ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆʼಗೆ (ಡಿಐಪಿಎಎಂ) ಸಂಬಂಧಿಸಿದ ಬಜೆಟ್ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವೆಬಿನಾರ್‌ನಲ್ಲಿ ಮಾತನಾಡಿದರು.
ವೆಬಿನಾರ್ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಭಾರತವನ್ನು ಮತ್ತೆ ಉನ್ನತ ಬೆಳವಣಿಗೆಯ ಪಥಕ್ಕೆ ಕೊಂಡೊಯ್ಯಲು ಈ ಬಜೆಟ್ ಸ್ಪಷ್ಟವಾದ ಮಾರ್ಗಸೂಚಿಯನ್ನು ಮುಂದಿಟ್ಟಿದೆ ಎಂದು ಹೇಳಿದರು. ಭಾರತದ ಅಭಿವೃದ್ಧಿಗಾಗಿ ಖಾಸಗಿ ವಲಯದ ಮಹತ್ವದ ಕೊಡುಗೆಯ ಮೇಲೂ ಬಜೆಟ್ ಗಮನ ಹರಿಸುತ್ತದೆ ಎಂದು ಅವರು ಹೇಳಿದರು. ಬಂಡವಾಳ ಹಿಂತೆಗೆತ ಮತ್ತು ಆಸ್ತಿ ನಗದೀಕರಣದ ಪ್ರಾಮುಖ್ಯವನ್ನು ಅವರು ಒತ್ತಿ ಹೇಳಿದರು. ಸಾರ್ವಜನಿಕ ವಲಯದ ಉದ್ಯಮಗಳು ಆರಂಭವಾದಾಗ ಇದ್ದಂತಹ ದೇಶದ ಕಾಲಘಟ್ಟ ಮತ್ತು ಅವಶ್ಯಕತೆಗಳು ಈಗಿಲ್ಲ. ಅವು ಈಗ ಸಂಪೂರ್ಣ ಭಿನ್ನವಾಗಿವೆ ಎಂದು ಅವರು ವಿಶ್ಲೇಷಿಸಿದರು. ಸಾರ್ವಜನಿಕ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಈ ಸುಧಾರಣೆಗಳ ದೊಡ್ಡ ಗುರಿಯಾಗಿದೆ ಎಂದರು. ಅನೇಕ ಸಾರ್ವಜನಿಕ ವಲಯದ ಉದ್ಯಮಗಳು ನಷ್ಟಕ್ಕೆ ಕಾರಣವಾಗಿದ್ದು, ತೆರಿಗೆದಾರರ ಹಣದಿಂದ ನಡೆಯುತ್ತಿವೆ. ಅರ್ಥ ವ್ಯವಸ್ಥೆಗೂ ಇವು ಹೊರೆಯಾಗಿವೆ. ಸಾರ್ವಜನಿಕ ಉದ್ದಿಮೆಗಳು ತುಂಬಾ ವರ್ಷಗಳಿಂದ ನಡೆಯುತ್ತಿವೆ ಎಂಬ ಒಂದೇ ಕಾರಣಕ್ಕಾಗಿ ಮುಂದುವರಿಸುವ ಅಗತ್ಯವಿಲ್ಲ. ದೇಶದ ಉದ್ಯಮಗಳಿಗೆ ಸಂಪೂರ್ಣ ಬೆಂಬಲ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದರು. ಆದರೆ ಇದೇ ವೇಳೆ, ವ್ಯವಹಾರ ನಡೆಸುವುದು ಸರಕಾರದ ಕೆಲಸವಲ್ಲ ಎಂಬುದನ್ನೂ ಗಮನಿಸಬೇಕೆಂದು ಅವರು ಹೇಳಿದರು.
