In one way the correct meaning of PSE is - Profit and Social benefit generating Enterprise: PM Modi at CPSE Conclave
For public and private sector, the formula of success remains same - the 3 Is, which mean Incentives, Imagination and Institution Building: PM
I believe that Idealism and Ideology are not enough for economic decision making, they need to be replaced with pragmatism and practicality, says the PM
PSEs can contribute towards the formation of New India through 5 Ps - Performance + Process + Persona + Procurement and Prepare: PM
To date, we have been treating PSEs as navratana companies. But now, its time to think beyond it. Can we think about making New India jewel, asks PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ನವದೆಹಲಿಯ ವಿಜ್ಞಾನಭವನದಲ್ಲಿ ನಡೆದ ಸಿಪಿಎಸ್ಇ ಸಮಾವೇಶದಲ್ಲಿ ಪಾಲ್ಗೊಂಡಿದ್ದರು. 
 
ಕಾರ್ಪೊರೇಟ್ ಆಡಳಿತ, ಮಾನವ ಸಂಪನ್ಮೂಲ ನಿರ್ವಹಣೆ, ಹಣಕಾಸು ಮರು ಹೊಂದಾಣಿಕೆ, ಆವಿಷ್ಕಾರ ಮತ್ತು ತಂತ್ರಜ್ಞಾನ ಹಾಗೂ ನವಭಾರತಕ್ಕೆ ಮುನ್ನೋಟ 2022 ಮತ್ತಿತರ ವಿಷಯಗಳ ಬಗ್ಗೆ ಪ್ರಧಾನಮಂತ್ರಿಗಳಿಗೆ ಪ್ರಾತ್ಯಕ್ಷಿಕೆಗಳ ಮೂಲಕ ವಿವರಿಸಲಾಯಿತು. 
 
 
ಸಭಿಕರನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿಗಳು, ಈ ಸಮಾವೇಶ ಸಾರ್ವಜನಿಕ ವಲಯದಲ್ಲಿ ಹೊಸ ಅಧ್ಯಾಯ ಆರಂಭಕ್ಕೆ ಮುನ್ನಡಿ ಬರೆಯುತ್ತಿದೆ ಎಂದು ಬಣ್ಣಿಸಿದರು. 
 
ಪ್ರಾತ್ಯಕ್ಷಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ಪ್ರಧಾನಮಂತ್ರಿಗಳು, ಸಾರ್ವಜನಿಕ ವಲಯದ ಉದ್ದಿಮೆಗಳಿಗೆ ಕಾರ್ಯಾಚರಣೆ ಸ್ವಾತಂತ್ರ್ಯವನ್ನು ಕೇಂದ್ರ ಸರ್ಕಾರ ನೀಡಿದೆ, ಇದರಿಂದಾಗಿ ಅವುಗಳು ತಮ್ಮ ಸಾಧನೆಗಳನ್ನು ಉತ್ತಮಗೊಳಿಸಿಕೊಳ್ಳಬಹುದಾಗಿದೆ ಎಂದರು. ಸ್ವಾತಂತ್ರ್ಯಾನಂತರ ರಾಷ್ಟ್ರ ನಿರ್ಮಾಣ ಹಾಗೂ ದೇಶದ ಆರ್ಥಿಕತೆಗೆ ಸಾರ್ವಜನಿಕ ವಲಯದ ಉದ್ದಿಮೆಗಳು ಮಹತ್ವದ ಕೊಡುಗೆಯನ್ನು ನೀಡಿವೆ ಎಂದು ಅವರು ಹೇಳಿದರು. 
ಸಾರ್ವಜನಿಕ ವಲಯದ ಉದ್ದಿಮೆಗಳು ಲಾಭಗಳಿಸುವುದು ಮತ್ತು ಸಾಮಾಜಿಕ ಅನುಕೂಲಗಳನ್ನು ಸೃಷ್ಟಿಸುವುದು ಎರಡೂ ಕೂಡ ಅತಿಮುಖ್ಯ ಎಂದು ಅವರು ಹೇಳಿದರು. ಸಾರ್ವಜನಿಕ ವಲಯದ ಉದ್ದಿಮೆಗಳ ನೌಕರರ ಕೊಡುಗೆಯನ್ನು ಪ್ರಶಂಸಿಸಿದ ಪ್ರಧಾನಮಂತ್ರಿಗಳು, ವಿದ್ಯುತ್ ಸಂಪರ್ಕವಿಲ್ಲದ ಗ್ರಾಮಗಳಿಗೆ ವಿದ್ಯುತ್ ಸೌಲಭ್ಯ ಕಲ್ಪಿಸುವುದು ಮತ್ತು ಬಡಕುಟುಂಬಗಳಿಗೆ ಅಡುಗೆ ಅನಿಲ(ಎಲ್ ಪಿ ಜಿ) ಸಂಪರ್ಕಗಳನ್ನು ಕಲ್ಪಿಸುವ ಸರ್ಕಾರದ ಪ್ರಮುಖ ಕೆಲಸಗಳು ಸಾರ್ವಜನಿಕ ವಲಯದ ಸಿಬ್ಬಂದಿಗಳ ಕಠಿಣ ಪರಿಶ್ರಮವಿಲ್ಲದೆ ಈಡೇರುತ್ತಿರಲಿಲ್ಲ ಎಂದರು. 
 
