Government of India's 'Act East policy' puts this (ASEAN) region at the centre of our engagement: PM Modi
Task of transforming India is proceeding at an unprecedented scale: PM Modi
Digital transactions have increased significantly. We are using technology to reach out to people: PM
Keeping our emphasis on 'Minimum Government, Maximum Governance', about 1200 outdated laws have been repealed in the last three years: PM
We want to make India a Global Manufacturing Hub and we want to make our youngsters job creators: PM Modi

ಆಸಿಯಾನ್ ವಾಣಿಜ್ಯ ಸಲಹಾ ಮಂಡಳಿಯ ಅಧ್ಯಕ್ಷರಾದ ಶ್ರೀ  ಜೋಯಿ ಕಾನ್ಸೆಪ್ಶನ್ ಅವರೇ,

ಘನತೆವೆತ್ತರೆ,

ಮಹಿಳೆಯರೇ ಮತ್ತು ಮಹನೀಯರೇ!

 

ನಾನು ಮೊದಲಿಗೆ ತಡವಾಗಿ ಬಂದಿದ್ದಕ್ಕೆ ಕ್ಷಮೆ ಕೋರುತ್ತೇನೆ. ವಾಣಿಜ್ಯದಲ್ಲಿ, ರಾಜಕೀಯದಂತೆಯೇ ಸಮಯ ಮತ್ತು ಸಮಯಪಾಲನೆ ಅತ್ಯಂತ ಮಹತ್ವದ್ದು. ಕೆಲವು ಸಂದರ್ಭದಲ್ಲಿ ನಮ್ಮ ಸಂಪೂರ್ಣ ಪ್ರಯತ್ನದ ನಡುವೆಯೂ ನಾವೂ ಏನೂ ಮಾಡಲು ಆಗುವುದಿಲ್ಲ. ನನ್ನ ಪ್ರಥಮ ಫಿಲಿಪ್ಪೀನ್ಸ್ ಭೇಟಿಯಲ್ಲಿ ನಾನು ಮನಿಲಾದಲ್ಲಿರುವ ಹರ್ಷಿಸುತ್ತೇನೆ.

ಭಾರತ ಮತ್ತು ಫಿಲಿಪ್ಪೀನ್ಸ್ ನಡುವೆ ಹಲವು ಸಮಾನ ಅಂಶಗಳಿವೆ:

  • ನಮ್ಮದು ಬಹುಮುಖಿ ಸಮಾಜ ಮತ್ತು ಚಲನಶೀಲ ಪ್ರಜಾಪ್ರಭುತ್ವ.
  • ನಮ್ಮ ಆರ್ಥಿಕತೆ ಜಗತ್ತಿನಲ್ಲಿ ತ್ವರಿತವಾಗಿ ಬೆಳೆಯುತ್ತಿರುವ ಆರ್ಥಿಕತೆಗಳಲ್ಲಿ ಒಂದಾಗಿದೆ.
  • ನಮ್ಮಲ್ಲಿ ದೊಡ್ಡ  ಮಹತ್ವಾಕಾಂಕ್ಷೆಯ ಯುವ ಜನಸಂಖ್ಯೆಯಿದ್ದು, ಅವು ನಾವಿನ್ಯಪೂರ್ಣ ಮತ್ತು ಉದ್ಯಮಶೀಲವಾಗಿವೆ.
  • ಫಿಲಿಪ್ಪೀನ್ಸ್ ಭಾರತದಂತೆಯೇ ಸೇವಾ ಕ್ಷೇತ್ರದಲ್ಲಿ ಶಕ್ತಿಕೇಂದ್ರವಾಗಿದೆ.

ಭಾರತದಲ್ಲಿರುವಂತೆ, ಫಿಲಿಪ್ಪೀನ್ಸ್ ನಲ್ಲಿ ಕೂಡ  ಸರ್ಕಾರ ಬದಲಾವಣೆಯನ್ನು ಬಯಸುತ್ತದೆ, ಸಮಗ್ರ ಅಭಿವೃದ್ಧಿ, ಮೂಲಸೌಕರ್ಯ ಅಭಿವೃದ್ಧಿ ಮತ್ತು ಭ್ರಷ್ಟಾಚಾರದ ವಿರುದ್ಧ ಹೋರಾಡಲು ಇಚ್ಛಿಸುತ್ತದೆ. ನಮ್ಮ ಹಲವು ಪ್ರಮುಖ ಐ.ಟಿ. ಸಂಸ್ಥೆಗಳು ಇಲ್ಲಿ ಹೂಡಿಕೆ ಮಾಡಿವೆ. ಅವರು ಇಲ್ಲಿ ಸಾವಿರಾರು ಉದ್ಯೋಗವನ್ನು ಸೃಷ್ಟಿಸಿದ್ದು, ಫಿಲಿಪ್ಪೀನ್ಸ್ ಸೇವಾ ಕ್ಷೇತ್ರವನ್ನು ವಿಶ್ವಾದ್ಯಂತ ಉತ್ತೇಜಿಸುತ್ತಿದ್ದಾರೆ.

