ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ವಿಡಿಯೋ ಕಾನ್ಫರೆನ್ಸ್ ಮೂಲಕ ಐಐಟಿ ಖರಗ್ ಪುರ್ 66ನೇ ಘಟಿಕೋತ್ಸವ ಉದ್ದೇಶಿಸಿ ಭಾಷಣ ಮಾಡಿದರು. ಕೇಂದ್ರ ಶಿಕ್ಷಣ ಸಚಿವ ಶ್ರೀ ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಶಿಕ್ಷಣ ಖಾತೆ ರಾಜ್ಯ ಸಚಿವ ಶ್ರೀ ಸಂಜಯ್ ಧೋತ್ರೆ ಅವರು ಉಪಸ್ಥಿತರಿದ್ದರು.

ಈ ದಿನ ಐಐಟಿಯಲ್ಲಿರುವ ಶಿಕ್ಷಕರು ಮತ್ತು ಪೋಷಕರಿಗೆ ಮಾತ್ರ ಪ್ರಮುಖ ದಿನವಲ್ಲ, ನವಭಾರತಕ್ಕೂ ಕೂಡ ಪ್ರಮುಖ ದಿನವಾಗಿದೆ. ಏಕೆಂದರೆ ಇಲ್ಲಿನ ವಿದ್ಯಾರ್ಥಿಗಳು ಇಡೀ ದೇಶವನ್ನು ಪ್ರತಿನಿಧಿಸುತ್ತಾರೆ ಎಂದು ಪ್ರಧಾನಮಂತ್ರಿ ಹೇಳಿದರು. ಇಂದು ತೇರ್ಗಡೆಯಾಗಿ ನಿರ್ಗಮಿಸುತ್ತಿರುವ ವಿದ್ಯಾರ್ಥಿಗಳು ಹೊಸ ಜೀವನಕ್ಕೆ ಪಯಣ ಮಾಡುತ್ತಿದ್ದಾರೆ. ಅವರು ದೇಶದ ಕೋಟ್ಯಂತರ ಜನರ ಜೀವನವನ್ನು ಬದಲಾಯಿಸುವಂತಹ ನವೋದ್ಯಮಗಳ ಸೃಷ್ಟಿ ಮತ್ತು ಆವಿಷ್ಕಾರಗಳ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಲಿದ್ದಾರೆ. ಇಂದು ಅವರು ಪಡೆಯುತ್ತಿರುವ ಪದವಿ ಲಕ್ಷಾಂತರ ಜನರ ಆಶೋತ್ತರಗಳನ್ನು ಪ್ರತಿನಿಧಿಸುತ್ತದೆ. ಅವುಗಳನ್ನು ಅವರು ಈಡೇರಿಸಬೇಕಿದೆ ಎಂದರು.

ಭವಿಷ್ಯದ ಅವಶ್ಯಕತೆಗಳನ್ನು ನಿರೀಕ್ಷಿಸಿ, ನಾಳೆಗೆ ಆವಿಷ್ಕಾರಗಳನ್ನು ಮಾಡುವುದು ಇಂದು ಹೆಚ್ಚು ಅಗತ್ಯವಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಓರ್ವ ಇಂಜಿನಿಯರ್, ವಸ್ತುಗಳನ್ನು ತನ್ನ ಸಾಮರ್ಥ್ಯದಲ್ಲಿ ಹೆಚ್ಚು ವಿವರವಾಗಿ ನೋಡುತ್ತಾರೆ ಮತ್ತು ಅವರ ಅರ್ಥ ಮಾಡುಕೊಳ್ಳುವಿಕೆಯ ವಿಧಾನ ಹೊಸ ಸಂಶೋಧನೆಗಳಿಗೆ ಆಧಾರವಾಗಲಿದೆ ಮತ್ತು ಭವಿಷ್ಯದಲ್ಲಿ ಹೊಸ ಆವಿಷ್ಕಾರಗಳನ್ನು ಮಾಡಬಹುದಾಗಿದೆ. ವಿದ್ಯಾರ್ಥಿಗಳು ದೇಶದ ಸಂಪನ್ಮೂಲಗಳನ್ನು ಉಳಿಸುವ ಮತ್ತು ಲಕ್ಷಾ‌ಂತರ ಜನರ ಜೀವನ ಉಳಿಸುವ ಮತ್ತು ಸುಧಾರಿಸುವ ನಿಟ್ಟಿನಲ್ಲಿ ಹಲವು ಪರಿಹಾರಗಳನ್ನು ವಿದ್ಯಾರ್ಥಿಗಳು ಕಂಡುಕೊಳ್ಳಬೇಕು ಎಂದು ಅವರು ಕರೆ ನೀಡಿದರು.

