Be it the freedom movement, literature, science, sports or any other domain, the essence of Bengal is evident: PM Modi
It is matter of pride that India has produced some of the finest scientists to the world: PM Modi
Language should not be a barrier but a facilitator in promoting science communication, says PM Modi
In the last few decades, India has emerged rapidly in the field of science and technology. Be it the IT sector, space or missile technology, India has proved its ability: PM
Final outcome of latest innovations and researches must benefit the common man: PM Modi

ದೇಶಕ್ಕಾಗಿ ತಮ್ಮ ಇಡೀ ಜೀವನವನ್ನೇ ತ್ಯಾಗಮಾಡಿದ ಮಹಾನ್ ಚೇತನವನ್ನು ಸ್ಮರಿಸುವ ಅಮೂಲ್ಯವಾದ ಅವಕಾಶ ಸಿಕ್ಕಿರುವ ದಿನವಿದು. ಇದು ಅವಿಶ್ರಾಂತವಾಗಿ ಕೆಲಸ ಮಾಡುವ ಪ್ರಿಯವಾದ ಕ್ಷಣ. ದೇಶಕ್ಕಾಗಿ ನಮ್ಮನ್ನು ನಾವು ಅರ್ಪಿಸಿಕೊಳ್ಳುವುದು ನಮ್ಮೆಲ್ಲರನ್ನೂ ಒಟ್ಟಾಗಿಸುತ್ತದೆ. ಸಮಯ, ದಿನ ಮತ್ತು ಅವಧಿಯನ್ನು ಮೀರಿ ಅದು ನಮ್ಮನ್ನು ಸಮೀಪಿಸುತ್ತದೆ.

ನಾನು ನಿಮ್ಮೆಲ್ಲರಿಗೂ ನನ್ನ ತುಂಬು ಶುಭಾಶಯವನ್ನು ತಿಳಿಸುತ್ತೇನೆ. ಆಚಾರ್ಯ ಸತ್ಯೇಂದ್ರ ನಾಥ್ ಬೋಸ್ ಅವರ 125ನೇ ಜನ್ಮ ಜಯಂತಿಯಂದು ವೈಜ್ಞಾನಿಕ ಸಮುದಾಯಕ್ಕೆ ವಿಶೇಷವಾಗಿ ಶುಭಕೋರಲು ಬಯಸುತ್ತೇನೆ.

ಸ್ನೇಹಿತರೇ, ಪ್ರತಿ ವರ್ಷದ ಆರಂಭದಲ್ಲಿ ಹೆಸರಾಂತ ವೈಜ್ಞಾನಿಕ ಸಮುದಾಯದ ಜತೆಗೆ ಸಂವಾದ ನಡೆಸಲು ನನಗೆ ಸಂತೋಷವಾಗುತ್ತದೆ. ನನಗೆ ಇಂದು ಅತ್ಯಂತ ಸಂತಸದ ದಿನ. ನಿಮ್ಮೊಂದಿಗೆ ನನ್ನ ಒಂದಷ್ಟು ಆಲೋಚನೆಗಳನ್ನು ಹಂಚಿಕೊಳ್ಳುವ ಅವಕಾಶ ಸಿಕ್ಕಿದ್ದು ಶ್ರೇಯಸ್ಕರ ಸಂಗತಿಯೇ ಸರಿ.

ಶ್ರೀ ಆಚಾರ್ಯ ಸತ್ಯೇಂದ್ರ ನಾಥ್ ಬೋಸ್ ಅವರ 125ನೇ ವರ್ಷದ ಜನ್ಮದಿನವನ್ನು  ಇಡೀ ವರ್ಷ ಆಚರಿಸಲು ಆರಂಭಿಸಿದ್ದೇವೆ. 1984ರ ಇದೇ ದಿನ ಶ್ರೀ ಎಸ್.ಎನ್. ಸತ್ಯೇಂದ್ರ ನಾಥ್ ಅವರು ಜನಿಸಿದ್ದ ದಿನ. ಅವರ ಸಮಯ ಮತ್ತು ಸಮಾಜದ ಸಂದರ್ಭದ ಸಾಧನೆಗಳಿಂದ ನಾನು ಸಾಕಷ್ಟು ಕಲಿತಿದ್ದೇನೆ.

ಸ್ನೇಹಿತರೇ, ದೇಶಬಂಧು ಚಿತ್ತರಂಜನ್ ದಾಸ್ ಅವರು ತಮ್ಮ ಕವನವೊಂದರಲ್ಲಿಜೀ ರೀತಿ ಉಲ್ಲೇಖ ಮಾಡಿದ್ದಾರೆ-`ಬಂಗಾಳದ ಮಣ್ಣು ಮತ್ತು ನೀರಿನಲ್ಲಿ ಒಂದು ಶಾಶ್ವತ ಸತ್ಯವು ಅಂತರ್ಗತವಾಗಿದೆ.

ಬಂಗಾಳದ ಜನರ ಆಲೋಚನೆ ಮತ್ತು ಚರ್ಚೆಗಳು ಅಷ್ಟರ ಮಟ್ಟಿಗೆ ಗ್ರಹಿಸಿಕೊಳ್ಳಲು ಕಠಿಣವಾದವು ಎನ್ನುವ ಇದು. ಇದು ಸತ್ಯ ಏಕೆಂದರೆ ಇವತ್ತಿಗೂ ಪಶ್ಚಿಮ ಬಂಗಾಳವು ಇಡೀ ದೇಶದ ಆಧಾರ ಸ್ತಂಭವಾಗಿದೆ ಮತ್ತು ಶತಮಾನಗಳವರೆಗೂ ಇದನ್ನು ಒಂದುಗೂಡಿಸಿಕೊಂಡೇ ಬರುತ್ತಿದೆ.

ಸ್ವಾತಂತ್ರ್ಯ ದಿನಾಚರಣೆಯನ್ನೇ ತಗೆದುಕೊಳ್ಳಿ ಅಥವಾ ಸಾಹಿತ್ಯ ಅಥವಾ ವಿಜ್ಞಾನ ಅಥವಾ ಕ್ರೀಡೆ ಹೀಗೆ ಎಲ್ಲದರಲ್ಲೂ ಬಂಗಾಳದ ನೀರು ಮತ್ತು ಮಣ್ಣಿನ ಪರಿಣಾಮ ಪ್ರತಿಫಲಿಸುವುದನ್ನು ನಾವು ಸ್ಪಷ್ಟವಾಗಿ ಕಾಣಬಹುದಾಗಿದೆ. ಸ್ವಾಮಿ ರಾಮಕೃಷ್ಣ ಪರಮಹಂಸರು, ಸ್ವಾಮಿ ವಿವೇಕಾನಂದರು, ಗರುವರ್ಯರಾದ ರವೀಂದ್ರನಾಥ ಠಾಗೂರ್ರವರು, ಶ್ರೀ ಸುಭಾಷ್ ಚಂದ್ರ ಬೋಸ್ರವರು, ಶ್ಯಾಮ್ ಪ್ರಸಾದ್ ಮುಖರ್ಜಿರವರು, ಬಂಕಿಮ ಚಂದ್ರ ಚಟರ್ಜಿರವರು, ಶ್ರೀ ಶರದ್ ಚಂದ್ರರವರು, ಶ್ರೀ ಸತ್ಯಜಿತ್ ರೇರವರು ಹೀಗೆ ನೀವು ಯಾವುದೇ ಕ್ಷೇತ್ರವನ್ನು ಹೇಳಿ ಅಲ್ಲಿ ಬಂಗಾಳದ ಒಂದಾದರೂ ನಕ್ಷತ್ರ ಮಿನುಗುತ್ತಲೇ ಇರುತ್ತದೆ.

ಇದು ಈ ನೆಲವು ವಿಶ್ವಕ್ಕೆ ಅತ್ಯುತ್ತಮವಾದ ಹಲವು ವಿಜ್ಞಾನಿಗಳನ್ನು ನೀಡಿದೆ ಎನ್ನುವುದೇ ಭಾರತ ದೇಶಕ್ಕೆ ಒಂದು ಹೆಮ್ಮೆಯ ವಿಚಾರ. ಆಚಾರ್ಯ ಎಸ್.ಎನ್.ಬೋಸ್ ಅವರಲ್ಲದೇ ಶ್ರೀ ಜೆ.ಸಿ.ಬೋಸ್, ಮೇಘನಾದ್ ಸಾಹಾ ಮತ್ತು ಹೀಗೆ ಅಗಣಿತವಾದ ಹೆಸರುಗಳು ದೇಶದ ಆಧುನಿಕ ವಿಜ್ಞಾನಕ್ಕೆ ಅತ್ಯಂತ ಸುಭದ್ರವಾದ ತಳಹದಿಯನ್ನು ಹಾಕಿಕೊಟ್ಟಿವೆ.

ಅತ್ಯಂತ ಸೀಮಿತವಾದ ಸಂಪನ್ಮೂಲ ಮತ್ತು ಅಪಾರವಾದ ಶ್ರಮದ ಮೂಲಕ ತಮ್ಮ ಆಲೋಚನೆ ಮತ್ತು ಅನ್ವೇಷಣೆಗಳನ್ನು ಮಾಡಿ ಈ ದೇಶದ ಜನರಿಗೆ ಅವರೆಲ್ಲರೂ ಅಮೂಲ್ಯವಾದ ಸೇವೆ ಸಲ್ಲಿಸಿದ್ದಾರೆ. ಇವತ್ತಿಗೂ ಅವ ಬದ್ಧತೆ ಮತ್ತು ಸೃಜನಶೀಲತೆಯನ್ನು ನೋಡಿ ನಾವೆಲ್ಲರೂ ಪಾಠ ಕಲಿಯುತ್ತಿದ್ದೇವೆ.