 

ಸ್ನೇಹಿತರೆ,

ಇಂದು ಬೆಳಗ್ಗೆ ನಾವು ಆಸಿಯಾನ್ ಶೃಂಗದ ಉದ್ಘಾಟನಾ ಸಮಾರಂಭದಲ್ಲಿ ರಾಮಾಯಣ ಆಧಾರಿತ ರಾಮ ಹರಿ ನೃತ್ಯ ರೂಪಕ ನೋಡಿದೆವು. ಇದು ಭಾರತ ಮತ್ತು ಆಸಿಯಾನ್ ಜನರು ಐತಿಹಾಸಿಕವಾಗಿ ಒಗ್ಗೂಡಿರುವುದರ ಸಂಕೇತವಾಗಿದೆ. ಇದು ಕೇವಲ ಐತಿಹಾಸಿಕ ನಂಟಷ್ಟೇ ಅಲ್ಲ, ಇದು ಜೀವಂತವಾದ ಹಂಚಿಕೆಯ ಪರಂಪರೆಯಾಗಿದೆ. ನನ್ನ ಸರ್ಕಾರದ ಪೂರ್ವದತ್ತ ಕ್ರಮ ನೀತಿ, ಈ ದೇಶವನ್ನು ನಮ್ಮ ಕಾರ್ಯಕ್ರಮದ ಕೇಂದ್ರಬಿಂದುವಾಗಿದೆ. ನಾವು ಉತ್ತಮ ರಾಜಕೀಯ ಮತ್ತು ಜನರೊಂದಿಗಿನ ಸಂಪರ್ಕವನ್ನು ಆಸಿಯಾನ್ ವಲಯದ ಪ್ರತಿ ರಾಷ್ಟ್ರದೊಂದಿಗೆ ಹೊಂದಿದ್ದೇವೆ. ನಾವು ನ್ಮ ಆರ್ಥಿಕ ಮತ್ತು ವಾಣಿಜ್ಯ ಬಾಂಧವ್ಯವನ್ನು ಅದೇ ಮಟ್ಟಕ್ಕೆ ತರಲು ಇಚ್ಛಿಸುತ್ತೇವೆ.

 

ಸ್ನೇಹಿತರೆ,
ಭಾರತವನ್ನು ಪರಿವರ್ತಿಸುವ ಪ್ರಕ್ರಿಯೆಗಳು ಅಭೂತಪೂರ್ವ ಮಟ್ಟದಲ್ಲಿ ಸಾಗಿದೆ. ನಾವು ಉತ್ತಮ ಆಡಳಿತ ನೀಡಲು ಹಗಲಿರುಳು ಶ್ರಮಿಸುತ್ತಿದ್ದೇವೆ ಇದರಲ್ಲಿ ಸುಲಭ, ದಕ್ಷ ಮತ್ತು ಪಾರದರ್ಶಕ ಆಡಳಿತವೂ ಸೇರಿದೆ. 

ನಾನು ಒಂದು ಉದಾಹರಣೆ ನೀಡುತ್ತೇನೆ. ನಾವು ಖಾಸಗಿ ರೇಡಿಯೋ ವಾಹಿನಿಗಳು, ಟೆಲಿಕಾಂ ತರಂಗಾಂತರ, ಕಲ್ಲಿದ್ದಲು ಗಣಿ ಮತ್ತು ಇತರ ಖನಿಜಗಳು ಸೇರಿದಂತೆ ನೈಸರ್ಗಿಕ ಸಂಪನ್ಮೂಲಗಳ ಮುಕ್ತ ಹರಾಜು ಪ್ರಕ್ರಿಯೆ ಆರಂಭಿಸಿದೆವು. ಇದರಿಂದ 75 ಶತಕೋಟಿ ಅಮೆರಿಕನ್ ಡಾಲರ್ ಆದಾಯ ಬಂದಿದೆ. ನಾವು ತಂತ್ರಜ್ಞಾನವನ್ನು ಬಳಸಿಕೊಂಡು, ಜವಾಬ್ದಾರಿ, ಹೊಣೆಗಾರಿಕೆಯನ್ನು ಹೆಚ್ಚಿಸಿದ್ದೇವೆ ಮತ್ತು ವಿವೇಚನೆ ಮತ್ತು ಭ್ರಷ್ಟಾಚಾರವನ್ನು ತಗ್ಗಿಸಿದ್ದೇವೆ. ನಾವು ಹಣಕಾಸು ವಹಿವಾಟು ಮತ್ತು ತೆರಿಗೆ ವ್ಯವಸ್ಥೆಗಳಲ್ಲಿ ನಮ್ಮ ವಿಶಿಷ್ಟ ಗುರುತಿನ ಚೀಟಿ ವ್ಯವಸ್ಥೆ ಬಳಸಿಕೊಂಡಿದ್ದೇವೆ, ಇದರ ಫಲವನ್ನು ನೀವು ಕಾಣುತ್ತಿದ್ದೀರಿ.

