ಹಿಮಾಚಲ ಪ್ರದೇಶ, ಆಧ್ಯಾತ್ಮಿಕತೆ ಮತ್ತು ವೀರರ ಭೂಮಿಯಾಗಿದೆ : ಪ್ರಧಾನಿ ಮೋದಿ
ಹಿಮಾಚಲ ಪ್ರದೇಶದಲ್ಲಿ ಮುಂದಿನ ಪೀಳಿಗೆಯ ಮೂಲಭೂತ ಸೌಕರ್ಯಗಳ ಮೇಲೆ ಸರ್ಕಾರ ಕೇಂದ್ರೀಕರಿಸುತ್ತಿದೆ. ಹೆದ್ದಾರಿಗಳು, ರೈಲ್ವೆಗಳು, ವಿದ್ಯುತ್, ಸೌರಶಕ್ತಿ ಮತ್ತು ಪೆಟ್ರೋಲಿಯಂ ವಲಯಗಳಿಗೆ ಸಂಬಂಧಿಸಿದ ಯೋಜನೆಗಳು ರಾಜ್ಯದಲ್ಲಿ ನಡೆಯುತ್ತಿದೆ: ಪ್ರಧಾನಿ ಮೋದಿ
ಹಣವನ್ನು ಲೂಟಿ ಮಾಡುವ ಅಭ್ಯಾಸ ಹೊಂದಿರುವವರು ಈಗ 'ಚೌಕಿದಾರ್'ಗೆ ಹೆದರುತ್ತಿದ್ದಾರೆ : ಪ್ರಧಾನಿ ಮೋದಿ

ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರಿಂದು ಹಿಮಾಚಲ ರಾಜ್ಯ ಸರಕಾರ ಒಂದು ವರ್ಷ ಪೂರೈಸಿದ್ದರ ಪ್ರಯುಕ್ತ ಧರ್ಮಶಾಲಾದಲ್ಲಿ ಆಯೋಜಿಸಲಾಗಿದ್ದ ಜನ್ ಅಭಾರ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.

ವೇದಿಕೆಗೆ ಬರುವ ಮೊದಲು ಪ್ರಧಾನ ಮಂತ್ರಿ ಅವರು ಸರಕಾರಿ ಯೋಜನೆಗಳ ವಸ್ತು ಪ್ರದರ್ಶನಕ್ಕೆ ಭೇಟಿ ನೀಡಿದರು. ವಿವಿಧ ಯೋಜನೆಗಳ ಫಲಾನುಭವಿಗಳ ಜೊತೆ ಅವರು ಸಂವಾದ ನಡೆಸಿದರು.

ಬೃಹತ್ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ಹಿಮಾಚಲ ಪ್ರದೇಶ ರಾಜ್ಯ ಆಧ್ಯಾತ್ಮ ಮತ್ತು ಶೌರ್ಯದ ಭೂಮಿಯಾಗಿದೆ ಎಂದು ಶ್ಲ್ಯಾಘಿಸಿದರು.

ಮಾಜಿ ಪ್ರಧಾನ ಮಂತ್ರಿ ಶ್ರೀ ಅಟಲ್ ಬಿಹಾರಿ ವಾಜಪೇಯಿ ಅವರು ಈ ರಾಜ್ಯದ ಜೊತೆ ವಿಶೇಷ ಬಾಂಧವ್ಯ ಹೊಂದಿದ್ದನ್ನು ಪ್ರಧಾನಿಯವರು ಸ್ಮರಿಸಿಕೊಂಡರು.

ಕಳೆದೊಂದು ವರ್ಷದಲ್ಲಿ ರಾಜ್ಯದ ಜನರನ್ನು, ಅದರಲ್ಲೂ ಗ್ರಾಮೀಣ ಪ್ರದೇಶದಲ್ಲಿರುವ ಜನರನ್ನು ತನ್ನ ಯೋಜನೆಗಳ ಮೂಲಕ ತಲುಪಲು ನಡೆಸಿದ ಪ್ರಯತ್ನಕ್ಕಾಗಿ ಪ್ರಧಾನ ಮಂತ್ರಿಗಳು ರಾಜ್ಯ ಸರಕಾರವನ್ನು ಶ್ಲ್ಯಾಘಿಸಿದರು.

ಮುಂದಿನ ತಲೆಮಾರಿನ ಮೂಲಸೌಕರ್ಯದತ್ತ ರಾಜ್ಯ ಸರಕಾರ ಗಮನ ಕೇಂದ್ರೀಕರಿಸಿದೆ ಎಂದು ಪ್ರಧಾನ ಮಂತ್ರಿಗಳು ಹೇಳಿದರು. ಹಿಮಾಚಲ ಪ್ರದೇಶ ರಾಜ್ಯದಲ್ಲಿ ಹೆದ್ದಾರಿ, ರೈಲ್ವೇ, ಇಂಧನ, ಸೌರ ವಿದ್ಯುತ್ ಮತ್ತು ಪೆಟ್ರೋಲಿಯಂ ವಲಯಗಳಿಗೆ ಸಂಬಂಧಿಸಿದ ಯೋಜನೆಗಳು ಪ್ರಗತಿಯಲ್ಲಿವೆ ಎಂದವರು ಹೇಳಿದರು.