ಸ್ನೇಹಿತರೇ, ಆಚಾರ್ಯ ಶ್ರೀ ಎಸ್.ಎನ್.ಬೋಸ್ ಅವರ ಜೀವನ ಮತ್ತು ಕಾರ್ಯಗಳಿಂದ ನಾವು ಸಾಕಷ್ಟು ಕಲಿಯುವುದಿದೆ. ಅವರು ಸ್ವಯಂ ಅಧ್ಯಯನಶೀಲ ಚಿಂತಕರಾಗಿದ್ದರು. ಸಾಕಷ್ಟು ನಿರ್ಬಂಧಗಳ ನಡುವೆಯೂ ಅವರು ಯಶಸ್ಸನ್ನು ಕಂಡಿದ್ದರು. ಔಪಚಾರಿಕ ಸಂಶೋಧನಾ ಶಿಕ್ಷಣ ಮತ್ತು ಜಾಗತಿಕ ವಿಜ್ಞಾನ ಸಮುದಾಯದೊಂದಿಗಿನ ಸೀಮಿತವಾದ ಸಂಪರ್ಕದ ನಡುವೆಯೂ  ಅವರು ಸಾಕಷ್ಟು ಸಾಧನೆಗಳನ್ನು ಮಾಡಿದ್ದರು. 1924ರಲ್ಲಿ ಅವರು ಮಾಡಿದ ಹೆಜ್ಜೆಗುರುತಿನ ಕೆಲಸವು ಅವರ ಧಾರ್ಮಿಕತೆಯೆಡೆಗಿನ  ಗುರುತುಹಾಕದ ವಿಜ್ಞಾನದ ಕಾರಣದಿಂದಲೇ ಆಗಿತ್ತು.

ಅವರು ಅಂಕಿಅಂಶಗಳ ಪರಿಮಾಣ ಮತ್ತು ಆಧುನಿಕ ಪರಮಾಣು ಸಿದ್ಧಾಂತಕ್ಕೆ ಭದ್ರ ಬುನಾದಿಯನ್ನೇ ಹಾಕಿದ್ದರು. ಐನ್ಸ್ಟೈನ್ ಬಯೋಗ್ರಾಫರ್ ಅಬ್ರಹಾಮ್ ಪೇಸ್ ಅವರು ತಮ್ಮ ಹಳೆಯ ಪರಿಮಾಣ ಸಿದ್ಧಾಂತದ ಬಗ್ಗೆ ತಯಾರಿಸಿದ ತಮ್ಮ ಕೊನೆಯ ನಾಲ್ಕು ಕ್ರಾಂತಿಕಾರಕ ಪ್ರಬಂಧಗಳಲ್ಲಿ ಬೋಸ್ ಅವರ ಕಾರ್ಯವನ್ನು ಪ್ರಸ್ತಾಪ ಮಾಡಿದ್ದರು. ಬೋಸ್ ಅವರ ಅಂಕಿಅಂಶದಂತೆ ಬೋಸ್ ಐನ್ಸ್ಟೈನ್   ಘನೀಕರಿಸುವಿಕೆ ಮತ್ತು ಹಿಗಸ್ ಬೋಸನ್ ಅವರ ಕಲ್ಪನೆ ಮತ್ತು ನಿರೂಪಣೆಗಳ ವೈಜ್ಞಾನಿಕ ಇತಿಹಾಸದಲ್ಲಿ ಸತ್ಯೇಂದ್ರ ನಾಥ್ ಬೋಸ್ ಅವರ ಹೆಸರು ಅಮರವಾಗಿದೆ. 

ಭೌತಶಾಸ್ತ್ರದಲ್ಲಿ ನೀಡಲಾಗಿರುವ ಸಾಕಷ್ಟು ನೋಬೆಲ್ ಪ್ರಶಸ್ತಿಗಳು ಭೌತ ಅನ್ವೇಷಣೆಗಳ ವೈವಿಧ್ಯತೆಯಲ್ಲಿ ಮುಂದುವರೆಸಲಾದ ಸಂಶೋಧನೆಗಳ ಆಲೋಚನೆಗಳಿಗೆ ನಿರಂತರವಾಗಿ ನೀಡಲ್ಪಡುತ್ತಾ ಬರುತ್ತಿವೆ. ಈ ಮೂಲಕ ಅವರ ಮೂಲಭೂತವಾದ ಮಹತ್ವವವನ್ನು ಅಳೆಯಲಾಗುತ್ತಿದೆ.

 ಪ್ರೊ.ಬೋಸ್ ಅವರು ದೇಶೀಯ ಭಾಷೆಗಳಲ್ಲಿ ವಿಜ್ಞಾನವನ್ನು ಬೋಧಿಸುವ ಕಠಿಣಶ್ರಮದಲ್ಲಿ ತೊಡಗಿದ್ದವರು. ಅವರು ಗ್ಯಾನ್ ಓ ವಿಜ್ಞಾನ್ ಅನ್ನೋ ಬಂಗಾಳಿ ಭಾಷೆಯ ವಿಜ್ಞಾನ ನಿಯತಕಾಲಿಕೆಯನ್ನು ಆರಂಭಿಸಿದ್ದರು.

ನಮ್ಮ ಯುವಕರಲ್ಲಿ ವಿಜ್ಞಾನದ ಬಗ್ಗೆ ಪ್ರೀತಿ ಮತ್ತು ತಿಳಿವಳಿಕೆಯನ್ನು ಉತ್ತೇಜಿಸಲು ಇದು ವೈಜ್ಞಾನಿಕ ಸಂವಹನವನ್ನು ದೊಡ್ಡ ಮಟ್ಟದಲ್ಲಿ ಉತ್ತೇಜಿಸಲು ವಿಶಾಲವಾದ ಅವಕಾಶವಾಗಿದೆ. ಭಾಷೆಯು ಯಾವುದೇ ಅಡ್ಡಿಯಲ್ಲ ಆದರೆ ಇದರಲ್ಲಿ ಅನುಕೂಲ ಕಲ್ಪಿಸುವ ವ್ಯಕ್ತಿ ಮುಖ್ಯವಾಗಿರುತ್ತಾನೆ.

ಸ್ನೇಹಿತರೇ ಭಾರತದ ವೈಜ್ಞಾನಿಕ ಸಂಶೊಧನಾ ಪರಿಸರ ವ್ಯವಸ್ಥೆಯು ಸಾಂಪ್ರದಾಯಿಕವಾಗಿ ಅತ್ಯಂತ ಸುಭದ್ರವಾಗಿದೆ. ಪ್ರತಿಭೆಗಳಿಗೆ ಅಥವಾ ಕಠಿಣ ಪರಿಶ್ರಮಕ್ಕೆ ಅಥವಾ ಉತ್ತಮ ಗುರಿಗಳಿಗೆ ನಮ್ಮಲ್ಲಿ ಅಭಾವ ಇಲ್ಲ.

ಕಳೆದ ಹಲವು ದಶಕಗಳಲ್ಲಿ ವಿಜ್ಞಾನ ಮತ್ತು ತಂತ್ರಜ್ಞಾನ ಕ್ಷೇತ್ರದಲ್ಲಿ ಭಾರತವು ಅತ್ಯಂತ ಶರವೇಗದಲ್ಲಿ ಬೆಳೆದು ನಿಂತಿದೆ. ಅದು ಐಟಿ ಕ್ಷೇತ್ರವೇ ಆಗಿರಬಹುದು ಅಥವಾ ಅಂತರಿಕ್ಷ ತಂತ್ರಜ್ಞಾನವೇ ಇರಬಹುದು ಅಥವಾ ಕ್ಷಿಪಣಿ ತಂತ್ರಜ್ಞಾನವೇ ಆಗಿರಬಹುದು ವಿಶ್ವದಲ್ಲಿ ಭಾರತ ತನ್ನ ಹೆಜ್ಜೆಗುರುತುಗಳನ್ನು ಮೂಡಿಸಿದೆ. ನಮ್ಮ ವಿಜ್ಞಾನಿಗಳು ಮತ್ತು ತಾಂತ್ರಿಕ ತಜ್ಞರ ಯಶಸ್ಸುಗಳು ಇಡೀ ದೇಶವೇ ಹೆಮ್ಮೆ ಪಡುವಂಥದ್ದು.

ಇಸ್ರೋದ ಒಂದೇ ಒಂದು ರಾಕೆಟ್ ಸಹಾಯದಿಂದ 100 ಉಪಗ್ರಹಗಳನ್ನು ಉಡಾವಣೆ ಮಾಡಿದ ಭಾರತದ ಸಾಧನೆಯನ್ನು ಇಡೀ ವಿಶ್ವವು ವಿಸ್ಮಯದಿಂದ ನೋಡುತ್ತಿದೆ. ಈ ಸಂದರ್ಭದಲ್ಲಿ ಭಾರತೀಯರಾದ ನಾವು ನಮ್ಮ ವಿಜ್ಞಾನಿಗಳು ನಮ್ಮನ್ನು ತಲೆ ಎತ್ತಿ ಬೀಗುವಂತೆ ಮಾಡಿದ್ದನ್ನು ಕಂಡು ಸಂಭ್ರಮಿಸಿದ್ದೆವು.

ಸ್ನೇಹಿತರೇ, ಪ್ರಯೋಗಾಲಯಗಳಲ್ಲಿ ನೀವು ಮಾಡಿದ ಕಠಿಣ ಕೆಲಸ ಮತ್ತು ಪ್ರಯೋಗಾಲಯಗಳಲ್ಲಿ ನಿಮ್ಮಂತಹವರು ಮಾಡಿದ ತ್ಯಾಗವನ್ನು ದೇಶ ಮತ್ತು ಜನರು ನೆನೆಯದೇ ಪ್ರಯೋಗಾಲಯಗಳಲ್ಲಿ ಉಳಿಯುವಂತೆ ಮಾಡಿದರೆ ಅದು ದೊಡ್ಡ ಅನ್ಯಾಯವೇ ಸರಿ. ಆಧುನಿಕ ಕಾಲಘಟ್ಟವನ್ನು ಬಳಸಿಕೊಂಡು ನಿಮ್ಮ ವೈಜ್ಞಾನಿಕ ಸಾಮಥ್ರ್ಯಗಳನ್ನು ಸಾಮಾನ್ಯ ಮನುಷ್ಯನ ಅಗತ್ಯಗಳಿಗೆ ಅನುಸಾರವಾಗಿ ಬಳಸಿಕೊಂದರೆ ಅದು ಇನ್ನಷ್ಟು ಫಲದಾಯಕವಾಗಲಿದೆ.

