ಟರ್ಕಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಅಧ್ಯಕ್ಷ ರಿಸಿಪ್ ತಾಯಿಪ್ ಎರ್ಡೋಗನ್ ಅವರೇ,
ಗೌರವಾನ್ವಿತ ಸಚಿವರುಗಳೇ,
ಟರ್ಕಿ ನಿಯೋಗದ ಸದಸ್ಯರೇ,
ಭಾರತೀಯ ವಾಣಿಜ್ಯ ಸಮುದಾಯದ ಸ್ನೇಹಿತರೇ,
ಮಾನ್ಯರೆ ಮತ್ತು ಮಹಿಳೆಯರೇ,
ಇಂದಿನ ವೇದಿಕೆಯಲ್ಲಿ ಪ್ರಮುಖ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ನಡೆಸುವ ಅವಕಾಶ ದೊರೆತಿರುವುದಕ್ಕೆ ನಾನು ಹರ್ಷಿತನಾಗಿದ್ದೇನೆ. ನಾನು ಟರ್ಕಿಯ ಅಧ್ಯಕ್ಷರಾದ ಎರ್ಡೋಗನ್ ಅವರಿಗೆ ಮತ್ತು ಇಲ್ಲಿ ಹಾಜರಿರುವ ಎಲ್ಲ ಸ್ನೇಹಿತರಿಗೆ ಆತ್ಮೀಯ ಸ್ವಾಗತ ಬಯಸುತ್ತೇನೆ. ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ದೊಡ್ಡ ಸಂಖ್ಯೆಯ ವಾಣಿಜ್ಯ ನಿಯೋಗ ನೋಡಿ ಸಂತೋಷಿತನಾಗಿದ್ದೇನೆ. ಜೊತೆಗೆ ಹಲವು ಭಾರತೀಯ ವಾಣಿಜ್ಯ ನಾಯಕರ ಪಾಲ್ಗೊಳ್ಳುವಿಕೆಯನ್ನು ನೋಡಿ ಸಂತೋಷಿತನಾಗಿದ್ದೇನೆ.
ಟರ್ಕಿ ಗಣರಾಜ್ಯದ ಅಧ್ಯಕ್ಷರಾದ ಘನತೆವೆತ್ತ ಅಧ್ಯಕ್ಷ ರಿಸಿಪ್ ತಾಯಿಪ್ ಎರ್ಡೋಗನ್ ಅವರೇ,
ಗೌರವಾನ್ವಿತ ಸಚಿವರುಗಳೇ,
ಟರ್ಕಿ ನಿಯೋಗದ ಸದಸ್ಯರೇ,
ಭಾರತೀಯ ವಾಣಿಜ್ಯ ಸಮುದಾಯದ ಸ್ನೇಹಿತರೇ,
ಮಾನ್ಯರೆ ಮತ್ತು ಮಹಿಳೆಯರೇ,
ಇಂದಿನ ವೇದಿಕೆಯಲ್ಲಿ ಪ್ರಮುಖ ವಾಣಿಜ್ಯೋದ್ಯಮಿಗಳೊಂದಿಗೆ ಸಂವಾದ ನಡೆಸುವ ಅವಕಾಶ ದೊರೆತಿರುವುದಕ್ಕೆ ನಾನು ಹರ್ಷಿತನಾಗಿದ್ದೇನೆ. ನಾನು ಟರ್ಕಿಯ ಅಧ್ಯಕ್ಷರಾದ ಎರ್ಡೋಗನ್ ಅವರಿಗೆ ಮತ್ತು ಇಲ್ಲಿ ಹಾಜರಿರುವ ಎಲ್ಲ ಸ್ನೇಹಿತರಿಗೆ ಆತ್ಮೀಯ ಸ್ವಾಗತ ಬಯಸುತ್ತೇನೆ. ಅಧ್ಯಕ್ಷ ಎರ್ಡೋಗನ್ ಅವರೊಂದಿಗೆ ದೊಡ್ಡ ಸಂಖ್ಯೆಯ ವಾಣಿಜ್ಯ ನಿಯೋಗ ನೋಡಿ ಸಂತೋಷಿತನಾಗಿದ್ದೇನೆ. ಜೊತೆಗೆ ಹಲವು ಭಾರತೀಯ ವಾಣಿಜ್ಯ ನಾಯಕರ ಪಾಲ್ಗೊಳ್ಳುವಿಕೆಯನ್ನು ನೋಡಿ ಸಂತೋಷಿತನಾಗಿದ್ದೇನೆ.
