ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ದೆಹಲಿಯಲ್ಲಿಂದು ಪಿಐಓ – ಸಂಸದೀಯಪಟುಗಳ ಸಮಾವೇಶದ ಉದ್ಘಾಟನಾ ಸಮಾರಂಭ ಉದ್ದೇಶಿಸಿ ಭಾಷಣ ಮಾಡಿದರು.
ಸಮಾವೇಶಕ್ಕೆ ಪ್ರತಿನಿಧಿಗಳನ್ನು ಸ್ವಾಗತಿಸಿದ, ಪ್ರಧಾನಿ, ನೂರಾರು ವರ್ಷಗಳಿಂದ ಅನೇಕ ಜನರು ಭಾರತವನ್ನು ತೊರೆದಿದ್ದರೂ, ತಮ್ಮ ಮನಸ್ಸಿನಲ್ಲಿ ಮತ್ತು ಹೃದಯದಲ್ಲಿ ಭಾರತಕ್ಕೆ ಸ್ಥಾನ ನೀಡಿದ್ದಾರೆ ಎಂದರು. ಭಾರತೀಯ ಮೂಲದ ಜನರು ತಾವು ನೆಲೆ ಪಡೆದ ಭೂಮಿಯನ್ನು ಸಮಗ್ರಗೊಳಿಸಿದ್ದಾರೆ ಎಂಬುದರಲ್ಲಿ ಆಶ್ಚರ್ಯವೇನಿಲ್ಲ ಎಂದು ಅವರು ಹೇಳಿದರು. ತಮ್ಮಲ್ಲಿ ಭಾರತೀಯತೆಯನ್ನು ಜೀವಂತವಾಗಿಟ್ಟುಕೊಂಡಿರುವ ಅವರು, ಆಯಾ ರಾಷ್ಟ್ರಗಳ ಆಹಾರ, ಭಾಷೆ, ಉಡುಗೆಯನ್ನು ಅಳವಡಿಸಿಕೊಂಡಿದ್ದಾರೆ ಎಂದರು.
ಇಂದು ದೆಹಲಿಯಲ್ಲಿ ಭಾರತೀಯ ಮೂಲದವರ ವಿಶ್ವದ ಮಿನಿ ಸಂಸತ್ತು ನಡೆಯುತ್ತಿದೆ ಎಂದು ಅನಿಸುತ್ತಿದೆ ಎಂದರು. ಭಾರತೀಯ ಮೂಲದವರು ಇಂದು ಮಾರಿಷಸ್, ಪೋರ್ಚುಗಲ್, ಮತ್ತು ಐರ್ಲೆಂಡ್ ನ ಪ್ರಧಾನಮಂತ್ರಿಗಳಾಗಿದ್ದಾರೆ ಎಂದರು. ಭಾರತೀಯ ಮೂಲದವರು ಇನ್ನೂ ಹಲವು ರಾಷ್ಟ್ರಗಳಲ್ಲಿ ರಾಷ್ಟ್ರಗಳ ಮತ್ತು ಸರ್ಕಾರಗಳ ಮುಖ್ಯಸ್ಥರಾಗಿದ್ದಾರೆ ಎಂದರು.
ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಭಾರತದ ಬಗ್ಗೆ ಇದ್ದ ವಿಶ್ವದ ಅಭಿಪ್ರಾಯ ಬದಲಾಗಿದೆ ಎಂದು ಪ್ರಧಾನಿ ಹೇಳಿದರು. ಇದಕ್ಕೆ ಕಾರಣ ಏನೆಂದರೆ, ಭಾರತವು ತನ್ನನ್ನು ತಾನು ಪರಿವರ್ತಿಸಿಕೊಳ್ಳುತ್ತಿದೆ ಎಂದರು. ಭಾರತದ ಆಶಯಗಳು ಮತ್ತು ವಿಶ್ವಾಸಗಳು ಹಿಂದೆಂದಿಗಿಂತಲೂ ಹೆಚ್ಚಾಗಿದೆ ಎಂದರು. ಎಲ್ಲ ವಲಯಗಳಲ್ಲೂ ಹಿಂತಿರುಗಿಸಲಾಗದಂಥ ಬದಲಾವಣೆಗಳು ಕಾಣಿಸುತ್ತಿವೆ ಎಂದರು.