ಹಿಂದಿನ ಸಾಧನೆಗಳನ್ನು ನೆಚ್ಚಿಕೊಂಡು ಕುಳಿತುಕೊಂಡರೆ ಸಾಲದು, ಅದರ ಜತೆಗೆ ಮುಂಬರುತ್ತಿರುವ ಸವಾಲುಗಳನ್ನು ಎದುರಿಸುವುದೂ ಸಹ ಅಷ್ಟೇ ಪ್ರಮುಖವಾದುದು ಎಂದು ಪ್ರಧಾನಿ ಹೇಳಿದರು. ಉದ್ಯಮಶೀಲತೆ ಮತ್ತು ಆವಿಷ್ಕಾರ 21ನೇ ಶತಮಾನದ ಮಾರ್ಗದರ್ಶಿ ಸೂತ್ರವಾಗಬೇಕು ಎಂದು ಅವರು ಹೇಳಿದರು. ಪ್ರೋತ್ಸಾಹಕಗಳು, ಕಲ್ಪನೆ ಮತ್ತು ಸಂಸ್ಥೆಗಳ ಅಭಿವೃದ್ಧಿ ಈ ಮೂರು ಯಶಸ್ಸಿಗೆ ಅತ್ಯಂತ ಮುಖ್ಯವಾದವು ಎಂದು ಪ್ರಧಾನಿ ಹೇಳಿದರು. 
 
ಬದಲಾಗುತ್ತಿರುವ ತಂತ್ರಜ್ಞಾನ ಮತ್ತು ಪ್ರಕ್ರಿಯೆಗಳನ್ನು ಅಳವಡಿಸಿಕೊಳ್ಳುವ ಮೂಲಕ ನವಭಾರತ ನಿರ್ಮಾಣಕ್ಕೆ ಸಾರ್ವಜನಿಕ ವಲಯದ ಉದ್ದಿಮೆಗಳು ಸಹಕರಿಸಬೇಕು ಎಂದು ಪ್ರಧಾನಿ ಕರೆ ನೀಡಿದರು. ಅದಕ್ಕಾಗಿ ಅವರು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ 5-ಪಿ ಸೂತ್ರ – ಸಾಧನೆ(ಫರ್ ಫಾರ್ಮೆನ್ಸ್), ಪ್ರಕ್ರಿಯೆ(ಪ್ರೋಸೆಸ್), ವ್ಯಕ್ತಿತ್ವ(ಪರ್ಸೋನಾ), ಖರೀದಿ(ಪ್ರಕ್ಯೂರ್ ಮೆಂಟ್) ಮತ್ತು ಸಿದ್ಧತೆ(ಪ್ರಿಪೇರ್) ಅಗತ್ಯ ಎಂದರು. 
 