ಸ್ನೇಹಿತರೆ,
ಭಾರತ ಮತ್ತು ಟರ್ಕಿ ಶ್ರೇಷ್ಠ ಐತಿಹಾಸಿಕ ಮತ್ತು ಸಾಂಸ್ಕೃತಿಕ ನಂಟು ಹೊಂದಿವೆ. ಅಲ್ಲದೆ ನಾವು ವಿಶ್ವದ ಪ್ರಸಕ್ತ ಆರ್ಥಿಕ ಸ್ಥಿತಿಯ ಬಗ್ಗೆಯೂ ಸಮಾನ ದೃಷ್ಟಿಕೋನ ಹಂಚಿಕೊಂಡಿದ್ದೇವೆ.
ಇಂದು ಆರ್ಥಿಕ ಸಹಕಾರವು ಎಲ್ಲ ದ್ವಿಪಕ್ಷೀಯ ಬಾಂಧವ್ಯಗಳಿಗೆ ಪ್ರಮುಖ ಆಧಾರಸ್ತಂಭವಾಗಿದೆ. ಭಾರತ ಮತ್ತು ಟರ್ಕಿ ಉತ್ತಮ ಆರ್ಥಿಕ ಬಾಂಧವ್ಯ ಹೊಂದಿದೆ. ಒಂದು ವರ್ಷದ ಅವಧಿಯಲ್ಲಿ ದ್ವಿಪಕ್ಷೀಯ ವಾಣಿಜ್ಯ ವೃದ್ಧಿ ತೃಪ್ತಿದಾಯಕವಾಗಿದೆ. ಅಧ್ಯಕ್ಷ ಎರ್ಡೋಗನ್ ಅವರು ಭಾರತಕ್ಕೆ ಕಳೆದ ಬಾರಿ ಭೇಟಿ ನೀಡಿದಾಗಿನಿಂದ ನಮ್ಮ ದ್ವಿಪಕ್ಷೀಯ ವಾಣಿಜ್ಯ ಗಣನೀಯವಾಗಿ ಏರಿಕೆ ಆಗಿದೆ ಎಂಬುದನ್ನು ನಾನು ಅರಿತಿದ್ದೇನೆ. ಅದು 2008ರಲ್ಲಿ 2.8 ಶತಕೋಟಿ ಡಾಲರ್ ಇದ್ದದ್ದು, 2016ರಲ್ಲಿ 6.4 ಶತಕೋಟಿ ಡಾಲರ್ ಗೆ ಹೆಚ್ಚಳವಾಗಿದೆ. ಇದು ಉತ್ತೇಜನಕಾರಿ, ಪ್ರಸಕ್ತ ಆರ್ಥಿಕ ಮಟ್ಟ ಮತ್ತು ವಾಣಿಜ್ಯ ಬಾಂಧವ್ಯವು ನೈಜ ಸಾಮರ್ಥ್ಯದ ಎದುರು ಕಡಿಮೆಯೇ ಆಗಿದೆ.
.
ಸ್ನೇಹಿತರೆ,
ಭಾರತ ಮತ್ತು ಟರ್ಕಿ ವಿಶ್ವದ ಪ್ರಥಮ 20 ಅತಿ ದೊಡ್ಡ ಆರ್ಥಿಕ ರಾಷ್ಟ್ರಗಳಲ್ಲಿ ಸಾಲಿನಲ್ಲಿವೆ. ಅದಕ್ಕಿಂತ ಮುಖ್ಯವಾಗಿ, ಕರಗುತ್ತಿರುವ ಜಾಗತಿಕ ಆರ್ಥಿಕ ಪರಿಸ್ಥಿತಿಯ ನಡುವೆಯೂ ಗಣನೀಯ ಸ್ಥಿರತೆ ತೋರಿದೆ. ನಮ್ಮ ರಾಷ್ಟ್ರಗಳು ಬಲವಾದ ಮೂಲಭೂತದ ಆಧಾರದ ಮೇಲಿವೆ, ಇದೇ ಕಾರಣಕ್ಕಾಗಿ ನಾವು ನಮ್ಮ ಆರ್ಥಿಕ ಭವಿಷ್ಯದ ಬಗ್ಗೆ ಆಶಾವಾದನ್ನು ಹೊಂದಿದ್ದೇವೆ.