 

ಈ ಕ್ರಮಗಳ ಜೊತೆಗೆ ಗರಿಷ್ಠ ಮೌಲ್ಯದ ನೋಟುಗಳ ಅಮಾನ್ಯೀಕರಣವು ನಮ್ಮ ಆರ್ಥಿಕತೆಯ ದೊಡ್ಡಭಾಗವನ್ನು ವಿಧ್ಯುಕ್ತಗೊಳಿಸಲು ಸಹಕಾರಿಯಾಗಿದೆ. ಹೊಸದಾಗಿ ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸುವವರ ಸಂಖ್ಯೆ ದುಪ್ಪಟ್ಟಾಗಿದೆ. ಡಿಜಿಟಲ್ ವಹಿವಾಟು ಒಂದು ವರ್ಷದಲ್ಲಿ ಶೇ.34ರಷ್ಟು ವೃದ್ಧಿಸಿದ್ದು, ನಾವು ಕಡಿಮೆ ನಗದು ಆರ್ಥಿಕತೆಯತ್ತ ದಾಪುಗಾಲು ಇಟ್ಟಿದ್ದೇವೆ. ನಾವು ಜನರನ್ನು ತಲುಪಲು ತಂತ್ರಜ್ಞಾನ ಬಳಸಿಕೊಂಡಿದ್ದೇವೆ. ಸಾರ್ವಜನಿಕರನ್ನು ತೊಡಗಿಸಿಕೊಳ್ಳುವ ಆನ್ ಲೈನ್ ವೇದಿಕೆ ಮೈಗೌನಲ್ಲಿ ಸಲಹೆಗಳು, ಕಲ್ಪನೆಗಳು ಮತ್ತು ನೀತಿ ಕಾರ್ಯಕ್ರಮಗಳ ಕುರಿತಂತೆ ಮಾಹಿತಿ 2 ದಶಲಕ್ಷ ಸಕ್ರಿಯ ನಾಗರಿಕರಿಂದ ದೊರಕುತ್ತಿದೆ.

 

ಆಡಳಿತ ಪರವಾದ ಮತ್ತು ಸಕಾಲದ  ಅನುಷ್ಠಾನ ಕುರಿತ ಐಸಿಟಿ ಆಧಾರಿತ ಬಹು ಮಾದರಿ ವೇದಿಕೆ –ಪ್ರಗತಿ ಎಂಬ ಹೊಸ ಚೌಕಟ್ಟು ರೂಪಿಸಿದ್ದೇವೆ. ಇದರಡಿ ನಾನು ಯೋಜನೆಗಳ ಅನುಷ್ಠಾನ ಪರಿಶೀಲಿಸಲು ಮತ್ತು ದೇಶಾದ್ಯಂತದ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ನಡೆಸುವ ಮೂಲಕ ಜನರ ಕುಂದುಕೊರತೆ ನಿವಾರಿಸಲು ಸಾಧ್ಯವಾಗಿದೆ. ಕನಿಷ್ಠ ಸರ್ಕಾರ, ಗರಿಷ್ಠ ಆಡಳಿತಕ್ಕೆ ಒತ್ತು ನೀಡಿದ್ದು, 1200 ಹಳೆಯ ಕಾನೂನುಗಳನ್ನು ಕಳೆದ ಮೂರು ವರ್ಷಗಳಲ್ಲಿ ತೆಗೆದು ಹಾಕಿದ್ದೇವೆ. 