ರಾಜ್ಯದ ಪ್ರವಾಸೋದ್ಯಮ ಸಾಮರ್ಥ್ಯದ ಬಗ್ಗೆ ಪ್ರಧಾನ ಮಂತ್ರಿ ಅವರು ವಿಸ್ತ್ರತವಾಗಿ ಮಾತನಾಡಿದರು. ಈ ನಿಟ್ಟಿನಲ್ಲಿ ಅವರು 2013 ರಲ್ಲಿ ಭಾರತಕ್ಕೆ ಬರುತ್ತಿದ್ದ ವಿದೇಶೀ ಪ್ರವಾಸಿಗರ ಸಂಖ್ಯೆ 70 ಲಕ್ಷ ಆಗಿತ್ತು, 2017ರಲ್ಲಿ ಇದು 1 ಕೋಟಿಗೇರಿದೆ ಎಂಬ ಅಂಶವನ್ನು ಉಲ್ಲೇಖಿಸಿದರು. ಅದೇ ರೀತಿ 2013ರಲ್ಲಿ ಭಾರತದಲ್ಲಿ ಅಂಗೀಕಾರ ಪಡೆದ ಹೊಟೇಲುಗಳ ಸಂಖ್ಯೆ 1200 ರಷ್ಟಿತ್ತು, ಈಗ ಅದು 1800 ಕ್ಕೇರಿದೆ ಎಂದರು.

ಕಳೆದ ನಲವತ್ತು ವರ್ಷಗಳಿಂದ ನಮ್ಮ ನಿವೃತ್ತ ಸೈನಿಕರು ’ಒಂದೇ ಶ್ರೇಣಿ, ಒಂದೇ ಪೆನ್ಶನ್” ಬೇಡಿಕೆ ಈಡೇರಿಕೆಗಾಗಿ ಕಾಯುತ್ತಿದ್ದರು ಎಂಬ ಅಂಶವನ್ನು ಪ್ರಧಾನ ಮಂತ್ರಿ ಅವರು ನೆನಪಿಸಿಕೊಂಡರು. ತನ್ನ ಸರಕಾರ ಅಧಿಕಾರಕ್ಕೆ ಬಂದಾಗ ಇಡೀಯ ವಿಷಯವನ್ನು ಮತ್ತು ಅದಕ್ಕೆ ಅವಶ್ಯವಾದ ಸಂಪನ್ಮೂಲವನ್ನು ಅರ್ಥ ಮಾಡಿಕೊಳ್ಳಲಾಯಿತು. ಆ ಬಳಿಕ ಒ.ಆರ್.ಒ.ಪಿ. ಯನ್ನು ನಮ್ಮ ಮಾಜಿ ಸೈನಿಕರ ಕಲ್ಯಾಣವನ್ನು ಖಾತ್ರಿ ಪಡಿಸಲೋಸುಗ ಅನುಷ್ಟಾನಿಸಲಾಯಿತು ಎಂದವರು ಹೇಳಿದರು.

ಸ್ವಚ್ಚತೆಗೆ ಹಿಮಾಚಲ ಪ್ರದೇಶದ ಜನತೆ ವ್ಯಕ್ತಪಡಿಸಿದ ಬದ್ದತೆಗಾಗಿ ಅವರನ್ನು ಪ್ರಧಾನ ಮಂತ್ರಿಗಳು ವಿಶೇಷವಾಗಿ ಅಭಿನಂದಿಸಿದರು. ಅವರು ’ಸ್ವಚ್ಚತೆ’ ಯನ್ನು ’ಸಂಸ್ಕಾರ’ (ಸಂಸ್ಕೃತಿ) ವಾಗಿ ಸ್ವೀಕರಿಸಿದ್ದಾರೆ ಎಂದವರು ನುಡಿದರು. ಇದರಿಂದ ರಾಜ್ಯದಲ್ಲಿ ಪ್ರವಾಸೋದ್ಯಮ ವಲಯದ ಮೇಲೆ ಬಹಳ ನಿರೀಕ್ಷೆ ಮೂಡಿದೆ ಎಂದರು.

 

 

ಕೇಂದ್ರ ಸರಕಾರ ಭ್ರಷ್ಟಾಚಾರವನ್ನು ಹೇಗೆ ಹತೋಟಿಗೆ ತಂದಿದೆ ಎಂಬುದನ್ನು ಪ್ರಧಾನ ಮಂತ್ರಿ ಅವರು ವಿವರಿಸಿದರು. ನೇರ ಹಣಕಾಸು ವರ್ಗಾವಣೆ ಮೂಲಕ ಭ್ರಷ್ಟಾಚಾರದ ಮೇಲೆ ನಿಯಂತ್ರಣ ಹೇರಲಾಗಿದೆ ಮತ್ತು ಸುಮಾರು 90,000 ಕೋ.ರೂ.ಗಳನ್ನು ಉಳಿತಾಯ ಮಾಡಲಾಗಿದೆ ಎಂದವರು ಹೇಳಿದರು.

 

 

 

 

 

 

 

 

 

 

 

 

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Mutual fund industry on a high, asset surges Rs 17 trillion in 2024

Media Coverage

Mutual fund industry on a high, asset surges Rs 17 trillion in 2024
NM on the go

Nm on the go

Always be the first to hear from the PM. Get the App Now!
...
Chief Minister of Andhra Pradesh meets Prime Minister
December 25, 2024

Chief Minister of Andhra Pradesh, Shri N Chandrababu Naidu met Prime Minister, Shri Narendra Modi today in New Delhi.

The Prime Minister's Office posted on X:

"Chief Minister of Andhra Pradesh, Shri @ncbn, met Prime Minister @narendramodi

@AndhraPradeshCM"