QuoteIndian thought is vibrant and diverse: PM Modi
QuoteFor centuries we have welcomed the world to our land: PM Modi
QuoteIn a world seeking to break free from mindless hate, violence, conflict and terrorism, the Indian way of life offers rays of hope: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು, ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಎಂ ಕೋಝಿಕೋಡ್ ನಲ್ಲಿನ ಸ್ವಾಮಿ ವಿವೇಕಾನಂದರ ಆಳೆತ್ತರದ ದೊಡ್ಡ ಪ್ರತಿಮೆಯನ್ನು ಇಂದು ಅನಾವರಣಗೊಳಿಸಿದರು.

ಐಐಎಂ ಕೋಝಿಕೋಡ್ ಆಯೋಜಿಸಿದ್ದ ‘ಭಾರತೀಯ ಚಿಂತನೆಗಳ ಜಾಗತೀಕರಣ’ ಕುರಿತ ಅಂತಾರಾಷ್ಟ್ರೀಯ ಸಮಾವೇಶದಲ್ಲಿ ಅವರು ಭಾಗವಹಿಸಿದ್ದರು.

ಸಭಿಕರನ್ನುದ್ದೇಶಿಸಿ ಭಾಷಣ ಮಾಡಿದ ಪ್ರಧಾನಮಂತ್ರಿ ಅವರು, “ಭಾರತೀಯರ ಚಿಂತನೆಗಳು ಪ್ರಕರವಾಗಿವೆ ಮತ್ತು ವಿಭಿನ್ನವಾಗಿವೆ. ಅವು ಸ್ಥಿರವಾಗಿಲ್ಲದೆ, ಸದಾ ಬೆಳವಣಿಗೆ ಹೊಂದುತ್ತಿರುತ್ತವೆ. ಅವುಗಳ ಬಗ್ಗೆ ಉಪನ್ಯಾಸ ನೀಡುವುದು ಅಥವಾ ವಿಚಾರಸಂಕಿರಣ ನಡೆಸುವುದು ಅಥವಾ ಪುಸ್ತಕಗಳಲ್ಲಿ ಅಳವಡಿಸುವುದಕ್ಕಿಂತ ಹೆಚ್ಚು ವಿಸ್ತಾರವಾದುವು. ಆದರೆ ಕೆಲವು ಪ್ರಮುಖ ಆದರ್ಶಗಳು ಭಾರತೀಯ ಮೌಲ್ಯಗಳಿಗೆ ಸದಾ ಕೇಂದ್ರಬಿಂದುವಾಗಿವೆ. ಅವುಗಳೆಂದರೆ ಅನುಕಂಪ, ಸೌಹಾರ್ದತೆ, ನ್ಯಾಯ, ಸೇನೆ ಮತ್ತು ಮುಕ್ತತೆ’’.

|

ಶಾಂತಿ, ಸೌಹಾರ್ದತೆ ಮತ್ತು ಭಾತೃತ್ವ

ಭಾರತದ ಬಗ್ಗೆ ಜಗತ್ತಿನ ಅನಿಸಿಕೆಯನ್ನು ಉಲ್ಲೇಖಿಸುತ್ತಾ ಪ್ರಧಾನಮಂತ್ರಿ ಅವರು “ಮೊದಲಿಗೇ ಮತ್ತು ಹೆಚ್ಚು ನನ್ನ ಮನಸ್ಸಿಗೆ ಬರುತ್ತಿರುವ ಸದ್ಗುಣಗಳೆಂದರೆ ಶಾಂತಿ, ಏಕತೆ ಮತ್ತು ಭಾತೃತ್ವ.

ಸೌಹಾರ್ದತೆ ಮತ್ತು ಶಾಂತಿಯ ಕಾರಣದಿಂದಾಗಿ ನಮ್ಮ ನಾಗರಿಕತೆ ಏಳಿಗೆ ಸಾಧಿಸಿದೆ ಮತ್ತು ಹಲವರು ವಿಫಲರಾದಾಗ ನಾವು ನಾವು ಬದುಕುಳಿದಿದ್ದೇವೆ ಎಂದು ಹೇಳಿದರು.

