ ಸಾಂಸ್ಕೃತಿಕ ಉತ್ಸವ “ನಮಸ್ತೆ ಫ್ರಾನ್ಸ್” ನ ಮುಂದಿನ ಆವೃತ್ತಿ 2021-2022ರ ಅವಧಿಯಲ್ಲಿ ಫ್ರಾನ್ಸ್‌ನಾದ್ಯಂತ ನಡೆಯಲಿದೆ. ಈ ಉತ್ಸವವು ಭಾರತದ ವೈವಿಧ್ಯಮಯ ಸಂಸ್ಕೃತಿಯಲ್ಲಿ ಫ್ರಾನ್ಸ್ ಜನರ ಆಸಕ್ತಿಯನ್ನು ಇನ್ನಷ್ಟು ಹೆಚ್ಚಿಸುತ್ತದೆ ಎಂದು ನಾನು ಭಾವಿಸುತ್ತೇನೆ. ಫ್ರಾನ್ಸ್‌ನಲ್ಲಿ ಯೋಗ ಬಹಳ ಜನಪ್ರಿಯವಾಗಿದೆ ಎಂದು ನನಗೆ ತಿಳಿದಿದೆ. ಫ್ರಾನ್ಸ್‌ನಲ್ಲಿರುವ ನನ್ನ ಇನ್ನೂ ಅನೇಕ ಸ್ನೇಹಿತರು ಇದನ್ನು ಆರೋಗ್ಯಕರ ಜೀವನಶೈಲಿಯ ಮಾರ್ಗವಾಗಿ ಅಳವಡಿಸಿಕೊಳ್ಳುತ್ತಾರೆ ಎಂದು ನಾನು ಭಾವಿಸುತ್ತೇನೆ.
ಸ್ನೇಹಿತರೇ,
ಜಾಗತಿಕ ಸವಾಲುಗಳಿಗಾಗಿ ಭಾರತ ಮತ್ತು ಫ್ರಾನ್ಸ್ ನಡುವಿನ ಸಹಕಾರದ ಮಹತ್ವದ ಬಗ್ಗೆ ನಾನು ಗಮನಸೆಳೆದಿದ್ದೇನೆ. ಎರಡೂ ದೇಶಗಳು ಭಯೋತ್ಪಾದನೆ ಮತ್ತು ಮೂಲಭೂತವಾದವನ್ನು ನಿರಂತರವಾಗಿ ಎದುರಿಸಬೇಕಾಗುತ್ತಿದೆ. ಗಡಿಯಾಚೆಗಿನ ಭಯೋತ್ಪಾದನೆಯನ್ನು ಎದುರಿಸಲು ನಮಗೆ ಅಮೂಲ್ಯವಾದ ಫ್ರೆಂಚ್ ಬೆಂಬಲ ಮತ್ತು ಸಹಕಾರ ದೊರೆತಿದೆ. ಇದಕ್ಕಾಗಿ ನಾವು ಅಧ್ಯಕ್ಷ ಮ್ಯಾಕ್ರನ್‌ಗೆ ಧನ್ಯವಾದಗಳನ್ನು ಅರ್ಪಿಸುತ್ತೇವೆ. ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದ ಮೇಲಿನ ಸಹಕಾರವನ್ನು ವಿಸ್ತರಿಸಲು ನಾವು ಉದ್ದೇಶಿಸಿದ್ದೇವೆ. ಕಡಲು ಮತ್ತು ಸೈಬರ್ ಸುರಕ್ಷತೆಯಲ್ಲಿ ನಮ್ಮ ಹೆಚ್ಚುತ್ತಿರುವ ಸಹಕಾರವನ್ನು ಇನ್ನಷ್ಟು ಬಲಪಡಿಸಲು ನಾವು ನಿರ್ಧರಿಸಿದ್ದೇವೆ. ಸೈಬರ್ ಸುರಕ್ಷತೆ ಮತ್ತು ಡಿಜಿಟಲ್ ತಂತ್ರಜ್ಞಾನದ ಕುರಿತು ಹೊಸ ಮಾರ್ಗಸೂಚಿಯನ್ನು ನಾವು ಒಪ್ಪಿದ್ದೇವೆ ಎಂಬುದು ನನಗೆ ಸಂತೋಷವಾಗಿದೆ. ಹಿಂದೂ ಮಹಾಸಾಗರ ಪ್ರದೇಶದಲ್ಲಿ ನಮ್ಮ ಕಾರ್ಯಾಚರಣೆಯ ಸಹಕಾರ ವೇಗವಾಗಿ ಬೆಳೆಯುತ್ತಿದೆ. ಈ ಪ್ರದೇಶದ ಎಲ್ಲರಿಗೂ ಸುರಕ್ಷತೆ ಮತ್ತು ಪ್ರಗತಿಯನ್ನು ಖಾತ್ರಿಪಡಿಸುವಲ್ಲಿ ಈ ಸಹಕಾರವು ಮಹತ್ವದ್ದಾಗಿದೆ.
