ಇಂದಿನ ಯುವ ಸಮೂಹದಲ್ಲಿ ಆತ್ಮನಿರ್ಭರ್ ಭಾರತ್ ಮನೋಧೋರಣೆ
ಆಸ್ಟ್ರೇಲಿಯಾದಲ್ಲಿ ಭಾರತ ಕ್ರಿಕೆಟ್ ತಂಡದ ಗೆಲುವು ನವ ಯುವ ಭಾರತದ ಸ್ಫೂರ್ತಿ
ನೂತನ ರಾಷ್ಟ್ರೀಯ ಶಿಕ್ಷಣ ನೀತಿ - ಎನ್.ಇ.ಪಿ, ನಮ್ಮ ಶಿಕ್ಷಣವನ್ನು ದತ್ತಾಂಶ ಮತ್ತು ದತ್ತಾಂಶ ವಿಶ್ಲೇಷಣೆಯ ವ್ಯವಸ್ಥೆಯಾಗಿ ಸನ್ನದ್ಧಗೊಳಿಸಲಿದೆ: ಪ್ರಧಾನಮಂತ್ರಿ

ಅಸ್ಸಾಂನ ತೇಜ್‌ಪುರ್  ವಿಶ್ವವಿದ್ಯಾಲಯದ 18 ನೇ ಘಟಿಕೋತ್ಸವವನ್ನು ಉದ್ದೇಶಿಸಿ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ವಿಡಿಯೋ ಕಾನ್ಪರೆನ್ಸ್ ಮೂಲಕ ಮಾತನಾಡಿದರು. ಅಸ್ಸಾಂ ರಾಜ್ಯಪಾಲ ಪ್ರೊಫೆಸರ್ ಜಗದೀಶ್ ಮುಖಿ, ಕೇಂದ್ರ ಶಿಕ್ಷಣ ಸಚಿವ ಡಾ. ರಮೇಶ್ ಪೋಖ್ರಿಯಾಲ್ ನಿಶಾಂಕ್ ಮತ್ತು ಅಸ್ಸಾಂ ಮುಖ್ಯಮಂತ್ರಿ ಶ್ರೀ ಸರ್ಬಾನಂದ ಸೋನೆವಾಲ್ ಮತ್ತಿತರರು ಪಾಲ್ಗೊಂಡಿದ್ದರು.

ಸಮಾರಂಭದಲ್ಲಿ ಮಾತನಾಡಿದ ಪ್ರಧಾನಮಂತ್ರಿ ಅವರು, ಇಂದು 1200 ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಜೀವಮಾನದಲ್ಲಿ ನೆನಪಿಟ್ಟುಕೊಳ್ಳುವ ಮತ್ತು ಭವಿಷ್ಯದಲ್ಲಿ ಪಾಲಿಸಬೇಕಾದ ಕ್ಷಣವಾಗಿದೆ. ತೇಜ್‌ಪುರ್  ವಿವಿಯಲ್ಲಿ ಅಧ್ಯಯನ ಮಾಡಿದ ವಿದ್ಯಾರ್ಥಿಗಳು ಅಸ್ಸಾಂ ಮತ್ತು ದೇಶದ ಪ್ರಗತಿಗೆ ವೇಗ ನೀಡಲಿದ್ದಾರೆ. ಭಾರತ ರತ್ನ ಶ್ರೀ ಭೂಪೇನ್ ಹಜಾರಿಕಾ ಅವರು ರಚಿಸಿರುವ ವಿಶ್ವವಿದ್ಯಾಲಯದ ಗೀತೆಯಲ್ಲಿನ ಭಾವ ತೇಜ್ ಪುರದ ಶ್ರೇಷ್ಠ ಇತಿಹಾಸದೊಂದಿಗೆ ಅನುರಣಿಸುತ್ತದೆ ಎಂದು ಹೇಳಿದರು. ಅಲ್ಲದೇ ವಿಶ್ವವಿದ್ಯಾಲಯದ ಗೀತೆಯ ಕೆಲವು ಸಾಲುಗಳನ್ನು ಇದೇ ಸಂದರ್ಭದಲ್ಲಿ ಪ್ರಧಾನಮಂತ್ರಿ ಅವರು ಉಲ್ಲೇಖಿಸಿದರು. 