ಎರಡೂ ದೇಶಗಳ ಜನರ ನಡುವೆ ಪರಸ್ಪರ ಉತ್ತಮ ಭಾವನೆ ಇದೆ. ನಾವು ಬಲವಾದ ರಾಜಕೀಯ ಬಾಂಧವ್ಯ ಕಟ್ಟಲು ಪ್ರಯತ್ನಿಸುತ್ತಿರುವಾಗಲೇ, ಇನ್ನು ಹೆಚ್ಚು ಭರದಿಂದ ನಮ್ಮ ಆರ್ಥಿಕ ಬಾಂಧವ್ಯವನ್ನು ಆಳಗೊಳಿಸುವ ಪ್ರಯತ್ನ ಮಾಡಬೇಕಾದ ಕಾಲವೂ ಬಂದಿದೆ. ನಾವು ಪರಸ್ಪರರೊಂದಿಗೆ ವಾಣಿಜ್ಯ ನಡೆಸುವ ದೀರ್ಘ ಇತಿಹಾಸವನ್ನು ಹೊಂದಿದ್ದೇವೆ. ನಾವು ಈ ಶ್ರೀಮಂತ ಪರಂಪರೆಯ ಮೇಲೆಯೇ ನಿರ್ಮಾಣ ಮಾಡಬೇಕಾಗಿದೆ.
ದ್ವಿಪಕ್ಷೀಯ ಕಾರ್ಯಕ್ರಮಗಳನ್ನು ಹೆಚ್ಚಿಸಲು ಅವಕಾಶ ಮತ್ತು ಸಾಮರ್ಥ್ಯ ಎರಡೂ ಇದೆ. ಇದು ವಾಣಿಜ್ಯ ಮತ್ತು ಎಫ್.ಡಿ.ಐ. ಹರಿವು, ತಂತ್ರಜ್ಞಾನದ ಬಾಂಧವ್ಯ ಮತ್ತು ವಿವಿಧ ಯೋಜನೆಗಳ ಸಹಕಾರದ ಮೂಲಕ ಸಾಧ್ಯವಾಗಲಿದೆ. ಈ ನಿಟ್ಟಿನಲ್ಲಿ ನಾವು ಭಾರತದಲ್ಲಿ ಟರ್ಕಿ ಕಂಪನಿಗಳ ಹೆಚ್ಚಿನ ಪಾಲ್ಗೊಳ್ಳುವಿಕೆಯನ್ನು ಕಂಡಿದ್ದೇವೆ. ಬ್ಲೂ ಚಿಪ್ ಭಾರತೀಯ ಕಂಪನಿಗಳಲ್ಲಿ ಹೂಡಿಕೆಯಿಂದ ಮತ್ತು ಕಳೆದ ಐದು ವರ್ಷಗಳಿಂದ ಎಫ್.ಡಿ.ಐ. ಮಾರ್ಗದಿಂದ ಇದು ಸಾಧ್ಯವಾಗಿದೆ. ಆದಾಗ್ಯೂ, ಅಂಥ ಸಹಕಾರ ಸಣ್ಣ ಮತ್ತು ಮಧ್ಯಮ ಉದ್ದಿಮೆಗಳವರೆಗೂ ಹೋಗಿದೆ.
ಇಂದು ಜ್ಞಾನ ಆಧಾರಿತ ಜಾಗತಿಕ ಆರ್ಥಿಕತೆ ನಿರಂತರವಾಗಿ ಹೊಸ ಕ್ಷೇತ್ರಗಳಲ್ಲಿ ತೆರೆದುಕೊಳ್ಳುತ್ತಿದೆ. ನಾವು ಇದನ್ನು ಆರ್ಥಿಕ ಮತ್ತು ವಾಣಿಜ್ಯ ಮಾತುಕತೆಯ ವಿಷಯ ಮಾಡಬೇಕಾಗಿದೆ.
ಎರಡೂ ಕಡೆಯ ಸರ್ಕಾರಗಳು ವಾಣಿಜ್ಯ ಸ್ನೇಹಿ ಪರಿಸರ ಒದಗಿಸಲು ಬದ್ಧವಾಗಿವೆ. ಆದಾಗ್ಯೂ, ವಾಣಿಜ್ಯ ನಾಯಕರೇ, ಎರಡೂ ದೇಶಗಳ ಲಾಭಕ್ಕಾಗಿ ರಾಷ್ಟ್ರೀಯ ಗುರಿಯನ್ನು ನನಸಾಗಿ ಮಾಡಬಲ್ಲವರಾಗಿದ್ದಾರೆ.
