ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಇಂದು ಮಹಾರಾಷ್ಟ್ರದ 10 ಬುಡಕಟ್ಟು ವಿದ್ಯಾರ್ಥಿಗಳ ತಂಡವನ್ನು ಭೇಟಿ ಮಾಡಿದರು. ಈ ವಿದ್ಯಾರ್ಥಿಗಳ ತಂಡ ಮಹಾರಾಷ್ಟ್ರ ರಾಜ್ಯ ಸರಕಾರದ ಆದಿವಾಸಿ ವಿಕಾಸ್ ವಿಭಾಗದ “ಮಿಶನ್ ಶೌರ್ಯ” ಉಪಕ್ರಮದ ಭಾಗವಾಗಿದೆ. ಈ ತಂಡದ 5 ಮಂದಿ ವಿದ್ಯಾರ್ಥಿಗಳು 2018 ರ ಮೇ ತಿಂಗಳಲ್ಲಿ ಯಶಸ್ವಿಯಾಗಿ ಮೌಂಟ್ ಎವರೆಸ್ಟ್ ಶಿಖರ ಏರಿದ್ದರು.
ತರಬೇತಿ ಮತ್ತು ಮೌಂಟ್ ಎವರೆಸ್ಟ್ ಏರುವಾಗಿನ ಅನುಭವಗಳನ್ನು ವಿದ್ಯಾರ್ಥಿಗಳು ಹಂಚಿಕೊಂಡರು. ವಿದ್ಯಾರ್ಥಿಗಳ ಸಾಧನೆಗಾಗಿ ಪ್ರಧಾನಿಯವರು ಅವರನ್ನು ಅಭಿನಂದಿಸಿದರು. ಅವರು ವಿದ್ಯಾರ್ಥಿಗಳಿಗೆ ಕ್ರೀಡೆಯನ್ನು ಆಯ್ಕೆ ಮಾಡಿಕೊಂಡು ಅದನ್ನು ದಿನನಿತ್ಯ ಅನುಸರಿಸುವಂತೆ ಪ್ರೋತ್ಸಾಹಿಸಿದರು. ತಂಡದ ಸದಸ್ಯರನ್ನು ಅವರು ಸನ್ಮಾನಿಸಿದರು.
ಮಹಾರಾಷ್ಟ್ರ ಮುಖ್ಯಮಂತ್ರಿ ಶ್ರೀ ದೇವೇಂದ್ರ ಫಡ್ನವಿಸ್ ಮತ್ತು ಕೇಂದ್ರ ಗೃಹ ವ್ಯವಹಾರಗಳ ಸಹಾಯಕ ಸಚಿವರಾದ ಶ್ರೀ ಹಂಸರಾಜ್ ಅಹಿರ್ ಈ ಸಂಧರ್ಭ ಉಪಸ್ಥಿತರಿದ್ದರು.