ವಿದ್ಯಾರ್ಥಿಗಳು ತಮ್ಮ ಭವಿಷ್ಯದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಹಾಗೂ ಸ್ವಯಂ ಸಂದೇಹಗಳನ್ನು ದೂರ ಮಾಡಿಕೊಳ್ಳಲು ಮೂರು ಸ್ವಾವಲಂಬನೆಯ ಮಂತ್ರಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶ್ರೀ ನರೇಂದ್ರ ಮೋದಿ ಅವರು ಕರೆ ನೀಡಿದರು. ಮೂರು ಸ್ವಯಂ ಮಂತ್ರ – ಸ್ವಯಂ ಜಾಗೃತಿ, ಸ್ವಯಂ ವಿಶ್ವಾಸ ಮತ್ತು ನಿಸ್ವಾರ್ಥತೆ ಎಂದರು. ವಿದ್ಯಾರ್ಥಿಗಳು ತಮ್ಮ ಸಾಮರ್ಥ್ಯವನ್ನು ಗುರುತಿಸಿಕೊಂಡು ಮುನ್ನಡೆಯಬೇಕು ಎಂದು ಸಲಹೆ ನೀಡಿದ ಅವರು, ಪೂರ್ಣ ವಿಶ್ವಾಸದೊಂದಿಗೆ ಮುನ್ನಡೆಯಬೇಕು ಮತ್ತು ಸ್ವಾರ್ಥರಹಿತವಾಗಿ ಮುನ್ನಡೆಯಬೇಕು ಎಂದು ಅವರು ಹೇಳಿದರು.

ವಿಜ್ಞಾನ ಮತ್ತು ತಂತ್ರಜ್ಞಾನ ವಲಯದಲ್ಲಿ ತರಾತುರಿಗೆ ಯಾವುದೇ ಜಾಗವಿಲ್ಲ ಎಂದು ಪ್ರಧಾನಮಂತ್ರಿ ಹೇಳಿದರು. ನೀವು ಆವಿಷ್ಕಾರದಲ್ಲಿ ತೊಡಗಿದ್ದಾಗ ನಿಮಗೆ ಸಂಪೂರ್ಣ ಯಶಸ್ಸು ಸಿಗಲಾರದು ಎಂದು ಅವರು ಹೇಳಿದರು. ಆದರೆ ನಿಮ್ಮ ವೈಫಲ್ಯವನ್ನು ಯಶಸ್ಸು ಎಂದು ಪರಿಗಣಿಸಲಾಗುತ್ತದೆ. ಏಕೆಂದರೆ ಅದರಿಂದಲೂ ಕೂಡ ನೀವು ಏನನ್ನಾದರೂ ಕಲಿಯಬಹುದಾಗಿದೆ. 21ನೇ ಶತಮಾನದಲ್ಲಿ ಐಐಟಿಗಳನ್ನು ಮುಂದಿನ ಹಂತದ ಭಾರತೀಯ ತಂತ್ರಜ್ಞಾನ ಸಂಸ್ಥೆಗಳನ್ನಾಗಿ ಹಾಗೂ ದೇಶೀಯ ತಂತ್ರಜ್ಞಾನ ಸಂಸ್ಥೆಗಳನ್ನಾಗಿ ರೂಪಿಸುವ ಅಗತ್ಯವಿದ್ದು, ಅವುಗಳ ಮೂಲಕ ನವಭಾರತದ ಆಶೋತ್ತರಗಳು ಮತ್ತು ಬದಲಾಗುತ್ತಿರುವ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