“ಅಗ್ನಿ ಗಡಾರ್ ನ ವಾಸ್ತುಶಿಲ್ಪ ಕಾಲಿಯಾ - ಭೂಮೋರಾ ಸೇತುವೆ ಜ್ಞಾನ ಜ್ಯೋತಿಯ ಕೇಂದ್ರವಾಗಿದೆ” ಎಂದು ಹೇಳಿದರು.

ತೇಜ್‌ಪುರ್  ವಿಶ್ವವಿದ್ಯಾಲಯ ಅಗ್ನಿಗಢದ ವಾಸ್ತುಶಿಲ್ಪದಲ್ಲಿ ನೆಲೆ ನಿಂತಿದೆ. ಅಲ್ಲಿ ಕಾಲಿಯಾ – ಭೂಮೋರಾ ಸೇತುವೆ ಇದೆ. ಇಲ್ಲಿ ಜ್ಞಾನದ ಬೆಳಕು ಇದೆ. ಪ್ರಮುಖ ವ್ಯಕ್ತಿತ್ವಗಳಾದ ಶ್ರೀ ಭೂಪೆನ್ ದಾ, ಶ‍್ರೀ ಜ್ಯೋತಿ ಪ್ರಸಾದ್ ಅಗರ್ ವಾಲ್ ಮತ್ತು ಶ್ರೀ ಬಿಷ್ಣು ಪ್ರಸಾದ್ ರಾಧ ಅವರನ್ನು ತೇಜ್‌ಪುರ್  ದೊಂದಿಗೆ ಗುರುತಿಸಲಾಗಿದೆ ಎಂದು ಹೇಳಿದರು.

ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ಪ್ರಧಾನಮಂತ್ರಿ ಅವರು, ಈಗಿನಿಂದ ಹಿಡಿದು ದೇಶದ ನೂರನೇ ಸ್ವಾತಂತ್ರ್ಯೋತ್ಸವದವರೆಗಿನ ಅವಧಿ ನಿಮ್ಮ ಬದುಕಿನಲ್ಲಿ ಚಿನ್ನದ ವರ್ಷಗಳಾಗಲಿವೆ. ತೇಜ್‌ಪುರ್  ವಿಶ್ವವಿದ್ಯಾಲಯದ ಖ್ಯಾತಿಯನ್ನು ದೇಶಾದ್ಯಂತ ಮತ್ತು ಜಗತ್ತಿನಾದ್ಯಂತ ಪಸರಿಸಿ. ಅಸ್ಸಾಂ ಮತ್ತು ಈಶಾನ್ಯ ಭಾಗಗಳನ್ನು ಅಭಿವೃದ್ಧಿ ಪಥದಲ್ಲಿ ಔನ್ನತ್ಯಕ್ಕೆ ಕೊಂಡೊಯ್ಯಿರಿ. ಈಶಾನ್ಯ ಭಾಗದಲ್ಲಿ ಸಂಪರ್ಕ, ಶಿಕ್ಷಣ ಮತ್ತು ಆರೋಗ್ಯ ವಲಯದ ಅಭ್ಯುದಯಕ್ಕೆ ಸರ್ಕಾರ ಕೈಗೊಂಡಿರುವ ಪ್ರಯತ್ನಗಳ ಸಂಪೂರ್ಣ ಲಾಭ ಪಡೆಯಲು ವಿದ್ಯಾರ್ಥಿ ಸಮುದಾಯ ಮುಂದಾಗಬೇಕು ಎಂದು ಹೇಳಿದರು.

ತೇಜ್‌ಪುರ್ ವಿಶ್ವವಿದ್ಯಾಲಯ ನಾವೀನ್ಯತೆಯ ಕೇಂದ್ರವಾಗಿಯೂ ಗುರುತಿಸಿಕೊಂಡಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಇಲ್ಲಿನ ತಳಮಟ್ಟದ ಅನ್ವೇಷಣೆಗಳು “ ವೋಕಲ್ ಫಾರ್ ಲೋಕಲ್ “ ಪರಿಕಲ್ಪನೆಗೆ ವೇಗ ನೀಡುತ್ತವೆ ಮತ್ತು ಸ್ಥಳೀಯ ಸಮಸ್ಯೆಗಳನ್ನು ಪರಿಹರಿಸುತ್ತವೆ. ಅಭಿವೃದ್ಧಿಯ ಹೊಸ ಬಾಗಿಲುಗಳನ್ನು ತೆರೆಯಲು ಅವಕಾಶ ಕಲ್ಪಿಸುತ್ತವೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು.

