On one side there is Vikas and Vishwas while on the other side there is Vanshwad: PM Modi in Gujarat
Congress has never liked Gujarat, has always preferred to see it lag behind: PM Modi in Kutch
Gujarat is my Atma, Bharat is my Parmatma. This land of Gujarat has cared for me, Gujarat has given me strength: PM Modi
Congress lacks Neeti, Niyat, a Neta and a Naata with the people: PM Modi in Gujarat

 

ಪ್ರಧಾನಿ ನರೇಂದ್ರ ಮೋದಿ ಇಂದು ಕಚ್, ಜಸ್ದಾನ್, ಅಮ್ರೆಲಿ ಮತ್ತು ಕಾಮೆರೆಜ್ ನಲ್ಲಿ  ನಾಲ್ಕು ಸಾರ್ವಜನಿಕ ಸಭೆಗಳನ್ನು ಉದ್ದೇಶಿಸಿ ಮಾತನಾಡಿದರು. ಅಲ್ಲಿ ಅವರು ಗುಜರಾತ್ ಮತ್ತು ರಾಜ್ಯದ ಜನರ ಕಲ್ಯಾಣವನ್ನು ನಿರ್ಲಕ್ಷಿಸಿದ  ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ್ದಾರೆ . ಕಾಂಗ್ರೆಸ್ ನ  ದುರಾಡಳಿತವು  ಗುಜರಾತ್  ನ ಒಟ್ಟಾರೆ ಅಭಿವೃದ್ಧಿಗೆ ಪ್ರತಿಕೂಲ ಪರಿಣಾಮ ಬೀರಿದೆ ಎಂದು ಅವರು ಆರೋಪಿಸಿದರು.

"ಒಂದು ಬದಿಯಲ್ಲಿ ವಿಕಾಸ್ ಮತ್ತು ವಿಶ್ವಾಸ್ ಇದ್ದಾರೆ, ಇನ್ನೊಂದು ಬದಿಯಲ್ಲಿ ವಂಶವಾದ ಇದೆ. ಗುಜರಾತ್ ಕಾಂಗ್ರೆಸ್ ಪಕ್ಷವನ್ನು ಎಂದಿಗೂ ಕ್ಷಮಿಸುವುದಿಲ್ಲ ಮತ್ತು ಇದು ದೀರ್ಘಕಾಲವಾಗಿದೆ. ಕಾಂಗ್ರೆಸ್ ಗುಜರಾತ್ ಅನ್ನು ಎಂದಿಗೂ ಇಷ್ಟ ಪಡಲಿಲ್ಲ, ಅದು ಯಾವಾಗಲೂ ಹಿಂದುಳಿದಿರುವಂತೆ ನೋಡಿದೆ "ಎಂದು ಮೋದಿ ಹೇಳಿದರು.

"ಕಾಂಗ್ರೆಸ್ ಪಕ್ಷವು ಏನೂ ಮಾಡಲಿಲ್ಲ, ಅದು ಏನನ್ನೂ ಮಾಡಲು ಬಯಸುವುದಿಲ್ಲ ಮತ್ತು ಅದು ಇತರರೂ  ಜನರಿಗೆ  ಏನನ್ನೂ ಮಾಡಬಾರದೆಂದು ಬಯಸುತ್ತಾರೆ " ಎಂದು ಅವರು ಹೇಳಿದರು.

ಜನರಿಗೆ ನರ್ಮದಾ ನೀರನ್ನು ಖಾತ್ರಿಪಡಿಸದ ಕಾಂಗ್ರೆಸ್ ಅನ್ನು ಟೀಕಿಸಿದ ಪ್ರಧಾನಿ , "ನರ್ಮದಾ ನೀರು 30 ವರ್ಷಗಳ ಹಿಂದೆ ಕಚ್ ಗೆ  ಬಂದಿದ್ದರೆ ಏನಾಗುತ್ತಿತ್ತು ? ಅದು  ಇಲ್ಲಿ ಜನರ ಜೀವನದಲ್ಲಿ ಒಂದು ದೊಡ್ಡ ವ್ಯತ್ಯಾಸವನ್ನು ಉಂಟುಮಾಡುತ್ತಿತ್ತು  ", ಎಂದರು .