 

|

ಹವಾಮಾನ ವೈಪರೀತ್ಯದಂತಹ ಸವಾಲಿನ ವಿರುದ್ಧ ಇಡೀ ವಿಶ್ವ ಹೋರಾಟ ನಡೆಸುತ್ತಿರುವ ಸಂದರ್ಭದಲ್ಲಿ ಭಾರತ ಅಂತಾರಾಷ್ಟ್ರೀಯ ಸೌರ ಮೈತ್ರಿ(ಐಎಸ್ಎ) ಪರಿಕಲ್ಪನೆಯನ್ನು ಹುಟ್ಟುಹಾಕಿತು ಮತ್ತು ಅದನ್ನು ಕಾರ್ಯರೂಪಗೊಳಿಸಿತು ಎಂದು ಶ್ರೀ ನರೇಂದ್ರ ಮೋದಿ ಹೇಳಿದರು. ಇಂದು ಭಾರತ ಯುನಿಟ್ ಗೆ ಅತಿ ಕಡಿಮೆ ಬೆಲೆಯಲ್ಲಿ ಸೌರ ವಿದ್ಯುತ್ ದರ ಹೊಂದಿರುವ ಕೆಲವೇ ರಾಷ್ಟ್ರಗಳ ಸಾಲಿನಲ್ಲಿ ಒಂದಾಗಿದೆ ಎಂದರು. ಆದರೆ ಸೌರಶಕ್ತಿಯನ್ನು ಮನೆ ಬಾಗಿಲಿನಿಂದ ಬಾಗಿಲಿಗೆ ಕೊಂಡೊಯ್ಯುವ ಹಲವು ಸವಾಲುಗಳು ಇನ್ನೂ ನಮ್ಮ ಮುಂದಿವೆ. ಪರಿಸರಕ್ಕೆ ಕಡಿಮೆ ಹಾನಿ ಉಂಟುಮಾಡಬಹುದಾದ ದೀರ್ಘಕಾಲ ಬಾಳಿಕೆ ಬರುವ ಮತ್ತು ಬಳಕೆದಾರ- ಸ್ನೇಹಿಯಾಗಿರುವ ತಂತ್ರಜ್ಞಾನ ಭಾರತಕ್ಕೆ ಅಗತ್ಯವಾಗಿದೆ.

ವಿಪತ್ತು ನಿರ್ವಹಣೆ ಇಡೀ ವಿಶ್ವ ಭಾರತದತ್ತ ಎದುರು ನೋಡುತ್ತಿರುವ ಒಂದು ವಿಷಯವಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಪ್ರಮುಖ ವಿಪತ್ತುಗಳ ಸಂದರ್ಭದಲ್ಲಿ ಜೀವದ ಜೊತೆಗೆ ಮೂಲಸೌಕರ್ಯವೂ ಕೂಡ ಭಾರೀ ಹಾನಿಗೊಳಗಾಗುತ್ತವೆ. ಎರಡು ವರ್ಷಗಳ ಹಿಂದಿನ ಸ್ಥಿತಿಯನ್ನು ಗಮನಿಸಿಕೊಂಡರೆ ಭಾರತ, ವಿಶ್ವ ಸಂಸ್ಥೆಯಲ್ಲಿ ವಿಪತ್ತು ನಿರ್ವಹಣಾ ಸ್ಥಿತಿ ಸ್ಥಾಪಕತ್ವ ಮೂಲಸೌಕರ್ಯ ಮೈತ್ರಿಯನ್ನು ಸ್ಥಾಪಿಸುವ ಉಪಕ್ರಮವನ್ನು ಕೈಗೊಂಡಿತು ಎಂದರು.