ಕಡಿಮೆ ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು, ಗ್ರಾಮಗಳಲ್ಲಿ ತ್ಯಾಜ್ಯದಿಂದ ವಿದ್ಯುತ್ ಉತ್ಪಾದನೆ, ಸುಲಭದರದ ಮತ್ತು ಪರಿಣಾಮಕಾರಿ ತಂತ್ರಜ್ಞಾನದ ಮೂಲಕ ಬಯೋಗ್ಯಾಸ್ ಉತ್ಪಾದನೆ ಮತ್ತು ಸಾವಯವ ಗೊಬ್ಬರ, ಜೀವ ವೈವಿದ್ಯಗಳ ಸಂರಕ್ಷಣೆ, ಈಶಾನ್ಯ ಭಾಗದ ಶ್ರೀಮಂತ ಪರಂಪರೆಯನ್ನು ಸಂರಕ್ಷಿಸುವ ತೇಜ್‌ಪುರ್ ವಿಶ್ವವಿದ್ಯಾಲಯದ ನಾವೀನ್ಯತೆಯ ಕ್ರಮಗಳಿಗೆ ಶ್ರೀ ನರೇಂದ್ರ ಮೋದಿ ಅವರು ಮೆಚ್ಚುಗೆ ವ್ಯಕ್ತಪಡಿಸಿದರು. ಅಳಿವಿನ ಅಂಚಿನಲ್ಲಿರುವ ಈಶಾನ್ಯ ಬುಡಕಟ್ಟು ಸಮಾಜದ ಭಾಷೆಗಳನ್ನು ದಾಖಲಿಸುವ, ನಾಗಾನ್, ಬಟದ್ರಾವ್ ಥಾನಾದಲ್ಲಿರುವ ಮರದ ಕೆತ್ತಿದ ಕಲೆಗಳ ಸಂರಕ್ಷಣೆ, ಅಸ್ಸಾಂ ಪುಸ್ತಕಗಳು ಮತ್ತು ಹೊಸಹತುಶಾಹಿ ಕಾಲದಲ್ಲಿನ ಪತ್ರಿಕೆಗಳ ಡಿಜಿಟಲೀಕರಣದಂತಹ ರಚನಾತ್ಮಕ ಕ್ರಮಗಳನ್ನು ಅವರು ಪ್ರಸ್ತಾಪಿಸಿದರು.

ತೇಜ್‌ಪುರ್ ವಿಶ್ವವಿದ್ಯಾಲಯದ ಆವರಣ ಹಲವಾರು ಸ್ಥಳೀಯ ಅಗತ್ಯತಾ ಕಾರ್ಯಗಳನ್ನು ಕೈಗೆತ್ತಿಕೊಳ್ಳಲು ಪ್ರೇರಣೆಯಾಗಿದೆ. ಇಲ್ಲಿನ ವಸತಿ ನಿಲಯಗಳಿಗೆ ಈ ಭಾಗದ ಪರ್ವತ ಶ್ರೇಣಿಗಳು ಮತ್ತು ನದಿಗಳ ಹೆಸರಿಡಲಾಗಿದೆ. ಇವು ಕೇವಲ ಹೆಸರುಗಳಷ್ಟೇ ಅಲ್ಲದೇ ಜೀವನಕ್ಕೆ ಸ್ಪೂರ್ತಿಯಾಗಿವೆ ಎಂದರು.