ಸ್ನೇಹಿತರೇ,
ಈ ಸವಾಲಿನ ಕಾಲದಲ್ಲಿ ಹೊಸ ದೃಷ್ಟಿ, ಉತ್ಸಾಹ ಮತ್ತು ಕೌಶಲ್ಯದೊಂದಿಗೆ ನನ್ನ ಆತ್ಮೀಯ ಸ್ನೇಹಿತರಾದ ಅಧ್ಯಕ್ಷ ಮ್ಯಾಕ್ರನ್ ಅವರಿಗೆ ಜಿ -7 ಮತ್ತು ಫ್ರಾನ್ಸ್‌ನ ಯಶಸ್ವಿ ನಾಯಕತ್ವವನ್ನು ಬಯಸುತ್ತೇನೆ.
ಗೌರವಾನ್ವಿತರೇ,
1.3 ಬಿಲಿಯನ್ ಭಾರತೀಯರ ಸಂಪೂರ್ಣ ಸಹಕಾರ ಮತ್ತು ಬೆಂಬಲ ಈ ಪ್ರಯತ್ನದಲ್ಲಿ ನಿಮ್ಮೊಂದಿಗಿದೆ. ನಾವಿಬ್ಬರೂ ಒಟ್ಟಾಗಿ ಸುರಕ್ಷಿತ ಮತ್ತು ಸಮೃದ್ಧ ಜಗತ್ತಿಗೆ ದಾರಿ ಮಾಡಿಕೊಡಬಹುದು. ಬಿಯರಿಟ್ಜ್‌ನಲ್ಲಿ ನಡೆಯುವ ಜಿ 7 ಶೃಂಗಸಭೆಯಲ್ಲಿ ಪಾಲ್ಗೊಳ್ಳಲು ನಾನು ಕಾತುರನಾಗಿದ್ದೇನೆ. ಈ ಶೃಂಗಸಭೆಯ ಯಶಸ್ಸಿಗೆ ನೀವು ಮತ್ತು ಇಡೀ ಫ್ರಾನ್ಸ್‌ಗೆ ಶುಭಾಶಯಗಳನ್ನು ಕೋರುತ್ತೇನೆ. ನಿಮ್ಮ ಪ್ರೀತಿಯ ಆಹ್ವಾನಕ್ಕಾಗಿ ನಾನು ಮತ್ತೊಮ್ಮೆ ನನ್ನ ಕೃತಜ್ಞತೆಯನ್ನು ವ್ಯಕ್ತಪಡಿಸುತ್ತೇನೆ.
ಧನ್ಯವಾದಗಳು
भारत और फ़्रांस के बीच संबंध सैकड़ों साल पुराना है।
— PMO India (@PMOIndia) August 22, 2019
हमारी दोस्ती किसी स्वार्थ पर नहीं, बल्कि ‘लिबर्टी, इक्वलिटी और फ्रेटरनिटी’ के ठोस आदर्शों पर टिकी है: PM
Climate Change, Environment, और Technology के समावेशी विकास की चुनौतियों का सामना करने के लिए France और भारत एक साथ मज़बूती से खड़े हैं: PM
— PMO India (@PMOIndia) August 22, 2019
हम दोनों देशों को आतंकवाद का लगातार सामना करना पड़ रहा है।
— PMO India (@PMOIndia) August 22, 2019
क्रॉस-बार्डर terrorism का मुक़ाबला करने में हमें फ्रांस का बहुमूल्य समर्थन मिला है, उसके लिए हम President मैक्रों को धन्यवाद देते हैं।
हमने security और counter-terrorism पर सहयोग को व्यापक बनाने का इरादा किया है: PM
मैं अपने अभिन्न मित्र President मैक्रों को इस चुनौतीपूर्ण समय में एक नए vision, उत्साह और कुशलता के साथ फ्रांस और G-7 के नेतृत्व के लिए शुभकामनाएं देता हूं।
— PMO India (@PMOIndia) August 22, 2019
हम दोनों देश मिलकर, सुरक्षित और समृद्ध विश्व का मार्ग प्रशस्त कर सकते हैं: PM