ಈ ಅಂಶಗಳನ್ನು ವಿವರವಾಗಿ ತಿಳಿಸಿದ ಅವರು, ಕಾರ್ಯಾಚರಣೆ ಮತ್ತು ಆರ್ಥಿಕ ಸಾಧನೆಯನ್ನು ಸುಧಾರಿಸಿಕೊಳ್ಳಬೇಕು; ಪ್ರಕ್ರಿಯೆಯಲ್ಲಿ ಪಾರದರ್ಶಕತೆ ಮತ್ತು ಹೊಣೆಗಾರಿಕೆ ಇರಬೇಕು; ಜೆಮ್ ಫ್ಲಾಟ್ ಫಾರ್ಮ್ ಮೂಲಕ ಸಂಗ್ರಹಣಾ ಪ್ರಕ್ರಿಯೆ ಮತ್ತು ಸಣ್ಣ ಹಾಗೂ ಮಧ್ಯಮ ವರ್ಗದ ಕೈಗಾರಿಕೆಗಳಿಂದ ಅಗತ್ಯ ವಸ್ತುಗಳನ್ನು ಇ-ಪೋರ್ಟಲ್ ಮೂಲಕ ಖರೀದಿಸಬೇಕು;  ಕೃತಕ ಬುದ್ಧಿಮತ್ತೆ, ಕ್ವಾಂಟಮ್ ಸಿದ್ಧಾಂತ ಮತ್ತು ರೋಬೋಟಿಕ್ಸ್ ನಂತಹ ಬದಲಾಗುತ್ತಿರುವ ತಂತ್ರಜ್ಞಾನಗಳನ್ನು ಅಳವಡಿಸಿಕೊಳ್ಳಲು ಅಗತ್ಯ ಸಿದ್ಧತೆಗಳನ್ನು ಮಾಡಿಕೊಳ್ಳಬೇಕು ಎಂದು ಅವರು ಹೇಳಿದರು. 
 
ನವಭಾರತ ನಿರ್ಮಾಣಕ್ಕೆ ಅವರು ಸಾರ್ವಜನಿಕ ವಲಯದ ಉದ್ದಿಮೆಗಳಿಗೆ 5 ಸವಾಲುಗಳನ್ನು ಮುಂದಿಟ್ಟರು. ಅವುಗಳೆಂದರೆ
 
• 2022ರ ವೇಳೆಗೆ ಭಾರತದ ಸಾರ್ವಜನಿಕ ವಲಯದ ಉದ್ದಿಮೆಗಳು ಎಷ್ಟು ಗರಿಷ್ಠ ಕಾರ್ಯತಂತ್ರವನ್ನು ತಲುಪಬಲ್ಲಿರಿ ?
• 2022ರ ವೇಳೆಗೆ ಭಾರತದ ಸಾರ್ವಜನಿಕ ವಲಯದ ಉದ್ದಿಮೆಗಳು ದೇಶದ ಆಮದು ಬಿಲ್ಅನ್ನು ಎಷ್ಟರಮಟ್ಟಿಗೆ ತಗ್ಗಿಸಬಲ್ಲಿರಿ ?
• ಭಾರತದ ಸಾರ್ವಜನಿಕ ವಲಯದ ಉದ್ದಿಮೆಗಳು 2022ರ ವೇಳೆಗೆ ಎಷ್ಟು ಆವಿಷ್ಕಾರಗಳನ್ನು ಮತ್ತು ಸಂಶೋಧನೆಗಳನ್ನು ಒಂದುಗೂಡಿಸಬಲ್ಲಿರಿ ?
• 2022ರ ವೇಳೆಗೆ ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮಲ್ಲಿನ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಆರ್) ನಿಧಿಯನ್ನು ಗರಿಷ್ಠ ಪ್ರಮಾಣದಲ್ಲಿ ಬಳಕೆ ಮಾಡಿಕೊಳ್ಳಲು ಯಾವ ಮಾರ್ಗಸೂಚಿಯನ್ನು ಹೊಂದಬಲ್ಲಿರಿ ? 
• 2022ರ ವೇಳೆಗೆ ಭಾರತೀಯ ಸಾರ್ವಜನಿಕ ವಲಯದ ಉದ್ದಿಮೆಗಳು ದೇಶಕ್ಕೆ ಯಾವ ಬಗೆಯ ಹೊಸ ಅಭಿವೃದ್ಧಿ ಮಾದರಿಯನ್ನು ನೀಡಲು ಸಾಧ್ಯ ?
 
 
ಜಗತ್ತಿನ 500 ಬೃಹತ್ ಕಂಪನಿಗಳ ಪೈಕಿ 4ನೇ ಒಂದು ಭಾಗದಷ್ಟು ಕಂಪನಿಗಳು ಬೇರೆ ದೇಶದ ಸಾರ್ವಜನಿಕ ವಲಯದ ಕಂಪನಿಗಳಾಗಿವೆ ಎಂದು ಪ್ರಧಾನಮಂತ್ರಿ ಹೇಳಿದರು. ಭಾರತದ ಸಾರ್ವಜನಿಕ ವಲಯದ ಕಂಪನಿಗಳು ಇತರೆ ರಾಷ್ಟ್ರದ ಸಾರ್ವಜನಿಕ ವಲಯದ ಕಂಪನಿಗಳ ಜತೆ ಸಂಪರ್ಕಹೊಂದಿ, ಸಾಗರೋತ್ತರ ರಾಷ್ಟ್ರಗಳಿಂದ ಬಂಡವಾಳ ಆಕರ್ಷಿಸಲು ಸಮಗ್ರ ಕಾರ್ಯತಂತ್ರವನ್ನು ಅಭಿವೃದ್ಧಿಗೊಳಿಸಬೇಕು ಎಂದು ಅವರು ಸಲಹೆ ನೀಡಿದರು. ಭಾರತದ ಆಮದು ಬಿಲ್ಅನ್ನು ತಗ್ಗಿಸುವಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಅತ್ಯಂತ ಪ್ರಮುಖ ಪಾತ್ರವಹಿಸಬೇಕು ಎಂದು ಅವರು ಹೇಳಿದರು. ಸಾರ್ವಜನಿಕ ವಲಯದ ಉದ್ದಿಮೆಗಳು ಆಧುನಿಕ ರಕ್ಷಣಾ ಮತ್ತು ಅಭಿವೃದ್ಧಿ ಮೂಲಸೌಕರ್ಯವನ್ನು ಹೊಂದುತ್ತಿವೆ ಎಂಬುದನ್ನು ಉಲ್ಲೇಖಿಸಿದ ಅವರು, ಸಿಎಸ್ಐಆರ್ ಮತ್ತು ಐಸಿಎಆರ್ ನಂತಹ ಸಂಸ್ಥೆಗಳು ಮೂಲಸೌಕರ್ಯವನ್ನು ಹೊಂದಿವೆ ಎಂದ ಅವರು, ಆವಿಷ್ಕಾರ ಮತ್ತು ಸಂಶೋಧನೆಯನ್ನು ಒಂದುಗೂಡಿಸುವ ಅಗತ್ಯವಿದೆ ಎಂದರು. ಈ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಮತ್ತು ಸರ್ಕಾರಿ ಇಲಾಖೆಗಳ ನಡುವೆ ಹೆಚ್ಚಿನ ಮಾಹಿತಿ ವಿನಿಮಯ ಅಗತ್ಯವಿದೆ ಎಂದು ಕರೆ ನೀಡಿದರು. 
 