ಜಸ್ದಾನ್ ಸಾರ್ವಜನಿಕ ಸಭೆಯಲ್ಲಿ, "ನಾವು ನರ್ಮದಾ ನೀರನ್ನು  ಸೌರಾಷ್ಟ್ರಕ್ಕೆ ತರಲು ಪ್ರಾರಂಭಿಸಿದಾಗ , ನಮ್ಮನ್ನು ಅಪಹಾಸ್ಯ ಮಾಡುತ್ತಿದ್ದ ಜನರು ಇದ್ದರು. ಅವರ ನಕಾರಾತ್ಮಕ ರಾಜಕೀಯವು ವರ್ಷಗಳಿಂದ ಬದಲಾಗಿಲ್ಲ. ನಮ್ಮ ನಂಬಿಕೆ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ರಾಜಕೀಯದಲ್ಲಿದೆ. "

ಕಾಮರೇಜ್ ನಲ್ಲಿ ಕಾಂಗ್ರೆಸ್ ಪಕ್ಷವನ್ನು ಟೀಕಿಸಿದ ಪ್ರಧಾನಿ ,  ಗುಜರಾತ್ ಚುನಾವಣೆಯಲ್ಲಿ ಕಾಂಗ್ರೆಸ್ ಗೆ  ಸೋಲು  ಕಾಣುವ ಭಯವಿದೆ ಎಂದು ಹೇಳಿದರು . ಬಿಜೆಪಿಯ ಅಭಿವೃದ್ಧಿ ಮತ್ತು ಉತ್ತಮ ಆಡಳಿತದ ಬಗ್ಗೆ ಕಾಂಗ್ರೆಸ್ ಗೆ  ಗಮನಹರಿಸಲು ಸಾಧ್ಯವಾಗಲಿಲ್ಲ.

ಸುಳ್ಳು ಹಾರ್ದಿಸುವ ಮತ್ತು ನಿರಾಶಾವಾದದ ವಾತಾವರಣವನ್ನು ಸೃಷ್ಟಿಸುವ  ಕಾಂಗ್ರೆಸ್ ಅನ್ನು ಪ್ರಧಾನಿ ಟೀಕಿಸಿದರು .  "ಗುಜರಾತ್ ನನ್ನ ಆತ್ಮ, ಭಾರತ ನನ್ನ ಪರಮಾತ್ಮ . ಗುಜರಾತ್ ನ  ಈ ಭೂಮಿ ನನ್ನ ಕಾಳಜಿ ವಹಿಸಿದೆ; ಗುಜರಾತ್ ನನಗೆ ಬಲವನ್ನು ಕೊಟ್ಟಿದೆ ... ಅವರು ಗುಜರಾತಿಗೆ ಬಂದಿದ್ದಾರೆ ಮತ್ತು ಗುಜರಾತಿನ ಮಗನ ಬಗ್ಗೆ ಸುಳ್ಳು ಹರಡುತ್ತಿದ್ದಾರೆ . ಮೊದಲಿಗೆ ಸರ್ದಾರ್ ಪಟೇಲ್ ಅವರೊಂದಿಗೆ ಕೂಡ ಹೀಗೆ ಮಾಡಿದ್ದರು . ಗುಜರಾತ್ ಇದನ್ನು ಎಂದಿಗೂ ಸ್ವೀಕರಿಸುವುದಿಲ್ಲ. ಅವರು ಹರಡುತ್ತಿರುವ ಸುಳ್ಳುಗಳನ್ನು ಗುಜರಾತ್ ಸ್ವೀಕರಿಸುವುದಿಲ್ಲ. "

ಕಾಂಗ್ರೆಸ್ ಕೇವಲ ಒಂದು ಕುಟುಂಬದ ಬಗ್ಗೆ ಮಾತಾಡಿದೆ ಮತ್ತು ಜನರು ಮತ್ತು ದೇಶಗಳ ಕಲ್ಯಾಣ ಬಗ್ಗೆ ಅವರು ಕಾಳಜಿ ವಹಿಸಲಿಲ್ಲ . "ಕಾಮರಾಜ್, ಆಚಾರ್ಯ ಕೃಪಾಲಾನಿ, ಸುಭಾಸ್ ಬಾಬು, ಯುಎನ್ ಧೇಬರ್ (ಗುಜರಾತ್ ಗೆ  ಸೇರಿದವರು) ಬಗ್ಗೆ ಯಾವುದೇ ಕಾಂಗ್ರೆಸ್ ಮುಖಂಡರು ಮಾತನಾಡುತ್ತಾರೆಯೇ ... ಅವರು ಕೇವಲ ಒಂದು ಕುಟುಂಬದ ಬಗ್ಗೆ ಮಾತ್ರ ಮಾತನಾಡುತ್ತಾರೆ ... ಪಾಕಿಸ್ತಾನಿ ನ್ಯಾಯಾಲಯವು ಪಾಕಿಸ್ತಾನಿ ಭಯೋತ್ಪಾದಕನನ್ನು ಬಿಡುಗಡೆ ಮಾಡಿದೆ ಮತ್ತು ಕಾಂಗ್ರೆಸ್ ಆಚರಿಸುತ್ತಿದೆ. ನನಗೆ ಆಶ್ಚರ್ಯವಾಯಿತು. ಇದೇ ಕಾಂಗ್ರೆಸ್ ನಮ್ಮ ಸೈನ್ಯವನ್ನು ಸರ್ಜಿಕಲ್ ಸ್ಟ್ರೈಕ್ ಅನ್ನ್ನು  ನಂಬಲು ನಿರಾಕರಿಸಿದರು  ಮತ್ತು ಚೀನಾದ ರಾಯಭಾರಿಯನ್ನು ನಂಬಲು ಇಷ್ಟಪಟ್ಟರು"  ಎಂದು  ಹೇಳಿದರು .

ಕಾಂಗ್ರೆಸ್ ನೀತಿ, ನೀಯತ್ತು , ನೆತಾ ಮತ್ತು ನಾತಾ ವನ್ನು ಜನರೊಂದಿಗೆ ಹೊಂದಿಲ್ಲ ಎಂದು ಮೋದಿ ಹೇಳಿದರು.

ಕಾಂಗ್ರೆಸ್ ಯಾವಾಗಲೂ ಗುಜರಾತ್ ಅನ್ನು ದೂಷಿಸಿದೆ ಎಂದು ಪ್ರಧಾನ ಮಂತ್ರಿ ಮಂಡಿಸಿದರು. ಕಾಂಗ್ರೆಸ್ ಸರ್ದಾರ್ ಪಟೇಲ್ ಮತ್ತು ಮೊರಾರ್ಜಿ ದೇಸಾಯಿಯವರೊಂದಿಗೆ  ಹೇಗೆ ವರ್ತಿಸಿದ್ದರು  ಎಂದು ರಾಜ್ಯದ ಜನರಿಗೆ ತಿಳಿದಿತ್ತು ಎಂದು ಅವರು ಹೇಳಿದರು.