 ನಿಮ್ಮ ಸಂಶೋಧನೆಯು ಬಡ ಜನರ ಜೀವನವನ್ನು ಸುಲಭವಾಗಿಸುತ್ತದೋ..ಮಧ್ಯಮ ವರ್ಗದ ಜನರ ಸಮಸ್ಯೆಗಳನ್ನು ಪರಿಹಾರ ಮಾಡುತ್ತೆದೆಯೇ ಎನ್ನುವ ಕಾರಣಕ್ಕಾಗಿಯೇ ನಮ್ಮ ಸಂಶೋಧನೆ ಮತ್ತು ನಮ್ಮ ಅನ್ವೇಷಣೆಗಳ ಅಂತಿಮ ಫಲಿತಾಂಶವನ್ನು ಸ್ಪಷ್ಟವಾಗಿ ಹೊರತರುವುದು ಅತ್ಯಂತ ಅಗತ್ಯವಾಗಿದೆ.

ವೈಜ್ಞಾನಿಕ ಪ್ರಯೋಗಗಳ ಮೂಲವು ನಮ್ಮ ಸಾಮಾಜಿಕ ಮತ್ತು ಆರ್ಥಿಕ ಸಮಸ್ಯೆಗಳಿಗೆ ಪರಿಹಾರಗಳನ್ನು ಕಂಡುಕೊಳ್ಳುವುದಾಗಿದೆ.  ಇದು ನಿಮಗೆ ಅಂತಿಮ ಫಲಿತಾಂಶವನ್ನು ಪಡೆದುಕೊಳ್ಳಲು ಸುಲಭವಾಗುತ್ತದೆ. ನಿಮಗೆ ಗುರಿಯನ್ನು ನಿಗದಿ ಮಾಡಿಕೊಳ್ಳಲು ಸರಳವಾಗಿಸುತ್ತದೆ.

ನಮ್ಮ ದೇಶದ ವಿಜ್ಞಾನಿಗಳ ವಿಶಾಲವಾದ ಚಿಂತನೆಯು ದೇಶಕ್ಕೆ ಸೃಜನಾತ್ಮಕವಾದ ತಾಂತ್ರಿಕ ಪರಿಹಾರಗಳನ್ನು ನಿರಂತರವಾಗಿ ಒದಗಿಸುತ್ತದೆ. ಇದು ಸಾಮಾನ್ಯ ಜನರಿಗೆ ಅನುಕೂಲ ಮಾಡಿಕೊಡುವುದಲ್ಲದೇ ಅವರ ಜೀವನವನ್ನು ಇನ್ನಷ್ಟು ಸುಲಭವಾಗಿಸುತ್ತದೆ.

ನಾನು ನಮ್ಮ ಹಲವು ವೈಜ್ಞಾನಿಕ ಸಂಸ್ಥೆಗಳಿಗೆ ಸೌರ ವಿದ್ಯುತ್, ಸ್ವಚ್ಛ ಇಂಧನ, ಜನ ಸಂರಕ್ಷಣೆ ಮತ್ತು ತ್ಯಾಜ್ಯ ನಿರ್ವಹಣೆಯಲ್ಲಿ ಸಂಶೋಧನೆ ಮತ್ತು ವಿಸ್ತರಣಾ ಯೋಜನೆಗಳನ್ನು ಕೈಗೊಳ್ಳಲು ಕೇಳಿದ್ದೇನೆ. ಇದು ನಮ್ಮೆಲ್ಲರ ಸಂಘಟನಾತ್ಮಕ ಪ್ರಯತ್ನವಾಗಬೇಕು. ಈ ರೀತಿಯ ಉತ್ಪನ್ನ ಮತ್ತು ಫಲಿತಾಂಶಗಳು ಕೇವಲ ಪ್ರಯೋಗಾಲಯಕ್ಕೆ ಮಾತ್ರ ಸೀಮಿತವಾಗಿರಬಾರದು.

ಗೌರವಾನ್ವಿತ ವಿಜ್ಞಾನಿಗಳೇ ಮತ್ತು ವಿದ್ಯಾರ್ಥಿಗಳೇ ನೀವೆಲ್ಲರೂ ಕ್ವಾಂಟಮ್ ಮೆಕ್ಯಾನಿಕ್ಸ್ನ ಅಧ್ಯಯನ ಮತ್ತು ನಿಪುಣರಾಗಿದ್ದೀರಿ. ನಾನು ಅದನ್ನು ಅಧ್ಯಯನ ಮಾಡಿಲ್ಲ. ಆದರೆ ನಮ್ಮ ದೈನಂದಿನ ಜೀವನದಲ್ಲಿ ಭೌತಶಾಸ್ತ್ರವು ಹಲವು ಪಾಠಗಳನ್ನು ಕಲಿಸುತ್ತದೆ ಎನ್ನುವುದನ್ನು ನಾವು ಅರ್ಥ ಮಾಡಿಕೊಂಡಿದ್ದೇವೆ. ಒಂದು ಆಳವಾದ ಬಾವಿಯಲ್ಲಿ ಒಂದು ಶಾಸ್ತ್ರೀಯ ಕಣವು ಸುಲಭವಾಗಿ ಬಚಾವಾಗಲು ಸಾದ್ಯವಿಲ್ಲ. ಆದರೆ ಕ್ವಾಂಟಮ್ ಕಣವು ಅದನ್ನು ತರಬಲ್ಲದು.

ಒಂದು ಅಥವಾ ಇನ್ನೊಂದು ಕಾರಣಕ್ಕೆ ನಾವು ನಮ್ಮನ್ನು ಪ್ರತ್ಯೇಕತೆಗೆ ಒಳಗೊಳಿಸಿಕೊಳ್ಳುತ್ತೇವೆ. ನಾವು ಕಠಿಣವಾಗಿ ಸಹಕರಿಸುತ್ತೇವೆ.  ಸಹಯೋಗದಿಂದ ಕೆಲಸ ಮಾಡಬೇಕಿದೆ ಮತ್ತು ಇತರೆ ಸಂಸ್ಥೆಗಳು ಮತ್ತು ರಾಷ್ಟ್ರೀಯ ಪ್ರಯೋಗಾಲಯಗಳ ವಿಜ್ಞಾನಿಗಳ ಅನುಭವವನ್ನು ನಾವು ಹಂಚಿಕೊಳ್ಳಬೇಕಿದೆ.

ನಾವು ನಮ್ಮ ನೈಜ ಸಾಮಥ್ರ್ಯವನ್ನು ಮುಟ್ಟಲು ಮತ್ತು ಭಾರತದ ವಿಜ್ಞಾನವನ್ನು ಯುಕ್ತವಾದ ವೈಭವಕ್ಕೆ ಕೊಂಡೊಯ್ಯಲು ನಾವು ಕ್ವಾಂಟಮ್ ಅಣುವಿನಂತಿರಬೇಕು. ಅದು ತನ್ನ ನಿರ್ಬಂಧದಿಂದ ಬಚಾವ್ ಮಾಡಲಿದೆ. ಇದು ಇವತ್ತಿನ ಮಟ್ಟಿಗೆ ವಿಜ್ಞಾನವು ಅಪಾರವಾಗಿ ಬಹು ಶಿಸ್ತಿನ ಮತ್ತು ಸಂಯೋಜಿತ ಪ್ರಯತ್ನಗಳಿಂದಾಗಿರಬೇಕೆಂಬುದು ಅತ್ಯಂತ ಪ್ರಮುಖವಾಗಿದೆ.

ನಾನು ಇವತ್ತು ದೈಹಿಕ ಮತ್ತು ಸಂಶೋಧನಾತ್ಮಕ ಮೂಲಸೌಕರ್ಯಗಳ ಅಗಾಧವಾದ ಅಗತ್ಯಗಳ ಬಗ್ಗೆ ನಾನು ಮಾತನಾಡುತ್ತಿದ್ದೇನೆ. ಅವು ಅತ್ಯಂತ ದುಬಾರಿ ಮತ್ತು ಕಡಿಮೆ ಅವಧಿಯನ್ನು ಹೊಂದಿದೆ. 

ನಮ್ಮ ವಿಜ್ಞಾನ ವಿಭಾಗಗಳು ಬಹುಪ್ರದೇಶದ ವಿಧಾನದೊಂದಿಗೆ ಕೆಲಸ ಮಾಡುತ್ತಿವೆ. ವೈಜ್ಞಾನಿಕ ಮೂಲಸೌಕರ್ಯಗಳನ್ನು ವಿನಿಮಯ ಮಾಡಿಕೊಳ್ಳುವ ಕಾರಣಕ್ಕೆ ಸಂಪನ್ಮೂಲಗಳ ಹಂಚಿಕೊಳ್ಳುವಿಕೆ ಮತ್ತು ಪಾರದರ್ಶಕ ಹಾಗೂ ಸಮರ್ಥವಾದ ಜೋಡಣೆಯ ಉದ್ದೇಶಕ್ಕಾಗಿ ಇಂದು ಪೋರ್ಟಲ್ ಆರಂಭ ಮಾಡುವ ಅಗತ್ಯವಿದೆ.

ಅಕ್ಯಾಡೆಮಿಕ್ ಮತ್ತು ಸಂಶೋಧನೆ ಹಾಗೂ ಅಭಿವೃದ್ಧಿ ಸಂಸ್ಥೆಗಳ ನಡುವೆ ಸದೃಢ ಪಾಲುದಾರಿಕೆಯನ್ನು ಸಾಧಿಸುವ ಉದ್ದೇಶದಿಂದ ಒಂದು ಮೆಕ್ಯಾನಿಸಂನ ಅಗತ್ಯ ಇದ್ದೇ ಇದೆ. ಅಕ್ಯಾಡೆಮಿಕ್ ಅನ್ನು ಸಂಸ್ಥೀಕರಣದವರೆಗೆ, ಕೈಗಾರಿಕೆಯಿಂದ ಸ್ಟಾರ್ಟ್ ಅಪ್ವರೆಗೆ ಎಲ್ಲ ವಿಜ್ಞಾನ ಮತ್ತು ತಾಂತ್ರಿಕ ಪಾಲುದಾರರನ್ನು ಒಂದು ವೇದಿಕೆಗೆ ತರುವ ನಿಟ್ಟಿನಲ್ಲಿ ನಗರ ಕೇಂದ್ರಿತ ಸಂಶೋಧನೆ ಮತ್ತು ಅಭಿವೃದ್ಧಿ ಗುಚ್ಛಗಳನ್ನು ನಿರ್ಮಾಣಮಾಡಲಾಗುತ್ತಿದೆ.

ಈ ಕಾರ್ಯತಂತ್ರದ ಮೂಲಕ ವೈಜ್ಞಾನಿಕ ಸಂಸ್ಥೆಗಳು ಮತ್ತು ಪ್ರಯೋಗಾಲಯಗಳನ್ನು ಒಂದೇ ಕಡೆಗೆ ತರುವ ನಮ್ಮ ಸಾಮಥ್ರ್ಯದ ಮೇಲೆ ನಮ್ಮ ಪ್ರಯತ್ನ ಯಶಸ್ಸು ಎನ್ನುವುದು ನಿರ್ಭರವಾಗಿದೆ. ಇದಕ್ಕೆ ನಮ್ಮನಿಮ್ಮೆಲ್ಲರಿಂದ ತುಂಬು ಹೃದಯದ ಸಹಕಾರದ ಅಗತ್ಯವಿದೆ. ಅತ್ಯಂತ ಕುಗ್ರಾಮದಲ್ಲಿರುವ ವಿಜ್ಞಾನಿಗೂ ಸಂಪನ್ಮೂಲಗಳು ತಲುಪುವ ಮಟ್ಟಕ್ಕೆ ಈ ಕಾರ್ಯತಂತ್ರವು ಭರವಸೆಯನ್ನು ಮೂಡಿಸಬೇಕಿದೆ. ಅದು ದೆಹಲಿಯ ಐಐಟಿಯೇ ಇರಲಿ, ಡೆಹ್ರಾಡೂನ್ನ ಸಿಎಸ್ಐಆರ್ ಪ್ರಯೋಗಾಲಯವೇ ಇರಲಿ ಸಂಪನ್ಮೂಲಗಳು ಸುಸಲಿತವಾಗಿ ತಲುಪಬೇಕು. ನಮ್ಮ ಗುರಿಯು ನಮ್ಮೆಲ್ಲ ಪ್ರಯತ್ನ ಮತ್ತು ಕಾರ್ಯಗಳು ಎಲ್ಲದಕ್ಕಿಂತಲೂ ಮಹತ್ವದ್ದಾಗಿರಬೇಕು ಎನ್ನುವುದೇ ಆಗಿರಬೇಕು.

ಸ್ನೇಹಿತರೇ, ವಿಜ್ಞಾನ ಮತ್ತು ತಂತ್ರಜ್ಞಾನವು ಅಭಿವೃದ್ಧಿ, ಬೆಳವಣಿಗೆ ಮತ್ತು ರೂಪಾಂತರಕ್ಕೆ ಅಸಾಮಾನ್ಯ ಎಂಜಿನ್ ಮಾದರಿಯಲ್ಲಿ ಕೆಲಸ ಮಾಡುತ್ತವೆ. ಮತ್ತೊಮ್ಮೆ ನಾನು ನಿಮ್ಮಲ್ಲೆರನ್ನು ಮನವಿ ಮಾಡಿಕೊಳ್ಳುವುದೇನೆಂದರೆ ನಮ್ಮ ಸಾಮಾಜಿಕ ಆರ್ಥಿಕ ಸವಾಲುಗಳನ್ನು ದೃಷ್ಟಿಯಲ್ಲಿಟ್ಟುಕೊಂಡು ದೇಶದ ವಿಜ್ಞಾನ ಸಮುದಾಯದ ಅನ್ವೇಷಣಾ ದೃಷ್ಟಿಕೋನಗಳು ಸಾಗಬೇಕೆಂದು ಬಯಸುತ್ತೇನೆ.

ನಿಮಗೆ ಗೊತ್ತೇ ಇದೆ ನಮ್ಮ ದೇಶದ ಲಕ್ಷೋಪಲಕ್ಷ ಜನರು ವಿಶೇಷವಾಗಿ ರಕ್ತ ಕಣ ಹೀನೆತೆಯಿಂದ ಬಳಲುವ ಗಿರಿಜನ ಸಮುದಾಯದ ಸಹಸ್ರಾರು ಮಕ್ಕಳ ಬಗ್ಗೆ ನಿಮಗೆ ತಿಳಿದೇ ಇದೆ. ದಶಕಗಳಿಂದಲೂ ಇದರ ಮೇಲೆ ಸಂಶೋಧನೆಗಳು ನಡೆಯುತ್ತಿವೆ. ಆದರೆ ಈ ಅನಾರೋಗ್ಯ ಸಮಸ್ಯೆಗೆ ಇಡೀ ವಿಶ್ವದಲ್ಲಿ ಯಾವುದಾದರೂ ಪರಿಣಾಮಕಾರಿ ದರದ ಸರಳ ಪರಿಹಾರವನ್ನು ಕಂಡುಹಿಡಿಯಲು ಸಾಧ್ಯವಾಗಿದೆಯೇ..?

ನಾವು ನಮ್ಮ ಅಪೌಷ್ಠಿತಕೆಯನ್ನು ನಿವಾರಣೆ ಮಾಡುವ ನಿಟ್ಟಿನಲ್ಲಿ ಹೊಸ ಬಗೆಯ ಕಡಿಮೆ ಬೆಲೆಬಾಳುವ ಮತ್ತು ಪ್ರೋಟೀನ್ ಯುಕ್ತವಾದ ವಿವಿಧ ಧಾನ್ಯಗಳನ್ನು ಅಭಿವೃದ್ಧಿ ಪಡಿಸಿದ್ದೇವೆಯೇ..? ನಾವು ನಮ್ಮ ಧಾನ್ಯಗಳು ಮತ್ತು ತರಕಾರಿಗಳ ಗುಣಮಟ್ಟವನ್ನು ಇನ್ನಷ್ಟು ಅಭಿವೃದ್ಧಿ ಪಡಿಸುವ ಪ್ರಯತ್ನ ಮಾಡಬಹುದಲ್ಲವೇ? ನಮ್ಮ ನದಿಗಳನ್ನು ಸ್ವಚ್ಚ ಮಾಡಲು ಹೊಸ ತಂತ್ರಜ್ಞಾನಗಳನ್ನು ನಾವು ಅಭಿವೃದ್ಧಿ ಪಡಿಸಿದ್ದೇವೆಯೇ..? ನದಿಗಳನ್ನು ಸ್ವಚ್ಛ ಮಾಡುವ ಸಂದರ್ಭದಲ್ಲಿ ಅನಪೇಕ್ಷಿತ ಸಸ್ಯವರ್ಗವನ್ನು ತೆಗೆಯುವ ಮತ್ತು ನಮ್ಮ ನದಿಗಳನ್ನು ಮಾಲಿನ್ಯ ರಹಿತವಾಗಿಸುವ ಕಾರ್ಯ ಆಗಿದೆಯೇ..?

 ನಾವು ಹೊಸ ಔಷಧಿಗಳನ್ನು, ಮಲೇರಿಯಾ, ಟ್ಯುಬರ್ಕ್ಯುಲೋಸಿಸ್, ಜಪಾನೀಸ್ ಮೆದುಳು ಉರಿಯೂತವನ್ನು ನಿಯಂತ್ರಿಸುವ ಮತ್ತು ಹರಡುವುದನ್ನು ತಡೆಗಟ್ಟು ಹೊಸ ಲಸಿಕೆಗಳನ್ನು ಕಂಡು ಹಿಡಿದಿದ್ದೇವೆಯೇ..? ನಮ್ಮ ಸಾಂಪ್ರದಾಯಿಕ ಜ್ಞಾನವನ್ನು ಆಧುನಿಕ ವಿಜ್ಞಾನದ ಜತೆ ಸೃಜನಶೀಲವಾಗಿ ಹೊಂದಿಸಿಕೊಂಡು ಹೋಗುವ ಮಾರ್ಗಗಳನ್ನು ನಾವು ಹುಡುಕಿದ್ದೇವೆಯೇ..?

ಸ್ನೇಹಿತರೇ ಹಲವು ಕಾರಣಕ್ಕೆ ನಾವು ಮೊದಲ ಕೈಗಾರಿಕಾ ಕ್ರಾಂತಿಯನ್ನು ತಪ್ಪಿಸಿಕೊಂಡಿದ್ದೇವೆ. ಅಂಥದ್ದೇ ಅವಕಾಶವನ್ನು ಇಂದು ನಾವು ಕಳೆದುಕೊಳ್ಳಬಾರದು. ಕೃತಕ ಬುದ್ಧಿವಂತಿಕೆ, ಬಿಗ್ ಡಾಟಾ ಅನಲಸ್ಟಿಕ್, ಮೆಷಿನ್ ಲರ್ನಿಂಗ್, ಸೈಬರ್-ಭೌತಿಕ ವ್ಯವಸ್ಥೆ, ಜಿನೋಮಿಕ್ಸ್ ಮತ್ತು ಎಲೆಕ್ಟ್ರಿಕ್ ವಾಹನಗಳು ಹೀಗೆ ಹಲವು ಹೊಸ ಸವಾಲುಗಳು ನಿಮ್ಮ ಗಮನವನ್ನು ಸೆಳೆಯಬೇಕಿದೆ. ದಯಮಾಡಿ  ಈ ಉದಯೋನ್ಮಖ ತಂತ್ರಜ್ಞಾನ ಮತ್ತು ಸಂಶೋಧನೆಗಳ ಜತೆ ಮುಖಾಮುಖಿಯಾಗುವ ದೇಶವನ್ನು ನಾವು ನಿರ್ಮಾಣ ಮಾಡಬೇಕಿದೆ.

ಈ ಸವಾಲುಗಳನ್ನು ನಮ್ಮ ವಿಜ್ಞಾನ ಸಮುದಾಯವು ಎದುರಿಸಿದರೆ ನಮ್ಮ ಸ್ಮಾರ್ಟ್ ಉತ್ಪಾದನೆ, ಸ್ಮಾರ್ಟ್ ಸಿಟಿ, ಇಂಡಸ್ಟ್ರಿ-4.0 ಮತ್ತು ಹಲವು ಸಂಗತಿಗಳ ಇಂಟರ್ನೆಟ್ಗಳು ನಮ್ಮ ಯಶಸ್ಸನ್ನು ನಿಶ್ಚಯಿಸುತ್ತದೆ. ನಮ್ಮ ವೈಜ್ಞಾನಿಕ ಪರಿಸರ ವ್ಯವಸ್ಥೆಯು ನೇರವಾಗಿ  ಉದ್ಯಮಿಗಳು ಮತ್ತು ಹೊಸತನಗಾರರು ಬೆಳೆಸಿಕೊಳ್ಳುವ, ಪ್ರಸಾರಮಾಡುವ ಮತ್ತು ಸ್ವಾವಲಂಬಿ ಮಾಡುವ ನಿಟ್ಟಿನಲ್ಲಿ ಸಂಪರ್ಕಗೊಂಡಿರಬೇಕು.

ಸ್ನೇಹಿತರೇ, ನಮ್ಮ ಭೌಗೋಳಿಕ ವೈವಿಧ್ಯೆತೆಯ ಸಾಮಥ್ರ್ಯವು ಇಡೀ ವಿಶ್ವದ ಹೊಟ್ಟೆಕಿಚ್ಚಿಗೆ ಕಾರಣವಾಗಿದೆ. ಸರ್ಕಾರವು ಸ್ಟಾಂಡ್ ಅಪ್ ಇಂಡಿಯಾ, ಸ್ಟಾರ್ಟ್ ಅಪ್ ಇಂಡಿಯಾ, ಸ್ಕಿಲ್ ಡೆವಲಪ್ಮೆಂಟ್ ಮಿಷನ್ ಮತ್ತು ಪ್ರಧಾನ್ ಮಂತ್ರಿ ಮುದ್ರಾ ಸ್ಕೀಮ್ಗಳನ್ನು ಈ ಅಂಶಗಳನ್ನಿಟ್ಟುಕೊಂಡು ಸರ್ಕಾರವು ಮುನ್ನಡೆಸುತ್ತಿದೆ. ಈ ಸರಣಿಯಲ್ಲಿ ನಾವು ನಮ್ಮ ದೇಶದ 20 ಸಂಸ್ಥೆಗಳನ್ನು ಅಭಿವೃದ್ಧಿಪಡಿಸುವ ಪ್ರಯತ್ನಗಳನ್ನು ನಾವು ಮಾಡುತ್ತಿದ್ದೇವೆ. ಇದು ಆ ಸಂಸ್ಥೆಗಳು ವಿಶ್ವದಲ್ಲಿ ಗುರುತಿಸಿಕೊಳ್ಳುವ ಕೆಲಸ ಮಾಡಲು ಸಾಧ್ಯವಾಗಿಸುತ್ತದೆ ಅಲ್ಲದೇ ವಿಶ್ವ ಮಟ್ಟದ ಸಂಸ್ಥೆಗಳಾಗಿ ಗುರುತಿಸಿಕೊಳ್ಳಲು ಸಾಧ್ಯವಾಗಿಸುತ್ತದೆ. 

ಸರ್ಕಾರವು ಉನ್ನತ ಶಿಕ್ಷಣ ಕ್ಷೇತ್ರದಲ್ಲಿ ಕೆಲಸ ಮಾಡುವ ಖಾಸಗಿ ಮತ್ತು ಸಾರ್ವಜನಿಕ ವಲಯಗಳ ಸಂಸ್ಥೆಗಳನ್ನು ಶ್ರೇಷ್ಠ ಮಿಷನ್  ಹೊಂದಿರುವ ಸಂಸ್ಥೆಗಳ ಜತೆ ಜೋಡಿಸಲು ಆಹ್ವಾನಿಸುತ್ತಿದೆ. ನಾವು ನಿಯಮಗಳನ್ನು ಸುಧಾರಿಸಿ ಮತ್ತು ಕಾನೂನುಗಳನ್ನು ಬದಲಿಸಿ ಇದಕ್ಕೆ ಅವಕಾಶ ನೀಡುತ್ತಿದ್ದೇವೆ. ನಾವು ಈ ಉದ್ದೇಶಕ್ಕೆ ಆಯ್ಕೆ ಮಾಡಿಕೊಂಡಿರುವ ಸಾರ್ವಜನಿಕ ವಲಯದ ಸಂಸ್ಥೆಗಳಿಗೆ 1000 ಕೋಟಿ ರೂಪಾಯಿಗಳ ಆರ್ಥಿಕ ನೆರವನ್ನು ಕಲ್ಪಿಸಿದ್ದು ನಿರ್ದಿಷ್ಠ ಅವಧಿಯಲ್ಲಿ ಅದನ್ನು ಬಳಸಿಕೊಳ್ಳಬೇಕಿದೆ.

ಮೂಲ ವಿಜ್ಞಾನದ ಎಸ್ಎನ್ ಬೋಸ್ ರಾಷ್ಟ್ರೀಯ ಕೇಂದ್ರ ಮತ್ತು ಇತರೆ ಸಂಸ್ಥೆಗಳಿಗೆ ನಾನು ಕೇಳಿಕೊಳ್ಳುವುದೇನೆಂದರೆ ಆ ಸಂಸ್ಥೆಗಳನ್ನು ಅಗ್ರ ಶ್ರೇಯಾಂಕಿತ ಸಂಸ್ಥೆಗಳನ್ನಾಗಿ ರೂಪಿಸುವಲ್ಲಿ ಯೋಜಿಸಲಿ ಮತ್ತು ಆ ನಿಟ್ಟಿನಲ್ಲಿ ಕೆಲಸವನ್ನು ಮಾಡಲಿ.

ಇವತ್ತು ನಾನು ನಿಮ್ಮನ್ನು ಮತ್ತೊಂದು ವಿಚಾರದಲ್ಲಿ ಆಗ್ರಹಿಸುವುದೇನೆಂದರೆ ಯುವ ಸಮುದಾಯ ಮತ್ತು ವಿದ್ಯಾರ್ಥಿ ಸಮುದಾಯವು ಸಂಶೋಧನೆಯಲ್ಲಿ ತೊಡಗಿಸಿಕೊಳ್ಳುವ ಪ್ರೇರಣೆಯ ಪರಿಸರವನ್ನು ನಿಮ್ಮ ಸಂಸ್ಥೆಗಳಲ್ಲಿ ರೂಪಿಸಿ.

ಒಬ್ಬ ವಿಜ್ಞಾನಿಯು ಅವನ ಅಥವಾ ಅವಳ ಕೊಂಚ ಸಮಯವನ್ನು ಒಬ್ಬ ವಿದ್ಯಾರ್ಥಿಯ ವೈಜ್ಞಾನಿಕ ಸಂಶೋಧನಾತ್ಮಕ ಶಿಕ್ಷಣವನ್ನು ಉತ್ತೇಜಿಸುವ ಉದ್ದೇಶಕ್ಕೆ ಮೀಸಲಿಟ್ಟರೆ ಈ ದೇಶದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯಕ್ಕೆ ಅದು ನಾಂದಿಯಾಗಲಿದೆ. ಆಚಾರ್ಯ ಎಸ್.ಎನ್.ಬೋಸ್ ಅವರ 125ನೇ ಜನ್ಮ ಜಯಂತಿ ಸಂದರ್ಭದಲ್ಲಿ ಇಂಥದ್ದೊಂದು ಸಂಕಲ್ಪವನ್ನು ತೊಟ್ಟಿದ್ದೇ ಆದರೆ ಅದು ಅವರಿಗೆ ಸಲ್ಲಿಸಿದ ಮಹತ್ತರವಾದ ಗೌರವವಾಗಿದೆ.

ಸ್ನೇಹಿತರೇ, 2017ರಲ್ಲಿ 1.25 ಶತಕೋಟಿ ಜನರಾದ ನಾವು ಒಂದಾಗಿ ಒಂದು ಮಹತ್ತರವಾದ ಪ್ರತಿಜ್ಞೆಯನ್ನು ಮಾಡಿದ್ದೆವು. ಆ ಪ್ರತಿಜ್ಞೆ ಎನೆಂದರೆ ಹೊಸ ಭಾರತವನ್ನು ನಿರ್ಮಾಣಮಾಡುವುದಾಗಿತ್ತು. ಇದೀಗ ನಾವು 2022ರೊಳಗೆ ದೇಶದಲ್ಲಿ ಆಂತರಿಕ ದುರ್ಗುಣಗಳನ್ನು ತೊಡೆದುಹಾಕುವ ಪ್ರತಿಜ್ಞೆಯನ್ನು ಮಾಡೋಣ. ಈ ಪ್ರತಿಜ್ಞೆಯು ನಮ್ಮ ಸ್ವಾತಂತ್ರ್ಯ ಹೋರಾಟಗಾರರ ಕನಸನ್ನು ನನಸು ಮಾಡುತ್ತದೆ.

