ಐಎನ್‍ಎಸ್‍ವಿ ತಾರಿಣಿ ನೌಕೆಯಲ್ಲಿ ವಿಶ್ವ ಪರ್ಯಟನೆ ಕೈಗೊಳ್ಳಲಿರುವ ಭಾರತೀಯ ನೌಕಾಪಡೆಯ ಆರು ಮಹಿಳಾ ಅಧಿಕಾರಿಗಳನ್ನು ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಇಂದು ಬೆಳಗ್ಗೆ ಭೇಟಿ ಮಾಡಿದ್ದರು.
ಎಲ್ಲಾ ಮಹಿಳಾ ನಾವಿಕರೇ ಇರುವ ಭಾರತದ ಈ ಮೊದಲ ತಂಡ ವಿಶ್ವ ಪರ್ಯಟನೆಯನ್ನು ಕೈಗೊಂಡಿದೆ. ಅವರು ಈ ತಿಂಗಳ ಅಂತ್ಯದಲ್ಲಿ ಗೋವಾದಿಂದ ತಮ್ಮ ಪ್ರಯಾಣವನ್ನು ಆರಂಭಿಸಲಿದ್ದು, ಇಡೀ ವಿಶ್ವವನ್ನು ಸುತ್ತಿದ ನಂತರ 2018ರ ಮಾರ್ಚ್‍ನಲ್ಲಿ ಗೋವಾಕ್ಕೆ ಮತ್ತೆ ವಾಪಸ್ಸಾಗಲಿದ್ದಾರೆ. ಈ ಪರ್ಯಟನೆಗೆ ‘ನಾವಿಕ ಸಾಗರ ಪರಿಕ್ರಮ’ ಎಂದು ಹೆಸರಿಡಲಾಗಿದೆ. ಐದು ಚರಣಗಳಲ್ಲಿ ಈ ಪರಿಕ್ರಮ ನಡೆಯಲಿದ್ದು, ನಾಲ್ಕು ಬಂದರುಗಳಲ್ಲಿ ಅಂದರೆ ಫ್ರೇಮೆಂಟಲ್(ಆಸ್ಟ್ರೇಲಿಯಾ), ಲೈಟಲ್‍ಟಾನ್(ನ್ಯೂಜಿಲ್ಯಾಂಡ್), ಪೋರ್ಟ್ ಸ್ಟ್ಯಾನ್ಲಿ(ಫಾಲ್ಕ್‍ಲ್ಯಾಂಡ್ಸ್) ಮತ್ತು ಕೇಪ್‍ಟೌನ್(ದಕ್ಷಿಣ ಆಫ್ರಿಕ)ದಲ್ಲಿ ನಿಲುಗಡೆ ಮಾಡಲಾಗುವುದು.
ಐಎನ್‍ಎಸ್‍ವಿ ತಾರಿಣಿ ಹೆಸರಿನ 55 ಅಡಿಯ ಈ ತೇಲುವ ಹಡಗು ದೇಶೀಯವಾಗಿ ನಿರ್ಮಿಸಲಾಗಿದ್ದು, ಇದನ್ನು ಈ ವರ್ಷದ ಆರಂಭದಲ್ಲಿ ಭಾರತೀಯ ನೌಕಾಪಡೆಗೆ ಸೇರ್ಪಡೆಗೊಳಿಸಿಕೊಳ್ಳಲಾಗಿತ್ತು.
ಸಮಾಲೋಚನೆ ವೇಳೆ ನಾವಿಕರ ತಂಡ ತಾವು ಕೈಗೊಳ್ಳಲಿರುವ ಪರ್ಯಟನೆ ಕುರಿತು ಪ್ರಧಾನಮಂತ್ರಿಗಳಿಗೆ ವಿವರಿಸಿದರು. ಪ್ರಧಾನಮಂತ್ರಿಗಳು ಮಹಿಳಾ ನಾವಿಕರ ತಂಡಕ್ಕೆ ಶುಭ ಕೋರಿದರು ಮತ್ತು ವಿಶ್ವ ಪಯಣ ಕೈಗೊಂಡಿರುವ ಅವರ ಪ್ರಗತಿಯ ಕುರಿತು ನಿಗಾ ವಹಿಸುವುದಾಗಿ ಅವರು ಹೇಳಿದರು. ಭಾರತದ ಸಾಮಥ್ರ್ಯ ಮತ್ತು ಶಕ್ತಿಯನ್ನು ವಿಶ್ವದಾದ್ಯಂತ ಪ್ರದರ್ಶಿಸಬೇಕು ಎಂದು ಅವರು ತಂಡಕ್ಕೆ ಸೂಚಿಸಿದರು. ಅಲ್ಲದೆ ಪರ್ಯಟನೆ ಯಶಸ್ವಿಯಾಗಿ ಪೂರ್ಣಗೊಂಡ ನಂತರ ತಮ್ಮ ಅನುಭವಗಳನ್ನು ಲಿಖಿತ ರೂಪದಲ್ಲಿ ದಾಖಲಿಸಿಬೇಕು ಹಾಗೂ ಹಂಚಿಕೊಳ್ಳಬೇಕು ಎಂದು ಪ್ರಧಾನಿ ಅವರು ತಂಡಕ್ಕೆ ಉತ್ತೇಜನ ನೀಡಿದರು.
ಈ ತಂಡದ ನಾಯಕತ್ವವನ್ನು ಲೆಫ್ಟಿನೆಂಟ್ ಕಮಾಂಡರ್ ವರ್ತಿಕಾ ಜೋಶಿ ವಹಿಸಿದ್ದು, ಅದರಲ್ಲಿ ಲೆಫ್ಟಿನೆಂಟ್ ಕಮಾಂಡರ್‍ಗಳಾದ ಪ್ರತಿಭಾ ಜಾಮ್‍ವಾಲ್, ಪಿ. ಸ್ವಾತಿ ಮತ್ತು ಲೆಫ್ಟಿನೆಂಟ್ ಎಸ್. ವಿಜಯದೇವಿ, ಬಿ. ಐಶ್ವರ್ಯ ಮತ್ತು ಪಾಯಲ್ ಗುಪ್ತಾ ಅವರುಗಳಿದ್ದಾರೆ.