“ಹಲವು ರಾಜ್ಯಗಳಿವೆ, ಹಲವು ಭಾಷೆಗಳಿವೆ, ಹಲವು ಉಪಭಾಷೆಗಳಿವೆ, ಹಲವು ನಂಬಿಕೆಗಳು, ಹಲವು ಸಂಪ್ರದಾಯ ಮತ್ತು ಪರಂಪರೆಗಳು ಹಲವಾರು ಹವ್ಯಾಸಗಳು, ಹಲವು ಬಗೆಯ ಜೀವನಶೈಲಿ ಹಲವು ವಿಧದಲ್ಲಿ ಬಟ್ಟೆ ತೊಡುವುದು. ಆದರೂ ನಾವು ಶತಮಾನಗಳಿಂದಲೂ ಶಾಂತಿಯಿಂದ ಬಾಳ್ವೆ ನಡೆಸುತ್ತಿದ್ದೇವೆ. ಶತಮಾನಗಳಿಂದಲೂ ನಾವು ನಮ್ಮ ಭೂಮಿಗೆ ವಿಶ್ವವನ್ನು ಸ್ವಾಗತಿಸುತ್ತಿದ್ದೇವೆ. ಹಲವರಿಂದ ಸಾಧ್ಯವಾಗದಿದ್ದ ಸಂದರ್ಭದಲ್ಲಿ ನಮ್ಮ ನಾಗರಿಕತೆ ಪ್ರಗತಿ ಕಂಡಿದೆ. ಏಕೆಂದರೆ ನಾವು ಇಲ್ಲಿ ಶಾಂತಿ ಮತ್ತು ಸೌಹಾರ್ದತೆಯನ್ನು ಕಾಣಬಹುದಾಗಿದೆ”.

ನಮ್ಮ ಚಿಂತನೆಗಳೇ ನಮ್ಮ ಸಾಮರ್ಥ್ಯಗಳು ಅವುಗಳು ಜೀವಂತ ಪರಂಪರೆಗಳಾಗಿದ್ದು, ಅವುಗಳಿಗೆ ಸರಳ ಮತ್ತು ಸೂಕ್ತ ಪದ್ಧತಿಗಳೇ ಮಾರ್ಗಸೂಚಿಗಳಾಗಿವೆ ಎಂದರು.

“ಈ ಪದ್ಧತಿಗಳು ಅತ್ಯಂತ ಕಠಿಣವಲ್ಲ ಅಥವಾ ಬೇರೆ ಆಯಾಮಗಳನ್ನು ಬೀರುವಂತಹುವುಗಳಲ್ಲ, ಅದರ ಸೌಂದರ್ಯವಿರುವುದೇ ಅವುಗಳನ್ನು ಭಿನ್ನ ರೀತಿಯಲ್ಲಿ ಆಚರಣೆ ಮಾಡುವುದರಲ್ಲಿ” ಎಂದರು ಹೇಳಿದರು.

ಭಾರತದ ನೆಲ ಕ್ರಿಯಾಶೀಲ ನಂಬಿಕೆಗಳ ತವರೂರಾಗಿದ್ದು, ಇಲ್ಲಿ ಹಿಂದೂ ಧರ್ಮ, ಬೌದ್ಧ ಧರ್ಮ, ಜೈನ ಧರ್ಮ ಮತ್ತು ಸಿಖ್ ಧರ್ಮಗಳಿವೆ ಎಂದು ಹೇಳಿದರು.

“ಸೂಫಿ ಪಂಥವೂ ಈ ನೆಲದಲ್ಲಿ ಬೆಳಗಿತು” ಎಂದು ಹೇಳಿದರು.

ಈ ಎಲ್ಲ ಧರ್ಮಗಳಿಗೆ ಅಹಿಂಸೆಯೇ ಮೂಲಮಂತ್ರವಾಗಿದೆ ಎಂದ ಅವರು, ಮಹಾತ್ಮ ಗಾಂಧೀಜಿ ಅವರು ಈ ಆದರ್ಶಗಳನ್ನು ಮುಂದಿಟ್ಟುಕೊಂಡು ಹೋರಾಟ ನಡೆಸಿ, ಭಾರತಕ್ಕೆ ಸ್ವಾತಂತ್ರ್ಯವನ್ನು ತಂದುಕೊಟ್ಟರು ಎಂದು ಹೇಳಿದರು.

