ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ʻಹೂಡಿಕೆ ಮತ್ತು ಸಾರ್ವಜನಿಕ ಆಸ್ತಿ ನಿರ್ವಹಣೆ ಇಲಾಖೆʼಗೆ (ಡಿಐಪಿಎಎಂ) ಸಂಬಂಧಿಸಿದ ಬಜೆಟ್ ಪ್ರಸ್ತಾವನೆಗಳ ಪರಿಣಾಮಕಾರಿ ಅನುಷ್ಠಾನದ ಬಗ್ಗೆ ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ವೆಬಿನಾರ್‌ನಲ್ಲಿ ಮಾತನಾಡಿದರು.

ವೆಬಿನಾರ್‌ ಉದ್ದೇಶಿಸಿ ಮಾತನಾಡಿದ ಪ್ರಧಾನ ಮಂತ್ರಿಗಳು, ಭಾರತವನ್ನು ಮತ್ತೆ ಉನ್ನತ ಬೆಳವಣಿಗೆಯ ಪಥಕ್ಕೆ ಕೊಂಡೊಯ್ಯಲು ಈ ಬಜೆಟ್ ಸ್ಪಷ್ಟವಾದ ಮಾರ್ಗಸೂಚಿಯನ್ನು ಮುಂದಿಟ್ಟಿದೆ ಎಂದು ಹೇಳಿದರು. ಭಾರತದ ಅಭಿವೃದ್ಧಿಗಾಗಿ ಖಾಸಗಿ ವಲಯದ ಮಹತ್ವದ ಕೊಡುಗೆಯ ಮೇಲೂ ಬಜೆಟ್‌ ಗಮನ ಹರಿಸುತ್ತದೆ ಎಂದು ಅವರು ಹೇಳಿದರು. ಬಂಡವಾಳ ಹಿಂತೆಗೆತ ಮತ್ತು ಆಸ್ತಿ ನಗದೀಕರಣದ ಪ್ರಾಮುಖ್ಯವನ್ನು ಅವರು ಒತ್ತಿ ಹೇಳಿದರು. ಸಾರ್ವಜನಿಕ ವಲಯದ ಉದ್ಯಮಗಳು ಆರಂಭವಾದಾಗ ಇದ್ದಂತಹ ದೇಶದ ಕಾಲಘಟ್ಟ ಮತ್ತು ಅವಶ್ಯಕತೆಗಳು ಈಗಿಲ್ಲ. ಅವು ಈಗ ಸಂಪೂರ್ಣ ಭಿನ್ನವಾಗಿವೆ ಎಂದು ಅವರು ವಿಶ್ಲೇಷಿಸಿದರು. ಸಾರ್ವಜನಿಕ ಹಣವನ್ನು ಸಮರ್ಪಕವಾಗಿ ಬಳಕೆ ಮಾಡುವುದು ಈ ಸುಧಾರಣೆಗಳ ದೊಡ್ಡ ಗುರಿಯಾಗಿದೆ ಎಂದರು. ಅನೇಕ ಸಾರ್ವಜನಿಕ ವಲಯದ ಉದ್ಯಮಗಳು ನಷ್ಟಕ್ಕೆ ಕಾರಣವಾಗಿದ್ದು, ತೆರಿಗೆದಾರರ ಹಣದಿಂದ ನಡೆಯುತ್ತಿವೆ. ಅರ್ಥ ವ್ಯವಸ್ಥೆಗೂ ಇವು ಹೊರೆಯಾಗಿವೆ. ಸಾರ್ವಜನಿಕ ಉದ್ದಿಮೆಗಳು ತುಂಬಾ ವರ್ಷಗಳಿಂದ ನಡೆಯುತ್ತಿವೆ ಎಂಬ ಒಂದೇ ಕಾರಣಕ್ಕಾಗಿ ಮುಂದುವರಿಸುವ ಅಗತ್ಯವಿಲ್ಲ. ದೇಶದ ಉದ್ಯಮಗಳಿಗೆ ಸಂಪೂರ್ಣ ಬೆಂಬಲ ನೀಡುವುದು ಸರಕಾರದ ಜವಾಬ್ದಾರಿಯಾಗಿದೆ ಎಂದರು. ಆದರೆ ಇದೇ ವೇಳೆ, ವ್ಯವಹಾರ ನಡೆಸುವುದು ಸರಕಾರದ ಕೆಲಸವಲ್ಲ ಎಂಬುದನ್ನೂ ಗಮನಿಸಬೇಕೆಂದು ಅವರು ಹೇಳಿದರು.