ಸ್ನೇಹಿತರೇ,
ಭಾರತೀಯ ರಾಜಕೀಯ ವ್ಯವಸ್ಥೆಯು ಚಲನಶೀಲ, ಮುಕ್ತ ಮತ್ತು ಸಹಭಾಗಿತ್ವದ ಪ್ರಜಾಪ್ರಭುತ್ವಕ್ಕೆ ಹೆಸರಾಗಿದೆ. ರಾಜಕೀಯ ಮತ್ತು ಆಡಳಿತ ಪ್ರಕ್ರಿಯೆಯಲ್ಲಿನ ಸ್ಥಿರತೆ ಮತ್ತು ನೆಲದ ಕಾನೂನು ನಮ್ಮ ವ್ಯವಸ್ಥೆಯ ಸಂಕೇತಗಳಾಗಿವೆ. ಮತ್ತು ಇವುಗಳೇ ಗಂಭೀರವಾದ ದೀರ್ಘ ಕಾಲೀನ ಆರ್ಥಿಕ ಕಾರ್ಯಕ್ರಮಕ್ಕೆ ಮುಖ್ಯವಾದ ಪರಿಗಣನೆಯಾಗಿವೆ.
ನನ್ನ ಸರ್ಕಾರ ಮೂರು ವರ್ಷಗಳ ಹಿಂದೆ ಇದೇ ತಿಂಗಳಿನಲ್ಲಿ ಅಧಿಕಾರಕ್ಕೆ ಬಂದಿತು. ಅಲ್ಲಿಂದ ನಾವು ಆರ್ಥಿಕತೆ ಮತ್ತು ಆಡಳಿತಾತ್ಮಕ ಪ್ರಕ್ರಿಯೆಗಳ ಸುಧಾರಣೆಗಾಗಿ ಹಲವು ಉಪಕ್ರಮಗಳನ್ನು ಆರಂಭಿಸಿದ್ದೇವೆ. ಅಲ್ಲದೆ ಮೇಕ್ ಇನ್ ಇಂಡಿಯಾ, ನವೋದ್ಯಮ ಭಾರತ, ಡಿಜಿಟಲ್ ಇಂಡಿಯಾದಂಥ ಹಲವು ಮಹತ್ವಾಕಾಂಕ್ಷೆಯ ಕಾರ್ಯಕ್ರಮಗಳನ್ನೂ ಆರಂಭಿಸಿದ್ದೇವೆ. ಇದರ ಫಲಿತಾಂಶ ಈಗಾಗಲೇ ಭಾರತೀಯ ಆರ್ಥಿಕತೆಯ ಚೇತರಿಕೆಯಲ್ಲಿ ಗೋಚರಿಸುತ್ತಿದೆ. ಇಂದು, ಭಾರತೀಯ ಆರ್ಥಿಕತೆಯು ವಿಶ್ವದಲ್ಲಿಯೇ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಆರ್ಥಿಕತೆಯಾಗಿದೆ. ಈ ವೇಗವನ್ನು ಕಾಪಾಡಿಕೊಳ್ಳುವುದರ ಜೊತೆಗೆ, ನಾವು ವ್ಯವಸ್ಥೆಯಲ್ಲಿನ ಅಸಾಮರ್ಥ್ಯಗಳನ್ನು ತೆಗೆದು ಹಾಕುವತ್ತಲೂ ಗಮನಹರಿಸಿದ್ದೇವೆ. ನಾವು ನವ ಭಾರತ ನಿರ್ಮಾಣದ ಪ್ರಕ್ರಿಯೆಯಲ್ಲಿದ್ದೇವೆ. ಹೀಗಾಗಿ, ನಮ್ಮ ಗಮನವು ಸುಗಮವಾಗಿ ಕೆಲಸ ಮಾಡಿಸುವುದಾಗಿದೆ, ಅದರಲ್ಲೂ ಸರಾಗವಾಗಿ ವಾಣಿಜ್ಯ ನಡೆಸುವುದಾಗಿದೆ. ಇದರಲ್ಲಿ ನೀತಿಗಳು, ಪ್ರಕ್ರಿಯೆಗಳು ಮತ್ತು ಪದ್ಧತಿಗಳಲ್ಲಿ ಸುಧಾರಣೆ ತರುವುದೂ ಸೇರಿದೆ. ದೇಶೀಯ ಮತ್ತು ವಿದೇಶೀ ಹೂಡಿಕೆಗೆ ಉತ್ತಮ ವಾತಾರಣ ಸೃಷ್ಟಿಸುವುದೂ ಸಹ ಇದರಲ್ಲಿ ಸೇರಿದೆ.
.