‘ಸಂಘರ್ಷಗಳನ್ನು ತಪ್ಪಿಸುವ ಭಾರತೀಯ ಹಾದಿ ಎಂದರೆ ಶಕ್ತಿಯನ್ನು ತಡೆಯುವುದು ಎಂದರ್ಥವಲ್ಲ, ಆದರೆ ಅದು ಸಂವಾದದ ಶಕ್ತಿ” ಎಂದು ಹೇಳಿದರು.

|

ಪರಿಸರ ಪ್ರೀತಿ:

“ಭಾರತ ಶಾಂತಿ ಮತ್ತು ಸೌಹಾರ್ದತೆಯಲ್ಲಿ ನಂಬಿಕೆ ಇರಿಸಿದೇ ಎಂದು ನಾನು ಹೇಳಿದರೆ ಅದರಲ್ಲಿ ಭೂತಾಯಿ ಮತ್ತು ನಮ್ಮ ಪರಿಸರದ ಜೊತೆಗಿನ ಸೌಹಾರ್ದತೆಯೂ ಇದೆ ಎಂದರ್ಥ” ಎಂದು ಹೇಳಿದರು.

ಇದೀಗ ಕೈಗೊಂಡಿರುವ ಹಲವು ಹೆಜ್ಜೆಗಳಲ್ಲಿ ಅದರ ಸ್ಫೂರ್ತಿಯನ್ನು ಕಾಣಬಹುದಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು.

ಸ್ವಚ್ಛ ನಾಳೆಗಾಗಿ ಸೌರಶಕ್ತಿಯನ್ನು ಸಂಪೂರ್ಣವಾಗಿ ಬಳಕೆ ಮಾಡಿಕೊಳ್ಳುವ ‘ಅಂತಾರಾಷ್ಟ್ರೀಯ ಸೌರ ಮೈತ್ರಿ ರಚನೆಯಲ್ಲಿ ಭಾರತ ಇಡೀ ವಿಶ್ವವನ್ನು ಮುನ್ನಡೆಸಿತ್ತು’ ಎಂದು ಹೇಳಿದರು.

ಪ್ರಧಾನಮಂತ್ರಿ ಅವರು ಕಳೆದ 5 ವರ್ಷಗಳಲ್ಲಿ 36 ಕೋಟಿ ಎಲ್ಇಡಿ ಬಲ್ಬ್ ಗಳನ್ನು ವಿತರಿಸಲಾಗಿದೆ, ಮತ್ತು ಸುಮಾರು ಒಂದು ಕೋಟಿ ಬೀದಿ ದೀಪಗಳನ್ನು ಬದಲಿಸಿ, ಎಲ್ಇಡಿ ದೀಪ ಅಳವಡಿಸುವ ಮೂಲಕ 25000 ಕೋಟಿ ರೂ. ಉಳಿತಾಯ ಮಾಡಲಾಗಿದೆ ಹಾಗೂ ಸುಮಾರು 4 ಕೋಟಿ ಟನ್ ಇಂಗಾಲದ ಸಿಒ2 ಮಾಲಿನ್ಯವನ್ನು ತಗ್ಗಿಸಲಾಗಿದೆ ಎಂದು ಹೇಳಿದರು.

ಹುಲಿ ಮತ್ತು ಸಿಂಹ ಸಂರಕ್ಷಣೆ

ಭಾರತದಲ್ಲಿ 2006ರಿಂದೀಚೆಗೆ ಹುಲಿಗಳ ಸಂಖ್ಯೆ ದುಪ್ಪಟ್ಟಾಗಿದೆ ಎಂದರು. “ಇಂದು ಭಾರತ ಬಹುತೇಕ 2970 ಹುಲಿಗಳ ತವರೂರಾಗಿದೆ. ವಿಶ್ವದ ಹುಲಿ ಜನಸಂಖ್ಯೆಯ ಮೂರನೇ ಒಂದು ಭಾಗ ಭಾರತದಲ್ಲಿ ನೆಲೆಸಿವೆ. ನಮ್ಮಲ್ಲಿ ಅತ್ಯಂತ ಸುರಕ್ಷಿತ ಹುಲಿ ತಾಣಗಳಿವೆ, 2010ಕ್ಕೆ ಮರಳಿದರೆ ಆಗ ವಿಶ್ವ 2022ರ ವೇಳೆಗೆ ಹುಲಿ ಸಂತತಿಯನ್ನು ದುಪ್ಪಟ್ಟುಗೊಳಿಸಲು ಒಪ್ಪಿತ್ತು. ನಾವು ಅದಕ್ಕೂ ಮುನ್ನವೇ ಗುರಿಯನ್ನು ಸಾಧಿಸಿದ್ದೇವೆ” ಎಂದು ಹೇಳಿದರು.

