ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಕೋಲ್ಕತ್ತಾ ಬಂದರು ಟ್ರಸ್ಟ್ ನ 150ನೇ ಭವ್ಯ ಸಮಾರಂಭದಲ್ಲಿಂದು ಭಾಗಿಯಾಗಿದ್ದರು.
ಪ್ರಧಾನಮಂತ್ರಿ ಮೂಲ ಬಂದರು ಜಟ್ಟಿಯ ನೆಲೆಯಲ್ಲಿ ಕೋಲ್ಕತ್ತಾ ಬಂದರು ಟ್ರಸ್ಟ್ (ಕೆಓಪಿಟಿ)ಯ 150ನೇ ವರ್ಷದ ಸ್ಮರಣಾರ್ಥ ಫಲಕ ಅನಾವರಣ ಮಾಡಿದರು.
ದೇಶದ ಜಲ ಶಕ್ತಿಯ ಸಂಕೇತವಾಗಿರುವ ಐತಿಹಾಸಿಕ ಕೋಲ್ಕತ್ತಾ ಬಂದರು ಟ್ರಸ್ಟ್ ನ 150ನೇ ವಾರ್ಷಿಕೋತ್ಸವದಲ್ಲಿ ಭಾಗಿಯಾಗಿರುವುದು ಹೆಮ್ಮೆಯ ವಿಚಾರ ಎಂದು ಶ್ರೀ ಮೋದಿ ಹೇಳಿದರು.
ಈ ಬಂದರು ಭಾರತವು ವಿದೇಶಿಯರ ಆಡಳಿತದಿಂದ ಸ್ವಾತಂತ್ರ್ಯ ಪಡೆದಂತಹ ಅನೇಕ ಐತಿಹಾಸಿಕ ಕ್ಷಣಗಳಿಗೆ ಸಾಕ್ಷಿಯಾಗಿದೆ. ಸತ್ಯಾಗ್ರಹದಿಂದ ಸ್ವಚ್ಛಾ ಗ್ರಹದವರೆಗೆ ಈ ಬಂದರು ದೇಶ ಬದಲಾಗುತ್ತಿರುವುದನ್ನು ಕಂಡಿದೆ. ಈ ಬಂದರು ಸಾಗಣೆದಾರರನ್ನಷ್ಟೇ ಅಲ್ಲ, ದೇಶ ಮತ್ತು ಪ್ರಪಂಚದ ಮೇಲೆ ಒಂದು ಛಾಪು ಮೂಡಿಸಿದ ಜ್ಞಾನವಾಹಿಗಳನ್ನು ಸಹ ನೋಡಿದೆ. ಒಂದು ರೀತಿಯಲ್ಲಿ, ಕೋಲ್ಕತ್ತಾದ ಈ ಬಂದರು ಕೈಗಾರಿಕೆ, ಆಧ್ಯಾತ್ಮಿಕ ಮತ್ತು ಸ್ವಾವಲಂಬನೆಗಾಗಿ ಭಾರತದ ಆಕಾಂಕ್ಷೆಯನ್ನು ಸಂಕೇತಿಸುತ್ತದೆ ”ಎಂದು ಪ್ರಧಾನಿ ಹೇಳಿದರು.
ಈ ಸಮಾರಂಭದ ವೇಳೆ ಪ್ರಧಾನಮಂತ್ರಿಯವರು ಬಂದರು ಗೀತೆಯನ್ನು ಬಿಡುಗಡೆ ಮಾಡಿದರು.
ಗುಜರಾತ್‌ನ ಲೋಥಾಲ್ ಬಂದರಿನಿಂದ ಕೋಲ್ಕತಾ ಬಂದರಿನವರೆಗಿನ ಭಾರತದ ದೀರ್ಘ ಕರಾವಳಿ ಮಾರ್ಗವು ವ್ಯಾಪಾರ ಮತ್ತು ವ್ಯವಹಾರದಲ್ಲಿ ಮಾತ್ರವಲ್ಲದೆ ವಿಶ್ವದಾದ್ಯಂತ ನಾಗರಿಕತೆ ಮತ್ತು ಸಂಸ್ಕೃತಿಯನ್ನು ಪಸರಿಸುತ್ತಿದೆ ಎಂದು ಪ್ರಧಾನಿ ಹೇಳಿದರು.