ದಿವಾಳಿ ಮತ್ತು ದಿವಾಳಿತನ, ಐಪಿಆರ್ ಮತ್ತು ಮಧ್ಯಸ್ಥಿಕೆ ಕುರಿತ ಹೊಸ ಕಾಯಿದೆಗಳನ್ನು ತಂದಿದ್ದು, ಅವು ಚಾಲ್ತಿಯಲ್ಲಿವೆ. 36 ಶ್ವೇತ ಕೈಗಾರಿಕೆಗಳನ್ನು ಪರಿಸರ ಅನುಮತಿ ಅಗತ್ಯಗಳ ಹಿನ್ನೆಲೆಯಲ್ಲಿ ತೆಗೆಯಲಾಗಿದೆ. ಕಂಪನಿಯನ್ನು ಆರಂಭಿಸುವುದು ಈಗ ಕೇವಲ ಒಂದು ದಿನದ ಕೆಲಸ ಮಾತ್ರ. ನಾವು ಕೈಗಾರಿಕಾ ಪರವಾನಗಿಯನ್ನು ಸರಳೀಕರಿಸಿದ್ದು, ಪರಿಸರ ಮತ್ತು ಅರಣ್ಯ ಇಲಾಖೆಯ ಅನುಮೋದನೆಗೆ ಆನ್ ಲೈನ್ ಅರ್ಜಿಗಳ ಪ್ರಕ್ರಿಯೆ ಆರಂಭಿಸಿದ್ದೇವೆ. ಇವೆಲ್ಲವೂ ಹೊಸ ವಾಣಿಜ್ಯ ತೆರೆಯುವುದನ್ನು ಸುಲಭಗೊಳಿಸಿವೆ. ಅದರ ಫಲಿತಾಂಶ ಕೆಳಕಂಡಂತಿದೆ.

 

ಭಾರತವು ವಿಶ್ವಬ್ಯಾಂಕ್ ನ ಸುಗಮ ವಾಣಿಜ್ಯ ನಡೆಸುವ ಸೂಚ್ಯಂಕದಲ್ಲಿ ಈ ವರ್ಷ 30 ಸ್ಥಾನ ಮೇಲೇರಿದೆ. ಈ ವರ್ಷ ಇದು ಯಾವುದೇ ದೇಶದ ಅತಿ ದೊಡ್ಡ ಸಾಧನೆಯಾಗಿದ್ದು, ಭಾರತದ ದೀರ್ಘಕಾಲೀನ ಸುಧಾರಣಾ ಪಥಕ್ಕೆ ಸಿಕ್ಕ  ಮನ್ನಣೆಯಾಗಿದೆ.  
ಅಲ್ಲದೆ ವಿಶ್ವ ಇವುಗಳನ್ನೂ ಗುರುತಿಸಿದೆ:

  • ನಾವು ಕಳೆದ ಎರಡು ವರ್ಷಗಳಲ್ಲಿ ವಿಶ್ವ ಆರ್ಥಿಕ ವೇದಿಕೆಯ ಜಾಗತಿಕ ಸ್ಪರ್ಧಾತ್ಮಕತೆ ಸೂಚ್ಯಂಕದಲ್ಲಿ 32 ಸ್ಥಾನ ಮೇಲೇರಿದ್ದೇವೆ.
  • ಕಳೆದ ಎರಡು ವರ್ಷಗಳಲ್ಲಿ ಡಬ್ಲ್ಯುಐಪಿಓ ಸೂಚ್ಯಂಕದಲ್ಲಿ 21 ಸ್ಥಾನ ಜಿಗಿದ್ದಿದ್ದೇವೆ.
  • ನಾವು ವಿಶ್ವಬ್ಯಾಂಕ್ ನ ಲಾಜಿಸ್ಟಿಕ್ಸ್ ಸಾಮರ್ಥ್ಯ ಸೂಚ್ಯಂಕದಲ್ಲಿ 19 ಸ್ಥಾನ ಮೇಲೆ ಸಾಗಿದ್ದೇವೆ.