2018ನೇ ವರ್ಷವು ಗಂಭೀರ ಪ್ರತಿಜ್ಞೆಯನ್ನು ಅರಿತುಕೊಳ್ಳುವಂತಹ ಅತ್ಯಂತ ಮಹತ್ತರವಾದುದಾಗಿದೆ. ನಾವು ನಮ್ಮ ಸಂಪೂರ್ಣ ಶಕ್ತಿಯತ್ತ ನಮ್ಮ ಗಮನವನ್ನು ಕೇಂದ್ರೀಕರಿಸುವ ವರ್ಷ ಇದಾಗಿದೆ. ಈ ಪ್ರತಿಜ್ಞೆಗಾಗಿ ನಮ್ಮ ಸಂಪೂರ್ಣ ಪ್ರತಿಜ್ಞೆಯನ್ನು ಅರಿತುಕೊಳ್ಳಬೇಕಿದೆ.

ದೇಶದ ಪ್ರತಿಯೊಬ್ಬ ವ್ಯಕ್ತಿಯೂ, ಪ್ರತಿಯೊಂದು ಕುಟುಂಬವೂ, ಪ್ರತಿಯೊಂದು ಸಂಸ್ಥೆಯೂ, ಪ್ರತಿಯೊಂದು ವಿಭಾಗವೂ ಮತ್ತು ಪ್ರತಿಯೊಂದು ಸಚಿವಾಲಯವೂ ಈ ಪ್ರತಿಜ್ಞೆಗಾಗಿ ತನ್ನದೇ ಆದ ಕೊಡುಗೆಯನ್ನು ನೀಡಬೇಕಿದೆ. ಒಂದು ರೈಲು ನಿಲ್ದಾಣದಿಂದ ಹೊರಟ ಐದತ್ತು ನಿಮಿಷದಲ್ಲೇ ತನ್ನ ವೇಗವನ್ನು ಪಡೆದುಕೊಳ್ಳುತ್ತದೆ ಅದೇ ರೀತಿ 2018ರ ವರ್ಷವು ನಮ್ಮ ಅತಿವೇಗವನ್ನು ಗತಿಸಿಕೊಳ್ಳುವುದಾಗಿದೆ.

ನಮ್ಮ ದೇಶದ ವೈಜ್ಞಾನಿಕ ಸಮುದಾಯ ಮತ್ತು ವಿಜ್ಞಾನ ಹಾಗೂ ತಾಂತ್ರಿಕತೆಯ ಜತೆ ಜೋಡಿಸಿಕೊಂಡಿರುವ ಪ್ರತಿಯೊಬ್ಬ ವ್ಯಕ್ತಿಯೂ ಹೊಸ ಭಾರತವನ್ನು ನಿರ್ಮಾಣ ಮಾಡುವ ಅನ್ವೇಷಣೆ ಮತ್ತು ಸಂಶೋಧನೆಯ ಮೇಲೆ ತಮ್ಮ ಗಮನವನ್ನು ಕೇಂದ್ರೀಕರಿಸಬೇಕಿದೆ.

ನಿಮ್ಮ ಅನ್ವೇಷಣೆಗಳು ದೇಶದ ಬಡ ಮತ್ತು ಮಧ್ಯಮ ವರ್ಗದ ಜನರನ್ನು ಶಕ್ತಿಯುತಗೊಳಿಸುತ್ತವೆ. ಅಷ್ಟೇ ಅಲ್ಲದೇ ದೇಶವನ್ನೂ ಬಲವರ್ಧನೆಗೊಳಿಸುತ್ತದೆ. ಅದು ಆಧಾರ್ ಆಗಲಿ, ಪ್ರಯೋಜನಗಳ ನೇರ ವರ್ಗಾವಣೆಯಾಗಲಿ ಅಥವಾ ಮಣ್ಣು ಆರೋಗ್ಯ ಕಾರ್ಡ್ ಅಥವಾ ಉಪಗ್ರಹ ಅಥವಾ ಡ್ರೋನ್ಗಳ ಮೂಲಕ ಯೋಜನೆಗಳ ನಿರ್ವಹಣೆ ಇದೆಲ್ಲವೂ ನೀವು ಕಲ್ಪಿಸಿದ ಪ್ರಯೋಜನೆಗಳಿಂದಲೇ ಆಗುತ್ತಿದೆ.

ಉದ್ಯೋಗ ಕೇಂದ್ರಿತ ಆರ್ಥಿಕತೆಯನ್ನು ಉತ್ತೇಜಿಸಲು ವೈಜ್ಞಾನಿಕ ಸಂಸ್ಥೆಗಳು ಭಾರೀ ಕೊಡುಗೆಯನ್ನು ನೀಡಿದೆ. ಗ್ರಾಮೀಣ ಭಾಗದ ಅಗತ್ಯಗಳನ್ನು ಪೂರೈಸಲು ತಂತ್ರಜ್ಞಾನದ ಅಭಿವೃದ್ಧಿ ಹಾಗೂ ಹಳ್ಳಿಗಳಿಗೆ ತಂತ್ರಜ್ಞಾನವನ್ನು ಪೂರೈಸಲು ನಿಮ್ಮ ಪಾತ್ರವು ಮಹತ್ತರವಾದುದು.

ಸ್ನೇಹಿತರೇ, ವಸತಿ, ಕುಡಿಯುವ ನೀರು, ಇಂಧನ, ರೈಲ್ವೆ, ನದಿಗಳು, ರಸ್ತೆಗಳು, ವಿಮಾನ ನಿಲ್ದಾಣಗಳು, ನೀರಾವರಿ, ಸಂವಹನ ಮತ್ತು ಡಿಜಿಟಲ್ ಮೂಲಸೌಕರ್ಯ ಕ್ಷೇತ್ರದ ಹೊಸ ಅನ್ವೇಷಣೆಗಳು ನಿಮಗಾಗಿ ಕಾಯುತ್ತಿವೆ.

ಸರ್ಕಾರವು ನಿಮ್ಮ ಜತೆ ಇದೆ, ಸಂಪನ್ಮೂಲಗಳು ನಿಮ್ಮೊಂದಿಗಿವೆ ಮತ್ತು ನೀವು ಹೊಂದಿರುವ ಸಾಮಥ್ರ್ಯಗಳು ನಂತರದ್ದು ಹೀಗಾಗಿ ಯಶಸ್ಸು ಎನ್ನುವುದು ನಿಮ್ಮದು. ನೀವು ಯಶಸ್ಸು ಕಂಡರೆ ಇಡೀ ದೇಶವು ಯಶಸ್ಸು ಕಾಣುತ್ತದೆ. ನಿಮ್ಮ ಪ್ರತಿಜ್ಞೆಗಳು ಅರಿವಿಗೆ ಬಂದರೆ  ದೇಶದ ಪ್ರತಿಜ್ಞೆಗಳು ತಯಾರಿಸಲ್ಪಡುತ್ತವೆ.

ಸ್ನೇಹಿತರೇ, ಒಂದು ಉದ್ದೇಶವನ್ನು ಪೂರೈಸಲಾಗಿಯೇ ಉದ್ಘಾಟನೆಯಾಗುತ್ತಿದೆ. ನೀವು ಕಾರ್ಯವಿಧಾನವನ್ನು ರೂಪಿಸಬೇಕಷ್ಟೇ.  ಇದು ಅತ್ಯಂತ ಉತ್ಸಾಹಿ ಮತ್ತು ಮಹತ್ತರವಾದ ಕಾರ್ಯಕ್ರಮ ಎನ್ನುವುದು ನನಗೆ ಸಂತೋಷದ ವಿಚಾರವಾಗಿದೆ.

ದೇಶದ ಶಾಲೆ ಮತ್ತು ಕಾಲೇಜುಗಳಲ್ಲಿ ಇರುವ ನೂರಕ್ಕೂ ಹೆಚ್ಚು ಪರಿಣಿತ ಬೋಧಕರನ್ನು ಆಯ್ಕೆ ಮಾಡಿಕೊಂಡು ಪ್ಲಾನ್ ಮಾಡಲಾಗಿದೆ. ಹಲವು ರಾಷ್ಟ್ರೀಯ ಮತ್ತು ಅತಾರಾಷ್ಟ್ರೀಯ ವಿಚಾರಸಂಕಿರಣಗಳು, ವೈಜ್ಞಾನಿಕ ಸವಾಲುಗಳಿಗೆ 125 ಪರಿಹಾರಗಳನ್ನು  ಕಂಡುಕೊಳ್ಳುವ ಸ್ಪರ್ಧೆಯನ್ನು ಏರ್ಪಡಿಸುವುದು ನಮ್ಮ ಉದ್ದೇಶವಾಗಿದೆ.

ಅದ್ಭುತವಾದ ಆಲೋಚನೆಗಳು ಸಮಯ ಮತ್ತು ಅವುಗಳನ್ನು ಉತ್ತೇಜಿಸುವ ಪ್ರಸ್ತುತತೆಯನ್ನು ಅವಲಂಬಿಸಿವೆ. ಇವತ್ತಿಗೂ ಆಚಾರ್ಯ ಬೋಸ್ ಅವರ ಕೆಲಸಗಳು ವಿಜ್ಞಾನಿಗಳನ್ನು ಉತ್ತೇಜಿಸುವುದೇ ಆಗಿದೆ.

ವೈಜ್ಞಾನಿಕ ಸಂಶೋಧನೆಗಳ ಉದಯೋನ್ಮುಖ ಗಡಿಗಳನ್ನು ಯಶಸ್ಸುಗೊಳಿಸುವ ಪ್ರಯತ್ನದಲ್ಲಿ ನಾನು ನಿಮಗೆಲ್ಲರಿಗೂ ಹಾರ್ದಿಕ ಶುಭಾಶಯವನ್ನು ಕೋರುತ್ತೇನೆ. ನಿಮ್ಮೆಲ್ಲರ ದಣಿವರಿಯದ ಪ್ರಯತ್ನಗಳು ದೇಶವನ್ನು ಸದಾ ಉತ್ತಮ ಮತ್ತು ಚೇತೋಹಾರಿ ಭವಿಷ್ಯ ಹೊಂದುವಂತೆ ಮಾಡುತ್ತವೆ.