"ನಮ್ಮ ಕರಾವಳಿಗಳು ಅಭಿವೃದ್ಧಿಯ ಹೆಬ್ಬಾಗಿಲುಗಳು ಎಂದು ನಮ್ಮ ಸರ್ಕಾರ ಭಾವಿಸುತ್ತದೆ. ಹೀಗಾಗಿಯೇ ಮೂಲಸೌಕರ್ಯಗಳನ್ನು ಆಧುನೀಕರಿಸಲು ಮತ್ತು ಬಂದರುಗಳ ಸಂಪರ್ಕವನ್ನು ಸುಧಾರಿಸಲು ಸರ್ಕಾರವು ಸಾಗರಮಾಲಾ ಯೋಜನೆಯನ್ನು ಪ್ರಾರಂಭಿಸಿದೆ. ಈ ಯೋಜನೆಯಡಿ 6 ಲಕ್ಷ ಕೋಟಿ ರೂ.ಗಿಂತ ಹೆಚ್ಚಿನ ಮೌಲ್ಯದ ಮೂರು ಸಾವಿರದ ಆರುನೂರು ಯೋಜನೆಗಳನ್ನು ಗುರುತಿಸಲಾಗಿದೆ. ಇವುಗಳಲ್ಲಿ, 3 ಲಕ್ಷ ಕೋಟಿ ರೂ.ಗಿಂತ ಹೆಚ್ಚು ಮೌಲ್ಯದ 200 ಕ್ಕೂ ಹೆಚ್ಚು ಯೋಜನೆಗಳು ಪ್ರಗತಿಯಲ್ಲಿವೆ ಮತ್ತು ಸುಮಾರು ನೂರ ಇಪ್ಪತ್ತೈದು ಪೂರ್ಣಗೊಂಡಿವೆ. ಕೋಲ್ಕತ್ತಾ ಬಂದರು ನದಿ ಜಲ ಮಾರ್ಗಗಳ ನಿರ್ಮಾಣದಿಂದಾಗಿ ಪೂರ್ವ ಭಾರತದ ಕೈಗಾರಿಕಾ ಕೇಂದ್ರಗಳಿಗೆ ಸಂಪರ್ಕಿತವಾಗಿದೆ. ನೇಪಾಳ, ಬಾಂಗ್ಲಾದೇಶ, ಭೂತಾನ್ ಮತ್ತು ಮಯನ್ಮಾರ್ ನೊಂದಿಗೆ ವಾಣಿಜ್ಯ ಸುಗಮವಾಗಿದೆ ", ಎಂದು ಪ್ರಧಾನಮಂತ್ರಿ ಹೇಳಿದರು.
ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್
ಪ್ರಧಾನಮಂತ್ರಿಯವರು ಕೋಲ್ಕತ್ತಾ ಬಂದರು ಟ್ರಸ್ಟ್ ಗೆ ಡಾ. ಶ್ಯಾಮಾ ಪ್ರಸಾದ್ ಮುಖರ್ಜಿ ಬಂದರು ಟ್ರಸ್ಟ್ ಎಂದು ಪುನರ್ನಾಮಕರಣ ಮಾಡುವುದಾಗಿ ಪ್ರಕಟಿಸಿದರು. ಬಂಗಾಲದ ಪುತ್ರರಾಗಿದ್ದ ಡಾ. ಮುಖರ್ಜಿ ದೇಶದ ಆಧುನೀಕರಣಕ್ಕೆ ಅಡಿಗಲ್ಲು ಹಾಕಿದವರು ಮತ್ತು ಚಿತ್ತರಂಜನ್ ಲೋಕೋಮೋಟಿವ್ ಕಾರ್ಖಾನೆ, ಹಿಂದೂಸ್ತಾನ್ ವಿಮಾನ ಕಾರ್ಖಾನೆ, ಸಿಂಡ್ರಿ ರಸಗೊಬ್ಬರ ಕಾರ್ಖಾನೆ ಮತ್ತು ದಾಮೋದರ್ ವ್ಯಾಲಿ ಕಾರ್ಪೊರೇಷನ್ ಗಳಂಥ ಯೋಜನೆಗಳ ಅಭಿವೃದ್ಧಿಯ ರೂವಾರಿಯಾಗಿದ್ದರು. ನಾನು ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನೂ ಸ್ಮರಿಸುತ್ತೇನೆ. ಡಾ. ಮುಖರ್ಜಿ ಮತ್ತು ಬಾಬಾ ಸಾಹೇಬ್ ಸ್ವಾತಂತ್ರ್ಯೋತ್ತರ ಭಾರತಕ್ಕೆ ಹೊಸ ಆಯಾಮ ನೀಡಿದರು ಎಂದು ಪ್ರಧಾನಮಂತ್ರಿ ಹೇಳಿದರು.