ಸ್ನೇಹಿತರೆ,

ನಮ್ಮ ಆರ್ಥಿಕತೆಯ ಬಹುತೇಕ ವಲಯಗಳು ಈಗ ಎಫ್.ಡಿ.ಐ.ಗೆ ಮುಕ್ತವಾಗಿವೆ. ಶೇ.90ರಷ್ಟು ಕ್ಷೇತ್ರಗಳು ಸ್ವಯಂಚಾಲಿತ ಅನುಮೋದನೆ ಮಾರ್ಗದಲ್ಲಿವೆ. ಭಾರತವು ವಿದೇಶೀ ಬಂಡವಾಳ ಹೂಡಿಕೆಯ ಆಕರ್ಷಣೆಯಲ್ಲಿ ಮುಂಚೂಣಿಯಲ್ಲಿದೆ. ಕಳೆದ ಮೂರುವರ್ಷಗಳಿಗೆ ಹೋಲಿಸಿದೆ, ನಾವು ಈ ವರ್ಷ ಶೇ.67ರಷ್ಟು ಹೆಚ್ಚಿನ ಎಫ್.ಡಿ.ಐ. ಸೆಳೆದಿದ್ದೇವೆ. ಈಗ ನಮ್ಮದು ಜಾಗತಿಕವಾಗಿ ಸಮಗ್ರವಾದ ಆರ್ಥಿಕತೆಯಾಗಿದೆ. ಮಿಗಿಲಾಗಿ, ಇವುಗಳನ್ನು ಕೆಲವು ಪ್ರಮುಖ ಸುಧಾರಣೆಗಳನ್ನು ಕೈಗೊಳ್ಳುವ ಮೊದಲೇ ಸಾಧಿಸಿದ್ದಾಗಿದೆ.

ಈ ವರ್ಷ ಜುಲೈನಲ್ಲಿ, ಏಕರೂಪದ ಸರಕು ಮತ್ತು ಸೇವೆಗಳ ತೆರಿಗೆಯನ್ನು ದೇಶಾದ್ಯಂತ ಜಾರಿ ಮಾಡುವ ಸಂಕೀರ್ಣವಾದ ಕಸರತ್ತು ಮಾಡಿದೆವು. ಇದನ್ನು ದೇಶಾದ್ಯಂತ ರಾಜ್ಯಮಟ್ಟದ ಮತ್ತು ಕೇಂದ್ರೀಯ ಮಟ್ಟದ ತೆರಿಗೆಯಲ್ಲಿ ಜಾರಿಗೆ ತಂದೆವು. ವಿಶಾಲತೆ ಮತ್ತು ವೈವಿಧ್ಯತೆಯನ್ನು ಉಳ್ಳ ಹಾಗೂ ಒಕ್ಕೂಟ ವ್ಯವಸ್ಥೆ ಇರುವ ದೇಶದಲ್ಲಿ ಇದು ಸಣ್ಣ ಸಾಧನೆಯಲ್ಲ. ಅದೇ ವೇಳೆ ಇದಿಷ್ಟೇ ಸಾಲದು ಎಂಬುದನ್ನು ನಾವು ಬಲವಾಗಿ ನಂಬಿದ್ದೇವೆ.

 

ಸ್ನೇಹಿತರೆ, ಭಾರತದ ಜನಸಂಖ್ಯೆಯ ಅತಿ ದೊಡ್ಡ ಭಾಗಕ್ಕೆ ಬ್ಯಾಂಕಿಂಗ್ ಸೇವೆಗಳ ಪ್ರವೇಶವೇ ಇರಲಿಲ್ಲ. ಇದು ಅವರಿಗೆ ಉಳಿತಾಯ ಮತ್ತು ಸಾಂಸ್ಥಿಕ ಸಾಲ ಸೌಲಭ್ಯದ ಅವಕಾಶವನ್ನೇ ನಿರಾಕರಿಸಿತ್ತು. ಜನ್ ಧನ್ ಯೋಜನೆಯ ಮೂಲಕ ಕೆಲವೇ ತಿಂಗಳುಗಲಲ್ಲಿ, ಲಕ್ಷಾಂತರ ಭಾರತೀಯರ ಬದುಕು ಬದಲಾಗಿದೆ. 197 ದಶಲಕ್ಷ ಬ್ಯಾಂಕ್ ಖಾತೆಗಳನ್ನು ಒಂದು ವರ್ಷದಲ್ಲಿ ತೆರೆಯಲಾಗಿದೆ.