ಅದೇ ರೀತಿ ಸಿಂಹಗಳ ಸಂಖ್ಯೆಯೂ 2010ರಿಂದ 2015ರ ನಡುವೆ ಶೇ. 30ರಷ್ಟು ಏರಿಕೆಯಾಗಿದೆ ಎಂದು ಅವರು ಹೇಳಿದರು.

ಅರಣ್ಯ ವ್ಯಾಪ್ತಿ ಹೆಚ್ಚಳ

ಪ್ರಧಾನಮಂತ್ರಿ ಅವರು ದೇಶದಲ್ಲಿ ಅರಣ್ಯ ವ್ಯಾಪ್ತಿ ಹೆಚ್ಚಾಗುತ್ತಿರುವ ಅಂಶವನ್ನೂ ಪ್ರಸ್ತಾಪಿಸಿದರು.

“2014ರಲ್ಲಿ ಒಟ್ಟು ಸಂರಕ್ಷಿತ ಪ್ರದೇಶಗಳ ಸಂಖ್ಯೆ 692 ಇತ್ತು. 2019ರಲ್ಲಿ ಆ ಪ್ರಮಾಣ 860ಕ್ಕಿಂತಲೂ ಹೆಚ್ಚಾಗಿದೆ. 2014ರಲ್ಲಿ 43 ಸಮುದಾಯ ಮೀಸಲು ಅರಣ್ಯಗಳಿದ್ದವು, ಇದೀಗ ಅವುಗಳ ಸಂಖ್ಯೆ 100ಆಗಿದೆ. ಈ ಅಂಶಗಳು ಹಲವು ಪರಿಸರ ಮತ್ತು ವನ್ಯಜೀವಿ ಪ್ರೇಮಿಗಳನ್ನು ಭಾರತಕ್ಕೆ ಆಕರ್ಷಿಸುವಂತೆ ಮಾಡಿದೆ”.

ಮಹಿಳೆಯರ ಕಲ್ಯಾಣ

ಪ್ರಧಾನಮಂತ್ರಿ ಅವರು, “ಈ ನೆಲದ ಮತ್ತೊಂದು ಅತ್ಯಂತ ಪ್ರಮುಖ ಅಂಶವೆಂದರೆ ಅದು ಮಹಿಳೆಯರಿಗೆ ನೀಡುತ್ತಿರುವ ಪ್ರಾಮುಖ್ಯತೆ ಮತ್ತು ಗೌರವವಾಗಿದೆ, ಮಹಿಳೆಯರು ದೈವತ್ವದ ಸ್ವರೂಪ.

ಪ್ರಧಾನಮಂತ್ರಿ ಅವರು, ಈ ನಿಟ್ಟಿನಲ್ಲಿ ಭಕ್ತಿ ಸಂತರು, ರಾಜಾರಾಮ್ ಮೋಹನ್ ರಾಯ್, ಈಶ್ವರ ಚಂದ್ರ ವಿದ್ಯಾಸಾಗರ, ಮಾಹಾತ್ಮ ಪುಲೆ ಮತ್ತು ಸಾವಿತ್ರಿ ಬಾಯಿ ಪುಲೆ ಅವರ ಕಾರ್ಯವನ್ನು ಶ್ಲಾಘಿಸಿದರು.

ಪ್ರಧಾನಮಂತ್ರಿ ಅವರು, ಭಾರತೀಯ ಸಂವಿಧಾನ, ಮಹಿಳೆಯರಿಗೆ ಮತದಾನದ ಹಕ್ಕನ್ನು ನೀಡಿದೆ ಎಂದರು. ಪಾಶ್ಚಿಮಾತ್ಯ ರಾಷ್ಟ್ರಗಳು ದಶಕಗಳ ಕಾಲ ಮಹಿಳೆಯರಿಗೆ ಮತದಾನದ ಹಕ್ಕು ನೀಡಿರಲಿಲ್ಲ,‌ ಆದರೆ ಭಾರತೀಯ ಸಂವಿಧಾನದಲ್ಲಿ‌ ಮೊದಲ ದಿನದಿಂದಲೇ ಮತದಾನದ ಹಕ್ಕು ನೀಡಲಾಗಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಹೇಳಿದರು.

ಅವರು ” ಇಂದು ಮುದ್ರಾ ಫಲಾನುಭವಿಗಳ ಪೈಕಿ ಶೇಕಡ 70 ಕ್ಕೂ ಅಧಿಕ ಮಹಿಳೆಯರಿದ್ದಾರೆ”ಎಂದರು.

ನಮ್ಮ‌ ಸಶಸ್ತ್ರ ಪಡೆಗಳಿಗೂ ಮಹಿಳೆಯರು ಕ್ರಿಯಾಶೀಲ ಕೊಡುಗೆ ನೀಡುತ್ತಿದ್ದಾರೆ. ನೌಕಾ ಪಡೆಯ ಮಹಿಳಾ ಅಧಿಕಾರಿಗಳ ಗುಂಪು ಸಮುದ್ರ ಮಾರ್ಗದಲ್ಲಿ ಇಡೀ ಜಗತ್ತನ್ನೇ ಸುತ್ತಿ ಬಂದಿದೆ. ಅದು ಐತಿಹಾಸಿಕ. ಭಾರತದಲ್ಲಿ ಇಂದು ಅಧಿಕ ಸಂಖ್ಯೆಯ ಮಹಿಳಾ ಸಂಸದರಿದ್ದಾರೆ. 2019ರ ಲೋಕಸಭಾ ಚುನಾವಣೆಯಲ್ಲಿ ಮಹಿಳಾ ಮತದಾರು ಅತ್ಯಧಿಕ ಸಂಖ್ಯೆಯಲ್ಲಿ ಮತ ಚಲಾವಣೆ ಮಾಡಿದ್ದಾರೆ”ಎಂದರು.

ಮುಕ್ತತೆಯ ಆಚರಣೆ

ಪ್ರಧಾನಮಂತ್ರಿ ಗಳು ಭಾರತ ಮುಕ್ತ ವಾತಾವರಣ ವನ್ನು ಆಚರಿಸುತ್ತಿದೆ. ನಾವು ಮುಕ್ತ ವಾತಾವರಣ ದಲ್ಲಿರುವುದರಿಂದ, ಭಿನ್ನಾಭಿಪ್ರಾಯಗಳನ್ನು ಗೌರವಿಸುತ್ತೇವೆ, ಇಲ್ಲಿ ಆವಿಷ್ಕಾರಗಳು ಸ್ವಾಭಾವಿಕ ವಾಗಿರುತ್ತವೆ. ಭಾರತೀಯರ ಆವಿಷ್ಕಾರದ ಉತ್ಸಾಹ ಇಡೀ ವಿಶ್ವವನ್ನು ಸೆಳೆಯುತ್ತಿದೆ. ಭಾರತೀಯ ಚಿಂತನೆಗಳು ವಿಶ್ವಕ್ಕೆ ಮಹತ್ವದ ಕೊಡುಗೆಯನ್ನು ನೀಡಿವೆ ಮತ್ತು ಇನ್ನೂ ಹೆಚ್ಚಿನ ಕೊಡುಗೆ ನೀಡುವ ಸಾಮರ್ಥ್ಯವೂ ಇದೆ. ನಮ್ಮ‌ಭೂಮಿಯ ಮೇಲೆ ಎದುರಿಸುತ್ತಿರುವ ಮಹತ್ವದ ಸವಾಲುಗಳಿಗೆ ಪರಿಹಾರ ನೀಡುವ ಸಾಮರ್ಥ್ಯವೂ ಭಾರತಕ್ಕಿದೆ ಎಂದು ಹೇಳಿ ಪ್ರಧಾನಿ ತಮ್ಮ‌ಭಾಷಣ ಮುಗಿಸಿದರು.

 

 

 

 

 

 

 

 

 

 

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
‘India has every right to defend itself’: Germany backs New Delhi after Operation Sindoor

Media Coverage

‘India has every right to defend itself’: Germany backs New Delhi after Operation Sindoor
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 24 ಮೇ 2025
May 24, 2025

Citizen Appreciate New India Rising: PM Modi's Vision in Action