ಕೆಓಪಿಟಿಯ ಪಿಂಚಣಿದಾರರ ಕಲ್ಯಾಣ
ಕೋಲ್ಕತ್ತಾ ಬಂದರು ಟ್ರಸ್ಟ್ ನ ನಿವೃತ್ತ ಮತ್ತು ಹಾಲಿ ಉದ್ಯೋಗಿಗಳ ಪಿಂಚಣಿಯ ಖಾತೆಯಲ್ಲಿನ ಕೊರತೆಯನ್ನು ಸರಿದೂಗಿಸಲು ಅಂತಿಮ ಕಂತಿನ 501 ಕೋಟಿ ರೂಪಾಯಿಗಳ ಚೆಕ್ ಅನ್ನು ಪ್ರಧಾನಮಂತ್ರಿ ಹಸ್ತಾಂತರಿಸಿದರು.
ಕೋಲ್ಕತ್ತಾ ಬಂದರು ಟ್ರಸ್ಟ್ ನ ಅತ್ಯಂತ ಹಿರಿಯ ಪಿಂಚಣಿದಾರ ಶತಾಯುಷಿಗಳಾದ ಶ್ರೀ ನಗೀನಾ ಭಗತ್ ಮತ್ತು ಶ್ರೀ ನರೇಶ್ ಚಂದ್ರ ಚಕ್ರಬೋರ್ತಿ (ಅನುಕ್ರಮವಾಗಿ 105 ಮತ್ತು 100 ವರ್ಷ) ಅವರನ್ನು ಪ್ರಧಾನಮಂತ್ರಿ ಸತ್ಕರಿಸಿದರು.
ಪ್ರಧಾನಮಂತ್ರಿಯವರು ಸುಂದರಬನ್ಸ್ ನ 200 ಬುಡಕಟ್ಟು ವಿದ್ಯಾರ್ಥಿನಿಯರಿಗಾಗಿ ಕೌಶಲ ವಿಕಾಸ ಕೇಂದ್ರ ಮತ್ತು ಪ್ರೀತಿಲತಾ ಛತ್ರ ನಿವಾಸವನ್ನು ಉದ್ಘಾಟಿಸಿದರು.
ಪಶ್ಚಿಮ ಬಂಗಾಳದ ಅಭಿವೃದ್ಧಿಗೆ, ಅದರಲ್ಲೂ ವಿಶೇಷವಾಗಿ ಬಡವರು, ದೀನ ದಲಿತರು ಮತ್ತು ಶೋಷಿತರ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಎಲ್ಲ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಪಿಎಂ ಹೇಳಿದರು. ಆಯುಷ್ಮಾನ್ ಭಾರತ ಯೋಜನೆ ಮತ್ತು ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ನಿಧಿಯನ್ನು ಪಶ್ಚಿಮ ಬಂಗಾಳ ರಾಜ್ಯ ಸರ್ಕಾರ ಅಂಗೀಕರಿಸಿದ ಕೂಡಲೇ ಪಶ್ಚಿಮ ಬಂಗಾಳದ ಜನರು ಸಹ ಈ ಯೋಜನೆಗಳಿಂದ ಪ್ರಯೋಜನ ಪಡೆಯಲು ಪ್ರಾರಂಭಿಸುತ್ತಾರೆ ಎಂದು ಅವರು ಹೇಳಿದರು.