ಜನರ ಕಲ್ಯಾಣ ಮತ್ತು ಅದಕ್ಕೆ ಸಂಬಂಧಿಸಿದ ಅಭಿವೃದ್ಧಿ ಯೋಜನೆಗಳ ಬಗ್ಗೆ ಸರಕಾರ ಗಮನ ಹರಿಸಬೇಕು. ಸರಕಾರವು ಅನೇಕ ಮಿತಿಗಳೊಂದಿಗೆ ಕಾರ್ಯನಿರ್ವಹಿಸುತ್ತದೆ, ಆದ್ದರಿಂದ ವಾಣಿಜ್ಯ ನಿರ್ಧಾರಗಳನ್ನು ಕೈಗೊಳ್ಳುವುದು ಸುಲಭವಲ್ಲ ಎಂದು ಅವರು ಹೇಳಿದರು. ಜನರ ಜೀವನಮಟ್ಟ ಸುಧಾರಣೆ, ಜನರ ಜೀವನದಲ್ಲಿ ಅನಗತ್ಯ ಹಸ್ತಕ್ಷೇಪ ಕಡಿಮೆ ಮಾಡಲು ನಮ್ಮ ಸರಕಾರ ಪ್ರಯತ್ನಿಸುತ್ತಿದೆ. ಜೀವನದಲ್ಲಿ ಸರಕಾರದ ಕೊರತೆ ಅಥವಾ ಸರಕಾರದ ಪ್ರಭಾವದ ಕೊರತೆ ಕಾಣಬಾರದು. ದೇಶದಲ್ಲಿ ಸಾಕಷ್ಟು ಬಳಕೆಯಾಗದ ಮತ್ತು ಸೀಮಿತವಾಗಿ ಬಳಕೆಯಾಗುತ್ತಿರುವ ಸ್ವತ್ತುಗಳಿವೆ. ʻರಾಷ್ಟ್ರೀಯ ಆಸ್ತಿ ನಗದೀಕರಣ ಜಾಲʼವನ್ನು ಈ ಹಿನ್ನೆಲೆಯಲ್ಲಿ ಘೋಷಿಸಲಾಗಿದೆ ಎಂದು ಅವರು ಹೇಳಿದರು. 'ನಗದೀಕರಿಸು ಮತ್ತು ಆಧುನೀಕರಿಸುʼ ಎಂಬ ಮಂತ್ರದೊಂದಿಗೆ ಸರಕಾರವು ಮುನ್ನಡೆಯುತ್ತಿದೆ. ಕೇಂದ್ರ ಸರಕಾರವು ನಗದೀಕರಣ ಮಾಡಿದಾಗ, ಆ ಸ್ಥಾನವನ್ನು ಖಾಸಗಿ ವಲಯ ತುಂಬುತ್ತದೆ. ಖಾಸಗಿ ವಲಯವು ಬಂಡವಾಳ ಹೂಡಿಕೆ ಮತ್ತು ಅತ್ಯುತ್ತಮ ಜಾಗತಿಕ ಅಭ್ಯಾಸಗಳನ್ನು ತನ್ನೊಂದಿಗೆ ಹೊತ್ತು ತರುತ್ತದೆ ಎಂದು ಅವರು ಹೇಳಿದರು.

 

 

ಸಾರ್ವಜನಿಕ ಆಸ್ತಿಗಳ ನಗದೀಕರಣ ಮತ್ತು ಖಾಸಗೀಕರಣದಿಂದ ಬರುವ ಹಣವನ್ನು ಸಾರ್ವಜನಿಕ ಕಲ್ಯಾಣ ಯೋಜನೆಗಳಲ್ಲಿ ಬಳಸಬಹುದು ಎಂದು ಪ್ರಧಾನಿ ಹೇಳಿದರು. ಖಾಸಗೀಕರಣದಿಂದ ಯುವ ಜನರಿಗೆ ಉತ್ತಮ ಉದ್ಯೋಗಾವಕಾಶಗಳು ದೊರೆಯುತ್ತವೆ. ಆಯಕಟ್ಟಿನ ವಲಯಗಳನ್ನು ಹೊರತುಪಡಿಸಿ ಉಳಿದ ಎಲ್ಲ ವಲಯಗಳನ್ನು ಖಾಸಗೀಕರಣಗೊಳಿಸಲು ಸರಕಾರ ಬದ್ಧವಾಗಿದೆ. ಹೂಡಿಕೆಗೆ ಸ್ಪಷ್ಟ ಮಾರ್ಗಸೂಚಿಯನ್ನು ರೂಪಿಸಲಾಗುವುದು. ಇದರಿಂದ ಪ್ರತಿಯೊಂದು ಕ್ಷೇತ್ರದಲ್ಲೂ ಹೊಸ ಹೂಡಿಕೆ ಅವಕಾಶಗಳು ಮತ್ತು ಅಗಾಧ ಉದ್ಯೋಗಾವಕಾಶಗಳು ಸೃಷ್ಟಿಯಾಗಲಿವೆ ಎಂದು ಅವರು ಹೇಳಿದರು.