ಕೈಗಾರಿಕೆ 4.0ಗೆ ಅಗತ್ಯ ಮಹತ್ವದ ಆವಿಷ್ಕಾರಗಳಿಗೆ ಒತ್ತು ನೀಡಬೇಕಾಗಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಬುದ್ಧಿಮತ್ತೆಗೆ ಸಂಬಂಧಿಸಿದ ಶೈಕ್ಷಣಿಕ ಸಂಶೋಧನೆಯನ್ನು ಕೈಗಾರಿಕಾ ಮಟ್ಟಕ್ಕೆ, ಇಂಟರ್ ನೆಟ್ ಆಫ್ ಥಿಂಗ್ಸ್ ಮತ್ತು ಆಧುನಿಕ ನಿರ್ಮಾಣ ತಂತ್ರಜ್ಞಾನಕ್ಕೆ ವರ್ಗಾವಣೆಗೊಳಿಸಿರುವ ಐಐಟಿ ಖರಗ್ ಪುರದ ಪ್ರಯತ್ನಗಳ ಬಗ್ಗೆ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಕೊರೊನಾ ವಿರುದ್ಧದ ಹೋರಾಟದಲ್ಲೂ ಸಹ ಐಐಟಿ ಖರಗ್ ಪುರದ ಸಾಫ್ಟ್ ವೇರ್ ಪರಿಹಾರಗಳು ಅತ್ಯಂತ ಉಪಯುಕ್ತವಾದವು ಎಂದು ಹೇಳಿದರು. ಆರೋಗ್ಯ ತಂತ್ರಜ್ಞಾನ ವಲಯದಲ್ಲಿ ಭವಿಷ್ಯದ ಪರಿಹಾರಗಳನ್ನು ಕಂಡುಕೊಳ್ಳುವ ನಿಟ್ಟಿನಲ್ಲಿ ಸಂಸ್ಥೆ ಕಾರ್ಯೋನ್ಮುಖವಾಗಬೇಕು ಎಂದು ಅವರು ಹೇಳಿದರು. ವೈಯಕ್ತಿಕ ಆರೋಗ್ಯ ರಕ್ಷಣಾ ಸಾಧನಗಳ ವಿಚಾರದಲ್ಲಿ ಬಹುದೊಡ್ಡ ಮಾರುಕಟ್ಟೆ ಹುಟ್ಟಿಕೊಂಡಿದೆ ಎಂದು ಅವರು ಹೇಳಿದರು. ಆರೋಗ್ಯ ಮತ್ತು ದೈಹಿಕ ಕ್ಷಮತೆಗೆ ಸಂಬಂಧಿಸಿದ ಸಾಧನಗಳ ಮಾರುಕಟ್ಟೆ ಕೂಡ ವೃದ್ಧಿಯಾಗುತ್ತಿದೆ ಎಂದರು. ಕೈಗೆಟಕುವ ದರದಲ್ಲಿ ಮತ್ತು ನಿಖರವಾಗಿ ವೈಯಕ್ತಿಕ ಆರೋಗ್ಯ ರಕ್ಷಣಾ ಸಾಧನಗಳ ಅಭಿವೃದ್ಧಿಗೆ ಹೊಸ ತಂತ್ರಜ್ಞಾನ ಅಭಿವೃದ್ಧಿಪಡಿಸಲಾಗಿದೆ ಎಂದು ಅವರು ಹೇಳಿದರು.

