PM Modi reviews flood relief operations in Gujarat, chairs high level meeting
Flood relief operations: PM calls for immediate restoration of water supply, electricity and communication links
Special teams be set up for repair of damaged roads, restoration of power and for health related assistance in flood affected areas: PM

ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಉನ್ನತ ಮಟ್ಟದ ಸಭೆಯಲ್ಲಿ ಪ್ರವಾಹ ಪರಿಹಾರದ ಪರಾಮರ್ಶೆಯನ್ನೂ ನಡೆಸಿದರು. ಈ ಸಭೆಯಲ್ಲಿ ಮುಖ್ಯಮಂತ್ರಿ ವಿಜಯ್ ರೂಪಾನಿ, ಇತರ ಹಿರಿಯ ಸಚಿವರು ಹಾಗೂ ಪ್ರಧಾನಮಂತ್ರಿಗಳ ಕಾರ್ಯಾಲಯ, ವಿಕೋಪ ಸ್ಪಂದನಾ ಸಂಸ್ಥೆ ಮತ್ತು ರಾಜ್ಯ ಸರ್ಕಾರದ ಉನ್ನತ ಅಧಿಕಾರಿಗಳು ಭಾಗಿಯಾಗಿದ್ದರು.


ಪ್ರಧಾನಮಂತ್ರಿಯವರಿಗೆ ಪ್ರವಾಹದಿಂದ ಆಗಿರುವ ಹಾನಿ ಮತ್ತು ಕೈಗೊಳ್ಳಲಾಗಿರುವ ಪರಿಹಾರ ಕಾರ್ಯಾಚರಣೆಗಳ ಕುರಿತು ವಿವರಿಸಲಾಯಿತು. ತತ್ ಕ್ಷಣದ ರಕ್ಷಣೆ ಮತ್ತು ಪರಿಹಾರಕ್ಕೆ ಎಲ್ಲ ಅತ್ಯುತ್ತಮ ಸಾಧ್ಯ ಯತ್ನ ಮಾಡುವಂತೆ ಭಾರತೀಯ ಸೇನೆ ಸೇರಿದಂತೆ ಪರಿಹಾರ ಕಾರ್ಯಾಚರಣೆಯಲ್ಲಿ ತೊಡಗಿರುವ ಎಲ್ಲ ಸಂಸ್ಥೆಗಳಿಗೆ ಪ್ರಧಾನಮಂತ್ರಿ ಸೂಚಿಸಿದರು. ಸ್ವಚ್ಛತೆ, ನೈರ್ಮಲ್ಯ ಮತ್ತು ಆರೋಗ್ಯದ ಮಹತ್ವವನ್ನು ಒತ್ತಿ ಹೇಳಿದ ಅವರು, ಈ ಅಂಶಗಳ ಬಗ್ಗೆ ಉನ್ನತ ಆದ್ಯತೆ ನೀಡುವಂತೆ ಸೂಚಿಸಿದರು.

ಬೆಳೆ ವಿಮೆಗೆ ಸಂಬಂಧಿಸಿದಂತೆ ಕಾರ್ಯ ನಿರ್ವಹಿಸುತ್ತಿರುವರೂ ಸೇರಿದಂತೆ ವಿಮಾ ಸಂಸ್ಥೆಗಳಿಗೆ ತ್ವರಿತವಾಗಿ ಆಸ್ತಿ ಪಾಸ್ತಿ ಮತ್ತು ಬೆಳೆ ಹಾನಿ ಇತ್ಯಾದಿಯ ಅಂದಾಜು ಮಾಡಲು ಮತ್ತು ಶೀಘ್ರ ಕ್ಲೇಮ್ ಗಳ ಇತ್ಯರ್ಥ ಮಾಡಲು ಸಲಹೆ ಮಾಡಲಾಗುವುದು, ಇದರಿಂದ ಸಂತ್ರಸ್ತರಿಗೆ ತತ್ ಕ್ಷಣ ಪರಿಹಾರ ಒದಗಿಸಬಹುದಾಗಿದೆ ಎಂದರು.


ನೀರು, ವಿದ್ಯುತ್ ಪೂರೈಕೆ ಹಾಗೂ ರಸ್ತೆ ಸಂಪರ್ಕವನ್ನು ತತ್ ಕ್ಷಣವೇ ಪುನರ್ ಸ್ಥಾಪಿಸುವಂತೆ ಪ್ರಧಾನಮಂತ್ರಿಯವರು ಸೂಚಿಸಿದರು.


ಹಾಳಾಗಿರುವ ರಸ್ತೆಗಳ ದುರಸ್ತಿಗೆ, ವಿದ್ಯುತ್ ಮೂಲಸೌಕರ್ಯಗಳ ಪುನರ್ ಸ್ಥಾಪನೆಗೆ ಮತ್ತು ಆರೋಗ್ಯ ಸಂಬಂಧಿ ನೆರವಿಗಾಗಿ ವಿಶೇಷ ತಂಡ ರಚಿಸುವಂತೆಯೂ ಪ್ರಧಾನಮಂತ್ರಿ ಸಲಹೆ ಮಾಡಿದರು.

ಅಹ್ಮದಾಬಾದ್ ವಿಮಾನ ನಿಲ್ದಾಣದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಪ್ರಧಾನಮಂತ್ರಿಯವರು, ಕಳೆದ ವಾರದಿಂದ ಗುಜರಾತ್ ನಲ್ಲಿ ಭಾರೀ ಮಳೆ ಸುರಿಯುತ್ತಿದೆ ಎಂದರು. ನಾಳೆಯಿಂದ ರಕ್ಷಣಾ ಕಾರ್ಯಕ್ಕೆ ಮತ್ತೆ ಹತ್ತು ಹೆಲಿಕಾಪ್ಟರ್ ಗಳನ್ನು ಕಾರ್ಯಾಚರಣೆಗೆ ಇಳಿಸಲಾಗುವುದು, ಮತ್ತು ಪರಿಹಾರ ಕಾರ್ಯಾಚರಣೆಗೆ ವೇಗವನ್ನು ಇನ್ನೂ ಹೆಚ್ಚಿಸಲಾಗುವುದು ಎಂದರು. ಗ್ರಾಮೀಣ ಮತ್ತು ನಗರ ಪ್ರದೇಶಗಳಲ್ಲಿ ಆಗಿರುವ ಹಾನಿಯ ಪ್ರಮಾಣವನ್ನು ಅಂದಾಜು ಮಾಡಲಾಗುವುದು, ಮತ್ತು ಅಲ್ಪ ಕಾಲೀನ ಮತ್ತು ದೀರ್ಘಕಾಲೀನ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದರು. ಪ್ರವಾಹ ಪರಿಸ್ಥಿತಿಯ ಬಗ್ಗೆ ಈ ವರೆಗಿನ ಸ್ಪಂದನೆಗೆ ರಾಜ್ಯ ಸರ್ಕಾರ ಮತ್ತು ಇತರ ಸಂಸ್ಥೆಗಳನ್ನು ಪ್ರಧಾನಿ ಶ್ಲಾಘಿಸಿದರು.


ಪ್ರವಾಹದಿಂದ ಮೃತಪಟ್ಟವರ ಹತ್ತಿರದ ಬಂಧುಗಳಿಗೆ ತಲಾ 2 ಲಕ್ಷ ರೂಪಾಯಿ ಮತ್ತು ಗಂಭೀರವಾಗಿ ಗಾಯಗೊಂಡವರಿಗೆ ತಲಾ 50 ಸಾವಿರ ರೂಪಾಯಿ ಪರಿಹಾರವನ್ನು ಘೋಷಿಸಿದರು. ಎಸ್.ಡಿ.ಆರ್.ಎಫ್. ಅಡಿಯಲ್ಲಿ ಹೆಚ್ಚುವರಿಯಾಗಿ ತತ್ ಕ್ಷಣದ ಪರಿಹಾರವಾಗಿ 500 ಕೋಟಿ ರೂಪಾಯಿಗಳನ್ನು ಅವರು ಪ್ರಕಟಿಸಿದರು. ಪ್ರವಾಹದಿಂದ ಎದುರಾಗಿರುವ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸಲು ಗುಜರಾತ್ ರಾಜ್ಯ ಮತ್ತು ಜನತೆ ಇನ್ನೂ ಹೆಚ್ಚು ಶಕ್ತಿಯುತವಾಗಿ ಹೊರಹೊಮ್ಮಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು. ಈ ಸಂಕಷ್ಟದ ಸಮಯದಲ್ಲಿ ಕೇಂದ್ರ ಸರ್ಕಾರ ರಾಜ್ಯದ ಜನತೆಯೊಂದಿಗೆ ಹೆಗಲಿಗೆ ಹೆಗಲುಕೊಟ್ಟು ನಿಲ್ಲಲಿದೆ ಎಂಬ ಭರವಸೆಯನ್ನು ನೀಡಿದರು

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi