India is a land that is blessed with a rich cultural and intellectual milieu: PM
Our land is home to writers, scholars, saints and seers who have expressed themselves freely and fearlessly: PM
Whenever the history of human civilization has entered the era of knowledge, India has shown the way: PM Modi
Our Saints did things that may seem small but their impact was big and this altered the course of our history: PM
Those who inspire you, inform you, tell you the truth, teach you, show you the right way and awaken you, they are all your gurus: PM
Sri Ramakrishna - the saint of social harmony & link between the ancient and the modern, says PM Narendra Modi

 ನಮಸ್ಕಾರ, ಎಲ್ಲರಿಗೂ ಶುಭಾಶಯಗಳು,

ಸ್ವಾಮಿ ನಿರ್ವಿನನಂದಜೀ ಮತ್ತು ಇಲ್ಲಿ ಸೇರಿರುವ ಶ್ರೀ ಶ್ರೀ ಠಾಕೂರ್ ರಾಮಕೃಷ್ಣ ಪರಮಹಂಸರ ಎಲ್ಲ ಭಕ್ತರೇ, ಶುಭಾಶಯಗಳು.
ಶ್ರೀ ರಾಮಕೃಷ್ಣ ವಚನಾಮೃತ ಸತ್ರಂ- ಏಳು ದಿನಗಳ ಅಧಿವೇಶನದಲ್ಲಿ ನಿಮ್ಮೆಲ್ಲರೊಂದಿಗೆ ಹಾಜರಿರುವುದು ನನಗೆ ಹೆಮ್ಮೆ ತಂದಿದೆ.

ಬಂಗಾಳದ ಶ್ರೇಷ್ಠ ಮನಸ್ಸಿನ ವ್ಯಕ್ತಿಯ ಪದಗಳು, ಹೇಗೆ ಮಲೆಯಾಳಂಗೆ ಭಾಷಾಂತರಗೊಂಡು, ಕೇರಳದಲ್ಲಿ ಓದಿ ಚರ್ಚೆಯಾಗುತ್ತದೆ ಎಂಬ ಬಗ್ಗೆ ನಾನು ಯೋಚಿಸಿದಾಗ, ನನಗೆ ಹೇಗೆ ಕಲ್ಪನೆಗಳು ವಿನಿಮಯವಾಗಿ ದೇಶದಾದ್ಯಂತ ಅಳವಡಿಸಿಕೊಳ್ಳಲಾಗುತ್ತದೆ ಎಂಬ ಬಗ್ಗೆ ಸಂತೋಷವಾಗುತ್ತದೆ.
ಏಕ ಭಾರತ, ಶ್ರೇಷ್ಠ ಭಾರತ ಎಂಬುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಏನು ಬೇಕು?

ಪವಿತ್ರ ಗ್ರಂಥಗಳ ಬೋಧನೆಗಳು, ಶ್ರೇಷ್ಠ ಗುರುಗಳ ಉಕ್ತಿಗಳನ್ನು ಶ್ರೀಸಾಮಾನ್ಯನಿಗೆ ಲಭ್ಯವಾಗುವಂತೆ ಮಾಡಲು ನೀವು ಆರಂಭಿಸಿರುವ ಈ ರೂಢಿ ದೀರ್ಘ ಸಂಪ್ರದಾಯದ ಆಧಾರದಲ್ಲಿದೆ.
ಇದು ಭಾರತದ ದೀರ್ಘವಾದ ಮೌಖಿಕ ಸಂಪ್ರದಾಯವಾಗಿದ್ದು, ಬದಲಾಗುತ್ತಿರುವ ಕಾಲದಲ್ಲೂ ಸನಾತನ ಮೌಲ್ಯಗಳನ್ನು ಗಮನದಲ್ಲಿಟ್ಟುಕೊಂಡು ಅಳವಡಿಸಿಕೊಳ್ಳುವಂಥದ್ದಾಗಿದೆ.
ಈ ಸಂಪ್ರದಾಯವು ಶ್ರುತಿ ಮತ್ತು ಸ್ಮೃತಿಯಿಂದ ಹೊರಹೊಮ್ಮಿದ್ದು.
ಈ ಶ್ರುತಿಗಳು, ನಾಲ್ಕು ವೇದಗಳು ಮತ್ತು ಉಪನಿಷತ್ತುಗಳು ನಮ್ಮ ಧರ್ಮದ ಮೂಲವಾಗಿವೆ. ಭಾರತೀಯ ಋಷಿಗಳು ಪೀಳಿಗೆಯಿಂದ ಪೀಳಿಗೆಗೆ ನೀಡುತ್ತಾ ಬಂದಿರುವ ಪವಿತ್ರ ಜ್ಞಾನವಾಗಿದೆ.
ಶ್ರುತಿಗಳು ಬಾಯಿಯ ಮೂಲಕ ಹೇಳಲಾದ ಪವಿತ್ರ ಜ್ಞಾನವಾಗಿದೆ.
ಸ್ಮೃತಿಗಳು ಸ್ಮರಣೆ ಮತ್ತು ವ್ಯಾಖ್ಯಾನಾಧಾರಿತವಾದ ಪಠ್ಯ ವರ್ಗವಾಗಿದೆ.
ವೇದ ಮತ್ತು ಉಪನಿಷತ್ತುಗಳು ಶ್ರೀಸಾಮಾನ್ಯರಿಗೆ ಅರ್ಥ ಮಾಡಿಕೊಳ್ಳಲು ಕಷ್ಟವಾದ ಕಾರಣ, ಅದನ್ನು ವಿವರಿಸಲು, ವ್ಯಾಖ್ಯಾನಿಸಲು ಮತ್ತು ಪ್ರಾಥಮಿಕ ಅನುಜ್ಞಾನವನ್ನು ಕಥೆಗಳ ಮೂಲಕ ವಿವರಿಸಲು ಹಾಗೂ ನೈತಿಕ ಶಿಕ್ಷಣ ನೀಡಲು ಸ್ಮೃತಿಗಳನ್ನು ಬರೆಯಲಾಗಿದೆ.
ಹೀಗಾಗಿ ಮಹಾಕಾವ್ಯಗಳು, ಪುರಾಣಗಳು ಮತ್ತು ಕೌಟಿಲ್ಯನ ಅರ್ಥಶಾಸ್ತ್ರ ಎಲ್ಲವೂ ಸ್ಮೃತಿ ಎಂಬುದು ಸ್ಪಷ್ಟವಾಗುತ್ತದೆ.
ಪ್ರತಿಯೊಬ್ಬರನ್ನೂ, ಅವರಿಗೆ ಸೂಕ್ತವಾದ ರೀತಿಯಲ್ಲಿಯೇ ತಲುಪುವ ಈ ಪ್ರಯತ್ನ ಕಾಲಾಂತರದಿಂದ ಮುಂದುವರಿದುಕೊಂಡು ಬಂದಿದೆ.
ಶ್ರೀಸಾಮಾನ್ಯರನ್ನು ತಲುಪಲು, ಧರ್ಮವನ್ನು ಮಾಡುವ ಅಗತ್ಯ ಬಂತು. ಇದು ಅವರ ಬದುಕಿಗೆ ತೀರಾ ಹತ್ತಿರವಾಗಿದೆ ಮತ್ತು ಹೆಚ್ಚು ಸೂಕ್ತವಾಗಿದೆ.
ಭಾಗವತಗಳು ದೇವರ್ಷಿ ನಾರದರು ಭಗವತ್ ಸ್ತುತಿಯನ್ನು ಹಾಡಿರುವುದನ್ನು ವಿವರಿಸುತ್ತದೆ.
अहो देवर्षिर्धन्योऽयं यत्कीर्तिं शांर्गधन्वन:।
गायन्माद्यन्निदं तन्त्रया रमयत्यातुरं जगत्।।
‘अहो ! ये देवर्षि नारदजी धन्य हैं जो वीणा बजाते, हरिगुण गाते और मस्त होते हुए इस दुखी संसार को आनन्दित करते रहते हैं।’’

ಭಕ್ತಿ ಪಂಥದಲ್ಲಿ ಸಂತರು, ದೇವರನ್ನು ಜನರ ಹತ್ತಿರಕ್ಕೆ ತರಲು ಸಂಗೀತ ಮಕ್ಕ ಸ್ಥಳೀಯ ಭಾಷೆಯ ಪದಗಳನ್ನು ಬಳಸಿದ್ದಾರೆ – ಅವು ಜಾತಿ, ಮತ, ವರ್ಗ, ಧರ್ಮ ಮತ್ತು ಲಿಂಗ ತಾರತಮ್ಯವನ್ನು ಬೇಧಿಸಿದವಾಗಿವೆ.
ಸಂತರ ಈ ಸಂದೇಶಗಳನ್ನು ಜಾನಪದ ಗಾಯಕರು, ಕಥಾ-ವಾಚಕರು, ಹರಿಕಥೆ ದಾಸರು ಮುಂದುವರಿಸಿದರು.
ಕಬೀರರ ದೋಹ, ಮೀರಾ ಭಜನ್ ಗಳನ್ನು ಗಾಯಕರು ಹಳ್ಳಿ ಹಳ್ಳಿಗೆ ತಲುಪಿಸಿದರು.
ಭಾರತವು ಶ್ರೀಮಂತ ಸಂಸ್ಕೃತಿ ಮತ್ತು ಬೌದ್ಧಿಕ ಪರಿಸರದಿಂದ ಹರಸಲ್ಪಟ್ಟ ಭೂಮಿಯಾಗಿದೆ.
ನಮ್ಮ ತಾಯ್ನಾಡು ತಮ್ಮನ್ನು ಭಯವಿಲ್ಲದೆ ಮುಕ್ತವಾಗಿ ಅಭಿವ್ಯಕ್ತಿಗೊಳಿಸಿಕೊಂಡ ಸಾಹಿತಿಗಳು, ಪಂಡಿತರು, ಸಂತರು, ಶ್ರೀಗಳ ತವರಾಗಿದೆ.
ಯಾವಯಾವಾಗ ಮಾನವನ ನಾಗರಿಕತೆಯ ಇತಿಹಾಸ ಜ್ಞಾನ ಯುಗವನ್ನು ಪ್ರವೇಶಿಸುತ್ತದೋ ಆಗೆಲ್ಲಾ ಭಾರತ ಮಾರ್ಗ ತೋರಿದೆ.
ಭಾರತಕ್ಕೆ ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಸುಧಾರಣೆಗೆ ಹೊರಗಿನವರ ಚಾಲನೆ ಬೇಕು ಎಂಬ ತಪ್ಪುಗ್ರಹಿಕೆಯನ್ನೂ ಸೃಷ್ಟಿಸಲಾಗಿತ್ತು.
ಇದು ವಸಾಹತುಶಾಹಿಯನ್ನು ಸಮರ್ಥಿಸುವ ಕಾರಣವೂ ಆಗಿತ್ತು.
ಅಂಥ ರಾಷ್ಟ್ರಗಳು ಸಂಪೂರ್ಣ ತಪ್ಪಾಗಿದ್ದವು ಕಾರಣ, ಭಾರತದ ಮಣ್ಣಿನಲ್ಲಿಯೇ ಅಂಥ ಬದಲಾವಣೆಗಳು ಯಾವಾಗಲೂ ಹುಟ್ಟಿದ್ದವು.
ಈ ಬದಲಾವಣೆಗಳು ನಮ್ಮಲ್ಲೇ, ನಮ್ಮ ಸನ್ಯಾಸಿಗಳು, ಶ್ರೀಗಳ ತೋರಿದ ದಾರಿಯಲ್ಲಿ ಆದುದಾಗಿವೆ. ಅವರು, ಸಮಾಜವನ್ನು ಪರಿವರ್ತಿಸಲು, ಸಾಮಾಜಿಕ ಪಿಡುಗು ತೊಡೆದುಹಾಕಲು ಸಾಮೂಹಿಕ ಆಂದೋಲನವನ್ನೇ ಕೈಗೊಂಡಿದ್ದಾರೆ.
ನಮ್ಮ ಸನ್ಯಾಸಿಗಳು ಈ ಸಾಮಾಜಿಕ ಪರಿವರ್ತನೆಯಲ್ಲಿ ಪ್ರತಿಯೊಬ್ಬ ನಾಗರಿಕರ ಮತ್ತು ಪ್ರತಿಯೊಬ್ಬರ ಬಯಕೆಯನ್ನೂ ಸಮಗ್ರೀಕರಿಸಿದ್ದಾರೆ.
ಈ ಕಕ್ಷೆಯಲ್ಲಿ ಅವರು ಯಾರನ್ನೂ ಬಿಟ್ಟಿಲ್ಲ.
ಈ ರೀತಿಯಲ್ಲಿ, ನಮ್ಮ ನಾಗರಿಕತೆಯು ಎಲ್ಲ ಎಡರುತೊಡರು ದಾಟಿ ಎತ್ತರದಲ್ಲಿ ನಿಲ್ಲುತ್ತದೆ.
ಆ ನಾಗರಿಕತೆಗಳು ಗತಿಸಿಹೋದ ಕಾಲದಲ್ಲಿ ಬದಲಾವಣೆಯಾದುವಲ್ಲ.
ಮತ್ತೊಂದು ರೀತಿಯಲ್ಲಿ, ಶತಮಾನಗಳಿಂದ ನಾವು ಬದಲಾದ ಪದ್ಧತಿಯಲ್ಲಿಯೇ ಇದ್ದೇವೆ.
ಕೆಲವು ಪದ್ಧತಿಗಳು, ಕೆಲವು ಶತಮಾನಗಳಲ್ಲಿ ಮಾತ್ರ ಸೂಕ್ತವಾಗಿದ್ದವು, ಆದರೆ, ಅದು ಅಪ್ರಸ್ತುತ ಎನಿಸಿದಾಗ ಬದಲಾಯಿಸಲ್ಪಟ್ಟಿವೆ.
ನಾವು ಸದಾ ಹೊಸ ಕಲ್ಪನೆಗಳಿಗೆ ಮುಕ್ತವಾಗಿರಬೇಕು.
ಇತಿಹಾಸದ ಮೂಲಕ, ನಮ್ಮ ಸನ್ಯಾಸಿಗಳು ಮಾಡಿದ ಕಾರ್ಯ ಸಣ್ಣದಾಗಿ ತೋರಬಹುದು, ಆದರೆ, ಅದರ ಪರಿಣಾಮ ದೊಡ್ಡದು ಮತ್ತು ಇದು ನಮ್ಮ ಇತಿಹಾಸವನ್ನು ಬದಲಾವಣೆ ಮಾಡಿದೆ.
ಬಹಳ ಹಿಂದೆ ಯಾವುದೇ ನಂಬಿಕೆ, ಯಾವುದೇ ಸಂಸ್ಕೃತಿ ನೋಡಿ, ಭಾರತದಲ್ಲಿ ಸನ್ಯಾಸಿನಿಯರಿದ್ದರು, ಅವರು ಮಹಿಳಾ ಸಮಾನತೆಯ ವಿಷಯ ಕೈಗೆತ್ತಿಕೊಂಡಿದ್ದರು.
ಅವರು ನಿರ್ಭೀತರಾಗಿ ತಮ್ಮ ಶಕ್ತಿಶಾಲಿ ಬರವಣೆಗೆಯಲ್ಲಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ, ಬರೆದಿದ್ದಾರೆ.
ಹಿಂದೂ ಸಿದ್ಧಾಂತದಲ್ಲಿ, ಕಾಲವನ್ನು ಪರಿಪೂರ್ಣತೆಯ ಅತ್ಯಂತ ಮಹತ್ವದ ಅಂಶ ಎಂದು ಪರಿಗಣಿಸಲಾಗಿದೆ ಕಾಲ ಮತ್ತು ಪ್ರದೇಶದಲ್ಲಿದಲ್ಲಿ – ನಾವು ದಿಕ್ಕು-ಕಾಲ-ಬಾಧಿತರು.
ಗುರುವಿನ ಪಾತ್ರವು ಆ ಕಾಲದ ನೈತಿಕ ಮೌಲ್ಯಗಳನ್ನು ವ್ಯಾಖ್ಯಾನಿಸುವುದಾಗಿತ್ತು – ಹೀಗಾಗಿ, ನದಿಗಳು ಹರಿಯುವಂತೆ, ಜ್ಞಾನದ ಹರಿವು ಹರಿದಿದೆ ಇದು ಸದಾ ತಾಜಾ ಮತ್ತು ನಿತ್ಯನೂತನವಾಗಿದೆ.
ಗ್ರಂಥಗಳು ಹೀಗೆ ಹೇಳುತ್ತವೆ:
प्रेरकः सूचकश्वैव वाचको दर्शकस्तथा ।
शिक्षको बोधकश्चैव षडेते गुरवः स्मृताः ॥.

ಯಾರು ನಿಮ್ಮನ್ನು ಪ್ರೇರೇಪಿಸುತ್ತಾರೋ, ಯಾರು ನಿಮಗೆ ಮಾಹಿತಿ ನೀಡುತ್ತಾರೋ, ಯಾರು ನಿಮಗೆ ಸತ್ಯ ಹೇಳುತ್ತಾರೋ, ಯಾರು ನಿಮಗೆ ಬೋಧನೆ ಮಾಡುತ್ತಾರೋ, ಯಾರು ನಿಮಗೆ ಸರಿಯಾದ ಸನ್ಮಾರ್ಗ ತೋರುತ್ತಾರೋ ಮತ್ತು ಜಾಗೃತಗೊಳಿಸುತ್ತಾರೋ, ಅವರೆಲ್ಲರೂ ನಿಮ್ಮ ಗುರುಗಳು.
ನಾವೆಲ್ಲರೂ ಶ್ರೀ ನಾರಾಯಣ ಗುರು ಅವರು ಕೇರಳದ ಪರಿವರ್ತನೆಯಲ್ಲಿ ವಹಿಸಿದ ಪಾತ್ರ ಸ್ಮರಿಸುತ್ತೇವೆ.