ಜೀವನದ ಯಾತ್ರೆಯಲ್ಲಿ ನಾವು ಸಾಕಷ್ಟು ಸಂಕಷ್ಟಗಳನ್ನು ಎದುರಿಸುತ್ತೇವೆ. ಹಲವು ನದಿಗಳು ಮತ್ತು ಪರ್ವತಗಳನ್ನು ದಾಟಿರುತ್ತೇವೆ. ಪ್ರತಿ ಪರ್ವತ ಹತ್ತುವಾಗಲೂ ಸಹ ನಾವು ಬೆಳೆಯುತ್ತೇವೆ ಮತ್ತು ನಿಮ್ಮ ದೃಷ್ಟಿಕೋನವು ಹೊಸ ಸವಾಲುಗಳಿಗೆ ಸಿದ್ಧವಾಗುತ್ತದೆ. ನದಿಗಳಿಗೆ ಹಲವು ಉಪನದಿಗಳು ವಿಲೀನಗೊಳ್ಳುತ್ತವೆ ಮತ್ತು ನಂತರ ಸಮುದ್ರಕ್ಕೆ ಸೇರುತ್ತದೆ. ನಾವು ಸಹ ವಿವಿಧ ವರ್ಗದ ಜನರಿಂದ ಜ್ಞಾನ ಪಡೆಯಬೇಕು. ಕಲಿಯಬೇಕು ಮತ್ತು ಸಾಧನೆ ಮಾಡಬೇಕು. ಕಲಿಕೆಯೊಂದಿಗೆ ಮುನ್ನಡೆಬೇಕು. ಈ ನಿಟ್ಟಿನಲ್ಲಿ ಸಾಗಿದರೆ ಈಶಾನ್ಯ ರಾಜ್ಯಗಳು ದೇಶದ ಅಭಿವೃದ್ಧಿಗೆ ಕೊಡುಗೆ ನೀಡಿದಂತಾಗುತ್ತದೆ ಎಂದು ಹೇಳಿದರು.

ಆತ್ಮನಿರ್ಭರ್ ಭಾರತ್ ಪರಿಕಲ್ಪನೆ ಕುರಿತು ಪ್ರಧಾನಮಂತ್ರಿಯವರು ಸವಿಸ್ತಾರವಾಗಿ ಬೆಳಕು ಚೆಲ್ಲಿದರು. ಸಂಪನ್ಮೂಲ, ಭೌತಿಕ ಮೂಲ ಸೌಕರ್ಯ, ತಂತ್ರಜ್ಞಾನ, ಆರ್ಥಿಕ ಮತ್ತು ಕಾರ್ಯತಂತ್ರದಲ್ಲಿ ಇಂದಿನ ಯುವ ಸಮುದಾಯದ ಕ್ರಿಯೆ, ಪ್ರತಿಕ್ರಿಯೆಯಂತಹ ಸಹಜ ಮನೋಧೋರಣೆಯೊಂದಿಗೆ ಇದು ಬಹುದೊಡ್ಡ ಬದಲಾವಣೆಯ ಆಂದೋಲನವಾಗಿದೆ ಎಂದು ಪ್ರತಿಪಾದಿಸಿದರು.

ಇಂದಿನ ಯುವ ಭಾರತ ಸವಾಲುಗಳನ್ನು ತೆಗೆದುಕೊಳ್ಳುವ ವಿಶಿಷ್ಟ ಮಾರ್ಗವನ್ನು ಹೊಂದಿದೆ. ಆಸ್ಟ್ರೇಲಿಯಾದಲ್ಲಿ ಇತ್ತೀಚೆಗೆ ಭಾರತೀಯ ಕ್ರಿಕೆಟ್ ನ ಯುವ ತಂಡದ ಪ್ರದರ್ಶವನ್ನು ಉಲ್ಲೇಖಿಸಿ ಯುವ ಸಮುದಾಯದ ಮನೋಸ್ಥಿತಿಯನ್ನು ಅವರು ವಿವರಿಸಿದರು. ಭಾರತೀಯ ಕ್ರಿಕೆಟ್ ತಂಡ ಹಲವಾರು ಸವಾಲುಗಳನ್ನು ಎದುರಿಸಿತು. ಯುವ ಕ್ರಿಕೆಟಿಗರು ಸೋಲಿನಿಂದ ಬಳಲಿದರು, ಅಷ್ಟೇ ವೇಗವಾಗಿ ಚೇತರಿಸಿಕೊಂಡರು ಮತ್ತು ಮುಂದಿನ ಪಂದ್ಯವನ್ನು ಗೆದ್ದರು. ಗಾಯದ ನಡುವೆಯೂ ಆಟಗಾರರು ತಮ್ಮ ದೃಢ ನಿಶ್ಚಯವನ್ನು ಪ್ರದರ್ಶಿಸಿದರು. ಅವರು ಸವಾಲನ್ನು ತಲೆಯ ಮೇಲೆ ಹೊತ್ತುಕೊಂಡರು, ಕಷ್ಟಕರ ಪರಿಸ್ಥಿತಿಯಲ್ಲಿ ನಿರಾಶೆಗೊಳ್ಳುವ ಬದಲು ಹೊಸ ಪರಿಹಾರಗಳನ್ನು ಹುಡುಕಿದರು. ಅವರು ಅನನುಭವಿಗಳು ಆದರೆ ಅವರ ನೈತಿಕತೆ ಉನ್ನತಮಟ್ಟದಲ್ಲಿತ್ತು ಮತ್ತು ತಮಗೆ ನೀಡಿದ ಅವಕಾಶವನ್ನು ಬಳಸಿಕೊಂಡರು. ಅವರು ತಮ್ಮ ಪ್ರತಿಭೆ ಮತ್ತು ಮನೋಧರ್ಮದಿಂದ ಉತ್ತಮ ತಂಡವನ್ನು ಹಿಂದಿಕ್ಕಿದರು ಎಂದು ಶ್ರೀ ನರೇಂದ್ರ ಮೋದಿ ಅವರು ಸ್ಪೂರ್ತಿದಾಯವಾಗಿ ಹೇಳಿದರು.