ಪಿಐಓಗಳು ಭಾರತದ ಶಾಶ್ವತ ರಾಯಭಾರಿಗಳು ಎಂದು ಹೇಳಿದ ಪ್ರಧಾನಿ, ಅವರು ಎಲ್ಲೆಲ್ಲಿ ನೆಲೆಸಿದ್ದಾರೋ, ಅಲ್ಲಿ ಅವರು ತಾವು ವಿದೇಶಕ್ಕೆ ಹೋದಾಗ ಸದಾ ಭೇಟಿ ಮಾಡುವ ಪ್ರಯತ್ನ ಮಾಡುತ್ತಾರೆ ಎಂದರು.
ವಿದೇಶಗಳಲ್ಲಿರುವ ಭಾರತೀಯ ಪ್ರಜೆಗಳು ಎದುರಿಸುವ ಸಮಸ್ಯೆಗಳ ಮೇಲೆ ಸದಾ ಒಂದು ಕಣ್ಣಿಟ್ಟಿರುವ ವಿದೇಶಾಂಗ ವ್ಯವಹಾರಗಳ ಖಾತೆ ಸಚಿವೆ ಶ್ರೀಮತಿಸುಷ್ಮಾ ಸ್ವರಾಜ್ ಅವರನ್ನು ಪ್ರಧಾನಿ ಶ್ಲಾಘಿಸಿದರು. ಈ ನಿಟ್ಟಿನಲ್ಲಿ ಅವರು, ಕುಂದುಕೊರತೆಯ ಪರಿಹಾರಕ್ಕೆ ಸಕಾಲದ ನಿಗಾ ಮತ್ತು ಸ್ಪಂದನೆ ನೀಡುವ ‘ಮದದ್’ (ಸಹಾಯ) ಪೋರ್ಟಲ್ ಪ್ರಸ್ತಾಪಿಸಿದರು.
ಭಾರತದ ಅಭಿವೃದ್ಧಿಯಲ್ಲಿ ಎನ್.ಆರ್.ಐ.ಗಳು ಪಾಲುದಾರರು ಎಂದು ಸರ್ಕಾರ ನಂಬಿದೆ ಎಂದು ಪ್ರಧಾನಿ ಹೇಳಿದರು. ನೀತಿ ಆಯೋಗ ಸಿದ್ಧಪಡಿಸಿರುವ 2020ರವರೆಗಿನ ಕಾರ್ಯ ಕಾರ್ಯಕ್ರಮದಲ್ಲಿ ಎನ್.ಆರ್.ಐ.ಗಳು ಮಹತ್ವದ ಸ್ಥಾನ ಪಡೆದಿದ್ದಾರೆ ಎಂದರು.
ಅಸ್ಥಿರತೆಯ ಯುಗದಲ್ಲಿ ಭಾರತೀಯ ನಾಗರಿಕತೆ ಮತ್ತು ಸಂಸ್ಕೃತಿಯ ಮೌಲ್ಯಗಳು ಇಡೀ ವಿಶ್ವಕ್ಕೆ ಮಾರ್ಗದರ್ಶನ ನೀಡಬಲ್ಲವಾಗಿವೆ ಎಂದರು.
ಆಸಿಯಾನ್ ರಾಷ್ಟ್ರಗಳೊಂದಿಗೆ ಭಾರತ ಆಪ್ತವಾದ ಬಾಂಧವ್ಯ ಹೊಂದಿದ್ದು, ಇನ್ನು ಕೆಲವೇ ದಿನಗಳಲ್ಲಿ ಇದನ್ನು ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರದರ್ಶಿಸಲಾಗುವುದು ಎಂದು ಪ್ರಧಾನಿ ಹೇಳಿದರು.