ಜನರ ಕಲ್ಯಾಣ ಮತ್ತು ಅದಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು. ಸರಕಾರವು ಅನೇಕ ಮಿತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ವಾಣಿಜ್ಯ ನಿರ್ಧಾರಗಳನ್ನು ಕೈಗೊಳ್ಳುವುದು ಸುಲಭವಲ್ಲ ಎಂದು ಅವರು ಹೇಳಿದರು. ಜನರ ಜೀವನಮಟ್ಟ ಸುಧಾರಣೆ, ಜನರ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಕಡಿಮೆ ಮಾಡಲು ನಮ್ಮ ಸರಕಾರ ಪ್ರಯತ್ನಿಸುತ್ತಿದೆ. ಜೀವನದಲ್ಲಿ ಸರಕಾರದ ಕೊರತೆ ಅಥವಾ ಸರಕಾರದ ಪ್ರಭಾವದ ಕೊರತೆ ಕಾಣಬಾರದು. ದೇಶದಲ್ಲಿ ಸಾಕಷ್ಟು ಬಳಕೆಯಾಗದ ಮತ್ತು ಸೀಮಿತವಾಗಿ ಬಳಕೆಯಾಗುತ್ತಿರುವ ಸ್ವತ್ತುಗಳಿವೆ. ʻರಾಷ್ಟ್ರೀಯ ಆಸ್ತಿ ನಗದೀಕರಣ ಜಾಲʼವನ್ನು ಈ ಹಿನ್ನೆಲೆಯಲ್ಲಿ ಘೋಷಿಸಲಾಗಿದೆ ಎಂದು ಅವರು ಹೇಳಿದರು. 'ನಗದೀಕರಿಸು ಮತ್ತು ಆಧುನೀಕರಿಸುʼ ಎಂಬ ಮಂತ್ರದೊಂದಿಗೆ ಸರಕಾರವು ಮುನ್ನಡೆಯುತ್ತಿದೆ. ಕೇಂದ್ರ ಸರಕಾರವು ನಗದೀಕರಣ ಮಾಡಿದಾಗ, ಆ ಸ್ಥಾನವನ್ನು ಖಾಸಗಿ ವಲಯ ತುಂಬುತ್ತದೆ. ಖಾಸಗಿ ವಲಯವು ಬಂಡವಾಳ ಹೂಡಿಕೆ ಮತ್ತು ಅತ್ಯುತ್ತಮ ಜಾಗತಿಕ ಅಭ್ಯಾಸಗಳನ್ನು ತನ್ನೊಂದಿಗೆ ಹೊತ್ತು ತರುತ್ತದೆ ಎಂದು ಅವರು ಹೇಳಿದರು.
ಸಾರ್ವಜನಿಕ ಆಸ್ತಿಗಳ ನಗದೀಕರಣ ಮತ್ತು ಖಾಸಗೀಕರಣದಿಂದ ಬರುವ ಹಣವನ್ನು ಸಾರ್ವಜನಿಕ ಕಲ್ಯಾಣ ಯೋಜನೆಗಳಲ್ಲಿ ಬಳಸಬಹುದು ಎಂದು ಪ್ರಧಾನಿ ಹೇಳಿದರು. ಖಾಸಗೀಕರಣದಿಂದ ಯುವ ಜನರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಆಯಕಟ್ಟಿನ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಲಯಗಳನ್ನು ಖಾಸಗೀಕರಣಗೊಳಿಸಲು ಸರಕಾರ ಬದ್ಧವಾಗಿದೆ. ಹೂಡಿಕೆಗೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಲಾಗುವುದು. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೂಡಿಕೆ ಅವಕಾಶಗಳು ಮತ್ತು ಅಗಾಧ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.
ಸರಕಾರ ಈ ನಿಟ್ಟಿನಲ್ಲಿ ಸಂಪೂರ್ಣ ಬದ್ಧತೆಯೊಂದಿಗೆ ಹೆಜ್ಜೆ ಹಾಕುತ್ತಿದ್ದು, ಈ ನೀತಿಗಳ ಅನುಷ್ಠಾನಕ್ಕೂ ಅಷ್ಟೇ ಒತ್ತು ನೀಡಲಾಗುತ್ತಿದೆ. ಪಾರದರ್ಶಕತೆ ಮತ್ತು ಸ್ಪರ್ಧೆಯನ್ನು ಕಾಯ್ದುಕೊಳ್ಳಲು ನಮ್ಮ ಕಾರ್ಯವಿಧಾನಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಸ್ಥಿರವಾದ ನೀತಿಯನ್ನು ಹೊಂದಿರುವುದು ಬಹುಳ ಮುಖ್ಯ ಎಂದು ಪ್ರಧಾನಿ ಹೇಳಿದರು.
ಹೂಡಿಕೆದಾರರೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಲು ಅಧಿಕಾರಯುತ ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಲಾಗಿದೆ. ಅದೇ ರೀತಿ ಭಾರತದಲ್ಲಿ ವಹಿವಾಟು ಸುಗಮಗೊಳಿಸಲು ಹೂಡಿಕೆದಾರರಿಗೆ ಏಕ ಗವಾಕ್ಷಿ ಸಂಪರ್ಕ ವನ್ನು ಒದಗಿಸಲಾಗಿದೆ. ನಮ್ಮ ಸರಕಾರ ಹಲವು ವರ್ಷಗಳಿಂದ ಭಾರತವನ್ನು ಪ್ರಮುಖ ವ್ಯಾಪಾರದ ತಾಣವನ್ನಾಗಿಸಲು ನಿರಂತರ ಸುಧಾರಣೆಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಭಾರತವು ಈಂದು ಒಂದೇ ಮಾರುಕಟ್ಟೆ-ಒಂದೇ ತೆರಿಗೆ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಇಂದು ಭಾರತದಲ್ಲಿ ಕಂಪನಿಗಳು ಪ್ರವೇಶ ಮತ್ತು ನಿರ್ಗಮನಕ್ಕೆ ಅತ್ಯುತ್ತಮ ಮಾರ್ಗಗಳನ್ನು ಹೊಂದಿವೆ. ಅನುಸರಣೆಗಳಿಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ನಾವು ಸರಳಗೊಳಿಸುತ್ತಿದ್ದೇವೆ. ಜೊತೆಗೆ, ವ್ಯವಸ್ಥಾಪನಾ ತಂತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುತ್ತಿದ್ದೇವೆ. ಇಂದು ಭಾರತದ ತೆರಿಗೆ ವ್ಯವಸ್ಥೆಯನ್ನೂ ಸರಳಗೊಳಿಸಲಾಗುತ್ತಿದ್ದು, ಅದರ ಪಾರದರ್ಶಕತೆ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.
ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯಲ್ಲಿ ಭಾರತ ಅಭೂತಪೂರ್ವ ಸುಧಾರಣೆಗಳನ್ನು ಕೈಗೊಂಡಿದೆ. ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಉತ್ಪಾದನೆ ಆಧರಿತ ಉತ್ತೇಜಕಗಳನ್ನು ಪರಿಚಯಿಸಲಾಗಿದೆ. ಇದು ಕಳೆದ ಕೆಲವು ತಿಂಗಳಲ್ಲಿ ದಾಖಲೆಯ ಎಫ್‌ಡಿಐ ಒಳಹರಿವಿಗೆ ಕಾರಣವಾಗಿದೆ ಎಂದು ಅವರು ವಿವರಿಸಿದರು. ʻಆತ್ಮನಿರ್ಭರ ಭಾರತ್' ಅಭಿವೃದ್ಧಿಗೆ ನಾವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಬಹುವಿಧದ ಸಂಪರ್ಕದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ʻರಾಷ್ಟ್ರೀಯ ಮೂಲಸೌಕರ್ಯ ಜಾಲʼದ ಮೂಲಕ ನಮ್ಮ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ನಾವು 111 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಅವರು ಹೇಳಿದರು. ವಿಶ್ವದ ಅತಿದೊಡ್ಡ ಯುವ ರಾಷ್ಟ್ರವೆನಿಸಿಕೊಂಡಿರುವ ಭಾರತದ ಬಗ್ಗೆ ಕೇವಲ ಸರಕಾರದಿಂದ ಮಾತ್ರವಲ್ಲ, ಖಾಸಗಿ ವಲಯದಿಂದಲೂ ಈ ನಿರೀಕ್ಷೆಗಳು ಇವೆ. ಈ ಮಹತ್ವಾಕಾಂಕ್ಷೆಗಳು ಬೃಹತ್ ವ್ಯವಹಾರ ಅವಕಾಶಗಳನ್ನು ತಂದಿವೆ, ನಾವೆಲ್ಲರೂ ಈ ಅವಕಾಶಗಳನ್ನು ಬಳಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.
इस बजट ने भारत को फिर से High Growth Trajectory पर ले जाने के लिए स्पष्ट रोडमैप सामने रखा है।
— PMO India (@PMOIndia) February 24, 2021
बजट में भारत के विकास में प्राइवेट सेक्टर की मज़बूत पार्टनरशिप पर भी फोकस किया गया है।
बजट में पब्लिक-प्राइवेट भागीदारी के Scope और targets को Clarity के साथ सामने रखा गया है: PM
सरकार का ये दायित्व है कि वो देश के enterprises को, Businesses को पूरा समर्थन दे, लेकिन सरकार खुद enterprises चलाए, उसकी मालिक बनी रहे, ये आवश्यक नहीं।
— PMO India (@PMOIndia) February 24, 2021
इसलिए मैं कहता हूं- Government has no business to be in business: PM @narendramodi
हमारी सरकार का प्रयास, लोगों के जीवन स्तर को सुधारने के साथ ही, लोगों के जीवन में सरकार के बेवजह के दखल को भी कम करना है।
— PMO India (@PMOIndia) February 24, 2021
यानि जीवन में ना सरकार का अभाव हो, ना सरकार का प्रभाव हो: PM @narendramodi
इससे चीजें और modernize होती हैं, पूरे सेक्टर में आधुनिकता आती है, सेक्टर का तेजी से विस्तार होता है और Jobs के नए अवसर भी पैदा होते हैं।
— PMO India (@PMOIndia) February 24, 2021
ये पूरी प्रक्रिया transparent रहे, नियमों के तहत रहे, इसके लिए Monitor करना भी उतना ही आवश्यक है: PM @narendramodi
सरकार जिस मंत्र को लेकर आगे बढ़ रही है, वो है Monetise और Modernise.
— PMO India (@PMOIndia) February 24, 2021
जब सरकार Monetise करती है तो उस स्थान को देश का प्राइवेट सेक्टर भरता है।
प्राइवेट सेक्टर अपने साथ निवेश भी लाता है और global best practices भी लाता है: PM @narendramodi
देश के हर Enterprise को Efficient बनाने के लिए transparency, accountability, rule of law, parliamentary oversight और मज़बूत राजनीतिक इच्छाशक्ति आज स्पष्ट है।
— PMO India (@PMOIndia) February 24, 2021
इस बजट में public sector enterprises के लिए जिस नई पॉलिसी की घोषणा की गई है, उसमें भी हमारा ये इरादा साफ-साफ दिखता है: PM
बीते वर्षों में हमारी सरकार ने भारत को बिजनेस के लिए एक अहम डेस्टिनेशन बनाने के लिए निरंतर रिफॉर्म्स किए हैं।
— PMO India (@PMOIndia) February 24, 2021
आज भारत वन मार्केट-वन टैक्स सिस्टम से युक्त है।
आज भारत में कंपनियों के लिए एंट्री और एग्जिट के लिए बेहतरीन माध्यम उपलब्ध हैं: PM @narendramodi
भारत उन देशों में है जहां Taxpayers के Rights को Codify किया गया है।
— PMO India (@PMOIndia) February 24, 2021
Labor Laws को भी अब सरल किया जा चुका है: PM @narendramodi
भारत में Compliance से जुड़ी Complexities को लगातार सुधारा जा रहा है।
— PMO India (@PMOIndia) February 24, 2021
लॉजिस्टिक्स को लेकर आने वाले समस्याओं को तेज़ गति से दूर किया जा रहा है।
आज भारत में टैक्स सिस्टम को सिंपल किया जा रहा है, Transparency को बल दिया जा रहा है: PM @narendramodi
FDI Friendly माहौल और Production Linked Incentive- PLI जैसे प्रोत्साहन के कारण, आज निवेशकों में भारत के प्रति उत्साह और बढ़ा है।
— PMO India (@PMOIndia) February 24, 2021
ये बीते कुछ महीनों में हुए रिकॉर्ड FDI Inflow में स्पष्ट रुप से दिखता भी है: PM @narendramodi
दुनिया के सबसे बड़े युवा देश की ये अपेक्षाएं सिर्फ सरकार से ही नहीं हैं, बल्कि प्राइवेट सेक्टर से भी उतनी ही हैं।
— PMO India (@PMOIndia) February 24, 2021
ये Aspirations, Business की एक बहुत बड़ी Opportunity लेकर आई हैं।
आइए, हम सभी इन अवसरों का उपयोग करें: PM @narendramodi