ನಮ್ಮ ಆಟಗಾರರ ತಾರಾ ಪ್ರದರ್ಶನ ಕ್ರೀಡಾ ಕ್ಷೇತ್ರದ ದೃಷ್ಟಿಯಿಂದ ಮಾತ್ರವಲ್ಲ ಇತರ ವಿಚಾರದಲ್ಲೂ ಮುಖ್ಯವಾಗಿದೆ. ಜೀವನದ ಪಾಠ ಕಲಿಯಲು ಈ ಪ್ರದರ್ಶನ ಮಹತ್ವದ್ದಾಗಿದೆ ಎಂದು ಶ್ರೀ ನರೇಂದ್ರ ಮೋದಿ ಅವರು ಪಟ್ಟಿ ಮಾಡಿದರು.

ಮೊದಲಿಗೆ ನಮ್ಮ ಸಾಮರ್ಥ್ಯದ ಬಗ್ಗೆ ನಮಗೆ ನಂಬಿಕೆ ಮತ್ತು ವಿಶ್ವಾಸವಿರಬೇಕು. ಎರಡನೆಯದಾಗಿ ಸಾಕಾರಾತ್ಮಕ ಮನೋಧೋರಣೆ ಅತಿ ದೊಡ್ಡ ಸಕಾರಾತ್ಮಕ ಫಲಿತಾಂಶವನ್ನು ದೊರೆಕಿಸಿಕೊಡುತ್ತದೆ ಎಂದರು.

ಪ್ರಧಾನಮಂತ್ರಿಯವರು ಹೇಳಿದ ಮೂರನೆಯ ಮತ್ತು ಅತ್ಯಂತ ಪ್ರಮುಖ ಪಾಠ ಎಂದರೆ ಒಬ್ಬರು ಎರಡು ಆಯ್ಕೆಗಳನ್ನು ಎದುರಿಸುತ್ತಿರುತ್ತಾರೆ. ಅದರಲ್ಲಿ ಒಂದು ಸುರಕ್ಷಿತ ಮತ್ತು ಇನ್ನೊಂದು ತ್ರಾಸದಾಯಕ ಗೆಲುವಿನತ್ತ ಲಕ್ಷ್ಯ ವಹಿಸಬೇಕು. ಅದರಲ್ಲಿ ಒಬ್ಬರು ಖಂಡಿತವಾಗಿಯೂ ವಿಜಯದ ಆಯ್ಕೆಯನ್ನು ಅನ್ವೇಷಣೆ ಮಾಡಬೇಕು. ಸಾಂದರ್ಭಿಕವಾಗಿ ಎದುರಾಗುವ ವೈಫಲ್ಯದಲ್ಲಿ ಯಾವುದೇ ಹಾನಿಯಿಲ್ಲ ಮತ್ತು ಒಬ್ಬರು ಅಪಾಯವನ್ನು ತೆಗೆದುಕೊಳ್ಳುವುದನ್ನು ತಡೆಯಬಾರದು. ನಾವು ಪೂರ್ವಭಾವಿಯಾಗಿ ನಿರ್ಭಯರಾಗಿಬೇಕು. ವೈಫಲ್ಯ ಮತ್ತು ಅನಗತ್ಯ ಒತ್ತಡದ ಭಯವನ್ನು ಜಯಿಸಿದರೆ ನಾವು ನಿರ್ಭಯರಾಗಿ ಹೊರ ಹೊಮ್ಮುತ್ತೇವೆ. ಯುವ ಭಾರತ ತನ್ನ ವಿಶ್ವಾಸ ಮತ್ತು ಅರ್ಪಣಾ ಮನೋಭಾವನೆ ಹೊಂದಿದ್ದು ಇದು  ಕ್ರಿಕೆಟ್ ಅಂಗಳದಲ್ಲಿ  ಮಾತ್ರವಲ್ಲ. ನೀವೆಲ್ಲರೂ ಈ ಚಿತ್ರಣದ ಭಾಗವಾಗಿದ್ದೀರಿ ಎಂದು ವಿದ್ಯಾರ್ಥಿಗಳನ್ನು ಉದ್ದೇಶಿಸಿ ಪ್ರಧಾನಮಂತ್ರಿಯವರು ಹೇಳಿದರು.