ಈ ವರ್ಷ ಆಗಸ್ಟ್ ತಿಂಗಳವರೆಗೆ 290 ದಶಲಕ್ಷ ಅಂಥ ಖಾತೆಯನ್ನು ಭಾರತೀಯ ಬ್ಯಾಂಕ್ ಗಳಲ್ಲಿ ತೆರೆಯಲಾಗಿದೆ. ಸುಮಾರು 200 ದಶಲಕ್ಷ ರುಪೆ ಕಾರ್ಡ್ ಗಳನ್ನು ವಿತರಿಸಲಾಗಿದ್ದು, ಇದರಿಂದ ನಗದು ರಹಿತ ವಹಿವಾಟು ಸುಲಭವಾಗಿದೆ. ಬಡವರಿಗೂ ಬ್ಯಾಂಕಿಂಗ್ ಸೇವೆ ದೊರಕಿರುವುದು ಭ್ರಷ್ಟಾಚಾರದ ವಿರುದ್ಧ ಹೋರಾಟದಲ್ಲಿ ಪ್ರಮುಖ ಪಾತ್ರವಹಿಸಿದೆ. ಈಗ ಬಡವರಿಗೆ ಸೀಮಿತವಾದ ಸಬ್ಸಿಡಿಗಳು ನೇರ ಸವಲತ್ತು ವರ್ಗಾವಣೆ ಮೂಲಕ ಅವರ ಖಾತೆಗಳಿಗೆ ಜಮಾ ಆಗುತ್ತಿದ್ದು, ಸೋರಿಕೆಯನ್ನು ತಡೆದಿದೆ ಮತ್ತು ಯಾವುದೇ ತಾರತಮ್ಯಕ್ಕೆ ಅವಕಾಶ ಇಲ್ಲದಂತೆ ಮಾಡಿದೆ. 146 ದಶಲಕ್ಷ ಜನರು ನೇರವಾಗಿ ತಮ್ಮ ಬ್ಯಾಂಕ್ ಖಾತೆಗಳಿಗೆ ಅಡುಗೆ ಅನಿಲದ ಸಬ್ಸಿಡಿ ಪಡೆಯುತ್ತಿದ್ದಾರೆ. ಇಂದು, ಸರ್ಕಾರ 59 ವಿವಿಧ ಯೋಜನೆಗಳಿಗೆ ನೇರ ಸವಲತ್ತು ವರ್ಗಾವಣೆ ಬಳಸುತ್ತಿದೆ. ಅರ್ಹ ಫಲಾನುಭವಿಗಳ ಬ್ಯಾಂಕ್ ಖಾತೆಗಳಿಗೆ 10 ಶತಕೋಟಿ ಅಮೆರಿಕನ್ ಡಾಲರ್ ನಷ್ಟು ಸಬ್ಸಿಡಿ ನೇರವಾಗಿ ವರ್ಗಾವಣೆ ಆಗತ್ತಿದೆ.



