ಪ್ರಧಾನಮಂತ್ರಿ ಶ್ರೀ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕು ಮಸೂದೆ 2016 ಅನುಮೋದನೆಗೊಂಡಿರುವುದನ್ನು ಪ್ರಶಂಸಿಸಿದ್ದಾರೆ. ಇದೊಂದು ಮೈಲಿಗಲ್ಲಿನ ಕ್ಷಣ ಮತ್ತು ಇದು ಸುಲಭ ಭಾರತ ಆಂದೋಲನ (Accessible India movement) ಕ್ಕೆ ಅದ್ಭುತ ಬಲ ನೀಡುತ್ತದೆ ಎಂದು ಪ್ರಧಾನಿ ಹೇಳಿದ್ದಾರೆ.
“ಅಂಗವೈಕಲ್ಯ ಇರುವ ವ್ಯಕ್ತಿಗಳ ಹಕ್ಕು ಮಸೂದೆ 2016ರ ಅನುಮೋದನೆ ಒಂದು ಮೈಲಿಗಲ್ಲಿನ ಕ್ಷಣ ಮತ್ತು ಸುಲಭ ಭಾರತ ಆಂದೋಲನಕ್ಕೆ ಇದು ಅದ್ಭುತ ಶಕ್ತಿ ತುಂಬುತ್ತದೆ.
ಈ ಕಾಯಿದೆ ಅಡಿಯಲ್ಲಿ, ಅಂಗವೈಕಲ್ಯದ ವಿಧಗಳನ್ನು ಹೆಚ್ಚಿಸಲಾಗಿದೆ ಮತ್ತು ಅದೇ ವೇಳೆ ಹೆಚ್ಚುವರಿ ಸೌಲಭ್ಯಗಳ ನಿಬಂಧನೆಗಳನ್ನೂ ಅಳವಡಿಸಲಾಗಿದೆ.
ಅಂಗವೈಕಲ್ಯ ಇರುವ ವ್ಯಕ್ತಿಗಳ ವಿರುದ್ಧ ಅಪರಾಧ ಎಸಗುವವರಿಗೆ ಮತ್ತು ನೂತನ ಕಾಯಿದೆಯ ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸುವ ಕಠಿಣ ಅವಕಾಶಗಳೂ ಇವೆ.
ಈ ಹೊಸ ಕಾಯಿದೆಯಲ್ಲಿ ಹಲವು ಪ್ರಮುಖ ಅಂಶಗಳಿವೆ, ಇವು ಅವಕಾಶ, ಸಮಾನತೆ ಮತ್ತು ಲಭ್ಯತೆಯನ್ನು ಹೆಚ್ಚಿಸುತ್ತವೆ. ನೋಡಿ.
https://goo.gl/Zwpm4k”,ಎಂದು ಪ್ರಧಾನಮಂತ್ರಿ ತಿಳಿಸಿದ್ದಾರೆ.
Passage of Rights of Persons with Disabilities Bill - 2016 is a landmark moment & will add tremendous strength to Accessible India movement.
— Narendra Modi (@narendramodi) December 16, 2016
Under the Act, the types of disabilities have increased & at the same time provisions for additional benefits have been introduced.
— Narendra Modi (@narendramodi) December 16, 2016
There are strict provisions for penalties for offences committed against persons with disabilities & violation of provisions of the new law.
— Narendra Modi (@narendramodi) December 16, 2016