आपको यहां देखकर आपके पूर्वजों को कितनी प्रसन्नता हो रही होगी, इसका अंदाजा हम सभी लगा सकते हैं। वो जहां भी होंगे, आपको यहां देखकर बहुत खुश होंगे।
— PMO India (@PMOIndia) January 9, 2018
सैकड़ों वर्षों के कालखंड में भारत से जो भी लोग बाहर गए, भारत उनके मन से कभी बाहर नहीं निकला: PM @narendramodi
यह कोई आश्चर्य की बात नहीं कि भारतीय मूल के प्रवासी जहां भी गए, वहीं पूरी तरह integrate हो कर, उस जगह को अपना घर बना लिया।
— PMO India (@PMOIndia) January 9, 2018
उन्होंने जहां एक तरफ खुद में भारतीयता को जीवित रखा, तो दूसरी तरफ वहां की भाषा, वहां के खान-पान, वहां की वेश-भूषा में भी पूरी तरह घुल-मिल गए: PM
राजनीति की बात करूं तो, मैं देख ही रहा हूं कि कैसे भारतीय मूल की एक Mini World Parliament मेरे सामने उपस्थित है।
— PMO India (@PMOIndia) January 9, 2018
आज भारतीय मूल के लोग मॉरीशस, पुर्तगाल और आयरलैंड में प्रधानमंत्री हैं। भारतीय मूल के लोग और भी बहुत से देशों में Head of State और Head of Government रह चुके हैं: PM
आप लोग लंबे समय से अलग-अलग देशों में रह रहे हैं। आपने अनुभव किया होगा कि पिछले तीन-चार वर्षों में भारत के प्रति नजरिया बदल गया है। हम पर focus बढ़ रहा है, विश्व का हमारे प्रति नजरिया बदल रहा है, तो इसका मुख्य कारण यही है कि भारत स्वयं बदल रहा है, transform हो रहा है: PM
— PMO India (@PMOIndia) January 9, 2018
“जैसा पहले था, वैसे ही चलता रहेगा, कुछ बदलेगा नहीं”, इस सोच से भारत अब बहुत आगे बढ़ चुका है। भारत के लोगों की आशाएं-आकांक्षाएं इस समय उच्चतम स्तर पर हैं। व्यवस्थाओं में हो रहे संपूर्ण परिवर्तन का, एक irreversible change का परिणाम आपको हर सेक्टर में नजर आएगा: PM
— PMO India (@PMOIndia) January 9, 2018
जब भी किसी देश की यात्रा करता हूँ, तो मेरा प्रयास होता है कि वहां रहने वाले भारतीय मूल के लोगों से मिलूँ। मेरे इस effort का सबसे बड़ा कारण है कि मैं मानता हूँ कि विश्व के साथ भारत के संबंधों के लिए यदि सही मायने में कोई Permanent Ambassadors हैं तो वो भारतीय मूल के लोग हैं: PM
— PMO India (@PMOIndia) January 9, 2018
हमारी विदेश मंत्री सुषमा स्वराज जी न सिर्फ़ भारतीय नागरिकों, बल्कि प्रवासी भारतीयों की समस्याओं पर 24*7 नज़र रखती हैं। उनके नेतृत्व में विदेश मंत्रालय ने consular grievances की real time monitoring और response के लिए “मदद” portal की व्यवस्था खड़ी की है: PM @narendramodi
— PMO India (@PMOIndia) January 9, 2018
अपनी-अपनी कर्मभूमि में प्रगति के लिए आपके योगदान से भारत का नाम भी ऊँचा होता है। भारत के विकास के लिए हमारे प्रयासों में हम प्रवासी भारतीयों को अपना partner मानते हैं। नीति आयोग ने 2020 तक का जो Action Agenda बनाया है, उसमें प्रवासी भारतीयों को विशेष स्थान दिया है: PM
— PMO India (@PMOIndia) January 9, 2018
भारत की आवश्यकताओं, शक्तियों और विशेषताओं को विश्व तक पहुंचाने की जितनी क्षमता आपमें हैं, और किसी में नहीं है। दुनिया के अस्थिरता से भरे वातावरण में भारतीय सभ्यता और संस्कृति के मूल्य, पूरे विश्व का मार्गदर्शन कर सकते हैं: PM @narendramodi
— PMO India (@PMOIndia) January 9, 2018
जहां वैश्विक समाज अलग-अलग स्तरों और विचारधाराओं में बंट रहा है, वहां आप भारत की 'सबका साथ सबका विकास' का उदाहरण दे सकते हैं। जहां विश्व में Extremism और Radicalization के बारे में चिंता बढ़ रही है,वहां आप दुनिया को भारतीय संस्कृति के “सर्व पंथ समभाव” का संदेश दुहरा सकते हैं: PM
— PMO India (@PMOIndia) January 9, 2018
आसियान देशों से हमारे मज़बूत सम्बन्धों को हमने आसियान संगठन के साथ सम्बन्ध बढ़ाकर और भी ठोस रुप प्रदान किया है। भारत-आसियान संबंधों का भविष्य कितना उज्जवल है, इसकी झांकी अब से कुछ दिनों बाद गणतंत्र दिवस पर पूरी दुनिया देख सकेगी: PM @narendramodi
— PMO India (@PMOIndia) January 9, 2018