ಹಿಂದುಳಿದ ಜಾತಿಯ ಒಬ್ಬ ಸಂತರು ಮತ್ತು ಸಮಾಜ ಸುಧಾರಕರು ಜಾತಿಯ ಎಲ್ಲೆಗಳನ್ನು ಮೀರಿ ಸಾಮಾಜಿಕ ನ್ಯಾಯವನ್ನು ಪ್ರೋತ್ಸಾಹಿಸಿದ್ದಾರೆ.
ಶಿವಗಿರಿ ಯಾತ್ರಾಸ್ಥಳ ಆರಂಭವಾದಾಗ, ಅವರು ಅದರ ಗುರಿ, ಶಿಕ್ಷಣ, ಸ್ವಚ್ಛತೆ, ಭಗವಂತನ ಧ್ಯಾನ, ಸಂಘಟನೆ, ಕೃಷಿ, ವ್ಯಾಪಾರ, ಕರಕುಶಲ ಮತ್ತು ತಾಂತ್ರಿಕ ತರಬೇತಿ ಅದರ ಗುರಿ ಎಂದು ಘೋಷಿಸಿದ್ದರು.
ಸಮಾಜದ ಅಭಿವೃದ್ಧಿಗೆ ಗುರು ಗುಣಮಟ್ಟವನ್ನು ನಿಗದಿಪಡಿಸುವುದಕ್ಕೆ ಇದಕ್ಕಿಂತ ಉತ್ತಮ ಉದಾಹರಣೆ ಇರಲು ಸಾಧ್ಯವೇ.?
ಈ ಸಭೆಯಲ್ಲಿ ಶ್ರೀ ರಾಮಕೃಷ್ಣರ ಬಗ್ಗೆ ಮಾತನಾಡುವುದು, ಹೊಸ ಗುಹೆಗೆ ಕಲ್ಲಿದ್ದಲನ್ನು ತೆಗೆದುಕೊಂಡು ಹೋದಂತೆ ಅನಿಸಬಹುದು, ಆದರೆ, ನಾನು ಅವರನ್ನು ಪ್ರಸಕ್ತ ಸನ್ನಿವೇಶಕ್ಕೆ ಪ್ರಸ್ತುತ ಎನಿಸಿರುವ ವಿಚಾರಗಳ ಬಗ್ಗೆ ಹೇಳದೆ ನನ್ನನ್ನು ನಾನು ತಡೆಯಲು ಸಾಧ್ಯವಿಲ್ಲ.
ಅವರು ಭಕ್ತಿಸಂತ ಸಂಪ್ರದಾಯಯ ಭಾಗವಾಗಿದ್ದಾರೆ ಮತ್ತು ಕಥಾಮೃತದಲ್ಲಿ ನಾವು ಚೈತನ್ಯ ಮಹಾಪ್ರಭುಗಳ ಹಲವು ಉಲ್ಲೇಖಗಳನ್ನು ನೋಡುತ್ತೇವೆ – ಅವರ ಆಕರ್ಷಣೆ, ಅವರ ಸಂಗೀತ, ಅವರ ದಿವ್ಯ ಭಕ್ತಿ ಕಾಣುತ್ತೇವೆ.
ಅವರು ಸಂಪ್ರದಾಯವನ್ನು ನವೀಕರಿಸಿದರು ಮತ್ತು ಅದನ್ನು ಗಟ್ಟಿಗೊಳಿಸಿದರು.
ಧರ್ಮದ ನಡುವೆ, ಜಾತಿಯ ನಡುವೆ ನಮ್ಮನ್ನು ಬೇರೆ ಮಾಡಿದ್ದ ಮಾನಸಿಕ ತಡೆಗಳನ್ನು ಅವರು ತೊಡೆದು ಹಾಕಿದರು.
ಅವರು ಸಾಮಾಜಿಕ ಸೌಹಾರ್ದತೆಯ ಸನ್ಯಾಸಿ
ಸಹಿಷ್ಣುತೆ, ಭಕ್ತಿ, ಹಲವು ನಾಮಗಳ ಒಬ್ಬನೇ ದೇವರಿಗೆ ಒಬ್ಬರು ತಮ್ಮನ್ನು ಸಮರ್ಪಿಸಿಕೊಳ್ಳುವುದು ಅವರ ಸಂದೇಶವಾಗಿತ್ತು – ಜ್ಞಾನಿ, ಯೋಗಿ ಮತ್ತು ಭಕ್ತ. ಅದನ್ನೇ ಜ್ಞಾನಿಗಳು ಬ್ರಹ್ಮ – ಪರಿಪೂರ್ಣತೆ, ಆತ್ಮ ಎಂದು ಕರೆದಿದ್ದು ಮತ್ತು ಭಗವಾನ್ – ಭಕ್ತರ ಪರವಾದ ದೇವರು ಎಂದು ಯೋಗಿಗಳು ಹೇಳಿದ್ದು.
ಅವರು ಮುಸ್ಲಿಂ ಮಾರ್ಗದ ಜೀವನ ನಡೆಸಿದರು, ಕ್ರಿಶ್ಚಿಯನ್ ಮಾರ್ಗದ ಬದುಕು ನಡೆಸಿದರು, ಅವರು ತಂತ್ರವನ್ನು ಅಭ್ಯಾಸ ಮಾಡಿದರು.
ಅವರು ಭಕ್ತಿಗೆ ಹಲವು ಮಾರ್ಗಗಳಿವೆ ಎಂಬುದನ್ನು ಕಂಡುಕೊಂಡರು, ಆದರೆ, ಶ್ರದ್ಧೆ ಅನುಸರಿಸಿದರು, ಅವೆಲ್ಲವು ಒಂದು ಗುರಿಯತ್ತ ಸಾಗಿದವು.
ವಾಸ್ತವತೆ ಒಂದೇ ಆಗಿದೆ. ವ್ಯತ್ಯಾಸ ಇರುವುದು ಹೆಸರಲ್ಲಿ ಮತ್ತು ಸ್ವರೂಪದಲ್ಲಿ.
ಅದು ನೀರಿನಂತೆ, ವಿವಿಧ ಭಾಷೆಗಳಲ್ಲಿ ವಿವಿಧ ಹೆಸರಿನಿಂದ ಕರೆಯುತ್ತಾರೆ, ಅಂದರೆ ಜಲ, ನೀರು, ಪಾನಿ ಇತ್ಯಾದಿ.
ಅದೇ ರೀತಿ, ಜರ್ಮನಿಯಲ್ಲಿ ಅದು ವಾಷರ್, ಫ್ರೆಂಚ್ ನಲ್ಲಿ ಆವು, ಇಟಲಿಯಲ್ಲಿ ಆಕ್ವಾ, ಜಪಾನಿ ಭಾಷೆಯಲ್ಲಿ ಮಿಜು, ಕೇರಳ ಭಾಷೆಯಲ್ಲಿ ನೀವು ಅದನ್ನು ವೆಲ್ಲಂ ಅನ್ನುತ್ತೀರಿ.
ಅವೆಲ್ಲವೂ ಒಂದನ್ನೇ ಪ್ರತಿಪಾದಿಸುತ್ತವೆ ಮತ್ತು ಅದೇ ರೀತಿ, ವ್ಯತ್ಯಾಸ ಇರುವುದು ಹೆಸರಲ್ಲಿ ಮಾತ್ರವೇ.
ಅದೇ ರೀತಿ, ಕೆಲವರು ವಾಸ್ತವವನ್ನು ಅಲ್ಲಾ ಅಂದರೆ, ಇನ್ನು ಕೆಲವರು ದೇವರು ಎನ್ನುತ್ತಾರೆ, ಮತ್ತೆ ಕೆಲವರು ಬ್ರಹ್ಮ ಎನ್ನುತ್ತಾರೆ, ಕೆಲವರು ಕಾಳಿ ಅಂದರೆ, ಇನ್ನು ಕೆಲವರು ರಾಮ, ಜೀಸಸ್, ದುರ್ಗಾ, ಹರಿ ಎನ್ನುತ್ತಾರೆ.
ಧರ್ಮ, ಜಾತಿಯನ್ನು ಬಳಸಿ ವಿಭಜಿಸಲು ನೋಡುವ ವ್ಯಕ್ತಿಗಳ ನಡುವೆ ನಾವು ಇರುವಾಗ, ಅವರ ಬೋಧನೆಗಳು ಇಂದಿಗೂ ಪ್ರಸ್ತುತ.
ಮಹಾತ್ಮಾ ಗಾಂಧಿ ಹೇಳುತ್ತಾರೆ – ರಾಮಕೃಷ್ಣರ ಜೀವನ ನಮಗೆ ದೇವರನ್ನು ಮುಖತಃ ನೋಡುವ ಅವಕಾಶ ನೀಡುತ್ತದೆ ಎಂದು.
ದೇವರು ಮಾತ್ರವೇ ಸತ್ಯ, ಉಳಿದಿದೆಲ್ಲವೂ ಮಿಥ್ಯ ಎಂಬುದನ್ನು ಒಪ್ಪದೆ, ಯಾರೊಬ್ಬರೂ ಅವರ ಜೀವನ ಗಾಥೆ ಓದಲು ಸಾಧ್ಯವಿಲ್ಲ.
ಶ್ರೀ ರಾಮಕೃಷ್ಣರು ಪುರಾತನ ಮತ್ತು ಆಧುನಿಕತೆಯ ಕೊಂಡಿ.
ಆಧುನಿಕ ಬದುಕಿನ ಮಾರ್ಗದಲ್ಲಿಯೂ ಹೇಗೆ ಪುರಾತನ ಆದರ್ಶ ಮತ್ತು ಅನುಭವವನ್ನು ಸಾಕಾರಗೊಳಿಸಲು ಸಾಧ್ಯ ಎಂದು ಅವರು ತೋರಿದರು.
ಸಣ್ಣ ಘಟನಾವಳಿಗಳು, ಸರಳ ಸಂದೇಶದಿಂದ ಅದನ್ನು ತೋರಿಸಿದರು.
ಅವರ ಸರಳತೆಯಿಂದಾಗಿಯೇ ಕೇಳುಗರ ಮನದಲ್ಲಿ ಅದು ಅಚ್ಚಳಿಯದೆ ಉಳಿಯುತ್ತದೆ.
ನಮಗೆ ಇಂಥ ಬೋಧಕರು ಸಿಗದೆ ಇದ್ದಿದ್ದರೆ, ಸ್ವಾಮಿ ವಿವೇಕಾನಂದರಂಥ ಶಿಷ್ಯ ದೊರಕುತ್ತಿದ್ದರೇ?
ಈ ಶ್ರೇಷ್ಠ ಕರ್ಮಯೋಗಿ ತಮ್ಮ ಗುರುವಿನ ಚಿಂತನೆಗಳನ್ನು ಮುಂದೆ ತೆಗೆದುಕೊಂಡು ಹೋದರು.
ಯತ್ರ ಜೀವ ತತ್ರ ಶಿವ – ಎಲ್ಲಿ ಜೀವರಾಶಿ ಇರುತ್ತದೋ ಅಲ್ಲಿ ಶಿವ ಇರುತ್ತಾನೆ
ಮತ್ತು
ಜೀವೇ ದಯಾ ನೋಯ, ಶಿವ ಜ್ಞಾನೆ ಜೀವ ಸೆಬಾ – – जीवे दया नोय, शिव ज्ञाने जीव सेबा” – ಜೀವಿಗಳ ಬಗ್ಗೆ ಕರುಣೆ ದೇವರಲ್ಲ, ಆದರೆ, ಜೀವರಾಶಿಗಳ ಸೇವೆಯಲ್ಲಿ ಶಿವನಿದ್ದಾನೆ. – ಅದುವೇ ಅವರು ಜೀವನ ಪೂರ್ತಿ ದರಿದ್ರ ನಾರಾಯಣನ ಸೇವೆಗೆ ಅರ್ಪಣೆಯಾಗಿದ್ದು.
ಸ್ವಾಮಿ ವಿವೇಕಾನಂದರು ಹೇಳುತ್ತಾರೆ – ನೀವು ಎಲ್ಲಿ ದೇವರನ್ನು ಹುಡುಕ ಹೋಗುತ್ತೀರಿ?
ಎಲ್ಲ ಬಡವರು, ಶೋಷಿತರು, ದುರ್ಬಲರು ದೇವರಲ್ಲವೇ? ಅವರನ್ನು ಮೊದಲು ಏಕೆ ಪೂಜಿಸುವುದಿಲ್ಲ? ಈ ಜನರು ಮೊದಲು ನಿಮ್ಮ ದೇವರಾಗಲಿ.
ಈಗ ಬೇಕಿರುವುದು ಅಪರಿಮಿತವಾದ ಕರ್ಮ ಯೋಗ ಮತ್ತು ಅಪಾರ ಹೃದಯ ಶಕ್ತಿ. ಆಗ ಮಾತ್ರ ದೇಶದ ಜನತೆಯಾದ ನಾವು ಜಾಗೃತರಾಗಲು ಸಾಧ್ಯ.
ನಮ್ಮ ಕರ್ಮ ನಮ್ಮನ್ನು ಸತತವಾಗಿ ಸ್ಫೂರ್ತಿಗೊಳಿಸುತ್ತದೆ, ನಮಗೆ ಧೈರ್ಯ ನೀಡುತ್ತದೆ.
ರಾಮಕೃಷ್ಣ ಮಿಷನ್ ನ ದಾಖಲೆಯ ಸೇವೆ ಈ ಬದ್ಧತೆಗೆ ಸಾಕ್ಷಿಯಾಗಿದೆ.
ನಾವು ಮಿಷನ್ ಅನ್ನು ಬಡ ಪ್ರದೇಶಗಳಲ್ಲಿ, ಗುಡ್ಡಗಾಡು ಜನರ ನಡುವೆ, ತೀರಾ ಅಗತ್ಯ ಇರುವವರ ನಡುವೆ ಅಥವಾ ನರಳುತ್ತಿರುವವರನ್ನು ರಕ್ಷಿಸುವಾಗ ನೋಡುತ್ತೇವೆ.