ಈ ನಿಟ್ಟಿನಲ್ಲಿ ನಾವು ಸಾಕಷ್ಟು ಸಾಧನೆ ಮಾಡಿದ್ದೇವೆ ಮತ್ತು ಯಶಸ್ಸು ಸಾಧಿಸಿದ್ದೇವೆ. ನಮ್ಮ ಜಾಗತಿಕ ಶ್ರೇಣಿ ಹಲವು ಮಾನದಂಡಗಳಲ್ಲಿ ಮೇಲೆ ಸಾಗಿದೆ. ಆದಾಗ್ಯೂ, ಇದು ನಿರಂತರ ಪ್ರಯತ್ನವಾಗಿದೆ. ಹಾಗಾಗಿಯೇ, ಇದು ಮುಂದುವರಿಯಲೇಬೇಕು. ಇದು ಮೂಲಭೂತವಾಗಿ ವರ್ತನೆ ಮತ್ತು ವಿಧಾನದಲ್ಲಿ ಬದಲಾವಣೆ. ಜನತೆಗೆ ತಮ್ಮ ಸಾಮರ್ಥ್ಯವನ್ನು ಅರಿಯಲು ಭಾರತವನ್ನು ಉತ್ತಮ ಸ್ಥಾನದಲ್ಲಿ ಕೂರಿಸುವುದು ಇದರ ಉದ್ದೇಶವಾಗಿದೆ. ಇದಕ್ಕಾಗಿ ನಮ್ಮ ಯುವಕರಿಗೆ ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ಕಲ್ಪಿಸುವುದು ಅಗತ್ಯವಾಗಿದೆ. ಇತ್ತೀಚಿನ ಜಿ.ಎಸ್.ಟಿ. ಕಾಯಿದೆ ಸರ್ಕಾರದ ಅಂಥ ಮತ್ತೊಂದು ಉಪಕ್ರಮವಾಗಿದೆ. ದೇಶದಲ್ಲಿ ಏಕರೂಪದ ಮತ್ತು ಸಮರ್ಥ ವಾಣಿಜ್ಯ ಪರಿಸರ ರೂಪಿಸುವ ಬೇಡಿಕೆ ತುಂಬಾ ಹಳೆಯದು.
ಟರ್ಕಿಯ ನಿರ್ಮಾಣ ಸಂಸ್ಥೆಗಳು ಅನ್ಯ ದೇಶದಲ್ಲಿ ಯಶಸ್ವಿಯಾಗಿ ಹಲವು ಮೂಲಸೌಕರ್ಯ ಮತ್ತು ನಿರ್ಮಾಣ ಕಾಮಗಾರಿಗಳನ್ನು ಕೈಗೊಂಡಿವೆ ಎಂಬುದು ನನಗೆ ತಿಳಿದಿದೆ. ನಮ್ಮ ಮೂಲಸೌಕರ್ಯ ಅಗತ್ಯ ಹೇರಳವಾಗಿದೆ, ಅದರಲ್ಲಿ ಸಾಮಾಜಿಕ ಮತ್ತು ಕೈಗಾರಿಕಾ ಮೂಲಸೌಕರ್ಯ ಪ್ರಮುಖವಾದುದಾಗಿದೆ. ನಾವು ಅದನ್ನು ಬಲವಾಗಿ ಮತ್ತು ವೇಗವಾಗಿ ನಿರ್ಮಿಸಲು ಉತ್ಸುಕರಾಗಿದ್ದೇವೆ. ಟರ್ಕಿಯ ಕಂಪನಿಗಳು ಈ ಪ್ರಯತ್ನದಲ್ಲಿ ಸುಲಭವಾಗಿ ಭಾಗಿಗಳಾಗಬಹುದು. ನಾನು ಕೆಲವೊಂದು ಉದಾರಹಣೆಗಳನ್ನು ನೀಡುತ್ತೇನೆ.:
ನಾವು 2022ರಹೊತ್ತಿಗೆ 50 ಲಕ್ಷ ಮನೆಗಳನ್ನು ನಿರ್ಮಿಸಲು ಯೋಜನೆ ರೂಪಿಸಿದ್ದೇವೆ. ಈ ಉದ್ದೇಶಕ್ಕಾಗಿ ನಾವು ನಾವು ನಮ್ಮ ಎಫ್.ಡಿ.ಐ. ನೀತಿಯನ್ನು ನಿರ್ಮಾಣ ವಲಯದಲ್ಲಿ ಪರಿಷ್ಕೃರಿಸಿದ್ದೇವೆ;
ನಾವು ಐವತ್ತು ನಗರಗಳಲ್ಲಿ ಮೆಟ್ರೋ ರೈಲು ಯೋಜನೆ ಮತ್ತು ವಿವಿಧ ರಾಷ್ಟ್ರೀಯ ಕಾರಿಡಾರ್ ಗಳಲ್ಲಿ ಅತಿ ವೇಗದ ರೈಲುಗಳ ಸಂಚಾರವನ್ನು ರೂಪಿಸಿದ್ದೇವೆ;
ಮುಂದಿನ ಕೆಲವು ವರ್ಷಗಳಲ್ಲಿ ನಾವು 175 ಗಿಗಾ ವ್ಯಾಟ್ ನವೀಕರಿಸಬಹುದಾದ ಇಂಧನ ಉತ್ಪಾದನೆಯ ಗುರಿಯನ್ನು ಹೊಂದಿದ್ದೇವೆ;
ವಿದ್ಯುತ್ ಉತ್ಪಾದನೆಯ ಜೊತೆಗೆ ವಿತರಣೆಯ ಸಮಸ್ಯೆ, ದಾಸ್ತಾನು ಮತ್ತು ಸರಬರಾಜು ಸಹ ನಮಗೆ ಅಷ್ಟೇ ಮಹತ್ವದ್ದಾಗಿದೆ;
ನಾವು ನಮ್ಮ ರೈಲ್ವೆಯನ್ನು ಆಧುನೀಕರಣ ಮಾಡುತ್ತಿದ್ದೇವೆ ಮತ್ತು ನಮ್ಮ ಹೆದ್ದಾರಿಗಳನ್ನು ಮೇಲ್ದರ್ಜೆಗೇರಿಸುತ್ತಿದ್ದೇವೆ. ಕಳೆದ ಮೂರು ವರ್ಷಗಳಲ್ಲಿ ನಾವು ಈ ಮೂರು ವಲಯಗಳಿಗೆ ಹೆಚ್ಚಿನ ಹಂಚಿಕೆ ಮಾಡಿದ್ದೇವೆ;
ನಾವು ಸಾಗರಮಾಲಾ ಮಹತ್ವಾಕಾಂಕ್ಷೆಯ ಯೋಜನೆ ಅಡಿಯಲ್ಲಿ ನಮ್ಮ ಹಳೆಯ ಬಂದರುಗಳನ್ನು ಆಧುನೀಕರಿಸುತ್ತಿದ್ದೇವೆ ಮತ್ತು ಹೊಸ ಬಂದರು ನಿರ್ಮಿಸುತ್ತಿದ್ದೇವೆ;
ಹಾಲಿ ಇರುವ ವಿಮಾನ ನಿಲ್ದಾಣಗಳನ್ನು ಆಧುನೀಕರಿಸುವ ಮತ್ತು ಆರ್ಥಿಕ ಮತ್ತು ಪ್ರವಾಸೋದ್ಯಮ ಮಹತ್ವ ಇರುವೆಡೆ ಪ್ರಾದೇಶಿಕ ವಿಮಾನ ನಿಲ್ದಾಣಗಳ ನಿರ್ಮಾಣದೊಂದಿಗೆ ಹೆಚ್ಚಿನ ಸಂಪರ್ಕ ಹೆಚ್ಚಿಸುವತ್ತ ಗಮನ ಹರಿಸಿದ್ದೇವೆ.
ಟರ್ಕಿಯ ಪ್ರವಾಸೋದ್ಯಮ ವಲಯ ಜಗದ್ವಿಖ್ಯಾತವಾಗಿದೆ. ಕಳೆದ ಕೆಲವು ವರ್ಷಗಳಲ್ಲಿ ಟರ್ಕಿಗೆ ಹೋಗುವ ಭಾರತೀಯ ಪ್ರವಾಸಿಗರ ಸಂಖ್ಯೆಯಲ್ಲಿ ಹೆಚ್ಚಳವಾಗಿದೆ. ಟರ್ಕಿ ಭಾರತೀಯ ಚಲನಚಿತ್ರ ಮತ್ತು ಕಿರುತೆರೆಯ ನೆಚ್ಚಿನ ಚಿತ್ರೀಕರಣ ತಾಣವೂ ಆಗಿದೆ. ಇದೇ ವೇಳೆ ನಾವು ಎರಡೂ ಕಡೆಯ ಪ್ರವಾಸೋದ್ಯಕ್ಕೆ ಉತ್ತೇಜನ ನೀಡಬೇಕು, ಈ ಕ್ಷೇತ್ರದಲ್ಲಿನ ವ್ಯಾಪಕ ಅವಕಾಶಗಳನ್ನು ಈ ಕೈಗಾರಿಕೆಗಳು ಬಳಕೆ ಮಾಡಿಕೊಳ್ಳಬೇಕು. ನಮ್ಮ ಪ್ರಾದೇಶಿಕ ಚಲನಚಿತ್ರ ಕೈಗಾರಿಕೆ ಅಷ್ಟೇ ಚಲನಶೀಲವಾಗಿರುವುದು ಇದಕ್ಕೆ ಒಂದು ಉದಾಹರಣೆ ಮಾತ್ರ.