ಸಾರ್ವಜನಿಕ ವಲಯದ ಉದ್ದಿಮೆಗಳು ಸಿಎಸ್ಆರ್ ಹಣವನ್ನು ಖರ್ಚು ಮಾಡುವಾಗ  ಪ್ರತಿವರ್ಷ ಒಂದೊಂದು ನಿಗದಿತ ಉದ್ದೇಶವನ್ನಿಟ್ಟುಕೊಳ್ಳಬೇಕೆಂದು ಪ್ರಧಾನಮಂತ್ರಿ ಸಲಹೆ ಮಾಡಿದರು. ಈ ನಿಟ್ಟಿನಲ್ಲಿ ಸಿಎಸ್ಆರ್ ನಿಧಿಯನ್ನು ಶಾಲೆಗಳಲ್ಲಿ ಶೌಚಾಲಯ ನಿರ್ಮಾಣ ಕಾರ್ಯಕ್ಕೆ ಬಳಕೆ ಮಾಡಿಕೊಂಡಾಗ ಸಾಧಿಸಿದ ಯಶಸ್ಸನ್ನು ಅವರು ಉಲ್ಲೇಖಿಸಿದರು. ಒಳ್ಳೆಯ ಒಂದು ಉದ್ದೇಶ ಹಲವು ಜಿಲ್ಲೆಗಳ ಅಭಿವೃದ್ಧಿಗೆ ಸ್ಫೂರ್ತಿಯಾಗುತ್ತದೆ ಎಂದು ಅವರು ಹೇಳಿದರು. ಸಾರ್ವಜನಿಕ ವಲಯದ ಉದ್ದಿಮೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ(ಸಿಎಸ್ಆರ್) ಭಾಗವಾಗಿ ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಬಹುದು ಎಂದರು. 
 
ಸಾರ್ವಜನಿಕ ವಲಯದ ಉದ್ದಿಮೆಗಳು ಕಾಗದರಹಿತ ಕಾರ್ಯನಿರ್ವಹಣಾ ಸಂಸ್ಕೃತಿ, ನಗದುರಹಿತ ವಹಿವಾಟು ಮತ್ತು ತ್ಯಾಜ್ಯ ನಿರ್ವಹಣೆ ಮತ್ತಿತರ ಹಲವು ವಲಯಗಳಲ್ಲಿ ಮಾದರಿ ಸಂಸ್ಥೆಗಳಾಗಿ ಕೆಲಸ ಮಾಡಬಹುದು ಎಂದು ಪ್ರಧಾನಮಂತ್ರಿ ಹೇಳಿದರು. 
 
ನವಭಾರತ ನಿರ್ಮಾಣದ ಕನಸು ಸಾಕಾರವಾಗುವ ನಿಟ್ಟಿನಲ್ಲಿ ಸಾರ್ವಜನಿಕ ವಲಯದ ಉದ್ದಿಮೆಗಳು ಅತ್ಯಂತ ದೊಡ್ಡ ಪ್ರಮಾಣದಲ್ಲಿ ನೆರವಾಗಲಿವೆ ಎಂದು ಪ್ರಧಾನಮಂತ್ರಿ ಭರವಸೆ ವ್ಯಕ್ತಪಡಿಸಿದರು. 

 

Click here to read full text speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
When PM Modi Fulfilled A Special Request From 101-Year-Old IFS Officer’s Kin In Kuwait

Media Coverage

When PM Modi Fulfilled A Special Request From 101-Year-Old IFS Officer’s Kin In Kuwait
NM on the go

Nm on the go

Always be the first to hear from the PM. Get the App Now!
...
Under Rozgar Mela, PM to distribute more than 71,000 appointment letters to newly appointed recruits
December 22, 2024

Prime Minister Shri Narendra Modi will distribute more than 71,000 appointment letters to newly appointed recruits on 23rd December at around 10:30 AM through video conferencing. He will also address the gathering on the occasion.

Rozgar Mela is a step towards fulfilment of the commitment of the Prime Minister to accord highest priority to employment generation. It will provide meaningful opportunities to the youth for their participation in nation building and self empowerment.

Rozgar Mela will be held at 45 locations across the country. The recruitments are taking place for various Ministries and Departments of the Central Government. The new recruits, selected from across the country will be joining various Ministries/Departments including Ministry of Home Affairs, Department of Posts, Department of Higher Education, Ministry of Health and Family Welfare, Department of Financial Services, among others.