ಸ್ನೇಹಿತರೆ,

ಈ ಶೃಂಗಸಭೆಯ ಪ್ರಮುಖ ಧ್ಯೇಯ ಉದ್ಯಮಶೀಲತೆಯಾಗಿದೆ. ನಾವು ಮೇಕ್ ಇನ್ ಇಂಡಿಯಾ ಎಂಬ ಅಭಿಯಾನ ಆರಂಭಿಸಿದ್ದೇವೆ. ಈ ಉಪಕ್ರಮದ ಮೂಲಕ ನಾವು ಭಾರತವನ್ನು ಜಾಗತಿಕ ಮೌಲ್ಯ ಸರಪಳಿಯಲ್ಲಿ ಪರಿವರ್ತಿಸಲು ಬದ್ಧರಾಗಿದ್ದೇವೆ. ನಾವು ಭಾರತವನ್ನು ಉತ್ಪಾದನಾ ತಾಣವಾಗಿ ಬದಲಾಯಿಸಲು ಬಯಸಿದ್ದೇವೆ. ಅದೇ ವೇಳೆ, ನಮ್ಮ ಯುವಕರು ಉದ್ಯೋಗ ಕೇಳುವವರಾಗುವ ಬದಲು, ಉದ್ಯೋಗಧಾತರಾಗಬೇಕು ಎಂದು ನಾವು ಬಯಸುತ್ತೇವೆ. ಇದಕ್ಕಾಗಿ, ಸ್ಟಾರ್ಟ್ ಅಪ್ ಇಂಡಿಯಾ, ಸ್ಟ್ಯಾಂಡ್ ಅಪ್ ಇಂಡಿಯಾ ಯೋಜನೆಗಳನ್ನು ತಂದಿದ್ದೇವೆ. ಸಣ್ಣ ಉದ್ಯಮಿಗಳ ಉದ್ಯಮಶೀಲತಾ ಶಕ್ತಿಯನ್ನು ಮುಕ್ತಗೊಳಿಸುವಲ್ಲಿ ಪ್ರಮುಖವಾದ ಅಡಚಣೆಯೆಂದರೆ ಮೇಲಾಧಾರದ ಸಾಲದ ಕೊರತೆ. ಇದೇ ಮೊದಲ ಬಾರಿಗೆ ಭಾರತದಲ್ಲಿ, 90 ದಶಲಕ್ಷ ಸಣ್ಣ ಉದ್ದಿಮೆದಾರರಿಗೆ ಮುದ್ರಾ ಯೋಜನೆ ಅಡಿಯಲ್ಲಿ ಮೇಲಾಧಾರ ಮುಕ್ತ ಸಾಲವನ್ನು ವಿತರಿಸಲಾಗಿದ್ದು, ಇದು ಬಹುತೇಕ ಪಿಲಿಪ್ಪೀನ್ಸ್ ಜನಸಂಖ್ಯೆಯ ಸಮೀಪದಲ್ಲಿದೆ. ಇದು ಸಾಲಕ್ಕೆ ಮೇಲಾಧಾರವಿಲ್ಲದ ಆದರೆ, ವಾಣಿಜ್ಯ ಕಲ್ಪನೆ ಮತ್ತು ಕಾರ್ಯ ಕ್ಷಮತೆ ಇರುವ ವ್ಯಕ್ತಿಯನ್ನು ಸಬಲೀಕರಿಸಲು ಗುರುತಿಸುವಿಕೆಯ ಕೊಡುಗೆಯಾಗಿದೆ. ಫಿಲಿಪ್ಪೀನ್ಸ್ ನಲ್ಲಿ ಮತ್ತು ಆಸಿಯಾನ್ ವಲಯದಲ್ಲಿ ಉದ್ಯಮಶೀಲತೆಗೆ ಮಹತ್ವ ನೀಡಿರುವುದನ್ನು ನಾನು ಕಂಡಿದ್ದೇನೆ. ಈ ಶೃಂಗದಲ್ಲಿ ಉದ್ಯಮಶೀಲತೆಗಾಗಿ ಆಸಿಯಾನ್ ಮೆಂಟರ್ಷಿಪ್ ಆರಂಭಿಸಿರುವುದು ಶ್ಲಾಘನಾರ್ಹವಾಗಿದೆ. ಹತ್ತಿರದ ಭವಿಷ್ಯದಲ್ಲಿ ದಕ್ಷಿಣ ಏಷ್ಯಾ ಮತ್ತು ಆಗ್ನೇಯ ಏಷ್ಯಾ ವಿಶ್ವದ ಪ್ರಗತಿಯ ಚಾಲಕ ಶಕ್ತಿಗಳಾಗಲಿವೆ. ಆಸಿಯಾನ್ ನೊಂದಿಗೆ ಸಂಪರ್ಕ ಬೆಸೆಯುವುದು ಭಾರತದ ಉದ್ದೇಶವಾಗಿದೆ. ನಾವು ಈ ಚಲನಶೀಲ ಪ್ರದೇಶಗಳಿಗೆ ವಾಯು, ಜಲ ಮತ್ತು ಭೂ ಸಾರಿಗೆ ಸಂಪರ್ಕ ನಿರ್ಮಿಸಲು ಬಯಸಿದ್ದೇವೆ. ಈಗಾಗಲೇ ಮ್ಯನ್ಮಾರ್ ಮತ್ತು ಥೈಲ್ಯಾಂಡ್ ಮೂಲಕ ಇತರ ಆಗ್ನೇಯ ಏಷ್ಯಾ ದೇಶಗಳನ್ನು ಸಂಪರ್ಕಿಸಲು ತ್ರಿಪಕ್ಷೀಯ ಹೆದ್ದಾರಿ ನಿರ್ಮಾಣ ಕಾರ್ಯ ಆರಂಭವಾಗಿದೆ.

 

ನಾವು ಭಾರತ ಮತ್ತು ಆಸಿಯಾನ್ ನಡುವೆ ಸಾಗರ ಸಾಗಣೆ ಒಪ್ಪಂದವನ್ನು ಆದಷ್ಟು ಬೇಗ ಆಖೈರುಗೊಳಿಸಲು ಮತ್ತು ನಮ್ಮ ಹತ್ತಿರದ ನೆರೆಯ ಸಾಗರದಂಚಿನ ರಾಷ್ಟ್ರಗಳೊಂದಿಗೆ ಕರಾವಳಿ ಹಡಗು ಸೇವೆ ಶ್ರಮಿಸುತ್ತಿದ್ದೇವೆ. ವಾಯು ಸಂಪರ್ಕ ಕ್ಷೇತ್ರದಲ್ಲಿ ಆಸಿಯಾನ್ ರಾಷ್ಟ್ರಗಳು ಭಾರತದ ನಾಲ್ಕು ಮಹಾ ನಗರಗಳು ಮತ್ತು ಇತರ 18 ತಾಣಗಳ ನಡುವೆ ನಿತ್ಯ ಸಂಪರ್ಕ ಸೌಲಭ್ಯ ಹೊಂದಿವೆ. ನಾವು ಭಾರತದ ಪ್ರವಾಸೋದ್ಯಮ ಉತ್ತೇಜಿಸಲು ಎಲೆಕ್ಟ್ರಾನಿಕ್ ವೀಸ್ ವ್ಯವಸ್ಥೆಯಂಥ ಕ್ರಮ ಕೈಗೊಂಡಿದ್ದೇವೆ. ಭಾರತದಿಂದ ಹೊರಹೋಗುವ ಪ್ರವಾಸೋದ್ಯಮವು ಅತಿ ವೇಗವಾಗಿ ಬೆಳೆಯುತ್ತಿದೆ. ಸಂಪರ್ಕಕ್ಕೆ ಆದ್ಯತೆ ನೀಡಿರುವ ಭಾರತ, ಆಸಿಯಾನ್ ದೇಶಗಳ ಸಚಿವರು, ಅಧಿಕಾರಿಗಳು ಮತ್ತು ವಾಣಿಜ್ಯ ಪ್ರತಿನಿಧಿಗಳ ಪಾಲ್ಗೊಳ್ಳುವಿಕೆಯೊಂದಿಗೆ  ಆಸಿಯಾನ್ – ಭಾರತ ಸಂಪರ್ಕ ಶೃಂಗವನ್ನು ಮುಂದಿನ ತಿಂಗಳು ಭಾರತದಲ್ಲಿ ಆಯೋಜಿಸುತ್ತಿದೆ. ಆಸಿಯಾನ್ ಪ್ರದೇಶದಲ್ಲಿ ವ್ಯಾಪಾರ ಅವಕಾಶಗಳನ್ನು ಭಾರತ ನೋಡುವಂತೆಯೇ,ಆಸಿಯಾನ್ ವ್ಯಾಪಾರ ಸಮುದಾಯ ಕೂಡ ಭಾರತದಲ್ಲಿ ವ್ಯಾಪಾರದ ಸಾಮರ್ಥ್ಯವನ್ನು ಗುರುತಿಸುತ್ತದೆ ಎಂಬ ಭರವಸೆ ನನಗಿದೆ. ನಿಮ್ಮಲ್ಲಿ ಕೆಲವರು ಈಗಾಗಲೇ ಭಾರತದಲ್ಲಿ ಆಳವಾಗಿ ತೊಡಗಿಕೊಂಡಿದ್ದೀರಿ. ಇತರ ಕೆಲವರು ಸಾಧ್ಯತೆಗಳನ್ನು ಹುಡುಕುತ್ತಿದ್ದಾರೆ. ಆಸಿಯಾನ್ ನಾಯಕರ ಆಸಿಯಾನ್ – ಭಾರತ ಸ್ಮರಣಾರ್ಥ ಶೃಂಗಸಭೆ ಮುಂದಿನ ವರ್ಷ ಜನವರಿಯಲ್ಲಿ ನಡೆಯಲಿದೆ, ನಾವು ಕೂಡ ಆಸಿಯಾನ್ ಭಾರತ ವಾಣಿಜ್ಯ ಮತ್ತು ಹೂಡಿಕೆ ಸಮ್ಮೇಳನ ಮತ್ತು ಮೇಳವನ್ನು ಆಯೋಜಿಸುತ್ತಿದ್ದೇವೆ. ನಾನು ಇದರಲ್ಲಿ ಭಾಗಿಯಾಗುವಂತೆ ನಿಮ್ಮೆಲ್ಲರಿಗೂ ಆಹ್ವಾನ ನೀಡುತ್ತೇನೆ. ಇದು ಭಾರತ ಆಯೋಜಿಸುತ್ತಿರುವ ಆಸಿಯಾನ್ ನತ್ತ ಗಮನ ಹರಿಸಿದ ಅತಿ ದೊಡ್ಡ ವಾಣಿಜ್ಯ ಕಾರ್ಯಕ್ರಮವಾಗಿದೆ. ಭಾರತವು ನಿಮ್ಮ ಪ್ರಗತಿಯ ಗಾಥೆಯಲ್ಲಿ ಭಾಗಿಯಾಗಲು ಬಯಸುತ್ತದೆ ಮತ್ತು ನಾವು ಕೂಡ ಎಲ್ಲ ಆಸಿಯಾನ್ ರಾಷ್ಟ್ರಗಳನ್ನು ನಮ್ಮ ಯಶೋಗಾಥೆಯಲ್ಲಿ ಪಾಲ್ಗೊಳ್ಳಲು ಆಹ್ವಾನಿಸುತ್ತೇವೆ. 

ಮಾಬೂಹಾಯ!

ಮರಾಮಿಂಗ ಸಲಾಮಾತ್!

ಧನ್ಯವಾದಗಳು!

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi