Our government brought in soil health card which has proven extremely beneficial for the farmers: PM Modi
Even when we were not in power, we were with the people of Morbi & served the society, says the PM
PM Modi says development for us is not winning polls, but serving citizens
Our Govt worked to bring SAUNI Yojana and large pipelines that carry Narmada water: PM Modi
Congress expressed displeasure when Dr. Rajendra Prasad had come to Gujarat for inauguration of the Somnath Temple: PM Modi
If there was no Sardar Patel, Somnath Temple would never have been possible, says PM Modi
PM in Gujarat: Congress is seeking votes of the OBC communities but they should also answer why they did not allow OBC Commission to get Constitutional Status?

 

ಪ್ರಧಾನಿ ನರೇಂದ್ರ ಮೋದಿ ಗುಜರಾತ್ ನ  ಮೊರ್ಬಿ, ಪ್ರಾಚಿ, ಪಾಲಿಟನಾ ಮತ್ತು ನವ್ಸಾರಿಗಳಲ್ಲಿ ಸಾರ್ವಜನಿಕ ಸಭೆ ನಡೆಸಿದರು. ಭ್ರಷ್ಟಾಚಾರ ಮತ್ತು ವಂಶೀಯ ರಾಜಕೀಯದಲ್ಲಿ ಭಾರೀ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದಕ್ಕಾಗಿ ಅವರು ಕಾಂಗ್ರೆಸ್ ಪಕ್ಷದವರನ್ನು ಟೀಕಿಸಿದರು . ಸೋಮನಾಥ ದೇವಸ್ಥಾನವನ್ನು ಉದ್ಘಾಟಿಸಲು ಡಾ. ರಾಜೇಂದ್ರ ಪ್ರಸಾದ್ ಗುಜರಾತ್ ಗೆ  ಬಂದಾಗ ಅವರು ಕಾಂಗ್ರೆಸ್ ಪಕ್ಷದ ಅಡ್ಡಿಯ ಬಗ್ಗೆ ಮಾತನಾಡಿದರು.

ಮೊರ್ಬಿಯಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಪ್ರಧಾನಿ ಮೋದಿ, ಒಳ್ಳೆಯ ಮತ್ತು ಕೆಟ್ಟ ಸಮಯದಲ್ಲಿ ಜನ ಸಂಘ ಮತ್ತು ಬಿಜೆಪಿ ಮೊರ್ಬಿ ಜನರೊಂದಿಗೆ ನಿಂತಿದೆ ಎಂದು ಹೇಳಿದ್ದಾರೆ ಆದರೆ ಕಾಂಗ್ರೆಸ್ ಮತ್ತು ಅವರ ನಾಯಕರ ಬಗ್ಗೆ ಒಬ್ಬರು ಹೇಳಲು ಸಾಧ್ಯವಿಲ್ಲ.

"ನಮಗೆ, ಜನರಿಗೆ ಯೋಗಕ್ಷೇಮ ಪ್ರಮುಖವಾದುದು . ನಾವು ಅಧಿಕಾರದಲ್ಲಿ ಇರದಾಗಲೂ  ನಾವು ಮೊರ್ಬಿ ಜನರೊಂದಿಗೆ ಮತ್ತು ಸಮಾಜಕ್ಕೆ ಸೇವೆ ಸಲ್ಲಿಸುತ್ತಿದ್ದೆವು "ಎಂದರು.

ಕಾಂಗ್ರೆಸ್ ಆನು ಟೀಕಿಸಿದ ಪ್ರಧಾನಿ ಮೋದಿ ಅವರು, "ಕಾಂಗ್ರೆಸ್ ಗೆ  ಅಭಿವೃದ್ಧಿಯೆಂದರೆ  ಹ್ಯಾಂಡ್  ಪಂಪ್ ನೀಡುವುದು . ಬಿಜೆಪಿಗೆ ಅಭಿವೃದ್ಧಿಯೆಂದರೆ , ಸೌನಿ ಯೋಜನೆ  ಮತ್ತು ನರ್ಮದಾ ನೀರನ್ನು ಸಾಗಿಸುವ ದೊಡ್ಡ ಪೈಪ್ಲೈನ್ಗಳು. ನಾವು ಚೆಕ್ ಅಣೆಕಟ್ಟುಗಳ ಮೇಲೆ ಕೂಡ  ಕೇಂದ್ರೀಕರಿಸಿದ್ದೇವೆ. "

"ಕಾಂಗ್ರೆಸ್ ಅಧಿಕಾರದಲ್ಲಿದ್ದರೆ ನರ್ಮದಾ ನೀರು ಇಲ್ಲಿಗೆ ಬರುತ್ತಿರಲಿಲ್ಲ ಮತ್ತು ರೈತರು ಅನಾನುಕೂಲತೆಯನ್ನು ಎದುರಿಸುತ್ತಿದ್ದರು . ಯೋಜನೆಯನ್ನು ವಿಳಂಬಗೊಳಿಸಲು ಕಾಂಗ್ರೆಸ್ ಎಲ್ಲವನ್ನೂ ಪ್ರಯತ್ನಿಸಿದೆ "ಎಂದು ಪ್ರಧಾನಿ ಪಾಲಿಟಾನದಲ್ಲಿ ತಿಳಿಸಿದ್ದಾರೆ.

ಬಿಜೆಪಿ ಅಧಿಕಾರಕ್ಕೆ ಬಂದಾಗ ಕಚ್ ಮತ್ತು ಸೌರಾಷ್ಟ್ರದಲ್ಲಿ ಮುಖ್ಯ ಸಮಸ್ಯೆ ಜಲ ಕೊರತೆಯಾಗಿತ್ತು  ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು. "ಸಾಕಷ್ಟು ನೀರಿನ ಕೊರತೆ ಸಮಾಜದ ಮೇಲೆ ಪರಿಣಾಮ ಬೀರಿದೆ ಮತ್ತು ಬಿಜೆಪಿ ಸರಕಾರ ಇದನ್ನು ಬದಲಾಯಿಸಿತು ಮತ್ತು ಈ ಪ್ರದೇಶಗಳಿಗೆ ನರ್ಮದಾ ನೀರನ್ನು ನೀಡಲಾಯಿತು " ಎಂದು ಮೋದಿ ಹೇಳಿದರು.

ಸೌನಿ ಯೋಜನೆಯ  ಬಗ್ಗೆ ಮಾತನಾಡಿದ ಪ್ರಧಾನ ಮಂತ್ರಿ, "ಸೌನಿ ಯೋಜನೆಯ  ಮೂಲಕ, ನಾವು ದೊಡ್ಡ ಪೈಪ್ ಲೈನ್ ಗಳನ್ನು  ನಿರ್ಮಿಸಿದ್ದೇವೆ. ಸೌನಿ ಯೋಜನೆಯಿಂದಾಗಿ  ಸೌರಾಷ್ಟ್ರದ ಅಣೆಕಟ್ಟುಗಳು ತುಂಬಿವೆ. ಆದರೆ, ಈ ಎಲ್ಲವನ್ನೂ ಕಾಂಗ್ರೆಸ್  ನೋಡಬಹುದೆಂದು  ನಾನು ಭಾವಿಸುವುದಿಲ್ಲ. "

ಸಂದರ್ಭದಲ್ಲಿ, ಪ್ರಧಾನಿ ಮೋದಿ ರೈತರಿಗೆ ಕೈಗೊಳ್ಳಬೇಕಾದ ಅನೇಕ ಕಲ್ಯಾಣ ಕ್ರಮಗಳನ್ನು ಮತ್ತು ಕೃಷಿ ಕ್ಷೇತ್ರದ ಏಳಿಗೆ ಬಗ್ಗೆ ಮಾತನಾಡಿದರು. ಪ್ರಧಾನ್ ಮಂತ್ರಿ ಕಿಸಾನ್ ಸಂಪದ ಯೋಜನೇ  ಬಗ್ಗೆ ಮಾತನಾಡುತ್ತಾ, "ಈ ಕಿಸಾನ್ ಸಂಪದಾ ಯೋಜನೆ ಮೂಲಕ ರೈತರಿಗೆ ಮೌಲ್ಯ ಸೇರ್ಪಡೆಯಲ್ಲಿ ಸಹಾಯ ಮಾಡಲು ಮತ್ತು ಹೆಚ್ಚು ಗಳಿಸಲು ಪ್ರಯತ್ನ ಮಾಡಲಾಗಿದೆ" ಎಂದರು .

ಸೋಮನಾಥ ದೇವಾಲಯದ ಉದ್ಘಾಟನೆಗೆ ಡಾ.ರಾಜೇಂದ್ರ ಪ್ರಸಾದ್ ಅವರು ಗುಜರಾತ್ ಗೆ  ಬಂದಾಗ ಕಾಂಗ್ರೆಸ್ ತೋರಿಸಿದ್ದ ಅಸಮಾಧಾನದ ಬಗ್ಗೆ ಪ್ರಧಾನಮಂತ್ರಿ ಹೇಳಿದರು . ದೇವಸ್ಥಾನದ ಏಳಿಗೆಗೆ  ಸರ್ದಾರ್ ಪಟೇಲ್ ವಹಿಸಿದ ಪ್ರಮುಖ ಪಾತ್ರವನ್ನು ಅವರು ಎತ್ತಿ ತೋರಿಸಿದರು.

"ಸರ್ದಾರ್ ಪಟೇಲ್ ಇಲ್ಲದಿದ್ದರೆ, ಸೋಮನಾಥ್ ದೇವಾಲಯವು ಎಂದಿಗೂ ಸಾಧ್ಯವಿರಲಿಲ್ಲ. ಇಂದು ಕೆಲವು ಜನರು ಸೋಮನಾಥ್  ನೆನಪಿಸಿಕೊಳ್ಳುತ್ತಿದ್ದಾರೆ, ನಾನು ಅವರನ್ನು ಕೇಳಬೇಕಾಗಿದೆ- ನಿಮ್ಮ ಇತಿಹಾಸವನ್ನು ನೀವು ಮರೆತಿದ್ದೀರಾ? ನಿಮ್ಮ ಕುಟುಂಬದ ಸದಸ್ಯರು, ನಮ್ಮ ದೇವಾಲಯದಲ್ಲಿ ನಿರ್ಮಿಸಲಾಗಿದ್ದ ಕಲ್ಪನೆಯ ಬಗ್ಗೆ ಸಂತೋಷವಾಗಿರಲಿಲ್ಲ ... ಡಾ. ರಾಜೇಂದ್ರ ಪ್ರಸಾದ್ ಅವರು ಸೋಮನಾಥ ದೇವಸ್ಥಾನವನ್ನು ಉದ್ಘಾಟಿಸಲು ಬಂದಾಗ ಪಂಡಿತ್ ನೆಹರು ಅವರು ಅಸಮಾಧಾನವನ್ನು ವ್ಯಕ್ತಪಡಿಸಿದ್ದರು ಎಂದರು .

ಒಬಿಸಿ ಸಮುದಾಯಗಳ ಮತಗಳನ್ನು ಕಾಂಗ್ರೆಸ್ ಕೋರಿದೆ ಎಂದು ಮೋದಿ ಹೇಳಿದರು ಆದರೆ ಈ ವರ್ಷಗಳಲ್ಲಿ ಒಬಿಸಿ ಕಮಿಷನ್ ಸಂವಿಧಾನಾತ್ಮಕ ಸ್ಥಾನಮಾನವನ್ನು ಪಡೆಯಲು ಅವರು ಏಕೆ ಅನುಮತಿಸಲಿಲ್ಲ ಎಂದು ಅವರು ಉತ್ತರಿಸಬೇಕು. "ನಾವು ಈ ಕ್ರಮವನ್ನು ತಂದಿದ್ದೇವೆ, ಅದು ಲೋಕಸಭೆಯಿಂದ ಅಂಗೀಕರಿಸಲ್ಪಟ್ಟಿತು ಆದರೆ ರಾಜ್ಯಸಭೆಯಲ್ಲಿ ಸ್ಥಗಿತಗೊಂಡಿತು, ಅಲ್ಲಿ ಕಾಂಗ್ರೆಸ್ ಬಹುಮತವನ್ನು ಹೊಂದಿದೆ," ಎಂದು ಪ್ರಧಾನಿ ಹೇಳಿದ್ದಾರೆ. ಮುಂಬರುವ ಸಂಸತ್ ಅಧಿವೇಶನದಲ್ಲಿ ಈ ವಿಚಾರವನ್ನು ತೆಗೆದುಕೊಳ್ಳಲಾಗುವುದು ಎಂದು ಸರ್ಕಾರ ಹೇಳಿದೆ ಮತ್ತು ಒಬಿಸಿ ಸಮುದಾಯಗಳು ತಮ್ಮ ಹಕ್ಕನ್ನು ಪಡೆಯುವುದನ್ನು ಸರ್ಕಾರ ಖಚಿತಪಡಿಸುತ್ತದೆ.

ಕಾಂಗ್ರೆಸ್ ಪಕ್ಷವು ಭ್ರಷ್ಟಾಚಾರದಲ್ಲಿ ತೊಡಗಿಕೊಂಡಿದೆ ಎಂದು ಪ್ರಧಾನಿ ಆರೋಪಿಸಿದ್ದಾರೆ. " ನಾನು ಅಧಿಕಾರದಲ್ಲಿರುವುದು 70 ವರ್ಷಗಳಿಂದ ದೇಶವನ್ನು ಲೂಟಿ ಮಾಡಿದವರಿಗೆ ಕಹಿ ವಿಷಯವಾಗಿದೆ " ಎಂದು ಪೀನರೇಂದ್ರ ಮೋದಿ ಪ್ರಾಚಿಯಲ್ಲಿ ಹೇಳಿದರು.

ನವಸಾರಿಯಲ್ಲಿ  ಕಾಂಗ್ರೆಸ್ ಪಕ್ಷದ ವಂಶೀಯ  ರಾಜಕೀಯವನ್ನು ಟೀಕಿಸಿದ ಪ್ರಧಾನಿ  ಮೋದಿ ಅವರು, " ಮೂರು ಚುನಾವಣೆಗಳು ನಡ್ದೆಯುತ್ತಿವೆ - ಒಂದು ಯುಪಿ ಸ್ಥಳೀಯ ,ಇನ್ನೊಂದು ಗುಜರಾತ್ ನಲ್ಲಿ  ಮತ್ತು ಮೂರನೆಯದು ಕಾಂಗ್ರೆಸ್ ಅಧ್ಯಕ್ಷ ಪದಕ್ಕೆ . ಮೊದಲ ಎರಡರಲ್ಲಿ  ಬಿಜೆಪಿ ಗೆಲುವು ಖಚಿತ. ಮತ್ತು ಮೂರನೇಯದಲ್ಲಿ  ಎಲ್ಲರನ್ನೂ ಹೊರತುಪಡಿಸಿ ಒಂದು ಕುಟುಂಬ ಗೆಲ್ಲುತ್ತದೆ ", ಎಂದು ಹೇಳಿದರು.  

"ಯುಪಿ ಚುನಾವಣೆಯಲ್ಲಿ ಇಬ್ಬರು ನಾಯಕರು ಕಾರ್ಯಾಚರಣೆಯಲ್ಲಿ ತೊಡಗಿದರು ಮತ್ತು ಮಾಧ್ಯಮಗಳು ಅವರನ್ನು ಶ್ಲಾಘಿಸುತ್ತಿವೆ. ಮೋದಿ ರಾಜ್ಯ ಮುಗಿಯಿತು ಎಂದು ಅವರು ಬರೆದಿದ್ದರು . ಎಲ್ಲರೂ ಫಲಿತಾಂಶವನ್ನು ನೋಡಿದ್ದಾರೆ  . ಮತ್ತು, ಉತ್ತರ ಪ್ರದೇಶದಲ್ಲಿ  ಈ ಇಬ್ಬರು ನಾಯಕರು ಏನು ಮಾಡಿದರು? ಅವರು ಗುಜರಾತಿನವರನ್ನು  ಕತ್ತೆ ಎಂದು ಕರೆದರು. "

ಪಾಲಿಟಾನ ಸಭೆಯಲ್ಲಿ ಮಾತನಾಡಿದ ಪ್ರಧಾನಿ, 'ಜಾತಿವಾದ , ಪರಿವಾರವಾದ ಮತ್ತು ಭ್ರಷ್ಟಾಚಾರ ' ದಲ್ಲಿ ಮಾತ್ರ ಕಾಂಗ್ರೆಸ್ ಭಾಗವಹಿಸಿದೆ ಎಂದು ಹೇಳಿದರು. ಕಾಂಗ್ರೆಸ್ ಪಕ್ಷ'ಟ್ಯಾಂಕರ್ ವ್ಯಾಪಾರ'ವನ್ನು ನಿಯಂತ್ರಿಸುತ್ತಿದ್ದರು  ಎಂದು ಅವರು ಆರೋಪಿಸಿದರು . "ಈ ಪ್ರದೇಶದಲ್ಲಿನ ನೀರಿನ ಕೊರತೆ ನೆನಪಿದೆಯೇ? ಏಕೆಂದರೆ ಕಾಂಗ್ರೆಸ್ ಟ್ಯಾಂಕರ್ ವ್ಯಾಪಾರವನ್ನು ನಿಯಂತ್ರಿಸಿತ್ತು . ಈ ಕೊರತೆಯನ್ನು ಅವರು ಬಯಸಿದ್ದರು . ಕಳೆದ 22 ವರ್ಷಗಳಲ್ಲಿ ಬಿಜೆಪಿ ಇದನ್ನು ಬದಲಿಸಿದೆ. ನಾವು ಟ್ಯಾಂಕರ್ ಉದ್ಯಮವನ್ನು ಅಪ್ರಸ್ತುತಗೊಳಿಸಿದ್ದೇವೆ. "

ಶ್ರಮ ಪಿತ್ತ ಕೆಲಸ ಮಾಡಿದ ಎಲ್ಲರ ಬಗ್ಗೆ ಕಾಂಗ್ರೆಸ್  ಅಪಹಾಸ್ಯ ಮಾಡಿದೆ ಮತ್ತು ಬಡವರ ಕಡೆಗೆ ಅವರ ಹಗೆತನವು ದಿಗ್ಭ್ರಮೆ ಮೂಡಿಸಿದೆ ಎಂದು ಪ್ರಧಾನ ಮಂತ್ರಿ ಹೇಳಿದರು . "ಮಹಾನ್ ಮಹಾತ್ಮ - ಫಕೀರ್ ಗಾಂಧಿ ಅವರ ಪರಂಪರೆಯನ್ನು ನಾವು ಹೊಂದಿದ್ದೇವೆ. ಅವರಿಗೆ ಪ್ರಭುತ್ವದ ಪರಂಪರೆ ಇದೆ. ಅವರು ಎಲ್ಲಾ ಸೌಲಭ್ಯಗಳೊಂದಿಗೆ ಹುಟ್ಟಿದ್ದರು  ಮತ್ತು ಅದನ್ನು ಬೇರುಗಳಿಂದ ಕಡಿತಗೊಳಿಸಿದ್ದರು  ... ಕಾಂಗ್ರೆಸ್ ಅಭಿವೃದ್ಧಿಯನ್ನು  ದ್ವೇಷಿಸುತ್ತಾರೆ, ಅವರು ಗುಜರಾತ್ ಅನ್ನು ದ್ವೇಷಿಸುತ್ತಾರೆ, ಅವರು ಮೋದಿಯವರನ್ನು ದ್ವೇಷಿಸುತ್ತಾರೆ ಮತ್ತು ಈಗ ಅವರು ಬೆವರನ್ನು ಕೂಡ   ದ್ವೇಷಿಸುತ್ತಾರೆ. ಅದು ಏಕೆಂದರೆ ಅವರು ಜೀವನದಲ್ಲಿ ಎಂದಿಗೂ ಬೆವರು ಸುರಿಸಿಲ್ಲ ಮತ್ತು ಕಷ್ಟಪಟ್ಟು ಕೆಲಸ ಮಾಡಲಿಲ್ಲ . ಅವರು ಕಷ್ಟಪಟ್ಟು ಕೆಲಸ ಮಾಡುವ ಎಲ್ಲರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದಾರೆ. ಇದು ಅವರ ಮನಸ್ಥಿತಿ . ಬಡವರಿಗಾಗಿ  ಅಂತಹ ದ್ವೇಷವು ಆಘಾತಕಾರಿಯಾಗಿದೆ. "

ಒನ್ ರಾಂಕ್ , ಒನ್ ಪೆಂಷನ್  ಪರಿಹರಿಸಲು ಮತ್ತು ನಲವತ್ತು ವರ್ಷಗಳ ಕಾಲ ಅದನ್ನು ಬಾಕಿ ಇಡುವುದಕ್ಕಾಗಿ  ಕೂಡ  ಮೋದಿ ಕಾಂಗ್ರೆಸ್ ಅನ್ನು ಟೀಕಿಸಿದ್ದಾರೆ . "ಚುನಾವಣೆಗಳು ಸಮೀಪಿಸುತ್ತಿರುವಾಗ ಅವರು ಅಲ್ಪ ಪ್ರಮಾಣದ ರೂ.500 ಕೋಟಿ ರೂಪಾಯಿ ಘೋಷಿಸಿದರು ಆದರೆ  ನಿಜವಾದ ಅವಶ್ಯಕತೆ ತುಂಬಾ ಅಧಿಕವಾಗಿತ್ತು . ಇದು ಅತ್ಯುನ್ನತ ಕ್ರಮವನ್ನು ದಾರಿತಪ್ಪಿಸುತ್ತಿದೆ "ಎಂದು ಅವರು ಹೇಳಿದರು.

ಡೋಕ್ಲಂ ವಿಚಾರದಲ್ಲಿ ಕಾಂಗ್ರೆಸ್ ಅನ್ನು  ಪ್ರಶ್ನಿಸಿ   , "ಕಾಂಗ್ರೆಸ್ ಚೀನಿಯರನ್ನು ಏಕೆ ನಂಬಿದೆ ಮತ್ತು ನಮ್ಮ ವಿದೇಶೀ ವ್ಯವಹಾರಗಳ ಸಚಿವಾಲಯವನ ಲ್ಲ" ಎಂದು ಪ್ರಧಾನಿ ಪ್ರತಿಕ್ರಿಯಿಸಿದ್ದಾರೆ.

ಕಾಂಗ್ರೆಸ್ ಸೇರಿದಂತೆ ಪ್ರತಿ ರಾಜಕೀಯ ಪಕ್ಷವು ಜಿಎಸ್ಟಿ ನಿರ್ಧಾರವನ್ನು ಒಮ್ಮತದೊಂದಿಗೆ ತೆಗೆದುಕೊಂಡಿದೆ ಎಂದು ಪ್ರಧಾನಿ ಹೇಳಿದರು ಆದರೆ ಈಗ ಅವರು ತಮ್ಮನ್ನು ದೂರವಿರಿಸುತ್ತಿದ್ದಾರೆ. "ನಾವು ಜನರನ್ನು ನೆನಪಿಸಿದಾಗ, ನಾವು ಮಹಾತ್ಮಾ ಗಾಂಧಿ, ಲಾರ್ಡ್ ಬುದ್ಧ, ಸರ್ದಾರ್ ಪಟೇಲ್, ನೇತಾಜಿ ಬೋಸ್, ಭಗತ್ ಸಿಂಗ್ ಅನ್ನು ನೆನಪಿಸುತ್ತೇವೆ ಆದರೆ ಅವರು ಗಬ್ಬರ್ ಸಿಂಗ್ ಅನ್ನು ನೆನಪಿಸಿಕೊಳ್ಳುತ್ತಾರೆ. ಅವರ ಆಲೋಚನೆ ಪ್ರಕ್ರಿಯೆಯ ಬಗ್ಗೆ ನಾನು ಇನ್ನೂ  ಏನು ಹೇಳಬಹುದು "ಎಂದು ಮೋದಿ ಹೇಳಿದರು.

ಸಾರ್ವಜನಿಕ ಸಭೆಗಳಲ್ಲಿ ಪ್ರಧಾನಮಂತ್ರಿಯವರು ಕೇಂದ್ರದ ಹಲವಾರು ಕಲ್ಯಾಣ ಯೋಜನೆಗಳ ಬಗ್ಗೆ ಮಾತನಾಡಿದರು ಮತ್ತು ಅವರು ದೇಶಾದ್ಯಂತದ ಜನರ ಜೀವನವನ್ನು ಹೇಗೆ ಬದಲಾಯಿಸುತ್ತಿದ್ದಾರೆಂಬುದರ ಬಗ್ಗೆ ಮಾತನಾಡಿದರು.

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Private equity investments in Indian real estate sector increase by 10%

Media Coverage

Private equity investments in Indian real estate sector increase by 10%
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಡಿಸೆಂಬರ್ 2024
December 24, 2024

Citizens appreciate PM Modi’s Vision of Transforming India