ಡಿಜಿಟಲ್ ಮೂಲ ಸೌಕರ್ಯವನ್ನು ಪಟ್ಟಿ ಮಾಡಿದ ಪ್ರಧಾನಮಂತ್ರಿ ಅವರು, ನೇರ ನಗದು ವರ್ಗಾವಣೆ, ಡಿಜಿಟಲ್ ಹಣಕಾಸು ಒಳಗೊಳ್ಳುವಿಕೆ, ವಿಶ್ವದ ಅತಿದೊಡ್ಡ ಬ್ಯಾಂಕಿಂಗ್ ಒಳಗೊಳ್ಳುವಿಕೆ, ವಿಶ್ವದ ಅತಿ ದೊಡ್ಡ ಶೌಚಾಲಯ ನಿರ್ಮಾಣ ಆಂದೋಲನ, ಪ್ರತಿಯೊಂದು ಮನೆಗೂ ನಲ್ಲಿಗಳ ಮೂಲಕ ಶುದ್ದ ಕುಡಿಯುವ ನೀರು, ವಿಶ್ವದ ಅತಿದೊಡ್ಡ ಆರೋಗ್ಯ ವಿಮಾ ಯೋಜನೆ, ಜಗತ್ತಿನ ಅತಿದೊಡ್ಡ ಕೋವಿಡ್ ಲಸಿಕಾ ಕಾರ್ಯಕ್ರಮಗಳು ಇಂದಿನ ಭಾರತದ ಸಾಧನೆಗಳಿಗೆ ಸಾಕ್ಷಿಯಾಗಿವೆ. ಪರಿಹಾರ ಕಂಡುಕೊಳ್ಳಲು ಪ್ರಯೋಗ ಮಾಡಲು ಹೆದರುವುದಿಲ್ಲ ಮತ್ತು ದೊಡ್ಡ ಪ್ರಮಾಣದ ಯೋಜನೆಗಳನ್ನು ಕೈಗೊಳ್ಳಲು ಹಿಂಜರಿಯುವುದಿಲ್ಲ.  ಅಸ್ಸಾಂ ಮತ್ತು ಈಶಾನ್ಯ ರಾಜ್ಯಗಳಿಗೆ ಈ ಯೋಜನೆಗಳು ಅನುಕೂಲಕರವಾಗಿವೆ ಎಂದರು.

