QuoteSwami Pranavananda connected his disciples to service and spirituality: PM
QuoteDuring several natural disasters, BSS teams have served people with great dedication: PM Modi
QuoteSocietal development through 'Bhakti', 'Shakti' and 'Jan Shakti' was achieved by Swami Pranavananda: PM
QuoteSwami Pranavananda never liked social divisions and inequalities: PM
QuoteIn the last three years, the development of the Northeast has become a priority. Focus is on connectivity and infrastructure: PM

ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಇಂದು ಭಾರತ್ ಸೇವಾಶ್ರಮ ಸಂಘದ ಶತಮಾನೋತ್ಸವ ಸಮಾರಂಭ ಉದ್ದೇಶಿಸಿ ವಿಡಿಯೋ ಕಾನ್ಫರೆನ್ಸ್ ಮೂಲಕ ಭಾಷಣ ಮಾಡಿದರು. ಈ ಸಮಾರಂಭವನ್ನು ಶಿಲ್ಲಾಂಗ್ ನಲ್ಲಿ ಆಯೋಜಿಸಲಾಗಿತ್ತು.

ಈ ಸಂದರ್ಭದಲ್ಲಿ ಪ್ರಧಾನಮಂತ್ರಿಯವರನ್ನು ಸ್ವಾಗತಿಸಿದ ಭಾರತ್ ಸೇವಾಶ್ರಮ ಸಂಘದ ಪ್ರಧಾನ ಕಾರ್ಯದರ್ಶಿ ಶ್ರೀಮದ್ ಸ್ವಾಮಿ ವಿಶ್ವೋತ್ತಮಾನಂದ ಜೀ ಮಹಾರಾಜ್ ಅವರು ಭಾರತದ ಶ್ರೀಮಂತ ಆಧ್ಯಾತ್ಮಿಕ ಮತ್ತು ಸೇವಾ ಪರಂಪರೆಯನ್ನು ವಿವರಿಸಿದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು ಗುಜರಾತ್ ನಲ್ಲಿ ತಾವು ಭಾರತ ಸೇವಾಶ್ರಮ ಸಂಘದೊಂದಿಗೆ ಕೆಲಸ ಮಾಡಿದ ದಿನಗಳನ್ನು ಸ್ಮರಿಸಿದರು. ಭಾರತ್ ಸೇವಾಶ್ರಮ ಸಂಘಕ್ಕೆ ಶುಭ ಕೋರಿದ ಪ್ರಧಾನಮಂತ್ರಿ, ಈ ಸಂಸ್ಥೆ ಸೇವೆ ಮತ್ತು ಶ್ರಮ ಎರಡನ್ನೂ ಒಳಗೊಂಡಿದೆ ಎಂದರು.

ಈ ಸಂಸ್ಥೆ ಈಶಾನ್ಯ ಭಾಗದಲ್ಲಿ ಮತ್ತು ವಿಕೋಪದ ಸಂದರ್ಭದಲ್ಲಿ ಮಾಡುತ್ತಿರುವ ಕಾರ್ಯ ಪ್ರಶಂಸನಾರ್ಹವಾದುದು ಎಂದರು.

ಬಡವರ ಮತ್ತು ಅಗತ್ಯ ಇರುವವರಿಗೆ ಮಾಡುವ ಸೇವೆಯ ಮಹತ್ವದ ಬಗ್ಗೆ ಗ್ರಂಥಗಳಲ್ಲಿ ಉಲ್ಲೇಖಿಸಿರುವುದನ್ನು ಪ್ರಧಾನಮಂತ್ರಿಯವರು ವಿವರಿಸಿದರು.
ಭಾರತ್ ಸೇವಾಶ್ರಮ ಸಂಘದ ಸ್ಥಾಪಕರಾದ ಸ್ವಾಮಿ ಪ್ರಣವಾನಂದ ಅವರು ಸಾಮಾಜಿಕ ನ್ಯಾಯದ ಬಗ್ಗೆ ಶತಮಾನಗಳ ಹಿಂದೆಯೇ ಮಾತನಾಡಿದ್ದರು ಮತ್ತು ಇದೇ ಉದ್ದೇಶಕ್ಕಾಗಿ ಸಂಘವನ್ನು ಸ್ಥಾಪಿಸಿದ್ದರು ಎಂದರು.

ಇತ್ತೀಚಿನ ದಿನಗಳಲ್ಲಿ ‘ಸೇವೆ’ ಮತ್ತು ‘ಆಧ್ಯಾತ್ಮಿಕತೆ’ ಎರಡೂ ವಿಭಿನ್ನ ಸಂಗತಿಗಳು ಎಂಬ ಒಂದು ಕಲ್ಪನೆ ಮೂಡಿದೆ ಎಂದು ಪ್ರಧಾನಿ ಹೇಳಿದರು. ಭಾರತ್ ಸೇವಾಶ್ರಮ ಸಂಘ ಈ ಕಲ್ಪನೆಯನ್ನು ತನ್ನ ಕೆಲಸದ ಮೂಲಕ ಹೋಗಲಾಡಿಸಬಲ್ಲದಾಗಿದೆ ಎಂದರು.

‘ಭಕ್ತಿ’‘ಶಕ್ತಿ’ ಮತ್ತು ‘ಜನಶಕ್ತಿ’ಯ ಮೂಲಕ ಸಮಾಜದ ಅಭಿವೃದ್ಧಿಯನ್ನು ಸ್ವಾಮಿ ಪ್ರಣವಾನಂದರು ಸಾಧಿಸಿದರು ಎಂದು ಪ್ರಧಾನಿ ತಿಳಿಸಿದರು.
ಭಾರತ್ ಸೇವಾಶ್ರಮ ಸಂಘ ‘ಸ್ವಚ್ಛಾಗ್ರಹ’ದೆಡೆಗೆ ಅದರಲ್ಲೂ ಈಶಾನ್ಯ ಭಾರತದಲ್ಲಿ ಸ್ವಚ್ಛತೆಗಾಗಿ ಕೆಲಸ ಮಾಡುವಂತೆ ಪ್ರಧಾನಿ ಮನವಿ ಮಾಡಿದರು. ಈಶಾನ್ಯ ಭಾರತದ ಅಭಿವೃದ್ಧಿ ಸರ್ಕಾರದ ಸಂಕಲ್ಪವಾಗಿದೆ ಎಂದ ಅವರು, ಸಂವಹನ ಮತ್ತು ಮೂಲಸೌಕರ್ಯಗಳು ಈಶಾನ್ಯದ ಅಭಿವೃದ್ಧಿಗೆ ನೆರವಾಗಿದ್ದು, ಇದು ದಕ್ಷಿಣ ಏಷ್ಯಾದ ಹೆಬ್ಬಾಗಿಲಾಗಲಿದೆ ಎಂದರು

ಗುಜರಾತ್ ನಲ್ಲಿ ಪ್ರಧಾನಮಂತ್ರಿಯವರೊಂದಿಗೆ ಕಾರ್ಯ ನಿರ್ವಹಿಸಿದ ಮತ್ತು ಆ ಬಗ್ಗೆ ಪ್ರಧಾನಿಯವರು ತಮ್ಮ ಭಾಷಣದಲ್ಲಿ ಉಲ್ಲೇಖಿಸಿದ ಶ್ರೀಮದ್ ಸ್ವಾಮಿ ಅಂಬರೀಷಾನಂದ ಜೀ ಮಹಾರಾಜ್ ಅವರು ವಂದನಾರ್ಪಣೆ ಸಲ್ಲಿಸಿದರು.

Explore More
ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ

ಜನಪ್ರಿಯ ಭಾಷಣಗಳು

ಪ್ರತಿಯೊಬ್ಬ ಭಾರತೀಯನ ರಕ್ತ ಕುದಿಯುತ್ತಿದೆ: ಮನ್ ಕಿ ಬಾತ್ ನಲ್ಲಿ ಪ್ರಧಾನಿ ಮೋದಿ
Maratha bastion in Tamil heartland: Gingee fort’s rise to Unesco glory

Media Coverage

Maratha bastion in Tamil heartland: Gingee fort’s rise to Unesco glory
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಜುಲೈ 2025
July 21, 2025

Green, Connected and Proud PM Modi’s Multifaceted Revolution for a New India