ಮೇಲ್ದರ್ಜೆಗೇರಿಸಲಾದ ಹಡಗು ದುರಸ್ಥಿ ವ್ಯವಸ್ಥೆ ಕೊಚಿನ್ ಕೋಲ್ಕತ್ತಾ ಹಡಗು ದುರಸ್ತಿ ಘಟಕವನ್ನು ನೇತಾಜಿ ಸುಭಾಷ್ ಡ್ರೈ ಡಾಕ್ ನಲ್ಲಿ ಪ್ರಧಾನಮಂತ್ರಿ ಉದ್ಘಾಟಿಸಿದರು.
ಪ್ರಧಾನಮಂತ್ರಿಯವರು ಪೂರ್ಣ ರೇಕ್ ಹ್ಯಾಂಡ್ಲಿಂಗ್ ಸೌಲಭ್ಯ ಮತ್ತು ಸುಗಮ ಸರಕು ಸಾಗಣೆಗಾಗಿ ಮತ್ತು ನಿಗದಿತ ಸಮಯದಲ್ಲಿನ ಕಾರ್ಯಪಾಲನೆಗಾಗಿ ಕೋಲ್ಕತ್ತಾ ಬಂದರು ನ್ಯಾಸದ ಕೋಲ್ಕತಾ ಡಾಕ್ ವ್ಯವಸ್ಥೆಯ ನವೀಕೃತ ರೈಲ್ವೆ ಮೂಲಸೌಕರ್ಯವನ್ನು ಉದ್ಘಾಟಿಸಿದರು
ಪ್ರಧಾನಮಂತ್ರಿ ಅವರು ಕೋಲ್ಕತ್ತಾ ಬಂದರು ನ್ಯಾಸದ ಹಾಲ್ಡಿಯಾ ಡಾಕ್ ಸಮುಚ್ಛಯದ ನಂ.3ರಲ್ಲಿ ರೇವಿನ ಯಾಂತ್ರೀಕರಣಕ್ಕೆ ಮತ್ತು ಉದ್ದೇಶಿತ ನದಿಯ ಮುಂಭಾಗದ ಅಭಿವೃದ್ಧಿ ಯೋಜನೆಗೂ ಚಾಲನೆ ನೀಡಿದರು.
मां गंगा के सानिध्य में, गंगासागर के निकट, देश की जलशक्ति के इस ऐतिहासिक प्रतीक पर, इस समारोह का हिस्सा बनना सौभाग्य की बात है: PM @narendramodi
— PMO India (@PMOIndia) January 12, 2020
कोलकाता पोर्ट के विस्तार और आधुनिकीकरण के लिए आज सैकड़ों करोड़ रुपए के इंफ्रास्ट्रक्चर प्रोजेक्ट्स का लोकार्पण और शिलान्यास भी किया गया है। आदिवासी बेटियों की शिक्षा और कौशल विकास के लिए हॉस्टल और स्किल डेवलपमेंट सेंटर का शिलान्यास हुआ है: PM @narendramodi
— PMO India (@PMOIndia) January 12, 2020
इस पोर्ट ने भारत को विदेशी राज से स्वराज पाते देखा है। सत्याग्रह से लेकर स्वच्छाग्रह तक इस पोर्ट ने देश को बदलते हुए देखा है।
— PMO India (@PMOIndia) January 12, 2020
ये पोर्ट सिर्फ मालवाहकों का ही स्थान नहीं रहा, बल्कि देश और दुनिया पर छाप छोड़ने वाले ज्ञानवाहकों के चरण भी यहां पड़े हैं: PM @narendramodi
एक प्रकार से कोलकाता का ये पोर्ट भारत की औद्योगिक, आध्यात्मिक और आत्मनिर्भरता की आकांक्षा का प्रतीक है।
— PMO India (@PMOIndia) January 12, 2020
ऐसे में जब ये पोर्ट डेढ़ सौवें साल में प्रवेश कर रहा है, तब इसको न्यू इंडिया के निर्माण का भी एक प्रतीक बनाना आवश्यक है: PM @narendramodi
पश्चिम बंगाल की, देश की इसी भावना को नमन करते हुए मैं कोलकाता पोर्ट ट्रस्ट का नाम, भारत के औद्योगीकरण के प्रणेता, बंगाल के विकास का सपना लेकर जीने वाले और एक देश, एक विधान के लिए बलिदान देने वाले डॉक्टर श्यामा प्रसाद मुखर्जी के नाम पर करने की घोषणा करता हूं: PM @narendramodi
— PMO India (@PMOIndia) January 12, 2020
बंगाल के सपूत, डॉक्टर मुखर्जी ने देश में औद्योगीकरण की नींव रखी थी। चितरंजन लोकोमोटिव फैक्ट्री, हिन्दुस्तान एयरक्राफ्ट फैक्ट्री, सिंदरी फर्टिलाइज़र कारखाना और दामोदर वैली कॉर्पोरेशन, ऐसे अनेक बड़ी परियोजनाओं के विकास में डॉक्टर मुखर्जी का बहुत योगदान रहा है: PM @narendramodi