" ರಾತೋ ರಾತ್ರಿ, ಇಂದಿರಾ ಜಿ ಅವರು ಮೊರಾರ್ಜಿ ಭಾಯಿ ಅವರನ್ನು  ಸಂಪುಟದಿಂದ ತೆಗೆದುಹಾಕಿದರು. ಅವರು ಬಡವರಿಗೆ ಬ್ಯಾಂಕಿನ ಬಾಗಿಲುಗಳನ್ನು ತೆರೆಯಲಿಲ್ಲ. ಸೇವೆ ಮಾಡಲು ನಮಗೆ ಅವಕಾಶ ದೊರೆತಾಗ, ಜನ್ ಧನ್ ಯೋಜನೆಯನ್ನು ಪ್ರಾರಂಭಿಸಿದೆವು ಮತ್ತು ಹಣಕಾಸಿನ ಸೇರ್ಪಡೆಗೆ  ಮೊದಲು ಗಮನ ಹರಿಸಿದೆವು  ... ಮೊರಾರ್ಜಿ ಭಾಯಿ ದೇಸಾಯಿ ಅವರು ಯಶಸ್ವಿ ಹಣಕಾಸು ಮಂತ್ರಿ ಮತ್ತು ಗಾಂಧೀಜಿಯವರ  ಅನುಯಾಯಿ . ಕಾಂಗ್ರೆಸ್ ಅವರೊಂದಿಗೆ ಉತ್ತಮ ವ್ಯವಹಾರ ನಡೆಸಲಿಲ್ಲ ಮತ್ತು ಅವರು ಪ್ರಧಾನಿಯಾಗಿದ್ದಾಗಲೂ ಅವರಿಗೆ ತೊಂದರೆ ನೀಡಿದ್ದರು  "ಎಂದು ಕಾಮ್ ರೇಜ್ ನಲ್ಲಿ  ಮೋದಿ ಹೇಳಿದರು.

ನನ್ನ ಬಡ ಮೂಲದ ಕಾರಣದಿಂದಾಗಿ ಕಾಂಗ್ರೆಸ್ ನನನ್ನು ಇಷ್ಟಪಟ್ಟಿಲ್ಲ . ಒಂದು ಪಕ್ಷವು ಇಷ್ಟು ಕೆಳಮಟ್ಟಕ್ಕೆ ಇಳಿಯಬಹುದೇ  ? ಹೌದು, ಬಡ ಕುಟುಂಬಕ್ಕೆ ಸೇರಿದ ವ್ಯಕ್ತಿಯು ಪ್ರಧಾನಿಯಾಗಿದ್ದಾರೆ. ಈ ಸತ್ಯವನ್ನು ಅವರಿಂದ ಸ್ವೀಕರಿಸಲಾಗುತ್ತಿಲ್ಲ. ಹೌದು, ನಾನು ಚಹಾವನ್ನು ಮಾರಾಟ ಮಾಡಿದ್ದೇನೆ ಆದರೆ ನಾನು ರಾಷ್ಟ್ರವನ್ನು ಮಾರಾಟ ಮಾಡಲಿಲ್ಲ. "

ಅಭಿವೃದ್ಧಿಯು ಎಲ್ಲಾ ಸಮಸ್ಯೆಗಳಿಗೆ ಪರಿಹಾರವಾಗಿದೆ ಎಂದು ಪ್ರಧಾನಿ ಹೇಳಿದರು. ಬಿಜೆಪಿ ಯಾವುದೇ ತಾರತಮ್ಯವಿಲ್ಲದೆ ಗುಜರಾತ್ ಗೆ  ಸೇವೆ ಸಲ್ಲಿಸಿದೆ ಎಂದು ಅವರು ಹೇಳಿದರು. "2001 ರ ಭೂಕಂಪನದ ನಂತರ ಕಚ್ ನಲ್ಲಿನ  ಅಭಿವೃದ್ಧಿಯ ಕಾರ್ಯವು ಎಲ್ಲರಿಗೂ ನೋಡಬೇಕಿದೆ. ಕೃಷಿ ವಲಯವು ಪ್ರವರ್ಧಮಾನಕ್ಕೆ ಬರುತ್ತಿದೆ. ರಾನ್ ಉತ್ಸವವನ್ನು ಆನಂದಿಸಲು ದೇಶದಿಂದ ಜನರು ಇಲ್ಲಿಗೆ ಬರುತ್ತಾರೆ. ಕಚ್ ಬಂದರುಗಳು ಭಾರೀ ಸಂಚಾರವನ್ನು ನಿರ್ವಹಿಸುತ್ತಿವೆ. ಅದು ಭಾರತದ  ಮಹಾದ್ವಾರಗಳಾಗುತ್ತಿದೆ .  ಬಂದರುಗಳ ಕಾರಣದಿಂದಾಗಿ ಕಚ್ ವಾಣಿಜ್ಯದಲ್ಲಿ ಹೆಚ್ಚಳವಾಗುತ್ತಿದೆ  ಎಂದು ಅವರು ಹೇಳಿದರು.