ಭಾರತ ಮತ್ತು ಟರ್ಕಿ ಎರಡೂ ಇಂಧನ ಕೊರತೆ ಎದುರಿಸುತ್ತಿವೆ ಮತ್ತು ನಮ್ಮ ಇಂಧನ ಅಗತ್ಯಗಳು ಸದಾ ಏರುತ್ತಿರುತ್ತವೆ. ಹೀಗಾಗಿ ಹೈಡ್ರೋ ಕಾರ್ಬನ್ ವಲಯ ಎರಡೂ ರಾಷ್ಟ್ರಗಳ ಸಮಾನ ಆಸಕ್ತಿಯ ಕ್ಷೇತ್ರವಾಗಿದೆ. ಇದು ಸೌರ ಮತ್ತು ಪವನ ಇಂಧನಕ್ಕೂ ಸೂಕ್ತವಾಗುತ್ತದೆ.
ಹೀಗಾಗಿ ನಮ್ಮ ದ್ವಿಪಕ್ಷೀಯ ಬಾಂಧವ್ಯದಲ್ಲಿ ಇಂಧನ ವಲಯ ಮಹತ್ವದ ಆಧಾರಸ್ತಂಭವಾಗಿದೆ. ಗಣಿ ಮತ್ತು ಆಹಾರ ಸಂಸ್ಕರಣೆ ಹೆಚ್ಚಿನ ಭರವಸೆ ಇರುವ ಅನ್ಯ ಕ್ಷೇತ್ರಗಳಾಗಿವೆ. ನಾವು ನಮ್ಮ ಶಕ್ತಿಯನ್ನು ಜವಳಿ ಮತ್ತು ವಾಹನ ವಲಯದಲ್ಲಿಯೂ ಹಾಕಬಹುದಾಗಿದೆ. ಟರ್ಕಿ ಬಲವಾದ ಉತ್ಪಾದನಾ ವಲಯವಾಗಿದ್ದರೆ ಭಾರತ ಕಡಿಮೆ ವೆಚ್ಚದ ಉತ್ಪಾದನೆಯ ತಾಣವಾಗಿದೆ. ಇದರ ಜೊತೆಗೆ ವೆಚ್ಚದ ವಿಚಾರದಲ್ಲಿ, ನಮ್ಮಲ್ಲಿ ಕೌಶಲ – ಅರೆ ಕೌಶಲ ಹೊಂದಿದ ದೊಡ್ಡ ಪಡೆ ಹಾಗೂ ಬಲವಾದ ಸಂಶೋಧನೆ ಮತ್ತು ಅಭಿವೃದ್ಧಿಯ ಸಾಮರ್ಥ್ಯವಿದೆ.
ಆರ್ಥಿಕ ಮತ್ತು ತಾಂತ್ರಿಕ ಸಹಕಾರದ ಭಾರತ-ಟರ್ಕಿ ಜಂಟಿ ಸಮಿತಿ ಉತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ಅದರ ಮುಂದಿನ ಸಭೆಯಲ್ಲಿ, ಎರಡೂ ಕಡೆಯ ಹೂಡಿಕೆ ಮತ್ತು ವಾಣಿಜ್ಯವನ್ನು ಉತ್ತೇಜಿಸಲು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಪರಾಮರ್ಶಿಸಬಹುದಾಗಿದೆ.
ಅದೇ ರೀತಿ, ನಾನು ಎರಡೂ ಕಡೆಯ ವಾಣಿಜ್ಯ ಮತ್ತು ಕೈಗಾರಿಕಾ ಸಂಸ್ಥೆಗಳಿಗೆ ಪರಸ್ಪರ ಸಕ್ರಿಯವಾಗಿರುವಂತೆ ಕೋರುತ್ತೇನೆ. ಬಿ -2-ಬಿ ಮತ್ತು ಸರ್ಕಾರದ ಮಟ್ಟದಲ್ಲಿ ನಮ್ಮ ಪ್ರಕ್ರಿಯೆ ಆಪ್ತವಾಗಿ ಕ್ರಿಯಾಶೀಲವಾಗಲಿ.
ಇಂದಿನ ವೇದಿಕೆಯಲ್ಲಿ ಪಾಲ್ಗೊಂಡಿದ್ದಕ್ಕಾಗಿ ನಾನು ಅಧ್ಯಕ್ಷ ಎರ್ಡೋಗನ್, ನಿಯೋಗದ ಸದಸ್ಯರು ಮತ್ತು ಭಾರತ- ಟರ್ಕಿ ವಾಣಿಜ್ಯ ಸಂಸ್ಥೆಯ ಸದಸ್ಯರಿಗೆ ಧನ್ಯವಾದ ಅರ್ಪಿಸುತ್ತೇನೆ. ಇದು ಭಾರತೀಯ ಮತ್ತು ಟರ್ಕಿ ವಾಣಿಜ್ಯ ಸಮುದಾಯವನ್ನು ಒಟ್ಟಿಗೆ ತರುವ ಉತ್ತಮ ಅವಕಾಶವಾಗಿದೆ.
ಸ್ನೇಹಿತರೇ!
ನಮ್ಮ ಜನರ ಕಲ್ಯಾಣಕ್ಕಾಗಿ ನಮ್ಮ ಆರ್ಥಿಕ ಚಟುವಟಿಕೆಗಳ ಮಟ್ಟವನ್ನು ಹೆಚ್ಚಿಸಲು ಒಗ್ಗೂಡಿ ಶ್ರಮಿಸೋಣ. ಭಾರತದ ಕಡೆಯಿಂದ, ನಾನು ಮುಕ್ತ ಬಾಹುಗಳಿಂದ ನಿಮ್ಮನ್ನು ಸ್ವಾಗತಿಸುತ್ತೇನೆ.
ನಾನು ವಿಶ್ವಾಸದೊಂದಿಗೆ ಹೇಳುತ್ತೇನೆ, ಭಾರತ ಇಂದು ಇರುವಂತೆ ಎಂದೂ ಇಷ್ಟು ವಿಶ್ವಾಸಪೂರ್ಣ ತಾಣವಾಗಿರಲಿಲ್ಲ.
ಇದನ್ನು ಉತ್ತಮ ಮಾಡಲು, ನಾನು ನನ್ನ ವೈಯಕ್ತಿಕ ಕಾಳಜಿ ಮತ್ತು ಸಹಕಾರದ ಭರವಸೆ ನೀಡುತ್ತೇನೆ.
ಧನ್ಯವಾದಗಳು!
India and Turkey enjoy good economic ties: PM @narendramodi
— PMO India (@PMOIndia) May 1, 2017
While this is encouraging, the level of present economic and commercial relations is not enough against the real potential: PM @narendramodi pic.twitter.com/4hTeLfjTtZ
— PMO India (@PMOIndia) May 1, 2017
As we strive to build stronger political ties, the time has come to also make more aggressive effort to deepen the economic relations: PM pic.twitter.com/DvmvSUkEE3
— PMO India (@PMOIndia) May 1, 2017
Economic cooperation has become pillar of every bilateral relationship - PM @narendramodi addresses India-Turkey Business Forum pic.twitter.com/2AGDZ0poP0
— Gopal Baglay (@MEAIndia) May 1, 2017
Today’s knowledge-based global economy is continuously opening new areas. We must factor this in our economic & commercial interactions: PM
— PMO India (@PMOIndia) May 1, 2017
Indian economy is fastest growing major economy. Apart from maintaining this pace, our focus is to remove inefficiencies from the system: PM
— PMO India (@PMOIndia) May 1, 2017
PM: Impct of several govt initiates 4 eco n admn rfrms n flgsh'p progs like Make in India in last 3 yrs is seen in perfrmnce of Indian ecnmy pic.twitter.com/3cf6xZJmoH
— Gopal Baglay (@MEAIndia) May 1, 2017
We have planned to build 50 million houses by 2022. For this purpose we have repeatedly refined our FDI Policy in construction sector: PM
— PMO India (@PMOIndia) May 1, 2017
PM @narendramodi : We are in the process of building New India; reforming policies, processes and procedures are govt. priorities
— Gopal Baglay (@MEAIndia) May 1, 2017
We are planning metro rail projects in fifty cities and high speed trains in various national corridors: PM @narendramodi
— PMO India (@PMOIndia) May 1, 2017
We are putting up new ports and modernizing the old ones through an ambitious plan called Sagarmala: PM @narendramodi
— PMO India (@PMOIndia) May 1, 2017
Hydrocarbon sector is a common area of interest for both countries. The same would also be relevant for solar and wind energy: PM
— PMO India (@PMOIndia) May 1, 2017
I would also urge the Chambers of Commerce & Industry of both sides to engage with each other pro-actively: PM @narendramodi
— PMO India (@PMOIndia) May 1, 2017