ಕೊರೊನಾದ ನಂತರ ವಿಜ್ಞಾನ, ತಂತ್ರಜ್ಞಾನ, ಸಂಶೋಧನೆ ಮತ್ತು ಅನ್ವೇಷಣೆ ವಲಯದಲ್ಲಿ ಭಾರತ ಪ್ರಮುಖ ಜಾಗತಿಕ ಶಕ್ತಿಯಾಗಿ ಉದಯಿಸಿದೆ ಎಂದು ಪ್ರಧಾನಮಂತ್ರಿ ಹೇಳಿದರು. ಆ ಸ್ಫೂರ್ತಿಯೊಂದಿಗೆ ವಿಜ್ಞಾನ ಮತ್ತು ಸಂಶೋಧನಾ ವಲಯಕ್ಕೆ ಬಜೆಟ್ ನಲ್ಲಿ ಅನುದಾನವನ್ನು ದೊಡ್ಡ ಪ್ರಮಾಣದಲ್ಲಿ ಹೆಚ್ಚಳ ಮಾಡಲಾಗಿದೆ ಎಂದು ಅವರು ಹೇಳಿದರು. ಕೆಲವು ದಿನಗಳ ಹಿಂದೆ ಸರ್ಕಾರ ಮ್ಯಾಪ್ ಮತ್ತು ಜಿಯೋ ಸ್ಪೇಷಿಯಲ್ ಅನ್ನು ನಿಯಂತ್ರಣದಿಂದ ಮುಕ್ತಗೊಳಿಸುವುದಾಗಿ ಹೇಳಿದೆ. ಈ ಕ್ರಮ ತಂತ್ರಜ್ಞಾನ ನವೋದ್ಯಮ ಪೂರಕ ವ್ಯವಸ್ಥೆ ಬಲವರ್ಧನೆಗೆ, ಸ್ವಾವಲಂಬಿ ಭಾರತ ಅಭಿಯಾನ ಚುರುಕುಗೊಳಿಸಲು ಮತ್ತು ಯುವ ನವೋದ್ಯಮ ಹಾಗೂ ದೇಶದ ಆವಿಷ್ಕಾರಿಗಳಿಗೆ ಹೊಸ ಸ್ವಾತಂತ್ರ್ಯ ನೀಡಲು ಹೆಚ್ಚಿನ ಬಲವನ್ನು ತಂದುಕೊಟ್ಟಿದೆ ಎಂದರು.

ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗಾಗಿ ಪ್ರಧಾನಮಂತ್ರಿ ಅವರು, ಐಐಟಿ ಖರಗ್ ಪುರ್ ನ ಪ್ರಯತ್ನಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಜ್ಞಾನ ಮತ್ತು ವಿಜ್ಞಾನ ನಮ್ಮ ಭವಿಷ್ಯದ ಆವಿಷ್ಕಾರಗಳ ಸಾಮರ್ಥ್ಯ ಎಂಬುದನ್ನು ಅನ್ವೇಷಿಸಲು ಸಂಸ್ಥೆ ಕಾರ್ಯೋನ್ಮುಖವಾಗಿರುವ ವಿಧಾನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ದೇಶ ಸ್ವಾತಂತ್ರ್ಯಗಳಿಸಿ 75 ವರ್ಷ ಪೂರ್ಣಗೊಳಿಸುವ ವೇಳೆಗೆ ಕಾಕತಾಳೀಯವೆಂಬಂತೆ ಸಂಸ್ಥೆಯೂ ಕೂಡ 75 ಪ್ರಮುಖ ಆವಿಷ್ಕಾರಗಳನ್ನು ಒಗ್ಗೂಡಿಸಬೇಕಿದೆ. ಹಾಗೂ ಅವುಗಳು ದೇಶ ಹಾಗೂ ವಿಶ್ವವನ್ನು ತಲುಪುವಂತೆ ಮಾಡಬೇಕಿದೆ. ಈ ಆಶೋತ್ತರಗಳು ದೇಶಕ್ಕೆ ಹೊಸ ಉತ್ತೇಜನವನ್ನು ನೀಡದಿರುವುದಲ್ಲದೆ ಅವು ವಿಶ್ವಾಸವನ್ನು ವೃದ್ಧಿಸುತ್ತವೆ ಎಂದು ಹೇಳಿದರು.

 

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Global aerospace firms turn to India amid Western supply chain crisis

Media Coverage

Global aerospace firms turn to India amid Western supply chain crisis
NM on the go

Nm on the go

Always be the first to hear from the PM. Get the App Now!
...
Former UK PM, Mr. Rishi Sunak and his family meets Prime Minister, Shri Narendra Modi
February 18, 2025

Former UK PM, Mr. Rishi Sunak and his family meets Prime Minister, Shri Narendra Modi today in New Delhi.

Both dignitaries had a wonderful conversation on many subjects.

Shri Modi said that Mr. Sunak is a great friend of India and is passionate about even stronger India-UK ties.

The Prime Minister posted on X;

“It was a delight to meet former UK PM, Mr. Rishi Sunak and his family! We had a wonderful conversation on many subjects.

Mr. Sunak is a great friend of India and is passionate about even stronger India-UK ties.

@RishiSunak @SmtSudhaMurty”