Police, forensic science and judiciary are integral parts of criminal justice delivery system: Prime Minister
Greater technological intervention in forensic science can help tackle challenges of cyber security: PM Modi
In order to deal with rapidly changing crime scenario we have to develop newer techniques to make it clear that criminals will not be spared: PM

ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಗುಜರಾತ್ ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಭಾಗವಹಿಸಿದರು.  

 

ವಿಶ್ವವಿದ್ಯಾಲಯಗಳು ಮತ್ತು ಅವುಗಳ ವಿದ್ಯಾರ್ಥಿಗಳು ಮುಂಚೂಣಿಯ ಪ್ರವರ್ತಕರಾಗಿದ್ದಾರೆ ಎಂದು ಪ್ರಧಾನಮಂತ್ರಿ  ತಿಳಿಸಿದರು. ಸಾಂಪ್ರದಾಯಿಕವಾಗಿ ಅಸಾಂಪ್ರದಾಯಿಕ ಎಂದು ಭಾವಿಸಿರುವ, ಆದರೆ ಇಂದಿನ ದಿನಗಳಲ್ಲಿ ಅತ್ಯಂತ ಪ್ರಮುಖ್ಯವಾದ ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡದ್ದಕ್ಕಾಗಿ ವಿದ್ಯಾರ್ಥಿಗಳನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ಸ್ವ-ನಂಬಿಕೆ ಮತ್ತು ನಿರ್ಧಾರ-ನಿರ್ಣಯಗಳ ಗುಣಲಕ್ಷಣಗಳು ಮುಂಬರುವ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಸಹಾಯವಾಗಲಿವೆ ಎಂದು ಪ್ರಧಾನಮಂತ್ರಿ  ಹೇಳಿದರು. 

ಯಾವರೀತಿಯಲ್ಲಿ ಸಮರ್ಥ ಪೊಲೀಸ್ ಪಡೆ ಮತ್ತು ಪರಿಣಾಮಕಾರಿ ನ್ಯಾಯವ್ಯವಸ್ಥೆಗಳು ಕಾರ್ಯನಿರ್ವಹಿಸುತ್ತವೋ, ಸಮಗ್ರ(ಬಲಿಷ್ಠ) ವಿಧಿ ವಿಜ್ಞಾನ ವ್ಯವಸ್ಥೆಯ ರಚನೆ ಕೂಡಾ, ಸಾಮಾಜಿಕ ಸುರಕ್ಷತೆಯ ಖಾತರಿಗೆ ಮತ್ತು ಅಪರಾಧಗಳ ನಿಯಂತ್ರಣಕ್ಕೆ ಸಹಾಯ ಮಾಡುತ್ತದೆ ಎಂದು ಪ್ರಧಾನಮಂತ್ರಿ  ಹೇಳಿದರು.

 

ವ್ಯಕ್ತಿಗೆ ನಾನು ಒಂದುವೇಳೆ ಅಪರಾಧ ಮಾಡಿದರೆ ಹಿಡಿಯಲ್ಪಡುವ ಸಾದ್ಯತೆಯಿದೆ ಎಂಬ ಭಯ ಬಹಳ ಮುಖ್ಯ ವಿಷಯವಾಗಿದೆ. ಈ ಸಂದರ್ಭದಲ್ಲಿ ವಿಧಿ ವಿಜ್ಞಾನ ಅತ್ಯಂತ ಪ್ರಾಮುಖ್ಯತೆ ಪಡೆಯುತ್ತದೆ ಎಂದು ಪ್ರಧಾನಮಂತ್ರಿ  ತಿಳಿಸಿದರು.

ಅಪರಾಧಿಕ ತನಿಖಾ ಮತ್ತು ನ್ಯಾಯ ದಯಪಾಲಿಸುವ ( ವಿತರಣಾ) ಕ್ಷೇತ್ರದಲ್ಲಿ ಮಾನವ ಸಂಪನ್ಮೂಲ ಲಭ್ಯತೆಯ ಅಂತರರಾಷ್ಟ್ರೀಯ ಕೇಂದ್ರವನ್ನು ನಿರ್ಮಿಸಿದ್ದಕ್ಕಾಗಿ ಗುಜರಾತ್  ವಿಧಿ ವಿಜ್ಞಾನ ವಿಶ್ವವಿದ್ಯಾಲಯವನ್ನು ಪ್ರಧಾನಮಂತ್ರಿ ಅಭಿನಂದಿಸಿದರು. ತರಬೇತಿ ಮತ್ತು ಶಿಕ್ಷಣ ಮೂಲಕ ಜಾಗತಿಕ ಸುರಕ್ಷೆಯಲ್ಲಿ ಗುಜರಾತ್  ವಿಧಿ ವಿಜ್ಞಾನ ವಿಶ್ವವಿದ್ಯಾಲಯದ ಪಾತ್ರ ಅತ್ಯಂತ ಮಹತ್ವಪೂರ್ಣವಾಗಿದೆ ಎಂದು ಪ್ರಧಾನಮಂತ್ರಿ  ತಿಳಿಸಿದರು.

