ವೀಡಿಯೊ ಸಂವಾದದ ಮೂಲಕ ವಾರಣಾಸಿಯ ಇಂಡಿಯಾ ಕಾರ್ಪೆಟ್ ಎಕ್ಸ್ಪೊವನ್ನು ಉದ್ದೇಶಿಸಿ ಇಂದು ಪ್ರಧಾನಮಂತ್ರಿ ಶ್ರೀ. ನರೇಂದ್ರ ಮೋದಿ ಅವರು ಭಾಷಣ ಮಾಡಿದರು.
ಭಾರತ ಮತ್ತು ವಿದೇಶಗಳಿಂದ ಆಗಮಿಸಿದ ಅತಿಥಿಗಳನ್ನು ಸ್ವಾಗತಿಸಿದ ಪ್ರಧಾನಮಂತ್ರಿ , ಇದೇ ಪ್ರಪ್ರಥಮ ಬಾರಿಗೆ ವಾರಣಾಸಿಯ ದೀನದಯಾಳ ಹಸ್ತಕಲಾ ಸಂಕುಲದಲ್ಲಿ ಇಂಡಿಯಾ ಕಾರ್ಪೆಟ್ ಎಕ್ಸ್ಪೊ ವನ್ನು ಆಯೋಜಿಸಲಾಗಿದೆ ಎಂದರು. ವಾರಣಾಸಿ, ಭಾಡೊಹಿ ಮತ್ತು ಮಿರ್ಜಾಪುರಗಳನ್ನು ಕಾರ್ಪೆಟ್ ಕೈಗಾರಿಕೋದ್ಯಮದ ಪ್ರಧಾನ ಕೇಂದ್ರಗಳೆಂದು ಪ್ರಧಾನಮಂತ್ರಿ ಉಲ್ಲೇಖಿಸಿದರು. ಕರಕುಶಲ, ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳ ಉತ್ತೇಜನೆಗೆ ನಡೆಯುತ್ತಿರುವ ಪ್ರಯತ್ನಗಳ ಕುರಿತು ಪ್ರಧಾನಮಂತ್ರಿ ಮಾತನಾಡಿದರು.
ಭಾರತಕ್ಕೆ ಕರಕುಶಲ ವಸ್ತುಗಳ ಸುದೀರ್ಘ ಇತಿಹಾಸವಿದೆ, ಈ ನಿಟ್ಟಿನಲ್ಲಿ ವಾರಣಾಸಿ ಪ್ರಮುಖ ಪಾತ್ರ ವಹಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಈ ಪ್ರದೇಶದ ಶ್ರೇಷ್ಠ ಸಂತ ಕವಿ ಕಬೀರ್ ಅವರನ್ನು ಪ್ರಧಾನಮಂತ್ರಿ ಈ ಸಂದರ್ಭದಲ್ಲಿ ಉಲ್ಲೇಖಿಸಿದರು.
ಸ್ವಾತಂತ್ರ್ಯ ಹೋರಾಟದ ಸಂದರ್ಭದಲ್ಲಿ ಕರಕುಶಲ ವಸ್ತುಗಳು ಸ್ವಾವಲಂಬನೆ ಮತ್ತು ಪ್ರೇರಣೆಯ ಮೂಲಗಳಾಗಿದ್ದವು ಎಂದು ಪ್ರಧಾನಮಂತ್ರಿ ಹೇಳಿದರು. ಈ ಸಂದರ್ಭದಲ್ಲಿ, ಮಹಾತ್ಮಾ ಗಾಂಧಿ , ಸತ್ಯಾಗ್ರಹ ಮತ್ತು ಚರಕಗಳನ್ನು ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು.
ಭಾರತವು ವಿಶ್ವದ ಅತಿ ದೊಡ್ಡ ಕಾರ್ಪೆಟ್ ಉತ್ಪಾದಕ ದೇಶವಾಗಿದೆ. ಜಾಗತಿಕ ಮಟ್ಟದ ಕಾರ್ಪೆಟ್ ಮಾರುಕಟ್ಟೆಯಲ್ಲಿ ಭಾರತೀಯ ಕಾರ್ಪೆಟ್ ಗಳ ಪಾಲು 35%ರಷ್ಟಿದೆ. ಈ ಕ್ಷೇತ್ರದ ಪರಿಣಾಮಕಾರಿ ರಫ್ತು ಕಾರ್ಯಕ್ಷಮತೆ ಕುರಿತು ಪ್ರಧಾನಮಂತ್ರಿ ಮಾತನಾಡಿದರು. ಮಧ್ಯಮ ವರ್ಗದ ಸಂಖ್ಯೆಯಲ್ಲಿ ಏರಿಕೆ ಮತ್ತು ಕಾರ್ಪೆಟ್ ಕೈಗಾರಿಕೆಗೆ ದೊರಕಿರುವ ಬೆಂಬಲ ಈ ಕ್ಷೇತ್ರದ ಪ್ರಗತಿಯ ಹಿಂದಿರುವ ಎರಡು ಪ್ರಧಾನ ಅಂಶಗಳಾಗಿವೆ ಎಂದು ಅವರು ಹೇಳಿದರು. “ಮೇಡ್ ಇನ್ ಇಂಡಿಯಾ ಕಾರ್ಪೆಟ್” ಎಂಬ ಬೃಹತ್ ಬ್ರ್ಯಾಂಡ್ ನ ಹೆಗ್ಗಳಿಕೆಗೆ ಪಾತ್ರವಾಗಿರುವ ಕಾರ್ಪೆಟ್ ತಯಾರಕರ ಕೌಶಲ್ಯಗಳನ್ನು ಪ್ರಧಾನಮಂತ್ರಿ ಪ್ರಶಂಸಿಸಿದರು. ಕಾರ್ಪೆಟ್ ರಫ್ತುಗಾರರಿಗೆ ಸಾಗಣೆ ವ್ಯವಸ್ಥೆ ಪೂರೈಕೆ ಮತ್ತು ಗುಣಮಟ್ಟ ಖಾತ್ರಿಗಾಗಿ ವಿಶ್ವ ಮಟ್ಟದ ಸಂಶೋಧನಾಲಯ ನಿರ್ಮಾಣ ಹಾಗೂ ಈ ಕ್ಷೇತ್ರದಲ್ಲಿ ಅಧುನಿಕ ಮಗ್ಗ ಮತ್ತು ಸಾಲವ್ಯವಸ್ಥೆಗಳ ಲಭ್ಯತೆಯನ್ನು ಸೇರಿದಂತೆ ಸೌಕರ್ಯ-ವ್ಯವಸ್ಥೆಗಳ ಕುರಿತಾಗಿ ಪ್ರಧಾನಮಂತ್ರಿ ಅವರು ಮಾತನಾಡಿದರು.
ಕಾರ್ಪೆಟ್ ತಯಾರಕರ ಕೌಶಲ್ಯ ಮತ್ತು ಕಠಿಣ ಪರಿಶ್ರಮಗಳು ಭಾರತದ ಶಕ್ತಿಯಾಗಿ ಮಾರ್ಪಡಲು ಅಗತ್ಯ ಕ್ರಮಗಳನ್ನು ಮಾಡಲು ಕೇಂದ್ರ ಸರಕಾರ ಬದ್ಧವಾಗಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.