ನಿಮಗೆಲ್ಲರಿಗೂ ಎಲ್ಲವನ್ನೂ ಈಡೇರಿಸುವ ಮತ್ತು ಸೃಜನಶೀಲ ಹೊಸ ವರ್ಷದ ಶುಭವನ್ನು ಕೋರುತ್ತೇನೆ. 

ಜೈ ಹಿಂದ್..!

 
Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
India’s Biz Activity Surges To 3-month High In Nov: Report

Media Coverage

India’s Biz Activity Surges To 3-month High In Nov: Report
NM on the go

Nm on the go

Always be the first to hear from the PM. Get the App Now!
...
Text of PM’s address at the Odisha Parba
November 24, 2024
Delighted to take part in the Odisha Parba in Delhi, the state plays a pivotal role in India's growth and is blessed with cultural heritage admired across the country and the world: PM
The culture of Odisha has greatly strengthened the spirit of 'Ek Bharat Shreshtha Bharat', in which the sons and daughters of the state have made huge contributions: PM
We can see many examples of the contribution of Oriya literature to the cultural prosperity of India: PM
Odisha's cultural richness, architecture and science have always been special, We have to constantly take innovative steps to take every identity of this place to the world: PM
We are working fast in every sector for the development of Odisha,it has immense possibilities of port based industrial development: PM
Odisha is India's mining and metal powerhouse making it’s position very strong in the steel, aluminium and energy sectors: PM
Our government is committed to promote ease of doing business in Odisha: PM
Today Odisha has its own vision and roadmap, now investment will be encouraged and new employment opportunities will be created: PM

जय जगन्नाथ!

जय जगन्नाथ!

केंद्रीय मंत्रिमंडल के मेरे सहयोगी श्रीमान धर्मेन्द्र प्रधान जी, अश्विनी वैष्णव जी, उड़िया समाज संस्था के अध्यक्ष श्री सिद्धार्थ प्रधान जी, उड़िया समाज के अन्य अधिकारी, ओडिशा के सभी कलाकार, अन्य महानुभाव, देवियों और सज्जनों।

ओडिशा र सबू भाईओ भउणी मानंकु मोर नमस्कार, एबंग जुहार। ओड़िया संस्कृति के महाकुंभ ‘ओड़िशा पर्व 2024’ कू आसी मँ गर्बित। आपण मानंकु भेटी मूं बहुत आनंदित।

मैं आप सबको और ओडिशा के सभी लोगों को ओडिशा पर्व की बहुत-बहुत बधाई देता हूँ। इस साल स्वभाव कवि गंगाधर मेहेर की पुण्यतिथि का शताब्दी वर्ष भी है। मैं इस अवसर पर उनका पुण्य स्मरण करता हूं, उन्हें श्रद्धांजलि देता हूँ। मैं भक्त दासिआ बाउरी जी, भक्त सालबेग जी, उड़िया भागवत की रचना करने वाले श्री जगन्नाथ दास जी को भी आदरपूर्वक नमन करता हूं।

ओडिशा निजर सांस्कृतिक विविधता द्वारा भारतकु जीबन्त रखिबारे बहुत बड़ भूमिका प्रतिपादन करिछि।

साथियों,

ओडिशा हमेशा से संतों और विद्वानों की धरती रही है। सरल महाभारत, उड़िया भागवत...हमारे धर्मग्रन्थों को जिस तरह यहाँ के विद्वानों ने लोकभाषा में घर-घर पहुंचाया, जिस तरह ऋषियों के विचारों से जन-जन को जोड़ा....उसने भारत की सांस्कृतिक समृद्धि में बहुत बड़ी भूमिका निभाई है। उड़िया भाषा में महाप्रभु जगन्नाथ जी से जुड़ा कितना बड़ा साहित्य है। मुझे भी उनकी एक गाथा हमेशा याद रहती है। महाप्रभु अपने श्री मंदिर से बाहर आए थे और उन्होंने स्वयं युद्ध का नेतृत्व किया था। तब युद्धभूमि की ओर जाते समय महाप्रभु श्री जगन्नाथ ने अपनी भक्त ‘माणिका गौउडुणी’ के हाथों से दही खाई थी। ये गाथा हमें बहुत कुछ सिखाती है। ये हमें सिखाती है कि हम नेक नीयत से काम करें, तो उस काम का नेतृत्व खुद ईश्वर करते हैं। हमेशा, हर समय, हर हालात में ये सोचने की जरूरत नहीं है कि हम अकेले हैं, हम हमेशा ‘प्लस वन’ होते हैं, प्रभु हमारे साथ होते हैं, ईश्वर हमेशा हमारे साथ होते हैं।

साथियों,

ओडिशा के संत कवि भीम भोई ने कहा था- मो जीवन पछे नर्के पडिथाउ जगत उद्धार हेउ। भाव ये कि मुझे चाहे जितने ही दुख क्यों ना उठाने पड़ें...लेकिन जगत का उद्धार हो। यही ओडिशा की संस्कृति भी है। ओडिशा सबु जुगरे समग्र राष्ट्र एबं पूरा मानब समाज र सेबा करिछी। यहाँ पुरी धाम ने ‘एक भारत श्रेष्ठ भारत’ की भावना को मजबूत बनाया। ओडिशा की वीर संतानों ने आज़ादी की लड़ाई में भी बढ़-चढ़कर देश को दिशा दिखाई थी। पाइका क्रांति के शहीदों का ऋण, हम कभी नहीं चुका सकते। ये मेरी सरकार का सौभाग्य है कि उसे पाइका क्रांति पर स्मारक डाक टिकट और सिक्का जारी करने का अवसर मिला था।

साथियों,

उत्कल केशरी हरे कृष्ण मेहताब जी के योगदान को भी इस समय पूरा देश याद कर रहा है। हम व्यापक स्तर पर उनकी 125वीं जयंती मना रहे हैं। अतीत से लेकर आज तक, ओडिशा ने देश को कितना सक्षम नेतृत्व दिया है, ये भी हमारे सामने है। आज ओडिशा की बेटी...आदिवासी समुदाय की द्रौपदी मुर्मू जी भारत की राष्ट्रपति हैं। ये हम सभी के लिए बहुत ही गर्व की बात है। उनकी प्रेरणा से आज भारत में आदिवासी कल्याण की हजारों करोड़ रुपए की योजनाएं शुरू हुई हैं, और ये योजनाएं सिर्फ ओडिशा के ही नहीं बल्कि पूरे भारत के आदिवासी समाज का हित कर रही हैं।

साथियों,

ओडिशा, माता सुभद्रा के रूप में नारीशक्ति और उसके सामर्थ्य की धरती है। ओडिशा तभी आगे बढ़ेगा, जब ओडिशा की महिलाएं आगे बढ़ेंगी। इसीलिए, कुछ ही दिन पहले मैंने ओडिशा की अपनी माताओं-बहनों के लिए सुभद्रा योजना का शुभारंभ किया था। इसका बहुत बड़ा लाभ ओडिशा की महिलाओं को मिलेगा। उत्कलर एही महान सुपुत्र मानंकर बिसयरे देश जाणू, एबं सेमानंक जीबन रु प्रेरणा नेउ, एथी निमन्ते एपरी आयौजनर बहुत अधिक गुरुत्व रहिछि ।

साथियों,

इसी उत्कल ने भारत के समुद्री सामर्थ्य को नया विस्तार दिया था। कल ही ओडिशा में बाली जात्रा का समापन हुआ है। इस बार भी 15 नवंबर को कार्तिक पूर्णिमा के दिन से कटक में महानदी के तट पर इसका भव्य आयोजन हो रहा था। बाली जात्रा प्रतीक है कि भारत का, ओडिशा का सामुद्रिक सामर्थ्य क्या था। सैकड़ों वर्ष पहले जब आज जैसी टेक्नोलॉजी नहीं थी, तब भी यहां के नाविकों ने समुद्र को पार करने का साहस दिखाया। हमारे यहां के व्यापारी जहाजों से इंडोनेशिया के बाली, सुमात्रा, जावा जैसे स्थानो की यात्राएं करते थे। इन यात्राओं के माध्यम से व्यापार भी हुआ और संस्कृति भी एक जगह से दूसरी जगह पहुंची। आजी विकसित भारतर संकल्पर सिद्धि निमन्ते ओडिशार सामुद्रिक शक्तिर महत्वपूर्ण भूमिका अछि।

साथियों,

ओडिशा को नई ऊंचाई तक ले जाने के लिए 10 साल से चल रहे अनवरत प्रयास....आज ओडिशा के लिए नए भविष्य की उम्मीद बन रहे हैं। 2024 में ओडिशावासियों के अभूतपूर्व आशीर्वाद ने इस उम्मीद को नया हौसला दिया है। हमने बड़े सपने देखे हैं, बड़े लक्ष्य तय किए हैं। 2036 में ओडिशा, राज्य-स्थापना का शताब्दी वर्ष मनाएगा। हमारा प्रयास है कि ओडिशा की गिनती देश के सशक्त, समृद्ध और तेजी से आगे बढ़ने वाले राज्यों में हो।

साथियों,

एक समय था, जब भारत के पूर्वी हिस्से को...ओडिशा जैसे राज्यों को पिछड़ा कहा जाता था। लेकिन मैं भारत के पूर्वी हिस्से को देश के विकास का ग्रोथ इंजन मानता हूं। इसलिए हमने पूर्वी भारत के विकास को अपनी प्राथमिकता बनाया है। आज पूरे पूर्वी भारत में कनेक्टिविटी के काम हों, स्वास्थ्य के काम हों, शिक्षा के काम हों, सभी में तेजी लाई गई है। 10 साल पहले ओडिशा को केंद्र सरकार जितना बजट देती थी, आज ओडिशा को तीन गुना ज्यादा बजट मिल रहा है। इस साल ओडिशा के विकास के लिए पिछले साल की तुलना में 30 प्रतिशत ज्यादा बजट दिया गया है। हम ओडिशा के विकास के लिए हर सेक्टर में तेजी से काम कर रहे हैं।

साथियों,

ओडिशा में पोर्ट आधारित औद्योगिक विकास की अपार संभावनाएं हैं। इसलिए धामरा, गोपालपुर, अस्तारंगा, पलुर, और सुवर्णरेखा पोर्ट्स का विकास करके यहां व्यापार को बढ़ावा दिया जाएगा। ओडिशा भारत का mining और metal powerhouse भी है। इससे स्टील, एल्युमिनियम और एनर्जी सेक्टर में ओडिशा की स्थिति काफी मजबूत हो जाती है। इन सेक्टरों पर फोकस करके ओडिशा में समृद्धि के नए दरवाजे खोले जा सकते हैं।

साथियों,

ओडिशा की धरती पर काजू, जूट, कपास, हल्दी और तिलहन की पैदावार बहुतायत में होती है। हमारा प्रयास है कि इन उत्पादों की पहुंच बड़े बाजारों तक हो और उसका फायदा हमारे किसान भाई-बहनों को मिले। ओडिशा की सी-फूड प्रोसेसिंग इंडस्ट्री में भी विस्तार की काफी संभावनाएं हैं। हमारा प्रयास है कि ओडिशा सी-फूड एक ऐसा ब्रांड बने, जिसकी मांग ग्लोबल मार्केट में हो।

साथियों,

हमारा प्रयास है कि ओडिशा निवेश करने वालों की पसंदीदा जगहों में से एक हो। हमारी सरकार ओडिशा में इज ऑफ डूइंग बिजनेस को बढ़ावा देने के लिए प्रतिबद्ध है। उत्कर्ष उत्कल के माध्यम से निवेश को बढ़ाया जा रहा है। ओडिशा में नई सरकार बनते ही, पहले 100 दिनों के भीतर-भीतर, 45 हजार करोड़ रुपए के निवेश को मंजूरी मिली है। आज ओडिशा के पास अपना विज़न भी है, और रोडमैप भी है। अब यहाँ निवेश को भी बढ़ावा मिलेगा, और रोजगार के नए अवसर भी पैदा होंगे। मैं इन प्रयासों के लिए मुख्यमंत्री श्रीमान मोहन चरण मांझी जी और उनकी टीम को बहुत-बहुत बधाई देता हूं।

साथियों,

ओडिशा के सामर्थ्य का सही दिशा में उपयोग करके उसे विकास की नई ऊंचाइयों पर पहुंचाया जा सकता है। मैं मानता हूं, ओडिशा को उसकी strategic location का बहुत बड़ा फायदा मिल सकता है। यहां से घरेलू और अंतर्राष्ट्रीय बाजार तक पहुंचना आसान है। पूर्व और दक्षिण-पूर्व एशिया के लिए ओडिशा व्यापार का एक महत्वपूर्ण हब है। Global value chains में ओडिशा की अहमियत आने वाले समय में और बढ़ेगी। हमारी सरकार राज्य से export बढ़ाने के लक्ष्य पर भी काम कर रही है।

साथियों,

ओडिशा में urbanization को बढ़ावा देने की अपार संभावनाएं हैं। हमारी सरकार इस दिशा में ठोस कदम उठा रही है। हम ज्यादा संख्या में dynamic और well-connected cities के निर्माण के लिए प्रतिबद्ध हैं। हम ओडिशा के टियर टू शहरों में भी नई संभावनाएं बनाने का भरपूर हम प्रयास कर रहे हैं। खासतौर पर पश्चिम ओडिशा के इलाकों में जो जिले हैं, वहाँ नए इंफ्रास्ट्रक्चर से नए अवसर पैदा होंगे।

साथियों,

हायर एजुकेशन के क्षेत्र में ओडिशा देशभर के छात्रों के लिए एक नई उम्मीद की तरह है। यहां कई राष्ट्रीय और अंतर्राष्ट्रीय इंस्टीट्यूट हैं, जो राज्य को एजुकेशन सेक्टर में लीड लेने के लिए प्रेरित करते हैं। इन कोशिशों से राज्य में स्टार्टअप्स इकोसिस्टम को भी बढ़ावा मिल रहा है।

साथियों,

ओडिशा अपनी सांस्कृतिक समृद्धि के कारण हमेशा से ख़ास रहा है। ओडिशा की विधाएँ हर किसी को सम्मोहित करती है, हर किसी को प्रेरित करती हैं। यहाँ का ओड़िशी नृत्य हो...ओडिशा की पेंटिंग्स हों...यहाँ जितनी जीवंतता पट्टचित्रों में देखने को मिलती है...उतनी ही बेमिसाल हमारे आदिवासी कला की प्रतीक सौरा चित्रकारी भी होती है। संबलपुरी, बोमकाई और कोटपाद बुनकरों की कारीगरी भी हमें ओडिशा में देखने को मिलती है। हम इस कला और कारीगरी का जितना प्रसार करेंगे, उतना ही इस कला को संरक्षित करने वाले उड़िया लोगों को सम्मान मिलेगा।

साथियों,

हमारे ओडिशा के पास वास्तु और विज्ञान की भी इतनी बड़ी धरोहर है। कोणार्क का सूर्य मंदिर… इसकी विशालता, इसका विज्ञान...लिंगराज और मुक्तेश्वर जैसे पुरातन मंदिरों का वास्तु.....ये हर किसी को आश्चर्यचकित करता है। आज लोग जब इन्हें देखते हैं...तो सोचने पर मजबूर हो जाते हैं कि सैकड़ों साल पहले भी ओडिशा के लोग विज्ञान में इतने आगे थे।

साथियों,

ओडिशा, पर्यटन की दृष्टि से अपार संभावनाओं की धरती है। हमें इन संभावनाओं को धरातल पर उतारने के लिए कई आयामों में काम करना है। आप देख रहे हैं, आज ओडिशा के साथ-साथ देश में भी ऐसी सरकार है जो ओडिशा की धरोहरों का, उसकी पहचान का सम्मान करती है। आपने देखा होगा, पिछले साल हमारे यहाँ G-20 का सम्मेलन हुआ था। हमने G-20 के दौरान इतने सारे देशों के राष्ट्राध्यक्षों और राजनयिकों के सामने...सूर्यमंदिर की ही भव्य तस्वीर को प्रस्तुत किया था। मुझे खुशी है कि महाप्रभु जगन्नाथ मंदिर परिसर के सभी चार द्वार खुल चुके हैं। मंदिर का रत्न भंडार भी खोल दिया गया है।

साथियों,

हमें ओडिशा की हर पहचान को दुनिया को बताने के लिए भी और भी इनोवेटिव कदम उठाने हैं। जैसे....हम बाली जात्रा को और पॉपुलर बनाने के लिए बाली जात्रा दिवस घोषित कर सकते हैं, उसका अंतरराष्ट्रीय मंच पर प्रचार कर सकते हैं। हम ओडिशी नृत्य जैसी कलाओं के लिए ओडिशी दिवस मनाने की शुरुआत कर सकते हैं। विभिन्न आदिवासी धरोहरों को सेलिब्रेट करने के लिए भी नई परम्पराएँ शुरू की जा सकती हैं। इसके लिए स्कूल और कॉलेजों में विशेष आयोजन किए जा सकते हैं। इससे लोगों में जागरूकता आएगी, यहाँ पर्यटन और लघु उद्योगों से जुड़े अवसर बढ़ेंगे। कुछ ही दिनों बाद प्रवासी भारतीय सम्मेलन भी, विश्व भर के लोग इस बार ओडिशा में, भुवनेश्वर में आने वाले हैं। प्रवासी भारतीय दिवस पहली बार ओडिशा में हो रहा है। ये सम्मेलन भी ओडिशा के लिए बहुत बड़ा अवसर बनने वाला है।

साथियों,

कई जगह देखा गया है बदलते समय के साथ, लोग अपनी मातृभाषा और संस्कृति को भी भूल जाते हैं। लेकिन मैंने देखा है...उड़िया समाज, चाहे जहां भी रहे, अपनी संस्कृति, अपनी भाषा...अपने पर्व-त्योहारों को लेकर हमेशा से बहुत उत्साहित रहा है। मातृभाषा और संस्कृति की शक्ति कैसे हमें अपनी जमीन से जोड़े रखती है...ये मैंने कुछ दिन पहले ही दक्षिण अमेरिका के देश गयाना में भी देखा। करीब दो सौ साल पहले भारत से सैकड़ों मजदूर गए...लेकिन वो अपने साथ रामचरित मानस ले गए...राम का नाम ले गए...इससे आज भी उनका नाता भारत भूमि से जुड़ा हुआ है। अपनी विरासत को इसी तरह सहेज कर रखते हुए जब विकास होता है...तो उसका लाभ हर किसी तक पहुंचता है। इसी तरह हम ओडिशा को भी नई ऊचाई पर पहुंचा सकते हैं।

साथियों,

आज के आधुनिक युग में हमें आधुनिक बदलावों को आत्मसात भी करना है, और अपनी जड़ों को भी मजबूत बनाना है। ओडिशा पर्व जैसे आयोजन इसका एक माध्यम बन सकते हैं। मैं चाहूँगा, आने वाले वर्षों में इस आयोजन का और ज्यादा विस्तार हो, ये पर्व केवल दिल्ली तक सीमित न रहे। ज्यादा से ज्यादा लोग इससे जुड़ें, स्कूल कॉलेजों का participation भी बढ़े, हमें इसके लिए प्रयास करने चाहिए। दिल्ली में बाकी राज्यों के लोग भी यहाँ आयें, ओडिशा को और करीबी से जानें, ये भी जरूरी है। मुझे भरोसा है, आने वाले समय में इस पर्व के रंग ओडिशा और देश के कोने-कोने तक पहुंचेंगे, ये जनभागीदारी का एक बहुत बड़ा प्रभावी मंच बनेगा। इसी भावना के साथ, मैं एक बार फिर आप सभी को बधाई देता हूं।

आप सबका बहुत-बहुत धन्यवाद।

जय जगन्नाथ!