ಮಾಹಿತಿ ತಂತ್ರಜ್ಞಾನ-ಅಂರ್ಜಾಲ ಆಧಾರಿತ ಅಪರಾಧ(ಸೈಬರ್ ಕ್ರೈಂ)ಗಳು ನೀಡುವ ಸವಾಲುಗಳ ಬಗ್ಗೆ ಸುಧೀರ್ಘವಾಗಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈ ಸನ್ನಿವೇಶದಲ್ಲಿ ವಿಧಿ ವಿಜ್ಞಾನ  ಮತ್ತು ಸೈಬರ್ ವಿಧಿ ವಿಜ್ಞಾನ  ಪ್ರಯೋಗಾಲಯಗಳನ್ನು ಇನ್ನೂ ಉತ್ತಮಗೊಳಿಸಬೇಕಾದ ಆವಶ್ಯಕತೆಯಿದೆ ಎಂದರು. ವಿಮಾ ಉದ್ಯಮದಲ್ಲೂ ವಿಧಿ ವಿಜ್ಞಾನದ ಪ್ರಾಮುಖ್ಯತೆಯನ್ನು ಎಂದು ಪ್ರಧಾನಮಂತ್ರಿ  ವಿವರಿಸಿದರು.

ತಪ್ಪಿತಸ್ಥರನ್ನು ಶಿಕ್ಷೆಗೊಳಪಡಿಸಲು ಡಿ.ಎನ್.ಏ. ವಿಶ್ಷೇಷಣೆಯನ್ನು ಬಳಸಿ ನ್ಯಾಯಾಂಗ ವ್ಯವಸ್ಥೆಗೆ ಸಹಾಯ ಮಾಡಲು ವಿಧಿ ವಿಜ್ಞಾನ ತಜ್ಞರಿಗೆ ಪ್ರಧಾನಮಂತ್ರಿ ಸೂಚಿಸಿದರು. ಮುಂಬರುವ ದಿನಗಳಲ್ಲಿ ಮಹಿಳೆಯರ ಮೇಲೆ ಅಪರಾಧವೆಸಗುವುದನ್ನೂ ಸೇರಿದಂತೆ, ಅತಿ ಹೀನ ಅಪರಾಧಗಳಿಂದ ದೂರವಾಗುವ ಸಾಧ್ಯತೆಗಳು ಖಂಡಿತವಾಗಿಯೂ ಇದೆ ಎಂದರು 

 

ಪ್ರವೃತ್ತಿಯ ದಿಶೆಯನ್ನು ಜಾಗತಿಕವಾಗಿ ಬದಲಾಯಿಸುವವರಾಗಲು ಈ ಕೇಂದ್ರದ ವಿದ್ಯಾರ್ಥಿಗಳಿಗೆ ಅವರು ಕರೆ ನೀಡಿದರು. 

 

ಕೆಲವೊಂದು ಪ್ರಗತಿಪರ ಬದಲಾವಣೆ ಮೂಲಕ ನಮ್ಮ ಜಗತ್ತನ್ನು ಇನ್ನೂ ಉತ್ತಮ ಸ್ಥಳವನ್ನಾಗಿಸಲು ಪ್ರಧಾನಮಂತ್ರಿ ಅವರು ವಿದ್ಯಾರ್ಥಿಗಳನ್ನು ಪ್ರೇರೇಪಿಸಿದರು, ಹಾಗೂ ಎಲ್ಲ ಪದವಿ ವಿದ್ಯಾರ್ಥಿಗಳಿಗೂ ಉಜ್ವಲ ಹಾಗೂ ರೋಮಾಂಚಕ ಭವಿಷ್ಯವನ್ನು ಹಾರೈಸಿದರು.

 

Click here to read PM's speech

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...

Prime Minister Shri Narendra Modi paid homage today to Mahatma Gandhi at his statue in the historic Promenade Gardens in Georgetown, Guyana. He recalled Bapu’s eternal values of peace and non-violence which continue to guide humanity. The statue was installed in commemoration of Gandhiji’s 100th birth anniversary in 1969.

Prime Minister also paid floral tribute at the Arya Samaj monument located close by. This monument was unveiled in 2011 in commemoration of 100 years of the Arya Samaj movement in Guyana.