ಹೊಸ ತಂತ್ರಜ್ಞಾನ ಹೊಸ ಸಾಧ್ಯತೆಗಳನ್ನು ಸೃಷ್ಟಿಸುತ್ತಿದೆ ಎಂದು ಪ್ರಧಾನಮಂತ್ರಿ ಅವರು ಹೇಳಿದರು. ಭವಿಷ್ಯದ ವಿಶ್ವವಿದ್ಯಾಲಯಗಳು ಪೂರ್ಣ ಪ್ರಮಾಣದಲ್ಲಿ ವರ್ಚುವಲ್ ಮೂಲಕ ಕಾರ್ಯನಿರ್ವಹಿಸುವ ಸಾಧ್ಯತೆಗಳಿವೆ ಮತ್ತು ಅಧ್ಯಾಪಕರು ವಿಶ್ವದ ಯಾವುದೇ ವಿಶ್ವವಿದ್ಯಾಲಯದ ಭಾಗವಾಗಿರುತ್ತಾರೆ. ಇಂತಹ ಪರಿವರ್ತನೆಗೆ ನಿಯಂತ್ರಣ ಚೌಕಟ್ಟು ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ನೂತನ ರಾಷ್ಟ್ರೀಯ ಶಿಕ್ಷಣ ನೀತಿ ಒಂದು ಹೆಜ್ಜೆಯಾಗಿದೆ. ಈ ಹೊಸ ನೀತಿ ಗರಿಷ್ಠ ಪ್ರಮಾಣದಲ್ಲಿ ತಂತ್ರಜ್ಞಾನ ಬಳಸಿಕೊಳ್ಳಲಿದ್ದು, ಬಹು ಶಿಸ್ತಿನ ಶಿಕ್ಷಣ ಮತ್ತು ಹೊಂದಿಕೊಳ್ಳುವ ಅಂಶಗಳನ್ನು ಉತ್ತೇಜಿಸಲಾಗುವುದು.  ರಾಷ್ಟ್ರೀಯ ಶಿಕ್ಷಣ ನೀತಿ – ಎನ್.ಇ.ಪಿ ದತ್ತಾಂಶ ಮತ್ತು ದತ್ತಾಂಶ ವಿಶ್ಲೇಷಣೆಯ ಶಿಕ್ಷಣ ವ್ಯವಸ್ಥೆಯನ್ನು ಸಜ್ಜುಗೊಳಿಸಲಿದೆ. ಶಿಕ್ಷಣದಲ್ಲಿ ಪ್ರವೇಶ, ಬೋಧನೆ ಮತ್ತು ಮೌಲ್ಯಮಾಪನದಲ್ಲಿ ದತ್ತಾಂಶ ವಿಶ್ಲೇಷಣೆ ಗಣನೀಯವಾಗಿ  ಸುಧಾರಣೆ ಕಾಣಲಿದೆ ಎಂದು ಹೇಳಿದರು.

ಈ ಗುರಿಗಳನ್ನು ತಲುಪಲು ತೇಜ್‌ಪುರ್  ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ನೆರವಾಗಬೇಕು. ನಿಮ್ಮ ಔಪಚಾರಿಕ ಶಿಕ್ಷಣ ಪೂರ್ಣಗೊಂಡ ನಂತರ ನಿಮ್ಮ ಮತ್ತು ದೇಶದ ಭವಿಷ್ಯಕ್ಕಾಗಿ ನೀವು ಕಾರ್ಯನಿರ್ವಹಿಸಿ. ಉನ್ನತ ಆದರ್ಶಗಳನ್ನು ಹೊಂದಿದ್ದರೆ ಅವು  ಭಿನ್ನಾಭಿಪ್ರಾಯಗಳಿಂದ ನಿಮ್ಮನ್ನು ರಕ್ಷಿಸುತ್ತವೆ. ನಿಮ್ಮ ಜೀವನ ಮತ್ತು ದೇಶದ ಭವಿಷ್ಯಕ್ಕಾಗಿ ಮುಂದಿನ 25-26 ವರ್ಷಗಳು ಅತ್ಯಂತ ಅಮೂಲ್ಯ ಮತ್ತು ವಿದ್ಯಾರ್ಥಿಗಳು ದೇಶವನ್ನು ಔನ್ಯತ್ಯಕ್ಕೆ ಕೊಂಡೊಯ್ಯುತ್ತಾರೆ ಎನ್ನುವ ವಿಶ್ವಾಸವಿದೆ ಎಂದು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಹೇಳಿದರು.

ಭಾಷಣದ ಪೂರ್ಣ ಪಠ್ಯವನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Explore More
78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ

ಜನಪ್ರಿಯ ಭಾಷಣಗಳು

78ನೇ ಸ್ವಾತಂತ್ರ್ಯ ದಿನಾಚರಣೆಯ ಸಂದರ್ಭದಲ್ಲಿ ಕೆಂಪು ಕೋಟೆಯಿಂದ ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಮಾಡಿದ ಭಾಷಣದ ಕನ್ನಡ ಅನುವಾದ
Cabinet approves minimum support price for Copra for the 2025 season

Media Coverage

Cabinet approves minimum support price for Copra for the 2025 season
NM on the go

Nm on the go

Always be the first to hear from the PM. Get the App Now!
...
ಸಾಮಾಜಿಕ ಮಾಧ್ಯಮ ಕಾರ್ನರ್ 21 ಡಿಸೆಂಬರ್ 2024
December 21, 2024

Inclusive Progress: Bridging Development, Infrastructure, and Opportunity under the leadership of PM Modi