26/11 ರಂದು ಮುಂಬೈಯಲ್ಲಿ ಭಯೋತ್ಪಾದಕ ದಾಳಿಯನ್ನು ನಿಭಾಯಿಸಲು ಸಾಧ್ಯವಾಗಲಿಲ್ಲ ಎಂದು  ಕಾಂಗ್ರೆಸ್ ಪಕ್ಷವನ್ನು ಆರೋಪಿಸಿದರು . "ಭಾರತದ ಮೇಲೆ  26/11 ಮತ್ತು ಊರಿ ದಾಳಿಯಾಗಿದೆ. ಎರಡೂ ದಾಳಿಯ ಹಿನ್ನೆಲೆಯಲ್ಲಿ ಭಾರತ ಹೇಗೆ ಪ್ರತಿಕ್ರಿಯಿಸಿತು ಎಂಬುದನ್ನು ನೀವು ನೋಡಬಹುದು. ಇದು ಅವರ ಸರ್ಕಾರ ಮತ್ತು ನಮ್ಮ ನಡುವಿನ ವ್ಯತ್ಯಾಸವನ್ನು ವಿವರಿಸುತ್ತದೆ. "

ಪ್ರತಿ ಅವಕಾಶದಲ್ಲೂ ಕಾಂಗ್ರೆಸ್ ಭ್ರಷ್ಟಾಚಾರದಲ್ಲಿ ತೊಡಗಿತ್ತು ಎಂದು ಮೋದಿ ಆರೋಪಿಸಿದ್ದಾರೆ. ನೋಟು ಅಮಾನ್ಯತೆಯ ವಿಷಯದಲ್ಲಿ, ಬಡವರು ತಮ್ಮ ಹಕ್ಕನ್ನು ಪಡೆಯಲು ಖಚಿತಪಡಿಸಿಕೊಳ್ಳುವ ಒಂದು ಕ್ರಮವೆಂದು ಪ್ರಧಾನ ಮಂತ್ರಿ ಹೇಳಿದರು . "ಈ ರಾಷ್ಟ್ರವನ್ನು ಲೂಟಿ ಮಾಡಲು ನಾವು ಅನುಮತಿಸುವುದಿಲ್ಲ. ನಾವು ಅಧಿಕಾರಕ್ಕಾಗಿ ಇಲ್ಲಿ ಇಲ್ಲ, 125 ಕೋಟಿ ಭಾರತೀಯರಿಗೆ ಸೇವೆ ಸಲ್ಲಿಸುವ ಸಲುವಾಗಿ  ನಾವು ಇಲ್ಲಿದ್ದೇವೆ. ನಾವು ಭಾರತವನ್ನು ವೈಭವವನ್ನು  ಹೊಸ ಎತ್ತರಕ್ಕೆ ಕೊಂಡೊಯ್ಯಲು ಬಯಸುತ್ತೇವೆ "ಎಂದು ಅವರು ಹೇಳಿದರು.

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
PLI, Make in India schemes attracting foreign investors to India: CII

Media Coverage

PLI, Make in India schemes attracting foreign investors to India: CII
NM on the go

Nm on the go

Always be the first to hear from the PM. Get the App Now!
...
PM Modi visits the Indian Arrival Monument
November 21, 2024

Prime Minister visited the Indian Arrival monument at Monument Gardens in Georgetown today. He was accompanied by PM of Guyana Brig (Retd) Mark Phillips. An ensemble of Tassa Drums welcomed Prime Minister as he paid floral tribute at the Arrival Monument. Paying homage at the monument, Prime Minister recalled the struggle and sacrifices of Indian diaspora and their pivotal contribution to preserving and promoting Indian culture and tradition in Guyana. He planted a Bel Patra sapling at the monument.

The monument is a replica of the first ship which arrived in Guyana in 1838 bringing indentured migrants from India. It was gifted by India to the people of Guyana in 1991.