Quote ಉತ್ತಮ ಅಥವಾ ಕೆಟ್ಟ ಸಮಯದಲ್ಲಿ , ಶ್ರೀಲಂಕಾಕ್ಕೆ ಭಾರತವು ಮೊದಲ ಪ್ರತಿಕ್ರಿಯೆದಾರನಾಗಿತ್ತು ಮತ್ತು ಎಂದಿಗೂ ಇರುತ್ತದೆ : ಪ್ರಧಾನಿ ಮೋದಿ  ನಾನು ಶ್ರೀಲಂಕಾವನ್ನು ನೋಡುವಾಗ , ನೆರೆಯವರೇ ಅಲ್ಲ, ಆದರೆ ಭಾರತದ ವಿಶೇಷ ಮತ್ತು ವಿಶ್ವಾಸಾರ್ಹ ಪಾಲುದಾರನಾಗಿ  ನೋಡುತ್ತೇನೆ: ಪ್ರಧಾನಿ ಮೋದಿ ಭಾರತ, ಶ್ರೀಲಂಕಾ ಹಂಚಿಕೆಯ ಪ್ರಗತಿಯನ್ನು ತಮ್ಮ ದೃಷ್ಟಿಗೆ ನೈಜವಾಗಿ ಭಾಷಾಂತರಿಸಲು ಒಟ್ಟಿಗೆ ಕೆಲಸ ಮಾಡಬಹುದು ಎಂದು ನಾನು ನಂಬುತ್ತೇನೆ : ಪ್ರಧಾನಮಂತ್ರಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಶ್ರೀಲಂಕಾ ದ್ವೀಪದಾದ್ಯಂತ  ಭಾರತದ ನೆರವಿನಿಂದ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆ ಸಂಧರ್ಭ ವೀಡಿಯೋ ಸಂಪರ್ಕ ಮೂಲಕ ನೇರ ಪ್ರಸಾರ ಭಾಷಣ ಮಾಡಿದರು.

ಶ್ರೀಲಂಕಾ ಪ್ರಧಾನ ಮಂತ್ರಿಗಳಾದ ಗೌರವಾನ್ವಿತ ಶ್ರೀ ರಣಿಲ್ ವಿಕ್ರಮಸಿಂಘೆ ಅವರು ಜಾಫ್ನಾದಲ್ಲಿ ಈ ಪ್ರಕ್ರಿಯೆಯಲ್ಲಿ ಪಾಲ್ಗೊಂಡರು.

ಪ್ರಧಾನ ಮಂತ್ರಿ ಅವರ ಭಾಷಣದ ಸಾರ ಈ ಕೆಳಗಿನಂತಿದೆ:

ನನ್ನ ಸ್ನೇಹಿತರಾದ ಮತ್ತು ಶ್ರೀಲಂಕಾದ  ಗೌರವಾನ್ವಿತ ಪ್ರಧಾನ ಮಂತ್ರಿಗಳಾದ ಶ್ರೀ ರಣಿಲ್ ವಿಕ್ರಮಸಿಂಘೆ ಅವರೇ

ಪ್ರೊ. ಮೈತ್ರಿ ವಿಕ್ರಮಸಿಂಘೆ ಅವರೇ,

ಶ್ರೀಲಂಕಾದ ಗೌರವಾನ್ವಿತ ಸಚಿವರೇ ,

ಶ್ರೀಲಂಕಾದಲ್ಲಿರುವ ಭಾರತದ ಹೈಕಮಿಶನರ್ ಅವರೇ

ಉತ್ತರ ಪ್ರಾಂತ್ಯದ ಗೌರವಾನ್ವಿತ ಮುಖ್ಯಮಂತ್ರಿಗಳೇ

ಶ್ರೀಲಂಕಾದ ಸಂಸತ್ತಿನ ಗೌರವಾನ್ವಿತ ಸದಸ್ಯರೇ

ಗೌರವಾನ್ವಿತ ಧಾರ್ಮಿಕ ನಾಯಕರೇ,

ಗಣ್ಯ ಅತಿಥಿಗಳೇ ,

ಮತ್ತು ಸ್ನೇಹಿತರೇ,

ನಮಸ್ಕಾರ

ಆಯುಬೋವನ್

ವಣಕ್ಕಂ

ಇಂದು ವೀಡಿಯೋ ನೇರಪ್ರಸಾರದ ಮೂಲಕ ಜಾಫ್ನಾದಲ್ಲಿರುವ ನಿಮ್ಮ ಜೊತೆ ಮಾತನಾಡುತ್ತಿರುವುದಕ್ಕೆ ನಾನು ಸಂತೋಷಿಸುತ್ತೇನೆ.

ಶ್ರೀಲಂಕಾದಾದ್ಯಂತ ರಾಷ್ಟ್ರೀಯ ತುರ್ತು ಅಂಬುಲೆನ್ಸ್ ಸೇವೆ ವಿಸ್ತರಣೆಯಾಗಿರುವ ಈ ಸಂಧರ್ಭ ನನಗೆ ಅತ್ಯಂತ ಸಂತೋಷ ತಂದಿದೆ.

ಭಾರತ ಮತ್ತು ಶ್ರೀಲಂಕಾ ನಡುವೆ ಅಭಿವೃದ್ಧಿಯ ಸಹಭಾಗಿತ್ವದ ಇನ್ನೊಂದು ಪ್ರಮುಖ ಸಾಧನೆಯ ಸಂಧರ್ಭವನ್ನು ಈ ಕಾರ್ಯಕ್ರಮ ಸಂಕೇತಿಸುತ್ತದೆ.

ನನ್ನ ಸ್ನೇಹಿತರಾದ ಪ್ರಧಾನ ಮಂತ್ರಿ ಶ್ರೀ ವಿಕ್ರಮ ಸಿಂಘೆ 2015ರಲ್ಲಿ ನಾನು ಶ್ರೀಲಂಕಾಕ್ಕೆ ಭೇಟಿ ನೀಡಿದಾಗ ನನ್ನ ಜೊತೆ ಶ್ರೀಲಂಕಾದಲ್ಲಿ ಈ ವ್ಯವಸ್ಥೆಯನ್ನು ಸ್ಥಾಪಿಸುವ  ಬಗ್ಗೆ ಮಾತನಾಡಿದ್ದರು.

|

2016ರ ಜುಲೈಯಲ್ಲಿ ಪಶ್ಛಿಮ ಮತ್ತು ದಕ್ಷಿಣ ಪ್ರಾಂತ್ಯಗಳಲ್ಲಿ ಈ ಸೇವೆಯ ಮೊದಲ ಹಂತ ಕಾರ್ಯಾರಂಭ ಮಾಡಿರುವುದು ಬಗ್ಗೆ ನನಗೆ ಅತೀವ ಸಂತೋಷದ ಸಂಗತಿಯಾಗಿದೆ.

ಭಾರತವು ಆಸ್ಪತ್ರೆ ಪೂರ್ವ ತುರ್ತು ಅಂಬುಲೆನ್ಸ್ ಸೇವೆಯನ್ನು ಶ್ರೀಲಂಕಾದಾದ್ಯಂತ ವಿಸ್ತರಿಸುವ ನಿಟ್ಟಿನಲ್ಲಿ ಕಾರ್ಯಾಚರಿಸುವುದಾಗಿ  ಕಳೆದ ವರ್ಷ ಶ್ರೀಲಂಕಾಕ್ಕೆ ಭೇಟಿ ನೀಡಿದ ಸಂಧರ್ಭದಲ್ಲಿ  ಶ್ರೀಲಂಕಾದ ಸ್ನೇಹೀ ಜನತೆಗೆ ನಾನು ಭರವಸೆ ನೀಡಿದ್ದೆ.

ಭಾರತವು ತನ್ನ ಆಶ್ವಾಸನೆಯನ್ನು ಸಕಾಲದಲ್ಲಿ ಪೂರ್ಣಗೊಳಿಸಿರುವುದಕ್ಕೆ ನಾನು ಸಂತೋಷಿಸುತ್ತೇನೆ. ಮತ್ತು ನಾವು ಇಂದು ಸೇವೆಯ ಎರಡನೆಯ ಹಂತವನ್ನು ಆರಂಭಿಸಿದ್ದೇವೆ.

ಈ ವಿಸ್ತರಣೆ ಹಂತ ಉತ್ತರ ಪ್ರಾಂತ್ಯದಲ್ಲಿ ಆರಂಭವಾಗಿರುವುದೂ ನನಗೆ ಸಂತೋಷದ ಸಂಗತಿಯಾಗಿದೆ. ಹಿಂದಿನ ಕಂಬನಿಯನ್ನು ಒರೆಸಿ , ಉತ್ತಮ ಭವಿಶ್ಯದತ್ತ  ಸಾಗುವುದಕ್ಕಾಗಿ ನಿಮ್ಮ ಜೊತೆಗೂಡಿ ಕೆಲಸ ಮಾಡುವುದಕ್ಕೆ ಭಾರತ ಹರ್ಷಿಸುತ್ತದೆ.

ಈ ಸೇವೆಯ ಜೊತೆಗೂಡಿರುವ ಜನರು ಭಾರತದಲ್ಲಿ ತರಬೇತಿ ಪಡೆದವರು ಎಂದು ನಾನು ತಿಳಿದಿದ್ದೇನೆ.. ಅವಶ್ಯ ಕೌಶಲ್ಯಗಳು ಮತ್ತು ಸ್ಥಳೀಯ ಉದ್ಯೋಗಾವಕಾಶಗಳಿಗೆ ಇದರಿಂದ ಉತ್ತೇಜನ ದೊರೆಯಲಿದೆ.

ಸ್ನೇಹಿತರೇ,

ಶ್ರೀಲಂಕಾದಲ್ಲಿ  ಪ್ರಥಮವಾಗಿ ಪ್ರತಿಕ್ರಿಯಾ ಸೇವೆಯನ್ನು  ಸ್ಥಾಪಿಸಿದ ಮತ್ತು ಅದರ ವಿಸ್ತರಣೆ ಮಾಡಿದ ನಿಟ್ಟಿನಲ್ಲಿ ಭಾರತವು ಅದರ ಪಾಲುದಾರನಾಗಿರುವುದು ಬರೇ ಕಾಕತಾಳೀಯವೇನಲ್ಲ.

ಒಳ್ಳೆಯ ಕಾಲದಲ್ಲಿಯೂ, ಸಂಕಷ್ಟದ   ಕಾಲದಲ್ಲಿಯೂ ಶ್ರೀಲಂಕಾಕ್ಕೆ ಮೊದಲು ಸ್ಪಂದಿಸಿದ ರಾಷ್ಟ್ರ ಭಾರತವಾಗಿದೆ. ಮತ್ತು ಭವಿಷ್ಯದಲ್ಲಿಯೂ ಆಗಿರುತ್ತದೆ.

ವೈವಿಧ್ಯತೆಯ ಎರಡು ಪ್ರಜಾಪ್ರಭುತ್ವಗಳ ನಾಯಕರಾಗಿ, ಇಬ್ಬರು ಪ್ರಧಾನ ಮಂತ್ರಿಗಳಾದ ವಿಕ್ರಮ ಸಿಂಘೆ ಮತ್ತು ನಾನು ಅಭಿವೃದ್ದಿಯ ಫಲವನ್ನು ಸಮಾಜದ ಎಲ್ಲಾ ವರ್ಗಗಳಿಗೂ ವಿತರಿಸುವ ವಿಶ್ವಾಸ ಹೊಂದಿದ್ದೇವೆ.

ಅಧ್ಯಕ್ಷರಾದ ಗೌರವಾನ್ವಿತರಾದ ಸಿರಿ ಸೇನಾ ಮತ್ತು ಪ್ರಧಾನ ಮಂತ್ರಿ ವಿಕ್ರಮಸಿಂಘೆ  ಅವರು ಶ್ರೀಲಂಕಾದ ಜನತೆಯ ಆಶೋತ್ತರಗಳನ್ನು ಈಡೇರಿಸುವ ನಿಟ್ಟಿನಲ್ಲಿ ಮಾಡುತ್ತಿರುವ ಪ್ರಯತ್ನಗಳಿಗೆ ನಾನು ಅವರನ್ನು ಪ್ರಶಂಸಿಸುತ್ತೇನೆ.

ಸ್ನೇಹಿತರೇ,

ಪ್ರಧಾನ ಮಂತ್ರಿಯಾಗಿ ಎರಡು ಬಾರಿ ಶ್ರೀಲಂಕಾಕ್ಕೆ ನಾನು ಭೇಟಿ ನೀಡಿದ ಸಂಧರ್ಭದ ಸವಿನೆನಪುಗಳು ನನ್ನಲ್ಲಿವೆ. ನನಗೆ ತೋರಿಸಿದ ಪ್ರೀತಿ ಮತ್ತು ಗೌರವಾದರಗಳಿಂದ ನನ್ನ ಮನಸ್ಸು ತುಂಬಿ ಬಂದಿದೆ.

ಜಾಫ್ನಾಕ್ಕೆ ಭೇಟಿ ನೀಡಿದ ಮೊದಲ ಭಾರತೀಯ ಪ್ರಧಾನ ಮಂತ್ರಿ ಎಂಬ ಅದೃಷ್ಟವೂ, ಅವಕಾಶವೂ  ನನ್ನದಾಗಿದೆ. ಕಳೆದ ವರ್ಷ ಯು.ಎನ್.ವೆಸಾಕ್ ದಿನ ಆಚರಣೆಯಲ್ಲಿಯೂ  ನಾನು ಭಾಗವಹಿಸಿದ್ದೆ. ಇವೆಲ್ಲವೂ ಮರೆಯಲಾರದ ಅನುಭವಗಳು.

|

ಸ್ನೇಹಿತರೇ,

ಎಲ್ಲಾ ರಾಷ್ಟ್ರಗಳ ಅಸ್ತಿತ್ವವೂ ಅವುಗಳ ನೆರೆ ಹೊರೆಯನ್ನವಲಂಬಿಸಿದೆ.

ನಾನು ಶ್ರೀಲಂಕಾದತ್ತ  ನೋಡುವಾಗ , ನಾನು ನೆರೆ ಹೊರೆಯನ್ನು ಮಾತ್ರ ನೋಡುವುದಲ್ಲ, ದಕ್ಷಿಣ ಏಶ್ಯಾ ಮತ್ತು ಭಾರತೀಯ ಸಾಗರ ಕುಟುಂಬದಲ್ಲಿ ಭಾರತದ ಅತ್ಯಂತ ನಂಬಿಕಸ್ತ ಮತ್ತು ಅತ್ಯಂತ ವಿಶೇಷ ಸ್ಥಾನ ಹೊಂದಿರುವ ಪಾಲುದಾರನನ್ನು ಕಾಣುತ್ತೇನೆ.

ಶ್ರೀಲಂಕಾದ ಜೊತೆ ನಮ್ಮ ಅಭಿವೃದ್ಧಿ ಸಹಕಾರ,  ಪ್ರಗತಿಯಲ್ಲಿ ಪಾಲುದಾರರಾಗುವ ನಮ್ಮ ಚಿಂತನೆಯನ್ನು ಸಾಕಾರಗೊಳಿಸುವ ಪ್ರಮುಖ ಸಾಧನ  ಎಂಬುದಾಗಿ ನಾನು ನಂಬುತ್ತೇನೆ.

ಮೂರು ವರ್ಷಗಳ ಹಿಂದೆ ಶ್ರೀಲಂಕಾದ ಸಂಸತ್ತನ್ನು ಉದ್ದೇಶಿಸಿ ಮಾತನಾಡುವ ಗೌರವ ನನಗೆ ಲಭಿಸಿತ್ತು. ಸಾಮಿಪ್ಯವನ್ನು ಹತ್ತಿರದ ಬಾಂಧವ್ಯವನ್ನಾಗಿ ಪರಿವರ್ತಿಸುವ ಎಲ್ಲಾ ಸಾಧ್ಯತೆಗಳನ್ನು ಕೈಗೊಳ್ಳಬೇಕಾದ ಅಗತ್ಯದ ಬಗ್ಗೆ ನಾನಂದು ಹೇಳಿದ್ದೆ.

ಜಾಫ್ನಾದ ವಿದ್ಯಾರ್ಥಿ ಕಾಂಗ್ರೆಸ್ ಆಹ್ವಾನದ ಮೇರೆಗೆ ಶ್ರೀಲಂಕಾಕ್ಕೆ 1927ರಲ್ಲಿ ಮಹಾತ್ಮಾ ಗಾಂಧಿಯವರು ಭೇಟಿ ನೀಡಿದಾಗ ಹೇಳಿದ್ದನ್ನು ನೆನಪಿಸಿಕೊಂಡಿದ್ದೆ. ಅವರಾಗ ದಕ್ಷಿಣದ ಮತಾರಾದಿಂದ ಉತ್ತರದ ಪೆಡ್ರೋ ಪಾಯಿಂಟ್ ವರೆಗೆ ಪ್ರಯಾಣಿಸಿದ್ದರು. ತಲೈಮನ್ನಾರಿನ ಮೂಲಕ ಮರಳುವುದಕ್ಕೆ ಮೊದಲು ಜಾಫ್ನಾದಲ್ಲಿಯ ತಮ್ಮ ಸ್ವಾಗತ ಸಮಿತಿಗೆ ಅವರು ಹೇಳಿದ ಮಾತುಗಳು: “ಜಾಫ್ನಾದವರಿಗೆ ಆ ಮೂಲಕ ಇಡೀಯ ಸಿಲೋನಿಗರಿಗೆ ನಾನು ನೀಡುವ ಸಂದೇಶ ’ದೃಷ್ಟಿಯಿಂದ ದೂರವಾಗಬೇಡಿ, ಮನದಿಂದಲೂ ದೂರವಾಗಬೇಡಿ’ ಎಂಬುದಾಗಿತ್ತು. 

ಇಂದು ನನ್ನ ಸಂದೇಶವೂ ಅದೇ .ನಮ್ಮ ಜನರು ಪರಸ್ಪರ ಸತತ ಸಂಪರ್ಕದಲ್ಲಿರಬೆಕು. ಇದರಿಂದ ಪರಸ್ಪರ ಉತ್ತಮವಾಗಿ ಅರಿತುಕೊಳ್ಳಲು ಸಾಧ್ಯವಾಗುತ್ತದೆ ಮತ್ತು ನಿಕಟ ಸ್ನೇಹಿತರಾಗುವುದಕ್ಕೆ ಅನುಕೂಲವಾಗುತ್ತದೆ.

ನೀವು ಭಾರತಕ್ಕೆ ಬಂದು ರೂಪುಗೊಳ್ಳುತ್ತಿರುವ ನವ ಭಾರತದ ಅನುಭವವನ್ನು ಪಡೆಯಬೇಕು ಎಂದು ನಾನು ನಿಮ್ಮನ್ನು ಪ್ರೇರೇಪಿಸುತ್ತೇನೆ.

ಪ್ರಧಾನ ಮಂತ್ರಿ ಗೌರವಾನ್ವಿತರಾದ ವಿಕ್ರಮ ಸಿಂಘೇ ಅವರು ಆಗಸ್ಟ್  ಆರಂಭದಲ್ಲಿ ಭಾರತಕ್ಕೆ ಭೇಟಿ ನೀಡಲಿರುವುದನ್ನು ತಿಳಿದು  ನಾನು ಸಂತೋಷಗೊಂಡಿದ್ದೇನೆ. ನಾನು ನಿಮಗೆ ಆರಾಮದಾಯಕ ಪ್ರಯಾಣ ಮತ್ತು ಭಾರತದಲ್ಲಿ ಅಹ್ಲಾದಕರ ವಾಸ್ತವ್ಯವನ್ನು ಹಾರೈಸುತ್ತೇನೆ.

ಧನ್ಯವಾದಗಳು, ತುಂಬಾ ಧನ್ಯವಾದಗಳು.

 

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
India should capture world's mindspace: PM

Media Coverage

India should capture world's mindspace: PM
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 06 ಆಗಸ್ಟ್ 2025
August 06, 2025

From Kartavya Bhavan to Global Diplomacy PM Modi’s Governance Revolution