ಇಲ್ಲಿಆ ವ್ಯಕ್ತಿ ಯಾವ ಸಮುದಾಯಕ್ಕೆ ಸೇರಿದವನು, ಅವರ ನಂಬಿಕೆ ಅಥವಾ ಜಾತಿ ಯಾವುದೂ ಎಂಬುದು ಗೌಣ.
ಅಲ್ಲಿ ಮುಖ್ಯವಾಗಿರುವುದು ಆಕೆ ಅಥವಾ ಆತನಿಗೆ ನಿಸ್ವಾರ್ಥ ಸೇವೆ ನೀಡುವುದೇ ಆಗಿದೆ.
ಮಿಷನ್ ನ ಅಂತರ್ಜಾಲ ತಾಣದಲ್ಲಿ
ನಮಗೆ ಬ್ರಹ್ಮವಾಕ್ಯ ಕಾಣುತ್ತದೆ – आत्मनो मोक्षार्थम जगत हिताय च
ಆತ್ಮ ಮೋಕ್ಷಾರ್ಥ ಮತ್ತ್ತು ಇಡೀ ವಿಶ್ವದ ಕಲ್ಯಾಣಕ್ಕೆ
सेवा परमो धर्म:
पृथिवीं धर्मणा धृतां शिवां स्योनामनु चरेम विश्वहा।
(धर्म के द्वारा धारण की गई इस मातृभूमि की सेवा हम सदैव करते रहें)
मैत्री करुणा मुदितोपेक्षाणां। सुख दु:ख पुण्यापुण्य विषयाणां। वनातश्चित्तप्रासादनम्।
(दूसरे का दु:ख देखकर मन में करुणा, दूसरे का पुण्य (समाज सेवा आदि) देखकर आनंद का भाव, तथा किसी ने पाप कर्म किया तो मन में उपेक्षा का भाव ‘किया होगा छोडो‘ प्रातिक्रियाएँ उत्पन्न होनी चाहिए।)
ಇಂದು ಹೊತ್ತಿರುವ ಈ ಕಿಡಿ – ಆರಂಭವಾಗಿರುವ ಸತ್ರಂ, ಅದು ನಮ್ಮ ಹೃದಯವನ್ನು ಬೆಳಗಬೇಕು. – एक दीप से जले दूसरा, जलते दीप हज़ार।
ನಮ್ಮ ಗೌರವಾನ್ವಿತ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರ ಈ ಮಾತು ಉಲ್ಲೇಖಾರ್ಹ :
आओ फिर से दीया जलाएं
भरी दुपहरी में अंधियारा
सूरज परछाई से हारा
अंतरतम का नेह निचोड़ें–
बुझी हुई बाती सुलगाएं।
आओ फिर से दीया जलाएं।
ಶ್ರೀ ಶ್ರೀ ಠಾಕೂರ್ ರಾಮಕೃಷ್ಣರ ಮಾತುಗಳು ನಮಗೆ ಎಲ್ಲದರಲ್ಲೂ ದೇವರನ್ನು ಕಾಣಲು ಸ್ಫೂರ್ತಿ ನೀಡಲಿ, ಬಡವರ ಮತ್ತು ದುರ್ಬಲರ ಸೇವೆ ಮಾಡಲು ಮನಸ್ಸು ಕೊಡಲಿ, ಆಗ ನಾವು ಎಲ್ಲ ಧರ್ಮಗಳ ತಿರುಳಾದ ದೊಡ್ಡ ಸತ್ಯ ಕಾಣಲು ಸಾಧ್ಯ.
ಮತ್ತೊಮ್ಮೆ ನಾನು ಶ್ರೇಷ್ಠ ಶಿಷ್ಯನ ಈ ಮಾತುಗಳನ್ನು ಹೇಳುತ್ತೇನೆ. ಇದು ನನಗೆ ಮಾರ್ಗದರ್ಶಿ:
ನಾವು ಮಾಡುವ ಕರ್ತವ್ಯ ಏನೇ ಆಗಿರಲಿ, ನಾವು ಮಾಡೋಣ ಮತ್ತು ಉರುಳುವ ಚಕ್ರಕ್ಕೆ ಹೆಗಲು ಕೊಡಲು ಸದಾ ಸಿದ್ಧರಿರೋಣ.
ಆಗ ನಾವು ಬೆಳಕು ಕಾಣಲು ಸಾಧ್ಯ.
ಧನ್ಯವಾದಗಳು. ಅತೀವ ಧನ್ಯವಾದಗಳು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.