ಸರಕಾರ ಈ ನಿಟ್ಟಿನಲ್ಲಿ ಸಂಪೂರ್ಣ ಬದ್ಧತೆಯೊಂದಿಗೆ ಹೆಜ್ಜೆ ಹಾಕುತ್ತಿದ್ದು, ಈ ನೀತಿಗಳ ಅನುಷ್ಠಾನಕ್ಕೂ ಅಷ್ಟೇ ಒತ್ತು ನೀಡಲಾಗುತ್ತಿದೆ. ಪಾರದರ್ಶಕತೆ ಮತ್ತು ಸ್ಪರ್ಧೆಯನ್ನು ಕಾಯ್ದುಕೊಳ್ಳಲು ನಮ್ಮ ಕಾರ್ಯವಿಧಾನಗಳು ಸರಿಯಾಗಿವೆಯೇ ಎಂದು ಖಚಿತಪಡಿಸಿಕೊಳ್ಳಬೇಕು. ಇದಕ್ಕಾಗಿ ಒಂದು ಸ್ಥಿರವಾದ ನೀತಿಯನ್ನು ಹೊಂದಿರುವುದು ಬಹುಳ ಮುಖ್ಯ ಎಂದು ಪ್ರಧಾನಿ ಹೇಳಿದರು.

ಹೂಡಿಕೆದಾರರೊಂದಿಗೆ ಸಂಪರ್ಕದಲ್ಲಿರಲು ಮತ್ತು ಅವರ ಸಮಸ್ಯೆಗಳನ್ನು ತ್ವರಿತವಾಗಿ ನಿವಾರಿಸಲು ಅಧಿಕಾರಯುತ ಕಾರ್ಯದರ್ಶಿಗಳ ಸಮಿತಿಯೊಂದನ್ನು ರಚಿಸಲಾಗಿದೆ. ಅದೇ ರೀತಿ ಭಾರತದಲ್ಲಿ ವಹಿವಾಟು ಸುಗಮಗೊಳಿಸಲು ಹೂಡಿಕೆದಾರರಿಗೆ ಏಕ ಗವಾಕ್ಷಿ ಸಂಪರ್ಕ ವನ್ನು ಒದಗಿಸಲಾಗಿದೆ. ನಮ್ಮ ಸರಕಾರ ಹಲವು ವರ್ಷಗಳಿಂದ ಭಾರತವನ್ನು ಪ್ರಮುಖ ವ್ಯಾಪಾರದ ತಾಣವನ್ನಾಗಿಸಲು ನಿರಂತರ ಸುಧಾರಣೆಗಳನ್ನು ಕೈಗೊಂಡಿದೆ. ಇದರ ಭಾಗವಾಗಿ ಭಾರತವು ಈಂದು ಒಂದೇ ಮಾರುಕಟ್ಟೆ-ಒಂದೇ ತೆರಿಗೆ ವ್ಯವಸ್ಥೆಯನ್ನು ಹೊಂದಿದೆ ಎಂದು ಅವರು ಹೇಳಿದರು. ಇಂದು ಭಾರತದಲ್ಲಿ ಕಂಪನಿಗಳು ಪ್ರವೇಶ ಮತ್ತು ನಿರ್ಗಮನಕ್ಕೆ ಅತ್ಯುತ್ತಮ ಮಾರ್ಗಗಳನ್ನು ಹೊಂದಿವೆ. ಅನುಸರಣೆಗಳಿಗೆ ಸಂಬಂಧಿಸಿದ ಸಂಕೀರ್ಣತೆಗಳನ್ನು ನಾವು ಸರಳಗೊಳಿಸುತ್ತಿದ್ದೇವೆ. ಜೊತೆಗೆ, ವ್ಯವಸ್ಥಾಪನಾ ತಂತ್ರಗಳಿಗೆ ಸಂಬಂಧಿಸಿದ ಸಮಸ್ಯೆಗಳನ್ನು ತ್ವರಿತವಾಗಿ ಪರಿಹರಿಸುತ್ತಿದ್ದೇವೆ. ಇಂದು ಭಾರತದ ತೆರಿಗೆ ವ್ಯವಸ್ಥೆಯನ್ನೂ ಸರಳಗೊಳಿಸಲಾಗುತ್ತಿದ್ದು, ಅದರ ಪಾರದರ್ಶಕತೆ ಹೆಚ್ಚಿಸಲಾಗುತ್ತಿದೆ ಎಂದು ಅವರು ಹೇಳಿದರು.

ವಿದೇಶಿ ನೇರ ಹೂಡಿಕೆ (ಎಫ್‌ಡಿಐ) ನೀತಿಯಲ್ಲಿ ಭಾರತ ಅಭೂತಪೂರ್ವ ಸುಧಾರಣೆಗಳನ್ನು ಕೈಗೊಂಡಿದೆ. ಹೂಡಿಕೆದಾರರನ್ನು ಪ್ರೋತ್ಸಾಹಿಸಲು ಉತ್ಪಾದನೆ ಆಧರಿತ ಉತ್ತೇಜಕಗಳನ್ನು ಪರಿಚಯಿಸಲಾಗಿದೆ. ಇದು ಕಳೆದ ಕೆಲವು ತಿಂಗಳಲ್ಲಿ ದಾಖಲೆಯ ಎಫ್‌ಡಿಐ ಒಳಹರಿವಿಗೆ ಕಾರಣವಾಗಿದೆ ಎಂದು ಅವರು ವಿವರಿಸಿದರು. ʻಆತ್ಮನಿರ್ಭರ ಭಾರತ್' ಅಭಿವೃದ್ಧಿಗೆ ನಾವು ಅತ್ಯಾಧುನಿಕ ಮೂಲಸೌಕರ್ಯ ಮತ್ತು ಬಹುವಿಧದ ಸಂಪರ್ಕದ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದೇವೆ. ಮುಂದಿನ ಐದು ವರ್ಷಗಳಲ್ಲಿ ʻರಾಷ್ಟ್ರೀಯ ಮೂಲಸೌಕರ್ಯ ಜಾಲʼದ ಮೂಲಕ ನಮ್ಮ ಮೂಲಸೌಕರ್ಯವನ್ನು ಮೇಲ್ದರ್ಜೆಗೇರಿಸಲು ನಾವು 111 ಲಕ್ಷ ಕೋಟಿ ರೂ. ಖರ್ಚು ಮಾಡುತ್ತೇವೆ ಎಂದು ಅವರು ಹೇಳಿದರು. ವಿಶ್ವದ ಅತಿದೊಡ್ಡ ಯುವ ರಾಷ್ಟ್ರವೆನಿಸಿಕೊಂಡಿರುವ ಭಾರತದ ಬಗ್ಗೆ ಕೇವಲ ಸರಕಾರದಿಂದ ಮಾತ್ರವಲ್ಲ, ಖಾಸಗಿ ವಲಯದಿಂದಲೂ ಈ ನಿರೀಕ್ಷೆಗಳು ಇವೆ. ಈ ಮಹತ್ವಾಕಾಂಕ್ಷೆಗಳು ಬೃಹತ್ ವ್ಯವಹಾರ ಅವಕಾಶಗಳನ್ನು ತಂದಿವೆ, ನಾವೆಲ್ಲರೂ ಈ ಅವಕಾಶಗಳನ್ನು ಬಳಸಿಕೊಳ್ಳೋಣ ಎಂದು ಅವರು ಕರೆ ನೀಡಿದರು.

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
PM to participate in ‘Odisha Parba 2024’ on 24 November
November 24, 2024

Prime Minister Shri Narendra Modi will participate in the ‘Odisha Parba 2024’ programme on 24 November at around 5:30 PM at Jawaharlal Nehru Stadium, New Delhi. He will also address the gathering on the occasion.

Odisha Parba is a flagship event conducted by Odia Samaj, a trust in New Delhi. Through it, they have been engaged in providing valuable support towards preservation and promotion of Odia heritage. Continuing with the tradition, this year Odisha Parba is being organised from 22nd to 24th November. It will showcase the rich heritage of Odisha displaying colourful cultural forms and will exhibit the vibrant social, cultural and political ethos of the State. A National Seminar or Conclave led by prominent experts and distinguished professionals across various domains will also be conducted.