— PMO India (@PMOIndia) January 12, 2020
आज के इस अवसर पर, मैं बाबा साहेब आंबेडकर को भी याद करता हूं, उन्हें नमन करता हूं। डॉक्टर मुखर्जी और बाबा साहेब, दोनों ने स्वतंत्रता के बाद के भारत के लिए नई नीतियां दी थीं, नया विजन दिया था: PM @narendramodi
— PMO India (@PMOIndia) January 12, 2020
लेकिन ये देश का दुर्भाग्य रहा कि डॉक्टर मुखर्जी और बाबा साहेब के सरकार से हटने के बाद, उनके सुझावों पर वैसा अमल नहीं किया गया, जैसा किया जाना चाहिए था: PM @narendramodi
— PMO India (@PMOIndia) January 12, 2020
गुजरात के लोथल पोर्ट से लेकर कोलकाता पोर्ट तक देखें, तो भारत की लंबी कोस्ट लाइन से पूरी दुनिया में व्यापार-कारोबार होता था और सभ्यता, संस्कृति का प्रसार भी होता था: PM @narendramodi
— PMO India (@PMOIndia) January 12, 2020
हमारी सरकार ये मानती है कि हमारे Coasts, विकास के Gateways हैं। इसलिए सरकार ने Coasts पर कनेक्टिविटी और वहां के इंफ्रास्ट्रक्चर को आधुनिक बनाने के लिए सागरमाला कार्यक्रम शुरू किया: PM @narendramodi
— PMO India (@PMOIndia) January 12, 2020
इस योजना के तहत करीब 6 लाख करोड़ रुपए से अधिक के पौने 6 सौ प्रोजेक्ट्स की पहचान की जा चुकी है। इनमें से 3 लाख करोड़ रुपए से अधिक के 200 से ज्यादा प्रोजेक्ट पर काम चल रहा है और लगभग सवा सौ पूरे भी हो चुके हैं: PM @narendramodi
— PMO India (@PMOIndia) January 12, 2020
इस वर्ष हल्दिया में मल्टीमॉडल टर्मिनल और फरक्का में नेविगेशनल लॉक को तैयार करने का प्रयास है। साल 2021 तक गंगा में बड़े जहाज़ भी चल सकें, इसके लिए भी ज़रूरी गहराई बनाने का काम प्रगति पर है: PM @narendramodi
— PMO India (@PMOIndia) January 12, 2020
नदी जलमार्ग की सुविधाओं के बनने से कोलकाता पोर्ट पूर्वी भारत के औद्योगिक सेंटर्स से तो जुड़ा ही है, नेपाल, बांग्लादेश, भूटान और म्यांमार जैसे देशों के लिए व्यापार और आसान हुआ है: PM @narendramodi
— PMO India (@PMOIndia) January 12, 2020
पश्चिम बंगाल के विकास के लिए केंद्र सरकार की तरफ से हर संभव कोशिश की जा रही है। विशेष तौर पर गरीबों, दलितों, वंचितों, शोषितों और पिछड़ों के विकास के लिए समर्पित भाव से प्रयास किए जा रहे हैं: PM @narendramodi
— PMO India (@PMOIndia) January 12, 2020
जैसे ही पश्चिम बंगाल राज्य सरकार आयुष्मान भारत योजना, पीएम किसान सम्मान निधि के लिए स्वीकृति देगी, यहां के लोगों को इन योजनाओं का भी लाभ मिलने लगेगा: PM @narendramodi
— PMO India (@PMOIndia) January 12, 2020